ಭಾರತಕ್ಕೆ ಭರ್ಜರಿ ಗೆಲುವು ರನ್ ರೇಟ್ ಹೆಚ್ಚಿಸಿಕೊಂಡ ಭಾರತ

ದುಬೈ : ಇಂದು ದುಬೈ ಇಂಟರ್​​ನ್ಯಾಷನಲ್​​ ಸ್ಟೇಡಿಯಂನಲ್ಲಿ ನಡೆದ ಐಸಿಸಿ ಟಿ20 ವಿಶ್ವಕಪ್​​​​ ಪಂದ್ಯದಲ್ಲಿ ಭಾರತ ತಂಡವೂ ಸ್ಕಾಟ್ಲೆಂಡ್ ವಿರುದ್ಧ ಭರ್ಜರಿ ಜಯ ಸಾಧಿಸಿದೆ. 2 ವಿಕೆಟ್​​ ನಷ್ಟಕ್ಕೆ ಕೇವಲ 6.3 ಓವರ್​​ನಲ್ಲಿ ಸ್ಕಾಟ್ಲೆಂಡ್ ನೀಡಿದ ಟಾರ್ಗೆಟ್​​​ 89 ರನ್​​​​ ಗಳಿಸಿ ಗೆಲುವಿನ ನಗೆ ಬೀರಿದೆ. ಈ ಮೂಲಕ ತನ್ನ ಸೆಮಿ ಫೈನಲ್​​ ಆಸೆ ಜೀವಂತವಾಗಿರಿಸಿದೆ.

ಟಾಸ್​​ ಸೋತು ಮೊದಲು ಬ್ಯಾಟಿಂಗ್​​ ಮಾಡಿದ ಸ್ಕಾಟ್ಲೆಂಡ್ 17.4 ಓವರ್​​ನಲ್ಲಿ 85 ರನ್​​ಗೆ ಆಲೌಟ್​​ ಆಗಿತ್ತು. ಸ್ಕಾಟ್ಲೆಂಡ್ ಪರ ಜಾರ್ಜ್ ಮಾಂಜಿ 24, ಕ್ಯಾಲಮ್ ಮೆಕ್ಲಿಯೋಡ್ 16, ಮೈಕೆಲ್ ಲೀಸ್ಕ್ 21 ರನ್​​ ಗಳಿಸಿದ್ದಾರೆ. ಇವರ ನೆರವಿನಿಂದ ಸ್ಕಾಟ್ಲೆಂಡ್ ಕೇವಲ 85 ರನ್​​ ಗಳಿಸಿದೆ. ಈ ಮೂಲಕ ಭಾರತಕ್ಕೆ ಸ್ಕಾಟ್ಲೆಂಡ್ 86 ರನ್​​ ಟಾರ್ಗೆಟ್​ ನೀಡಿತ್ತು. ಈಗ ಭಾರತ ಕೇವಲ 7 ಓವರ್​​ನಲ್ಲಿ ಮ್ಯಾಚ್​​ ಮುಗಿಸಿದೆ.

ಟೀಂ ಇಂಡಿಯಾ ಪರ ರೋಹಿತ್​ ಶರ್ಮಾ 30, ಕೆ.ಎಲ್​​ ರಾಹುಲ್​​ 50 ರನ್​​ ಗಳಿಸಿದರು.

ಭಾರತ ಈ ಗೆಲುವಿನೊಂದಿಗೆ ಅಂಕಪಟ್ಟಿಯಲ್ಲಿ 3ನೇ ಸ್ಥಾನಕ್ಕೆ ಜಿಗಿಯಿತು. ನೆಟ್ ರನ್ ರೇಟ್ 1.619ಕ್ಕೆ ಹಿಗ್ಗಿತು. ಭಾರತದ ರನ್ ರೇಟ್ ನ್ಯೂಜಿಲೆಂಡ್ ಮತ್ತು ಅಫ್ಘಾನಿಸ್ತಾನದಕ್ಕಿಂತ ಉತ್ತಮವಾಗಿದೆ.
ಭಾರತ ಸೆಮಿಫೈನಲ್‌ ತಲುಪಬೇಕಾದರೆ, ನ್ಯೂಜಿಲೆಂಡ್, ಅಫ್ಘಾನಿಸ್ತಾನ ಪಂದ್ಯದಲ್ಲಿ ಅಫ್ಘಾನಿಸ್ತಾನ ಗೆಲ್ಲಬೇಕು, ಆಗ ರನ್ ರೇಟ್ ಆಧಾರದಲ್ಲಿ ಭಾರತ ಸೆಮಿಸ್ ಗೆ ಬರುವ ಸಾಧ್ಯತೆ ಇದೆ. ಭಾರತದ ಅಭಿಮಾನಿಗಳು ಅಫ್ಘಾನಿಸ್ತಾನ ಗೆಲ್ಲಲಿ ಎಂದು ಆ ತಂಡಕ್ಕೆ ಬೆಂಬಲ ಸೂಚಿಸುತ್ತಿದ್ದಾರೆ.

Donate Janashakthi Media

Leave a Reply

Your email address will not be published. Required fields are marked *