ನಿಮ್ಮ ಜನಶಕ್ತಿ ಮೀಡಿಯಾ ವಾರದ ಕವಿತೆ ಡಾ. ಶಶಿಕಲಾ ವೀರಯ್ಯ ಸ್ವಾಮಿಯವರ “ಮನುಕುಲದ ಕತೆ”
ವಿಶ್ಲೇಷಣೆ : ಸುಧಾ ಚಿದಾನಂದ ಗೌಡ.
ಕವಿತೆ ಓದು : ವೆಂಕಟೇಶ ಪ್ರಸಾದ
ವಾರದ ಕವಿತೆ ಪರಿಕಲ್ಪನೆ ಮತ್ತು ಸಯೋಜನೆ ಡಾ. ವಿಠ್ಠಲ ಭಂಡಾರಿ
ಜನಶಕ್ತಿ ಮೀಡಿಯಾ ವಾರದ ಕವಿತೆಯ 20ನೇ ಸಂಚಿಕೆಯಾಗಿ ಆಯ್ಕೆ ಮಾಡಿಕೊಂಡ ಕವಿತೆ “ಮನುಕುಲದ ಕತೆ” ಈ ಕವಿತೆಯ ರಚನೆಕಾರರು ಶಶಿಕಲಾ ವೀರಯ್ಯ ಸ್ವಾಮಿರವರು. ಇವರು ಮೂಲತಃ ವಿಜಯಪುರ ಜಿಲ್ಲೆಯ ಸಿಂದಗಿಯವರು.
ಕವಯತ್ರಿ ಶಶಿಕಲರವರು ಹಲವು ಕವಿತೆಯನ್ನು ಬರೆದಿದ್ದು ಅವುಗಳು ಗುಬ್ಬಿಮನೆ, ಪ್ರಶ್ನೆ, ಜೀವ ಸಾವಿಗಳ ನಡುವೆ ಹೆಂಗೆ ಹೇಳಲಿ ಗೆಳತಿ, ಮಧ್ಯಂತರದ ಒಂದು ಗದ್ಯ ಗೀತೆ , ಬಟ್ಟ ಬಯಲಲ್ಲಿ ನಿಂತು, ಒಂಚೂರು ನೆಲೆ-ಒಂಚೂರು ಮುಗಿಲು.
ಪ್ರಶಸ್ತಿಗಳು
ಇವರಿಗೆ ದೊರೆತ ಬಿ.ಸರೋಜದೇವಿ ಪ್ರಶಸ್ತಿ, ಮಾತೋಶ್ರೀ ರತ್ನಮ್ಮ ಹೆಗ್ಗಡೆ ಪ್ರಶಸ್ತಿ, ರಾಜ್ಯೋತ್ಸವ ಪ್ರಶಸ್ತಿ, ರಾಜ್ಯ ಸಾಹಿತ್ಯ ಆಕಾಡಮಿ ಪ್ರಶಸ್ತಿ, ದಾನ ಚಿಂತಾಮಣಿ ಅತ್ತಿಮಬ್ಬೆ ಪ್ರಶಸ್ತಿ ಸೇರಿದಂತೆ ಹಲವು ಗೌರವ ಪುರಸ್ಕಾರಗಳು ಇವರಿಗೆ ದೊರೆತಿವೆ.
ಜನಶಕ್ತಿ ಯೂಟ್ಯೂಬ್ ಚಾಲನ್ ಮತ್ತು ಜನಶಕ್ತಿ ಫೇಸ್ ಬುಕ್ ನಲ್ಲಿ ಪ್ರತಿ ರವಿವಾರ ಬೆಳಗ್ಗೆ 10 ಗಂಟೆಗೆ ಪ್ರಸಾರವಾಗುತ್ತದೆ. ತಪ್ಪದೇ ಕವಿತೆ ಕೇಳಿ ಅಭಿಪ್ರಾಯ ತಿಳಿಸಿ.