ಮಸೂದೆಗಳ ವಿರುದ್ಧ ಕರ್ನಾಟಕ ಬಂದ್ ಯಶಸ್ವಿ

ಬೆಂಗಳೂರು :ಕೃಷಿ ಹಾಗೂ ಕಾರ್ಮಿಕ ಮಸೂದೆಗಳ ಜಾರಿಗೆ ಮುಂದಾಗಿರುವ ಕೇಂದ್ರ ಮತ್ತು ರಾಜ್ಯ ಸರಕಾರದ ವಿರುದ್ದ ರೈತರು, ಕಾರ್ಮಿಕರು ಸೇರಿದಂತೆ ಜನಪರ ಸಂಘಟನೆಗಳು ಕರೆ ನೀಡಿದ್ದ ಕರ್ನಾಟಕ ಬಂದ್ ಗೆ ವ್ಯಾಪಕ ಬೆಂಬಲ ವ್ಯಕ್ತವಾಗಿದೆ. ಕಲಬುರ್ಗಿ, ಭಟ್ಕಳ, ಮುಂಡಗೋಡ, ಕಾರವಾರ, ಹಳಿಯಾಳ, ಸಿಂಧನೂರು, ಅಂಕೋಲಾ, ಹೊನ್ನಾವರ, ಯಾದಗಿರಿ, ರಾಯಚೂರು, ಕೊಪ್ಪಳ, ಮೈಸೂರು, ಹಾಸನ, ಬೆಂಗಳೂರು, ಕೋಲಾರ, ಚಿಕ್ಕಬಳ್ಳಾಪುರ, ಮಂಡ್ಯ ಬಳ್ಳಾರಿ, ಚಿತ್ರದುರ್ಗ, ಕೂಡ್ಲಿಗಿ, ಕುಡುಗೋಡು,  ಕಂಪ್ಲಿ, ಗಂಗಾವತಿ, ಹುಬ್ಬಳಿ, ಮೈಸೂರು, ಧಾರವಾಡ, ಸೇರಿದಂತೆ ಹಲವು ತಾಲ್ಲೂಕು ಜಿಲ್ಲೆಗಳಲ್ಲಿ ಬಂದ್ ಗೆ ಭಾರೀ ಬೆಂಬಲ ವ್ಯಕ್ತವಾಗಿದೆ.

ಗದಗ್, ಹಾವೇರಿ, ದಾವಣಗೆರೆ, ತುಮಕೂರು, ಉಡುಪಿ, ದಕ್ಷಿಣ ಕನ್ನಡ, ಬೀದರ್, ವಿಜಯಪುರ, ಬಾಗಲಕೋಟೆ, ಬೆಳಗಾವಿ, ಉತ್ತರ ಕನ್ನಡದಲ್ಲಿ ಮಿಶ್ರ ಪ್ರತಿಕ್ರಿಯೆ ವ್ಯಕ್ತವಾಗಿದೆ. ಹುಬ್ಬಳ್ಳಿಯಲ್ಲಿ ನಡೆದ ಪ್ರತಿಭಟನೆಯಲ್ಲಿ ಮೋದಿ ಮತ್ತು ಯಡಿಯೂರಪ್ಪ ಪ್ರತಿಕೃತಿ ದಹಿಸಿ ರೈತರು ಆಕ್ರೋಶ ವ್ಯಕ್ತಪಡಿಸಿದ್ದಾರೆ.

ಹಾಸನ

ಚಿಕ್ಕಬಳ್ಳಾಪುರದಲ್ಲಿ ನಡೆದ ಬಂದ್ ನಲ್ಲಿ ಪೊಲೀಸರು ಪ್ರತಿಭಟನಾಕಾರರನ್ನು ಕೆಲಕಾಲ ಬಂಧಿಸಿದ್ದರು. ೀ ನಡೆಯನ್ನು ವಿರೋಧಿಸಿ ಪ್ರತಿಭಟನಾಕಾರರು ಸರಕಾರ ಹೋರಾಟವನ್ನು ಹತ್ತಿಕ್ಕುತ್ತಿದೆ ಎಂದು ಆಕ್ರೋಶ ವ್ಯಕ್ತಪಡಿಸಿದರು. ಕೊಪ್ಪಳದಲ್ಲಿ ಪ್ರತಿಭಟನಕಾರರು ಮಾನವ ಸರಪಳಿ ರಚಿಸಿ ಆಕ್ರೋಶ ವ್ಯಕ್ತಪಡಿಸಿದರೆ, ಗಂಗಾವತಿಯಲ್ಲಿ ಎರಡು ಸಾವಿರಕ್ಕೂ ಹೆಚ್ಚು ಜನ ಜಮಾವಣೆಗೊಂಡಿದ್ದರು.

ಹಾಸನದಲ್ಲಿಯೂ ಬಂದ್ ಗೆ ಉತ್ತಮ ಪ್ರತಿಕ್ರಿಯೆ ವ್ಯಕ್ತವಾಗಿದ್ದು, ಕೇಂದ್ರ ರಾಜ್ಯ ಸರಕಾರದ ವಿರುದ್ಧ ರೈತರು ಘೋಷಣೆಗಳನ್ನು ಮೊಳಗಿಸಿದರು.

ಬೆಂಗಳೂರಿನಲ್ಲಿ ನಡೆದ ಬಂದ್ ಗೆ ಉತ್ತಮ ಪ್ರತಿಕ್ರಿಯೆ ವ್ಯಕ್ತವಾಗಿ, ಟೌನ್ ಹಾಲ್ ಮುಂಭಾಗದಿಂದ ಸಮಾವೇಶ ಆರಂಭಗೊಂಡು ಮೈಸೂರು ಬ್ಯಾಂಕ್ ವೃತ್ತದ ವರೆಗೂ ವಿವಿಧ ಸಂಘಟನೆಗಳು ಪ್ರತಿಭಟನಾ ರ್ಯಾಲಿ ನಡೆಸಿ  ಸರಕಾರದ ವಿರುದ್ದ ಘೊ಼ಷಣೆಗಳನ್ನು ಕುಗಿದರು.

ರಾಯಚೂರಿನಲ್ಲಿಯೂ ಮಿಶ್ರ ಪ್ರತಿಕ್ರಿಯೆ ವ್ಯಕ್ತವಾಗಿದೆ, ಸಾರಿಗೆ ಸಂಪೂರ್ಣ ಬಂದಾಗಿತ್ತು, ಕೆಲವೆ ಅಂಗಡಿ-ಮುಗ್ಗಟ್ಟುಗಳು ತೆರೆದಿದ್ದವು. ಎಪಿಎಂಸಿ ಸಂಪೂರ್ಣ ಬಂದಾಗಿತ್ತು.

ಉಡುಪಿ – ದಕ್ಷಿಣ ಕನ್ನಡ, ಉಡಪಿ ಜಿಲ್ಲಾ ಕೇಂದ್ರದಲ್ಲಿ ಬಂದ್ ಗೆ ಬಾರೀ ಬೆಂಬಲವ್ಯಕ್ತವಾಗಿದೆ.  ಬಳ್ಳಾರಿಯಲ್ಲಿಯೂ ಬಂದ್ ಗೆ ಉತ್ತಮ ಪ್ರತಿಕ್ರಿಯೆ ವ್ಯಕ್ತವಾಗಿದ್ದು, ಬಳ್ಳಾರಿ, ಹೊಸಪೇಟೆ, ಹಗರಿ ಬೊಮ್ಮನಹಳ್ಳಿ , ಕಲಬುರ್ಗಿ- ಯಾದಗಿರಿ, ಕಲಬುರ್ಗಿ, ಜೇವರ್ಗಿ, ಚಿಂಚನಸೂರು, ಶಹಪುರ, ಸುರಪುರ,  ಯಾದಗಿರಿಯಲ್ಲಿ ಸೇರಿದಂತೆ ಅನೇಕ ತಾಲ್ಲೂಕ ಕೇಂದ್ರದಲ್ಲಿ ಉತ್ತಮ ಬೆಂಬಲ ವ್ಯಕ್ತವಾಗಿತ್ತು.

ಕೋಲಾರ, ಬಂಗಾರಪೇಟೆ, ಕೆಜಿಎಫ್,  ಶ್ರೀನಿವಾಸಪುರ,  ಮಾಲೂರು,  ಹಾಗೂ ಮುಳಬಾಗಿಲನಲ್ಲಿ ಬಾರಿ ಬೆಂಬಲ ವ್ಯಕ್ತವಾಗಿದೆ.  ಅಂಗಡಿ ಮುಗ್ಗಟ್ಟು, ಸಾರಿಗೆ ಸಂಪೂರ್ಣವಾಗಿ ಬಂದಾಗಿತ್ತು.

ಈ ಪ್ರತಿಭಟನೆಗೆ ಸಿಪಿಐಎಂ ಬೆಂಬಲವನ್ನು ನೀಡಿತ್ತು, ರೈತರಿಗೆ ಅಪಾಯಕಾರಿಯಾಗಿರುವ ಮಸೂದೆಗಳನ್ನುಕೇಂದ್ರ ರಾಜ್ಯ ಸರಕಾರಗಳು ಹಿಂಪಡೆಯಬೇಕು ಎಂದು ಸಿಪಿಐಎಂ ರಾಜ್ಯ ಕಾರ್ಯದರ್ಶಿ ಯು. ಬಸವರಾಜ ಆಗ್ರಹಿಸಿದ್ದಾರೆ.

ಇನ್ನೂ ಕಾಂಗ್ರೆಸ್ ರಾಜ್ಯ ಪಾಲರನ್ನು ಭೇಟಿ ಮಾಡಿ ಮನವಿಯನ್ನು ನೀಡಿದ್ದು, ಕೇಂದ್ರ ರಾಜ್ಯ ಸರಕಾರಗಳ ರೈತ, ಕಾರ್ಮಿಕ ವಿರೋಧಿ ನೀತಿಗಳ ವಿರುದ್ದ ಡಿ.ಕೆ. ಶಿವಕುಮಾರ ಆಕ್ರೋಶ ವ್ಯಕ್ತಪಡಿಸಿದ್ದಾರೆ.

ಈ ಹೋರಾಟದ ತೀವ್ರತೆಗೆ ಮಣಿದಿರುವ ಮುಖ್ಯಮಂತ್ರಿ ಯಡಿಯೂರಪ್ಪನವರು ಪತ್ರಿಕಾಗೋಷ್ಟಿಯನ್ನು ನಡೆಸಿದರು. ಇದು ರೈತ ಸಂಘಟನೆಗಳ ಹಾಗೂ ಕಾಂಗ್ರೆಸ್ ಪಿತೂರಿಯಿಂದ ನಡೆದ ಹೋರಾಟ ಎಂದು ಆರೋಪಿಸಿದ್ದಾರೆ.

ಸರಕಾರದ ವಿರುದ್ದ ರೈತರು – ಕಾರ್ಮಿಕರು ನಡೆಸುತ್ತಿರುವ ಹೋರಾಟ ಸರಕಾರವನ್ನು ಬೀದಿಗೆ ತಂದು ನಿಲ್ಲಿಸುವ ಸೂಚನೆಯನ್ನು ಕರ್ನಾಟಕ ಬಂದ್ ತೋರಿಸುತ್ತದೆ.

 

Donate Janashakthi Media

Leave a Reply

Your email address will not be published. Required fields are marked *