`ಮಾಕ್ಸರ್್ವಾದ ಅಪ್ರಸ್ತುತ' ಎಂಬ ಕಾಪರ್ೊರೇಟ್ ಮಾಧ್ಯಮಗಳ ಅರಚಾಟ

ಸೀತಾರಾಮ್ ಯೆಚೂರಿ

ಸಿಪಿಐ(ಎಂ) ಸ್ಥಾಪನೆಯ ಪ್ರಕ್ರಿಯೆಯ ಆರಂಭದ 50ನೇ ವಾಷರ್ಿಕದ ನೆವ ಮಾಡಿಕೊಂಡು ಕೆಲವು ಪತ್ರಿಕೆಗಳು ಈ ಸಾರ್ವತ್ರಿಕ ಚುನಾವಣೆಗಳ ಭರಾಟೆಯ ನಡುವೆ ಸಿಪಿಐ(ಎಂ) ಅಪ್ರಸ್ತುತವಾಗುತ್ತಿದೆ ಎಂದು ‘ಸಹಾನುಭೂತಿ’ ವ್ಯಕ್ತಪಡಿಸಲಾರಂಭಿಸಿವೆ. ಮಾಕ್ಸರ್್ನ ಕಾಲದಲ್ಲಿನ ಕಾಮರ್ಿಕ ವರ್ಗದ ಸ್ವಭಾವ ಈಗ ಬದಲಾಗಿರುವುದರಿಂದಾಗಿ ಇಂದಿನ ನವ-ಉದಾರವಾದಿ ಜಾಗತೀಕರಣದ ವಿಶ್ವದಲ್ಲಿ ಮಾಕ್ಸರ್್ವಾದ ಅಪ್ರಸ್ತುತವಾಗಿದೆ; ಸಿಪಿಐ(ಎಂ) ಈ ‘ವಾಸ್ತವತೆ’ಯನ್ನು ಸ್ವೀಕರಿಸಲು ನಿರಾಕರಿಸುತ್ತಿದೆ, ಆದ್ದರಿಂದ ಅದು ತನ್ನ ಅತಿ ದೊಡ್ಡ ಸವಾಲನ್ನು, ತಾನು ಅಪ್ರಸ್ತುತವಾಗುವ ಬೆದರಿಕೆಯ ಸವಾಲನ್ನು ಎದುರಿಸುತ್ತಿದೆಯಂತೆ.

ಅದೃಷ್ಟವಶಾತ್, ಭಾರತದ ಜನತೆ ಈ ಮಾಧ್ಯಮಗಳಂತೆ ಯೋಚಿಸುತ್ತಿಲ್ಲ. ಇಲ್ಲಿಯೇ ಸಿಪಿಐ(ಎಂ) ದೇಶದಲ್ಲಿನ ಅರ್ಥಪೂರ್ಣ ರಾಜಕೀಯ ಚಚರ್ೆಯಲ್ಲಿ ಪ್ರಸ್ತುತವಾಗಿಯೇ ಉಳಿಯುವುದು.

ಚುನಾವಣಾ ಪ್ರಚಾರದ ಭರಾಟೆಯ ನಡುವೆ ಬಂಡವಾಳಶಾಹಿ ಪತ್ರಿಕೆಗಳು ಸಿಪಿಐ(ಎಂ)ನ್ನು ಟೀಕಿಸಲು ಮತ್ತೊಂದು ಸಂದರ್ಭವನ್ನು ಕಂಡುಕೊಂಡಿವೆ. ಅದೆಂದರೆ ಅಂದಿನ ಭಾರತ ಕಮ್ಯುನಿಸ್ಟ್ ಪಕ್ಷದ ರಾಷ್ಟ್ರೀಯ ಮಂಡಳಿಯ 32 ಸದಸ್ಯರು ಮಂಡಳಿಯ ಸಭೆಯಿಂದ ಹೊರನಡೆದು ಮುಂದೆ ಸಿಪಿಐ(ಎಂ) ಸ್ಥಾಪನೆಗೆ ಕಾರಣವಾದಂತಹ ಸಂದರ್ಭದ 50ನೇ ವಾಷರ್ಿಕ. ಇದು ನಡೆದದ್ದು ಎಪ್ರಿಲ್ 11, 1964ರಂದು. ಇವುಗಳಲ್ಲಿ ಕೇವಲ ಎರಡನ್ನು ನೋಡೋಣ. ಇವೆರಡೂ ತಮ್ಮ ದಾಳಿಗೆ ಸಾಕಷ್ಟು ಸಹಾನುಭೂತಿಯ ಮುಸುಕನ್ನು ಹೊದ್ದುಕೊಂಡೇ ಹೊಗಳುವ ಹೆಸರಿನಲ್ಲಿ ಬಂದಿವೆ.

“ಧೋರಣೆಗಳು ಮತ್ತು ವಿಫಲತೆಗಳು: ಅರ್ಧ ಶತಮಾನವನ್ನು ವ್ಯರ್ಥಗೊಳಿಸಿರುವ ಸಿಪಿಎಂ” ಎಂಬುದು ಇವುಗಳಲ್ಲಿ ಒಂದರ ಶಿರೋನಾಮೆ. ಒಂದು ಪ್ರಮುಖ ಮಲೆಯಾಳಂ ದೈನಿಕ ಮಾಡಿರುವ(ಎಪ್ರಿಲ್ 12, 2014) ಈ ‘ಸ್ಟೋರಿ’ ಸಾಕಷ್ಟು ವಿವರವಾಗಿಯೇ ಇದೆ. ಸಿಪಿಐ(ಎಂ)ನ ‘ಪತನ’ಕ್ಕೆ ಕಾರಣಗಳೆಂದು ಅದು ಚಚರ್ಿಸಿರುವ ಹಲವು ಪ್ರಶ್ನೆಗಳಲ್ಲಿ ಒಂದು, “ವರ್ಗಗಳ ಸ್ವಭಾವದಲ್ಲಿ ಆಗಿರುವ ಬದಲಾವಣೆಗಳೊಂದಿಗೆ ಮುಂದೆ ಸಾಗಲು ಪಕ್ಷಕ್ಕೆ ಸಾಧ್ಯವಾಗದೇ ಇರುವುದು.”

ಒಂದು ಪ್ರಮುಖ “ಪಿಂಕ್ ಪೇಪರ್ ಅಂದರೆ ಆಥರ್ಿಕ ವಿಷಯಗಳಿಗೆ ಮೀಸಲಾದ ದೈನಿಕ “ಇತಿಹಾಸದೊಂದಿಗೆ ಮುಖಾಮುಖಿ: 50ನೇ ವಾಷರ್ಿಕದಂದು ಸಿಪಿಐ(ಎಂ) ತನ್ನ ಅತಿ ದೊಡ್ಡ ಸವಾಲನ್ನು ಎದುರಿಸುತ್ತಿದೆ” ಎಂದು ಸಂಪಾದಕೀಯ ಟಿಪ್ಪಣಿ ಮಾಡಿದೆ.

ಸವಾಲನ್ನು ಎದುರಿಸಿ ಎಂದು ಹೇಳಿರುವುದು ಸ್ವಾಗತಾರ್ಹವೇ. ವಾಸ್ತವವಾಗಿ, ಸಿಪಿಐ(ಎಂ) ಸತತವಾಗಿ ಈ ಪ್ರಯತ್ನವನ್ನೇ ನಡೆಸಿಕೊಂಡು ಬಂದಿದೆ- ಹೊಸ ಸವಾಲುಗಳನ್ನು ಗುರುತಿಸುವುದು, ಮತ್ತು ಅವನ್ನು ಎದುರಿಸುವುದು. ಆದರೆ ಈ ಸಂಪಾದಕೀಯ ಮುಂದುವರೆದು “ಸಿಪಿಐ(ಎಂ) ತನ್ನ ಇತಿಹಾಸದ ಅತಿ ದೊಡ್ಡ ಸವಾಲನ್ನು, ತಾನು ಅಪ್ರಸ್ತುತವಾಗುವ ಸವಾಲನ್ನು ಎದುರಿಸುತ್ತಿದೆ” ಎಂದು ಒತ್ತಿ ಹೇಳುತ್ತದೆ. ಏಕೆ? ಏಕೆಂದರೆ “ಅದರ ನಾಯಕತ್ವ ತಂತ್ರಜ್ಞಾನದಲ್ಲಿನ ಬದಲಾವಣೆಯನ್ನು, ಮತ್ತು ಕಾಮರ್ಿಕ ವರ್ಗದ ವಿಕಾಸಗೊಳ್ಳುತ್ತಿರುವ ಸ್ವಭಾವವನ್ನು ಉಪೇಕ್ಷಿಸಿದೆ”.

relevance 1

ಏಕೀ ‘ವಿಮಶರ್ೆಗಳು?
ಈ ವಿಮಶರ್ೆಗಳ ಸಾರವನ್ನು ಪರಿಶೀಲಿಸುವ ಮೊದಲು ಒಂದು ಸಂಗತಿಯನ್ನು ಒತ್ತಿ ಹೇಳಬೇಕಾಗಿದೆ-ನಿದರ್ಿಷ್ಟ ಪರಿಸ್ಥಿತಿಗಳ ನಿದರ್ಿಷ್ಟ ವಿಶ್ಲೇಷಣೆಯೇ ಮಾಕ್ಸರ್್ವಾದ-ಲೆನಿನ್ವಾದದ ಜೀವಂತ ಸಾರ ಎಂಬ ತತ್ವವನ್ನು ಸಿಪಿಐ(ಎಂ) ಸದಾ ಎತ್ತಿ ಹಿಡಿದಿದೆ, ಹಾಗೂ ಆಚರಣೆಯಲ್ಲಿಯೂ ಅದಕ್ಕೆ ಬದ್ಧವಾಗಿ ನಡೆದುಕೊಂಡಿದೆ. ಪರಿಸ್ಥಿತಿಗಳು ಸತತವಾಗಿ ಬದಲಾಗುತ್ತಿರುವುದರಿಂದಾಗಿ, ಅದಕ್ಕನುಗುಣವಾಗಿ ಮಾಕ್ಸರ್್ವಾದಿ ವಿಶ್ಲೇಷಣೆಯೂ ಬದಲಾಗಬೇಕು. ಹಾಗೆ ಮಾಡದಿದ್ದರೆ ಅದು ಮಾಕ್ಸರ್್ವಾದದ ನಿರಾಕರಣೆಯೇ-ಅದರ ಕ್ರಾಂತಿಕಾರಿ ಅಂತಸ್ಸತ್ವದ ಮತ್ತು ಅದರ ವೈಜ್ಞಾನಿಕ ವಿಶ್ಲೇಷಣಾ ವಿಧಾನದ ನಿರಾಕರಣೆಯೇ-ಆಗುತ್ತದೆ. ಇದರ ಆಧಾರದಲ್ಲಿಯೇ, ಸಿಪಿಐ(ಎಂ), ಮಾಕ್ಸರ್್ವಾದ ಅತ್ಯಂತ ವೈಜ್ಞಾನಿಕವಾದದ್ದು, ಒಂದು ಸೃಜನಾತ್ಮಕ ವಿಜ್ಞಾನವಾಗಿರುವುದು, ಮತ್ತು ಅದರಿಂದಾಗಿ ಸ್ವಭಾವತಃ ಅದು ಕುರುಡು ನಂಭಿಕೆಗೆ ವಿರುದ್ಧವಾಗಿರುವುದು ಎಂದು ಹೇಳುತ್ತಲೇ ಬಂದಿದೆ.

ನಿಜ, ಸಾಮಾಜಿಕ ಶ್ರೇಣಿ ವ್ಯವಸ್ಥೆಯಲ್ಲಿ ವಿಭಿನ್ನ ವರ್ಗಗಳಲ್ಲಿನ ಚಲನೆಯಲ್ಲಿ ಆಗುವ ನಿದರ್ಿಷ್ಟ ಬದಲಾವಣೆಗಳನ್ನು ವೈಜ್ಞಾನಿಕವಾಗಿ ಅಧ್ಯಯನ ಮಾಡುವ ಅಗತ್ಯ ಇದೆ, ವಿಶೇಷವಾಗಿ ಒಂದು ಬಂಡವಾಳಶಾಹಿ-ಪೂರ್ವ ಶ್ರೇಣೀಕೃತ ಸಾಮಾಜಿಕ ರಚನೆಯ ಮೇಲೆ ಹೇರಿರುವ ಬಂಡವಾಳಶಾಹಿಯ ಬೆಳವಣಿಗೆಯ ಸಂದರ್ಭದಲ್ಲಿ. ಉದಾಹರಣೆಗೆ, ಜಾತಿ ಶ್ರೇಣೀಕರಣ ಮತ್ತು ಅದರ ಪರಿಣಾಮವಾಗಿ ಶೋಷಣೆಯ ಸಾಮಾಜಿಕ ಮತ್ತು ಆಥರ್ಿಕ ಸ್ವರೂಪಗಳು ಮೈದಳೆಯುವ ರೀತಿ. ಆದರೆ ಈ ಬಂಡವಾಳಶಾಹಿ ಪತ್ರಿಕೆಗಳ ವಿಮಶರ್ೆಗಳು ಹೇಳುವುದು ಈ ಅಂಶವನ್ನಲ್ಲ. ಅವುಗಳ ಗಮನವೇ ಬೇರೆ.

‘ಅಪ್ರಸ್ತುತತೆ’ಯ ಅರಚಾಟ
ಇಂದಿನ ಕಾಮರ್ಿಕ ವರ್ಗದ ಸ್ವಭಾವ ಕಾಲರ್್ ಮಾಕ್ಸರ್್ರವರ ದಿನಗಳಲ್ಲಿದ್ದ ಬಂಡವಾಳಶಾಹಿಯ ಅಡಿಯಲ್ಲಿದ್ದಂತೆ ಉಳಿದಿಲ್ಲ ಎಂದು ಬಿಂಬಿಸಲು ನವ-ಉದಾರವಾದಿ ಪಂಡಿತರುಗಳು ಯತ್ನಿಸುತ್ತಲೇ ಬಂದಿದ್ದಾರೆ. ದೈಹಿಕ ಶ್ರಮದ ಭಾಗ ಆಕಾರದಲ್ಲೂ, ಸಂಯೋಜನೆಯಲ್ಲೂ ಬಹಳಷ್ಟು ಕಡಿಮೆಯಾಗಿದೆ. ಆದ್ದರಿಂದ ಮಾಕ್ಸರ್್ ಮತ್ತು ಎಂಗೆಲ್ಸ್ “ವಿಶ್ವದ ಕಾಮರ್ಿಕರೇ ಒಂದಾಗಿ, ನೀವು ಏನನ್ನೂ ಕಳೆದುಕೊಳ್ಳುವುದಿಲ್ಲ, ನಿಮ್ಮ ಸಂಕೋಲೆಗಳನ್ನಷ್ಟೇ ಕಳೆದುಕೊಳ್ಳುತ್ತೀರಿ” ಎಂಬ ಉತ್ತೇಜನಕಾರಿ ಕರೆಯ ಮೂಲಕ ನೀಡಿದ್ದ ಬಂಡವಾಳಶಾಹಿಯನ್ನು ಕಿತ್ತೊಗೆಯುವ ಕ್ರಾಂತಿಯ ಘೊಷಣೆಗೆ ಈಗ ಏನೂ ಅರ್ಥ ಉಳಿದಿಲ್ಲ, ಎಕೆಂದರೆ ಕಾಮರ್ಿಕ ವರ್ಗದ ಬಹಳಷ್ಟು ವಿಭಾಗಗಳು ಈಗ ಈ ವ್ಯವಸ್ಥೆಯ ಭಾಗವಾಗಿ ಬಿಟ್ಟಿವೆ, ಅದರಿಂದಾಗಿ ಬಂಡವಾಳಶಾಹಿ ಶೋಷಣೆಯ ಸಂಕೋಲೆಗಳನ್ನು ಕಳಕೊಳ್ಳುವುದಷ್ಟೇ ಅಲ್ಲ, ಉಳಿಸಿಕೊಳ್ಳಬೇಕಾದ್ದು ಬಹಳಷ್ಟು ಇದೆ ಎನ್ನುತ್ತಾರೆ ಅವರು. ಸರಳವಾಗಿ ಹೇಳುವುದಾದರೆ, ಈ ವಿಮರ್ಶಕರ ಸಂದೇಶ ಇಷ್ಟು- ಮಾಕ್ಸರ್್ನ ಕಾಲದಲ್ಲಿನ ಕಾಮರ್ಿಕ ವರ್ಗದ ಸ್ವಭಾವ ಈಗ ಬದಲಾಗಿರುವುದರಿಂದಾಗಿ ಇಂದಿನ ನವ-ಉದಾರವಾದಿ ಜಾಗತೀಕರಣದ ವಿಶ್ವದಲ್ಲಿ ಮಾಕ್ಸರ್್ವಾದ ಅಪ್ರಸ್ತುತವಾಗಿದೆ; ಸಿಪಿಐ(ಎಂ) ಈ ‘ವಾಸ್ತವತೆ’ಯನ್ನು ಸ್ವೀಕರಿಸಲು ನಿರಾಕರಿಸುತ್ತಿದೆ, ಆದ್ದರಿಂದ ಅದು “ತನ್ನ ಅತಿ ದೊಡ್ಡ ಸವಾಲನ್ನು, ಅಪ್ರಸ್ತುತವಾಗುವ ಬೆದರಿಕೆಯ ಸವಾಲನ್ನು ಎದುರಿಸುತ್ತಿದೆ”!

ಆದರೇನು ಮಾಡುವುದು, ಮಾಕ್ಸರ್್ವಾದ ಅವರು ಹೇಳುವಂತೆ ಅಪ್ರಸ್ತುತವಾಗಿಲ್ಲ, ಬದಲಿಗೆ ಜಾಗತಿಕ ಬಂಡವಾಳಶಾಹಿಯ ಕಳೆದ ಆರು ವರ್ಷಗಳಲ್ಲಿ ಮತ್ತೆ-ಮತ್ತೆ ಎರಗುತ್ತ ಬಂದಿರುವ ಬಿಕ್ಕಟ್ಟು ಅದರ ಪ್ರಸ್ತುತತೆಯನ್ನು ಘಂಟಾಘೋಷವಾಗಿ ಸಾಬೀತು ಮಾಡುತ್ತಿದೆ. ಗೌರವಾನ್ವಿತ ಪೋಪ್ರವರು ಜಾಗತಿಕ ಆಥರ್ಿಕತೆಯನ್ನು ಧ್ವಂಸ ಮಾಡಿರುವ ಪ್ರಸಕ್ತ ಬಿಕ್ಕಟ್ಟಿನ ಅಧ್ಯಯನಕ್ಕೆ ಮತ್ತು ಅದನ್ನು ಅರ್ಥಮಾಡಿಕೊಳ್ಳಲು ಕಾಲರ್್ ಮಾಕ್ಸರ್್ರವರ ‘ದಾಸ್ ಕ್ಯಾಪಿಟಲ್ ಗ್ರಂಥವನ್ನು ತರಿಸಿಕೊಂಡಿದ್ದಾರೆ ಎಂಬ ವರದಿ ಆಕಸ್ಮಿಕವೇನಲ್ಲ. ಇರಲಿ, ಇಲ್ಲಿ ಅದರ ವಿಮಶರ್ೆಯ ಅಗತ್ಯವೇನಿಲ್ಲ.

ಈ ಬಿಕ್ಕಟ್ಟು ಇನ್ನೂ ಆವರಿಸಿಕೊಂಡಿರುವುದು ಏಕೆ ಎಂಬುದನ್ನು, ಅಷ್ಟೇ ಅಲ್ಲ, ಅದರ ಹುಟ್ಟನ್ನು ಕೂಡ-ಅಂದರೆ ಅಂತರ್ರಾಷ್ಟ್ರೀಯ ಹಣಕಾಸು ಬಂಡವಾಳದ ಉದಯ ಮತ್ತು ಇಂದಿನ ಜಾಗತೀಕರಣಗೊಂಡ ವಿಶ್ವದ ನವ-ಉದಾರವಾದಿ ಆಥರ್ಿಕ ವ್ಯವಸ್ಥೆಯನ್ನು ಮುಂದೊತ್ತುವಲ್ಲಿ ಅದು ನಡೆಸಿರುವ ಆಧಿಪತ್ಯ ಇವೆರಡನ್ನೂ- ಸಮಗ್ರವಾಗಿ ವಿವರಿಸುವುದು, ಆ ಮೂಲಕ ಅರ್ಥ ಮಾಡಿಕೊಳ್ಳುವುದು ಕೇವಲ ಮಾಕ್ಸರ್್ವಾದದಿಂದ ಮಾತ್ರವೇ ಸಾಧ್ಯ. ಜಾಗತಿಕವಾಗಿ ನಡೆದಿರುವ ‘ವಾಲ್ ಸ್ಟ್ರೀಟ್ ಆಕ್ರಮಿಸಿಕೊಳ್ಳಿ ಆಂದೋಲನ ಸಂಘಟಿತ ಕಮ್ಯುನಿಸ್ಟ್ ಪಕ್ಷಗಳ ಉತ್ಪನ್ನವೇನಲ್ಲ. ಆದರೆ ಅದು ಸ್ವತಂತ್ರವಾಗಿಯೇ ಯಾವ ತೀಮರ್ಾನಕ್ಕೆ ತಲುಪಿದೆ? -ಈ ಪ್ರತಿಭಟನೆಗಳು “ವ್ಯವಸ್ಥೆಯೊಳಗಿನ ದೋಷಗಳ ವಿರುದ್ಧ” ಅಲ್ಲ, ಬದಲಿಗೆ “ದೋಷಪೂರ್ಣ ವ್ಯವಸ್ಥೆ”ಯ(ಬಂಡವಾಳಶಾಹಿಯ) ವಿರುದ್ಧವೇ ಎಂದು. ಇದು ಮಾಕ್ಸರ್್ವಾದ ತಲುಪಿರುವ ಅದೇ ಮೂಲ ಕ್ರಾಂತಿಕಾರಿ ತೀಮರ್ಾನವೇ. ಸಂಪೂರ್ಣವಾದ ಮತ್ತು ಸಮಗ್ರವಾದ ಮಾನವ ಉದ್ಧಾರ ಈ ದೋಷಪೂರ್ಣ ವ್ಯವಸ್ಥೆಯನ್ನು ಕಿತ್ತೊಗೆದಾಗ ಮಾತ್ರ ಸಾಧ್ಯ. ನವ-ಉದಾರವಾದದ ಪ್ರತಿಪಾದಕರ ಮಟ್ಟಿಗೆ ಇದು ‘ಶಾಂತಂ-ಪಾಪಂ’, ಧರ್ಮದೂಷಣೆ! ಆದ್ದರಿಂದಲೇ ಅವರು ಸಿಪಿಐ(ಎಂ) ‘ಅಪ್ರಸ್ತುತ’ ಎಂದು ಅರಚುತ್ತಾರೆ.

ಮೂಲವನ್ನು ಪ್ರಶ್ನಿಸದಿರಲೆಂದು
ಇಷ್ಟೇ ಅಲ್ಲ, ಕಾಮರ್ಿಕ ವರ್ಗದ ಸಂಯೋಜನೆಯಲ್ಲಿ ಏನೇ ಬದಲಾವಣೆ ಬರಲಿ, ದೈಹಿಕ ಶ್ರಮದ ಸ್ಥಾನದಲ್ಲಿ ಬೌದ್ಧಿಕ ಶ್ರಮ ಎಷ್ಟೇ ಬರಲಿ(ಮಾನವ-ಪ್ರಕೃತಿ ದ್ವಂದ್ವದಲ್ಲಿ ತಂತ್ರಜ್ಞಾನ ಮಾನವ ನಾಗರಿಕತೆಯಲ್ಲಿ ಮೇಲ್ಮಟ್ಟಕ್ಕೆ ಹೋಗುತ್ತಲೇ ಇರುತ್ತದೆ ಎಂಬುದು ನಿತ್ಯ ಸತ್ಯ), ಮಾನವರಿಂದ ಮಾನವರ ಶೋಷಣೆಯ ಮೇಲೆ ನಿಂತಿರುವ ಬಂಡವಾಳಶಾಹಿಯ ಸ್ವಭಾವ ಮಾತ್ರ ಹಾಗೆಯೆ ಉಳಿದಿರುತ್ತದೆ ಎಂಬುದು ಸಾರಭೂತ ಸತ್ಯ. ಏಕೆಂದರೆ ಶೋಷಣೆ ಬಂಡವಾಳಶಾಹಿ ಉತ್ಪಾದನೆಯ ಪ್ರಕ್ರಿಯೆಯ ಆಂತರಿಕ ಚಲನೆಯಲ್ಲೇ ಅಡಗಿದೆ. ಯಾವ ಸಮಯದಲ್ಲೇ ಆಗಲಿ, ಕಾಮರ್ಿಕ ಉತ್ಪಾದಿಸುವ ಉತ್ಪನ್ನದಲ್ಲಿ, ಅಥವ ಭಾಗವಹಿಸುವ ಉತ್ಪಾದನಾ ಪ್ರಕ್ರಿಯೆಯಲ್ಲಿ ಆತ/ಆಕೆ ಸೇರಿಸುವ ಮೌಲ್ಯ ಸದಾ ಆತನಿಗೆ/ ಆಕೆಗೆ ಶ್ರಮ ಮಾರುಕಟ್ಟೆಯಲ್ಲಿ ಲಭ್ಯವಾಗುವ ಕೂಲಿಯ ಮೌಲ್ಯಕ್ಕಿಂತ ಹೆಚ್ಚಾಗಿಯೇ ಇರುತ್ತದೆ.

ಇವೆರಡರ ವ್ಯತ್ಯಾಸವೇ ಬಂಡವಾಳಶಾಹಿ ಉತ್ಪಾದನಾ ಪ್ರಕ್ರಿಯೆಯಲ್ಲಿ ಸತತವಾಗಿ ಉತ್ಪನ್ನಗೊಳ್ಳುವ ‘ಹೆಚ್ಚುವರಿ ಮೌಲ್ಯ, ಇದನ್ನೇ ಒಬ್ಬ ಬಂಡವಾಳಶಾಹಿ ಲಾಭ ಎಂದು ಸ್ವಾಧೀನ ಪಡಿಸಿಕೊಳ್ಳುವುದು. ಆದ್ದರಿಂದ ಕಾಮರ್ಿಕನ ಶ್ರಮ ‘ಬೌದ್ಧಿಕ’ವೇ, ಅಥವ ‘ದೈಹಿಕ’ವೇ ಎಂಬುದು ಮುಖ್ಯವಲ್ಲ, ಶೋಷಣೆಯೇ ಸಾರ್ವತ್ರಿಕ. ಆದ್ದರಿಂದ ಇಂತಹ ಶೋಷಣೆಯಿಂದ, ಬಂಧನದಿಂದ ವಿಮೋಚನೆ ಆ ವ್ಯವಸ್ಥೆಯನ್ನು ಕಿತ್ತೊಗೆಯುವುದರಿಂದ ಮಾತ್ರ ಬರಲು ಸಾಧ್ಯ. ಈ ವೈಜ್ಞಾನಿಕ ಸತ್ಯವನ್ನು ಒಪ್ಪಿಕೊಳ್ಳಲು ನವ-ಉದಾರವಾದಿ ಸಿದ್ಧಾಂತಿಗಳು ಇಷ್ಟಪಡುವುದಿಲ್ಲ. ಆದ್ದರಿಂದ ಅವರಿಗೆ ಉಳಿಯುವ ಅತ್ಯುತ್ತಮ ದಾರಿಯೆಂದರೆ ಸಿಪಿಐ(ಎಂ)ನ್ನು ಅಪ್ರಸ್ತುತ ಎಂದು ತೆಗಳುವುದು.

ಇಂತಹ ವಿಮಶರ್ೆಯ ಇನ್ನೊಂದು ರೂಪವೂ ಇದೆ. ಅದೆಂದರೆ, ಎನ್ಜಿಒ(ಸಕರ್ಾರೇತರ ಸಂಘಟನೆ)ಗಳ ಅಥವ ಶೋಷಣಾತ್ಮಕ ವ್ಯವಸ್ಥೆಯ ಬುನಾದಿಗಳನ್ನು ಪ್ರತಿಕೂಲವಾಗಿ ತಟ್ಟದೆಯೇ ನೈತಿಕ ಋಜುತ್ವದ ಮಾತಾಡುವ ನಿದರ್ಿಷ್ಟ ಪ್ರಶ್ನೆಗಳ ಮೇಲೆ ನಿಂತ ಆಂದೋಲನಗಳ ಗುರಿಗಳನ್ನು, ವಿಧಾನಗಳನ್ನು ಪ್ರೋತ್ಸಾಹಿಸುವುದು. ಅವು ವಿಮೋಚನೆಯ ಮಾತಾಡುವುದಿಲ್ಲ. ಆದ್ದರಿಂದಲೇ ಕಾಪರ್ೊರೇಟ್ ಮಾಧ್ಯಮ ಅಣ್ಣಾ ಹಝಾರೆಯ ಭ್ರಷ್ಟಾಚಾರ-ವಿರೋಧಿ ಆಂದೋಲನಕ್ಕೆ ಉತ್ಸಾಹಪೂರ್ಣ ಬೆಂಬಲ ನೀಡುತ್ತದೆ, ಅದಕ್ಕೆ ಬಹಳಷ್ಟು ಪ್ರಚಾರ ಕೊಡುತ್ತದೆ, ಅಥವ ಆಮ್ ಆದ್ಮಿ ಪಕ್ಷಕ್ಕೆ ಅದರ ಪ್ರಭಾವಕ್ಕೆ ಮೀರಿದ ಪ್ರಚಾರ ಕೊಡುತ್ತದೆ ಎಂಬುದನ್ನು ಗಮನಿಸಿ. ತದ್ವಿರುದ್ಧವಾಗಿ ಜನತಾ ಆಂದೋಲನಗಳು ಮತ್ತು ಎಡಪಕ್ಷಗಳು ಸಂಘಟಿಸುವ ಪ್ರತಿಭಟನೆಗಳು ಅವೇ ಪ್ರಶ್ನೆಗಳನ್ನು ಎತ್ತಿಕೊಂಡರೂ ಅವಕ್ಕೆ ಮಾಧ್ಯಮದಲ್ಲಿ ಸಿಗುವ ಪ್ರಚಾರ ಅತ್ಯಲ್ಪ, ವಾಸ್ತವವಾಗಿ, ಇಲ್ಲವೇ ಇಲ್ಲ. ಏಕೆಂದರೆ ಎಡಪಕ್ಷಗಳಂತೆ ಅವೆಲ್ಲ ಶೋಷಣೆಯ, ದಮನದ ಬುಡವನ್ನೇ ಅಲುಗಾಡಿಸಲು ಹೋಗುವುದಿಲ್ಲ.

ಬಂಡವಾಳಶಾಹಿ ವರ್ಗಕ್ಕೆ, ಅದರ ಬುನಾದಿಯನ್ನು ಪ್ರಶ್ನಿಸದಿರುವ ವರೆಗೆ, ನೈತಿಕ ದೃಷ್ಟಿಯ ಯಾವುದೇ ವಿಮಶರ್ೆ ಸ್ವಾಗತಾರ್ಹ ಮಾತ್ರವೇ ಅಲ್ಲ, ಅದು ಬಹಳ ಉನ್ನತವಾದುದು ಎಂದು ಪರಿಗಣಿಸುತ್ತದೆ. ಆದ್ದರಿಂದಲೇ ‘ಭ್ರಷ್ಟಾಚಾರ ಕೊನೆಗೊಳಿಸುವುದು’, ‘ಪ್ರಾಮಾಣಿಕ ರಾಜಕೀಯ’ ಇತ್ಯಾದಿ ಇತ್ಯಾದಿ ನೈತಿಕ ಋಜುತ್ವದ ಮಾತಾಡುವ ಎಲ್ಲ ಆಂದೋಲನಗಳಿಗೆ ಅದು ಕೃಪಾಪೋಷಣೆ ನೀಡುತ್ತದೆ. ಆದರೆ ಎಡಪಂಥೀಯರನ್ನು ಮಾತ್ರ ಏಕಾಂಗಿಯಾಗಿಸಬೇಕು, ಅವರಿಗೆ ಸವಾಲೊಡ್ಡಬೇಕು, ಏಕೆಂದರೆ ಅವರು ವ್ಯವಸ್ಥೆಯನ್ನೇ ಪ್ರಶ್ನಿಸುತ್ತಾರೆ, ‘ಪಯರ್ಾಯವೇ ಇಲ್ಲ ಎಂಬ ಜಪವನ್ನು ಸ್ವೀಕರಿಸಲು ನಿರಾಕರಿಸುತ್ತಾರೆ. ಸಿಪಿಐ(ಎಂ) ಮಟ್ಟಿಗೆ ‘ಪಯರ್ಾಯವೇ ಇಲ್ಲ ಎಂಬ ಜಪಕ್ಕೆ ‘ಸಮಾಜವಾದವೇ ಪಯರ್ಾಯ’ ಎಂಬುದೇ ಪಯರ್ಾಯ.

ನಮ್ಮ ಧೋರಣೆಗಳ, ಕ್ರಿಯೆಗಳ ವಸ್ತುನಿಷ್ಟ ಮತ್ತು ರಾಗದ್ವೇಷರಹಿತ ವಿಮಶರ್ೆಗಳನ್ನು ನಾವು ಸ್ವಾಗತಿಸುತ್ತೇವೆ ಎಂದು ನಮ್ಮ ಸಹಾನುಭೂತಿಪೂರ್ಣ ವಿಮರ್ಶಕರಿಗೆ ನಾವು ಆಶ್ವಾಸನೆ ಕೊಡುತ್ತೇವೆ. ಆದರೆ ನಾವು ಎಲ್ಲವನ್ನೂ ಬಿಸಾಕಿ ಬಿಡಬೇಕು ಎಂದು ಆಶಿಸುವವರ ಆಶಯವನ್ನು ಈಡೇರಿಸಲು ಮಾತ್ರ ಖಡಾಖಂಡಿತವಾಗಿ ನಿರಾಕರಿಸುತ್ತೇವೆ.

ವಧು-ವರಾನ್ವೇಷಣೆಯ ಅಂಕಣವಲ್ಲ
ಆದ್ದರಿಂದಲೇ ಹೆಚ್ಚೆಚ್ಚು ಯಥಾರ್ಥಕ್ಕಿಳಿಯುತ್ತಿರುವ ಈ ಸಮಸ್ತ ಚುನಾವಣಾ ಪ್ರಚಾರದಲ್ಲಿ ಜನತೆಯ ಕಾಳಜಿಯ ಪ್ರಶ್ನೆಗಳನ್ನು ಸತತವಾಗಿ ಎತ್ತುತ್ತಿರುವ ಮತ್ತು ಒಂದು ಉತ್ತಮ ಭಾರತವನ್ನು ಕಟ್ಟಲು, ನಮ್ಮ ವಿಶಾಲ ಜನಸಮೂಹಗಳ ಜೀವನಾಧಾರಗಳನ್ನು ಉತ್ತಮ ಪಡಿಸಲು ಒಂದು ಪಯರ್ಾಯ ಧೋರಣೆಯ ದಿಕ್ಪಥದತ್ತ ಬೊಟ್ಟು ಮಾಡುತ್ತಿರುವ ಏಕೈಕ ದನಿಯೆಂದರೆ ಎಡಪಕ್ಷಗಳದ್ದು. ಕಾಪರ್ೊರೇಟ್ ಮಾಧ್ಯಮಗಳು ಈ ಚುನಾವಣಾ ಸಮರವನ್ನು, ಒಂದು ಭವಿಷ್ಯದ ಸರಕಾರ ಉತ್ತಮ ಬದುಕಿಗಾಗಿ ಹಾತೊರೆಯುತ್ತಿರುವ ನಮ್ಮ ಜನಸಮೂಹಗಳಿಗೆ ಪರಿಹಾರ ಒದಗಿಸಬಲ್ಲ ಪಯರ್ಾಯ ಧೋರಣೆಗಳೇನು ಎಂದು ನಿರ್ಧರಿಸುವ ಬದಲು, ಒಂದು ವಧು-ವರಾನ್ವೇಷಣೆಯ ಅಂಕಣವನ್ನು ಓದುವಂತೆ, ಒಬ್ಬ ‘ನೇತಾರ’ನ ವೈಯಕ್ತಿಕ ಆಯ್ಕೆಯ ಮಟ್ಟಕ್ಕೆ ಇಳಿಸಿವೆ.

ಭಾರತದ ವಿಶಾಲ ಜನಸಮೂಹಗಳನ್ನು ಬಾಧಿಸುವ ನಿಜವಾದ ಪ್ರಶ್ನೆಗಳಿಗೂ, ಈ ಕಾಪರ್ೊರೇಟ್ ಮಾಧ್ಯಮಗಳು ಆರಿಸಿಕೊಳ್ಳುತ್ತಿರುವ ಪ್ರತಿಸ್ಪಧರ್ಿ ‘ನೇತಾರ’ರ ವೈಯಕ್ತಿಕ ಟಿಪ್ಪಣಿಗಳಿಗೂ, ಜತೆಗೆ ರಾಜಕೀಯ ಚಚರ್ೆಗಳ ಮಟ್ಟ ಇಳಿಯುತ್ತಿದೆ ಎಂದು ಅವೇ ದೂಷಿಸುವುದಕ್ಕೂ, ಅಥರ್ಾರ್ಥ ಸಂಬಂಧ ಉಳಿದಿಲ್ಲ; ಅಥವ ಮಾರಾಟ (ಲಾಭ ಎಂದೇ ಓದಿಕೊಳ್ಳಿ) ಹೆಚ್ಚಿಸಿಕೊಳ್ಳಲೆಂದೇ ಸೂಕ್ತ ಸಮಯದಲ್ಲಿ ಬಿಡುಗಡೆಯಾಗುತ್ತಿರುವ ಪುಸ್ತಕಗಳಲ್ಲಿನ ‘ನಿಜ ಭಾರತ’ಕ್ಕೆ ಪ್ರಸ್ತುತವೇ ಆಗಿರದ ವಿಷಯಗಳ ಮೇಲೆ ಒಣಚಚರ್ೆಗಳು, ಅವೈಜ್ಞಾನಿಕವಾದ ಅಥವ ಉದ್ದೇಶಪೂರ್ವಕವಾದ ‘ಅಭಿಪ್ರಾಯ ಸಂಗ್ರಹ’ಗಳನ್ನು ಪುಂಖಾನುಪುಂಖವಾಗಿ ಹೊರಹಾಕುತ್ತಿರುವುದು ಇವೆಲ್ಲ ನಿಜಕ್ಕೂ ಅಸಹ್ಯವೆನಿಸುತ್ತಿದೆ. ದುರಂತವೆಂದರೆ, ನಮ್ಮ ಪ್ರಜಾಪ್ರಭುತ್ವದ ನಾಲ್ಕನೇ ಸ್ತಂಭ ಎಂದನಿಸಿಕೊಳ್ಳುವ ಮಾಧ್ಯಮಗಳು ಮೇಲುಮೇಲಿನ ವಿಮಶರ್ೆಗಳನ್ನು ಹಾಡಿ ಹೊಗಳುತ್ತಲೇ, ನೈತಿಕವಾಗಿ ಅಧಃಪತನಕ್ಕಿಳಿಸುವ ಮತ್ತು ಅಮಾನವೀಯವಾಗಿ ಶೋಷಣೆ ನಡೆಸುವ ನವ-ಉದಾರವಾದಿ ವ್ಯವಸ್ಥೆಯ ಬುನಾದಿಯನ್ನು ಮಾತ್ರ ತಟ್ಟದಿರುವಂತೆ ನೋಡಿಕೊಳ್ಳುವ ಈ ಪ್ರಯತ್ನದಲ್ಲಿ ಹೆಚ್ಚೆಚ್ಚು ಭಾಗಿಯಾಗುತ್ತಿರುವುದು.

ಅದೃಷ್ಟವಶಾತ್, ಭಾರತದ ಜನತೆ ಯೋಚಿಸುತ್ತಿರುವುದೇ ಬೇರೆ. ಇಲ್ಲಿಯೇ ಸಿಪಿಐ(ಎಂ) ದೇಶದಲ್ಲಿನ ಅರ್ಥಪೂರ್ಣ ರಾಜಕೀಯ ಚಚರ್ೆಯಲ್ಲಿ ಪ್ರಸ್ತುತವಾಗಿಯೇ ಉಳಿಯುವುದು; ಅಷ್ಟೇ ಅಲ್ಲ, ನಮ್ಮ ಎಲ್ಲ ಜನತೆಗಾಗಿ ಒಂದು ಉತ್ತಮ ಭಾರತವನ್ನು ನಿಮರ್ಿಸುವುದಕ್ಕಾಗಿ ಭವಿಷ್ಯದ ಧೋರಣೆಯ ದಿಕ್ಕಿನ ಮೇಲೆ ಪ್ರಭಾವ ಬೀರಲು ಅದು ಪ್ರಯತ್ನಿಸುತ್ತಲೇ ಇರುತ್ತದೆ.
0

Donate Janashakthi Media

Leave a Reply

Your email address will not be published. Required fields are marked *