ಜಾಸ್ತಿಯಾಯ್ತು ಪ್ರಜಾಪ್ರಭುತ್ವ……. !
ಈಗ ಒ.ಕೆ. … ಚಳಿಗಾಲದ ಅಧಿವೇಶನ ಇಲ್ಲ!
ಅಚ್ಛೇ ದಿನ್‌ಗಳ ಆರಂಭದಲ್ಲಿಯೇ 64 ವರ್ಷಗಳ ಹಿಂದೆ 1950ರಲ್ಲಿ ಯೋಜನಾಬದ್ಧ ಅಭಿವೃದ್ಧಿಗೆಂದು ರಚಿಸಿದ್ದ ರಾಷ್ಟ್ರೀಯ ಯೋಜನಾ ಅಯೋಗವನ್ನು ವಿಸರ್ಜಿಸಿ ರಚಿಸಿದ ‘ನೀತಿ ಆಯೋಗ’ದ ಹಾಲಿ ಸಿ.ಇ.ಒ. (ಅಧ್ಯಕ್ಷ ಅಲ್ಲ) ಅಮಿತಾಭ್ ಕಾಂತ್ ಅವರ ಡಿಸೆಂಬರ್ 8ರ ‘ಟೂ ಮಚ್ ಆಫ್ ಎ ಡೆಮಾಕ್ರಸಿ’ ( ಬಹಳ ಜಾಸ್ತಿಯಾಗಿದೆ ಪ್ರಜಾಪ್ರಭುತ್ವ?) ಟಿಪ್ಪಣಿ ಎಲ್ಲ ಪ್ರಜಾಪ್ರಭುತ್ವವಾದಿಗಳ ಗಮನ ಸೆಳೆದಿದೆ, ಸಹಜವಾಗಿ ವ್ಯಂಗ್ಯಚಿತ್ರಕಾರರದ್ದೂ.ಬಹಳ
ಡೆಮಾಕ್ರಸಿ ಹಟಾವೋ, ದೇಶ ಬಚಾವೋ!
(ಮಂಜುಲ್/ ಫೇಸ್‌ಬುಕ್)
***
ನೀತಿ ಆಯೋಗದ ಸಿ.ಇ.ಒ. ಅವರು “ಆತ್ಮನಿರ್ಭರ ಭಾರತದತ್ತ ದಾರಿ” ಎಂಬ ವಿಷಯದ ಮೇಲೆ ಮಾತಾಡುತ್ತ ಕೊವಿಡ್-19 ಮಹಾಸೋಂಕಿನ ಸನ್ನಿವೇಶ ಭಾರತಕ್ಕೆ ತಯಾರಿಕಾ ವಲಯದಲ್ಲಿ ನೇತೃತ್ವ ವಹಿಸಲು ಅವಕಾಶ ನೀಡಿದೆಯೇ ಎಂಬ ಪ್ರಶ್ನೆಗೆ ಉತ್ತರಿಸುತ್ತ “…ಕಠಿಣ ಸುಧಾರಣೆಗಳು ಭಾರತದ ಸಂದರ್ಭದಲ್ಲಿ ಬಹಳ ಕಷ್ಟದಾಯಕ, ನಮ್ಮಲ್ಲಿ ಬಹಳ ಜಾಸ್ತಿ ಪ್ರಜಾಪ್ರಭುತ್ವ .. .. ಮೊದಲ ಬಾರಿಗೆ ಸರಕಾರ ಹಲವು ವಲಯಗಳಲ್ಲಿ.. ..ಗಣಿಗಾರಿಕೆ, ಕಲ್ಲಿದ್ದಲು, ಶ್ರಮ ಮತ್ತು ಕೃಷಿ…ಮುಂತಾದವುಗಳಲ್ಲಿ ಗಟ್ಟಿ ತಲೆಯ ಸುಧಾರಣೆಗಳನ್ನು ಮಾಡುವ ಧೈರ್ಯ ಮತ್ತು ದೃಢ ನಿರ್ಧಾರ ತೋರಿದೆ……ಇವು ಬಹಳ, ಬಹಳ ಕಷ್ಟದ ಸುಧಾರಣೆಗಳು..ಇವನ್ನು ಮಾಡಲು ಭಾರೀ ಪ್ರಮಾಣದ ರಾಜಕೀಯ ಮತ್ತು ಆಡಳಿತ ಇಚ್ಛಾಶಕ್ತಿ ಬೇಕು” ಎಂದು ಹೇಳಿದರೆಂದು ವರದಿಯಾಯಿತು.
ಅದು ರೈತರ ಹೋರಾಟಕ್ಕೆ ಬೆಂಬಲವಾಗಿ ‘ಭಾರತ ಬಂದ್’ನಡೆದ ದಿನ.
ಕೊವಿಡ್-19 ಸೋಂಕು ರಭಸದಿಂದ ಹರಡುತ್ತಿದ್ದ ಸಮಯದಲ್ಲೇ (‘ಅವಕಾಶವನ್ನು ಬಳಸಿ’?) ಸುಗ್ರೀವಾಜ್ಞೆಗಳನ್ನು ಹೊರಡಿಸಿ, ನಂತರ ತರಾತುರಿಯಲ್ಲಿ ಸಂಸತ್ತಿನ ಅಧಿವೇಶನ ನಡೆಸಿ, ಸಂಸದೀಯ ಪ್ರಜಾಪ್ರಭುತ್ವದ ಸಾಮಾನ್ಯ ನಡಾವಳಿಗಳನ್ನು, ವಿಧಿವಿಧಾನಗಳನ್ನೆಲ್ಲ ‘ಧೈರ್ಯ ಮತ್ತು ದೃಢನಿರ್ಧರದಿಂದ’ ಬದಿಗೊತ್ತಿ ಅಂಗೀಕರಿಸಿದ ‘ಗಟ್ಟಿ ತಲೆಯ’ ಮೂರು ಕೃಷಿ ಕಾಯ್ದೆಗಳ ವಿರುದ್ಧ ದಿಲ್ಲಿ ವರೆಗೆ ಬಂದಿದ್ದ ರೈತರನ್ನು ದಿಲ್ಲಿ ಪ್ರವೇಶಿಸದಂತೆ ಮಾಡಿ, ಅವರ ಅಹವಾಲುಗಳನ್ನು ಕೇಳಲೂ ನಿರಾಕರಿಸಿದ “ಆಡಳಿತಾತ್ಮಕ ಇಚ್ಛಾಶಕ್ತಿಗೇ ಸವಾಲು ಹಾಕಿದ್ದ ಸಂದರ್ಭ.
ಆದ್ದರಿಂದ ಸಹಜವಾಗಿಯೇ “ಬಹಳ ಜಾಸ್ತಿ ಪ್ರಜಾಪ್ರಭುತ್ವ’ ಎಂಬ ಪದ ಎಲ್ಲರ ಗಮನ ಸೆಳೆಯಿತು, ಅದರಲ್ಲೂ ಹೆಚ್ಚು ಸೂಕ್ಷ್ಮಮತಿಗಳಾದ ವ್ಯಂಗ್ಯಚಿತ್ರಕಾರರದ್ದು.
(ಸತೀಶ ಆಚಾರ್ಯ, ಸಿಫಿ.ಕಾಂ)
ಛೇ! ಟೂ ಮಚ್ ಆಫ್ ಡೆಮಾಕ್ರಸಿ! ಅಧಿಕಾರ ಪೀಠದಲ್ಲಿ ‘ದೃಢ ನಿರ್ಧಾರ’ದಿಂದ ಕೂರಲೂ ಬಿಡದಂತಹ ಇಷ್ಟೊಂದು ಜಾಸ್ತಿ ಪ್ರಜಾಪ್ರಭುತ್ವ!
***
(ಪಂಜು ಗಂಗೊಳ್ಳಿ, ಬಿಸಿನೆಸ್ ಇಂಡಿಯ)
‘ರೈತರ ಒಳಿತಿ’ಗೆಂದೇ ಪ್ರಧಾನಿಗಳು ಕೊಡುತ್ತಿರುವ ಕೃಷಿ ಮಸೂದೆಗಳು ಬೇಡವೆನ್ನುವಷ್ಟು ಅಹಂಕಾರ ರೈತರ ಪ್ರತಿಭಟನೆಗೆ!
ಪ್ರಜಾಪ್ರಭುತ್ವವನ್ನು ಉಣಿಸಿದ್ದು ಜಾಸ್ತಿಯಾಗಿ ಬಿಟ್ಟಿದೆ ಎಂದು ಹೇಳಿರುವುದು, ಇದಕ್ಕಾಗಿಯೇ ಸಾರ್!
***
ಮೂರು ಕೃಷಿ ಕಾಯ್ದೆಗಳಿಗೆ ಮಾತ್ರವಲ್ಲ, ಪ್ರತಿದಿನ ಪೆಟ್ರೋಲ್-ಡೀಸೆಲ್ ಬೆಲೆಗಳನ್ನು ಏರಿಸಿದರೆಂದು ಅದಕ್ಕೂ ಪ್ರಶ್ನೆ,
ಹಾಗಾದರೆ ದೇಶ ನಡೆಸಲು ಹಣವಾದರೂ ಎಲ್ಲಿಂದ ಬರಬೇಕು?
ಆಗ ಮತ್ತೆ ಪ್ರಶ್ನೆ, ಹೊಸ ಸಂಸತ್ ಭವನಕ್ಕೆ ಹಣ ಎಲ್ಲಿಂದ ಬರುತ್ತದೆ?
ನೋಡಿ, ಇದನ್ನೇ ನಾನು ಟೂ ಮಚ್ ಆಫ್ ಡೆಮಾಕ್ರಸಿ ಎಂದದ್ದು!
(ಅಲೋಕ್ ನಿರಂತರ್/ ಫೇಸ್‌ಬುಕ್)
***
ಸುಮಾರು 1000 ಕೋಟಿ ರೂ.ಗಳ ಹೊಸ ಸಂಸದ್ ಭವನ ನಿರ್ಮಾಣಗೊಳ್ಳುವ ವೇಳೆಗೆ..
ಎಂತಹ ದಿನ ಬರಬಹುದು ನೋಡಿ! ಇಡೀ ಜಗತ್ತೇ ಭಾರತ
‘ಬಹಳ ಜಾಸ್ತಿ ಪ್ರಜಾಪ್ರಭುತ್ವದ ತಾಯಿ ನಾಡು’ ಎನ್ನುವ ದಿನ ಬರುತ್ತದೆ !
(ಮಂಜುಲ್ /ಫೇಸ್‌ಬುಕ್)
***
ಮಾನ್ಯ ಅಮಿತಾಭ್ ಕಾಂತ್ ಅವರು ನಂತರ ಒಂದು ಲೇಖನ ಬರೆದು ‘ನಾನು ಅರ್ಥದಲ್ಲಿ ಹೇಳಿದ್ದಲ್ಲ’ ಎಂದು ‘ಸ್ಪಷ್ಟೀಕರಣ’ ನೀಡಿದರು. ಇದನ್ನು ಜನಗಳು/ ವ್ಯಂಗ್ಯಚಿತ್ರಕಾರರು ಗಮನಿಸುವಷ್ಟರಲ್ಲಿ ಸಂಸತ್ತಿನ ಚಳಿಗಾಲದ ಅಧಿವೇಶನ ನಡೆಯುವುದಿಲ್ಲ ಎಂಬ ಸುದ್ದಿ ಬಂದಿದೆ- ಕಾರಣ ಕೊವಿಡ್ !
ದಿನಕ್ಕೆ ಸತತವಾಗಿ 50 ಸಾವಿರಕ್ಕಿಂತಲೂ ಹೆಚ್ಚು ಸೋಂಕುಗಳು ವರದಿಯಾಗುತ್ತಿದ್ದಾಗ ಅಧಿವೇಶನ ನಡೆಯಿತು, ತರಾತುರಿಯಿಂದ ಕಾಯ್ದೆಗಳು ಪಾಸಾದವು; ಈಗ ಮಹಾಸೋಂಕಿನ ಪ್ರಮಾಣ ದಿನಕ್ಕೆ 25 ಸಾವಿರಕ್ಕಿಂತ ಕೆಳಗೆ ಇಳಿದಿರುವಾಗ ಅಧಿವೇಶನವೇ ಬೇಡ ಎಂಬ ನಿರ್ಧಾರದ ಸುದ್ದಿಯ ನಡುವೆ ನೀತಿ ಆಯೋಗದದ ಸಿಇಒ ರವರ ‘ಸ್ಪಷ್ಟೀಕರಣ’ ಅರಣ್ಯರೋದನವಾಗಿದೆಯೇ ಅಥವ ದೇಶದ ಸರ್ವೋಚ್ಚ ಮುಖಂಡರಿAದ ಅವರ ಹೇಳಿಕೆಗೆ ಗಟ್ಟಿಯಾದ ಅನುಮೋದನೆ ಸಿಕ್ಕಿತೇ?
ಬಹಳ ಜಾಸ್ತಿ ಪ್ರಜಾಪ್ರಭುತ್ವ! ಈಗ ಒ.ಕೆ.
(ಅಲೋಕ್ ನಿರಂತರ್/ ಫೇಸ್‌ಬುಕ್)
***
ಇಷ್ಟೊಂದು ಜಾಸ್ತಿ ಪ್ರಜಾಪ್ರಭುತ್ವ !
(ಪಿ.ಮಹಮ್ಮದ್, ವಾರ್ತಾಭಾರತಿ)
***
ಈ ನಡುವೆ ಸುಪ್ರಿಂ ಕೋರ್ಟಿನಲ್ಲಿ ಚಳುವಳಿ ನಡೆಸುತ್ತಿರುವ ರೈತರನ್ನು ದಿಲ್ಲಿಯ ಗಡಿಗಳಿಂದ ಎಬ್ಬಿಸಬೇಕೆಂದು ಸಾರ್ವಜನಿಕ ಹಿತಾಸಕ್ತಿ ಅರ್ಜಿಯನ್ನು ಹಾಕಲಾಗಿದೆ.
“ಬಹಳ ಜಾಸ್ತಿ ಪ್ರಜಾಪ್ರಭುತ್ವ ಮತ್ತು ಬಹಳ ಹೆಚ್ಚು ಮೂಲಭೂತ ಹಕ್ಕುಗಳಿಂದ ಪರಿಹಾರಕ್ಕಾಗಿ!”
(ಆರ್.ಪ್ರಸಾದ್, ಇಕನಾಮಿಕ್ ಟೈಮ್ಸ್)