ಪರಿಣಾಮಕಾರಿ ಲೋಕಪಾಲ ವ್ಯವಸ್ಥೆಯೊಂದಿಗೆ ಆಥರ್ಿಕ ಧೋರಣೆಯ ದಿಕ್ಕು ಬದಲಾಯಿಸಲೂ ಹೋರಾಟ ಅಗತ್ಯ

‘ಪೀಪಲ್ಸ್ ಡೆಮಾಕ್ರೆಸಿ’ ವಾರಪತ್ರಿಕೆಯ ಡಿಸೆಂಬರ್ 22ರ, ಸಂಚಿಕೆಯ ಸಂಪಾದಕೀಯ

ಸಂಪುಟ – 06, ಸಂಚಿಕೆ 01, ಜನವರಿ, 01, 2012

6

ತ್ವರಿತವಾಗಿ ಹದಗೆಡುತ್ತಿರುವ ಆಥರ್ಿಕ ಸನ್ನಿವೇಶದಲ್ಲಿ ಯುಪಿಎ-2 ಸರಕಾರ ತನ್ನ ಗಮನವನ್ನು ನಮ್ಮ ಜನಗಳ ಕೊಳ್ಳುವ ಸಾಮಥ್ರ್ಯವನ್ನು ವಿಸ್ತರಿಸುವತ್ತ ಕೇಂದ್ರೀಕರಿಸಿ ಆಂತರಿಕ ಬೇಡಿಕೆಯನ್ನು ಹೆಚ್ಚಿಸುವ ಬದಲು, ಅಂತರ್ರಾಷ್ಟ್ರೀಯ ಹಣಕಾಸು ಬಂಡವಾಳದ ಮತ್ತು ಕಾಪರ್ೊರೇಟ್ ಭಾರತದ ಗರಿಷ್ಟ ಲಾಭಗಳಿಗೆ ಅವಕಾಶಗಳನ್ನು ವಿಸ್ತರಿಸುವ ತವಕದಲ್ಲಿ ಮುಂದಿನ ಪೀಳಿಗೆಯ ಸುಧಾರಣೆಗಳ ನಿಟ್ಟಿನಲ್ಲಿ ಸಾಗಿದೆ. ಅದಕ್ಕೆ ಬಿಜೆಪಿಯ ಸಂಪೂರ್ಣ ಸಹಕಾರವೂ ಇದೆ. ಆದ್ದರಿಂದ ಲೋಕಪಾಲದ ಸ್ಥಾಪನೆಗೆ ಒಂದು ಪರಿಣಾಮಕಾರಿ ಶಾಸನವನ್ನು ಕೈಗೊಳ್ಳುವಂತೆ ಮತ್ತು ಆ ಬೃಹತ್ ಪ್ರಮಾಣದ ಹಣವನ್ನು ಜನತೆಯ ಕಲ್ಯಾಣದತ್ತ ತಿರುಗಿಸುವಂತೆ ಯುಪಿಎ ಸರಕಾರದ ಮೇಲೆ ಒತ್ತಡಗಳನ್ನು ಮುಂದುವರೆಸುತ್ತಲೇ, ಸರಕಾರ ತನ್ನ ಸದ್ಯದ ಅಥರ್ಿಕ ಸುಧಾರಣೆಗಳ ದಿಕ್ಕನ್ನು ಬದಲಿಸುವಂತೆ ಕೂಡ ಒತ್ತಡಗಳನ್ನು ಹಾಕುವುದನ್ನು ಮರೆತು ಬಿಡಬಾರದು.

ಉನ್ನತ ಸ್ಥಾನಗಳಲ್ಲಿ ಭ್ರಷ್ಟಾಚಾರವನ್ನು ಎದುರಿಸುವ ಕ್ರಿಯೆಯನ್ನು ಆರಂಭಿಸಲಿಕ್ಕಾಗಿ ಲೋಕಪಾಲ ಶಾಸನವನ್ನು ತರಬೇಕೆಂಬ ತುತರ್ಿನ ಸಹಜ ಕಾಳಜಿಯ ನಡುವೆ, ಈಗಿರುವ ಗಂಭೀರ ಆಥರ್ಿಕ ಸನ್ನಿವೇಶವನ್ನು ಮತ್ತು ವಿಶಾಲ ಭಾರತೀಯ ಜನಸಮೂಹಗಳನ್ನು ಇನ್ನಷ್ಟು ಶಕ್ತಿಗುಂದಿಸಲಿರುವ ಒಂದು ತೀಕ್ಷ್ಣ ಬಿಕ್ಕಟ್ಟಿನ ಮುನ್ನೆಚ್ಚರಿಕೆಗಳನ್ನು ನಿರ್ಲಕ್ಷಿಸಲು ಸಾಧ್ಯವಿಲ್ಲ.

ಯುಪಿಎ-2 ಸರಕಾರ, ತ್ವರಿತವಾಗಿ ಹದಗೆಡುತ್ತಿರುವ ಆಥರ್ಿಕ ಸನ್ನಿವೇಶದಲ್ಲಿ ಕಾಪರ್ೊರೇಟ್ ಭಾರತದ ಮಂದಿಯಲ್ಲಿ ತುಸು ವಿಶ್ವಾಸ ತುಂಬುವ ಪ್ರಯತ್ನ ನಡೆಸಲು ತನ್ನ ಸಂಕಟ ಹರಣ ಹಣಕಾಸು ಮಂತ್ರಿಗಳನ್ನು ಹಚ್ಚಿತು. ಕೈಗಾರಿಕಾ ಉತ್ಪಾದನೆಯ ಸೂಚ್ಯಂಕ ಅಕ್ಟೋಬರ್ 2011ರಲ್ಲಿ ಸೊನ್ನೆಯ ಕೆಳಗೆ 5.1 ಶೇ.ಕ್ಕೆ ಇಳಿದಿದೆ. ರೂಪಾಯಿ ಮೌಲ್ಯ ಇದುವರೆಗಿನ ಚಾರಿತ್ರಿಕ ದಾಖಲೆಯಾದ ಡಾಲರಿಗೆ 54ರೂ.ನ್ನು ಕೂಡ ಬೇಧಿಸಿ ಕೆಳಗೆ ಕುಸಿಯುತ್ತಲೇ ಇದೆ. ರಫ್ತುಗಳು, ರೂಪಾಯಿ ಬೆಲೆ ಇಳಿಯುತ್ತಿದ್ದರೂ, ಅದರ ಸಹಜ ಪ್ರಯೋಜನ ಪಡೆಯಲಾರದೆ ವಿಪರೀತ ಇಳಿಕೆ ತೋರುತ್ತಿವೆ. ಜಿಡಿಪಿ ಬೆಳವಣಿಗೆಯ ಅಂದಾಜನ್ನು ತೀವ್ರವಾಗಿ ಕೆಳಗಿಳಿಸಲಾಗುತ್ತಿದೆ.

ರಾಜ್ಯ ಸಭೆಯಲ್ಲಿ ಇನ್ನೂ 63,180 ಕೋಟಿ ರೂ.ಗಳ ಹೆಚ್ಚಿನ ಹಣವನ್ನು ಮಂಜೂರು ಮಾಡಿದ ಹಣ ವಿನಿಯೋಗ ಮಸೂದೆಯ ಮೇಲಿನ ಚಚರ್ೆಗೆ ಉತ್ತರಿಸುತ್ತ ಹಣಕಾಸು ಮಂತ್ರಿಗಳು ಭಾರತಕ್ಕೆ ಬಿಕ್ಕಟ್ಟನ್ನು ಮೀರಿ ನಿಂತು ಮತ್ತೆ ಪುಟಿದೇಳುವ ಸಾಮಥ್ರ್ಯ ಇದೆ ಎಂದರು. ಭಾರತದ ಆಥರ್ಿಕತೆ ಮತ್ತೆ ಬೆಳವಣಿಗೆಯ ಹಾದಿಗೆ ತ್ವರಿತವಾಗಿ ಮರಳುವಂತೆ ಮಾಡುವ ಪ್ರಮುಖ ಅಂಶವೆಂದರೆ ಇನ್ನಷ್ಟು ಹಣಕಾಸು ಉದಾರೀಕರಣದ ಸುಧಾರಣೆಗಳ ಮೇಲೆ ಒಮ್ಮತವನ್ನು ಕಟ್ಟಿ ಬೆಳೆಸುವುದು ಎಂದು ಅವರು ಒತ್ತಿ ಹೇಳಿದರು. ಹೀಗೆ ಹೇಳುವಾಗ ಅವರು ಇಂತಹ ಕ್ರಮಗಳಿಗೆ ಬೆಂಬಲ ಕೊಡಿ ಎಂದು ಪ್ರಧಾನ ಪ್ರತಿಪಕ್ಷ ಬಿಜೆಪಿಗೆ ಮನವಿ ಮಾಡಿಕೊಳ್ಳುತ್ತಿದ್ದಾರೆಂಬುದು ಸ್ಪಷ್ಟ. ಈ ಸುಧಾರಣೆಗಳಲ್ಲಿ ಹಲವು ಹಿಂದಿನ ಬಿಜೆಪಿ ನೇತೃತ್ವದ ಎನ್ಡಿಎ ಸರಕಾರ ಯೋಚಿಸುತ್ತಿದ್ದವುಗಳೇ ಎಂಬುದನ್ನು ನೆನಪಿಸುವಲ್ಲಿಯೂ ಅವರು ವಿಳಂಬ ಮಾಡಲಿಲ್ಲ.

ಬಿಜೆಪಿಯಿಂದಲೂ ಇಂತಹ ಸಹಕಾರ ತಕ್ಷಣ ಹೊಮ್ಮಿಬರುತ್ತಿದೆ ಎಂಬುದೂ ಖಚಿತ. ರಾಜ್ಯಸಭೆಯಲ್ಲಿ ಎಲ್ಐಸಿ(ತಿದ್ದುಪಡಿ) ಮಸೂದೆಯಲ್ಲಿ ಸಾರ್ವಜನಿಕ ವಲಯದ ಜೀವ ವಿಮೆಯಲ್ಲಿ ಪಾಲಿಸಿದಾರರಿಗೆ ಹಂಚುವ ಲಾಭಾಂಶವನ್ನು 95ಶೇ.ದಿಂದ 90ಶೇ.ಕ್ಕೆ ಇಳಿಸುವ ಅಂಶಕ್ಕೆ ಸಿಪಿಐ(ಎಂ) ಮಂಡಿಸಿದ ತಿದ್ದುಪಡಿಯ ಮೇಲಿನ ಮತದಾನದಲ್ಲಿ ಬಿಜೆಪಿ ಯುಪಿಎ-2 ಸರಕಾರದ ರಕ್ಷಣೆಗೆ ಬಂದಿರದಿದ್ದರೆ ಅದು ಸೋತು ಹೋಗುತ್ತಿತ್ತು. ಕಾಂಗ್ರೆಸ್ ಮತ್ತು ಬಿಜೆಪಿ ಎರಡೂ ಪೆನ್ಶನ್ ನಿಧಿಯ ಖಾಸಗೀಕರಣ ಮತ್ತು ಇನ್ನಷ್ಟು ಬ್ಯಾಂಕಿಂಗ್ ಸುಧಾರಣೆಗಳನ್ನು ಕುರಿತ ಶಾಸನಗಳಲ್ಲಿ ಪರಸ್ಪರ ಸಹಕರಿಸಲು ಒಪ್ಪಿಕೊಂಡಿವೆ.

ಎಲ್ಲವೂ ಕಾಪರ್ೊರೇಟುಗಳಿಗಾಗಿ
ಈ ಸುಧಾರಣೆಗಳ ಉದ್ದೇಶ ಭಾರತಕ್ಕೆ ಬಂದು ಹೆಚ್ಚಿನ ಲಾಭ ಗಿಟ್ಟಿಸಲು ಅಂತರ್ರಾಷ್ಟ್ರೀಯ ಹೂಡಿಕೆದಾರರು ಮತ್ತು ವಿದೇಶಿ ಹಣಕಾಸು ಬಂಡವಾಳವನ್ನು ಓಲೈಸುವುದು. ಈ ರೀತಿ ಹರಿದು ಬರುವ ವಿದೇಶಿ ಬಂಡವಾಳ ಭಾರತದ ಹಣಕಾಸು ಬ್ಯಾಲೆನ್ಸ್ ಶೀಟುಗಳನ್ನು ಸುಂದರಗೊಳಿಸುತ್ತವೆ, ಕಾಪರ್ೊರೇಟ್ ಭಾರತದ ಮಂದಿಯ ವಿಶ್ವಾಸವನ್ನು ಮತ್ತು ಶೇರು ಸೂಚ್ಯಂಕವನ್ನು ಹೆಚ್ಚಿಸುತ್ತದೆ ಎಂಬುದು ಇವರ ನಿರೀಕ್ಷೆ. ಇದು ಫೀಲ್ ಗುಡ್ ಅಂಶವನ್ನು ಅಂದರೆ ಚೆನ್ನಾಗಿದೆ ಎಂಬ ಭಾವನೆಯನ್ನು ಉಂಟು ಮಾಡುತ್ತದಂತೆ.

ಆದರೇನು ಮಾಡುವುದು, ಇವೆಲ್ಲ ಆಮ್ ಆದ್ಮಿಯ ಜೀವನಾಧಾರವನ್ನು ಉತ್ತಮ ಪಡಿಸುವಲ್ಲಿ ಯಾವ ಉಪಯೋಗಕ್ಕೂ ಬರುವಂತದ್ದಲ್ಲ. ತದ್ವಿರುದ್ಧವಾಗಿ, ಈ ರೀತಿ ಅಂತರ್ರಾಷ್ಟ್ರೀಯ ಹಣಕಾಸು ಬಂಡವಾಳಕ್ಕೆ ತನ್ನ ಲಾಭವನ್ನು ಗರಿಷ್ಟಗೊಳಸಿಕೊಳ್ಳಲು ಬಹಳಷ್ಟು ದಾರಿಗಳ ಸೃಷ್ಟಿ ನಮ್ಮ ವಿಶಾಲ ಜನಸಮೂಹಗಳನ್ನು ಇನ್ನಷ್ಟು ಬಡವರಾಗಿಸುತ್ತದಷ್ಟೇ.

ಅಲ್ಲದೆ, ವೆಚ್ಚದ ಬಾಬ್ತುಗಳ ಮಟ್ಟ ಏರುತ್ತಿರುವುದರಿಂದ ಹಣಕಾಸು ಕೊರತೆ ಹೆಚ್ಚುತ್ತಿದ್ದು ಬಜೆಟ್ ಹಾಕಿರುವ ಮಿತಿಯನ್ನು ದಾಟುತ್ತಿರುವುದರಿಂದ ಆತಂಕಗೊಂಡಿರುವ ಸರಕಾರ, ಇಂತಹ ಸುಧಾರಣೆಗಳಿಂದ ಈ ಪ್ರವೃತ್ತಿಗೆ ತಡೆ ಬೀಳುತ್ತದೆ ಎಂಬ ನಿರೀಕ್ಷೆ ಇಟ್ಟುಕೊಂಡಿದೆ. ವಿದೇಶಿ ಬಂಡವಾಳದ ಹರಿವು ಜಮಾ-ಖಚರ್ು ಪುಸ್ತಕಗಳಲ್ಲಿ ಒಂದು ಆರೋಗ್ಯಕರ ಚಿತ್ರವನ್ನು ಕೊಡಬಹುದು, ಆದರೆ ಅದು ನಮ್ಮ ಆಥರ್ಿಕದ ಮೂಲಭೂತ ಅಂಶಗಳಿಗೆ ಹಾನಿಯುಂಟು ಮಾಡುತ್ತದೆ. ಈ ಸುಧಾರಣೆಗಳು ಶೇರು ಸೂಚ್ಯಂಕಗಳನ್ನು ಮೇಲಕ್ಕೆತ್ತಬಹುದು. ಆದರೆ ಇದು ಮಾರುಕಟ್ಟೆಯಲ್ಲಿ ಬಂಡವಾಳ ತೊಡಗಿಸಿ ಹೆಚ್ಚಿನ ಲಾಭ ಗಿಟ್ಟಿಸಲು ಕಾಪರ್ೊರೇಟ್ ಭಾರತಕ್ಕೆ ಅವಕಾಶ ನೀಡಿದರೂ, ಬಹುಪಾಲು ಜನಸಮೂಹಗಳ ಜೀವನಾಧಾರವನ್ನೇನೂ ಉತ್ತಮ ಪಡಿಸದು.

ಸಬ್ಸಿಡಿ ಜನರಿಗಲ್ಲ, ಜನರಿಂದಲೇ
ಸಂಸತ್ತಿನಿಂದ ಹೆಚ್ಚಿನ ಖಚರ್ುಗಳಿಗೆ ಮಂಜೂರಾತಿ ಕೇಳುತ್ತ ಹಣಕಾಸು ಮಂತ್ರಿಗಳು ಮುಖ್ಯವಾಗಿ ದೇಶದಲ್ಲಿ ಇಂಧನಗಳ ಆಮದು ಖಚರ್ು ಮತ್ತು ಬೆಳೆಯುತ್ತಿರುವ ಸಬ್ಸಿಡಿಗಳ ಒತ್ತಡಗಳ ಬಗ್ಗೆ ಮಾತಾಡಿದರು. ವಾಷರ್ಿಕ ಸಬ್ಸಿಡಿ ಖಚರ್ುಗಳು ಒಂದು ಲಕ್ಷ ಕೋಟಿ ರೂ.ಗಳನ್ನೂ ದಾಟುತ್ತಿದೆ ಎಂದು ಗೋಳಾಡಿದರು. ತಮಾಷೆಯೆಂದರೆ, ಕೇಂದ್ರ ಖಜಾನೆಗೆ ಈ ವರ್ಷ ಇದುವರೆಗೆ ಪೆಟ್ರೋಲಿಯಂ ಉತ್ಪನ್ನಗಳ ಮೇಲೆ ತೆರಿಗೆಗಳ ರೂಪದಲ್ಲಿ 1.3 ಲಕ್ಷ ಕೋಟಿ ರೂ.ಗಳ ಆದಾಯವನ್ನು ಬಾಚಿಕೊಂಡಿರುವ ಬಗ್ಗೆ ಸಂಸತ್ತಿನಲ್ಲಿ ಪ್ರಶ್ನಿಸಿದಾಗ ಅವರು ಮೌನವಾಗಿದ್ದರು, ವಾಸ್ತವವಾಗಿ ಸ್ಪಷ್ಟೀಕರಣ ನೀಡಲು ನಿರಾಕರಿಸಿದರು. ಅಂದರೆ ಇದು ಬಡವರಿಗೆ ನೀಡುವ ಸಬ್ಸಿಡಿಗಳನ್ನೂ ಮೀರುವ ಆದಾಯ. ಇವುಗಳಲ್ಲಿ ಬಹುಪಾಲು ಪೆಟ್ರೋಲಿಯಂ ಉತ್ಪನ್ನಗಳ ದರಗಳನ್ನು ಏರಿಸಿರುವುದರಿಂದ ಗಳಿಸಿರುವ ಆದಾಯ; ಇವುಗಳ ಹೊರೆಗಳನ್ನು ಅಂತಿಮವಾಗಿ ಜನರೇ ಹೊರಬೇಕು. ಅಂದರೆ, ಸರಕಾರ ಜನರಿಗೆ ಸಬ್ಸಿಡಿ ಕೊಡುವ ಬದಲು, ನಿಜವಾಗಿ, ಜನರೇ ಸರಕಾರಕ್ಕೆ 30,000 ಕೋಟಿ ರೂ.ಗಳಷ್ಟು ಸಬ್ಸಿಡಿ ಕೊಡುತ್ತಿದ್ದರೆಂದಾಗುತ್ತದೆ.

ಈ ಮುಂದಿನ ಪೀಳಿಗೆಯ ಸುಧಾರಣೆಗಳ ಮೂಲಕ ಹೆಚ್ಚಿನ ಲಾಭಗಳಿಂದಾಗಿ ಕಾಪರ್ೊರೇಟ್ ಭಾರತದ ಮಂದಿಯ ಕೈಗಳಲ್ಲಿ ಶೇಖರಣೆಯಾಗುವ ಬಂಡವಾಳವನ್ನು ಅವರು ಹೂಡಿಕೆಗಳಿಗೆ ಬಳಸುತ್ತಾರೆ, ಅದು ಜಿಡಿಪಿ ವೃದ್ಧಿಗೆ ಉತ್ತೇಜನೆ ಕೊಡುತ್ತದೆ ಎಂಬ ನಿರೀಕ್ಷೆ ಸರಕಾರದ್ದು. ಆದರೆ ಇದು, ಇಂತಹ ಹೂಡಿಕೆಗಳು ತಂತಾನೇ ಬೆಳವಣಿಗೆಗೆ ಹಾದಿ ಮಾಡಿಕೊಡುತ್ತವೆ ಎಂಬ ತಪ್ಪು ಕಲ್ಪನೆಯ ಮೇಲೆ ನಿಂತಿದೆ. ಇಂತಹ ಹೂಡಿಕೆಗಳಿಂದ ಉತ್ಪಾದನೆಯಾದದ್ದು ಮಾರಾಟವಾದರೆ ಮಾತ್ರವೇ ಬೆಳವಣಿಗೆ ಸಂಭವಿಸುತ್ತದೆ ಎಂಬ ಸಂಗತಿಯನ್ನು ಗಮನಿಸದಿರುವುದೇ ಇದರಲ್ಲಿರುವ ಪ್ರಮುಖ ತಪ್ಪು. ಆದರೆ ಆ ಉತ್ಪಾದನೆಗಳು ಮಾರಾಟವಾಗಬೇಕಾದರೆ ಅವಕ್ಕೆ ಬೇಡಿಕೆ ಉಂಟಾಗಬೇಕು. ಅದಕ್ಕೆ ಜನಗಳ ಕೈಗಳಲ್ಲಿ ಕೊಳ್ಳುವ ಸಾಮಥ್ರ್ಯ ಬರಬೇಕು.

ಆದರೆ ಜನಗಳ ಈ ಕೊಳ್ಳುವ ಸಾಮಥ್ರ್ಯವೇ, ಎಲ್ಲ ಜೀವನಾವಶ್ಯಕ ಸರಕುಗಳ ಬೆಲೆಗಳ ನಿರಂತರ ಏರಿಕೆಗಳಿಂದಾಗಿ ತೀವ್ರವಾಗಿ ಕುಸಿಯುತ್ತಿದೆ. ಆಂತರಿಕ ಬೇಡಿಕೆ ಈ ರೀತಿ ಕುಂಠಿತವಾಗಿರುವುದೇ ಸರಕು ಉತ್ಪಾದನೆಯ ಬೆಳವಣಿಗೆ ದರದಲ್ಲಿ, ಮತ್ತು ಅದರ ಪರಿಣಾಮವಾಗಿ ಕೈಗಾರಿಕಾ ಉತ್ಪಾದನೆಯ ಸೂಚ್ಯಂಕದಲ್ಲಿ ತೀವ್ರ ಇಳಿಕೆಗೆ ಬಹುಮಟ್ಟಿಗೆ ಕಾರಣ.

ಏಕೆ ಈ ಬಿಕ್ಕಟ್ಟು?
ಸರಕಾರ ತನ್ನ ಗಮನವನ್ನು ನಮ್ಮ ಜನಗಳ ಕೊಳ್ಳುವ ಸಾಮಥ್ರ್ಯವನ್ನು ವಿಸ್ತರಿಸುವತ್ತ ಕೇಂದ್ರೀಕರಿಸಿ ಆಂತರಿಕ ಬೇಡಿಕೆಯನ್ನು ಹೆಚ್ಚಿಸದಿದ್ದರೆ, ಹೂಡಿಕೆಗೆ ಲಭ್ಯವಾಗುವ ಬಂಡವಾಳವನ್ನು ಒದಗಿಸಲು ಎಷ್ಟೇ ಪ್ರಯತ್ನಪಟ್ಟರೂ ಅದರಿಂದ ಬೆಳವಣಿಗೆ ಉಂಟು ಮಾಡುವುದು ಸಾಧ್ಯವಾಗುವುದಿಲ್ಲ. ಇದು ಸರಕಾರ ಬಹಳ ಅಗತ್ಯವಿರುವ ನಮ್ಮ ಮೂಲರಚನೆಗಳನ್ನು ಕಟ್ಟಲು ಸಾರ್ವಜನಿಕ ಹೂಡಿಕೆಗಳನ್ನು ದೊಡ್ಡ ಪ್ರಮಾಣದಲ್ಲಿ ಕೈಗೊಂಡರೆ ಮಾತ್ರವೇ ಸಾಧ್ಯ. ಇದು ಹೆಚ್ಚಿನ ಉದ್ಯೋಗಾವಕಾಶಗಳನ್ನು ನಿಮರ್ಿಸಿ, ಆಮೂಲಕ ಆಂತರಿಕ ಬೇಡಿಕೆಯನ್ನು ವಿಸ್ತರಿಸುತ್ತದೆ. ಇದನ್ನು ಮಾಡುವ ಬದಲು, ಯುಪಿಎ-2 ಸರಕಾರ ಅಂತರ್ರಾಷ್ಟ್ರೀಯ ಹಣಕಾಸು ಬಂಡವಾಳದ ಮತ್ತು ಕಾಪರ್ೊರೇಟ್ ಭಾರತದ ಗರಿಷ್ಟ ಲಾಭಗಳಿಗೆ ಅವಕಾಶಗಳನ್ನು ವಿಸ್ತರಿಸುವ ನವ-ಉದಾರವಾದಿ ಆಥರ್ಿಕ ಸುಧಾರಣೆಗಳ ದಿಕ್ಕನ್ನೇ ಅನುಸರಿಸುವ ತವಕದಲ್ಲಿದೆ.ಅದಕ್ಕಾಗಿ ಅದು ಈ ಮುಂದಿನ ಪೀಳಿಗೆಯ ಸುಧಾರಣೆಗಳ ನಿಟ್ಟಿನಲ್ಲಿ ಸಾಗಿದೆ.

2008ರ ಅಂತರ್ರಾಷ್ಟ್ರೀಯ ಹಣಕಾಸು ಕುಸಿತ ಮತ್ತು ಅದನ್ನನುಸರಿಸಿ ಬಂದ ತೀವ್ರ ಜಾಗತಿಕ ಬಿಕ್ಕಟ್ಟಿನ ಹಿನ್ನೆಲೆಯಲ್ಲಿ ಒದಗಿಸಿದ ಉತ್ತೇಜನಾ ಪ್ಯಾಕೇಜುಗಳ ಅನುಭವ ಇಂತಹ ದಿಕ್ಕು ಸಂಪೂರ್ಣವಾಗಿ ವಿಫಲವಾಗಿರುವುದನ್ನು ತೋರಿಸಿದೆ. ಇತ್ತೀಚಿನ ಆಥರ್ಿಕ ನಿಧಾನಗತಿಯೇ ಇದಕ್ಕೆ ಸಾಕ್ಷಿ. ಈ ಮೂರು ಹಣಕಾಸು ವರ್ಷಗಳಲ್ಲಿ ಉತ್ತೇಜನಾ ಪ್ಯಾಕೇಜುಗಳ ಹೆಸರಿನಲ್ಲಿ ಸರಕಾರ ಬಿಟ್ಟುಕೊಟ್ಟ ತೆರಿಗೆ ಆದಾಯದ ಭಾರೀ ಮೊತ್ತವನ್ನು ನೋಡಿ-ಅದು 14,28,028 ಕೋಟಿ ರೂಪಾಯಿಗಳು! ಸರಕಾರವೇ ಇದನ್ನು ತನ್ನ ಬಜೆಟ್ ಪೇಪರುಗಳಲ್ಲಿ ಒಪ್ಪಿಕೊಂಡಿದೆ. ಇದರಲ್ಲಿ 3,63,875 ಕೋಟಿ ರೂ.ಗಳು ಕೇವಲ ಕಾಪರ್ೊರೇಟ್ಗಳಿಗೆ ಮತ್ತು ಅತ್ಯನ್ನತ ಆದಾಯಗಳ ಮಂದಿಗೆ ಕೊಟ್ಟ ನೇರ ತೆರಿಗೆ ರಿಯಾಯ್ತಿಗಳ ಮೊತ್ತ. ಇವೆಲ್ಲವುಗಳ ಒಟ್ಟು ಫಲಿತಾಂಶವೇ ಈಗ ನಮ್ಮನ್ನು ವೇಗವಾಗಿ ಆವರಿಸಿಕೊಳ್ಳುತ್ತಿರುವ ಆಥರ್ಿಕ ಬಿಕ್ಕಟ್ಟು.

ದಿಕ್ಕು-ದೆಸೆ ಬದಲಾಗಬೇಕಿದೆ
ಆದರೆ ಇದು ಹೊಳೆಯುವ ಭಾರತಕ್ಕೆ ಬಹುವಾಗಿ ಪ್ರಯೋಜನ ತಂದು ಕೊಟ್ಟಿದೆ. ಈ ಮೂರು ವರ್ಷಗಳಲ್ಲಿ ಭಾರತದಲ್ಲಿ ಡಾಲರ್ ಶತಕೋಟ್ಯಾಧಿಪತಿಗಳ ಸಂಖ್ಯೆ 26 ರಿಂದ 52ಕ್ಕೆ, ಇಂದು 69ಕ್ಕೆ ಏರಿದೆ. ಈ 69 ವ್ಯಕ್ತಿಗಳು ಭಾರತದ ಜಿಡಿಪಿಯ ಮೂರನೇ ಒಂದು ಭಾಗದಷ್ಟು ಆಸ್ತಿಗಳ ಒಡೆಯರು! ಇನ್ನೊಂದು ತುದಿಯಲ್ಲಿ ಭಾರತದ 80 ಕೋಟಿ ಜನ ದಿನಕ್ಕೆ ಕೇವಲ 20ರೂ.ಗಳಲ್ಲಿ ಬದುಕು ಸಾಗಿಸುತ್ತಿದ್ದಾರೆ.ಹಣಕಾಸು ಕೊರತೆ ಹೆಚ್ಚುತ್ತಿದೆ ಎಂಬ ಬಗ್ಗೆ ಆತಂಕ ಕೂಡ ಸಂಪೂರ್ಣವಾಗಿ ದಾರಿ ತಪ್ಪಿಸುವಂತದ್ದು. ಶ್ರೀಮಂತರಿಗೆ ಕೊಟ್ಟಿರುವ ಅಗಾಧ ಪ್ರಮಾಣದ ರಿಯಾಯ್ತಿಗಳ ಮುಂದೆ ಈ ವರ್ಷದ 4,65,000 ಕೋಟಿ ರೂ.ಗಳ ಹಣಕಾಸು ಕೊರತೆ ಏನೂ ಅಲ್ಲ. ಎಲ್ಲ ನ್ಯಾಯಬದ್ಧ ತೆರಿಗೆಗಳನ್ನು ವಸೂಲಿ ಮಾಡಿದ್ದರೆ ಹಣಕಾಸು ಕೊರತೆಯೇ ಇರುತ್ತಿಲ್ಲ. ಬದಲಿಗೆ, ಒಂದು ಬೃಹತ್ ಪ್ರಮಾಣದ ಸಾರ್ವಜನಿಕ ಹೂಡಿಕೆಯ ಕಾರ್ಯಕ್ರಮವನ್ನು ಕೈಗೊಳ್ಳಲು ಸಾಧ್ಯವಾಗುವಷ್ಟು ಸಂಪನ್ಮೂಲಗಳು ಸರಕಾರದ ಕೈಗಳಲ್ಲಿರುತ್ತಿದ್ದವು. ಇದು ನಮ್ಮ ವಿಶಾಲ ಜನಸ್ತೋಮದ ಬದುಕಿನ ಮಟ್ಟವನ್ನು ಉತ್ತಮಗೊಳಿಸುತ್ತಲೇ, ಒಂದು ಆರೋಗ್ಯಕರವಾದ ಆಥರ್ಿಕ ಬೆಳವಣಿಗೆಯ ದಿಕ್ಪಥಕ್ಕೆ ನಮ್ಮನ್ನು ಒಯ್ಯಬಹುದಾಗಿತ್ತು.

ದೈತ್ಯ ಪ್ರಮಾಣದ ಭ್ರಷ್ಟಾಚಾರವನ್ನು ನಿಗ್ರಹಿಸಲಿಕ್ಕಾಗಿ ಲೋಕಪಾಲದ ಸ್ಥಾಪನೆಗೆ ಒಂದು ಪರಿಣಾಮಕಾರಿ ಶಾಸನವನ್ನು ಕೈಗೊಳ್ಳುವಂತೆ ಮತ್ತು ಆ ಬೃಹತ್ ಪ್ರಮಾಣದ ಹಣವನ್ನು ಜನತೆಯ ಕಲ್ಯಾಣದತ್ತ ತಿರುಗಿಸುವಂತೆ ಯುಪಿಎ ಸರಕಾರದ ಮೇಲೆ ಒತ್ತಡಗಳನ್ನು ಮುಂದುವರೆಸುತ್ತಲೇ, ಸರಕಾರ ತನ್ನ ಸದ್ಯದ ಅಥರ್ಿಕ ಸುಧಾರಣೆಗಳ ದಿಕ್ಕನ್ನು ಬದಲಿಸುವಂತೆ ಕೂಡ ಒತ್ತಡಗಳನ್ನು ಹಾಕುವುದನ್ನು ಮರೆತು ಬಿಡಬಾರದು. ಈ ಸಂದರ್ಭದಲ್ಲಿ ನಮ್ಮ ವಿಶಾಲ ಜನಸಮೂಹಗಳ ಹಿತಗಳನ್ನು ಈಡೇರಿಸುವ ಆಥರ್ಿಕ ಧೋರಣೆಗಳನ್ನು ಸರಕಾರ ಅಂಗೀಕರಿಸುವಂತೆ ಮಾಡಲು ಜನಗಳನ್ನು ಅಣಿನೆರೆಸುವ ಮೂಲಕ ಮತ್ತಷ್ಟು ಒತ್ತಡಗಳನ್ನು ಹಾಕುವುದು ಅಗತ್ಯವಾಗಿದೆ. ಹೀಗೆ ಮಾಡಬೇಕಾದರೆ ಆಥರ್ಿಕ ಧೋರಣೆಯ ವಿಷಯದಲ್ಲಿ ಕಾಂಗ್ರೆಸ್ ಮತ್ತು ಬಿಜೆಪಿಯ ನಡುವೆ ಏನೇನೂ ವ್ಯತ್ಯಾಸವಿಲ್ಲ ಎಂಬುದನ್ನು ಸಂಪೂರ್ಣವಾಗಿ ಬಯಲಿಗೆ ಎಳೆಯುವ ಅಗತ್ಯವೂ ಇದೆ. ಈ ಎರಡೂ ಪಕ್ಷಗಳು ನಮ್ಮ ವಿಶಾಲ ಜನಸಮೂಹಗಳ ಬದುಕಿನ ಮಟ್ಟವನ್ನು ಉತ್ತಮಗೊಳಿಸುವ ಬದಲು, ವಿದೇಶಿ ಬಂಡವಾಳ ಮತ್ತು ಕಾಪರ್ೊರೇಟ್ ಭಾರತದ ಹಿತಗಳನ್ನು ಈಡೆರಿಸಲಿಕ್ಕೇ ಕೆಲಸ ಮಾಡುತ್ತವೆ. ಬಿಜೆಪಿ, ಇದರ ಜೊತೆಗೇ ತನ್ನ ವಿನಾಶಕಾರಿ ಕೋಮುವಾದಿ ಅಜೆಂಡಾವನ್ನೂ ಮುಂದೊತ್ತುತ್ತಲೇ ಇದೆ.
0

Donate Janashakthi Media

Leave a Reply

Your email address will not be published. Required fields are marked *