ಪೆಟ್ರೋಲ್ ಬೆಲೆಯೇರಿಕೆಯ ತರ್ಕಗಳು ಜನತೆಗೆ ಮಾಡಿರುವ ಬೃಹದಾಕಾರದ ಮೋಸಗಳು

`ಪೀಪಲ್ಸ್ ಡೆಮಾಕ್ರೆಸಿ’ ವಾರಪತ್ರಿಕೆಯ ಮೇ 31,2012 ರಂದು ಸಿದ್ದಗೊಂಡ ಸಂಪಾದಕೀಯ

ಸಂಪುಟ – 06, ಸಂಚಿಕೆ 24, ಜೂನ್ 10, 2012

6

ತೈಲ ಕಂಪನಿಗಳು ಅಪಾರ ಪ್ರಮಾಣದಲ್ಲಿ ಅಂಡರ್ ರಿಕವರಿಯಿಂದ ನರಳುತ್ತಿವೆಯೆನ್ನುವುದು ಒಂದು ದೈತ್ಯ ಗಾತ್ರದ ಮೋಸ. ಅದೇ ರೀತಿ ಪೆಟ್ರೋಲಿಯಂ ಬೆಲೆಗಳಲ್ಲಿ ಸರಕಾರದ ಅಪಾರ ಸಬ್ಸಿಡಿಯ ಅಂಶ ಇದೆಯೆಂಬ ಮಾತು ಕೂಡ. ಈ ಬಾರಿ ದರ ಏರಿಕೆಗಳನ್ನು ಸಮಥರ್ಿಸಲು ಮಿತವ್ಯಯದ ಅಗತ್ಯದ ಮಾತೂ ಸೇರಿದೆ-ಹಣಕಾಸು ಕೊರತೆಯಿಂದ ವಿದೇಶಿ ಹೂಡಿಕೆದಾರರು ಭೀತರಾಗಿ ಓಡಿಹೋಗುವುದನ್ನು ತಡೆಯಲಿಕ್ಕಾಗಿ ಈ ಭಾರೀ ಬೆಲೆಯೇರಿಕೆಯಂತೆ. ಇದುವರೆಗೆ ಯುರೋಪಿನಲ್ಲಿ ಒಂಭತ್ತು ಆಳುವ ಸರಕಾರಗಳನ್ನು ಚುನಾವಣೆಗಳಲ್ಲಿ ಬಲಿ ತೆಗೆದುಕೊಂಡ ಈ ಮಿತವ್ಯಯದ ವಿಚಾರ ಹೀಗೆ ಭಾರತವನ್ನೂ ಪ್ರವೇಶಿಸಿದೆ, ಬಹುಶಃ ಯುಪಿಎ-2 ಸರಕಾರಕ್ಕೂ ಅದೇ ಗತಿಯನ್ನು ತರಲು.

ಈ ಸಂಚಿಕೆ ಮುದ್ರಣಕ್ಕೆ ಹೋಗುವ ವೇಳೆಗೆ ಪೆಟ್ರೋಲ್ ಬೆಲೆಯೇರಿಕೆಯ ವಿರುದ್ಧ ದೇಶವ್ಯಾಪಿ ಪ್ರತಿಭಟನೆಯ ಸುದ್ದಿ ಬರುತ್ತಿದೆ. ನಾಲ್ಕು ಎಡಪಕ್ಷಗಳು ಈ ಪ್ರತಿಭಟನೆಗೆ ಕರೆ ನೀಡಿದ್ದವು. ಆದರೆ ಯುಪಿಎ-2 ಸರಕಾರ ಈ ಬೃಹತ್ ಪ್ರತಿಭಟನೆಗಳು, ಹರತಾಳ, ರಾಸ್ತಾರೋಕೋಗಳಿಗೆ ಕಿವುಡಾಗಿ ಕೂತಿದೆ, ಅದರ ಕೆಲವು ಮಿತ್ರಪಕ್ಷಗಳೂ ಪ್ರತಿಭಟನೆಯ ದುರ್ಬಲ ದನಿಯೆತ್ತಿದರೂ ಬೆಲೆಯೇರಿಕೆಯನ್ನು ಹಿಂದಕ್ಕೆ ತೆಗೆದುಕೊಳ್ಳುವುದಿಲ್ಲ ಎಂದಿದೆ. ಸರಕಾರ ಈ ಕ್ರಮವನ್ನು ಸಮಥರ್ಿಸಿಕೊಳ್ಳುತ್ತಲೇ ಇದೆ, ತೈಲ ಕಂಪನಿಗಳಿಗೆ ಆಗುತ್ತಿದೆ ಎನ್ನಲಾದ ಬೃಹತ್ ಪ್ರಮಾಣದ ನಷ್ಟಗಳನ್ನು ತುಂಬಲು ಮತ್ತು ಪ್ರಧಾನ ಮಂತ್ರಿಗಳು ಹೇಳಿರುವಂತೆ ನಮ್ಮ ಸೊಂಟ ಪಟ್ಟಿಗಳನ್ನು ಬಿಗಿದು ಆಥರ್ಿಕದ ಹಣಕಾಸು ಸ್ಥಿತಿಯನ್ನು ಉತ್ತಮ ಪಡಿಸಲು ಇದು ಅಗತ್ಯ ಎಂದು ಹೇಳುತ್ತಿದೆ. ಈ ಬಗ್ಗೆ ಮುಂದೆ ನೋಡೋಣ.

ತೈಲಕಂಪನಿಗಳು ಅಪಾರ ಪ್ರಮಾಣದಲ್ಲಿ ಅಂಡರ್ ರಿಕವರಿ ಅಂದರೆ ನಷ್ಟ ಪರಿಹಾರದ ಕೊರತೆಯಿಂದ ನರಳುತ್ತಿವೆಯೆಂದು ನಮಗೆ ಹೇಳಲಾಗುತ್ತಿದೆ. ಇದು 2011-12ರಲ್ಲಿ 1,71,140 ಕೋಟಿ ರೂ.ಗಳಷ್ಟಾಗಿದೆಯಂತೆ. ದೇಶ ಇಷ್ಟೊಂದು ಅಗಾಧ ನಷ್ಟವನ್ನು ಎದುರಿಸಬಲ್ಲುದೇ, ಅದಕ್ಕೇ ಈ ಬೆಲೆ ಹೆಚ್ಚಳ ಎನ್ನಲಾಗುತ್ತಿದೆ.

ಏನೀ ಅಂಡರ್ ರಿಕವರಿ?
ಪೆಟ್ರೋಲಿಯಂ ಉತ್ಪನ್ನಗಳ ಚಿಲ್ಲರೆ ಬೆಲೆಗಳು ಮತ್ತು ಅವುಗಳ ಆಮದು ಬೆಲೆಗಳ ನಡುವಿನ ವ್ಯತ್ಯಾಸವೇ ಸರಕಾರ ಹೇಳುವ ಈ ನಷ್ಟ ಪರಿಹಾರ ಕೊರತೆ. ಅಂದರೆ ಇದೊಂದು ಕಲ್ಪಿತ ಸ್ವರೂಪದ ನಷ್ಟ. ಏಕೆಂದರೆ ಆಮದು ಬೆಲೆಯಲ್ಲಿ ಸುಂಕಗಳು, ವಿಮೆ, ಸಾಗಾಣಿಕೆ ಮತ್ತು ಇತರ ಸುಂಕಗಳು ಸೇರಿರುತ್ತವೆ. ಇವನ್ನೆಲ್ಲ ಭಾರತೀಯ ಕಂಪನಿಗಳು ತೆರುತ್ತಿಲ್ಲ. ಏಕೆಂದರೆ ನಾವು ಆಮದು ಮಾಡುವುದು ಕಚ್ಚಾತೈಲವನ್ನು ಮಾತ್ರ, ಅದನ್ನು ಭಾರತದಲ್ಲೇ ಸಂಸ್ಕರಿಸಿ ಪೆಟ್ರೋಲ್, ಡೀಸೆಲ್, ಸೀಮೆಎಣ್ಣೆ ಇತ್ಯಾದಿಗಳನ್ನು ಉತ್ಪಾದಿಸಲಾಗುತ್ತದೆ. ಅಲ್ಲದೆ ಈ ತೈಲ ಕಂಪನಿಗಳು ಅಂಡರ್ ರಿಕವರಿ ಎಂದು ಎದೆ ಬಡಿದುಕೊಳ್ಳುತ್ತಿರುವ ಈ ಅಂಕೆ-ಸಂಖ್ಯೆಗಳನ್ನು ಅವುಗಳ ಲೆಕ್ಕಪತ್ರಗಳನ್ನು ಕಾನೂನು ಪ್ರಕಾರ ಪರಿಶೋಧಿಸುವ ಆಡಿಟರುಗಳು ಪರಿಗಣಿಸುವುದೇ ಇಲ್ಲ. ಪೆಟ್ರೋಲಿಯಂ ಉತ್ಪನ್ನದ ಬೆಲೆಯನ್ನು ಆಮದು ಮಾಡಿದ ಕಚ್ಚಾತೈಲದ ಖಚರ್ು ಮತ್ತು ಅದರ ದೇಶೀ ಸಂಸ್ಕರಣ ಖರ್ಚನ್ನು ಕೂಡಿಸಿದ ಮೊತ್ತದೊಂದಿಗೆ ಹೋಲಿಸುವ ಬದಲು ಅಂತರ್ರಾಷ್ಟ್ರೀಯ ಬೆಲೆಯನ್ನು ಒಂದು ಮಾನದಂಡವಾಗಿ ತೆಗೆದುಕೊಳ್ಳಲಾಗುತ್ತದೆ.

ವಿದೇಶಿ ತೈಲ ಕಂಪನಿಗಳ ರಾಷ್ಟ್ರೀಕರಣದ ಮೊದಲು ಭಾರತದಲ್ಲಿ ಪೆಟ್ರೋಲಿಯಂ ಉತ್ಪನ್ನಗಳನ್ನು ಎಸ್ಸೊ, ಕಾಲ್ಟೆಕ್ಸ್, ಬಮರ್ಾಶೆಲ್ ಮುಂತಾದ ಕಂಪೆನಿಗಳು ಮಾರುತ್ತಿದ್ದವು. ಇವು ಬಹುರಾಷ್ಟ್ರೀಯ ಕಂಪನಿಗಳಾದ್ದರಿಂದ ಅವು ತಮ್ಮ ಲೆಕ್ಕಾಚಾರಗಳನ್ನು ಅಂತರ್ರಾಷ್ಟ್ರೀಯ ಬೆಲೆಗಳ ಆಧಾರದಲ್ಲಿ ಮಾಡುತ್ತಿದ್ದವು. ಆದರೆ ರಾಷ್ಟ್ರೀಕರಣದ ನಂತರ ದೇಶೀ ಉತ್ಪನ್ನಗಳ ಮಾರಾಟ ಬೆಲೆ ಕಚ್ಚಾತೈಲದ ಆಮದು ಬೆಲೆ ಮತ್ತು ದೇಶೀ ಸಂಸ್ಕರಣ ಖಚರ್ು ಸೇರಿಸಿದ ಮೊತ್ತ ಎಂಬುದು ತರ್ಕಸಮ್ಮತ. ಆದರೆ ಈಗಲೂ ಅಂತರ್ರಾಷ್ಟ್ರೀಯ ಬೆಲೆಗಳನ್ನು ಮಾನದಂಡವಾಗಿ ಬಳಸುತ್ತಿರುವುದೇ ಈ ಅತಿರಂಜಿತ ಕಾಲ್ಪನಿಕ ನಷ್ಟಗಳನ್ನು ಉಂಟು ಮಾಡಿದೆ. ಇದೊಂದು ದೈತ್ಯ ಗಾತ್ರದ ಮೋಸ.

ಲೋಕಸಭೆಯಲ್ಲಿ ಒಂದು ಪ್ರಶ್ನೆಗೆ ಸರಕಾರದ ವತಿಯಿಂದ ನೀಡಿದ ಉತ್ತರ ಈ ಮೋಸವನ್ನು ಬಿಂಬಿಸುತ್ತದೆ. ಈ ಉತ್ತರದಲ್ಲಿ ಪೆಟ್ರೋಲಿಯಂ ಮಂತ್ರಿಗಳು ಸಾರ್ವಜನಿಕ ವಲಯದ ಕಂಪನಿಗಳು ತೆರಿಗೆ ಪಾವತಿ ಮಾಡಿದ ನಂತರ ಗಳಿಸಿದ ಲಾಭಗಳ ವಿವರಗಳನ್ನು ಕೊಟ್ಟಿದ್ದಾರೆ. 2010-11ರಲ್ಲಿ ಒಎನ್ಜಿಸಿ 18,924 ಕೋಟಿ ರೂ.ಗಳ ಲಾಭ ಗಳಿಸಿತು, ಇಂಡಿಯನ್ ಆಯಿಲ್ ಗಳಿಸಿದ ಲಾಭ 7,745 ಕೋಟಿ ರೂ.ಗಳು, ಭಾರತ್ ಪೆಟ್ರೋಲಿಯಂ 15,547 ಕೋಟಿ ರೂ.ಗಳು ಮತ್ತು ಹಿಂದುಸ್ತಾನ್ ಪೆಟ್ರೋಲಿಯಂ 1,539 ಕೋಟಿ ರೂ.ಗಳು. ಎಲ್ಲಿದೆ ನಷ್ಟ ? ಅಂಡರ್ ರಿಕವರಿಯ ರಾಗ ಹಾಡುತ್ತಾ ಯುಪಿಎ-2 ಸರಕಾರ ಯಾರನ್ನು ಮರುಳು ಮಾಡುತ್ತಿದೆ?

ಸಬ್ಸಿಡಿಗಳು-ಯಾರಿಂದ ಯಾರಿಗೆ?
ಈಗ ಸಬ್ಸಿಡಿಗಳ ಪ್ರಶ್ನೆಯನ್ನು ಎತ್ತಿಕೊಳ್ಳೋಣ. ಪೆಟ್ರೋಲಿಯಂ ಉತ್ಪನ್ನಗಳ ಮೇಲೆ ತೆರಿಗೆಗಳು ಮತ್ತು ಸುಂಕಗಳು ಕೇಂದ್ರ ಸರಕಾರಕ್ಕೆ 2010-11ರಲ್ಲಿ ರೂ.11,36,497 ಕೋಟಿ ರೂ.ಗಳ ಆದಾಯವನ್ನು ತಂದಿವೆ ಎಂದು ಸಂಸದೀಯ ಸ್ಥಾಯೀ ಸಮಿತಿಯ ವರದಿ ತೋರಿಸುತ್ತಿದೆ. ಇದಲ್ಲದೆ ರಾಜ್ಯ ಸರಕಾರಗಳು ಗಳಿಸಿರುವುದು ರೂ.88,797 ಕೋಟಿ. ಹೀಗೆ ಪೆಟ್ರೋಲಿಯಂ ಉತ್ಪನ್ನಗಳಿಂದ ಕೇಂದ್ರ ಮತ್ತು ರಾಜ್ಯ ಸರಕಾರಗಳ ಒಟ್ಟು ಆದಾಯ ಗಳಿಕೆ ರೂ.2,25,494 ಕೋಟಿ ರೂ.ಗಳ ಒಂದು ಬೃಹತ್ ಮೊತ್ತ. ಆದರೆ ಕೇಂದ್ರ ಸರಕಾರ ತೈಲ ಕಂಪನಿಗಳಿಗೆ ನೀಡಿದ ಸಬ್ಸಿಡಿಗಳ ಮೊತ್ತ ಆಯಿಲ್ ಬಾಂಡ್(ಸಾಲಪತ್ರ)ಗಳೂ ಸೇರಿದಂತೆ ರೂ.43,926 ಕೋಟಿ. ಅಂದರೆ ಎಲ್ಲ ಸಬ್ಸಿಡಿಗಳನ್ನು ಕೊಟ್ಟ ನಂತರವೂ ಕೇಂದ್ರದ ಬಳಿ ರೂ.92,571 ಕೋಟಿ ರೂ.ಗಳ ಅಗಾಧ ಮೊತ್ತ ಉಳಿಯುತ್ತದೆ. ಯಾರು ಯಾರಿಗೆ ಸಬ್ಸಿಡಿ ಕೊಡುತ್ತಿದ್ದಾರೆ, ಮಾನ್ಯ ಪ್ರಧಾನ ಮಂತ್ರಿಗಳೇ? ಯಾರು ಸೊಂಟಪಟ್ಟಿ ಬಿಗಿದುಕೊಳ್ಳಬೇಕಾಗಿದೆ, ಹೇಳುತ್ತೀರಾ ?

ಪೆಟ್ರೋಲಿನ ಅಂತರ್ರಾಷ್ಟ್ರೀಯ ಬೆಲೆ ಲೀಟರಿಗೆ 2009-0ರಲ್ಲಿ 23.17ರೂ. ಇದ್ದಾಗ ಭಾರತದಲ್ಲಿ ನಾವು 47.93 ರೂ. ತೆತ್ತಿದ್ದೇವೆ(ನಾಲ್ಕು ಮಹಾನಗರಗಳ ಸರಾಸರಿ ಬೆಲೆ). ಅದೇ ರೀತಿ ಡೀಸೆಲಿನ ಅಂತರ್ರಾಷ್ಟ್ರೀಯ ಬೆಲೆ ರೂ. 22.70 ಆಗಿದ್ದರೆ, ನಾವು ತೆತ್ತಿರುವುದು ರೂ.38.10. ಅನಿಲ ಸಿಲಿಂಡರಿನ ಅಂತರ್ರಾಷ್ಟ್ರೀಯ ಬೆಲೆ ರೂ. 177.14, ನಾವು ತೆತ್ತಿರುವುದು ರೂ. 310.35(ಮೂಲ ಅಂಕಿ-ಅಂಶಗಳು: ಪೆಟ್ರೋಲಿಯಂ ಮಂತ್ರಾಲಯ, 2009-10). ಪೆಟ್ರೋಲಿಯಂ ಉತ್ಪನ್ನಗಳ ಮೇಲಿನ ಅಗಾಧ ತೆರಿಗೆ, ಸುಂಕಗಳಿಂದಾಗಿಯೇ ಜನ ಇಷ್ಟೊಂದು ನಂಬಲಾಗದಷ್ಟು ವಿಪರೀತ ಬೆಲೆ ತೆರುವ ಮೂಲಕ ಸರಕಾರಕ್ಕೇ ಸಬ್ಸಿಡಿ ಕೊಡುತ್ತಿದ್ದಾರೆ. ಆದ್ದರಿಂದಲೇ, 2008ರಲ್ಲಿ ಅಮೆರಿಕಾದಲ್ಲಿ ಪೆಟ್ರೋಲ್ ಬೆಲೆ ರೂ.17.57 ಆಗಿದ್ದಾಗ, ದಿಲ್ಲಿಯಲ್ಲಿ ರೂ.50.65 ಇತ್ತು!

ಕೊರತೆ ತಗ್ಗಿಸಬೇಕಾದರೆ
ಜನಗಳ ಮೇಲೆ ಈ ಹೆಚ್ಚಿನ ಹೊರೆಗಳನ್ನು ಹಾಕುತ್ತಿರುವುದು ನಮ್ಮ ಆಥರ್ಿಕದ ಹಣಕಾಸು ಆರೋಗ್ಯವನ್ನು ಉತ್ತಮಪಡಿಸುವುದಕ್ಕಾಗಿಯಂತೆ. ನಮ್ಮ ವಿಪರೀತ ಹಣಕಾಸು ಕೊರತೆಯಿಂದ ಭೀತರಾಗಿ ವಿದೇಶಿ ಹೂಡಿಕೆದಾರರು ಓಡಿ ಹೋಗುತ್ತಿದ್ದಾರಂತೆ, ಅದಕ್ಕಾಗಿ ಅದನ್ನು ತುತರ್ಾಗಿ ಇಳಿಸಬೇಕಾಗಿದೆಯಂತೆ- ಹೀಗೆಂದು ದೇಶಕ್ಕೆ ಹೇಳಲಾಗುತ್ತಿದೆ. ಈ ಅಂಕಿ-ಅಂಶಗಳನ್ನು ನೋಡಿ: ಹಣಕಾಸು ಕೊರತೆ ಈಗ ರೂ.5,21,980 ಕೋಟಿ ರೂ. ಇದು ನಮ್ಮ ಒಟ್ಟು ರಾಷ್ಟ್ರೀಯ ಉತ್ಪನ್ನದ 5.9ಶೇ. ಇದೇ ವರ್ಷದ ಬಜೆಟ್ ದಸ್ತಾವೇಜಿನ ಪ್ರಕಾರ ಸರಕಾರ ಬಿಟ್ಟುಕೊಟ್ಟ (ಅಂದರೆ ಸ್ವಯಮಿಚ್ಛೆಯಿಂದಲೇ ಅದು ಸಂಗ್ರಹಿಸದಿರುವ) ತೆರಿಗೆ ಆದಾಯದ ಮೊತ್ತ ರೂ. 5,29,432 ಕೋಟಿ. ಅಥರ್ಾತ್, ಸುಮಾರು ಎಂಟು ಸಾವಿರ ಕೋಟಿ ರೂ.ಗಳಷ್ಟು ಹೆಚ್ಚು !

ಪಾಶ್ಚಿಮಾತ್ಯ ದೇಶಗಳಲ್ಲಿ ಆಥರ್ಿಕ ಬಿಕ್ಕಟ್ಟು ತಂದ ಹಣಕಾಸು ಕಂಪನಿಗಳನ್ನು ಪಾರು ಮಾಡಲು ಸರಕಾರಗಳು ಮಾಡಿದ ಖಚರ್ುಗಳಂತೆ ಈ ತೆರಿಗೆ ರಿಯಾಯ್ತಿಗಳನ್ನು ಕೂಡ ನಮ್ಮ ಸರಕಾರ ಉತ್ತೇಜನೆಗಳು ಎಂದು ಸಮಥರ್ಿಸಿಕೊಳ್ಳುತ್ತದೆ. ಹೀಗೆ ಹಣಕಾಸು ಕೊರತೆಯನ್ನು ಇಳಿಸುವ ಹೊರೆ ಬಡಜನರ ಮೇಲಿದೆ, ಅದಕ್ಕಾಗಿ ಮಿತವ್ಯಯದ ಕ್ರಮಗಳು! ಸೊಂಟಪಟ್ಟಿ ಬಿಗಿದುಕೊಳ್ಳಿ ಎಂದಿದ್ದಾರೆ ಪ್ರಧಾನ ಮಂತ್ರಿಗಳು. ಪೆಟ್ರೋಲಿನ ಬೆಲೆಯನ್ನು ಭಾರಿ ಪ್ರಮಾಣದಲ್ಲಿ ಏರಿಸುವುದರೊಂದಿಗೆ ಈ ಪ್ರಕ್ರಿಯೆ ಆರಂಭವಾಗಿದೆ. ಇದರಿಂದ ಈಗಾಗಲೇ ಏರುತ್ತಿರುವ ಬೆಲೆಗಳೊಂದಿಗೆ ಇದು ಇನ್ನಷ್ಟು ಹಣದುಬ್ಬರದ ಸುರುಳಿಯನ್ನು ಬಿಚ್ಚಬಹುದು ಎಂಬುದರ ಬಗ್ಗೆ ಸರಕಾರಕ್ಕೆ ಏನೇನೂ ಕಾಳಜಿಯೇ ಇದ್ದಂತಿಲ್ಲ. ಕೋಟ್ಯಂತರ ದ್ವಿಚಕ್ರ ವಾಹನಗಳು ಪಟ್ರೋಲಿನಲ್ಲಿಯೇ ನಡೆಯಬೇಕು ತಾನೇ?

ಬಜೆಟ್ ಮೇಲೆ ಚಚರ್ೆಗಳ ಸಾರಾಂಶವನ್ನು ಕೊಡುತ್ತ ಹಣಕಾಸು ಮಸೂದೆಯನ್ನು ಅಂಗೀಕಾರಕ್ಕೆ ಮಂಡಿಸುವಾಗ ಹಣಕಾಸು ಮಂತ್ರಿಗಳು ಕೆಟ್ಟ ಆಥರ್ಿಕ ಸಂದರ್ಭವನ್ನು ಎದುರಿಸಲು ಮಿತವ್ಯಯದ ಸ್ಫೂತರ್ಿದಾಯಕ ಕರೆಯನ್ನು ನೀಡಿದರು. ಬೆಳವಣಿಗೆ ದರ ಇಳಿಯುತ್ತಿದೆ, ರೂಪಾಯಿ ಬೆಲೆ ಗಿರಕಿ ಹೊಡೆಯುತ್ತಿದೆ, ಏರ್ ಇಂಡಿಯಾ ನೆಲ ಕಚ್ಚಿದೆ, ಬೆಲೆಗಳು ನಾಗಾಲೋಟ ಹೂಡಿವೆ ಇತ್ಯಾದಿ, ಇತ್ಯಾದಿ- ನಿಜಕ್ಕೂ ಮಂಕು ಕವಿದ ವಾತಾವರಣ. ಇದಕ್ಕಿರುವ ಪರಿಹಾರ ಒಂದೇ- ಹಸಿದವರು ಹಸಿದಿರಬೇಕು, ಶ್ರೀಮಂತರ ಹೊಲಸು, ದುಂದು ವೆಚ್ಚಗಳು ಅಬಾಧಿತವಾಗಿ ಏರುತ್ತಲೇ ಇರಬೇಕು!

ಮಿತವ್ಯಯದ ಆಗಮನ
ಎಲ್ಲ ಅಭಿವೃದ್ಧಿ ಹೊಂದಿರುವ ದೇಶಗಳು, ನಿದರ್ಿಷ್ಟವಾಗಿ, ಯುರೋಪಿಯನ್ ಒಕ್ಕೂಟದ ದೇಶಗಳು, ಪ್ರಸಕ್ತ ಹಿಂಜರಿತದ ಕಿಡಿ ಹೊತ್ತಿಸಿದ ಹಣಕಾಸು ಕಾಪರ್ೊರೇಟುಗಳನ್ನೇ ಪಾರು ಮಾಡಲೆಂದು ಅಗಾಧ ಪ್ರಮಾಣದ ಪ್ಯಾಕೇಜುಗಳನ್ನು ಕೊಡಮಾಡಿ ಅದರಿಂದಾದ ಭಾರೀ ಸಾಲಗಳನ್ನು ಎದುರಿಸಲು ಜನಗಳ ಮೇಲೆ ಮಿತವ್ಯಯದ ಕ್ರಮಗಳನ್ನು ಹೇರಿದವು. ಕಾಪರ್ೊರೇಟ್ ದೀವಾಳಿಗಳನ್ನು ಸಾರ್ವಭೌಮ ದೀವಾಳಿಗಳಾಗಿ ಪರಿವತರ್ಿಸಲಾಯಿತು. ಇತ್ತ ಜನಸಾಮಾನ್ಯರ ಮೇಲೆ ಮಿತವ್ಯಯದ ಕ್ರಮಗಳನ್ನು ಭರದಿಂದ ಜಾರಿಗೊಳಿಸುತ್ತಿದ್ದರೆ, ಅತ್ತ ಖಾಸಗಿ ಬ್ಯಾಂಕುಗಳ ಮಾಲಕರು ಸರಕಾರಗಳ ಹಣದಲ್ಲಿ ಪಡೆದ ಪಾರು ಯೋಜನೆಗಳ ಮೂಲಕ ಬಿಲಿಯಗಟ್ಟಲೆ ಬೋನಸುಗಳನ್ನು ಪಡೆಯುತ್ತಿದ್ದಾರೆ. ಈ ರೀತಿ ಹೊರೆಗಳ ವಗರ್ಾವಣೆಯನ್ನು ಅನುಭವಿಸಿರುವ ಜನಗಳು ಚುನಾವಣೆಗಳಲ್ಲಿ ರೊಚ್ಚಿಗೆದ್ದು ಹೊರೆ ಹೇರಿದವರನ್ನು ತಿರಸ್ಕರಿಸುವಂತಾಗಿದೆ, ಪ್ರಸಕ್ತ ಬಿಕ್ಕಟ್ಟು ಯುರೋಪಿಯನ್ ಒಕ್ಕೂಟ ವಿಘಟನೆಯ ಬೆದರಿಕೆಯನ್ನು ಎದುರಿಸುವಂತಾಗಿದೆ.

ಮಿತವ್ಯಯವನ್ನು ಹೇರುವ ಈ ವಿಚಾರ ಈಗ ಭಾರತವನ್ನು ಪ್ರವೇಶಿಸುವ ಮೊದಲು, ಇದುವರೆಗೆ ಯುರೋಪಿನಲ್ಲಿ ಒಂಭತ್ತು ಆಳುವ ಸರಕಾರಗಳನ್ನು ಚುನಾವಣೆಗಳಲ್ಲಿ ಬಲಿ ತೆಗೆದುಕೊಂಡು ಬಂದಿದೆ. ಹೀಗೆ ಇತ್ತೀಚಿನ ಬಲಿಯೆಂದರೆ ಫ್ರಾನ್ಸಿನ ನಿಕೊಲಾಸ್ ಸಾಕರ್ೊಝಿ. ಬಹುಶಃ ಮುಂದಿನ ಸರತಿ ಜರ್ಮನಿಯ ಎಂಜೆಲಾ ಮಕರ್ೆಲ್ ಅವರದ್ದು. ಈ ಯುಪಿಎ-2 ಸರಕಾರ ಮತ್ತು ಮನಮೋಹನ್ ಸಿಂಗ್ ತಮ್ಮ ಆಥರ್ಿಕ ಧೋರಣೆಗಳ ಪ್ರಸಕ್ತ ದಿಕ್ಕನ್ನು ಬದಲಿಸದೇ ಇದ್ದಲ್ಲಿ ಅವರಿಗೂ ಇದೇ ಗತಿ ಬರಬಹುದು.

ಈಗ ಅನುಸರಿಸುತ್ತಿರುವ ಆಥರ್ಿಕ ದಿಕ್ಕಿನ ಬದಲು, ತೆರಿಗೆ ರಿಯಾಯ್ತಿ ಕೊಡುವ ಮೊತ್ತವನ್ನು ಬಿಟ್ಟುಕೊಡದೆ ಸಂಗ್ರಹಿಸಿ, ಅದನ್ನು ಭಾಗಶಃ ಹಣಕಾಸು ಕೊರತೆಯನ್ನು ನೀಗಿಸಲು ಮತ್ತು ಭಾಗಶಃ ಸಾರ್ವಜನಿಕ ಹೂಡಿಕೆಗಳಿಗೆ ಹಣಕಾಸು ಒದಗಿಸಲು ಬಳಸಿದರೆ ಒಂದು ತಾಳಿಕೆಯ ಆರೋಗ್ಯಕರ ಬೆಳವಣಿಗೆಯ ದಿಕ್ಕು ಸಾಧ್ಯವಿದೆ. ಇಂತಹ ಹೂಡಿಕೆಗಳು ಬಹು ಅಗತ್ಯವಾದ ಮೂಲರಚನೆಗಳನ್ನು ಕಟ್ಟಲು ಅವಕಾಶ ಒದಗಿಸುತ್ತಲೇ, ಸಾಕಷ್ಟು ಪ್ರಮಾಣದಲ್ಲಿ ಹೆಚ್ಚುವರಿ ಉದ್ಯೋಗಾವಕಾಶಗಳನ್ನು ನಿಮರ್ಿಸ ಬಲ್ಲವು. ಇದರಿಂದ ಜನಗಳು ತಮ್ಮ ಆದಾಯಗಳನ್ನು ಖಚರ್ು ಮಾಡುತ್ತಿರುವಂತೆ ಒಟ್ಟಾರೆಯಾಗಿ ಆಂತರಿಕ ಬೇಡಿಕೆಗಳು ಏರಿ ಒಂದು ಆರೋಗ್ಯಕರ ಬೆಳವಣಿಗೆಯ ಚಕ್ರಕ್ಕೆ ಚಾಲನೆ ಸಿಗುತ್ತದೆ. ಹೂಡಿಕೆ ಜನತೆಯಲ್ಲಿ ಇರಲಿ, ಕೇವಲ ಶ್ರೀಮಂತರಲ್ಲಿ ಅಲ್ಲ. ಆಮ್ ಆದ್ಮಿಯ ಹೆಸರು ಹೇಳಿ ಬದುಕಿರುವ ಈ ಸರಕಾರ ಜನತೆಯ ಮತ್ತು ದೇಶದ ಹಿತಗಳನ್ನು ಬಲಿಗೊಟ್ಟು ಅಂತರ್ರಾಷ್ಟ್ರೀಯ ಹಣಕಾಸು ಬಂಡವಾಳ ಮತ್ತು ಕಾಪರ್ೊರೇಟ್ ಭಾರತವನ್ನು ತುಷ್ಟೀಕರಿಸಲಿಕ್ಕಾಗಿ ಜನಾದೇಶಕ್ಕೆ ವಿಶ್ವಾಸಘಾತ ಬಗೆಯಲು ಬಿಡಬಾರದು.

0

Donate Janashakthi Media

Leave a Reply

Your email address will not be published. Required fields are marked *