ಪ್ರಧಾನಿಗಳ ಹೆಗ್ಗಳಿಕೆಗಳನ್ನು ಹುಸಿಗೊಳಿಸಿರುವ ಹಸಿವು, ಅಪೌಷ್ಟಿಕತೆಯ ತಾಂಡವ

`ಪೀಪಲ್ಸ್ ಡೆಮಾಕ್ರಸಿ’ ಪತ್ರಿಕೆಯ ಜನವರಿ 12, 2012 ರ ಸಂಚಿಕೆಯ ಸಂಪಾದಕೀಯ

ಸಂಪುಟ – 06, ಸಂಚಿಕೆ 04, ಜನವರಿ, 22, 2012

6
ಪ್ರಧಾನ ಮಂತ್ರಿಗಳು ಭಾರತದ ನಿರಾಶಾದಾಯಕ ಭವಿಷ್ಯವನ್ನು ಬದಲಿಸಬೇಕು ಎಂದು ನಿಜವಾಗಿಯೂ ಗಂಭೀರವಾಗಿ ಯೋಚಿಸುತ್ತಿದ್ದರೆ, ಎರಡು ಭಾರತಗಳ ನಡುವಿನ ಕಂದರವನ್ನು ಹೆಚ್ಚಿಸುವ ಈಗಿನ ದಿಕ್ಕನ್ನು ಕೈಬಿಡಬೇಕಾಗಿದೆ ಮತ್ತು ಶ್ರೀಮಂತರಿಗೆ ರಿಯಾಯ್ತಿಗಳಾಗಿ ಕೊಟ್ಟ ಹಣವನ್ನು ನಮ್ಮ ಬಹು ಆವಶ್ಯಕವಾದ ಮೂಲರಚನೆಗಳನ್ನು ಕಟ್ಟಲು ಸಾರ್ವಜನಿಕ ಹೂಡಿಕೆಗಾಗಿ, ಆಮೂಲಕ ದೊಡ್ಡ ಪ್ರಮಾಣದಲ್ಲಿ ಉದ್ಯೋಗಾವಕಾಶಗಳನ್ನು ಉಂಟು ಮಾಡಲು ಬಳಸಬೇಕು. ಇದೀಗ ನಮ್ಮ ಜನಗಳ ಜೀವನಾಧಾರಗಳನ್ನು, ಅವರ ಸ್ಥಾನಮಾನಗಳನ್ನು, ಅದಕ್ಕಾಗಿ ಅವರ ಆರೋಗ್ಯವನ್ನು ಉತ್ತಮ ಪಡಿಸಲು, ಒಂದು ಉತ್ತಮ ಭಾರತವನ್ನು ಕಟ್ಟಲು ಇರುವ ಏಕೈಕ ಮಾರ್ಗ

ಅಪೌಷ್ಟಿಕತೆಯ ಸಮಸ್ಯೆ ರಾಷ್ಟ್ರೀಯ ಅವಮಾನದ ಸಂಗತಿ ಎಂದಿದ್ದಾರೆ ನಮ್ಮ ಪ್ರಧಾನ ಮಂತ್ರಿಗಳು. ಹಸಿವು ಮತ್ತು ಅಪೌಷ್ಟಿಕತೆ ಕುರಿತ ಒಂದು ವರದಿಯನ್ನು ಬಿಡುಗಡೆ ಮಾಡುತ್ತ ಅವರು ಉದ್ಗರಿಸಿರುವ ಮಾತಿದು. ಕೆಲವು ಸಕರ್ಾರೇತರ ಸಂಘಟನೆಗಳು ಮತ್ತು ಕಾಪರ್ೊರೇಟುಗಳು ನಡೆಸಿರುವ ಸವರ್ೆಯ ಈ ವರದಿಗೆ ಅವರು ಇಟ್ಟಿರುವ ಹೆಸರು ಹಂಗಾಮ (ಹಸಿವು ಮತ್ತು ಅಪೌಷ್ಟಿಕತೆಗೆ ಇಂಗ್ಲಿಷ್ ಸಮಾನಾರ್ಥಕ ಪದಗಳಾದ ಹಂಗರ್ ಮತ್ತು ಮಾಲ್ನ್ಯುಟ್ರಿಶನ್ ಪದಗಳನ್ನು ಸೇರಿಸಿದ ಪದ).

ನಿಜಕ್ಕೂ ಇದು ರಾಷ್ಟ್ರೀಯ ಅವಮಾನ. ಆದರೆ ಹೀಗೆ ಹೇಳುವಾಗ ಪ್ರಧಾನ ಮಂತ್ರಿಗಳು ಭಾರತ ಒಂದು ಮೂಡಿ ಬರುತ್ತಿರುವ ಆಥರ್ಿಕ ಎಂಬ ಸ್ಥಾನಮಾನವನ್ನು ಸಾಧಿಸಿದೆ ಎಂಬ ಅವರ ಸರಕಾರದ ಆಡಂಬರದ ಮಾತುಗಳ ಬಗ್ಗೆಯಾಗಲೀ, ತಾನು ಆರಂಭಿಸಿದ ಆಥರ್ಿಕ ಸುಧಾರಣೆಗಳ ಇಪ್ಪತ್ತು ವರ್ಷಗಳ ಮಹಾ ಯಶಸ್ಸಿನ ಭಾವೋನ್ಮಾದಗಳ ಬಗ್ಗೆಯಾಗಲೀ, ಇವು ತಂತಾನೇ ನಮ್ಮ ಜನತೆಯ ಜೀವನಾಧಾರಗಳನ್ನು ಉತ್ತಮ ಪಡಿಸುತ್ತವೆ ಎಂಬ ದಾವೆಗಳ ಬಗ್ಗೆಯಾಗಲೀ ಏನೂ ಹೇಳದೆ ಮೌನವಾಗಿದ್ದರು. ಇದು ನಿರೀಕ್ಷಿತವೇ.

ಅವರು ಬಿಡುಗಡೆ ಮಾಡಿದ ವರದಿ ನಮ್ಮ ದೇಶದ 5 ವರ್ಷಗಳಿಗಿಂತ ಕೆಳಗಿನ ವಯಸ್ಸಿನ ಮಕ್ಕಳಲ್ಲಿ 42ಶೇ. ಕನಿಷ್ಟ ತೂಕಕ್ಕಿಂತ ಕಡಿಮೆ ತೂಕ ಹೊಂದಿದ್ದಾರೆ, 59ಶೇ. ಮಕ್ಕಳ ಬೆಳವಣಿಗೆ ಕುಂಠಿತವಾಗಿದೆ ಎಂದು ತೋರಿಸುತ್ತದೆ. ಈ ಸವರ್ೆಯನ್ನು 2011ರಲ್ಲಿ 112 ಗ್ರಾಮೀಣ ಜಿಲ್ಲೆಗಳಲ್ಲಿ ನಡೆಸಲಾಯಿತು. ಭಾರತದ 20ಶೇ.ದಷ್ಟು ಮಕ್ಕಳನ್ನು ಈ ಸವರ್ೆ ಒಳಗೊಂಡಿತ್ತು. ಇವುಗಳಲ್ಲಿ ಒಂದು ನೂರು ಜಿಲ್ಲೆಗಳನ್ನು ಯುನಿಸೆಫ್(ವಿಶ್ವ ಸಂಸ್ಥೆಯ ಮಕ್ಕಳು ಮತ್ತು ಶಿಕ್ಷಣ ನಿಧಿ) 2009ರಲ್ಲಿ ರೂಪಿಸಿದ ಒಂದು ಮಕ್ಕಳ ಅಭಿವೃದ್ಧಿ ಸೂಚ್ಯಂಕದಲ್ಲಿ ಕೆಳಮಟ್ಟದಲ್ಲಿದ್ದ ಜಿಲ್ಲೆಗಳಿಂದ ಆರಿಸಲಾಗಿತ್ತು.

ಪ್ರಧಾನ ಮಂತ್ರಿಗಳೇನೋ ಇದು ದೇಶವನ್ನು ಚಕಿತಗೊಳಿಸುವ ಒಂದು ಸುದ್ದಿಯನ್ನು ಪ್ರಕಟ ಪಡಿಸುತ್ತಿದ್ದೇನೆ ಎಂಬಂತೆ ಮಾತಾಡಿದರು. ಆದರೆ ಇದರಲ್ಲಿ ಹೊಸತೇನೂ ಇರಲಿಲ್ಲ. ಮನಮೋಹನ ಸಿಂಗ್ ರವರು ಹಣಕಾಸು ಮಂತ್ರಿಯಾಗಿ ಆರಂಭಿಸಿದ ನವ-ಉದಾರವಾದಿ ಅಥರ್ಿಕ ಸುಧಾರಣೆಗಳು ಸಾಧಿಸಿರು ವುದು ಅಥರ್ಿಕ ಕಂದರಗಳು ತೀಕ್ಷ್ಣವಾಗಿ ಹೆಚ್ಚುತ್ತಲೇ ಇರುವ ಎರಡು ಭಾರತಗಳನ್ನಷ್ಟೇ ಎಂಬುದನ್ನು ಈ ಸವರ್ೆಗಿಂತಲೂ ವ್ಯಾಪಕವಾದ ಅಧ್ಯಯನಗಳನ್ನು ನಡೆಸಿದ ಸರಕಾರದ ಸಂಸ್ಥೆಗಳ ವರದಿಗಳು ಈಗಾಗಲೇ ಸಾಬೀತು ಮಾಡಿವೆ.

ಅಧಿಕೃತ ಸರಕಾರೀ ಸಂಸ್ಥೆಗಳ ಕೆಲವು ವರದಿಗಳನ್ನು ನೋಡೋಣ.
ಹಸಿವಿನ ಪ್ರಮಾಣ
ಬಡತನದ ಅಂಕೆ-ಸಂಖ್ಯೆಗಳಿಗೆ ಸಂಬಂಧ ಪಟ್ಟಂತೆ ವಿವಾದಗಳೇನೇ ಇರಲಿ, ಇತ್ತೀಚೆಗೆ ಯೋಜನಾ ಆಯೋಗ ಪ್ರಕಟಿಸಿದ ಮಾನವ ಅಭಿವೃದ್ಧಿ ವರದಿ ನಮ್ಮ ಸುಮಾರು 31 ಕೋಟಿ ಜನಗಳು ಅಧಿಕೃತವಾಗಿ ನಿರೂಪಿಸಿರುವ ಬಡತನದ ರೇಖೆಯ ಕೆಳಗೆ ಬದುಕುತ್ತಿದ್ದಾರೆ ಎಂದು ಹೇಳಿದೆ. 1973-74ರಿಂದ ಈ ಸಂಖ್ಯೆಯಲ್ಲಿ ಆಗಿರುವ ಇಳಿಕೆ ಕೇವಲ 1.9 ಕೋಟಿ. ಬಡತನವನ್ನು ಅಳೆಯುವ ವಿಧಾನಗಳ ಬಹಳ ಅಸಮರ್ಪಕವಾಗಿವೆ ಎಂಬ ಸಂಗತಿಯನ್ನು ಪಕ್ಕಕ್ಕಿಟ್ಟರೂ ಪರಿಸ್ಥಿತಿ ಎಂತಹ ಮನೋವೇದಕವಾಗಿದೆ ಎಂಬುದನ್ನು 1983ರಿಂದ 2005ರ ನಡುವೆ ಕ್ಯಾಲೊರಿ ಮತ್ತು ಬೇಳೆ ಕಾಳುಗಳ(ಪ್ರೊಟೀನ್) ತಲಾಬಳಕೆ ಗ್ರಾಮೀಣ ಪ್ರದೇಶಗಳಲ್ಲಿ 8ಶೇ.ದಷ್ಟು ಮತ್ತು ನಗರ ಪ್ರದೇಶಗಳಲ್ಲಿ 3.3ಶೇ.ದಷ್ಟು ಇಳಿದಿದೆ ಎಂಬ ಅಂಕಿ-ಅಂಶ ತೋರಿಸುತ್ತದೆ. ದೇಶದಲ್ಲಿ ಹಸಿವಿನ ಪ್ರಮಾಣ ಎಷ್ಟಿದೆಯೆಂಬುದು 10ಕ್ಕಿಂತ ಕಡಿಮೆ ಹಸಿವಿನ ಸೂಚ್ಯಂಕವನ್ನು ದೇಶದಲ್ಲಿ ಯಾವ ರಾಜ್ಯವೂ ಹೊಂದಲಿಲ್ಲ ಎಂಬ ಸಂಗತಿಯಿಂದಲೇ ತಿಳಿಯುತ್ತದೆ.

ಭಾರತದ ಮೂರು ವರ್ಷಕ್ಕಿಂತ ಚಿಕ್ಕ ಮಕ್ಕಳಲ್ಲಿ ಅರ್ಧದಷ್ಟು ಅಪೌಷ್ಟಿಕತೆಯಿಂದ ನರಳುತ್ತಿದ್ದಾರೆ. ಇದು ಅತೀ ಬಡ ದೇಶಗಳೆನಿಸಿದ ಸಹಾರಾ ಮರುಭೂಮಿಯ ಕೆಳಗಿನ ಆಫ್ರಿಕನ್ ದೇಶಗಳಿಗಿಂತಲೂ ಕೆಟ್ಟ ಪರಿಸ್ಥಿತಿ. ಅರ್ಧದಷ್ಟು ಮಕ್ಕಳು ಪೂರ್ಣವಾಗಿ ರೋಗ ನಿರೋಧಕಗಳ ರಕ್ಷಣೆ ಪಡೆದಿಲ್ಲ. ಇದರಿಂದಾಗಿ ಸಂಪೂರ್ಣವಾಗಿ ತಡೆಯಲು ಸಾಧ್ಯವಿರುವ ರೋಗಗಳಿಗೆ ತುತ್ತಾಗಿ ಇಲ್ಲವಾಗುತ್ತಾರೆ. ಜನತೆಯ ಆರೋಗ್ಯಕ್ಕೆ ಸಂಬಂಧಪಟ್ಟಂತೆ ಹೇಳುವುದಾದರೆ, ಆರೋಗ್ಯಕ್ಕೆ ಮಾಡುವ ಖಚರ್ು(ಸಾರ್ವಜನಿಕ ಮತ್ತು ಖಾಸಗಿ ಎರಡೂ ಸೇರಿ) ದೇಶದ ಒಟ್ಟು ಜಿಡಿಪಿಯ ಶೇಕಡಾವಾರು ಪ್ರಮಾಣದಲ್ಲಿ ನೋಡಿದರೆ ಬಹಳ ಹಿಂದುಳಿದ ಪ್ರದೇಶವೆನಿಸಿಕೊಳ್ಳುವ ಆಫ್ರಿಕಾ ಖಂಡದ ದೇಶಗಳು ಮಾಡುವ ಖಚರ್ಿಗಿಂತಲೂ ಕಡಿಮೆ. 64 ವರ್ಷಗಳ ಸ್ವಾತಂತ್ರ್ಯದ ನಂತರವೂ ದೇಶದ ನೈರ್ಮಲ್ಯದ ಸ್ಥಿತಿ-ಗತಿ ಅತ್ಯಂತ ಅಸಮರ್ಪಕವಾಗಿದೆ, ಸುಮಾರು ಅರ್ಧದಷ್ಟು ಕುಟುಂಬಗಳಿಗೆ ಶೌಚಾಲಯದ ಸೌಲಭ್ಯಗಳೇ ಇಲ್ಲ.

ಆರು ವರ್ಷಗಳ ಅಂತರದಲ್ಲಿ ನಡೆಸಿರುವ ಮೂರನೇ ರಾಷ್ಟ್ರೀಯ ಕುಟುಂಬ ಆರೋಗ್ಯ ಸವರ್ೆ(ಎನ್ಎಫ್ಹೆಚ್ಎಸ್-3) ಎರಡನೇ ಸವರ್ೆಗೆ ಹೋಲಿಸಿದಾಗ, ಕಂಡು ಬರುವ ಸಂಗತಿಗಳು ಆತಂಕಕಾರಿ. 6ರಿಂದ 35 ತಿಂಗಳ ಮಕ್ಕಳಲ್ಲಿ ರಕ್ತಹೀನತೆಯಿಂದ ನರಳುತ್ತಿರುವವವರ ಪ್ರಮಾಣ 74.2ಶೇ.ದಿಂದ 79.2 ಶೇ.ಕ್ಕೆ ಏರಿದೆ. 15ರಿಂದ 49ವರ್ಷ ವಯಸ್ಸಿನ ವಿವಾಹಿತ ಮಹಿಳೆಯರಲ್ಲಿ ಈ ಪ್ರಮಾಣ 51.8ಶೇ.ದಿಂದ 56.2ಶೇ.ಕ್ಕೆ ಏರಿದೆ. ಇದೇ ವಯೋಗುಂಪಿನಲ್ಲಿ ಗಭರ್ಿಣಿಯರಲ್ಲಿ ರಕ್ತಹೀನತೆಯ ಪ್ರಮಾಣ 49.7 ಶೇ. ದಿಂದ 57.9ಶೇ. ಕ್ಕೇರಿದೆ.

ಈ ಮೂರನೇ ರಾಷ್ಟ್ರೀಯ ಸವರ್ೆಯ ಪ್ರಕಾರ ಮೂರು ವರ್ಷಕ್ಕಿಂತ ಕೆಳಗಿನ ಮಕ್ಕಳಲ್ಲಿ 38.4 ಶೇ. ಮಕ್ಕಳ ಬೆಳವಣಿಗೆ ಕುಂಠಿತವಾಗಿದೆ, ಅಂದರೆ ವಯಸ್ಸಿಗೆ ತಕ್ಕ ಎತ್ತರವನ್ನು ಅವರು ಹೊಂದಿಲ್ಲ, 46 ಶೇ. ಮಕ್ಕಳ ತೂಕ ಇರಬೇಕಾದುದಕ್ಕಿಂತ ಕಡಿಮೆಯಿದೆ, ಅಂದರೆ ಅವರ ವಯಸ್ಸಿಗೆ ಇರಬೇಕಾದುದಕ್ಕಿಂತ ತೆಳ್ಳಗಿದ್ದಾರೆ. ಇವರಲ್ಲಿ 79.2 ಶೇ. ಮಕ್ಕಳು ರಕ್ತಹೀನತೆಯಿಂದ ನರಳುತ್ತಿದ್ದಾರೆ. ಇದೀಗ ನಮ್ಮ ತಾಯಂದಿರ, ಮಕ್ಕಳ ಸ್ಥಿತಿ-ಗತಿ.

ನಮ್ಮ ಮಕ್ಕಳ ಆರೋಗ್ಯ ನಮ್ಮ ಕುಟುಂಬಗಳ ಜೀವನಾಧಾರ ಸ್ಥಾನಮಾನಗಳನ್ನು ಅವಲಂಬಿಸಿದೆ ಎಂಬುದನ್ನು ಈ ಎಲ್ಲ ವರದಿಗಳು ದೃಢಪಡಿಸುತ್ತಿವೆ. ಉನ್ನತ ಬೆಳವಣಿಗೆಯ ದಿಕ್ಕಿನಲ್ಲಿದ್ದೇವೆ ಎಂಬ ಆಡಂಬರದ ಮಾತುಗಳೇನೇ ಇದ್ದರೂ, ನಿರುದ್ಯೋಗ ದರ 2007ರಲ್ಲಿ 2.8ಶೇ. ಇದ್ದದ್ದು, 2009-10ರಲ್ಲಿ 9.4 ಶೇ. ಕ್ಕೆ ಏರಿತು ಎಂದು ರಾಷ್ಟ್ರೀಯ ಮಾದರಿ ಸವರ್ೆ ಸಂಘಟನೆ(ಎನ್ಎಸ್ಎಸ್ಒ) ಲೆಕ್ಕ ಹಾಕಿದೆ. ಉದ್ಯೋಗ ಮಾಡುವವರಲ್ಲಿ ಕೂಡ 16 ಶೇ. ಮಂದಿಗೆ ಮಾತ್ರ ನಿಯಮಿತ ವೇತನ ಇದೆ, 43 ಶೇ. ಮಂದಿ ಸ್ವ-ಉದ್ಯೋಗಿಗಳು ಎಂಬ ವಿಧದ ಅಡಿಯಲ್ಲಿ ಬರುತ್ತಾರೆ ಮತ್ತು 39ಶೇ. ಕ್ಯಾಶುವಲ್ ಕಾಮರ್ಿಕರು.

ಐಸಿಡಿಎಸ್ ಸಾರ್ವತ್ರೀಕರಣ ಏಕಿಲ್ಲ?
ಈ ಹಂಗಾಮ ವರದಿಯಲ್ಲಿ ತೂಕ ಕಡಿಮೆಯಿರುವ ಮಕ್ಕಳ ಪ್ರಮಾಣ 2004ರಿಂದ 2011ರ ನಡುವೆ 53 ಶೇ.ದಿಂದ 42 ಶೇ.ಕ್ಕೆ ಇಳಿದಿದೆ ಎಂಬ ಪ್ರಸ್ತಾಪ ಇದೆ. ಇದೊಂದು ಬಹಳ ವಿವಾದಾಸ್ಪದ ಹೇಳಿಕೆ. ಆದರೆ ಪ್ರಧಾನ ಮಂತ್ರಿಗಳು ಅದಕ್ಕೇ ಆತುಕೊಂಡು ಕಳೆದ ಏಳು ವರ್ಷಗಳಲ್ಲಿ ಅಪೌಷ್ಟಿಕತೆಯಲ್ಲಿ 20ಶೇ. ಇಳಿಕೆ ಎನ್ಎಫ್ಹೆಚ್ಸಿ-3 ವರದಿ ಮಾಡಿದ ಇಳಿಕೆ ದರಗಿಂತ ಉತ್ತಮವಾಗಿದೆ ಎಂದಿದ್ದಾರೆ. ಆದರೂ ಅವರು ಮುಂದುವರೆದು ನನಗೆ ಆತಂಕ ಉಂಟುಮಾಡುವಂತದ್ದು, ಎಲ್ಲ ಪ್ರಜ್ಞಾವಂತ ನಾಗರಿಕರಿಗೂ ಆತಂಕ ಉಂಟುಮಾಡಬೇಕಾಗಿರುವಂತದ್ದು, ಈಗಲೂ ನಮ್ಮ 42ಶೇ. ಮಕ್ಕಳು ಕಡಿಮೆ ತೂಕ ಹೊಂದಿದ್ದಾರೆ ಎಂಬುದು. ಇದು ಯಾವ ರೀತಿಯಲ್ಲೂ ಒಪ್ಪತಕ್ಕ ಸಂಗತಿ ಅಲ್ಲ ಎಂದೂ ಸೇರಿಸಿದರು.

ತಮಾಷೆಯ ಸಂಗತಿಯೆಂದರೆ, ಪ್ರಧಾನ ಮಂತ್ರಿಗಳು ಭಾರತೀಯ ಪೌಷ್ಟಿಕತೆಯ ಸವಾಲುಗಳನ್ನು ಕುರಿತ ರಾಷ್ಟ್ರೀಯ ಮಂಡಳಿಯ ಮುಖ್ಯಸ್ಥರು ಕೂಡ. ಸರಕಾರ ಈ ಪಿಡುಗನ್ನು ಎದುರಿಸಲು ಕೈಗೊಳ್ಳುವುದಾಗಿ ಹೇಳಿರುವ ವಿವಿಧ ಕ್ರಮಗಳಲ್ಲಿ ಐಸಿಡಿಎಸ್(ಸಮಗ್ರ ಮಕ್ಕಳ ಅಭಿವೃದ್ಧಿ ಸೇವೆಗಳು)ನ್ನು ಸಾರ್ವತ್ರೀಕರಿಸುವುದು ಕೂಡ ಸೇರಿದೆ. ಆದರೆ ಇದನ್ನು ಸಾರ್ವತ್ರೀಕರಿಸಲು ಹೊರಟಿರುವುದು ಅದು ತನ್ನ ಸ್ವಂತ ಸಂಕಲ್ಪದಿಂದ ಅಲ್ಲ, ಬದಲಾಗಿ, ಸುಪ್ರಿಂ ಕೋಟರ್ಿನ ನಿದರ್ೇಶನದ ಪ್ರಕಾರ. ಸುಪ್ರಿಂ ಕೋಟರ್್ ನಿದರ್ೇಶನವಿದ್ದರೂ, ಇದೇ ಪ್ರಧಾನ ಮಂತ್ರಿಗಳ ಉಸ್ತುವಾರಿಯಲ್ಲಿರುವ ಐಸಿಡಿಎಸ್ನಲ್ಲಿ ದೇಶಾದ್ಯಂತ ಸೂಪರ್ವೈಸರುಗಳ ಹುದ್ದೆಗಳಲ್ಲಿ ಮೂರನೇ ಒಂದರಷ್ಟು ಹುದ್ದೆಗಳು ಇನ್ನೂ ಕೂಡ ಖಾಲಿಯಾಗೇ ಉಳಿದಿವೆ. ಈ ಕಾರ್ಯಕ್ರಮದಲ್ಲಿ ಅಂಗನವಾಡಿ ಕೇಂದ್ರಗಳದ್ದು ನಿಣರ್ಾಯಕ ಪಾತ್ರ. ಆದರೆ ಒಟ್ಟು ಸುಮಾರು 14 ಲಕ್ಷ ಅಂಗನವಾಡಿ ಕೇಂದ್ರಗಳಲ್ಲಿ 1,10,000 ದಷ್ಟು ಈಗಲೂ ಕೆಲಸ ಮಾಡುತ್ತಿಲ್ಲ. ಹೆಚ್ಚಿನ ಅಂಗನವಾಡಿ ಕೇಂದ್ರಗಳ ಪರಿಸ್ಥಿತಿಗಳು ಶೋಚನೀಯವಾಗಿವೆ. ಹಲವಕ್ಕೆ (ಬಿಹಾರದಲ್ಲಿ 90ಶೇ. ಕೇಂದ್ರಗಳಿಗೆ) ಸ್ವಂತ ಕಟ್ಟಡಗಳಿಲ್ಲದೆ, ಎಲ್ಲಿ ಖಾಲಿ ಸ್ಥಳಗಳಿವೆಯೋ ಅಲ್ಲಿ ಕೆಲಸ ಮಾಡುವಂತಹ ಪರಿಸ್ಥಿತಿಯಲ್ಲಿವೆ. ಅರ್ಧಕ್ಕಿಂತ ಹೆಚ್ಚು ಕೇಂದ್ರಗಳಲ್ಲಿ ಯಾವುದೇ ಶೌಚಾಲಯ ಅಥವ ಕುಡಿಯುವ ನೀರಿನ ಸೌಕರ್ಯಗಳಿಲ್ಲ. ಈ ಸರಕಾರವನ್ನು ಮೆಟ್ಟಿಕೊಂಡಂತಿರುವ ಪಿಪಿಪಿ(ಸಾರ್ವಜನಿಕ-ಖಾಸಗಿ ಪಾಲುದಾರಿಕೆ) ಮಂತ್ರದಿಂದಾಗಿ ಈ ಕೇಂದ್ರಗಳಿಗೆ ಆಹಾರ ಪೂರೈಕೆ ಖಾಸಗೀಕರಣಗೊಂಡಿದೆ. ಇದರ ಫಲಿತಾಂಶವೆಂದರೆ, ಅತಿ ಕೆಟ್ಟ ಗುಣಮಟ್ಟದ ಆಹಾರ ಪೂರೈಕೆ, ಅನಿಯಮಿತ ಪೂರೈಕೆ ಮತ್ತು ಪೂರೈಕೆಯ ಪ್ರಮಾಣದ ಪರೀಕ್ಷಣೆಯೂ ಇಲ್ಲದಾಗಿದೆ.

ಅಮಾನವೀಯ ಸ್ಥಿತಿ-ಗತಿ
ಎಷ್ಟೇ ಸಾರ್ವಜನಿಕ ಪ್ರತಿಭಟನೆಗಳು ನಡೆದರೂ, ಸಂಸತ್ತಿನಲ್ಲೂ ಚಚರ್ೆಗಳು ನಡೆದರೂ, ಅಂಗನವಾಡಿ ಕಾರ್ಯಕತರ್ೆಯರ ಪರಿಸ್ಥಿತಿಗಳು ಅತ್ಯಂತ ಕೆಟ್ಟದಾಗಿದೆ. ಅವರ ಕೆಲಸದ ಪರಿಸ್ಥಿತಿಗಳು ಮಾನವ ಜೀವಿಗಳಿಗೆ ತಕ್ಕುದಾಗಿಯೂ ಇಲ್ಲ. ಕಾರ್ಯಕತರ್ೆಯರಿಗೆ ತಿಂಗಳಿಗೆ 1500 ರೂ. ಮತ್ತು ಸಹಾಯಕಿಯರಿಗೆ 750 ರೂ. ಮಾತ್ರ.- ಹೀಗಿದೆ ಅಪೌಷ್ಟಿಕತೆಯ ವಿರುದ್ಧ ಹೋರಾಟದ ಮತ್ತು ನಮ್ಮ ಮಕ್ಕಳನ್ನು ಬೆಳೆಸುವ, ಪೋಷಿಸುವ ಜವಾಬ್ದಾರಿಗಳಿರುವ ನಮ್ಮ ಜನಗಳ ಶೋಚನೀಯ ಪರಿಸ್ಥಿತಿ.

ಆದರೂ ಸರಕಾರ ಈ ವಲಯವನ್ನು ನಿರ್ಲಕ್ಷಿಸುತ್ತಲೇ ಇದೆ. ದೇಶದಲ್ಲಿ ಐಸಿಡಿಎಸ್ ನ ಸಾರ್ವತ್ರೀಕರಣಕ್ಕೆ ಬೇಕಾದ ಹಣಕಾಸು ಸಂಪನ್ಮೂಲಗಳನ್ನು ಕೂಡ ಕೊಟ್ಟಿಲ್ಲ. ಭಾರತ ಸಾರ್ವಜನಿಕ ಆರೋಗ್ಯಕ್ಕೆ ಖಚರ್ು ಮಾಡುವ ಹಣ ನಮ್ಮ ಜಿಡಿಪಿಯ ಒಂದು ಶೇಕಡಾಕ್ಕಿಂತಲೂ ಕಡಿಮೆ-ನಿಜಕ್ಕೂ ಶೋಚನೀಯ ಸಂಖ್ಯೆ. ಆರೋಗ್ಯ ಬಜೆಟಿಗೆಂದು ಕೊಟ್ಟಿರುವುದು ಕೇವಲ ರೂ.22,300 ಕೋಟಿ. 2ಜಿ ತರಂಗಾಂತರ ಹಗರಣದಲ್ಲಿ ಇರುವ ಹಣವೇ ಇದರ ಎಂಟು ಪಟ್ಟು.

ಪ್ರಧಾನ ಮಂತ್ರಿಗಳು ಭಾರತದ ಈ ನಿರಾಶಾದಾಯಕ ಭವಿಷ್ಯವನ್ನು ಬದಲಿಸಬೇಕು ಎಂದು ನಿಜವಾಗಿಯೂ ಗಂಭೀರವಾಗಿ ಯೋಚಿಸುತ್ತಿದ್ದರೆ, ಪ್ರಾಥಮಿಕ ಆರೋಗ್ಯ ರಕ್ಷಣೆಯನ್ನು ಎಲ್ಲರಿಗೂ ಅನ್ವಯವಾಗುವಂತೆ ಸಾರ್ವತ್ರೀಕರಿಸಬೇಕು. ಇದಾಗಬೇಕಾದರೆ, ನಮ್ಮ ಜಿಡಿಪಿಯ ಕನಿಷ್ಟ 3ಶೇ. ವನ್ನು ಆರೋಗ್ಯ ರಕ್ಷಣೆಗೆ ಕೊಡಬೇಕಾಗುತ್ತದೆ. ಸದ್ಯಕ್ಕೆ ಇದಕ್ಕಿಂತ ಹೆಚ್ಚು ಮೊತ್ತದ ಕಾನೂನಾತ್ಮಕವಾಗಿ ವಸೂಲಿ ಮಾಡಬೇಕಾದ ತೆರಿಗೆ ಹಣವನ್ನು ಈ ಸರಕಾರ ವಸೂಲು ಮಾಡದೆ ಬಿಟ್ಟು ಕೊಡುತ್ತಿದೆ. ಕಳೆದ ಮೂರು ವರ್ಷಗಳಲ್ಲೇ ಹೀಗೆ ಬಿಟ್ಟುಕೊಟ್ಟ ಆದಾಯದ ಮೊತ್ತ ರೂ. 14,28,028 ಕೋಟಿ ರೂ.ಗಳು. ಇದರಲ್ಲಿ ರೂ.3,63,875 ಕೋಟಿ ಕಾಪರ್ೊರೇಟುಗಳಿಗೆ ಮತ್ತು ಶ್ರೀಮಂತರಿಗೆ ರಿಯಾಯ್ತಿಗಳ ರೂಪದಲ್ಲಿ ಕೊಡಲಾಗಿದೆ.

ಆದ್ದರಿಂದ ಶ್ರೀಮಂತರನ್ನು ಶ್ರೀಮಂತರಾಗಿಸುವ, ಬಡವರನ್ನು ದಾರಿದ್ರ್ಯಕ್ಕೆ ತಳ್ಳುವ ನವ-ಉದಾರವಾದಿ ಸುಧಾರಣೆಗಳ ಈ ದಿಕ್ಕನ್ನು ಬದಲಿಸದೆ, ನಮ್ಮ ಜನಗಳ ಆರೋಗ್ಯವನ್ನು, ಆಮೂಲಕ ನಮ್ಮ ದೇಶವನ್ನು ಉತ್ತಮ ಪಡಿಸುವಲ್ಲಿ ಗಮನಾರ್ಹ ಮುನ್ನಡೆ ಸಾಧ್ಯವಿಲ್ಲ. ಎರಡು ಭಾರತಗಳ ನಡುವಿನ ಕಂದರವನ್ನು ಹೆಚ್ಚಿಸುವ ಈಗಿನ ದಿಕ್ಕನ್ನು ಕೈಬಿಡಬೇಕಾಗಿದೆ ಮತ್ತು ಶ್ರೀಮಂತರಿಗೆ ರಿಯಾಯ್ತಿಗಳಾಗಿ ಕೊಟ್ಟ ಹಣವನ್ನು ನಮ್ಮ ಬಹು ಆವಶ್ಯಕವಾದ ಮೂಲರಚನೆಗಳನ್ನು ಕಟ್ಟಲು ಸಾರ್ವಜನಿಕ ಹೂಡಿಕೆಗಾಗಿ, ಆಮೂಲಕ ದೊಡ್ಡ ಪ್ರಮಾಣದಲ್ಲಿ ಉದ್ಯೋಗಾವಕಾಶಗಳನ್ನು ಉಂಟು ಮಾಡಲು ಬಳಸಬೇಕು. ಇದೀಗ ನಮ್ಮ ಜನಗಳ ಜೀವನಾಧಾರಗಳನ್ನು, ಅವರ ಸ್ಥಾನಮಾನಗಳನ್ನು, ಅದಕ್ಕಾಗಿ ಅವರ ಆರೋಗ್ಯವನ್ನು ಉತ್ತಮ ಪಡಿಸಲು, ಒಂದು ಉತ್ತಮ ಭಾರತವನ್ನು ಕಟ್ಟಲು ಇರುವ ಏಕೈಕ ಮಾರ್ಗ.
0

Donate Janashakthi Media

Leave a Reply

Your email address will not be published. Required fields are marked *