ಅಮೆರಿಕದಲ್ಲಿ ಕರಿಯನೊಬ್ಬ ಅಧ್ಯಕ್ಷನಾದಾಗ ಮತ್ತು ಲ್ಯಾಟಿನ್ ಅಮೇರಿಕದವನೊಬ್ಬ ಪೆÇೀಪ್ ಆದಾಗ ಕ್ಯೂಬಾದ ಜೊತೆ ಸಂಬಂಧ ಬೆಳೆಸಲು ಅಮೆರಿಕ ಮಾತುಕತೆ ನಡೆಸುತ್ತದೆ……
ಇದು ಫಿಡಲ್ ಕ್ಯಾಸ್ಟ್ರೊರವರ ಅದ್ಭುತ ಸಾಲುಗಳು ಇಂತಹ ಮುಂಗಾಣ್ಕೆ, ಚಳವಳಿ ಮತ್ತು ವೈಜ್ಞಾನಿಕ ಚಿಂತನೆಗಳನ್ನು ಅದ್ಭುತವಾಗಿ ಬೆಸೆದವರು ಕ್ಯಾಸ್ಟೊ ಮಾತ್ರ ಎನ್ನಬಹುದು. ಇಂತಹ ಅಪ್ರತಿಮ ಕ್ರಾಂತಿಕಾರಿ ನಾಯಕ ಹುಟ್ಟಿದ ದಿನವಿಂದು. ಅಗಸ್ಟ್ 13, 1926ರಂದು ಕ್ಯೂಬಾದ ಶ್ರಿಮಂತ ಕುಟುಂಬದಲ್ಲಿ ಜನಿಸಿದ ಇವರು ವಿಶ್ವವಿದ್ಯಾಲಯ ಶಿಕ್ಷಣ ಪಡೆದು ಅಮೆರಿಕದ ಕೈಗೊಂಬೆಯಾದ ಅಧ್ಯಕ್ಷ ಬಾಟಸ್ಟಾನ ಸರ್ವಾಧಿಕಾರದ ವಿರುದ್ಧ ರಾಜಕೀಯಕ್ಕೆ ಧುಮುಕಿದರು.
ಮಹಾದಂಡನಾಯಕ ಫಿಡೆಲ್ ರೂಝ್ ಕಾಸ್ಟ್ರೊ, ಕ್ಯೂಬಾ ಕ್ರಾಂತಿಯ ಮಹಾನ್ ನೇತಾರ, ಕಟ್ಟಾ ಅಂತಾರಾಷ್ಟ್ರೀಯವಾದಿ ಮತ್ತು ಸಮಾಜವಾದದ ಶಿಲ್ಪಿ ಎಂದೇ ಹೆಸರಾದವರು.
ಮಾಕ್ರ್ಸ್, ಏಂಗೆಲ್ಸ್ ಮತ್ತು ಲ್ಯಾಟಿನ್ ಅಮೆರಿಕದ ಹೋರಾಟಗಾರ ಜೋಸ್ ಮಾರ್ಟಿ ಚಿಂತನೆಗಳಿಂದ ಪ್ರಭಾವಿತರಾಗಿದ್ದ ಕ್ಯಾಸ್ಟ್ರೊ ಪಶ್ಚಿಮ ಗೋಳಾರ್ಧದ ಮೊದಲ ಕಮ್ಯುನಿಸ್ಟ್ ಕ್ರಾಂತಿಯನ್ನು ಗೆರಿಲ್ಲಾ ಸಶಸ್ತ್ರ ಹೋರಾಟದ ಮೂಲಕ 1959ರಲ್ಲಿ ಸಾಧಿಸಿದವರು. ಜಗತ್ತಿನ ಅತ್ಯಂತ ಪ್ರಬಲ ಅಮೆರಿಕದ ದಿಗ್ಬಂಧನಕ್ಕೆ ಸಡ್ಡು ಹೊಡೆದು ಕ್ಯೂಬಾವನ್ನು ಸುಮಾರು 5 ದಶಕಗಳ ಕಾಲ ಸಮಾಜವಾದಿ ಹಾದಿಯಲ್ಲಿ ಮುನ್ನಡೆಸಿದರು. ಅಲ್ಲದೆ ದುಡಿಯುವ ಜನತೆಯ ವಿಮೋಚನಾ ಚಳವಳಿಯ ನೆಚ್ಚಿನ ನೇತಾರರಾಗಿದ್ದರು.
ಫಿಡೆಲ್ ಕ್ಯೂಬಾದ ಅಸಹ್ಯ ಬಾಟಿಸ್ತಾ ಆಳ್ವಿಕೆಯ ವಿರುದ್ಧ ಕ್ರಾಂತಿಕಾರಿ ಬಂಡಾಯಕ್ಕೆ ಉಜ್ವಲ ನೇತೃತ್ವ ನೀಡಿದವರು. ಅವರ ಕ್ರಿಯಾಶೀಲ ನೇತೃತ್ವದಲ್ಲಿ ಕ್ಯೂಬಾ ಅರೆ-ವಸಾಹತುಶಾಹಿ ಮತ್ತು ಗುಲಾಮಿಕೆಯಿಂದ ಹೊರಬಂದು, ಸಾಮಾಜಿಕವಾಗಿ ನ್ಯಾಯಯುತವಾದ, ಸಾರ್ವತ್ರಿಕ ಶಿಕ್ಷಣ, ಆರೋಗ್ಯ, ಆಹಾರ ಪೂರೈಕೆ, ಮಹಿಳಾ ಹಕ್ಕುಗಳು ಮತ್ತು ಜನಾಂಗೀಯ ಸಮಾನvಯತ್ತ ದಾಪುಗಾಲುಗಳನ್ನಿಡುವ ಒಂದು ಸಮಾಜವನ್ನು ಕಟ್ಟಲು ಮುನ್ನಡೆಯಿತು.
ಕ್ಯೂಬನ್ ಪ್ರಬುತ್ವದ ಮುಖ್ಯಸ್ಥರಾಗಿದ್ದ ಫಿಡಲ್ ಭಯೋತ್ಪಾದನೆಯ ವಿರುದ್ಧ ಹೋರಾಟ, ಗೂಢಚರ್ಯೆಯ ವಿರುದ್ಧ ಹೋರಾಟ, ಅಮೇರಿಕಾದಲ್ಲಿ ಬಂಧಿಸಲ್ಪಟ್ಟಿರುವ ಐವರು ಹೀರೋಗಳ ವಿಮೋಚನೆಗಾಗಿ ಹೋರಾಟ, ಆಂತರಿಕವಾಗಿ ವಿವಿಧ ರೂಪಗಳಲ್ಲಿ ಪ್ರಕಟವಾಗುತ್ತಿರುವ ಭ್ರಷ್ಟಾಚಾರದ ವಿರುದ್ಧ ಹೋರಾಟ, ತಮ್ಮ ಶಿಕ್ಷಣ ಮತ್ತು ಆರೋಗ್ಯ ವ್ಯವಸ್ಥೆಗಳನ್ನು ಮತ್ತಷ್ಟು ಉತ್ತಮಪಡಿಸಲು ಮತ್ತು ಗುಣಮಟ್ಟ ಹೆಚ್ಚಿಸಲು ದೇಶದಲ್ಲಿ ಇಂಧನ ಉತ್ಪಾದ£ಯ ಇಡೀ ವ್ಯವಸ್ಥೆಯನ್ನು ಬದಲಾಯಿಸಿ ಇಂಧನ ಉಳಿತಾಯವನ್ನು ಉತ್ತೇಜಿಸಲು ಒಂದು ನಿಜವಾದ ಇಂಧನ ಕ್ರಾಂತಿಗಾಗಿ ಹೋರಾಟ ಈಗ ಜಗತ್ತಿನಾದ್ಯಂತ ಸಾವಿರಾರು ಕ್ಯೂಬನ್ ವೈದ್ಯರು ಮತ್ತು ಆರೋಗ್ಯ ಕಾರ್ಯಕರ್ತರು ಮನುಕುಲಕ್ಕೆ ಶ್ರ್ರೇಷ್ಠ ಸೇವೆಗಳನ್ನು ಸಲ್ಲಿಸುವುದು ತಮ್ಮ ಕರ್ತವ್ಯಗಳಲ್ಲಿ ಒಂದು ಎಂದು ಹೇಳುತ್ತಿದ್ದ ಮಹಾನಾಯಕ ಫಿಡಲ್.