ವಿರೋಧ ಪಕ್ಷವಾಗಿದ್ದಾಗ ಹೋರಾಟ ಹಾರಾಟ, ಅಧಿಕಾರದಲ್ಲಿದ್ದಾಗ ಮೌನಕ್ಕೆ ಶರಣು
ಭಾರತದಲ್ಲಿ ಪೆಟ್ರೋಲ್, ಡಿಸೈಲ್, ಅಡುಗೆ ಅನಿಲ ದರಗಳು ಈ ತಿಂಗಳು ಗಗನಕ್ಕೇರಿ, ಐತಿಹಾಸಿಕ ದಾಖಲೆಯನ್ನು ಸೃಷ್ಟಿ ಮಾಡಿದೆ. 2014 ರಲ್ಲಿ ಎನ್.ಡಿ.ಎ ಅಧಿಕಾರ ವಹಿಸಿಕೊಂಡ ನಂತರ, ಡಿಸೈಲ್, ಪೆಟ್ರೋಲ್ ಮೇಲಿನ ಅಬಕಾರಿ ಸುಂಕವನ್ನು ಐದು ಪಟ್ಟು ಹೆಚ್ಚಿಸುತ್ತಾ ಬಂದಿದೆ. ಪ್ರತಿಪಕ್ಷದಲ್ಲಿದ್ದಾಗ, ಬಿಜೆಪಿ ಪೆಟ್ರೋಲ್ ಮತ್ತು ಡೀಸೆಲ್, ಅಡುಗೆ ಅನಿಲದರ ಹೆಚ್ಚಳವಾದಗ ಕೂಗಾಟ, ಚೀರಾಟ ಜೋರಾಗಿ ನಡೀತಾ ಇತ್ತು. ಈಗ ಅವರದ್ದೆ ಆಡಳಿತ ಇದೆ. ಮೌನಕ್ಕೆ ಶರಣಾಗುವ ಮೂಲಕ ಪೆಟ್ರೋಲ್, ಡಿಸೈಲ್. ಅಡುಗೆ ಅನಿಲ ಎರಿಸುವುದಿಲ್ಲ ಎಂದು ಜನರಿಗೆ ಕೊಟ್ಟ ಮಾತನ್ನು ಉಳಿಸಿಕೊಳ್ಳಲಾಗದೆ, ಮಾತಿಗೆ ತಪ್ಪಿದೆ ಎಂದು ಜನರು ಆಕ್ರೋಶ ವ್ಯಕ್ತಪಡಿಸುತ್ತಿದ್ದಾರೆ.
ಸದ್ಯ ದೇಶದಾದ್ಯಂತ ಪೆಟ್ರೋಲ್, ಡೀಸೆಲ್ ಸಂಬಂಧ ಭಾರೀ ಚರ್ಚೆ ನಡೆಯುತ್ತಿದೆ. ಅದಕ್ಕೆ ಕಾರಣ ಕಳೆದ ಕೆಲವು ದಿನಗಳಿಂದ ಪೆಟ್ರೋಲ್ ದರದಲ್ಲಿನ ಏರಿಕೆ ಹೌದು. ಸದ್ಯ ಮುಂಬಯಿನಲ್ಲಿ ಪೆಟ್ರೋಲ್ ದರ 90ರ ಗಡಿ ದಾಟಿದೆ. ಬೆಂಗಳೂರಿನಲ್ಲೂ ಪ್ರತೀ ಲೀಟರ್ ದರ 86 ದಾಟಿದೆ. ಇನ್ನು ಈ ಪೈಕಿ 54 ರೂ. ತೆರಿಗೆ ಪಾವತಿಸಬೇಕಿದೆ. ಪೆಟ್ರೋಲ್ ದರ ಕಳೆದೊಂದು ತಿಂಗಳಿನಲ್ಲಿ ಲೀಟರ್‌ಗೆ ಸುಮಾರು 3 ರೂ. ಹೆಚ್ಚಳವಾಗಿದೆ. ಬೆಂಗಳೂರಿನಲ್ಲಿ ಇಂದು ಲೀಟರ್ ಪೆಟ್ರೋಲ್ ದರ 86.51 ರೂ. ಇದೆ. ನವೆಂಬರ್ 8ರಂದು 83.69 ರೂ.ನಷ್ಟಿತ್ತು. ಡಿಸಂಬರ್ 14 ರವರೆಗೆ ಸತತವಾಗಿ ಅದು ಏರಿಕೆಯನ್ನು ಕಂಡಿದೆ.
2014 ರಲ್ಲಿ ಪೆಟ್ರೋಲ್ ಮೇಲಿನ ಅಬಕಾರಿ ಸುಂಕ 9. 48 ಪೈಸೆ ಇತ್ತು. ಈಗ 32 .98 ಪೈಸೆ ಏರಿಕೆಯನ್ನು ಮಾಡಲಾಗಿದೆ ಅಂದರೆ 348% ರಷ್ಟು ಹೆಚ್ಚಾಗಿದೆ. ಡಿಸೈಲ್ ಮೇಲಿನ ಅಬಕಾರಿ ಸುಂಕ 2014 ರಲ್ಲಿ 3.56 ಪೈಸೆ ಇತ್ತು ಈಗ 31. 83 ಪೈಸೆಗೆ ಏರಿಸಲಾಗಿದೆ. ಅಂದರೆ ಶೇ 894 ರಷ್ಟು ಹೆಚ್ಚಾಗಿದೆ. 1ಲೀಟರ್ ಪೆಟ್ರೋಲ್ ಗೆ 54 ರೂ.ಗಳಷ್ಟು ತೆರಿಗೆಯನ್ನೇ ಪಾವತಿ ಮಾಡಲಾಗುತ್ತಿದೆ. ಹೀಗಿದ್ದರೂ, ವಾಸ್ತವವಾಗಿ ಪ್ರತಿ ಲೀಟರ್ ಪೆಟ್ರೋಲ್‌ನ ಇತ್ತೀಚಿನ ಮೂಲ ದರ 31.78 ರೂ. ಹಾಗೂ ಡೀಸೆಲ್‌ನ ಮೂಲ ದರ 32.98 ರೂ. ಮಾತ್ರ ಎಂದು ಮಾರುಕಟ್ಟೆ ತಜ್ಞರು ಹೇಳುತ್ತಿದ್ದಾರೆ. 2014 ರಲ್ಲಿ ಅಂತರಾಷ್ಟ್ರೀಯ ಮಾರುಕಟ್ಟೆ ಬೆಲೆ ಪ್ರತಿ ಬ್ಯಾರಲ್ ಗೆ 120 ಡಾಲರ್ ಗಿಂತ ಹೆಚ್ಚಿತ್ತು. ಈಗ ಅದು 40 ಡಾಲರ್ ಗೆ ಕುಸಿದಿದೆ. ಆದರೂ ಪೆಟ್ರೋಲ್ ದರ ಹೆಚ್ಚಳ ಮಾಡಿರುವುದು ಯಾಕೆ ಎಂಬ ಪ್ರಶ್ನೆ ಸಹಜವಾಗಿ ಜನರನ್ನು ಕಾಡುತ್ತಿದೆ.
ಪೆಟ್ರೋಲ್ ಮತ್ತು ಡೀಸೆಲ್ ದರಗಳ ಮೇಲೆ ರಾಜ್ಯಗಳಲ್ಲಿ ವ್ಯಾಟ್ ಅಥವಾ ಸೇಲ್ಸ್ ಟ್ಯಾಕ್ಸ್, ಕೇಂದ್ರೀಯ ತೆರಿಗೆಗೆಗಳ ಭಾರಿ ಹೊರೆಯ ಒತ್ತಡವನ್ನು ಬಳಕೆದಾರರು ಹೊತ್ತಕೊಳ್ಳಬೇಕಾಗಿದೆ. ಅಂತಾರಾಷ್ಟ್ರೀಯ ಕಚ್ಚಾ ತೈಲದ ದರದ ಏರಿಳಿತಗಳಿಗಿಂತಲೂ, ಸರಕಾರಗಳು ವಿಧಿಸುವ ತೆರಿಗೆಗಳೇ ಪೆಟ್ರೋಲ್ ದರವನ್ನು ಪ್ರತಿ ಲೀಟರ್ ಗೆ 90 ರೂ.ಗಳ ಆಸುಪಾಸಿಗೆ ತಂದಿದೆ. ಕೇಂದ್ರ ಹಾಗೂ ರಾಜ್ಯ ಸರಕಾರಗಳ ಪೈಕಿ ರಾಜ್ಯ ಸರಕಾರಗಳ ಪಾಲಿನ ತೆರಿಗೆಯೇ ಹೆಚ್ಚು. ಆದರೆ ತೆರಿಗೆ ಆದಾಯ ಸಂಗ್ರಹಕ್ಕಾಗಿ ರಾಜ್ಯಗಳು ಪೆಟ್ರೋಲ್, ಡೀಸೆಲ್ ಅನ್ನು ಅವಲಂಬಿಸಿವೆ ಎನ್ನವಂತದ್ದು ಮುಖ್ಯವಾಗಿರುವ ವಿಚಾರವಾಗಿದೆ. ಪೆಟ್ರೋಲ್ ಡಿಸೈಲ್ ಹೆಚ್ಚಳದಿಂದಾಗಿ ಅಗತ್ಯ ವಸ್ತುಗಳ ಬೆಲೆ ಹೆಚ್ಚಳವಾಗಲಿದೆ ಎಂದು ವಕೀಲರಾದರ ಹುಳ್ಳಿ ಉಮೇಶ್ ಆರೋಪ ಮಾಡಿದ್ದಾರೆ.
ಪೆಟ್ರೋಲ್, ಡಿಸೈಲ್ ಹೆಚ್ಚಳಕ್ಕೆ ಅಟೋರಿಕ್ಷಾ ಮತ್ತು ಟ್ಯಾಕ್ಸಿ ಮಾಲೀಕರು ಖಂಡನೆಯನ್ನು ಮಾಡಿದ್ದು, ಸರಕಾರ ತನ್ನ ಆದಾಯಕ್ಕಾಗಿ ಪೆಟ್ರೋಲ್, ಡಿಸೈಲ್ ಹೆಚ್ಚಳ ಮಾಡಿರುವಂತದ್ದು ಸರಿಯಾದ ಕ್ರಮವಲ್ಲ ಎಂದು ಆರೋಪಿಸಿದ್ದಾರೆ.
ಕೇಂದ್ರ ಸರ್ಕಾರವು ಮತ್ತೊಮ್ಮೆ ಎಲ್ಪಿಜಿ ದರವನ್ನು ಏರಿಕೆ ಮಾಡಿದ್ದು, ಪ್ರತಿ ಗೃಹ ಬಳಕೆಯ ಎಲ್ಪಿಜಿ ಸಿಲಿಂಡರ್ಗೆ 50 ರೂಪಾಯಿ ಹೆಚ್ಚಳವಾಗಿದೆ. ಒಂದೆ ತಿಂಗಳಲ್ಲಿ ಎರಡು ಬಾರಿ ದರವನ್ನು ಹೆಚ್ಚಿಸಲಾಗಿದೆ. ಇಂಡಿಯನ್ ಆಯಿಲ್ ಕಾರ್ಪೊರೇಷನ್ ಪ್ರಕಾರ ಸಬ್ಸಿಡಿ ರಹಿತ ಸಿಲಿಂಡರ್ ಬೆಲೆ ಬೆಂಗಳೂರಿನಲ್ಲಿ 697 ರೂಪಾಯಿಗೆ ಏರಿಕೆಯಾಗಿದೆ. ನವೆಂಬರ್ ತಿಂಗಳಿಗೆ ಹೋಲಿಸಿದರೆ 100 ರೂ ಹೆಚ್ಚಳವಾಗಿದೆ. ಇನ್ನು ರಾಷ್ಟ್ರ ರಾಜಧಾನಿ ದೆಹಲಿ ಹಾಗೂ ಮುಂಬೈನಲ್ಲಿ 694 ರೂಪಾಯಿಗೆ ಏರಿಕೆ ಮಾಡಲಾಗಿದೆ. 5 ಕೆಜಿ ಸಿಲಿಂಡರ್ ಬೆಲೆ 18 ರೂ. ಹೆಚ್ಚಳವಾಗಿದೆ. ಪೆಟ್ರೋಲ್ ಮತ್ತು ಡೀಸೆಲ್ ದರ ಹೆಚ್ಚಳದ ಬೆನ್ನಲ್ಲೇ ದಾಖಲೆಯ ಪ್ರಮಾಣದಲ್ಲಿ ಎಲ್ಪಿಜಿ ಸಿಲಿಂಡರ್ ದರ ಏರಿಕೆ ಆಗಿದೆ ಎಂದು ಹೇಳಲಾಗುತ್ತಿದೆ.
ಸಬ್ಸಿಡಿ ಬಗ್ಗೆ ಸಾಕಷ್ಟು ಗೊಂದಲ ಈಗ ಎದ್ದಿದೆ. ಸಬ್ಸಿಡಿಯುಕ್ತ ಅಡುಗೆ ಅನಿಲದ ದರ ಏರಿದ್ದರೂ, ಸಬ್ಸಿಡಿ ರೂಪದಲ್ಲಿ ಗ್ರಾಹಕರಿಗೆ ಸಿಗಲಿದೆಯೇ ಎಂಬುದು ಇನ್ನೂ ಸ್ಪಷ್ಟವಾಗಿಲ್ಲ. ಕಳೆದ 6 ತಿಂಗಳಿನಿಂದ ಎಲ್ಪಿಜಿ ಸಬ್ಸಿಡಿ ವಿತರಣೆಯಾಗುತ್ತಿರಲಿಲ್ಲ. ಸಬ್ಸಿಡಿ ಮೊತ್ತವನ್ನು ಗ್ರಾಹಕರು ಸಿಲಿಂಡರ್ ಖರೀದಿಸಿದ ನಂತರ ಅವರ ಬ್ಯಾಂಕ್ ಖಾತೆಗೆ ಜಮೆ ಮಾಡಲಾಗುತ್ತಿತ್ತು. ಕಳೆದ ಮೇ ನಂತರ ಕೋವಿಡ್-19 ಬಿಕ್ಕಟ್ಟಿನ ಪರಿಣಾಮ ಅಂತಾರಾಷ್ಟ್ರೀಯ ಕಚ್ಚಾ ತೈಲದ ದರ ಸತತ ಕುಸಿದಿತ್ತು. ಇದರ ಪರಿಣಾಮ ಕಚ್ಚಾ ತೈಲದ ಖರೀದಿ ದರವು ಮಾರುಕಟ್ಟೆ ದರಕ್ಕೆ ಇಳಿಮುಖವಾಗಿತ್ತು. ಹೀಗಾಗಿ ಎಲ್ಪಿಜಿ ಬಳಕೆದಾರರಿಗೆ ಯಾವುದೇ ಸಬ್ಸಿಡಿಯನ್ನು ಸರಕಾರ ನೀಡಿರಲಿಲ್ಲ. ಸರಕಾರದ ಈ ನಿರ್ಧಾರದಿಂದಾಗಿ ನಮಗೆ ದಿಕ್ಕು ಕಾಣದಂತಾಗಿದೆ ಎಂದು ಸಾವಿತ್ರಮ್ಮನವರು ಆರೋಪಿಸಿದ್ದಾರೆ.
2014 ರ ಚುನಾವಣಾ ಸಮಯದಲ್ಲಿ ಪೆಟ್ರೊಲ್, ಡಿಸೈಲ್, ಅಡಿಗೆ ಅನಿಲ ದರ ಏರಿಕೆಯಾದಾಗ ಬಿಜೆಪಿ ಪ್ರತಿಭಟನೆಯನ್ನು ನಡೆಸಿತ್ತು. ತಾನು ಅಧಿಕಾರಕ್ಕೆ ಬಂದರೆ ಯಾವುದೇ ಕಾರಣಕ್ಕೂ ದರ ಹೆಚ್ಚಿಸುವುದಿಲ್ಲ ಎಂದು ಹೇಳಿತ್ತು. ಆರ್ಥಿಕ ಅಭಿವೃದ್ಧಿ ಮೂಲಕ ತೈಲ ಬೆಲೆಯನ್ನು ಕಡಿಮೆ ಮಾಡುವುದಾಗಿ ಬಿಜೆಪಿ ಭಕ್ತರು ಎಲ್ಲ ಕಡೆ ಪ್ರಚಾರ ಮಾಡುತ್ತಿದ್ದರು. ಈಗ ಅವರೆ ಅಧಿಕಾರದಲ್ಲಿ ಇದ್ದಾರೆ. ಇದರ ಬಗ್ಗೆ ಮೌನ ಮುರಿಯದೆ ದ್ರೊಹ ಮಾಡುತ್ತಿದ್ದಾರೆ ಎಂದು ಸಾರ್ವಜನಿಕರು ಸಾಮಾಜಿಕ ಜಾಲತಾಣದಲ್ಲಿ ಪೋಸ್ಟ್ ಗಳನ್ನು ಮಾಡುತ್ತಿದ್ದಾರೆ.
ಕೇಂದ್ರ ಸರಕಾರ ಇನ್ನಾದರೂ ಎಚ್ಚೆತ್ತುಕೊಳ್ಳಬೇಕು, ಪೆಟ್ರೋಲಿಯಂ ಉತ್ಪನ್ನಗಳ ಬೆಲೆಯನ್ನು ಕಡಿಮೆ ಮಾಡಬೇಕು, ಖಾಸಗಿ ಕಂಪನಿಗಳ ಹಿಡಿತವನ್ನು ತಪ್ಪಿಸಿ ಸರಕಾರಿ ಸ್ವಾಮ್ಯದ ಪೆಟ್ರೋಲಿಯಂ ಕಂಪನಿಗಳನ್ನು ಬಲಪಡಿಸುವ ನಿಟ್ಟಿನಲ್ಲಿ ಮುಂದಾಗಬೇಕಿದೆ. ಹೆಚ್ಚಿಸಿರುವ ಅಬಕಾರಿ ಸುಂಕವನ್ನು ಕಡಿತಗೊಳಿಸಲು ಮುಂದಾಗಬೇಕಿದೆ.