ಡಾ|| ಸಿ. ಚಂದ್ರಪ್ಪ
ಸಂಪುಟ – 06, ಸಂಚಿಕೆ 26, ಜೂನ್ 24, 2012
21 ನೆಯ ಶತಮಾನದ ಸವಾಲು-ಅಗತ್ಯಗಳನ್ನು ಪೂರೈಸುವ ದೆಶೆಯಲ್ಲಿ ಇಡೀ ಶಿಕ್ಷಣ ರಂಗ ಮಾಪರ್ಾಡಾಗಬೇಕಿದೆ ಎನ್ನುವವರು ಶಿಕ್ಷಣ ರಂಗವನ್ನು ಯಾವ ದಿಕ್ಕಿಗೆ ಕೊಂಡೊಯ್ಯುತ್ತಿದ್ದಾರೆ? ಶಿಕ್ಷಣ ನಿಜಕ್ಕೂ ಎಲ್ಲರ ಸ್ವತ್ತಾಗುತ್ತಿದೆಯೇ ? ಅಥವಾ ಅಪಹರಿಸಲಾಗುತ್ತಿದೆಯೇ? ಶಿಕ್ಷಣ ರಂಗದಲ್ಲಿನ ಬದಲಾವಣೆ-ತಲ್ಲಣಗಳತ್ತ ಚಿಂತನೆಯ ನೋಟ ಹರಿಸುವ ಲೇಖನವಿಲ್ಲಿ.
ಭಾರತದಲ್ಲಿ ಉನ್ನತ ಶಿಕ್ಷಣ ಪ್ರಾಚೀನ ಕಾಲದಿಂದಲೂ ಹೆಚ್ಚು ಮಹತ್ವ ಪಡೆದುಕೊಂಡ ಕ್ಷೇತ್ರ. ಪ್ರಾಚೀನ ಕಾಲದ ನಳಂದ, ತಕ್ಷಶೀಲ, ಕಂತಿ, ಓದಂಟಪುರಿ, ಉಜ್ಜಯಿನಿ, ಉನ್ನತ ಶಿಕ್ಷಣದ ಕೇಂದ್ರಗಳಾಗಿದ್ದವಲ್ಲದೆ ದೇಶ ವಿದೇಶದಿಂದ ವಿದ್ಯಾಥರ್ಿ ಮತ್ತು ಶಿಕ್ಷಕರನ್ನು ಆಕಷರ್ಿಸುತ್ತಿದ್ದವು. ಪ್ರಾಚೀನ ಕಾಲದಿಂದಲೂ ಉನ್ನತ ಶಿಕ್ಷಣ ಆಳುವ ವರ್ಗದ ಮತ್ತು ಶ್ರೀಮಂತರ ಹಿತಕ್ಕೆ ರಕ್ಷಣೆಗೆ ಮಾತ್ರ ಮೀಸಲಾಗಿತ್ತೇ ವಿನಃ ಸಾಮಾನ್ಯ ಜನರಿಗಲ್ಲ.
ಆಧುನಿಕ ಕಾಲದ ಬ್ರಿಟಿಷ್ರ ಉನ್ನತ ಶಿಕ್ಷಣ ಮುಕ್ತವಾಗಿ ನೀಡುವ ಉದ್ದೇಶದಿಂದ 1858ರಲ್ಲಿ ಕಲ್ಕತ್ತ, ಬಾಂಬೆ ಮತ್ತು ಮದ್ರಾಸ್ ಮೂರು ವಿಶ್ವವಿದ್ಯಾಲಯ ಭಾರತದಲ್ಲಿ ಆರಂಭಿಸಿದರು. 1916ರಲ್ಲಿ 16 ವಿಶ್ವವಿದ್ಯಾನಿಲಯ ಭಾರತದಲ್ಲಿ ಆರಂಭಿಸಿದರು. ಸ್ವಾತಂತ್ರ್ಯಾನಂತರ ಉನ್ನತ ಶಿಕ್ಷಣದ ಕ್ಷೇತ್ರ ವಿಶಾಲವಾಗಿ ವಿಸ್ತರಿಸಿತು.
1991 ರಿಂದ ಉನ್ನತ ಶಿಕ್ಷಣ ಸುಧಾರಣೆಗಳ ಬಗ್ಗೆ ಸಲಹೆ ನೀಡಿರುವ ಪ್ರತಿಯೊಂದು ವರದಿಗಳು ಖಾಸಗೀಕರಣ ಉದಾರೀಕರಣ ವಿದೇಶಿಕರಣಕ್ಕೆ ಆದ್ಯತೆ ನೀಡಿವೆ. 19 ನೇ ಶತಮಾನ ಕೃಷಿಯ ವಾಣಿಜ್ಯಕರಣಕ್ಕೆ ಪ್ರೊತ್ಸ್ಸಾಹ ನೀಡಿದಂತೆ 21 ನೇ ಶತಮಾನ ಉನ್ನತ ಶಿಕ್ಷಣದ ಖಾಸಗೀಕರಣ ಮತ್ತು ವಾಣಿಜ್ಯಕರಣಕ್ಕೆ ರಾಜ್ಯ ಮತ್ತು ಕೇಂದ್ರ ಸಕರ್ಾರಗಳು ಮುಂದಾಗಿವೆ.
ಶಿಕ್ಷಣ, ಉದ್ಯೋಗ, ಆಹಾರ, ಆರೋಗ್ಯ ಮತ್ತು ವಸತಿ ಇವು ನಾಗರೀಕರ ಹಕ್ಕಾಗಬೇಕು ಎಂಬುದು `ಕಲ್ಯಾಣ ರಾಜ್ಯದ ಅಭಿಮಾತು. ಆದರೆ ಇಂದು ಕಲ್ಯಾಣ ರಾಜ್ಯಕ್ಕೆ ಖಾಸಗೀ ಮತ್ತು ವಿದೇಶಿ ಬಂಡವಾಳವನ್ನೇ ಈಗಾಗಲೇ ಶಾಸನ ಬದ್ದಗೊಳಿಸಲು ಸಕರ್ಾರಗಳು ಮುಂದಾ ಗಿವೆ.
ಭಾರತದಲ್ಲಿ `ಅಕ್ಷರ ದಾಸೋಹ ಎಂಬ ಉಚಿತ ಶಿಕ್ಷಣದ ಕಲ್ಪನೆ ಇತ್ತು. ಆದರೆ ಇಂದು ಶಿಕ್ಷಣ ವ್ಯಾಪಾರವಾಗಿ ಸರಕಾಗಿ ಉದ್ಯಮೀಕರಣ ವಾಗುತ್ತಿದೆ.ಇದಕ್ಕೆ ಶಿಕ್ಷಣದ ದೃಷ್ಠಿಕೋನದಲ್ಲಾದ ಬದಲಾವಣೆಯಾಗಿರುವುದು. ಭಾರತಕ್ಕೂ ಶಿಕ್ಷಣ, `ಪಠ್ಯಕ್ರಮ ಬೇರೆ ಬೇರೆಯಾಗಿ ಅಂದರೆ ಖಾಸಗಿ ಸಕರ್ಾರಿ, ವಿದೇಶಿಯಾಗಿ ರೂಪಗೊಂಡು ವಿವಿಧ ಮಾದರಿಯ ಶಿಕ್ಷಣ ಲಭ್ಯವಾಗುತ್ತಿದೆ. ಸ್ವದೇಶಿ ಶಿಕ್ಷಣದಲ್ಲಿ ವಿದೇಶಿ ಸಂಸ್ಕೃತಿ ಬೋಧಿಸಲಾಗುತ್ತದೆ. ಆಥರ್ಿಕ ನಾಯಕತ್ವ ಶಿಕ್ಷಣದಲ್ಲೂ ಹೆಚ್ಚಾಗುತ್ತಿದೆ. ಶಿಕ್ಷಣದಲ್ಲಿ ಅಮೇರಿಕ ಐರೋಪ್ಯ ರಾಷ್ಟ್ರಗಳ ಪ್ರಭಾವ ಹೆಚ್ಚಾಗುತ್ತಿದೆ. ಕೃಷಿ ಉತ್ಪನ್ನಕ್ಕೆ ಜಾಗತಿಕ ಮಾರುಕಟ್ಟೆ ಲಭ್ಯವಿಲ್ಲ. ಉಳಿದಂತೆ ಜಾಗತಿಕ ಮಾರುಕಟ್ಟೆಗೆ ಬೆಂಬಲ ಸಿಗುತ್ತಿದೆ.
ಕೇಂದ್ರ ರಾಜ್ಯ ಸಕರ್ಾರಗಳು ಉನ್ನತ ಶಿಕ್ಷಣವನ್ನು ಖಾಸಗಿ ಮತ್ತು ವಿದೇಶಿ ವಿ.ವಿ.ಗಳಿಗೆ ಮುಕ್ತಗೊಳಿಸಿವೆ. ಇದಕ್ಕೆ ಸಕರ್ಾರಗಳು ಕೇಂದ್ರೀಕೃತ ಸಮರ್ಥನೆ ವಾದವನ್ನು ಮುಂದಿಟ್ಟಿವೆ.
1. ಪ್ರಸ್ತ್ರತ ಶೇ. 11 ಇರುವ ಉನ್ನತ ಶಿಕ್ಷಣದಲ್ಲಿನ ವಿದ್ಯಾಥರ್ಿಗಳ ಪ್ರಮಾಣವನ್ನು 2025ರ ವೇಳೆಗೆ ಶೇ. 30 ಕ್ಕೆ ಹೆಚ್ಚಿಸುವುದು.
2. ಖಾಸಗಿ ಮತ್ತು ವಿದೇಶಿ ವಿ.ವಿ.ಯಿಂದ ಭಾರತದ ಉನ್ನತ ಶಿಕ್ಷಣದ ಗುಣಮಟ್ಟ ಹೆಚ್ಚುತ್ತದೆ.
3. ಭಾರತದಲ್ಲಿ ವಿದೇಶಿ ವಿ.ವಿ.ಯ ಕ್ಯಾಂಪಸ್ ತೆರೆದರೆ ಲಕ್ಷಾಂತರ ಡಾಲರ್ ಮೌಲ್ಯದ ವಿದೇಶಿ ವಿನಿಮಯ ವೆಚ್ಚ ಉಳಿಸಬಹುದು. ವರ್ಷಕ್ಕೆ 35,000 ಕೋಟಿ ಹಣ ಉಳಿಯುತ್ತದೆ.
4. ಭಾರತದ ಸಕರ್ಾರದಲ್ಲಿ ಹಣವಿಲ್ಲದಿರುವುದರಿಂದ ಖಾಸಗಿ ವಿದೇಶಿ ಸಂಸ್ಥೆಗಳ ಪ್ರವೇಶ ಅನಿವಾರ್ಯ.
5. 10ನೇ ತರಗತಿ ಪೂರೈಸಿದವರಲ್ಲಿ ಶೇ 10% ರಷ್ಟು ಮಕ್ಕಳು ಉನ್ನತ ಶಿಕ್ಷಣ ಹಂತ ತಲುಪದಿರುವುದು ಚಿಂತನಾರ್ಹ ವಿಷಯ.
6. ಸಕರ್ಾರಿ-ಖಾಸಗಿ ಸಹಬಾಗಿತ್ವ ಯೋಜನೆಯಿಂದ 40 ದಶಲಕ್ಷಕ್ಕೂ ಹೆಚ್ಚು ವಿದ್ಯಾಥರ್ಿಗಳಿಗೆ ಉನ್ನತ ಶಿಕ್ಷಣ ದೊರೆಯಲಿದೆ.
ಪ್ರಸ್ತುತ ಕನರ್ಾಟಕ ಸಕರ್ಾರ ಸಾಮಾನ್ಯ ಜನರ ಬದುಕಿಗೆ ಸಂಬಂಧಪಟ್ಟಂಥ ಹಲವಾರು ಕಾಯಿದೆಗಳು ಇನ್ನು ಸದನದಲ್ಲಿರುವಾಗಲೇ ದಿಡೀರನೇ ಅಜೀಂ ಪ್ರೇಮ್ಜಿ ವಿಶ್ವವಿದ್ಯಾಲಯ ಮಸೂದೆಯನ್ನು ಬಿಜೆಪಿ ಸಕರ್ಾರ ಸದನದಲ್ಲಿ ಮಂಡಿಸಿ. ಹೆಚ್ಚಿನ ಚಚರ್ೆಯೂ ಇಲ್ಲದೆ ಧ್ವನಿ ಮತದ ಅನುಮೋದನೆ ಪಡೆಯಿತು. ಈ ಮಸೂದೆಯಿಂದ ಜಾರಿಗೆ ಬರಲಿರುವ ಖಾಸಗಿ ವಿಶ್ವವಿದ್ಯಾಲಯಗಳು ಉನ್ನತ ಶಿಕ್ಷಣದಲ್ಲಿ ಕಳೆದೆರಡು ದಶಕಗಳಿಂದ ನಡೆಯುತ್ತಾ ಬಂದಿರುವ ವಾಣಿಜ್ಯೀಕರಣದ ಉತ್ತುಂಗ.ಖಾಸಗಿ ವಿಶ್ವವಿದ್ಯಾಲಯದಲ್ಲಿ ಆಡಳಿತಾತ್ಮಕ ಪ್ರಜಾತಂತ್ರವಾಗಲೀ, ಶೈಕ್ಷಣಿಕ ಬದ್ಧತೆಯಾಗಲೀ, ಸಾಮಾನ್ಯ ವಿದ್ಯಾಥರ್ಿಗಳ ಹಿತ್ತಾಸಕ್ತಿಯನ್ನಾಗಲೀ ನಿರೀಕ್ಷಿಸಲೂ ಸಾಧ್ಯವಿಲ್ಲ. ಇದು ಕೆಳಗಿನ ಅಂಶದಲ್ಲಿ ಸ್ವಷ್ಟವಾಗುತ್ತದೆ.
ಅಜೀಂ ಪ್ರೇಮ್ಜಿ ವಿ.ವಿ. 2010 ಮಸೂದೆಯಲ್ಲಿರುವ ಕೆಲವು ಅಂಶಗಳು :
1. ಸೆಕ್ಷನ್ 5ರ ಪ್ರಕಾರ ವಿ.ವಿ. ಸಕರ್ಾರದಿಂದ ಧನ ಸಹಾಯ ಕೇಳುವಂತಿಲ್ಲ. ಅದಾಗ್ಯೂ ಸಕರ್ಾರವೇ ಶೈಕ್ಷಣಿಕ ಉದ್ದೇಶದಿಂದ ಸಂಶೋಧನೆಗೆ ಹಣಕಾಸು ಸಹಾಯ ಮಾಡಬಹುದು.
2. ಸೆಕ್ಸೆನ್ 9ರ ಪ್ರಕಾರ ಎಲ್ಲಾ ಜಾತಿ, ವರ್ಗ, ಲಿಂಗದವರಿಗೂ ಪ್ರವೇಶ ಮುಕ್ತ. ಹೇಳುತ್ತಲೇ ಶೇ 25% ರಷ್ಟು ಸೀಟು ಕನರ್ಾಟಕದವರಿಗೆ ಮೀಸಲು, ಆದಾಗ್ಯೂ ವಿದ್ಯಾಥರ್ಿಗಳಲ್ಲಿ ಪ್ರವೇಶದ ಅರ್ಹತೆಗೆ ಬೇಕಾಗುವ ಮಾನದಂಡ ಇಲ್ಲದೆ ಹೋದಲ್ಲಿ ಬೇರೆಯವರಿಗೆ, ವಿದೇಶಿಯರಿಗೆ ಪ್ರವೇಶ ನೀಡಬಹುದು.
3. ಸೆಕ್ಸೆನ್ 11 ಪರಮಾಧಿಕಾರ ವಿ.ವಿ.ಯ ಪ್ರಾಯೋಜಿಕ ಸಂಸ್ಥೆ ಖಠಿಠಟಿಠಡಿಟಿರ ಛಠಜಥಿ ಇವರೇ ಅಜೀಂ ಪ್ರೇಮ್ಜಿ ಪ್ರತಿಷ್ಠಾನದ ಅಧ್ಯಕ್ಷರೇ ವಿ.ವಿ.ಯ ಕುಲಪತಿ, ಉಪಕುಲಪತಿ, ಆಡಳಿತ ಸಮಿತಿ, ಶೈಕ್ಷಣಿಕ ಸಮಿತಿಗೆ ಎಲ್ಲಾ ನೇಮಕ ಮಾಡುವರು, ಸಿಂಡಿಕೇಟ್ ಮತ್ತು ಸೆನೆಟ್ಗೆ ಅವಕಾಶವಿಲ್ಲ.
4. ಸೆಕ್ಸೆನ್ 14ರ ಪ್ರಕಾರ ಕುಲಪತಿ ಪ್ರಾಯೋಜಕ ಸಂಸ್ಥೆಯ ಅಧ್ಯಕ್ಷರು ಅಂದರೆ ಅಜೀಂ ಪ್ರೇಮ್ಜಿ 14(1)ರ ಪ್ರಕಾರ ಕುಲಪತಿ ಅಧಿಕಾರ ಅವಧಿ ಅವರ ಜೀವಿತಾ ವಧಿಯವರೆಗೆ ಇರುತ್ತದೆ. ನಂತರ ಅವರ ಮಕ್ಕಳು, ಮೊಮ್ಮಕ್ಕಳು ರಕ್ತ ಸಂಬಂಧಿಗಳು ಕುಲಪತಿಗಳಾಗುತ್ತಾರೆ.
5. ಸೆಕ್ಸೆನ್ 13 ರ ಪ್ರಕಾರ ವಿ.ವಿ.ಗೆ ರಾಜ್ಯಪಾಲರು ಕೇವಲ ಸಂದರ್ಶಕರು. ಘಟಿಕೋತ್ಸವದ ಅಧ್ಯಕ್ಷತೆ ವಹಿಸಬಹುದು. ವಿ.ವಿ. ಕಾಗದ ಪತ್ರ ಪರಿಶೀಲಿಸಬಹುದು ಅಥವಾ ಮರು ಪರಿಶೀಲಿಸಲು ಹೇಳಬಹುದು ಅಷ್ಟೇ.
ಆದರೆ ಸಕರ್ಾರಿ ವಿ.ವಿ. ಗಳಲ್ಲಿ ಆಡಳಿತಾತ್ಮಕ ಮತ್ತು ಶೈಕ್ಷಣಿಕ ಪರಮೋಚ್ಛ ಅಧಿಕಾರಿ ಉಪಕುಲಪತಿ, ಇವರ ನೇಮಕ ಸಕರ್ಾರದ ಶಿಫಾರಸ್ಸಿನ ಮೇಲೆ, ಅಧಿಕಾರ ರಾಜ್ಯಪಾಲರದೇ.ಕನರ್ಾಟಕದಲ್ಲಿ ಮತ್ತೊಂದು ಖಾಸಗಿ ವಿ.ವಿ.ಯುಸಸ ಫೌಂಡೇಷನ್ ಫಾರ್ ಎಜುಕೇಷನ್ ಫಾರ್ ಆಲ್ ಎಂಬ ಹೆಸರಿನ ಸಂಸ್ಥೆಯ ಅಧ್ಯಕ್ಷ ಡಾ. ಮಹಲಿಂಗ ಸ್ವಾಮಿ ಸಾರ್ವಜನಿಕ-ಖಾಸಗಿ ಸಹಭಾಗಿತ್ವದಲ್ಲಿ ನೆಲಮಂಗಲದ ಬಳಿ ರಾಷ್ಟ್ರೀಯ ವಿಜ್ಞಾನ ವಿಶ್ವವಿದ್ಯಾಲಯ ಸ್ಥಾಪಿಸಲು ಸಕರ್ಾರದ ಜೊತೆ ಒಪ್ಪಂದ ಮಾಡಿಕೊಂಡಿದ್ದು, ಜೂನ್ 7-8 ರಂದು ನಡೆಯುವ ಜಾಗತಿಕ ಹೂಡಿಕೆದಾರರ ಸಮಾವೇಶದಲ್ಲಿ ಮುಂದಿನ ಪ್ರಕ್ರಿಯೆಗಳನ್ನು ಪೂರ್ಣಗೊಳಿಸಲಿದ್ದಾರೆ ಎಂದು ವರದಿಯಾಗಿತ್ತು.
ಖಾಸಗಿ ವಿ.ವಿ. ಮುಖ್ಯಾಂಶಗಳು
1. 100 ಕೋಟಿ ರೂಪಾಯಿ ವೆಚ್ಚದಲ್ಲಿ ವಿ.ವಿ.ಅಸ್ಥಿತ್ವಕ್ಕೆ.
2. 50 ಎಕರೆ ವಿಸ್ತಿರ್ಣದಲ್ಲಿ ವಿವಿ ಕ್ಯಾಂಪಸ್ ನಿಮರ್ಾಣ.
3. 2013 ರಲ್ಲಿ ವಿಶ್ವವಿದ್ಯಾಲಯಕ್ಕೆ ಅಧಿಕೃತ ಚಾಲನೆ ಗುರಿ.
4. 10 ವರ್ಷಗಳಲ್ಲಿ 500 ಕೋಟಿ ವೆಚ್ಚ ಯೋಜನೆ.
5. ಸಕರ್ಾರ ಭೂಮಿ ನೀಡುವ ಭರವಸೆಯನ್ನು ಈಗಾಗಲೇ ನೀಡಿದೆ.
ಈಠಡಿಜರಟಿ ಜಜಣಛಿಚಿಣಠಟಿ ಟಿಣಣಣಣಠಟಿ (ಖಜರಟಚಿಣಠಟಿ ಠಜಿ ಇಟಿಣಡಿಥಿ ಚಿಟಿಜ ಔಠಿಜಡಿಜಣಠಟಿ) ಃಟಟ-2010 ಅನುಮೋದನೆ
ಭಾರತದಲ್ಲಿ ಶೈಕ್ಷಣಿಕ ಕ್ಷೇತ್ರ ವಿದೇಶಿಯವರಿಗೆ ಪ್ರವೇಶ ನೀಡುವ ಮಸೂದೆಯನ್ನು ಕೇಂದ್ರ ಸಕರ್ಾರ ಸಚಿವ ಸಂಪುಟದಲ್ಲಿ ಅನು ಮೋದನೆ ನೀಡಿದೆ. ಇದು ಬಹುರಾಷ್ಟ್ರೀಯ ಕಂಪನಿ, ವಿದೇಶಿ ನೇರ ಹೂಡಿಕೆದಾರರಿಗೆ ಅದರಲ್ಲೂ ಗಖಂ, ಐರೋಪ್ಯ ರಾಷ್ಟ್ರಗಳಿಗೆ ಮುಕ್ತಗೊಳಿಸಲು ಮುಂದಾಗಿದೆ. ವಿದೇಶದಲ್ಲೂ ಸಹ ಉನ್ನತ ಶಿಕ್ಷಣದ ವಿಜ್ಞಾನ, ತಂತ್ರಜ್ಞಾನ ಮತ್ತು ಸಂಶೋಧನೆಗೆ ಅಲ್ಲಿನ ಸಕರ್ಾರಗಳೇ ಹಣ ಹೂಡುತ್ತವೆಯೇ ಹೊರತು ಖಾಸಗಿಯವರಲ್ಲ. ಅಣುವಿಜ್ಞಾನ, ಬಾಹ್ಯಾಕಾಶ, ಔಷಧಿ, ರಕ್ಷಣಾ ತಂತ್ರಜ್ಞಾನ, ಈ ಸಂಶೋಧನೆಯಲ್ಲಿ ಪೇಟೆಂಟ್ ಮಾಡಿ ಕೊಂಡು ಬೌದ್ದಿಕ ಮತ್ತು ಆಥರ್ಿಕ ವಸಹತು ಗಳನ್ನಾಗಿ ಭಾರತದಂತಹ ರಾಷ್ಟ್ರಗಳನ್ನು ಬಲಿಕೊಡುತ್ತವೆ.
ಅಮೇರಿಕಾದ ಹೆಸರಾಂತ ಒಖಿ, ಹಾರ್ವಡರ್್, ಯೇಲ್, ಸ್ಯಾನ್ಪ್ಲೋಡರ್್, ಕೆಲ್ಲೋಗ್, ಹಾಪ್ಕಿನ್ಸ್ ಮೆಡಿಕಲ್ ಇನ್ಸ್ಟಿಟ್ಯೂಟ್ನಂಥ ವಿ.ವಿ. ಗಳು ಭಾರತದಲ್ಲಿ ತಮ್ಮ ಶಾಖೆ (ಕ್ಯಾಂಪಸ್) ಪ್ರಾರಂಭಿಸುವುದಿಲ್ಲ. ಬದಲಿಗೆ ಭಾರತಕ್ಕೆ ಬರಲು ತುದಿಗಾಲಲ್ಲಿ ನಿಂತಿರುವುದು ಕಳಪೇ ಗುಣಮಟ್ಟದ ಕಾರಣಕ್ಕಾಗಿ ಆ ದೇಶಗಳಿಂದಲೇ ತಿರಸ್ಕರಿಸಲ್ಪಟ್ಟ ವಿ.ವಿ.ಗಳಾದ ಮತ್ತು ಮೂರನೇ ದಜರ್ೆ ವಿ.ವಿ.ಗಳಾದ – ರಾಜಕಾರಣಿ ಗಳಿಗೆ ಡಾಕ್ಟರೇಟ್ ಕೊಟ್ಟ ಅಡ್ರೆಸ್ಗಳಿಲ್ಲದ ವಿ.ವಿ.ಗಳಾದ ಫೀನಿಕ್ಸ್ ಆನ್ ಲೈನ್, ಸುಲ್ಲಿವನ್, ಗಾಛರ್ ಕಾಲೇಜ್, ಸೋಜರ್ನರ್ ಕಾಲೇಜ್ ಮುಂತಾದವು.
ವಿದೇಶಿಯ ವಿ.ವಿ.ಯಾದ ಅಮೇರಿಕಾದ `ಡ್ಯೂಕ್ ವಿ.ವಿ. ಭಾರತದಲ್ಲಿ ಎಂ.ಬಿ.ಎ, ಪರವಾನಿಗೆ ಕೇಳುತ್ತಿದೆ. ಶ್ಯೂಲಜ್ ಸ್ಕೂಲ್ ಆಫ್ ಬಿಸಿನೆಸ್, ನ್ಯೂಕ್ಯಾಸಲ್ ಬಿಸಿನೆಸ್, ಮೆರಿಟ್ಸ್ಪಿಸ್ ಏಶಿಯನ್ ಸ್ಕೂಲ್ ಆಫ್ ಹೋಟೇಲ್ ಮ್ಯಾನೇಜ್ಮೆಂಟ್ ಇತ್ಯಾದಿಗಳು ವಿದೇಶಿ ವಿ.ವಿ.ಗಳು ಆಸಕ್ತಿ ಹೊಂದಿರುವ ವಲಯ ಹೋಟೆಲ್ ಮ್ಯಾನೆಜ್ ಮೆಂಟ್ ಮತ್ತು ಬಿಸಿನೆಸ್ ಅಡ್ಮಿನಿಸ್ಟ್ರೇಷನ್ ವಲಯಗಳೇ ಹೊರತು ಭಾರತೀಯ ಸಮಾಜ, ಭಾಷೆ, ವಿಜ್ಞಾನ, ಬುಡಕಟ್ಟು, ಸಂಸ್ಕೃತಿ, ಮೂಲಭೂತ ಸೌಲಭ್ಯ, ರೈತ, ಅರೋಗ್ಯ ಅಧ್ಯಯನಗಳಲ್ಲ.
ಸಕರ್ಾರದ ಎಲ್ಲಾ ಯೋಜನೆ ಅದರಲ್ಲೂ, ಶಿಕ್ಷಣ ಉದ್ಯೋಗ, ಆರೋಗ್ಯ ಕ್ಷೇತ್ರಕ್ಕೇ ಖಾಸಗಿ ಸಹಯೋಗ `ಕಣಛಟಛಿ ಕಡಿತಣಜ ಕಚಿಡಿಣಟಿಜಡಿ ಖಠಿ(ಕಕಕ)ಕ್ಕೆ ಮುಂದಾಗಿವೆ. ಕನಿಷ್ಠ 50 ಕೋಟಿ ರೂ ಬಂಡವಾಳ ಹೂಡಿಕೆ ಮಾಡಿದಲ್ಲಿ ಅವರಿಗೆ, ಕಟ್ಟಡ, ಭೂಮಿ, ನೀರು, ವರಮಾನ, ತೆರಿಗೆ ವಿದ್ಯುತ್, ವಿದ್ಯುತ್ ಹೀಗೆ ಎಲ್ಲಾ ಹಂತದಲ್ಲೂ ತೆರಿಗೆ ರಿಯಾಯಿತಿ ಸಬ್ಸೀಡಿ ಪಡೆಯುತ್ತಿವೆ. ಇದು ಕೇವಲ ಶಿಕ್ಷಣ ಕ್ಷೇತ್ರದ ದುರಂತ ಮಾತ್ರವಲ್ಲ ವಿದ್ಯುತ್ ಕ್ಷೇತ್ರದಲ್ಲಿ ಕೊಜೆಂಟ್ರಿಕ್ಸ್, ಎನ್ರಾನ್ಗಳು, ಹಣಕಾಸು ಕ್ಷೇತ್ರದಲ್ಲಿ ಜಿ.ಪಿ.ಮೋಗರ್ಾನ್, ಗೋಲ್ಡ್ಮಾನ್ನ್ಯಾಶ್ಗಳು, ಉತ್ಪಾದನಾ ಕ್ಷೇತ್ರದ ಯೂನಿಯನ್ ಕಾಬರ್ೈಡ್ ಸಹ ಭಾರತದಲ್ಲಿ ವಿದೇಶಿ ಮತ್ತು ಖಾಸಗೀ ಕರಣದ ಭಾಗವಾಗಿ ಭಾರತದಲ್ಲಿ ಹಣಕಾಸು ಹೂಡಿಕೆ ಮಾಡಿವೆ. ಇದೀಗ ಸಕರ್ಾರಿ ಶಾಲೆಗಳು ಮುಚ್ಚುತ್ತಿರುವಂತೆ ಸಕರ್ಾರಿ ವಿ.ವಿ.ಗಳು ಮುಚ್ಚಿ, ಖಾಸಗಿ ಮತ್ತು ವಿದೇಶಿ ವಿ.ವಿ. ಗಳು ಪ್ರವರ್ಧ ಮಾನಕ್ಕೆ ಬಂದಲ್ಲಿ ಏನೂ ಆಶ್ಚರ್ಯವಿಲ್ಲ.
0