ಸಮಗ್ರ, ಸಮೃದ್ಧ ಮತ್ತು ಸೌಹಾರ್ದ ಕರ್ನಾಟಕಕ್ಕಾಗಿ ಸಿಐಟಿಯು 14ನೇ ರಾಜ್ಯ ಸಮ್ಮೇಳನದ ನಿರ್ಧಾರ
ಕೆ. ಮಹಾಂತೇಶ್ , ಸಿಐಟಿಯು ರಾಜ್ಯ ಕಾರ್ಯದರ್ಶಿ
ಸಮಗ್ರ, ಸಮೃದ್ಧ ಮತ್ತು ಸೌಹಾರ್ದಕ್ಕಾಗಿ ಎನ್ನುವ ಘೋಷಣೆಯೊಂದಿಗೆ ಸಿಐಟಿಯುನ 14ನೇ ಸಮ್ಮೇಳನವು ನವೆಂಬರ್ 8, 9 ಮತ್ತು 10 ರಂದು ಮೂರು ದಿನಗಳ ಕಾಲ ಯಶಸ್ವಿಯಾಗಿ ಜರುಗಿತು. ನವೆಂಬರ್ 8ರಂದು ತುಮಕೂರು ನಗರದಲ್ಲಿ ಐದು ಸಾವಿರಕ್ಕೂ ಹೆಚ್ಚು ಕಾರ್ಮಿಕರ ಬೃಹತ್ ರ‍್ಯಾಲಿ ಹಾಗೂ ಬಹಿರಂಗ ಸಭೆಯನ್ನು ಆಯೋಜಿಸುವ ಮೂಲಕ ಸಮ್ಮೇಳನಕ್ಕೆ ಚಾಲನೆ ನೀಡಲಾಯಿತು.
ನಗರದ ಟೌನ್ ಹಾಲ್ ವೃತ್ತದಿಂದ 14 ಕೆಂಪು ಸಮವಸ್ತçಧಾರಿ ಸ್ವಯಂ ಸೇವಕರು ಕೆಂಬಾವುಟಗಳನ್ನು ಹಿಡಿದು ಶಿಸ್ತುಬದ್ದ ಮೆರವಣಿಗೆ ಆರಂಭಿಸಿದರು. ಅವರ ಹಿಂಭಾಗ ಸಿಐಟಿಯು ರಾಜ್ಯ ಪದಾಧಿಕಾರಿಗಳು ಬಳಿಕಾ ಅಂಗನವಾಡಿ, ಅಕ್ಷರ ದಾಸೋಹ, ಆಶಾ ಹಾಗು ಘನಕೈಗಾರಿಕೆಗಳು ಮತ್ತು ಪಂಚಾಯತ್ ನೌಕರರು, ಕಟ್ಟಡ ಕಾರ್ಮಿಕರು, ಸಾರಿಗೆ ವಲಯವಾದ ಆಟೋ, ರಸ್ತೆ ಸಾರಿಗೆ, ಖಾಸಗಿ ಬಸ್ ಚಾಲಕರು, ಹಮಾಲಿ, ಬೀಡಿ, ಪೌರ ಕಾರ್ಮಿಕರು, ಬೀದಿಬದಿ ವ್ಯಾಪಾರಿಗಳು, ಮನೆಗೆಲಸಗಾರರು, ಟೈಲರ್‌ಗಳು, ಹೀಗೆ ತುಮಕೂರಿನ 10 ತಾಲೂಕುಗಳು ಹಾಗೂ ಅದರ ಸುತ್ತಮುತ್ತಲಿನ ಜಿಲ್ಲೆಗಳಿಂದ ಆಗಮಿಸಿದ್ದ ಕಾರ್ಮಿಕರು ಅವರೊಂದಿಗೆ ರೈತ, ಕೂಲಿಕಾರ, ವಿದ್ಯಾರ್ಥಿ ಯುವ ಜನ ಮಹಿಳಾ ಕಾರ್ಯಕರ್ತರು ಪ್ರಮುಖ ಬೀದಿಗಳಲ್ಲಿ ಘೋಷಣೆಗಳನ್ನು ಕೂಗುತ್ತಾ ಅಮಾನಿಕೆರೆಯಲ್ಲಿ ನಿರ್ಮಿಸಲಾದ ಗಾಜಿನ ಮನೆವರೆಗೂ ಮೆರವಣಿಗೆ ನಡೆಸಿದರು.
ನನ್ನೊಳಗೊಬ್ಬ ಭಗತ್ ಸಿಂಗ್ ನಾಟಕ ಪ್ರದರ್ಶನ :
ಮೆರವಣಿಗೆ ಗಾಜಿನ ಮನೆ ಪ್ರವೇಶಿಸುತ್ತಿದ್ದಂತೆ ಬೆಂಗಳೂರಿನ ಕ್ಯಾಂಪಸ್ ಥೆಯೇಟರ್ ತಂಡದ ಯುವಜನರು ಜಲಿಯನ್ ವಾಲಬಾಗ್ ಹತ್ಯಾಕಾಂಡ’ದ ನೆನಪಿಗಾಗಿ ತಯಾರಿಸಿರುವ ಮತ್ತು ಈಗಾಗಲೇ ರಾಜ್ಯಾದ್ಯಂತ ಸಾಕಷ್ಟು ಯಶಸ್ವಿ ಪ್ರದರ್ಶನ ಕಂಡಿರುವ ‘ನನ್ನೊಳಗೊಬ್ಬ ಭಗತ್‌ಸಿಂಗ್’ ಕಿರು ನಾಟಕವನ್ನು ಬಹಿರಂಗ ಸಭೆಯ ವೇದಿಕೆಯಲ್ಲಿ ಪ್ರದರ್ಶಿಸಿ ಸೇರಿದ್ದ ಸಾವಿರಾರು ಕಾರ್ಮಿಕರಲ್ಲಿ ಸ್ಪೂರ್ತಿ ಹಾಗೂ ಜಾಗೃತಿ ಮೂಡಿಸಿದರು.
ಇದಾದ ಬಳಿಕಾ ಸ್ವಾಗತ ಸಮಿತಿ ಪ್ರಧಾನ ಕಾರ್ಯದರ್ಶಿ ಬಿ. ಉಮೇಶ್ ಅಖಿಲ ಭಾರತ ಮುಖಂಡರನ್ನು ಹಾಗೂ ರಾಜ್ಯ ಪದಾಧಿಕಾರಿಗಳು ಹಾಗೂ ಇತರೆ ಗಣ್ಯರನ್ನು ವೇದಿಕೆಗೆ ಆಹ್ವಾನಿಸಿ ಬಹಿರಂಗ ಅಧಿವೇಶನಕ್ಕೆ ಚಾಲನೆ ನೀಡಿದರು. ಸಮ್ಮೇಳನದ ಬಹಿರಂಗ ಸಭೆಯ ವೇದಿಕೆಗೆ ತುಮಕೂರು ಜಿಲ್ಲೆಯಲ್ಲಿ ಕಾರ್ಮಿಕ ಚಳವಳಿಯನ್ನು ಕಟ್ಟಲು ಶ್ರಮಿಸಿದ ಮತ್ತು ಇತ್ತೀಚಿಗಷ್ಟೇ ನಮ್ಮನ್ನು ಆಗಲಿದ ನೌಷಾದ್ ಸೆಹಗನ್ ಮತ್ತು ವಿ.ಕೋದಂಡರಾಮು ವೇದಿಕೆ ಎಂದು ಹೆಸರಿಡಲಾಗಿತ್ತು.
ಆರ್ಥಿಕತೆ ಕುಸಿತದಿಂದ ದುಡಿಯುವ ವರ್ಗ ತತ್ತರ -ತಪನ್ ಸೇನ್ ಆತಂಕ ಸಮ್ಮೇಳನದ ಬಹಿರಂಗ ಅಧಿವೇಶನವನ್ನು ಉದ್ಘಾಟಿಸಿ ಮಾತನಾಡಿದ ಸಿಐಟಿಯು ರಾಷ್ಟ್ರೀಯ ಪ್ರಧಾನ ಕಾರ್ಯದರ್ಶಿ ಹಾಗೂ ಮಾಜಿ ರಾಜ್ಯಸಭಾ ಸದಸ್ಯರ ಆದ ತಪನ್ ಸೇನ್ ದೇಶದಲ್ಲಿ ಆರ್ಥಿಕ ಕುಸಿತದಿಂದ ಉದ್ದಿಮೆಗಳು, ಕೈಗಾರಿಕೆಗಳು ಬಾಗಿಲು ಮುಚ್ಚಿದ್ದು ದುಡಿಯುವ ವರ್ಗ ತತ್ತರಿಸಿ ಹೋಗಿದೆ. ಸ್ಕೀಂ ನೌಕರರು, ಸಂಘಟಿತ ಮತ್ತು ಅಸಂಘಟಿತ ನೌಕರರು ಇನ್ನಿಲ್ಲದ ಸಂಕಷ್ಟ ಅನುಭವಿಸುವಂತಾಗಿದೆ ಎಂದು ಆದ ಆತಂಕ ವ್ಯಕ್ತಪಡಿಸಿದರು.
ಕೇಂದ್ರ ಸರ್ಕಾರ ದೇಶವನ್ನು ಮಾರಾಟ ಮಾಡಲು ಹೊರಟಿದೆ. ಬಂಡವಾಳಶಾಹಿಗಳು ಕಿರುಪಾಲುದಾರರಾಗುತ್ತಿದ್ದಾರೆ. ಕೈಗಾರಿಕೆಗಳು ಮುಚ್ಚುತ್ತಿದ್ದು ಕಾರ್ಮಿಕರು ಬೀದಿಪಾಲಾಗುತ್ತಿದ್ದಾರೆ ಕೇಂದ್ರದಲ್ಲಿ ಪ್ರಧಾನಿ ನರೇಂದ್ರ ಮೋದಿ ನೇತೃತ್ವದ ಸರ್ಕಾರ ಕಾರ್ಮಿಕ ಕಾನೂನುಗಳನ್ನು ತಿದ್ದುಪಡಿ ಮಾಡಲು ಹೊರಟಿದೆ. ಕಾನೂನುಗಳನ್ನು ಸಂಹಿತೆಗಳನ್ನಾಗಿ ಮಾಡುತ್ತ ಕಾರ್ಮಿಕರ ಹಕ್ಕುಗಳನ್ನು ಕಸಿದುಕೊಳ್ಳುವ ಪ್ರಯತ್ನ ಮಾಡುತ್ತಿದೆ.
ಬಂಡವಾಳ ಶಕ್ತಿಗಳು ಮತ್ತು ರಾಜಕೀಯ ಪಕ್ಷಗಳು ಒಂದಾಗುತ್ತಿವೆ. ಸರ್ಕಾರದ ಲೋಪದೋಷಗಳನ್ನು ಪ್ರಶ್ನಿಸುವವರನ್ನು ಭಯೋತ್ಪಾದಕ ರಂತೆ ಬಿಂಬಿಸಲಾಗುತ್ತಿದೆ. ಕಾನೂನುಬಾಹಿರ ಚಟುವಟಿಕೆಗಳ ನಿಯಂತ್ರಣ ಕಾಯ್ದೆಯಡಿ ಬಂಧಿಸಿ ಜೈಲಿಗೆ ಕಳಿಸುವ ಕೆಲಸ ವ್ಯವಸ್ಥಿತವಾಗಿ ನಡೆಯುತ್ತಿದೆ. ಒಕ್ಕೂಟ ವ್ಯವಸ್ಥೆಯನ್ನು ಯುನಿಯನ್ ಟೆರಿಟೋರಿಗಳನ್ನಾಗಿ ಮಾಡುತ್ತಿದೆ. ಇವರ ವಿರುದ್ಧ ಸಮರಧೀರ ಹೋರಾಟ ನಡೆಸಲು ಎಲ್ಲಾ ವರ್ಗದ ಕಾರ್ಮಿಕರು ಒಂದಾಗಬೇಕೆಂದರು. ಆರ್.ಎಸ್‌ಎಸ್ ಮತ್ತು ಬಿಜೆಪಿ ಸಮಾಜವನ್ನು ಒಡೆಯುವ ಕೆಲಸ ಮಾಡುತ್ತಿದೆ. ದೇಶಭಕ್ತಿ ಹೆಸರಿನಲ್ಲಿ ದೇಶದ ಸಂಪತ್ತು ಲೂಟಿ ಮಾಡಲು ಬಂಡವಾಳಗಾರರಿಗೆ ಅವಕಾಶ ಕಲ್ಪಿಸಲಾಗಿದೆ. ದೇಶಭಕ್ತರು ಮಾತ್ರ ಮೌನವಹಿಸಿದ್ದಾರೆ. ದುಡಿಯುವ ಜನರ ಪ್ರಜಾಸತ್ತಾತ್ಮಕ ಹಕ್ಕುಗಳನ್ನು ಕಿತ್ತುಕೊಳ್ಳುತ್ತಿರುವ ಶಕ್ತಿಗಳ ವಿರುದ್ಧ ಐಕ್ಯ ಹೋರಾ ಮಾಡಬೇಕು.
ಇಂತಹ ಹೋರಾಟಗಳಿಂದಲೇ ಕೋಮುವಾದಿ ಶಕ್ತಿಗಳನ್ನು ಹತ್ತಿಕ್ಕಲು ಸಾಧ್ಯ ಎಂದರು. ಮುಖ್ಯ ಅತಿಥಿಗಾಳಾಗಿದ್ದ ಸಿಐಟಿಯು ರಾಷ್ಟ್ರೀಯ ಅಧ್ಯಕ್ಷೆ ಡಾ.ಕೆ.ಹೇಮಲತಾ ಮಾತನಾಡಿ, ಮಹಿಳೆಯರಿಗೆ ಸಮಾನ ವೇತನ ಸಿಗುತ್ತಿಲ್ಲ. ಹಲವು ಹೋರಾಟ ಮಾಡಿದರೂ ಮಹಿಳೆಯರು ಇನ್ನೂ ಸಮಸ್ಯೆಗಳನ್ನು ಎದುರಿಸುತ್ತಿದ್ದಾರೆ. ಸ್ಕೀಂ ನೌಕರರಿಗೆ ಕೆಲವೊಂದು ಸೌಲಭ್ಯ ಸಿಗುತ್ತದೆಯಾದರೂ ಬಿಸಿಯೂಟ ಮಹಿಳಾ ಕಾರ್ಮಿಕರಿಗೆ ತಿಂಗಳ ರಜೆ, ಹೆರಿಗೆ ರಜೆ ಸೇರಿದಂತೆ ಯಾವುದೇ ರಜೆಗಳು ಸಿಗುತ್ತಿಲ್ಲ. ಇದರ ವಿರುದ್ಧ ಬೃಹತ್ ಹೋರಾಟ ರೂಪಿಸಲಾಗುವುದು ಎಂದು ಎಚ್ಚರಿಕೆ ನೀಡಿದರು. ಬಿಜೆಪಿ ಪ್ರಭುತ್ವ ಮಹಿಳಾ ಹಕ್ಕುಗಳನ್ನು ದಮನ ಮಾಡುವ ಕಾರ್ಯದಲ್ಲಿ ನಿರತವಾಗಿದೆ.
ಬಿಸಿಯೂಟ ತಯಾರಿಕೆಗೆ ಬೃಹತ್ ಎನ್.ಜಿ.ಒ ಗಳಿಗೆ ವಹಿಸುವ ಕೆಲಸ ನಡೆಯುತ್ತಿದೆ. ಬಿಜೆಪಿ ನಡೆಸುತ್ತಿರುವ ಜನವಿರೋಧಿ, ಮಹಿಳಾ ವಿರೋಧಿ ಮತ್ತು ರೈತ ವಿರೋಧಿ ನೀತಿಗಳನ್ನು ಪ್ರತಿಯೊಬ್ಬ ಪ್ರಜೆಗೂ ತಿಳಿಸಬೇಕು. ಮನವರಿಕೆ ಮಾಡಿ ಕೇಂದ್ರದ ದಮನಕಾರಿ ನೀತಿಗಳು ವಿರುದ್ದ ಸಂಘಟಿತ ಹೋರಾಟ ರೂಪಿಸಬೇಕು ಎಂದು ಕರೆ ನೀಡಿದರು. ಸಿಐಟಿಯು ರಾಜ್ಯ ಪ್ರಧಾನಕಾರ್ಯದರ್ಶಿ ಮೀನಾಕ್ಷಿ ಸುಂದರA ಮಾತನಾಡಿ, ಕೇಂದ್ರದ ನೀತಿಗಳಿಂದ ರೈತರು ಬೀದಿಗೆ ಬಿದ್ದಿದ್ದಾರೆ. ಗ್ರಾಮೀಣ ಜನತೆ ನಗರಗಳತ್ತ ವಲಸೆ ಬರುತ್ತಿದೆ. ಎಲ್ಲರಿಗೂ ಉದ್ಯೋಗದ ಹಸಿವು ಇದೆ. ದುಡಿಯುವರಿಗೆ ಉದ್ಯೋಗ ಇಲ್ಲವಾಗಿವೆ.
ಉಳ್ಳವರಿಗೆ ಶಿಕ್ಷಣ ಮತ್ತು ಆರೋಗ್ಯ ಎಂಬತಹ ಸ್ಥಿತಿ ನಿರ್ಮಾಣವಾಗಿದೆ. ಬಡವರ್ಗ ಸಂಕಷ್ಟಗಳ ಸರಮಾಲೆ ಎದುರಿಸುತ್ತಿದೆ. ಕೇಂದ್ರದ ಜನವಿರೋಧಿ ಆರ್ಥಿಕ ನೀತಿಗಳನ್ನು ಹಿಮ್ಮೆಟ್ಟಿಸಲು ಮತ್ತು ಜನಪರ ನೀತಿಗಳನ್ನು ಜಾರಿಗೆ ತರಲು ಹೋರಾಟ ನಡೆಸುವುದು ಅನಿವಾರ್ಯವಾಗಿದೆ ಎಂದರು. ದೇಶದಲ್ಲಿ ಜನರ ಐಕ್ಯತೆ ಮುರಿಯುವ ಕೃತ್ಯಗಳು ನಡೆಯುತ್ತಿವೆ. ಇದಕ್ಕೆ ಕಾರ್ಮಿಕರು ಅವಕಾಶ ನೀಡಬಾರದು ಎಂದರು. ರಾಜ್ಯದಲ್ಲಿ ಬಿಜೆಪಿ ಸರ್ಕಾರ ಯಾವುದೇ ಕೆಲಸ ಮಾಡುತ್ತಿಲ್ಲ. ನೆರೆ ಬಂದು ಬದುಕು ಕೊಚ್ಚಿ ಹೋಗಿದ್ದರೂ ಪರಿಹಾರ ಕೊಡಲು ಸಾಧ್ಯವಾಗಿಲ್ಲ. ನೋವಿನಿಂದ ಬಳಲುತ್ತಿರುವ ಜನರ ನೆರವಿಗೆ ಸರ್ಕಾರ ಬರುತ್ತಿಲ್ಲ ಎಂದು ವಾಗ್ದಾಳಿ ನಡೆಸಿದರು. ಜನಪರ ಚಿಂತಕ ಕೆ.ದೊರೈರಾಜ್ ಮಾತನಾಡಿ, ದೇಶದ ಆರ್ಥಿಕ ಸ್ಥಿತಿ ಜನರ ಬದುಕನ್ನು ಬೀದಿಪಾಲು ಮಾಡಿದೆ. ಆರ್ಥಿಕ ಸಂಕಷ್ಟಗಳ ನಿವಾರಣೆಗೆ ಸರ್ಕಾರ ಯಾವುದೇ ಕ್ರಮಗಳನ್ನು ಕೈಗೊಳ್ಳುತ್ತಿಲ್ಲ. ಶೋಷಣೆ ಹೆಚ್ಚುತ್ತಿದೆ.
ಸಾಮಾಜಿಕ ಭದ್ರತೆಗೆ ಧಕ್ಕೆ ಬಂದಿದೆ. ಸರ್ಕಾರವೇ ಜನರ ಹಕ್ಕುಗಳನ್ನು ದಮನ ಮಾಡುತ್ತಿದೆ. ಜಾತಿ, ಧರ್ಮದ ಹೆಸರಿನಲ್ಲಿ ದಲಿತರು, ಮಹಿಳೆಯರು, ಕಾರ್ಮಿಕರು ಮತ್ತು ಅಲ್ಪಸಂಖ್ಯಾತರು ಭಯಭೀತರಾಗಿದ್ದಾರೆ. ಈ ಹಿನ್ನೆಲೆಯಲ್ಲಿ ಐಕ್ಯ ಹೋರಾಟಕ್ಕೆ ಸಿದ್ದರಾಗಬೇಕು. ಜಾತಿ ಧರ್ಮ ಮೀರಿದ ಶ್ರಮಿಕ ವರ್ಗದ ಐಕ್ಯತೆ ಮತ್ತು ಮಾನವೀಯ ಸಮಾಜ ನಿರ್ಮಾಣಕ್ಕಾಗಿ ಎಲ್ಲರೂ ದುಡಿಯುಬೇಕು ಎಂದರು. ಸಿಐಟಿಯು ಜಿಲ್ಲಾಧ್ಯಕ್ಷ ಸೈಯದ್ ಮುಜೀಬ್ ಮಾತನಾಡಿ, ಎಲ್ಲಾ ಕಾರ್ಮಿಕರು ಸಮ್ಮೇಳನದ ಯಶಸ್ವಿಗೆ ದುಡಿದಿದ್ದೀರಿ. ಇಂದು ಸಮ್ಮೇಳನ ಯಶಸ್ವಿಯಾಗಿದೆ. ಅದಕ್ಕೆ ಎಲ್ಲರಿಗೂ ಕೃತಜ್ಞತೆ ಸಲ್ಲಿಸುವುದಾಗಿ ಹೇಳಿದರು. ಸಿಐಟಿಯು ರಾಜ್ಯಾಧ್ಯಕ್ಷೆ ಎಸ್. ವರಲಕ್ಷ್ಮೀ ಮಾತನಾಡಿ, ಬಿಜೆಪಿ ಸರ್ಕಾರ ಜನರ ದಿಕ್ಕು ತಪ್ಪಿಸುತ್ತಿದೆ.
ಟಿಪ್ಪು ವಿಷಯವನ್ನು ಮುಂದಿಟ್ಟು ರಾಜಕೀಯ ಮಾಡುತ್ತಿದೆ. ಚುನಾವಣೆಗಳು ಬರುತ್ತಿದ್ದಂತೆಯೇ ಇಂತಹ ಕೆಲಸವನ್ನು ವ್ಯವಸ್ಥಿತವಾಗಿ ಮಾಡಲಾಗುತ್ತಿದೆ. ಇದರ ಬಗ್ಗೆ ಎಲ್ಲಾ ಕಾರ್ಮಿಕರು ಎಚ್ಚರದಿಂದ ಇರಬೇಕು ಎಂದು ತಿಳಿಸಿದರು. ವೇದಿಕೆಯಲ್ಲಿ ಸಿಐಟಿಯು ಮುಖಂಡರಾದ ವಿಜೆಕೆ ನಾಯರ್, ಕೆಎನ್. ಉಮೇಶ್, ಕೆ. ಮಹಾಂತೇಶ್ ಸೇರಿ ಇತರೆ ಪದಾಧಿಕಾರಿಗಳು ಹಾಗೂ ಸ್ವಾಗತ ಸಮಿತಿಯ ಗುಲ್ಜಾರ್ ಬಾನು, ಶಂಕರ್, ಬಿ. ಷಣ್ಮುಖಪ್ಪ, ಎ. ಲೋಕೇಶ್, ಹೆಚ್.ಡಿ. ನಾಗೇಶ್ ಮೊದಲಾದವರು ಉಪಸ್ಥಿತರಿದ್ದರು. ಸಿಐಟಿಯು ಖಜಾಂಚಿ ಜಿ.ಕಮಲ ವಂದಿಸಿದರು.
ಸಾರ್ವತ್ರಿಕ ಮುಷ್ಕರ ಯಶಸ್ವಿಗೆ ನಿರ್ಣಯ :
ಇದೇ ವೇಳೆ ಜನವರಿ 8 ರಾಷ್ಟ್ರವ್ಯಾಪಿ ಸಾರ್ವತ್ರಿಕ ಮುಷ್ಕರ ಯಶಸ್ವಿಗೊಳಿಸಲು ಕರೆ ನೀಡುವ ನಿರ್ಣಯವನ್ನು ಸಿಐಟಿಯು ಕಾರ್ಯದರ್ಶಿ ಹೆಚ್.ಎಸ್. ಸುನಂದ ಮಂಡಿಸಿದರು. ಮತ್ತೊರ್ವ ರಾಜ್ಯ ಕಾರ್ಯದರ್ಶಿ ಕೆ. ಮಹಾಂತೇಶ್ ಅನುಮೋದಿಸಿದರು. ಅಯೋಧ್ಯಾ ಪ್ರಕರಣ ಸುಪ್ರೀಂ ಕೋರ್ಟ್ ನೀಡಲಿರುವ ತೀರ್ಪಿನ ಹಿನ್ನೆಲೆಯಲ್ಲಿ ಶಾಂತಿ, ಸೌಹಾರ್ದತೆ ಮತ್ತು ದುಡಿಯುವ ಜನರ ಐಕ್ಯತೆ ಕಾಪಾಡಲು ಸಿಐಟಿಯು ಕರೆ ವರದಿಯನ್ನು ರಾಜ್ಯ ಉಪಾಧ್ಯಕ್ಷ ಕೆ. ಪ್ರಕಾಶ್ ಮಂಡಿಸಿದರು. ಜಿಲ್ಲಾ ಕಾರ್ಯದರ್ಶಿ ಎನ್.ಕೆ. ಸುಬ್ರಮಣ್ಯ ಅನುಮೋದಿಸಿದರು.
ಪ್ಯಾಸಿಸಂ ವಿರುದ್ದ ಕಾರ್ಮಿಕ ವರ್ಗ ಪುಸ್ತಕ ಬಿಡುಗಡೆ ಸಿಐಟಿಯು ರಾಷ್ಟ್ರೀಯ ಉಪಾಧ್ಯಕ್ಷರಾದ ಎ.ಕೆ. ಪದ್ಮನಾಭನ್ ಅವರು ಸಿಐಟಿಯು ತುಮಕೂರು ಜಿಲ್ಲಾ ಸಮಿತಿ ಪ್ರಕಟಿಸಿದ ಪ್ಯಾಸಿಸಂ ಹಾಗೂ ಕಾರ್ಮಿಕ ವರ್ಗ’ ಕುರಿತಾದ ಕಿರು ಪುಸ್ತಕವನ್ನು ಬಹಿರಂಗ ವೇದಿಕೆಯಲ್ಲಿ ಬಿಡುಗಡೆ ಮಾಡಿದರು. ಎರಡನೇ ಮಹಾಯುದ್ದದ ಸಮಯದಲ್ಲಿ ಇಡೀ ಜಗತ್ತಿಗೆ ಅಪಾಯವಗಿದ್ದ ಪ್ಯಾಸಿಸಂ ಇವ್ತು ಭಾರತದ ನೆಲದಲ್ಲಿ ವಿವಿಧ ಸ್ವರೂಪದಲ್ಲಿ ಪ್ರಕಟಗೊಳ್ಳುತ್ತಾ ಜನರ ಐಕ್ಯತೆಯನ್ನು ಸಮಾಜದ ಶಾಂತಿಯನ್ನು ಕದಡುತ್ತಿದೆ ಅಂತಿಮವಾಗಿ ಕಾರ್ಮಿಕ ವರ್ಗದ ಐಕ್ಯತೆಯನ್ನೇ ವಿಭಜನೆಗೊಳಿಸಲಿದೆ. ಈ ದಿಸೆಯಲ್ಲಿ ಕಾರ್ಮಿಕ ವರ್ಗದ ಚಳವಳಿಗೆ ಅತ್ಯಂತ ಅಪಾಯಕಾರಿಯಾದ ಈ ಪ್ಯಾಸಿಸಂ ಕುರಿತಾಗಿ ಜಾಗೃತಿ ಮೂಡಿಸಲು ಹಿರಿಯ ತಲೆಮಾರಿನ ಕಾರ್ಮಿಕ ಮುಖಂಡರಾದ ಸುನೀಲ್ ಮೈತ್ರಾ, ಬಿ. ಮಾಧವ ಮೊದಲಾದವರು ಬರೆದಿರುವ ಲೇಖನಗಳನ್ನು ಒಟ್ಟುಗೂಡಿಸಿ ಪ್ರಕಟಿಸಲಾದ ಈ ಕಿರು ಹೊತ್ತಿಗೆಯನ್ನು ಸಾಮಾನ್ಯ ಕಾರ್ಮಿಕರ ನಡುವೆ ಹೆಚ್ಚು ಪ್ರಚಾರ ಮಾಡಲು ಈ ಕಿರು ಹೊತ್ತಿಗೆಯನ್ನು ಮುದ್ರಿಸಿಲಾಗಿದೆ.
ಪ್ರತಿನಿಧಿ ಅಧಿವೇಶನಕ್ಕೆ ಚಾಲನೆ :
ಸಮ್ಮೇಳನದ ಧ್ವಜಾರೋಹಣವನ್ನು ನವೆಂಬರ್ 8ರಂದ ಸಂಜೆ 4 ಗಂಟೆಗೆ ಸುಭಾಷ್ ಕುಪ್ಪಿಕರ್ ಸಭಾಂಗಣದಲ್ಲಿ ಸಿಐಟಿಯು ರಾಜ್ಯಧ್ಯಕ್ಷರಾದ ಎಸ್. ವರಲಕ್ಷಿö್ಮ ಅವರು ನೆರವೇರಿಸುವ ಮೂಲಕ ಅಧಿಕೃತ ಚಾಲನೆ ನೀಡಿದರು. ನಂತರ ಬಿ. ಮಾಧವ, ಆರ್. ಶ್ರೀನಿವಾಸ್ ಅವರ ವೇದಿಕೆಯಲ್ಲಿ ಸಮ್ಮೇಳನದ ಪ್ರತಿನಿಧಿ ಅಧಿವೇಶನವನ್ನು ಸಿಐಟಿಯು ರಾಷ್ಟಿçÃಯ ಅಧ್ಯಕ್ಷರಾದ ಡಾ ಹೇಮಲತಾ ಉದ್ಘಾಟಿಸಿ ಮಾತನಾಡಿ ಸರ್ಕಾರ ವೇ ಮುಂದೆ ನಿಂತು ದೌರ್ಜನ್ಯವನ್ನು ಯಥೇಚ್ಛವಾಗಿ ಹೆಚ್ಚಿಸಿದ್ದರಿಂದ ಮಾಲಿಕರಿಗೂ ಇದರಿಂದ ಶೋಷಣೆಗೆ ಪರವಾನಗಿ ಕೊಟ್ಟಂತಾಗಿದೆ. ಆಳುವವರು ಯಾರೇ ಬಂದರೂ ಎಷ್ಟೋ ಹೋರಾಟಗಳನ್ನು ಮಾಡಿದರೂ ಕಾರ್ಮಿಕರ ಸೌಲಭ್ಯಗಳನ್ನು ನಿರ್ದಯವಾಗಿ ಕಿತ್ತುಕೊಳ್ಳಲಾಗುತ್ತಿದೆ. ಏಕೆಂದರೆ ಆಳುವವರ ನೀತಿ ಬದಲಾಗದಿರುವುದೇ ಕಾರಣ. ಅಸಂಘಟಿತ ಸಂಘಟಿತರೆಲ್ಲ ಸೇರಿ ಸಂಪತ್ತು ಹೆಚ್ಚಿಸುವವರು ಆದರೆ ಈ ಸಂಪತ್ತು ಸೃಚ್ಟಿಸುವವರನ್ನೇ ಶೋಷಿಸುವುದೇ ವ್ಯವಸ್ಥೆಯ ಮಾಮೂಲಿ ಕ್ರಿಯೆ ಎಂಬಂತಾಗಿದೆ. ವ
ಿದೇಶಗಳಲ್ಲೂ ಮಹಾಮುಷ್ಕರಗಳು ಮುಗಿಲು ಮುಟ್ಟಿವೆ. ಬಾಯಲ್ಲಿ ದೇಶ ಪ್ರೇಮ ರಾಷ್ಟೀಯತೆ ಹೇಳುವವರು ಈಗ ದೇಶದ ಅತ್ಯಮೂಲ್ಯ ರಂಗಗಳನ್ನು ಬಹು ರಾಷ್ಟ್ರೀಯ ಕಂಪನಿಗಳಿಗೆ ಮಾರಾಟ ಮಾಡುತ್ತಿವೆ. ದೇಶದಲ್ಲಿ ಹಿಂದೆAದೂ ಕಂಡರಿಯದಷ್ಟು ನಿರುದ್ಯೋಗ ಹೆಚ್ಚಿದೆ ಇರುವ ಉದ್ಯೋಗಗಳು ನಾಶವಾಗಿವೆ ಎಂದು ಆತಂಕ ವ್ಯಕ್ತಪಡಿಸಿದರು. ಜನವರಿ ಮುಷ್ಕರ ಯಶಶ್ವಿಗೊಳಿಸುವುದು ಈ ಕ್ಷಣದ ಅಗತ್ಯವೆಂದರು.
ಕೇಂದ್ರ ಕಾರ್ಮಿಕ ಸಂಘಟನೆಗಳಿAದ ಶುಭಕೋರಿಕೆ :
ಕೇಂದ್ರ ಕಾರ್ಮಿಕ ಸಂಘಗಳಾದ AITUC, HMS, AIUTUC, AICCTU, TUCC ಸಿಐಟಿಯು ಸಮ್ಮೇಳನದ ಮೊದಲ ದಿನ ಪ್ರತಿನಿಧಿ ಅಧಿವೇಶನದ ಉದ್ಘಾಟನಾ ಸಮಾರಂಭದಲ್ಲಿ ಉಪಸ್ಥಿತರಿದ್ದು ಸಮ್ಮೇಳನಕ್ಕೆ ಶುಭಕೋರಿದರು. ಮಾನವೀಯತೆ ಇಲ್ಲದ ಸರ್ಕಾರದ ಎದುರು ದಣಿವರಿಯದೇ ಐಕ್ಯತೆಯ ಹೋರಾಟ ಇಂದಿನ ಅಗತ್ಯವೆಂದರು. ಚರಿತ್ರೆಯಲ್ಲಿ ಕೇಳಿದ್ದ ಫ್ಯಾಸಿಸಮ್ ಈಗ ನಮ್ಮೆದುರೇ ತನ್ನ ಭಯಾನಕ ಕ್ರೂರ ಮುಖದೊಂದಿಗೆ ಬಂದು ನಿಂತಿದೆ. ದೇಶದ ಸಾರ್ವಭೌಮತೆಯನ್ನೇ ವಿದೇಶಿ ಪ್ರಬಲ ಶಕ್ತಿಗಳಿಗೆ ಒತ್ತೆ ಇಡುವ ಆದರೆ ಬಾಯಲ್ಲಿ ಮಾತ್ರ ಸ್ವದೇಶಿ ಎನ್ನುವ ಬಿಜೆಪಿ ಕೇಂದ್ರ ಸರ್ಕಾರವನ್ನು ಅದರ ಧೋರಣೆಗಳನ್ನು ಹಿಮ್ಮೆಟ್ಟಲು, ಕಾರ್ಮಿಕರ ಹಿತದೃಷ್ಟಿಯಿಂದ ಎಲ್ಲಾ ಕೇಂದ್ರ ಕಾರ್ಮಿಕ ಸಂಘಗಳೂ 2020 ಜನವರಿ 8 ರಂದು ಅಖಿಲ ಭಾರತ ಮುಷ್ಕರಕ್ಕೆ ಕರೆ ಕೊಟ್ಟಿವೆ.
ಇದು 1991 ರ ನಂತರದಲ್ಲಿ ನಡೆಯುವ 19 ನೇ ಜಂಟಿ ಮುಷ್ಕರವೆಂದು ಇತಿಹಾಸದಲ್ಲಿ ದಾಖಲಾಗಲಿದೆ. ಜಾಗೃತ ಕಾರ್ಮಿಕರ ಒಗ್ಗಟ್ಟಿನ ಪ್ರದರ್ಶನ ಮಾಡೋಣವೆಂದರು. ಎಐಟಿಯುಸಿ ರಾಜ್ಯ ಪ್ರಧಾನ ಕಾರ್ಯದರ್ಶಿ ಕಾ. ವಿಜಯ ಭಾಸ್ಕರ್, ಹೆಚ್.ಎಂ.ಎಸ್. ರಾಜ್ಯ ಪ್ರಧಾನ ಕಾರ್ಯದರ್ಶಿ ಕಾ. ನಾಗನಾಥ, ಯುಟಿಯುಸಿ ರಾಜ್ಯ ಅಧ್ಯಕ್ಷರಾದ ಕಾ. ಶಿವಶಂಕರ್, ಎಐಯುಟಿಯುಸಿ ರಾಜ್ಯ ಉಪಾಧ್ಯಕ್ಷ ಕೆ.ವಿ. ಭಟ್ ಹಾಗೂ ಎಐಸಿಸಿಟಿಯುನ ರಾಜ್ಯ ಅಧ್ಯಕ್ಷ ಕಾ.ಪುಟ್ಟೇಗೌಡ ಮಾತನಾಡಿದರು. ಸಿಐಟಿಯು ಪ್ರಧಾನ ಕಾರ್ಯದರ್ಶಿ ತಪನ್ ಸೇನ್, ಎ.ಕೆ. ಪದ್ಮನಾಭನ್ ಉಪಸ್ಥಿತರಿದ್ದರು.
ಪ್ರತಿನಿಧಿ ಕಲಾಪಗಳು :
ಅಗಲಿದ ಸಂಗಾತಿಗಳು ಹಾಗೂ ಗಣ್ಯರಿಗೆ ರಾಜ್ಯ ಉಪಾಧ್ಯಕ್ಷರಾದ ಕೆ. ಶಂಕರ್ ಶ್ರದ್ದಾಂಜಲಿ ನಿರ್ಣಯ ಸಲ್ಲಿಸುವ ಮೂಲಕ ಪ್ರತಿನಿಧಿಗಳ ಕಲಾಪಕ್ಕೆ ಚಾಲನೆ ನೀಡಲಾಯಿತು. ರಾಜ್ಯ ಅಧ್ಯಕ್ಷೆ ಎಸ್. ವರಲಕ್ಷ್ಮೀ ಹಾಗೂ ಉಪಾಧ್ಯಕ್ಷರನ್ನೊಳಗೊಂಡ ಅಧ್ಯಕ್ಷೀಯ ಮಂಡಳಿಯನ್ನು, ಕೆ. ಪ್ರಕಾಶ, ಮಾಲಿನಿ ಮೇಸ್ತಾ, ರಾಘವೇಂದ್ರ, ಬಾಲಕೃಷ್ಣ ಶೆಟ್ಟಿ ಸಂಚಾಲಕರುಗಳಾದ ಕ್ರಮವಾಗಿ ನಿರ್ಣಯ ಮಂಡಳಿ, ಪರಿಚಯಪತ್ರ ಮಂಡಳಿ, ಸಂಚಾಲಕತ್ವದ ದಾಖಲಾತಿ ಸಮಿತಿ, ಅನುವಾದ ಸಮಿತಿಗಳನ್ನು ಸಮ್ಮೇಳನ ಚುನಾಯಿಸಿತು.
ಪ್ರಧಾನ ಕಾರ್ಯದರ್ಶಿ ವರದಿ
ರಾಜ್ಯದ ಆರ್ಥಿಕ, ಸಾಮಾಜಿಕ, ರಾಜಕೀಯ ಹಾಗೂ ಕಾರ್ಮಿಕ ಪರಿಸ್ಥಿತಿ, ನಮ್ಮ ಮಧ್ಯಪ್ರವೇಶಗಳು ಸಂಘಟಿಸಿದ ಹೋರಾಟಗಳು ಮತ್ತು ನಮ್ಮ ಸಂಘಟನಾ ಪರಿಸ್ಥಿತಿ (ಪ್ರಧಾನ ಕಾರ್ಯದರ್ಶಿ ವರದಿ ವಿವರ ಪ್ರತೇಕವಾಗಿ ಮುಂದಿನವಾರ ಪ್ರಕಟಗೊಳ್ಳಲಿದೆ.) ಕುರಿತಾಗಿ ಪ್ರಧಾನ ಕಾರ್ಯದರ್ಶಿ ವರದಿಯನ್ನು ಮೀನಾಕ್ಷಿ ಸುಂದರಂ ಸಮ್ಮೇಳನದ ಮುಂದೆ ಚರ್ಚೆಗಾಗಿ ಮಂಡಿಸಿದರು. ಅಖಿಲ ಭಾರತ ಉಪಾಧ್ಯಕ್ಷರಾದ ಎ.ಕೆ. ಪದ್ಮನಾಭನ್ ವರದಿ ಮೇಲೆ ಪ್ರತಿನಿಧಿಗಳು ನಡೆಸಬೇಕಾದ ಚರ್ಚೆ ಕುರಿತು ಮಾರ್ಗದರ್ಶನ ನೀಡಿದರು. ಬಳಿಕಾ ಜಿಲ್ಲಾವಾರು ಗುಂಪು ಚರ್ಚೆಗಳನ್ನು ಮಾರನೆ ದಿನ ಬೆಳೆಗ್ಗೆ ರಾಜ್ಯ ಸಂಘಗಳವಾರು ಗುಂಪು ಚರ್ಚೆಗಳು ವರದಿ ಮೇಲೆ ನಡೆದವು. ಇದಾದ ಬಳಿಕಾ ಒಟ್ಟು 66 ಜನ ಪ್ರತಿನಿಧಿಗಳು ಸುಮಾರು 418 ನಿಮಿಷಗಳ (7 ಗಂಟೆಗಳು) ಕಾಲ ಪ್ರಧಾನ ಕಾರ್ಯದರ್ಶಿ ವರದಿ ಮೇಲೆ ಚರ್ಚೆ ನಡೆಸಿದರು. ಚರ್ಚೆಯ ಬಳಿಕಾ ಪದಾಧಿಕಾರಗಳ ಪರವಾಗಿ ಪ್ರಧಾನ ಕಾರ್ಯದರ್ಶಿ ಚರ್ಚೆಗೆ ಉತ್ತರಿಸಿದರು.
ಸೌಹರ್ದ ಬೆಂಬಲ :
ಸಿಐಟಿಯು ರಾಜ್ಯ ಸಮ್ಮೇಳನಕ್ಕೆ ಕರ್ನಾಟಕ ಪ್ರಾಂತ ರೈತ ಸಂಘದ ರಾಜ್ಯ ಅಧ್ಯಕ್ಷರಾದ ಜಿ.ಸಿ. ಬಯ್ಯಾರೆಡ್ಡಿ, ಕೃಷಿಕೂಲಿಕಾರರ ಸಂಘದ ರಾಜ್ಯ ಉಪಾಧ್ಯಕ್ಷರಾದ ಜಿ.ಎನ್. ನಾಗರಾಜ್, ಎಸ್.ಎಫ್.ಐ. ರಾಜ್ಯ ಅಧ್ಯಕ್ಷರಾದ ಅಂಬರೀಶ್, ವಿಮಾ ನೌಕರರ ಸಂಘದ ಮುಖಂಡರಾದ ನಾಗೇಶ್, ಅಖಿಲ ಕರ್ನಾಟಕ ರಾಜ್ಯ ಸರಕಾರಿ ನೌಕರರ ಒಕ್ಕೂಟದ ರಾಜ್ಯ ಕಾರ್ಯದರ್ಶಿ ರಂಗನಾಥ ಹವಲ್ದಾರ್ ಶುಭ ಕೋರಿ ಮಾತನಾಡಿದರು.
ಇದಲ್ಲದೆ ಸಮ್ಮೇಳನದ ಬಹಿರಂಗ ಅಧಿವೇಶನಲ್ಲಿ ಬಿಎಸ್‌ಎನ್‌ಎಲ್ ಎಂಪ್ಲಾಯೀಸ್ ಯೂನಿಯನ್ ವಲಯ ಕಾರ್ಯದರ್ಶಿ ಸಿ.ಕೆ. ಗುಂಡಣ್ಣ, ವಲಯ ಅಧ್ಯಕ್ಷರಾದ ಎಂ.ಸಿ. ಬಾಲಕೃಷ್ಣ, ಸಮುದಾಯ ರಾಜ್ಯ ಉಪಾಧ್ಯಕ್ಷ ಟಿ ಸುರೇಂದ್ರರಾವ್, ದಲಿತ ಹಕ್ಕುಗಳ ಸಮಿತಿ ಸಂಚಾಲಕ ಗೋಪಾಲಕೃಷ್ಣ, ಕೇಂದ್ರ ಸರಕಾರಿ ನೌಕರರ ಸಂಘದ ಮುಖಂಡರಾದ ಜೂಲಿಯಾನ್ ವಿನ್ಸಂಟ್ ಹಾಗೂ ಸೀತಾಲಕ್ಮೀ, ವಿಜ್ಞಾನ ಚಳವಳಿಯ ಡಾ ಅನಿಲ್, ಹಿರಿಯ ಸ್ವಾತಂತ್ರ್ಯ ಹೋರಾಟಗಾರ ಟಿ. ರೇವಣ್ಣ, ಹಿರಿಯ ಸಂಗಾತಿಗಳಾದ ದಾವಣಗೆರೆ ಕೆ.ಎಲ್ ಭಟ್, ನಾಗರಾಜರಾವ್, ಪರಿವರ್ತನ ನಾಟಕ ತಮಡದ ಪ್ರಸಾದ್, ಸೇರಿದಂತೆ ಹಲವಾರು ನಾಯಕರು ಪಲ್ಗೊಂಡು ಕಾರ್ಮಿಕ ಚಳವಳಿಗೆ ತಮ್ಮ ಸೌಹಾರ್ದತೆ ಸಾರಿದರು.