`ಪೀಪಲ್ಸ್ ಡೆಮಾಕ್ರೆಸಿ’ ವಾರ ಪತ್ರಿಕೆಯ ಆಗಸ್ಟ್ೈ 12, 2012 ರ ಸಂಚಿಕೆಯ ಸಂಪಾದಕೀಯ
ಸಂಪುಟ – 06, ಸಂಚಿಕೆ 34, ಆಗಸ್ಟ್ 19, 2012
2014ರ ಸಾರ್ವತ್ರಿಕ ಚುನಾವಣೆಗಳಲ್ಲಿ ಬರುವ ಸರಕಾರದ ಮುಖ್ಯಸ್ಥರಾಗುವವರು ಬಿಜೆಪಿಗೂ ಸೇರಿರುವುದಿಲ್ಲ, ಕಾಂಗ್ರೆಸಿಗೂ ಸೇರಿರುವುದಿಲ್ಲ ಎಂದು ಶ್ರೀಯುತ ಅಡ್ವಾಣಿಯವರು ಸೈಬರ್ ಲೋಕದಲ್ಲಿ ಬಾಂಬು ಸಿಡಿಸಿದ್ದಾರೆ. ಸರಕಾರ ರಚಿಸುವ ಓಟದಲ್ಲಿ ಬಿಜೆಪಿ ಇರುವುದಿಲ್ಲ ಎಂದು ಈ ರೀತಿ ಒಪ್ಪಿಕೊಂಡಿರುವುದು ಸಹಜವಾಗಿ ಆರೆಸ್ಸೆಸ್ ವಿಷವೃಕ್ಷದ ಹಲವಾರು ಟೊಂಗೆಗಳು ಮತ್ತು ಎನ್ಡಿಎ ಮಿತ್ರರಿಗೆ ಆಘಾತ ಉಂಟು ಮಾಡಿದೆ. ಆದರೂ ತಮಾಷೆಯೆಂದರೆ, ಇದು ಅವರ ಬೇರೆ ಯಾವುದೇ ಅಂದಾಜಿಗಿಂತ ವಾಸ್ತವಕ್ಕೆ ಅತ್ಯಂತ ಹತ್ತಿರವಾಗಿದೆ. ತನಗೆ ತಿಳಿಯದೆಯೇ, ಅಡ್ವಾಣಿಯವರು ದೇಶಕ್ಕೊಂದು ಪಯರ್ಾಯ ಧೋರಣೆಯ ದಿಕ್ಕು ಬೇಕಾಗಿದೆ ಎಂದೂ, ಧೋರಣೆಯ ದಿಕ್ಪಥದಲ್ಲಿ ಇಂತಹ ಜನಹಿತಕಾರಿ ಪಲ್ಲಟವನ್ನು ತರುವಲ್ಲಿ ನೇತೃತ್ವ ನೀಡುವುದು ಬಿಜೆಪಿಗಾಗಲೀ, ಕಾಂಗ್ರೆಸಿಗಾಗಲೀ ಸಾಧ್ಯವಿಲ್ಲ ಎಂದೂ ಒಪ್ಪಿಕೊಳ್ಳುತ್ತಿರುವಂತೆ ಕಾಣುತ್ತಿದೆ.
ವಿನ್ಸ್ಟನ್ ಚಚರ್ಿಲ್, ಅಂಧಾಭಿಮಾನಿ ಅಂದರೆ, ತನ್ನ ಮನಸ್ಸು ಬದಲಿಸಿಕೊಳ್ಳಲಾರದ ಮತ್ತು ತನ್ನ ವಿಷಯ ಬದಲಿಸದ ಒಬ್ಬ ವ್ಯಕ್ತಿ ಎಂದೊಮ್ಮೆ ವಣರ್ಿಸಿದ್ದರಂತೆ. ಬಿಜೆಪಿಯ ಪಳಗಿದ ಯುದ್ಧಕುದುರೆ, ಶ್ರೀಯುತ ಎಲ್.ಕೆ.ಅಡ್ವಾಣಿ, ಸೈಬರ್ಲೋಕದಲ್ಲಿ ತನ್ನ ಇತ್ತೀಚಿನ ಬಾಂಬು ಸಿಡಿಸಿ ಇದರ ಮರುನಿರೂಪಣೆ ಮಾಡಿರುವಂತೆ ಕಾಣುತ್ತದೆ. ತಾನಿನ್ನು ಪ್ರಧಾನ ಮಂತ್ರಿಯ ಸ್ಪಧರ್ೆಯಲ್ಲಿ ಇಲ್ಲ ಎಂಬ ಸಂಗತಿಯನ್ನು ಒಪ್ಪಿಕೊಂಡು ಅವರು ವಿಷಯವನ್ನು ಬದಲಿಸುತ್ತಿದ್ದಾರೆ. ಆತ ತನ್ನ ಮನಸ್ಸು ಬದಲಿಸಿಕೊಳ್ಳಲಾರ ಎಂಬುದು ಸಂಸತ್ತಿನ ಮಳೆಗಾಲದ ಅಧಿವೇಶನದ ಆರಂಭದ ದಿನ ವೇದ್ಯವಾಗಿದೆ-ಅಸ್ಸಾಂನ ಖಂಡನೀಯ ಹಿಂಸಾಚಾರ ಮತ್ತು ಗಲಭೆಗಳನ್ನು ಬಳಸಿಕೊಂಡು ತನ್ನ ಕೋಮುವಾದಿ ವಿಷವನ್ನು ಕಾರಿಕೊಂಡಾಗ. 2014ರ ಸಾರ್ವತ್ರಿಕ ಚುನಾವಣೆಗಳಲ್ಲಿ ಬರುವ ಸರಕಾರದ ಮುಖ್ಯಸ್ಥರಾಗುವವರು ಬಿಜೆಪಿಗೂ ಸೇರಿರುವುದಿಲ್ಲ, ಕಾಂಗ್ರೆಸಿಗೂ ಸೇರಿರುವುದಿಲ್ಲ ಎಂದು ತನ್ನ ಬ್ಲಾಗಿನಲ್ಲಿ ಅವರು ಹೇಳಿಕೊಂಡಿದ್ದಾರೆ. ಸರಕಾರ ರಚಿಸುವ ಓಟದಲ್ಲಿ ಬಿಜೆಪಿ ಇರುವುದಿಲ್ಲ ಎಂದು ಈ ರೀತಿ ಒಪ್ಪಿಕೊಂಡಿರುವುದು ಸಹಜವಾಗಿ ಆರೆಸ್ಸೆಸ್ ವಿಷವೃಕ್ಷದ ಹಲವಾರು ಟೊಂಗೆಗಳು ಮತ್ತು ಎನ್ಡಿಎ ಮಿತ್ರರಿಗೆ ಆಘಾತ ಉಂಟು ಮಾಡಿದೆ.
ಈ ಬ್ಲಾಗಿನ ಇನ್ನೊಂದು, ಅಷ್ಟೇನೂ ಮರೆಮಾಚದ ಸಂದೇಶವೆಂದರೆ, ತಾನಲ್ಲದಿದ್ದರೆ, ಬಿಜೆಪಿಯಿಂದ ಬೇರಾರನ್ನೂ ಪ್ರಧಾನ ಮಂತ್ರಿ ಅಭ್ಯಥರ್ಿಯೆಂದು ಪ್ರದಶರ್ಿಸುವಂತಿಲ್ಲ. ಈ ಹುದ್ದೆಗೆ ಬಿಜೆಪಿಯೊಳಗೆ ಒಂದು ಗಂಭೀರ ಸ್ಪಧರ್ೆಯಿದೆ ಎಂಬುದು ಎಲ್ಲರಿಗೂ ತಿಳಿದಿರುವ ಸಂಗತಿ. ಗುಜರಾತದ ಬಿಜೆಪಿ ಮುಖ್ಯಮಂತ್ರಿ, ಬಿಜೆಪಿ ಅಧ್ಯಕ್ಷ, ಸಂಸತ್ತಿನ ಎರಡೂ ಸದನಗಳ ಪ್ರತಿಪಕ್ಷ ಮುಖಂಡರು ಮತ್ತು ಸ್ವತಃ ಅಡ್ವಾಣಿ ಈ ವಿಷಯದಲ್ಲಿ ತಮ್ಮ ಆಶಯಗಳನ್ನು ಘೋಷಿಸಿರುವವರು.
ಬಿಜೆಪಿ ಎಂಬುದು ಆರೆಸ್ಸೆಸ್ನ ರಾಜಕೀಯ ಅಂಗವಾಗಿರುವುದರಿಂದಾಗಿ ಮತ್ತು ಆರೆಸ್ಸೆಸ್ ಬಿಜೆಪಿ ಅಧ್ಯಕ್ಷರಿಗೆ ಎರಡನೇ ಕಾಯರ್ಾವಧಿ ಕೊಟ್ಟಿರುವುದರಿಂದ ಆತ ಪ್ರಧಾನಿ ಅಭ್ಯಥರ್ಿಯಾಗುವ ಸಾಧ್ಯತೆ ಬಹುಪಟ್ಟಾಗಿದೆ ಎಂಬ ಆತಂಕ ಶ್ರೀಯುತ ಅಡ್ವಾಣಿಯವರಿಗೆ. ಹಿಂದೊಂದು ಸಂದರ್ಭದಲ್ಲಿ ಹಗರಣ ಪೀಡಿತ ಯುಪಿಎ ಸರಕಾರವನ್ನು ತರಾಟೆಗೆ ತಗೊಳ್ಳುವಲ್ಲಿ ವಿಫಲರಾಗಿದ್ದಾರೆಂದು ಬಿಜೆಪಿ ಅಧ್ಯಕ್ಷರ ಮೇಲೆ ಪ್ರಹಾರ ಮಾಡಿದ್ದರು. ಅದೊಂದು ಆಶ್ಚರ್ಯವೇ, ಏಕೆಂದರೆ ಲೋಕಸಭೆಯಲ್ಲಿ ಮುಂದಿನ ಆಸನದಲ್ಲಿ ಕೂರುವವರು ಶ್ರೀಯುತ ಅಡ್ವಾಣಿಯವರೇ. ಎನ್ಡಿಎಯಲ್ಲಿರುವ ಬಿಜೆಪಿ ಮಿತ್ರರು ಗುಜರಾತ ಮುಖ್ಯಮಂತ್ರಿಯನ್ನು ಪ್ರಧಾನಮಂತ್ರಿ ಅಭ್ಯಥರ್ಿಯಾಗಿ ಪ್ರದಶರ್ಿಸುವುದಕ್ಕೆ ತಮ್ಮ ಅಸಮಾಧಾನವನ್ನು ಬಹಿರಂಗವಾಗಿಯೇ ವ್ಯಕ್ತಪಡಿಸಿದ್ದಾರೆ. ಬಿಹಾರದ ಮುಖ್ಯಮಂತ್ರಿಗಳು ಇದನ್ನು ನೇರವಾಗಿ ನಿಸ್ಸಂದಿಗ್ಧವಾಗಿಯೇ ಹೇಳಿದ್ದಾರೆ.
ಈ ಬಾರಿ ವಾಸ್ತವಕ್ಕೆ ಹತ್ತಿರ
ಶಿವಸೇನೆಯ ಬಾಳ ಠಕ್ರೆ ಅವರ ಪಕ್ಷದ ಮುಖವಾಣಿಯ ಸಂಪಾದಕೀಯದಲ್ಲಿ ಅಡ್ವಾಣಿಯವರ ಬ್ಲಾಗನ್ನು ಯುದ್ಧ ಆರಂಭವಾಗುವ ಮೊದಲೇ ಅದರ ಫಲಿತಾಂಶದ ಬಗ್ಗೆ ಖಚಿತವಿಲ್ಲೆಂದು ಹೇಳಿ ಇಡೀ ಸೇನೆಯನ್ನು ನಿರುತ್ಸಾಹಗೊಳಿಸುವ ಒಬ್ಬ ಸೇನಾಪತಿ ಯೊಂದಿಗೆ ಹೋಲಿಸಿದ್ದಾರೆ. ಸ್ಥೈರ್ಯ ಮತ್ತು ಶಕ್ತಿಯ ಒಂದು ಗುಟುಕು ಬೇಕಾದರೆ ಬಂದು ತನ್ನನ್ನು ಭೇಟಿಯಾಗಿ ಎಂದು ಅವರು ಅಡ್ವಾಣಿಯವರನ್ನು ಆಹ್ವಾನಿಸಿದ್ದಾರೆ. ಜೆಡಿ(ಯು) ಮತ್ತು ಅಕಾಲಿದಳದಂತಹ ಇತರ ಕೆಲವು ಎನ್ಡಿಎ ಮಿತ್ರರು ಅಡ್ವಾಣಿಯವರ ಈ ನಿಧರ್ಾರಣೆಗೂ ತಮಗೂ ಸಂಬಂಧವಿಲ್ಲ ಎಂದಿದ್ದಾರೆ. ಆದರೂ ತಮಾಷೆಯೆಂದರೆ, ಈ ನಿಧರ್ಾರಣೆ ಬೇರೆ ಯಾವುದೇ ಅಂದಾಜಿಗಿಂತ ವಾಸ್ತವಕ್ಕೆ ಅತ್ಯಂತ ಹತ್ತಿರವಾಗಿದೆ.
ವಿಚಿತ್ರವೆಂದರೆ, ಅಡ್ವಾಣಿ 2014ರ ಸಾರ್ವತ್ರಿಕ ಚುನಾವಣೆಗಳ ನಂತರ ಯಾವುದೇ ಮೂರನೇ ರಂಗದ ಸರಕಾರದ ಸಾಧ್ಯತೆಯನ್ನು ಇಲ್ಲಗಳೆದಿದ್ದಾರೆ. ಬಹುಶಃ ಅವರು ಮುಂದಿನ ಸರಕಾರದ ನೇತೃತ್ವವನ್ನು ಒಬ್ಬ ಯುಪಿಎ ಮಿತ್ರ ಪಕ್ಷದವರು ವಹಿಸುವ ಸಾಧ್ಯತೆಯನ್ನು ಕಾಣುತ್ತಿರಬೇಕು. ಏನೇ ಆಗಲಿ, ಇಂತಹ ಎಲ್ಲ ಊಹಾಪೋಹಗಳನ್ನು ಹಗಲುಗನಸಿನ ಕ್ಷೇತ್ರಕ್ಕೆ ತಳ್ಳಬೇಕಾಗಿದೆ. ಗಾಳಿಪಟ ಹಾರ ಬಿಡುವ ಮಾನವ ಮೆದುಳಿನ ಸಾಮಥ್ರ್ಯ ಅನಂತ. ಶ್ರೀಯುತ ಅಡ್ವಾಣಿಯವರು ಇದನ್ನು ಮಾಡಬಾರದು ಎಂದು ನಿರಾಕರಿಸಲಾಗದು. ಸಾರ್ವತ್ರಿಕ ಚುನಾವಣೆಗಳ ನಂತರದ ಸಾಧ್ಯತೆಗಳ ಬಗ್ಗೆ ಆರೆಸ್ಸೆಸ್/ಬಿಜೆಪಿಯ ಕಲ್ಪನಾ ವಿಲಾಸಗಳ ಬಗ್ಗೆ ಈ ಅಂಕಣದಲ್ಲಿ ಹಿಂದೊಮ್ಮೆ ಟಿಪ್ಪಣಿ ಮಾಡಿದ್ದೆವು. ಸಾರ್ವತ್ರಿಕ ಚುನಾವಣೆಗಳು ನಡೆಯುವುದು ಇನ್ನೆರಡು ವರ್ಷಗಳ ನಂತರವಾದರೂ, ನಿಮಿಷ-ನಿಮಿಷಕ್ಕೂ ಬಿಜೆಪಿಯ ದೆಸೆ ಇಳಿಮುಖವಾಗುತ್ತಿದ್ದರೂ, ಅಣ್ಣಾ ತಂಡದಂತಹ ಆಂದೋಲನಗಳಿಂದ ಲಾಭ ಗಿಟ್ಟಿಸುವ ಅದರ ನಿರೀಕ್ಷೆಗಳು ಕರಗಿ ಹೋಗುತ್ತಿದ್ದರೂ, ತನ್ನ ಪ್ರಧಾನ ಮಂತ್ರಿ ಅಭ್ಯಥರ್ಿ ಯಾರಾಗಬೇಕು ಎಂದು ಭಯಂಕರ ಆಂತರಿಕ ಕಿತ್ತಾಟಗಳಲ್ಲಿ ಅದು ತೊಡಗಿದೆ!
ಬುದ್ಧಿಪೂರ್ವಕವಲ್ಲದ ತಪ್ಪೊಪ್ಪಿಗೆ!
ತನಗೆ ತಿಳಿಯದೆಯೇ, ಅಡ್ವಾಣಿಯವರು ದೇಶಕ್ಕೊಂದು ಪಯರ್ಾಯ ಧೋರಣೆಯ ದಿಕ್ಕು ಬೇಕಾಗಿದೆ ಎಂದು ಮನಸ್ಸಿಲ್ಲದ ಮನಸ್ಸಿನಿಂದ ಒಪ್ಪಿಕೊಳ್ಳುತ್ತಿರುವಂತೆ ಕಾಣುತ್ತಿದೆ. ಅಲ್ಲದೆ ದೇಶಕ್ಕೂ, ಜನತೆಗೂ ಪ್ರಯೋಜನಕಾರಿ ಯಾಗುವಂತೆ ಧೋರಣೆಯ ದಿಕ್ಪಥದಲ್ಲಿ ಇಂತಹ ಪಲ್ಲಟವನ್ನು ತರುವಲ್ಲಿ ನೇತೃತ್ವ ನೀಡುವುದು ಬಿಜೆಪಿಗಾಗಲೀ, ಕಾಂಗ್ರೆಸಿಗಾಗಲೀ ಸಾಧ್ಯವಿಲ್ಲ ಎಂದೂ ಅವರು ಒಪ್ಪಿಕೊಳ್ಳುತ್ತಿರುವಂತೆ ಕಾಣುತ್ತಿದೆ.
ದೇಶಕ್ಕಿಂದು ಅದರ ಆಥರ್ಿಕ ಮತ್ತು ಸಾಮಾಜಿಕ ಧೋರಣೆಗಳ ದಿಕ್ಕಿನಲ್ಲಿ ಒಂದು ತೀವ್ರ ಬದಲಾವಣೆಯ ಅಗತ್ಯವಿದೆ. ಭಾರತದ ಗಣತಂತ್ರೀಯ ಸಂವಿಧಾನದ ಅಡಿಯಲ್ಲಿ, ಕೋಮುವಾದವನ್ನು ದೃಢವಾಗಿ ತಿರಸ್ಕರಿಸುತ್ತಾ, ದೇಶದ ಶ್ರೀಮಂತ ವೈವಿಧ್ಯತೆಯನ್ನು ಯಾವುದೇ ರಾಜಿಯಿಲ್ಲದಂತೆ ಕಾಯ್ದುಕೊಂಡು ರಕ್ಷಿಸಿಕೊಳ್ಳುತ್ತಲೇ, ಆಥರ್ಿಕ ಧೋರಣೆಯನ್ನು ಬದಲಿಸುವ ಅಗತ್ಯವಿದೆ, ಏಕೆಂದರೆ ಈ ಧೋರಣೆ ಬಹುಪಾಲು ಜನಗಳ ಹಿತವನ್ನು ಬಲಿಗೊಟ್ಟು ಅಂತರ್ರಾಷ್ಟ್ರೀಯ ಹಣಕಾಸು ಬಂಡವಾಳ ಮತ್ತು ದೊಡ್ಡ ಭಾರತೀಯ ಬಂಡವಾಳಿಗರಿಗಷ್ಟೇ ಅನುಕೂಲ ಮಾಡಿಕೊಡುವಂತದ್ದು. ಆಥರ್ಿಕ ಧೋರಣೆಗಳ ವಿಷಯದಲ್ಲಿ ಕಾಂಗ್ರೆಸ್ ಮತ್ತು ಬಿಜೆಪಿ ಎರಡೂ ನವ-ಉದಾರವಾದಿ ಧೋರಣೆಗಳಿಗೆ ಬದ್ಧವಾಗಿವೆ. ಆದ್ದರಿಂದ ಸಾರ್ವತ್ರಿಕ ಚುನಾವಣೆಗಳನ್ನು ಅನುಸರಿಸಿ ಇಂತಹ ಧೋರಣೆಯ ಪಲ್ಲಟವನ್ನು ತರುವಲ್ಲಿ ನೇತೃತ್ವ ನೀಡಬಲ್ಲ ಒಂದು ಬದಲಾವಣೆಯನ್ನು ತರುವುದು ಭಾರತಕ್ಕೆ ಹಿತಕರ.
ನಮ್ಮ ಬಳಿ ಒಂದು ಚೈತನ್ಯಶೀಲ ಮತ್ತು ಸಮೃದ್ಧ ಭಾರತವನ್ನು ಕಟ್ಟಲು ಅಗತ್ಯವಾದ ಸಂಪನ್ಮೂಲಗಳೂ ಇವೆ, ಮಾನವ ಶಕ್ತಿಯೂ ಇದೆ. ಇದಕ್ಕಾಗಿ ನವ-ಉದಾರವಾದಿ ಆಥರ್ಿಕ ಧೋರಣೆಯ ದಿಕ್ಪಥವನ್ನು ಬದಲಿಸಬೇಕಾಗಿದೆ. ಸಿಪಿಐ(ಎಂ) ಮತ್ತು ಎಡಪಕ್ಷಗಳು ಜನಗಳನ್ನು ದೊಡ್ಡಪ್ರಮಾಣದಲ್ಲಿ ಅಣಿನೆರೆಸುತ್ತಾ ಸಾಧಿಸಬೇಕೆಂದಿರುವ ಗುರಿ ಇದೇ. ಒಂದು ಉತ್ತಮ ಭಾರತವನ್ನು ನಿಮರ್ಿಸಲು ಇದನ್ನು ಇನ್ನಷ್ಟು ಬಲಪಡಿಸಬೇಕಾಗಿದೆ.
0