ಪಯರ್ಾಯ ಧೋರಣೆಗಳ ದಾರಿ ಹಿಡಿದರೆ ಮಾತ್ರ ಜನಗಳಿಗೆ ಪರಿಹಾರ ಸಾಧ್ಯ

ಸೀತಾರಾಮ್ ಯೆಚೂರಿ

16ನೇ ಸಾರ್ವತ್ರಿಕ ಚುನಾವಣೆಗಳ ಸಂದರ್ಭದಲ್ಲಿ 9 ಜಾತ್ಯಾತೀತ ಕಾಂಗ್ರೆಸೇತರ, ಬಿಜೆಪಿಯೇತರ ಪ್ರತಿಪಕ್ಷಗಳ ಜಂಟಿ ಹೇಳಿಕೆ ಪ್ರಕಟವಾಗಿದೆ. ಅಲ್ಲದೆ ಇನ್ನೂ ಎರಡು ಪಕ್ಷಗಳು ಈ ಪ್ರಕ್ರಿಯೆಯಲ್ಲಿ ಸೇರಿವೆ. ಇವೆಲ್ಲ ಒಟ್ಟು 300 ಲೋಕಸಭಾ ಸ್ಥಾನಗಳನ್ನು ಹೊಂದಿರುವ ರಾಜ್ಯಗಳನ್ನು ಪ್ರತಿನಿಧಿಸುವ ಪಕ್ಷಗಳು. ಪರಿಹಾರ ಬೇಕೆಂಬ ಜನಗಳ ಮಹದಾಸೆಯನ್ನು ಒಂದು ಪಯರ್ಾಯ ಆಥರ್ಿಕ ದಾರಿ-ದಿಕ್ಕು ಮಾತ್ರವೇ ಈಡೇರಿಸಬಲ್ಲದು ಎಂಬುದು ಈ ಸಭೆಯ ಜಂಟಿ ಘೋಷಣೆಯಿಂದ ನಿಚ್ಚಳವಾಗಿ ಸ್ಪಷ್ಟವಾಗಿದೆ. ಇಂತಹ ಒಂದು ಪಯರ್ಾಯ ಧೋರಣೆಗಳ ಅಜೆಂಡಾ ತನ್ನ ಕಟ್ಟಾ ಹಿಂದುತ್ವ ಅಜೆಂಡಾವನ್ನು ಪಕ್ಕಕ್ಕೆ ತಳ್ಳಿ ಬಿಡಬಹುದು ಎಂದು ಅರೆಸ್ಸೆಸ್ ಬಹಳ ಆತಂಕಗೊಂಡಿದೆ. ಅತ್ತ ಕಾಪರ್ೊರೇಟ್ ಭಾರತವನ್ನೂ ತನಗೆ ಅನುಕೂಲವಾದ ಎರಡು ಧ್ರುವಗಳ ರಾಜಕೀಯದ ಲೆಕ್ಕಾಚಾರ ತಲೆಕೆಳಗಾಗಬಹುದೆಂಬ ಭೀತಿ ಆವರಿಸಿದೆ.

8
ಮುಂಬರುವ 16ನೇ ಸಾರ್ವತ್ರಿಕ ಚುನಾವಣೆಗಳ ಸಂದರ್ಭದಲ್ಲಿ ಜಾತ್ಯಾತೀತ ಕಾಂಗ್ರೆಸೇತರ, ಬಿಜೆಪಿಯೇತರ ಪ್ರತಿಪಕ್ಷಗಳು ಜಂಟಿ ಹೇಳಿಕೆ ನೀಡಿವೆ. ಹೆಚ್ಚುತ್ತಿರುವ ಆಥರ್ಿಕ ಹೊರೆಗಳಿಂದಾಗಿ ಬದುಕಿನ ಗುಣಮಟ್ಟ ತೀವ್ರವಾಗಿ ಇಳಿಯುತ್ತಿರುವಾಗ ಅದರಿಂದ ಹತಾಶರಾಗಿ ಜನಗಳು ಪರಿಹಾರಕ್ಕಾಗಿ ಪರಿತಪಿಸುತ್ತಿರುವಾಗ ಅದಕ್ಕೆ ಸ್ಪಂದಿಸಿ ಈ ಪಕ್ಷಗಳು ಒಟ್ಟುಗೂಡಿವೆ ಎಂಬುದು ಅತ್ಯಂತ ಸ್ಪಷ್ಟ.

ನಾಲ್ಕು ಎಡಪಕ್ಷಗಳಲ್ಲದೆ, ಇತರ ಐದು ಪ್ರಾದೇಶಿಕ ಪಕ್ಷಗಳ ಮುಖಂಡರು ಆ ಸಭೆಯಲ್ಲಿ ಇದ್ದರು. ಇವರಲ್ಲಿ ಉತ್ತರಪ್ರದೇಶದ ಆಳುವ ಪಕ್ಷ ಸಮಾಜವಾದಿ ಪಕ್ಷದ ಮುಖಂಡ ಮುಲಾಯಂ ಸಿಂಗ್ ಯಾದವ್, ಬಿಹಾರದಲ್ಲಿ ಆಳುವ ಪಕ್ಷ ಜೆಡಿ(ಯು)ನ ಮುಖ್ಯಮಂತ್ರಿ ನಿತೀಶ್ ಕುಮಾರ್, ತಮಿಳುನಾಡಿ ಆಳುವ ಪಕ್ಷ ಎಐಡಿಎಂಕೆಯ ಸಂಸದೀಯ ಮುಖಂಡ ತಂಬಿ ದೊರೈ, ಜನತಾದಳ(ಜಾತ್ಯಾತೀತ)ದ ಮಾಜಿ ಪ್ರಧಾನ ಮಂತ್ರಿ ದೇವೇಗೌಡ ಮತ್ತು ಝಾರ್ಖಂಡ್ನ ಮಾಜಿ ಆಳುವ ಪಕ್ಷ ಝಾರ್ಖಂಡ್ ವಿಕಾಸ್ ಮೋಚರ್ಾದ ಮುಖಂಡರು ಸೇರಿದ್ದಾರೆ. ಈ ಒಂಭತ್ತು ಪಕ್ಷಗಳು ಒಟ್ಟಾಗಿ ಲೋಕಸಭೆಯಲ್ಲಿ 265 ಸಂಸತ್ ಸದಸ್ಯರಿರುವ ರಾಜ್ಯಗಳನ್ನು ಪ್ರತಿನಿಧಿಸುತ್ತಿವೆ. ಒಡಿಶಾದ ಆಳುವ ಪಕ್ಷ ಬಿಜು ಜನತಾ ದಳ ಮತ್ತು ಅಸ್ಸಾಂನ ಮಾಜೀ ಆಳುವ ಪಕ್ಷ ಅಶೊಂ ಗಣ ಪರಿಷದ್ ಈ ಪ್ರಕ್ರಿಯೆಯಲ್ಲಿ ಜತೆಗಿದ್ದವು. ಆದರೆ ಈ ಸಭೆಯಲ್ಲಿ ಹಾಜರಿರಲಿಲ್ಲ. ಈ ರಾಜ್ಯಗಳ ಸಂಸತ್ ಸದಸ್ಯರನ್ನು ಸೇರಿಸಿದರೆ ಒಟ್ಟು 300 ಕ್ಕೆ ಏರುತ್ತದೆ. ಇವಲ್ಲದೆ ಪಂಜಾಬಿನ ಪೀಪಲ್ಸ್ ಪಾಟರ್ಿ, ಮಹಾರಾಷ್ಟ್ರದ ಪ್ರಕಾಶ್ ಅಂಬೇಡ್ಕರ್ ಅವರ ರಿಪಬ್ಲಿಕನ್ ಪಕ್ಷ ಮತ್ತು ಇತರ ಹಲವು ಪ್ರಾದೇಶಿಕ ಪಕ್ಷಗಳು ಒಂದು ಉತ್ತಮ ಭಾರತವನ್ನು ಕಟ್ಟುವಲ್ಲಿ ಜಾತ್ಯಾತೀತ ಪ್ರತಿಪಕ್ಷಗಳ ಜತೆಗೂಡುವ ಆಶಯವನ್ನು ವ್ಯಕ್ತಪಡಿಸುತ್ತಿದ್ದಾರೆ. ನಮ್ಮ ದೇಶದ ವಿವಿಧ ಪ್ರಮುಖ ರಾಜ್ಯಗಳ ಆಳುವ ಅಥವ ಪ್ರಮುಖ ಪ್ರತಿಪಕ್ಷಗಳು ಇಂದು ಜನತೆಯ ಆಕಾಂಕ್ಷೆಗೆ ಸ್ಪಂದಿಸಿ ಒಟ್ಟು ಸೇರುತ್ತಿದ್ದಾರೆ. ಇವರೆಲ್ಲ ಒಟ್ಟಾಗಿ ಲೋಕಸಭೆಯಲ್ಲಿ ಬಹುಪಾಲು ಎಂ.ಪಿ.ಗಳನ್ನು ಕಳಿಸುವ ರಾಜ್ಯಗಳಿಗೆ ಸೇರಿದವರು.

ಪರಿಹಾರ ಬೇಕೆಂಬ ಜನಗಳ ಮಹದಾಸೆಯನ್ನು ಒಂದು ಪಯರ್ಾಯ ಆಥರ್ಿಕ ದಾರಿ-ದಿಕ್ಕು ಮಾತ್ರವೇ ಈಡೇರಿಸಬಲ್ಲದು ಎಂಬುದು ಈ ಸಭೆಯ ಜಂಟಿ ಘೋಷಣೆಯಿಂದ ನಿಚ್ಚಳವಾಗಿ ಸ್ಪಷ್ಟವಾಗಿದೆ. ಆಥರ್ಿಕ ದಿಕ್ಕು ಮತ್ತು ಭ್ರಷ್ಟಾಚಾರಕ್ಕೆ ಸಂಬಂಧಪಟ್ಟಂತೆ ಬಿಜೆಪಿ ಹಾಗೂ ಕಾಂಗ್ರೆಸ್ ನಡುವೆ ಅವರಿಗೆ ಯಾವುದೇ ವ್ಯತ್ಯಾಸ ಕಾಣುತ್ತಿಲ್ಲ. ಅದು ಸರಿ ಕೂಡ. ಇದರ ಜೊತೆಗೆ ಬಿಜೆಪಿ, ಆರೆಸ್ಸೆಸ್ನ ರಾಜಕೀಯ ಅಂಗವಾಗಿ ತನ್ನ ಕಟ್ಟಾ ಹಿಂದುತ್ವ ಅಜೆಂಡಾವನ್ನು ಅನುಸರಿಸಿ ಕೋಮುಧ್ರುವೀಕರಣವನ್ನು ತೀಕ್ಷ್ಣಗೊಳಿಸುತ್ತಿದೆ. ಹೀಗೆ ದೇಶದಲ್ಲಿ ಯಾವುದೇ ಪಯರ್ಾಯ ಧೋರಣೆಯ ದಿಕ್ಕು ಒಂದು ರಾಜಕೀಯ ಪಯರ್ಾಯದಿಂದಲೇ ಬರಬೇಕಾಗುತ್ತದೆ. ಅದು ಅನಿವಾರ್ಯವಾಗಿಯೇ ಒಂದು ಕಾಂಗ್ರೆಸೇತರ, ಬಿಜೆಪಿಯೇತರ ಕೂಟವೇ ಆಗಿರಬೇಕಾಗಿದೆ.

ಕಾಂಗ್ರೆಸೇತರ, ಬಿಜೆಪಿಯೇತರ ಜಾತ್ಯಾತೀತ ಪಕ್ಷಗಳ ಈ ಸಭೆ ಮತ್ತು ಅದರ ಘೋಷಣೆ ಸಿಪಿಐ(ಎಂ) ತನ್ನ 20 ನೇ ಮಹಾಧಿವೇಶನದಲ್ಲಿ ತೀಮರ್ಾನಿಸಿದ ತಿಳುವಳಿಕೆಗೆ ಅನುಗುಣವಾಗಿಯೇ ಇದೆ. ” ಕಾಂಗ್ರೆಸ್ ಮತ್ತು ಬಿಜೆಪಿಗೆ ವಿರುದ್ಧವಾಗಿ, ಸಿಪಿಐ(ಎಂ) ಎಡ ಮತ್ತು ಪ್ರಜಾಪ್ರಭುತ್ವವಾದಿ ಪಯರ್ಾಯವನ್ನು ಮುಂದಿಡುತ್ತದೆ. ಒಂದು ಎಡ ಮತ್ತು ಪ್ರಜಾಪ್ರಭುತ್ವವಾದಿ ವೇದಿಕೆ ಮಾತ್ರವೇ ಬೂಜ್ವರ್ಾ- ಭೂಮಾಲಕ ಆಳ್ವಿಕೆಗೆ ಪಯರ್ಾಯವಾಗ ಬಲ್ಲದು. ಈ ಪಯರ್ಾಯವನ್ನು ಆಂದೋಲನಗಳು ಮತ್ತು ಹೋರಾಟಗಳ ಒಂದು ಪ್ರಕ್ರಿಯೆಯ ಮೂಲಕ ಕಟ್ಟಿ ಬೆಳೆಸಿ ಎಡ ಮತ್ತು ಪ್ರಜಾಪ್ರಭುತ್ವವಾದಿ ಶಕ್ತಿಗಳ ರಾಜಕೀಯ ಮೈತ್ರಿಕೂಟ ಮೂಡಿ ಬರಬೇಕಾಗಿದೆ. ಈ ಪ್ರಯತ್ನಗಳನ್ನು ನಡೆಸುವಾಗ ಪ್ರಜಾಪ್ರಭುತ್ವ, ರಾಷ್ಟ್ರೀಯ ಸಾರ್ವಭೌಮತೆ, ಜಾತ್ಯಾತೀತತೆ, ಒಕ್ಕೂಟ ತತ್ವದ ರಕ್ಷಣೆ ಹಾಗೂ ಜನತೆಯ ಜೀವನೋಪಾಯದ ಮತ್ತು ಹಕ್ಕುಗಳ ರಕ್ಷಣೆಯಲ್ಲಿ ಪಾತ್ರ ವಹಿಸಬಹುದಾದ ಕಾಂಗ್ರೆಸೇತರ, ಬಿಜೆಪಿಯೇತರ ಶಕ್ತಿಗಳನ್ನು ಅಣಿನೆರೆಸುವುದು ಅಗತ್ಯವಾಗಬಹುದು. ಇಂತಹ ಜಂಟಿ ವೇದಿಕೆಗಳು ಮೂಡಿ ಬಂದರೆ ಅದು ಎಡ ಮತ್ತು ಪ್ರಜಾಪ್ರಭುತ್ವವಾದಿ ಶಕ್ತಿಗಳ ಮೈತ್ರಿಕೂಟವನ್ನು ಕಟ್ಟುವಲ್ಲಿ ನೆರವಾಗಬೇಕು” ಎಂದು ಮಹಾಧಿವೇಶನದ ರಾಜಕೀಯ ನಿರ್ಣಯ ಹೇಳಿದೆ.

“ಪ್ರಸ್ತುತ ಸನ್ನಿವೇಶದಲ್ಲಿ ಕಾಂಗ್ರೆಸೇತರ ಜಾತ್ಯಾತೀತ ಪಕ್ಷಗಳೊಂದಿಗೆ ಸಮಸ್ಯೆಗಳ ಮೇಲೆ ಜಂಟಿ ಕ್ರಿಯೆಗಳಿಗೆ ನಾವು ಪ್ರಯತ್ನಿಸಬೇಕು, ಆಮೂಲಕ ಆಂದೋಲನಗಳನ್ನು ವ್ಯಾಪಕಗೊಳಿಸಬೇಕು. ನಿದರ್ಿಷ್ಟ ಧೋರಣೆಯ ವಿಷಯಗಳು ಮತ್ತು ಜನತೆಯ ಸಮಸ್ಯೆಗಳ ಮೇಲೆ ಸಂಸತ್ತಿನಲ್ಲಿ ಈ ಪಕ್ಷಗಳೊಂದಿಗೆ ಸಹಕಾರ ಸಾಧ್ಯವಿದೆ. ಅಗತ್ಯ ಬಂದಲ್ಲಿ ಈ ಕೆಲವು ಪಕ್ಷಗಳೊಂದಿಗೆ ಚುನಾವಣಾ ತಿಳುವಳಿಕೆ ಸಾಧ್ಯವಿದೆ” ಎಂದು ಮುಂದುವರೆದು ರಾಜಕೀಯ ನಿರ್ಣಯ ಹೇಳಿತ್ತು.

ತಲೆಕೆಳಗಾದ ಎರಡು ಧ್ರುವಗಳ ರಾಜಕೀಯ
ಇಂತಹ ಒಂದು ರಾಜಕೀಯ ಪಯರ್ಾಯ ಮೂಡಿ ಬರುವ ಸಾಧ್ಯತೆ ಎರಡು ಧ್ರುವಗಳ ರಾಜಕೀಯದಿಂದ ಸಮಾಧಾನ ಪಡೆಯುತ್ತಿರುವ, ಅಷ್ಟೇ ಅಲ್ಲ, ಇವರಲ್ಲಿ ಯಾರು ಗೆದ್ದರೂ ತಮಗೆ ಒಳಿತೇ ಎಂದು ಲೆಕ್ಕಾಚಾರ ಹಾಕುತ್ತಿದ್ದವರ ಲೆಕ್ಕ ತಲೆಕೆಳಗಾಗುವಂತೆ ಮಾಡಿದೆ. ಎಲ್ಲ ರಾಜಕೀಯ ಪಕ್ಷಗಳು ಒಂದು ಧ್ರುವದಲ್ಲಿ ಬಿಜೆಪಿಯೊಂದಿಗೆ, ಇನ್ನೊಂದರಲ್ಲಿ ಕಾಂಗ್ರೆಸಿನೊಂದಿಗೆ ಎಂದು ವಿಭಜನೆಗೊಂಡಿದ್ದರೆ ಅದು ಎಲ್ಲ ಪಟ್ಟಭದ್ರ ಹಿತಾಸಕ್ತಿಗಳಿಗೆ ಅನುಕೂಲಕರ ಸಂಗತಿ. ಏಕೆಂದರೆ, ಕೇಂದ್ರ ಸರಕಾರದಲ್ಲಿ ಈ ಎರಡರಲ್ಲಿ ಯಾವ ಧ್ರುವ ಅಧಿಕಾರದ ಚುಕ್ಕಾಣಿ ಹಿಡಿದರೂ ಅವರ ಗುರಿಗಳು ಈಡೇರುತ್ತವೆ- ಅದು ಲಾಭಗಳನ್ನು ಗರಿಷ್ಟ ಪ್ರಮಾಣದಲ್ಲಿ ಲಭ್ಯಗೊಳಿಸುವ ಆಥರ್ಿಕ ಧೋರಣೆಗಳ ಅನುಸರಣೆಯಲ್ಲಿ ಆಗಿರಬಹುದು, ಅಥವ ವ್ಯಾಪಕ ಭ್ರಷ್ಟಾಚಾರದ ಮೇಲೆ ನಿಂತ ‘ಚಮಚಾ ಬಂಡವಾಳಶಾಹಿ’ಯ ಲಂಗುಲಗಾಮಿಲ್ಲದ ಬೆಳವಣಿಗೆಗೆ ಸಿಗುವ ಪೋಷಣೆಯಿಂದಲೂ ಆಗಿರಬಹುದು.

ಈ ಸಭೆಯ ನಂತರ ನಡೆದ ಮಾಧ್ಯಮ ಸಮ್ಮೇಳನದಲ್ಲಿ ಹಲವು ಪ್ರಶ್ನೆಗಳು ಬಂದವು. ಅವುಗಳಲ್ಲಿ ಇಂತಹ ಒಂದು ಪಯರ್ಾಯ ಯಾವ ಮೂರ್ತ ಸ್ವರೂಪ ಪಡೆಯುತ್ತದೆ, ಅದರ ಕಾರ್ಯಕ್ರಮದಲ್ಲಿ ಏನಿರುತ್ತದೆ ಎಂಬುದಕ್ಕೆ ಉತ್ತರಗಳನ್ನು ಪಡೆಯುವ ನೈಜ ಪ್ರಯತ್ನಗಳು ಬಹಳಷ್ಟಿದ್ದವು. ಆದರೆ ಹೆಚ್ಚಿನ ಪ್ರಶ್ನೆಗಳು ಈ ಎರಡು ಧ್ರುವಗಳ ರಾಜಕೀಯ ಉಂಟುಮಾಡಿದ್ದ ನೆಮ್ಮದಿಯ ಎಣಿಕೆಗಳನ್ನು ಛಿದ್ರಗೊಳಿಸಲಾಗುತ್ತಿದೆ ಎಂಬ ಬಗ್ಗೆ ಆಕ್ರೋಶ, ಸಿಟ್ಟನ್ನು ಬಿಂಬಿಸುವಂತಿದ್ದವು.

ಇಂತಹ ಒಂದು ಪಯರ್ಾಯದ ಪ್ರಧಾನ ಮಂತ್ರಿ ಅಭ್ಯಥರ್ಿ ಯಾರಾಗಬಹುದು ಎಂಬ ಪ್ರಶ್ನೆ ಕೇಳಿದಾಗ ಮುಖಂಡರು, ಮಾಧ್ಯಮ ವ್ಯಕ್ತಿಗಳಿಗೆ ಹೇಳಿದ್ದಿಷ್ಟು- ಭಾರತದ ಸಂಸದೀಯ ಪ್ರಜಾಪ್ರಭುತ್ವದ ರಚನೆ ಹೇಗಿದೆಯೆಂದರೆ ಮೊದಲಿಗೆ ಜನತೆ ಆರಿಸಿದ ಸದಸ್ಯರಿಂದ ಮಾತ್ರವೇ ಪ್ರಧಾನ ಮಂತ್ರಿ ಚುನಾಯಿತರಾಗುತ್ತಾರ.ೆ ಮೊರಾಜರ್ಿ ದೇಸಾಯಿ, ವಿ.ಪಿ.ಸಿಂಗ್ರಿಂದ ಹಿಡಿದು ದೇವೇಗೌಡ, ಐ.ಕೆ.ಗುಜ್ರಾಲ್, ಅಟಲ್ ಬಿಹಾರಿ ವಾಜಪೇಯಿ ಮತ್ತು ಮನಮೋಹನ್ ಸಿಂಗ್ ವರೆಗೆ ಭಾರತದ ಇತಿಹಾಸ ಇದೇ ತಾನೇ ಎಂದು ಮುಲಾಯಂ ಸಿಂಗ್ ಮಾಧ್ಯಮ ವ್ಯಕ್ತಿಗಳಿಗೆ ನೆನಪಿಸಿದರು.

ಈ ಪಕ್ಷಗಳ ನಡುವೆ ಸೀಟು ಹಂಚಿಕೆಯ ಒಪ್ಪಂದ ಏನು ಎಂದು ಕೇಳಿದಾಗ ಇವನ್ನು ರಾಜ್ಯಗಳ ಮಟ್ಟದಲ್ಲಿ ಅಲ್ಲಿನ ಮೂರ್ತ ವಾಸ್ತವತೆಗಳ ಆಧಾರದಲ್ಲಿ ಅಂತಿಮಗೊಳಿಸಲಾಗುವುದು ಎಂದು ತಿಳಿಸಲಾಯಿತು. ಭಾರತದ ಸಂಸದೀಯ ಇತಿಹಾಸದಲ್ಲಿ ಎಲ್ಲ ಸಂದರ್ಭಗಳಲ್ಲೂ 1977ರ ಜನತಾ ಪಾಟರ್ಿ ಸರಕಾರದಿಂದ ಹಿಡಿದು ಎಲ್ಲ ಮೈತ್ರಿಕೂಟಗಳೂ ಮೂರ್ತ ಸ್ವರೂಪವನ್ನಾಗಲೀ, ಹೆಸರನ್ನಾಗಲೀ ಪಡೆದಿರುವುದು ಚುನಾವಣೆಗಳ ನಂತರವೇ ಎಂದೂ ಮಾಧ್ಯಮ ವ್ಯಕ್ತಿಗಳಿಗೆ ನೆನಪಿಸಲಾಯಿತು. ವಾಜಪೇಯಿ ನೇತೃತ್ವದ ಎನ್ಡಿಎ ಸರಕಾರ ಮತ್ತು ಮನಮೋಹನ್ ಸಿಂಗ್ ನೇತೃತ್ವದ ಯುಪಿಎ ಸರಕಾರಗಳ ವಿಷಯದಲ್ಲೂ ಇದು ನಿಜ. ಆದ್ದರಿಂದ 2014ರಲ್ಲಿ ಅದು ಭಿನ್ನವಾಗಿರುವುದಿಲ್ಲ.

ಕಾಪರ್ೊರೇಟ್ ಮಾಧ್ಯಮವೂ……….
ಈ ಅಂಕಣದಲ್ಲಿ ಈ ಮೊದಲು ಗಮನಿಸಿದಂತೆ, ಕಾಪರ್ೊರೇಟ್ ಭಾರತ ಮತ್ತು ಅವರ ಗುರುಗಳಾದ ಅಂತರ್ರಾಷ್ಟ್ರೀಯ ಹಣಕಾಸು ಬಂಡವಾಳಕ್ಕೆ ಇಂತಹ ಸಾಧ್ಯತೆಯಿಂದ ಆತಂಕ ಉಂಟಾಗಿದೆ. ಭಾರತೀಯ ಜನತೆಯ ಖಚರ್ಿನಲ್ಲಿ ತಮ್ಮ ಲಾಭಗಳನ್ನು ಗರಿಷ್ಟ ಪ್ರಮಾಣಕ್ಕೆ ಏರಿಸಿಕೊಳ್ಳಬಹುದೆಂಬ ಅವರ ನಿರೀಕ್ಷೆಗಳು ತಲೆಕೆಳಗಾಗುವ ಸಾಧ್ಯತೆ ಉಂಟಾಗಿದೆ. ಈ ಸಂದರ್ಭದಲ್ಲಿ ಕಾಪರ್ೊರೇಟ್ ಮಾಧ್ಯಮವೂ ಬಹಳ ಹಿಂದೆ ಬಿದ್ದಿಲ್ಲ.

ಕೆಲವು ದಿನಗಳ ಹಿಂದೆ (ಫೆಬ್ರುವರಿ 23, 2014) ಎಡಪಕ್ಷಗಳು ಒಂದು ರಾಜಕೀಯ ಪಯರ್ಾಯ ಕುರಿತಂತೆ ಹಯರ್ಾಣ ರಾಜ್ಯ ಮಟ್ಟದ ಜನತಾ ರ್ಯಾಲಿಯನ್ನು ಹಿಸ್ಸಾರ್ನಲ್ಲಿ ನಡೆಸಿದವು. ಅದೇ ದಿನ, ಆಮ್ ಆದ್ಮಿ ಪಕ್ಷ ಎಡಪಕ್ಷಗಳ ರ್ಯಾಲಿಯ ಪ್ರಕಟಣೆಯ ಬಹಳ ನಂತರ ಸಮೀಪದ ರೋಹ್ತಕ್ ನಲ್ಲಿ ರ್ಯಾಲಿ ನಡೆಸುವ ಕರೆ ನೀಡಿತು. ಎಡಪಕ್ಷಗಳ ರ್ಯಾಲಿಯಲ್ಲಿ ಅದಕ್ಕಿಂತ ಹೆಚ್ಚಿನ ಜನ ಸೇರಿದ್ದರೂ ಕಾಪರ್ೊರೇಟ್ ಮಾಧ್ಯಮಗಳು ಆ ರ್ಯಾಲಿಯ ಬಗ್ಗೆ ವ್ಯಾಪಕವಾಗಿ ವರದಿ ಮಾಡಿದವು, ಆದರೆ ಎಡಪಕ್ಷಗಳ ರ್ಯಾಲಿಯ ಬಗ್ಗೆ ಪ್ರಸ್ತಾಪಿಸಲೂ ಇಲ್ಲ. ಇದರಲ್ಲಿ ಆಶ್ಚರ್ಯವೇನಿಲ್ಲ.

ಇದಕ್ಕೆ ಮೊದಲು ರಾಜಧಾನಿಯಲ್ಲಿ ಅಣ್ಣಾ ಹಜಾರೆಯವರ ಭ್ರಷ್ಟಾಚಾರ-ವಿರೋಧಿ ಆಂದೋಲನ ನಡೆಯುತ್ತಿದ್ದಾಗ ಕೇಂದ್ರ ಕಾಮರ್ಿಕ ಸಂಘಟನೆಗಳು ಸಂಘಟಿಸಿದ್ದ ಎರಡು ಲಕ್ಷಕ್ಕೂ ಹೆಚ್ಚು ಕಾಮರ್ಿಕರು ಭ್ರಷ್ಟಾಚಾರ ಮತ್ತು ಬೆಲೆಯೇರಿಕೆಯ ವಿರುದ್ಧ ಸಂಸದ್ ಮಾರ್ಗದಲ್ಲಿ ಬಂದು ಸೇರಿದ್ದರು. ಹಜಾರೆಯವರ ಕಾರ್ಯಕ್ರಮಕ್ಕೆ ಮಾಧ್ಯಮಗಳು ಸತತ ಪ್ರಚಾರ ನೀಡಿದವು, ಇತ್ತ ಕಾಮರ್ಿಕರ ಬೃಹತ್ ರ್ಯಾಲಿಯ ಪ್ರಸ್ತಾಪವೂ ಇರಲಿಲ್ಲ.

ಕಾಪರ್ೊರೇಟ್ ಮಾಧ್ಯಮದ ಮಟ್ಟಿಗೆ, ಜನತೆಯ ಜೀವನೋಪಾಯಗಳನ್ನು ಉತ್ತಮ ಪಡಿಸುವ ಗುರಿಯುಳ್ಳ, ಆದರೆ ಗರಿಷ್ಟ ಲಾಭ ಗಳಿಕೆಯನ್ನು ವಿಪರೀತವಾಗಿ ಪ್ರೋತ್ಸಾಹಿಸದ ಒಂದು ಪಯರ್ಾಯಕ್ಕಿಂತ ಗರಿಷ್ಟ ಲಾಭಗಳಿಕೆಗೆ ಅಡ್ಡಿಯಾಗದ ‘ನೈತಿಕವಾಗಿ’ ನೇರವಾದ ಪಯರ್ಾಯವೇ ಯಾವಾಗಲೂ ಉತ್ತಮ ಎಂಬುದಂತೂ ಸ್ಪಷ್ಟ.

ಅಣ್ಣಾ ಹಜಾರೆಯವರ ಬಗ್ಗೆ ಹೇಳುವುದಾದರೆ, ಅವರು ಈಗ ಪಶ್ಚಿಮ ಬಂಗಾಳದ ತೃಣಮೂಲ ಕಾಂಗ್ರೆಸಿನ ಭೋ ಪರಾಕು ಹೇಳಲು ಮುಂದಾಗಿರುವುದು ಹಲವರಿಗೆ ವಿಚಿತ್ರವೆನಿಸಿದೆ. ಅಣ್ಣಾ ಹಜಾರೆಯಂತಹ ‘ನೈತಿಕ ಋಜುತ್ವದ ವ್ಯಕ್ತಿ ಮತ್ತು ಸಾರ್ವಜನಿಕ ವ್ಯವಹಾರಗಳಲ್ಲಿ ಪ್ರಾಮಾಣಿಕತೆಯನ್ನು ಪ್ರತಿಪಾದಿಸುವಾತ ಪಶ್ಚಿಮ ಬಂಗಾಳವನ್ನು ದೇಶದಲ್ಲಿ ಮಹಿಳೆಯರ ಮೇಲಿನ ಅತ್ಯಾಚಾರದ ರಾಜಧಾನಿಯ ಮಟ್ಟಕ್ಕೆ ಇಳಿಸಿರುವ, ಭ್ರಷ್ಟರಿಗೆ ಮಾತ್ರವಲ್ಲ, ಕ್ರಿಮಿನಲ್ ಮಂದಿಗೂ ಆಶ್ರಯ ನೀಡುವಂತದ್ದೆಂದು ಹೈಕೋಟರ್ಿನಿಂದಲೇ ಛೀಮಾರಿ ಹಾಕಿಸಿಕೊಂಡಿರುವ ಒಂದು ಸರಕಾರವನ್ನು ನಡೆಸುತ್ತಿರುವ ಪಕ್ಷವನ್ನು ಬಹಿರಂಗವಾಗಿಯೇ ಹಾಡಿ ಹೊಗಳುತ್ತಿರುವುದು ಬೇಸರದ ಸಂಗತಿ. ಅವರೊಂದಿಗೆ ತೃಣಮೂಲ ಕಾಂಗ್ರೆಸಿನ ಪರವಾಗಿ ಮಾತಾಡುತ್ತಿರುವ ಪ್ರಮುಖ ವ್ಯಕ್ತಿಯ ಹಗರಣಗಳ ಕುರಿತು ಶಿಮ್ಲಾ ಮಹಾನಗರ ಸಭೆಯ ಮೇಯರ್ ಮತ್ತು ಉಪಮೇಯರ್ ಒಂದು ಬಹಿರಂಗ ಪತ್ರವನ್ನು ಅವರಿಗೆ ಬರೆದಿದ್ದಾರೆ.

ಈ ಸಂಚಿಕೆ ಮುದ್ರಣಕ್ಕೆ ಹೋಗುವ ವೇಳೆಗೆ `ಒಪೀನಿಯನ್ ಪೋಲ್’ ಎಂಬ ಮತಸಂಗ್ರಹ ಕುರಿತಾದ ಹಗರಣವೊಂದು ಬಯಲಾಗಿದೆ. ಒಂದು ಇಲೆಕ್ಟ್ರಾನಿಕ್ ಮಾಧ್ಯಮ ಚಾನೆಲ್ ನಡೆಸಿದ ಕುಟುಕು ಕಾಯರ್ಾಚರಣೆಯಲ್ಲಿ ಇದು ಬಯಲಿಗೆ ಬಂದಿದೆ. ಈ ಹಿಂದೆ, ಈ ಅಂಕಣದಲ್ಲಿ ನಾವು ‘ಕಾಸಿಗಾಗಿ ಸುದ್ದಿ’ ಯೊಂದಿಗೆ ಕಾಸಿಗಾಗಿ ಮತಸಂಗ್ರಹವೂ ನಡೆಯುತ್ತಿದೆ ಎಂದಿದ್ದೆವು. ಅದೀಗ ದೃಢಪಟ್ಟಿದೆ. ಇದು ಕಾಪರ್ೊರೇಟ್ ಮಾಧ್ಯಮದ ಚಾರಿತ್ರ್ಯವನ್ನು ಬಿಂಬಿಸುತ್ತದೆ. ಸಾರ್ವಜನಿಕ ಅಭಿಪ್ರಾಯವನ್ನು ದಾರಿ ತಪ್ಪಿಸಲು ಮತ್ತು ಪ್ರಜಾಪ್ರಭುತ್ವವನ್ನು ಬುಡಮೇಲು ಮಾಡಲು ಹೇಗೆ ಈ ಒಪೀನಿಯನ್ ಪೋಲ್ಗಳನ್ನು ಬಳಸಲಾಗುತ್ತಿದೆ ಎಂಬುದನ್ನು ಈ ಕುಟುಕು ಕಾಯರ್ಾಚರಣೆ ದೃಢಪಡಿಸಿದೆ. ಇದು ಮತ್ತೊಮ್ಮೆ ನಮ್ಮ ಚುನಾವಣಾ ಪ್ರಕ್ರಿಯೆಯಲ್ಲಿ ಆಳವಾದ ಸುಧಾರಣೆಗಳನ್ನು ತರಬೇಕಾದ ಅಗತ್ಯವನ್ನು ಎತ್ತಿ ತೋರಿದೆ. ಸಾರ್ವಜನಿಕ ಅಭಿಪ್ರಾಯದ ಮೇಲೆ ಅನ್ಯಾಯವಾಗಿ ಅನಗತ್ಯ ಪ್ರಭಾವ ಬೀರುವ, ಚುನಾವಣಾ ಪ್ರಕ್ರಿಯೆಯನ್ನು ದಾರಿ ತಪ್ಪಿಸುವ ಇಂತ ಅನೈತಿಕ ಆಚರಣೆಗಳನ್ನು ಕಟ್ಟುನಿಟ್ಟಾಗಿ ನಿಲ್ಲಿಸಬೇಕಾಗಿದೆ.

ಇಂತಹ ಒಂದು ಪಯರ್ಾಯ ಧೋರಣೆಗಳ ಅಜೆಂಡಾ ತನ್ನ ಕಟ್ಟಾ ಹಿಂದುತ್ವ ಅಜೆಂಡಾವನ್ನು ಪಕ್ಕಕ್ಕೆ ತಳ್ಳಿ ಬಿಡಬಹುದು ಎಂದು ಬಹಳ ಆತಂಕಗೊಂಡಿರುವ ಆರೆಸ್ಸೆಸ್ ಸುಮಾರು 2000 ದಷ್ಟು ತನ್ನ ಕಟ್ಟಾ ಕಾರ್ಯಕರ್ತರನ್ನು, ‘ಸೈದ್ಧಾಂತಿಕವಾಗಿ ಸಮಪರ್ಿತರಾದ’ ಮತ್ತು ‘ಸ್ವಸ್ಥ’ ಕಾರ್ಯಕರ್ತರನ್ನು ಬಿಜೆಪಿಯಲ್ಲಿ ‘ಇಡಲು’ ಸಿದ್ಧತೆ ನಡೆಸಿದೆ ಎಂದು ವರದಿಯಾಗಿದೆ. ಹೀಗೇನಾದರೂ 2014ರ ಚುನಾವಣೆಗಳಲ್ಲಿ ಆರೆಸ್ಸೆಸ್/ಬಿಜೆಪಿ ವಿಜಯಶಾಲಿಯಾದರೆ ಅದರ ಅರ್ಥ ಕೋಮುವಾದಿ ಧ್ರುವೀಕರಣ ತೀಕ್ಷ್ಣಗೊಳ್ಳುತ್ತದೆ ಮತ್ತು ನಮ್ಮ ವಿಶಾಲ ಜನಸಮೂಹಗಳ ಮೇಲೆ ಆಥರ್ಿಕ ಸಂಕಟಗಳನ್ನು ಹೇರಲಾಗುತ್ತದೆ.

ಶ್ರೀಮಂತರಿಗೆ ಸಬ್ಸಿಡಿಯ ದಾರಿ ಬೇಡ
2013ರಲ್ಲಿ ಮುಖ್ಯವಾಗಿ ಕಾಪರ್ೊರೇಟ್ ತೆರಿಗೆ ಮತ್ತು ಆದಾಯ ತೆರಿಗೆಗಳಲ್ಲಿ ಸರಕಾರ ಸಂಗ್ರಹಿಸದೆ ಬಿಟ್ಟಕೊಟ್ಟ ಮೊತ್ತ ಸುಮಾರು 6ಲಕ್ಷ ಕೋಟಿ ರೂ. ಎಂದು ಇತ್ತೀಚೆಗೆ ರಾಜ್ಯಸಭೆಗೆ ಮಾಹಿತಿ ನೀಡಲಾಗಿದೆ. ಸತತವಾಗಿ ಕಳೆದ ಕೆಲವು ವರ್ಷಗಳಲ್ಲಿ ಇದೇ ರೀತಿ ತೆರಿಗೆಯಾಗಿ ವಸೂಲಿ ಮಾಡಬೇಕಾಗಿದ್ದ ಅಪಾರ ಮೊತ್ತವನ್ನು ಸರಕಾರ ಸ್ವಯಮಿಚ್ಛೆಯಿಂದಲೇ ವಸೂಲಿ ಮಾಡದೆ ಬಿಟ್ಟಿದೆ. ಇವೆಲ್ಲ ಶ್ರೀಮಂತರಿಗೆ ನೀಡಿರುವ ಸಬ್ಸಿಡಿಗಳಲ್ಲದೆ ಬೇರೇನೂ ಅಲ್ಲ. ಅದು ಬೆಳವಣಿಗೆಗಾಗಿ ನೀಡಿದ ‘ಪ್ರೋತ್ಸಾಹಕ’ ಧನ ಎಂದು ನಮಗೆ ಹೇಳಲಾಗಿದೆ. ಅದೇ ವೇಳೆಗೆ ಬಡಜನರಿಗೆ ನೀಡುವ ಅಲ್ಪ ಸಬ್ಸಿಡಿಗಳು ನಮ್ಮ ಆಥರ್ಿಕವನ್ನು ಬಲಿ ತೆಗೆದುಕೊಳ್ಳಬಹುದಾದ ಅಸಹನೀಯ ಹೊರೆಗಳು ಎಂದು ಘೋಷಿಸಲಾಗುತ್ತಿದೆ.

ಆದರೆ, ಇಷ್ಟೆಲ್ಲಾ ತೆರಿಗೆ ರಿಯಾಯ್ತಿಗಳನ್ನು ನೀಡಿದರೂ ನಮ್ಮ ಕೈಗಾರಿಕಾ, ಮತ್ತು ತಯಾರಿಕಾ ಬೆಳವಣಿಗೆ ಹೆಚ್ಚೆಂದರೆ ಸ್ಥಗಿತ ಸ್ಥಿತಿಯಲ್ಲಿಯೇ ಇದೆ. ಈ ರೀತಿ ಶ್ರೀಮಂತರಿಗೆ ಸಬ್ಸಿಡಿ ನೀಡುವ ಬದಲು, ಆ ಅಪಾರ ಹಣವನ್ನು ಸಾರ್ವಜನಿಕ ಹೂಡಿಕೆಗಳಿಗೆ ಬಳಸಿದರೆ ನಾವು ಇನ್ನೂ ಎಷ್ಟೋ ಉತ್ತಮವಾದ ‘ಎಲ್ಲರನ್ನೂ ಒಳಗೊಳ್ಳುವ’ ಬೆಳವಣಿಗೆಯ ದಿಕ್ಪಥದಲ್ಲಿ ಸಾಗಬಹುದಾಗಿದೆ. ಭಾರತದ ಆಂತರಿಕ ಬೇಡಿಕೆಯನ್ನು ವಿಸ್ತರಿಸುವುದರ ಮೇಲೆ ನಿಂತಿರುವ ಒಂದು ಪಯರ್ಾಯ ಬೆಳವಣಿಗೆಯ ದಿಕ್ಪಥದ ಬಗ್ಗೆ ನಾವು ಈ ಅಂಕಣದಲ್ಲಿ ಮತ್ತೆ–ಮತ್ತೆ ವಿವರವಾಗಿ ಚಚರ್ಿಸಿದ್ದೇವೆ. ಪಯರ್ಾಯ ಧೋರಣೆಯ ದಿಕ್ಕು ಇರುವುದು ಇಂತಹ ಒಂದು ಬೆಳವಣಿಗೆಯ ದಿಕ್ಪಥದಲ್ಲೇ.
0

Donate Janashakthi Media

Leave a Reply

Your email address will not be published. Required fields are marked *