“ಆತಂಕಕಾರಿ” ತೀರ್ಪು: ಸೀತಾರಾಮ್ ಯೆಚೂರಿ ಸಿಪಿಐಎಂ ಪ್ರಧಾನ ಕಾರ್ಯದರ್ಶಿ
ನವದೆಹಲಿ: ನ್ಯಾಯಾಂಗ ನಿಂದನೆ ಪ್ರಕರಣದಲ್ಲಿ ಸಾಮಾಜಿಕ ಹೋರಾಟಗಾರ ಹಾಗೂ ಹಿರಿಯ ವಕೀಲರಾದ ಪ್ರಶಾಂತ್ ಭೂಷಣ್ ರವರನ್ನು ದೋಷಿ ಎಂದು ಸುಪ್ರೀಂ ಕೋರ್ಟ್ ತೀರ್ಪನ್ನು ಪ್ರಕಟಿಸಿದೆ. ಸುಪ್ರೀಂ ನಡೆಗೆ ದೇಶಾದ್ಯಂತ ವಿರೋಧವ್ಯಕ್ತವಾಗಿದೆ. ಭಾರತೀಯ ಪ್ರಜಾಪ್ರಭುತ್ವಕ್ಕೆ ಕರಾಳ ದಿನ ಎಂದು ಸಾಮಾಜಿಕ ಜಾಲತಾಣದಲ್ಲಿ ಚರ್ಚೆಯಾಗುತ್ತಿದೆ.
ವಿಶ್ರಾಂತ ನ್ಯಾಯಮೂರ್ತಿಗಳು, ಹೋರಾಟಗಾರರು, ಚಿಂತಕರು ಸುಪ್ರೀಂ ನಡೆಗೆ ವ್ಯಾಪಕ ಆಕ್ರೊಶ ವ್ಯಕ್ತ ಪಡಿಸಿದ್ದಾರೆ. ಸುಪ್ರೀಂ ಕೋರ್ಟ್ ಮುಖ್ಯ ನ್ಯಾಯಮೂರ್ತಿ ಹಾಗೂ ಹಿಂದಿನ ಮುಖ್ಯ ನ್ಯಾಯಮೂರ್ತಿಗಳ ವಿರುದ್ಧದ ನ್ಯಾಯಾಂಗ ನಿಂದನೆ ಪ್ರಕರಣದಲ್ಲಿ ವಕೀಲ ಹಾಗೂ ಸಾಮಾಜಿಕ ಕಾರ್ಯಕರ್ತ ಪ್ರಶಾಂತ್ ಭೂಷಣ್ ತಪ್ಪಿತಸ್ಥರು ಎಂದು ಸರ್ವೋಚ್ಚ ನ್ಯಾಯಾಲಯ ಶುಕ್ರವಾರ ಹೇಳಿದೆ. ಪ್ರಶಾಂತ್ ಭೂಷಣ್ ಅವರು ಮಾಡಿದ್ದ ಎರಡು ಟ್ವೀಟ್ಗಳಿಗೆ ಸಂಬಂಧಿಸಿದಂತೆ ಅವರ ವಿರುದ್ಧ ನ್ಯಾಯಾಂಗ ನಿಂದನೆ ಪ್ರಕರಣದಡಿ ವಿಚಾರಣೆ ನಡೆಸಲಾಗಿತ್ತು. ನ್ಯಾಯಮೂರ್ತಿ ಅರುಣ್ ಮಿಶ್ರಾ, ಬಿ.ಆರ್.ಗವಾಯಿ ಮತ್ತು ಕೃಷ್ಣ ಮುರಾರಿ ಅವರಿದ್ದ ನ್ಯಾಯಪೀಠವು ‘ನ್ಯಾಯಾಂಗ ನಿಂದನೆ ಕಾಯ್ದೆ’ ಅನ್ವಯ ತೀರ್ಪು ನೀಡಿದೆ. ಶಿಕ್ಷೆಯ ಪ್ರಮಾಣದ ಕುರಿತ ವಿಚಾರಣೆಯನ್ನು ಆಗಸ್ಟ್ 20ಕ್ಕೆ ನಿಗದಿಪಡಿಸಿದೆ. ಸುಪ್ರಿಕೋರ್ಟ್ನ ತೀರ್ಪಿಗೆ ಅನೇಕ ನ್ಯಾಯಮೂರ್ತಿಗಳು ಆಕ್ರೋಶವ್ಯಕ ವ್ಯಕ್ತಪಡಿಸಿದ್ದಾರೆ. ಸುಪ್ರಿಂಕೋರ್ಟ್ ತೀರ್ಪು ಗಾಬರಿ ಹುಟ್ಟಿಸುವಂತದ್ದು. ಇದು ವಾಕ್ ಸ್ವಾತಂತ್ರ್ಯಕ್ಕೆ ಮತ್ತು ನ್ಯಾಯಾಂಗದ ಸರಿಯಾದ ವಿಮರ್ಶೆಗೆ, ಭಾರತದಲ್ಲಿ ಪ್ರಜಾಪ್ರಭುತ್ವದಲ್ಲಿ ಸುಪ್ರೀಂ ಕೋರ್ಟಿನ ಪಾತ್ರಕ್ಕೆ ಅಡ್ಡಿಯಂಟು ಮಾಡುವ ಕೆಟ್ಟ ರೂಡಿಯನ್ನು ಹಾಕಿಕೊಟ್ಟಿದೆ ಎಂದು ಅಖಿಲ ಭಾರತ ವಕೀಲರ ಸಂಘ(ಎಐಎಲ್ಯು) ಖೇದ ವ್ಯಕ್ತಪಡಿಸಿದೆ.
“ಭವಿಷ್ಯದಲ್ಲಿ ಇತಿಹಾಸಕಾರರು ಕಳೆದ ಆರು ವರ್ಷಗಳತ್ತ ಹಿಂದಿರುಗಿ ನೋಡಿದಾಗ ಹೇಗೆ ಭಾರತದಲ್ಲಿ ಪ್ರಜಾಪ್ರಭುತ್ವವನ್ನು ಒಂದು ಔಪಚಾರಿಕ ತುರ್ತು ಪರಿಸ್ಥಿತಿ ಇಲ್ಲದೆಯೆ ನಾಶ ಪಡಿಸಲಾಯಿತು ಎಂದು ನೋಡುವಾಗ, ಈ ವಿನಾಶದಲ್ಲಿ ಸುಪ್ರಿಂ ಕೋರ್ಟಿನ ಪಾತ್ರವನ್ನು , ನಿರ್ದಿಷ್ಟವಾಗಿ ಹಿಂದಿನ ನಾಲ್ಕು ಮುಖ್ಯ ನ್ಯಾಯಾಧೀಶರುಗಳ ಪಾತ್ರವನ್ನು ಗುರುತಿಸುತ್ತಾರೆ” ಎಂದು ಪ್ರಶಾಂತ್ ಭೂಷಣ್ ಟ್ವೀಟ್ ಮಾಡಿರುವುದು ಕೂಡ ಒಂದು ಅಭಿಪ್ರಾಯ ಮಾತ್ರ. ಇದಕ್ಕೆ ಸಂವಿಧಾನದ ಕಲಮು 19(1)ರ ವಾಕ್ ಸ್ವಾತಂತ್ರ್ಯ ಮತ್ತು ಅಭಿವ್ಯಕ್ತಿ ಸ್ವಾತಂತ್ರ್ಯದ ಅಡಿಯಲ್ಲಿ ರಕ್ಷಣೆ ಇದೆ.
ನ್ಯಾಯಾಧೀಶರ ಹುದ್ದೆಗೆ ಘನತೆ ಮತ್ತು ಗೌರವವನ್ನು ಉಳಿಸಿಕೊಳ್ಳುವ ಅತ್ಯುತ್ತಮ ದಾರಿಯೆಂದರೆ ತನ್ನ ತೀರ್ಪಿಗೆ ಬರುವ ಪ್ರಶ್ನೆಗಳ ಬಗ್ಗೆ ನಿರ್ಭೀತಿ ಮತ್ತು ವಸ್ತಿನಿಷ್ಠತೆಯ ಮೂಲಕ, ತೀರ್ಪಿನ ಗುಣಮಟ್ಟ, ಸಂಯಮ ಮತ್ತು ಘನತೆಯ ವರ್ತನೆಯ ಮೂಲಕ ಸಾರ್ವಜನಿಕರ ಗೌರವ ಪಡೆಯುವುದು. ನ್ಯಾಯಾಂಗದ ಸ್ವಾತಂತ್ರ್ಯದ ಬಗ್ಗೆ ಕಾಳಜಿ ಇರುವ ಎಐಎಲ್ಯು ಈ ತೀರ್ಪು ನ್ಯಾಯಾಂಗದ ಪ್ರಾಮಾಣಿಕ ವಿಮರ್ಶೆಯ ಮೆಲೆ ಬೀರಬಹುದಾದ ನಕಾರಾತ್ಮಕ ಮತ್ತು ಮೈನಡುಗಿಸುವ ಪರಿಣಾಮದ ಬಗ್ಗೆ ಆತಂಕ ವ್ಯಕ್ತಪಡಿಸುತ್ತದೆ. ಈ ಸ್ವಾತಂತ್ರ್ಯ ದಿನದಂದು ಇದು ನ್ಯಾಯಾಂಗ ನಿಂದನೆಯ ಬಗ್ಗೆ ವಿಚಾರ ಪೂರ್ಣ ಚರ್ಚೆಯನ್ನು ಆರಂಭಿಸುತ್ತದೆ ಎಂದು ನಿರೀಕ್ಷಿಸುತ್ತದೆ ಎಂದು ಎಐಎಲ್ಯು ತಿಳಿಸಿದೆ.
ಸಿಪಿಐಎಂ ಪ್ರಧಾನ ಕಾರ್ಯದರ್ಶಿ ಸೀತಾರಾಮ್ ಯೆಚೂರಿ ಈ ತೀರ್ಪನ್ನು “ಆತಂಕಕಾರಿ” ಎಂದು ಕರೆದಿದ್ದಾರೆ, ಮತ್ತು ಇದು ಪ್ರಜಾಪ್ರಭುತ್ವ ದೇಶದಲ್ಲಿ ಸುಪ್ರೀಂ ಕೋರ್ಟ್ನ ಪಾತ್ರದ ಬಗ್ಗೆ ಮುಕ್ತ ಚರ್ಚೆಯನ್ನು ತಡೆಯುತ್ತದೆ. “ಇದು ಸಾಂವಿಧಾನಿಕ ಪ್ರಾಧಿಕಾರವಾಗಿ ಸುಪ್ರೀಂ ಕೋರ್ಟ್ ವಹಿಸಿರುವ ಪಾತ್ರದ ಬಗ್ಗೆ ತಿರಸ್ಕಾರ ಮೂಡಿಸಿದೆ ಎಂದು ಯೆಚೂರಿ ಟ್ವೀಟ್ ಮಾಡಿದ್ದಾರೆ. ನ್ಯಾಯಾಲಯ ಈ ತೀರ್ಪನ್ನು ಮರು ಪರಿಶೀಲಿಸುವುದು ಮತ್ತು ಈ ಪ್ರಕರಣದಲ್ಲಿ ಯಾವುದೇ ಶಿಕ್ಷೆಯನ್ನು ಪ್ರಕಟಿಸದೇ ಇರುವುದು ಒಳ್ಳೆಯದು ಎಂದು ಸಿಪಿಐಎಂ ಅಭಿಪ್ರಾಯ ಪಟ್ಟಿದೆ.
ಈ ಸುಪ್ರಿಕೋರ್ಟ್ನ ತೀರ್ಪು ಆತಂಕ ವ್ಯಕ್ತಪಡಿಸಿದ್ದು, ಕಾನೂನಿನ ನಿಯಮಕ್ಕೆ ಹೊಡೆತ ಬಿದ್ದಂತಾಗಿದೆ, ನ್ಯಾಯಾಲಯದ ಖ್ಯಾತಿಯನ್ನು ಕುಂದಿಸಿದೆ ಎಂದು ನ್ಯಾಯಮೂರ್ತಿ ರೂಮಾ ಪಾಲ್, ಜಸ್ಟೀಸ್ ಗೋಪಾಲಗೌಡ ಸೇರಿದಂತೆ ಅನೇಕರು ಅಸಮಾಧಾನ ವ್ಯಕ್ತಪಡಿಸಿದ್ದಾರೆ.
ಸುಪ್ರಿ ಕೋರ್ಟ್ನ ತೀರ್ಪು ಭಾರತದ ಸಂವಿಧಾನ ನೀಡಿದ ಅಭಿವ್ಯಕ್ತಿ ಸ್ವಾತಂತ್ರ್ಯಕ್ಕೆ ಧಕ್ಕೆ ತಂದಿದೆ. ನ್ಯಾಯಾಂಗವನ್ನು ಪ್ರಶ್ನಿಸುವುದು , ವಿಮರ್ಶಿಸುವುದು ಸಾರ್ವಜನಕರ ಹಕ್ಕಾಗಿದೆ. ಹಾಗಾಗಿ ಕೋರ್ಟ್ ತನ್ನ ಘನತೆಯನ್ನು ಕಾಪಾಡುವ ಕೆಲಸ ಮಾಡಬೇಕು ಎಂಬುದು ಹೈಕೋರ್ಟ್ನ ವಿಶ್ರಾಂತ ನ್ಯಾಯಮೂರ್ತಿಗಳಾದ ಎಚ್,ಎನ್, ನಾಗಮೋಹನ್ ದಾಸ್ ರವರು ಅಭಿಪ್ರಾಯಪಟ್ಟಿದ್ದಾರೆ.