ಚೀನಾ: ಸೆಪ್ಟೆಂಬರ್ 16 ರಂದು ಮಧ್ಯ ಚೀನಾದ ಚಾಂಗ್ಶಾ ನಗರದ ಬಹುಮಹಡಿ ಕಟ್ಟಡದಲ್ಲಿ ಭಾರಿ ಬೆಂಕಿ ಕಾಣಿಸಿಕೊಂಡಿತ್ತು. 42 ಮಹಡಿಗಳ ಕಟ್ಟಡಕ್ಕೆ ಬೆಂಕಿ ಬಿದ್ದಿರುವ ವಿಧ್ವಂಸಕ ದೃಶ್ಯಗಳು ಮತ್ತು ಕಿಟಕಿಗಳಿಂದ ದಟ್ಟವಾದ ಗಾಢ ಹೊಗೆ ಹೊರಹೊಮ್ಮುತ್ತಿರುವ ದೃಶ್ಯಗಳನ್ನು ಇತ್ತೀಚೆಗೆ ಸಾಮಾಜಿಕ ಮಾಧ್ಯಮದಲ್ಲಿ ವ್ಯಾಪಕವಾಗಿ ವೈರಲ್ ಆಗಿದೆ.
ಸುದ್ದಿವಾಹಿನಿಗಳು ಬೆಂಕಿಯ ಬಗ್ಗೆ ಪ್ರಾಥಮಿಕ ಮಾಹಿತಿಯನ್ನು ವರದಿ ಮಾಡುತ್ತಿರುವಾಗ, ಬೆಂಕಿವೊತ್ತಿರುವ ಬಿಲ್ಡಿಂಗ್ ವೊಳಗೆ ಸಿಕ್ಕಿಬಿದ್ದ ಜನರು ಚಿತ್ರೀಕರಿಸಿದ ವೀಡಿಯೋಯೆಂದು ಹೇಳಿ ಪ್ರಸಾರ ಮಾಡಿದ್ದು, ಆ ವೀಡಿಯೋವನ್ನು ಅನೇಕರು ಟ್ವಿಟ್ಟರ್ನಲ್ಲಿ ಶೇರ್ ಮಾಡಿದ್ದಾರೆ. ಬೆಲರೂಸಿಯನ್ (Belarusian) ಮಾಧ್ಯಮವಾದ ನೆಕ್ಸ್ಟಾ ಹಂಚಿಕೊಂಡ ಈ ಅತ್ಯಂತ ಚಿಕ್ಕ ಕ್ಲಿಪ್‌ನಲ್ಲಿ, ನಿರ್ಜನ ರೂಂನಲ್ಲಿನ ಕಿಟಕಿಗಳ ಹೊರಗೆ ಬೆಂಕಿ ಅತ್ತಿರುವುದು ದೃಶ್ಯವನ್ನು ನಾವು ಕಾಣಬಹುದು.
AFWA, ಈ ವೀಡಿಯೋ ಬಗ್ಗೆ ಫ್ಯಾಕ್ಟ್ ಚೆಕ್ ಮಾಡಿದ್ದು, ಚಾಂಗ್ಶಾದಲ್ಲಿ ಇತ್ತೀಚಿನ ಬೆಂಕಿ ಘಟನೆಗೆ ಸಂಬಂಧಿಸಿದ ವಿಡಿಯೋ ಇದಲ್ಲವೆಂದು, ವೀಡಿಯೊ ಒಂದು ವರ್ಷಕ್ಕಿಂತ ಹಳೆಯದಾಗಿದೆ ಎಂದು ಕಂಡುಹಿಡಿದಿದೆ.
ಗೂಗಲ್ ಮತ್ತು ಯಾಂಡೆಕ್ಸ್‌ನಲ್ಲಿ ವೀಡಿಯೊದ ಕೀಫ್ರೇಮ್‌ಗಳ ರಿವರ್ಸ್ ಸರ್ಚ್ ಮಾಡಿದಾಗ ಈ ವೀಡಿಯೋ ಮಾರ್ಚ್ 2021 ರಲ್ಲಿಯೇ ಹಲವಾರು ಟ್ವಿಟರ್ ಮತ್ತು ಫೇಸ್‌ಬುಕ್ ಅಕೌಂಟ್ಹಳಲ್ಲಿ ಹಂಚಿಕೊಂಡಿರುವುದು ಕಂಡಿಬಂದಿದೆ. ಈ ಪೋಸ್ಟ್‌ಗಳ ಪ್ರಕಾರ, , ಉತ್ತರ ಚೀನಾದ ಹೆಬೈ ಪ್ರಾಂತ್ಯದ ರಾಜಧಾನಿಯಲ್ಲಿ 26 ಅಂತಸ್ತಿನ ಕಟ್ಟಡವೊಂದರಲ್ಲಿ ಸಂಭವಿಸಿದ ಬೆಂಕಿ ಅನಾಹುತದ ಸಂದರ್ಭದಲ್ಲಿ ವೀಡಿಯೊವನ್ನು ಸೆರೆಹಿಡಿಯಲಾಗಿದೆ.
ಫ್ರಂಟ್‌ಲೈನ್, ಚೀನಾದ ರಾಜ್ಯ-ಸಂಯೋಜಿತ ಮಾಧ್ಯಮ ಔಟ್‌ಲೆಟ್, ಮಾರ್ಚ್ 10, 2021 ರಂದು ಅದೇ ವೀಡಿಯೊವನ್ನು ಹಂಚಿಕೊಂಡಿದ್ದು, ಇದನ್ನು ಶಿಜಿಯಾಜುವಾಂಗ್‌ನಲ್ಲಿ ಸಂಭವಿಸಿದ ಬೆಂಕಿ ಅವಘಡ ಎಂದು ಹೇಳಾಗಿದೆ.
ಹೀಗಾಗಿ, ಚಾಂಗ್ಶಾ ಗಗನಚುಂಬಿ ಕಟ್ಟಡದ ಒಳಗಿನಿಂದ ವೀಡಿಯೊವನ್ನು ಸೆರೆಯಿಡಿದಿರುವುದಾಗಿ ಶೇರ್ ಆಗಿರುವ ವೀಡಿಯೊ ಒಂದು ವರ್ಷಕ್ಕಿಂತ ಹಳೆಯದಾಗಿದೆ ಮತ್ತು ಚಾಂಗ್ಶಾನಗರದ ಕಟ್ಟಡಕ್ಕು ಈ ವೀಡಿಯೋಗೂ ಯಾವುದೇ ಸಂಬಂಧವಿಲ್ಲ ಎಂಬುದು ಸ್ಪಷ್ಟವಾಗಿದೆ.
Horror view: Video from inside the building that is on fire in #Shijiazhuang, China. pic.twitter.com/uYVVEmX4Tn
— Insider Paper (@TheInsiderPaper) March 9, 2021