ಆಧ್ಯಾತ್ಮ ಮತ್ತು ಧರ್ಮಕ್ಕೆ ಸಂಬಂಧಿಸಿದ ಪುಸ್ತಕಗಳು ಎಂಬ ಹೆಸರಿನಲ್ಲಿ ಪ್ರಗತಿ ವಿರೋಧಿಯಾದ ಸಾಮಾಜಿಕ ಮೌಲ್ಯಗಳನ್ನು ಪ್ರತಿಪಾದಿಸುವ ಮನುಸ್ಮೃತಿ ಮತ್ತು ಸಾಂಪ್ರದಾಯಿಕ ಕಂದಾಚಾರಿ ವಿಚಾರಧಾರೆಯಿಂದ ತುಂಬಿದ ಪುಸ್ತಿಕಗಳನ್ನು ರಾಜ್ಯದ ಫ್ರೌಢಶಾಲಾ ಗ್ರಂಥಾಲಯಗಳಿಗೆ ಸರಬರಾಜು ಮಾಡುವ ರಾಜ್ಯಸಕರ್ಾರದ ತೀಮರ್ಾನವನ್ನು ಭಾರತ ವಿದ್ಯಾಥರ್ಿ ಫೆಡರೇಷನ್(ಎಸ್ಎಫ್ಐ) ಕನರ್ಾಟಕ ರಾಜ್ಯ ಸಮಿತಿಯು ತೀವ್ರವಾಗಿ ಖಂಡಿಸಿದೆ.
ಈ ಸಂಬಂಧ ಫೆಬ್ರವರಿ 26, 2014 ರಂದು ಸಕರ್ಾರ ಸಕರ್ಾರದ ಈ ಶಿಕ್ಷಣವಿರೋಧಿ ಪ್ರಗತಿ ವಿರೋಧಿ ಧೋರಣೆ ಖಂಡಿಸಿ ವ್ಯಾಪಕ ಪ್ರತಿಭಟನೆಗಳನ್ನೂ ಸಹ ನಡೆಸಲಾಗಿದೆ.
ಅಂದು ರಾಜ್ಯಕೇಂದ್ರ ಬೆಂಗಳೂರು ನಗರದ ಮೈಸೂರು ಬ್ಯಾಂಕ್ ವೃತ್ತದಲ್ಲಿ ಎಸ್ಎಫ್ಐ ಕಾರ್ಯಕರ್ತರು ಪ್ರತಿಭಟನೆ ನಡೆಸಿದರು. ಪ್ರತಿಭಟನೆಯನ್ನು ಉದ್ದೇಶಿಸಿ ಎಸ್ಎಫ್ಐ ರಾಜ್ಯ ಕಾರ್ಯದಶರ್ಿ ಗುರುರಾಜ್ ದೇಸಾಯಿ ಮತ್ತು ಎಸ್ಎಫ್ಐ ರಾಜ್ಯ ಉಪಾಧ್ಯಕ್ಷರಾದ ಎಸ್.ಚಿಕ್ಕರಾಜು ಮಾತನಾಡಿದರು. ರಾಜ್ಯ ಉಪಾಧ್ಯಕ್ಷರಾದ ಬಸವರಾಜ ಪೂಜಾರ, ಜಿಲ್ಲಾಧ್ಯಕ್ಷ ವೆಂಕಟೇಶ್.ಕೆ ಮತ್ತು ಜಿಲ್ಲಾ ಉಪಾಧ್ಯಕ್ಷ ಹನುಮಂತ ದುರ್ಗದ್ ಪ್ರತಿಭಟನೆಯಲ್ಲಿ ಭಾಗವಹಿಸಿದ್ದರು. ರಾಜ್ಯ ಸಕರ್ಾರದ ವಿರುದ್ಧ ಪ್ರತಿಭಟನಾಕಾರರು ಘೋಷಣೆಗಳನ್ನು ಕೂಗುತ್ತಾ ಆಕ್ರೋಶ ವ್ಯಕ್ತಪಡಿಸಿದರು.
`ಮನುವಿನ ವಿಚಾರಧಾರೆ’, `ಮನುಸ್ಮೃತಿಯಲ್ಲಿನ ಮುತ್ತಿನ ಮಾತುಗಳು’, `ವೈದಿಕ ಧರ್ಮದಲ್ಲಿ ಆತ್ಮ, `ಬ್ರಹ್ಮ ಆಧ್ಯಾತ್ಮಿಕ ಚಿಂತನಧಾರೆ’, `ಅಗ್ನಿ ಸಹಸ್ರನಾಮ ಹಾಗೂ ಶ್ರೀಮದ್ ಭಗವದ್ಗೀತೆ’ ಮುಂತಾದ ಶೀಷರ್ಿಕೆಯ ಪುಸ್ತಕಗಳು ಸೇರಿದಂತೆ ಸುಮಾರು 849 ಪುಸ್ತಕಗಳನ್ನು ಪ್ರೊ.ಹಂಪಣ್ಣ ನೇತೃತ್ವದ ಸಮಿತಿಯು ಆಯ್ಕೆ ಮಾಡಿದೆ. ಡಾ.ಬಿ.ಆರ್ ಅಂಬೇಡ್ಕರ್, ಸಾವಿತ್ರಿ ಬಾ ಪುಲೆರವರಂತಹ ಮಹಾತ್ಮರು ಶತಮಾನಗಳ ಹಿಂದೆಯೇ ಸುಟ್ಟುಹಾಕಿದಂತಹ ಮನುಸ್ಮೃತಿಯನ್ನು ಮೌಲ್ಯಗಳನ್ನು ಪ್ರತಿಪಾದಿಸುವ ಪುಸ್ತಕಗಳನ್ನು ವಿದ್ಯಾಥರ್ಿಗಳಿಗೆ ವಿತರಿಸಲು ಮುಂದಾಗಿರುವುದು ನಾಚಿಕೆಗೇಡಿನ ಸಂಗತಿಯಾಗಿದೆ. ಬಿಜೆಪಿ ಸಕರ್ಾರದ ಅವಧಿಯಲ್ಲಿ ಆರ್ಎಸ್ಎಸ್ ಹಿನ್ನೆಲೆ ಇರುವ ಪ್ರೊ. ಹಂಪಯ್ಯರವರನ್ನು ನೇಮಿಸಿ ರಾಷ್ಟ್ರೋತ್ಥಾನದ ಪುಸ್ತಕಗಳನ್ನು ಬಿಜೆಪಿ ಸರಕಾರ ವಿತರಣೆ ಮಾಡಿತ್ತು. ಈಗ ಕಾಂಗ್ರೆಸ್ ಸರಕಾರ ಅದೇ ಮಾದರಿ ಅನುಸರಿಸುತ್ತಿರುವುದು ಅಪಾಯಕಾರಿ ಬೆಳವಣಿಗೆಯಾಗಿದೆ.
ಶಿಕ್ಷಣ ಕ್ಷೇತ್ರದಲ್ಲಿ ಈ ಹಿಂದೆ ಬಿಜೆಪಿ ಸಕರ್ಾರ 5 ಮತ್ತು 8ನೇ ತರಗತಿಯ ಪಠ್ಯಪುಸ್ತಕಗಳನ್ನು ಪರಿಷ್ಕರಿಸುವ ಹೆಸರಿನಲ್ಲಿ ಧಮರ್ಾಂಧ ವಿಷಯಗಳನ್ನು ಬಿತ್ತುವ ಪ್ರಯತ್ನ ಮಾಡಿತ್ತು. ವೈಜ್ಞಾನಿಕ ವಿಷಯಗಳ ಬದಲಾಗಿ ಕೋಮುದ್ವೇಷದ ವಿಚಾರಗಳನ್ನು ಸೇರ್ಪಡೆ ಮಾಡಲಾಗಿತ್ತು. ಅಷ್ಟೇ ಅಲ್ಲದೇ ರಾಜ್ಯದ ಶಾಲೆಗಳಲ್ಲಿ ಭಗವದ್ಗೀತೆ ಕಂಠಪಾಠ ಅಭಿಯಾನದ ಮೂಲಕ ಶಾಲೆಗಳಲ್ಲಿ ಆರ್ಎಸ್ಎಸ್ನ ವಿಚಾರಧಾರೆಗಳನ್ನು ವಿದ್ಯಾಥರ್ಿಗಳಿಗೆ ತುರುಕಲು ಮುಂದಾಗಿತ್ತು.
ಬಿಜೆಪಿ ಸಕರ್ಾರದ ಅವಧಿಯಲ್ಲಾದ ತಪ್ಪುಗಳನ್ನು ಸರಿಪಡಿಸಿ ಶಿಕ್ಷಣ ಕ್ಷೇತ್ರವನ್ನು ಶುದ್ಧೀಕರಿಸಿ ವೈಚಾರಿಕ ಸಾಹಿತ್ಯಗಳನ್ನು ಗ್ರಂಥಾಲಯಗಳಿಗೆ ಸರಬರಾಜು ಮಾಡುವ ಬದಲು ಕೋಮುದ್ವೇಷವನ್ನು ಬಿತ್ತುವ ಪುಸ್ತಕಗಳನ್ನು ಸರಬರಾಜು ಮಾಡಲು ಮುಂದಾಗಿರುವುದು ಕಾಂಗ್ರೇಸ್ ಸಕರ್ಾರದ ಜಾತ್ಯತೀತ ನಿಲುವು ಎಷ್ಟು ದುರ್ಬಲ ಎಂಬುದನ್ನು ಸಾಬೀತು ಮಾಡಿದೆ. ಈ ವರ್ಷದ ಶೈಕ್ಷಣಿಕ ಅವಧಿ ಇನ್ನೇನು ಮುಗಿಯುವ ಹಂತಕ್ಕೆ ಬಂದರೂ ಕೆಲವು ಪ್ರೌಢಶಾಲೆಗಳಿಗೆ ಇನ್ನೂ ಪುಸ್ತಕಗಳನ್ನೇ ಸರಬರಾಜು ಮಾಡಿಲ್ಲ. ಅದರ ಬದಲು ಶಿಕ್ಷಣ ಕ್ಷೇತ್ರದಲ್ಲಿ ಕೇಸರೀಕರಣದ ಪ್ರಕ್ರಿಯೆ ಮುಂದುವರೆದಿದ್ದು ಕಾಂಗ್ರೇಸ್ ಸಕರ್ಾರದ ಅವಧಿಯಲ್ಲೂ ವೈಚಾರಿಕ ಸಾಹಿತ್ಯಗಳನ್ನು ಮೂಲೆಗುಂಪು ಮಾಡುವ, ಮರೆ ಮಾಚುವ ಪ್ರಯತ್ನ ಮಾಡಲಾಗಿದೆ ಎಂದು ಎಸ್ಎಫ್ಐ ಮುಖಂಡರು ಖಂಡಿಸಿದರು.
ಈ ಪುಸ್ತಕಗಳನ್ನು ಸರಬರಾಜು ಮಾಡುವ ನಿಧರ್ಾರದಿಂದ ಸಕರ್ಾರ ಹಿಂದೆ ಸರಿಯಬೇಕು. ಮಕ್ಕಳಲ್ಲಿ ವೈಜ್ಞಾನಿಕ, ವೈಚಾರಿಕ, ಸ್ವಾಮರಸ್ಯ, ಸೌಹಾರ್ದತೆ ಮತ್ತು ಐಕ್ಯತೆಯನ್ನು ಗಟ್ಟಿಗೊಳಿಸುವಂತಹ ಪುಸ್ತಕಗಳನ್ನು ಗ್ರಂಥಾಲಯಗಳಿಗೆ ಸರಬರಾಜು ಮಾಡಬೇಕು. ಆರ್.ಎಸ್.ಎಸ್ ಹಿನ್ನೆಲೆಯಿರುವ ಪ್ರೊ. ಹಂಪಣ್ಣ ಸಮಿತಿಯನ್ನು ವಜಾಗೊಳಿಸಬೇಕು ಎಂದೂ ಒತ್ತಾಯಿಸಿಲಾಯಿತು. ಬೆಂಗಳೂರು ಮಾತ್ರವಲ್ಲದೇ ಹಾವೇರಿಯಲ್ಲಿಯೂ ವಿದ್ಯಾಥರ್ಿಗಳು ಪ್ರತಿಭಟನೆ ನಡೆಸಿದರು.
0