- ತೀರ್ಪನ್ನು ಮರುಪರಿಶೀಲಿಸುವುದು, ಶಿಕ್ಷೆ ವಿಧಿಸದಿರುವುದು ಒಳ್ಳೆಯದು
ನವದೆಹಲಿ: ಹಿರಿಯ ವಕೀಲ ಪ್ರಶಾಂತ ಭೂಷಣ ಅವರು ನ್ಯಾಯಾಲಯದ ನಿಂದನೆ ಮಾಡಿದ್ದಾರೆ ಎಂದುಸುಪ್ರಿಂ ಕೋರ್ಟಿನ ಮೂವರು ನ್ಯಾಯಾಧೀಶರ ಪೀಠ ಕೊಟ್ಟಿರುವ ತೀರ್ಪು ದುರದೃಷ್ಟಕರ, ಇದು ಅನಗತ್ಯವಾಗಿತ್ತು ಎಂದು ಸಿಪಿಐ(ಎಂ) ಪೊಲಿಟ್ ಬ್ಯುರೊ ಪ್ರತಿಕ್ರಿಯಿಸಿದೆ.
ಪ್ರಶಾಂತ ಭೂಷಣ ಅವರ ಎರಡು ಟ್ವೀಟ್‍ಗಳು ನ್ಯಾಯಾಲಯಕ್ಕೆ ಅಪಖ್ಯಾತಿ ತರುವಂತದ್ದು ಎಂದು ಕಾಣುವ ಮೂಲಕ ನ್ಯಾಯಾಲಯ ವಿಮರ್ಶೆಯ ಬಗ್ಗೆ ಅಸಹಿಷ್ಣುತೆಯನ್ನು ಮತ್ತು ಒಂದು ಅನುದಾರ ನಿಲುವನ್ನು ಪ್ರದರ್ಶಿಸಿದೆ. ಇದು ನಾಡಿನ ಅತ್ಯುನ್ನತ ನ್ಯಾಯಾಲಯಕ್ಕೆ ತಕ್ಕುದಲ್ಲ. ಈ ತೀರ್ಪು ಕಾರ್ಯಾಂಗವು ಭಿನ್ನ ಮತವನ್ನು ಮತ್ತು ಪತ್ರಿಕಾ ಸ್ವಾತಂತ್ರ್ಯವನ್ನು ದಮನ ಮಾಡುವ ರಾಜದ್ರೋಹದ ಅಂಶ ಮುಂತಾದ ಕರಾಳ ಕಾಯ್ದೆಯಗಳನ್ನು ಬಳಸುತ್ತಿರುವ ಪ್ರಸಕ್ತ ಅಸಹಿಷ್ಣುತೆಯ ಮತ್ತು ದಮನದ ವಾತಾವಾರಣವನ್ನು ಇನ್ನಷ್ಟು ದಟ್ಟಗೊಳಿಸುತ್ತದಷ್ಟೇ ಎಂದಿರುವ ಸಿಪಿಐ(ಎಂ) ಪೊಲಿಟ್ ಬ್ಯುರೊ ನ್ಯಾಯಾಲಯ ಈ ತೀರ್ಪನ್ನು ಮರು ಪರಿಶೀಲಿಸುವುದು ಮತ್ತು ಈ ಪ್ರಕರಣದಲ್ಲಿ ಯಾವುದೇ ಶಿಕ್ಷೆಯನ್ನು ಪ್ರಕಟಿಸದೇ ಇರುವುದು ಒಳ್ಳೆಯದು ಎಂದು ಅಭಿಪ್ರಾಯ ಪಟ್ಟಿದೆ.