ನಾವೆಲ್ಲರೂ ನೀರೋನ ಅತಿಥಿಗಳೇ ಅಲ್ಲವೇ?

ಎನ್. ಸಂಧ್ಯಾ ರಾಣಿ

ಸಂಪುಟ – 06, ಸಂಚಿಕೆ 32, ಆಗಸ್ಟ್ 12, 2012

10

ಸುಮಾರು 8-9 ವರ್ಷಗಳ ಹಿಂದೆ, ಚಿತ್ರಕಲಾ ಪರಿಷತ್ತಿನಲ್ಲಿ ಪೂರ್ಣಚಂದ್ರ ತೇಜಸ್ವಿಯವರ ಚಿತ್ರಗಳ ಪ್ರದರ್ಶನ ಮತ್ತು ನಂತರ ಜಯಂತ ಕಾಯ್ಕಿಣಿ ಅವರು ನಡೆಸಿಕೊಟ್ಟ ತೇಜಸ್ವಿಯವರೊಂದಿಗಿನ ಸಂವಾದ ಕಾರ್ಯಕ್ರಮ ನಡೆದಿತ್ತು. ತೇಜಸ್ವಿಯ ನಿಗೂಢತೆ, ಅವರ ಕಣ್ಣಿನ ಅಚ್ಚರಿ, ಸೋಜಿಗ, ಅವರ ಮಾತುಗಳಲ್ಲಿನ ಮೌನ, ಇದೋ ತೇಜಸ್ವಿ ನಮ್ಮ ಅಳವಿಗೆ ಸಿಕ್ಕರು ಎಂದು ಕೊಳ್ಳುವಷ್ಟರಲ್ಲೇ ಥೇಟ್ ಅವರೇ ಬರೆದ ಮೀನಿನ ಹಾಗೆ ಪುಳಕ್ಕೆಂದು ಕೈ ಜಾರಿ ಹೋಗಿ, ನೀರಿನ ಅನಂತತೆಯಲ್ಲಿ ಮಾಯವಾಗಿ, ಆ ಕಂಪನಗಳನ್ನಷ್ಟೇ ನಮ್ಮ ಎದೆಗಳಲ್ಲಿ ಉಳಿಸುವ ತೇಜಸ್ವಿತನದ ಸಂಜೆ ಅದು. ಆ ಕಾರ್ಯಕ್ರಮವನ್ನೂ, ತೇಜಸ್ವಿ ಎಂಬ ತೇಜಸ್ವಿ ನನ್ನಲ್ಲಿ ಮೂಡಿಸಿದ ಭಾವಸ್ಪಂದನವನ್ನು ನನ್ನ ಜೀವನದ ಅತ್ಯದ್ಭುತ ಕ್ಷಣಗಳಲ್ಲಿ ಒಂದು ಎಂದು ನಾನು ಈಗಲೂ ಭಾವಿಸುತ್ತೇನೆ. ಅಂತಹ ಇನ್ನೊಂದು ದಿನ ಎನ್ನಬಹುದಾದರೆ ಅದು ನಿನ್ನೆ.

ಎಷ್ಟೋ ಓದಿ, ಎಷ್ಟೋ ಕೇಳಿದ್ದರೂ ಸಾಕ್ಷಾತ್ತಾಗಿ ಎದಿರು ನೋಡಿದ ಕ್ಷಣ ಪ್ರವಾಹದಂತೆ ನಮ್ಮ ಯೋಚನಾ ಧಾಟಿಯನ್ನು ಅಲ್ಲೋಲ ಕಲ್ಲೋಲ ಮಾಡುವ ಕಡಲು ಸಾಯಿನಾಥ್. ಆದರೆ, ಕಣ್ಣಿಗೆ ಕಾಣದೆ ಕೇವಲ ಅನುಭವಕ್ಕೆ ಮಾತ್ರ ತಾಕುವ ನಮ್ಮ ಇರುವಿಕೆಯ ಸಾಕ್ಷೀಪ್ರಜ್ಞೆ ದೇವನೂರು ಮಹಾದೇವ. ಒಂದು ಧಗ ಧಗ ಉರಿವ ದೊಂದಿ, ಇನ್ನೊಂದು ಕೇವಲ ತನ್ನ ಇರುವಿಕೆಯಿಂದಲೇ ಕತ್ತಲನ್ನು ಹೆದರಿಸುವ ದೀಪ, ಇಬ್ಬರೂ ನಡೆದಾಡುವ ನೈತಿಕ ಪ್ರಜ್ಞೆಗಳೇ. ಒಬ್ಬರಲ್ಲಿ ಸಾತ್ವಿಕ ರೋಷ ಮಾತಾಗುತ್ತದೆ, ತೀಕ್ಷ್ಣ ಬರಹವಾಗುತ್ತದೆ, ಇನ್ನೊಬ್ಬರಲ್ಲಿ ಇದು ನಮ್ಮನ್ನು ಕಾಯುವ, ತಪ್ಪು ಮಾಡಿದರೆ ಮೌನವಾಗೆ ತರಾಟೆಗೆ ತೆಗೆದುಕೊಳ್ಳುವ ಎಚ್ಚರಿಕೆಯ ಕೈ ಬೆರಳು.

ಜುಲೈ ಒಂದು ಕನ್ನಡ ಪತ್ರಿಕಾ ದಿನವಂತೆ. ನನಗೆ ಮತ್ತು ನನ್ನಂತಹ ಎಷ್ಟೋ ಜನರ ಪಾಲಿಗೆ ಅದು ‘ಬರ ಅಂದ್ರೆ ಎಲ್ಲರಿಗೂ ಇಷ್ಟ’ ಪುಸ್ತಕ ಬಿಡುಗಡೆ, ನಮ್ಮ ದಯಾ ಮತ್ತು ಗಾಯತ್ರಿ ಮೇಡಂ ಗೆ ಪ್ರಶಸ್ತಿ ಪ್ರಧಾನ ಮತ್ತು ಮುಖ್ಯವಾಗಿ ಸಾಯಿನಾಥ್ ಮತ್ತು ದೇವನೂರು ಒಂದೇ ವೇದಿಕೆಯಲಿ ್ಲ! ನಮ್ಮ ಮಟ್ಟಿಗೆ ಸುದ್ದಿ ಮತ್ತು ಕಾರ್ಯಕ್ರಮಕ್ಕೆ ಬರಲು ಕಾರಣ ಇಷ್ಟು ಮಾತ್ರ. ಜಿ ಎನ್ ಮೋಹನ್ ಅವರು ಒಂದೆಡೆ ಸಾಯಿನಾಥ್ ಬಗ್ಗೆ ಬರೆಯುತ್ತಾರೆ, ‘ಯಾವುದೀ ಪ್ರವಾಹವು??’, ಹಾಗೇ ಬಂದರು ಸಾಯಿನಾಥ್.

ಪಿ ಸಾಯಿನಾಥ್ ಅವರ ಇತಜಡಿಥಿಛಠಜಥಿ ಟಠತಜ ಚಿ ರಠಠಜ ಜಡಿಠಣರಣ ನಾನು ಓದಿದ್ದೆ, ಓದಿ ಮುಗಿಸಿದ ಕ್ಷಣ ಆ ಪುಸ್ತಕ ನನ್ನಲ್ಲಿ ಮೂಡಿಸಿದ ನಾಚಿಕೆ, ಅಪರಾಧ ಪ್ರಜ್ಞೆಯನ್ನು ಎಂದಿಗೂ ಮರೆಯಲಾರೆ. ಆ ಕ್ಷಣದಿಂದ ಅದನ್ನು ಹೊತ್ತೇ ತಿರುಗುತ್ತಿದ್ದೇನೆ? ನಾವು ಯಾವುದನ್ನು ಜಾಗತೀಕರಣದ ವರದಾನ ಎಂದು ಭಾವಿಸಿ ಕೈ ಚಾಚಿ ಅಪ್ಪಿಕೊಳ್ಳುತ್ತೇವೆಯೋ ಅದು ಹೇಗೆ ಎಷ್ಟೋ ಬದುಕುಗಳ, ಕನಸುಗಳ, ಸಂಸ್ಕೃತಿಗಳ ಗರ್ಭಪಾತವಾದ ಭ್ರೂಣ, ಅದರ ಹಸಿ ವಾಸನೆ, ರಕ್ತ ಹೇಗೆ ನಮ್ಮ ಕೈಗೆ ಅಂಟಿದೆ, ನಾವು ನಮ್ಮ ಹಕ್ಕು ಎಂದು ಬಳಸುವ, ವ್ಯರ್ಥ ಮಾಡುವ ನಮ್ಮ ಮಾಲ್ ಗಳಲ್ಲಿ ಝಗಮಗಿಸುವ, ಐಪಿಎಲ್ ನಲ್ಲಿ ಮೈದಾನಕ್ಕೆ ಬೆಳಕಿನ ಸ್ನಾನ ಮಾಡಿಸುವ ವಿದ್ಯುತ್, ಫé್ಲಷ್ ಮಾಡಿ ಚೆಲ್ಲುವ ನೀರು ಹೇಗೆ ಬೇರೆಯವರ ತಟ್ಟೆಯಿಂದ ನಾವು ಕಿತ್ತು ತಂದ ಅನ್ನ ಎಂದು ಸಾಯಿನಾಥ್ ಉದ್ವೇಗವಿಲ್ಲದ, ತಣ್ಣನೆಯ ಧ್ವನಿಯಲ್ಲಿ ವಿವರಿಸುವ ರೀತಿ ಅನನ್ಯ.

ಆ ಭಾವಕ್ಕೆ ಇನ್ನಷ್ಟು ಒತ್ತು ಸಿಕ್ಕಿದ್ದು ನಿನ್ನೆ ಸಾಯಿನಾಥ್ ಅವರ ಮಾತು ಕೇಳಿದಾಗ. ಜಾಗತೀಕರಣ. ಮುಕ್ತ ಮಾರುಕಟ್ಟೆ ಹೇಗೆ ವ್ಯವಸ್ಥಿತವಾಗಿ, ಹಂತ ಹಂತವಾಗಿ ನಮ್ಮನ್ನು ಅಂಗ ವಿಕಲರನ್ನಾಗಿ ಮಾಡುತ್ತಿದೆ ಮತ್ತು ದುರಂತ ಎಂದರೆ ಅದನ್ನೇ ಪ್ರಗತಿ ಎಂದು ಬಿಂಬಿಸಲಾಗುತ್ತಿದೆ ಮತ್ತು ಅದನ್ನು ನಾವು ನಂಬುತ್ತಿದ್ದೇವೆ ಎಂದು ಸಾಯಿನಾಥ್ ವಿವರಿಸುತ್ತಾ ಹೋದರು. ನಾಗೇಶ್ ಹೆಗಡೆ ನೀಡಿದ ಟಾಲ್ ಸ್ಟಾಯ್ ರೂಪಕದಂತೆ ಇಲ್ಲಿ ಉಳ್ಳವ, ಬಡವನ ಹೆಗಲಿನ ಮೇಲೆ ಕೂತಿದ್ದಾನೆ ಮತ್ತು ತಾನೇ ಇಬ್ಬರ ಭಾರ ಹೊತ್ತಿದ್ದೇನೆ ಎಂದು ಬಡವನನ್ನು ನಂಬಿಸಿದ್ದಾನೆ. ವಿಡಂಬನೆ ಎಂದರೆ ಅದನ್ನು ಅವನೂ ನಂಬಿಬಿಟ್ಟಿದ್ದಾನೆ. ಈಗ ನಾವು ಎಲ್ಲಿಗೆ ಮುಟ್ಟಿದ್ದೇವೆ ಎಂದರೆ ಚಕ್ರವತರ್ಿಯ ಮೈಮೇಲೆ ಬಟ್ಟೆ ಇಲ್ಲ ಎಂದು ಮಗು ಕೂಗಿದರೆ, ಮೊದಲಿನಂತೆ ಚಕ್ರವತರ್ಿ ನಾಚಿ, ಓಡಿ ಹೋಗಿ ಮೈ ಮುಚ್ಚಿಕೊಳ್ಳುವುದಿಲ್ಲ, ಇದೇ ಬಟ್ಟೆ ಎಂದು ಜೋರಾಗಿ ಹೇಳಿ ನಮ್ಮ ಬಾಯಿ ಮುಚ್ಚಿಸುತ್ತಾನೆ, ಮತ್ತು ತಾನೂ ಅದನ್ನು ನಂಬಿಬಿಡುತ್ತಾನೆ.

ಮುಕ್ತ ಮಾರುಕಟ್ಟೆ, ಮಾನ್ಸೆಂಟೋ ಬೀಜಗಳು ಹೇಗೆ ಕೃಷಿಯನ್ನು ಕಾಪರ್ೊರೇಟೀಕರಣಗೊಳಿಸುತ್ತಾ ಸಾಗಿದೆ, ಜೀವಮಾನದಲ್ಲೇ ಎಂದೂ ರೈತರ ಮುಖವನ್ನೇ ನೋಡದ, ಕೃಷಿ ಭೂಮಿಯ ಮೇಲೆ ಹೆಜ್ಜೆಯನ್ನೂ ಊರದ ವಿದೇಶಿ ಬ್ಯುಸಿನೆಸ್ ಕಾಲೇಜುಗಳಲ್ಲಿ ಎಂಬಿಎ ಪಡೆದ ಪ್ರಭೃತಿಗಳು ನಮ್ಮ ಕೃಷಿ ನೀತಿ ರೂಪಿಸುತ್ತಿದ್ದಾರೆ, ತನ್ನ ಬೆಳೆಯ ಬೆಲೆಗಿಂತಲೂ ಹೆಚ್ಚಿನ ಸಬ್ಸಿಡಿ ಪಡೆದ ವಿದೇಶಿ ರೈತನ ಜೊತೆ ಹೇಗೆ 20,000-30,000 ಸಾಲ ತೀರಿಸಲಾಗದೆ ಆತ್ಮಹತ್ಯೆ ಮಾಡಿಕೊಳ್ಳುವ ಭಾರತದ ರೈತ ಸ್ಪಧರ್ಿಸಬೇಕಾಗಿದೆ ಎಂದು ಸಾಯಿನಾಥ್ ವಿವರಿಸುತ್ತಾ ಹೋದಂತೆ ಅದೇ ಸಾತ್ವಿಕ ಸಿಟ್ಟು, ಅಸಹಾಯಕ ಆವೇಶ ನಿಮ್ಮನ್ನೂ ಆವರಿಸದಿದ್ದರೆ ಕೇಳಿ.

ಕಾಫéೀ ಬೆಳೆಯುವ ದೇಶಗಳು ಹೇಗೆ ಈ ಮುಕ್ತ ಮಾರುಕಟ್ಟೆಯ ದೆಸೆಯಿಂದ ಕಾಫéೀಪುಡಿ ಕೊಳ್ಳುವ ದೇಶಗಳಾಗಿ ಬದಲಾಗುತ್ತಿವೆ ಎಂದು ಸಾಯಿನಾಥ್ ಹೇಳುತ್ತಾರೆ, ‘ಹಣ ಇರುವುದು ಕಾಫéೀ ಬೆಳೆಯುವುದರಲ್ಲಿ ಅಲ್ಲ ಕಣ್ರೀ, ಅದನ್ನು ಬಿಸಾಕುವ ಬೆಲೆಗೆ ಕೊಂಡು, ಅದನ್ನು ಸಂಸ್ಕರಿಸಿ, ಚಂದದ ಪ್ಯಾಕೇಜ್ ಮಾಡಿ, ಮತ್ತೆ ದುಬಾರಿ ಬೆಲೆಗೆ ನಿಮಗೇ ಅದನ್ನು ಮಾರುವುದರಲ್ಲಿ.. ಈಗ ಬಹುರಾಷ್ಟ್ರೀಯ ಕಂಪನಿಗಳು ಮಾಡುತ್ತಿರುವುದು ಅದನ್ನು’ ಅಂತ. ಇಡೀ ಭಾರತವೇ ಬಿತ್ತಿ ಬೆಳೆದು, ಬೆಲೆ ಸಿಗದೆ ಆತ್ಮಹತ್ಯೆಗೆ ತಯಾರಾದ ಹತಾಶ ರೈತನಂತೆ ಕಾಣುತ್ತಿದೆ ನನಗೆ.

ರೈತರ ಆತ್ಮಹತ್ಯೆ ನಮ್ಮ ರಾಷ್ಟ್ರೀಯ ದುರಂತ ಹಾಗು ರಾಷ್ಟ್ರೀಯ ಅವಮಾನ. ಅವರ ನಡುವೆ ಓಡಾಡುತ್ತ ತೆಗೆದ, ಅವರ ಫéೋಟೋಗಳನ್ನು ನಮಗೆ ತೋರಿಸುತ್ತ ಸಾಯಿನಾಥ್ ನಮ್ಮೆದಿರು ರೈತರ ಸಂಕಟದ ಲೋಕ ಬಿಚ್ಚಿಡುತ್ತಾ ಹೋಗುತ್ತಾರೆ. “ಇದೋ ಈ ಕಣ್ಣುಗಳನ್ನು ನೋಡಿ, ಆ ಕಣ್ಣುಗಳಲ್ಲಿ ತುಂಬಿರುವ ಭೀತಿಯನ್ನು ನೋಡಿ, ತಂದೆ ಆತ್ಮಹತ್ಯೆ ಮಾಡಿಕೊಂಡಿದ್ದಾನೆ, ಅಪ್ಪನ ಅಂಗಿಯನ್ನು ತೊಟ್ಟು, ಅವನ ಸಾಲವನ್ನೂ ಹೊತ್ತ ಮಗ, ಪಕ್ಕದಲ್ಲಿ ತಲೆ ಮೇಲೆ ಕೈಹೊತ್ತು ಕೂತ ಆತನ ಅಮ್ಮ, ಆ ಕಣ್ಣುಗಳು ಹಗಲು ರಾತ್ರಿ ನಿಮ್ಮನ್ನು ಹಿಂಬಾಲಿಸುತ್ತವೆ. ಇನ್ನೊಂದು ದೃಶ್ಯ, ಅಪ್ಪ ಆತ್ಮಹತ್ಯೆ ಮಾಡಿಕೊಂಡಿದ್ದಾನೆ, ಮನೆ ಸಾಮಾನುಗಳನ್ನು ಒತ್ತರಿಸುವಾಗ ಸಿಕ್ಕ ಹಾಳೆಗಳ ಕಂತೆ ನೋಡಿದಾಗ ಅಪ್ಪ ಕವಿ ಸಹ ಆಗಿದ್ದ ಅಂತ ಮಗಳಿಗೆ ಗೊತ್ತಾಗುತ್ತದೆ, ‘ನೆಲಕ್ಕೆ ಹನಿ ಹನಿ ನೀರಿನ ಬದಲಾಗಿ, ಹನಿ ಹನಿ ಬೆವರು ರಕ್ತ ಬಸಿದ ರೈತ’ ನ ಬಗ್ಗೆ ಅಪ್ಪ ಬರೆದದ್ದನ್ನು ಓದುತ್ತಾ ಮಗಳ ಕಣ್ತುಂಬಾ ನೀರು, ಇನ್ನೊಂದೆಡೆ ರೈತನ ಹೆಂಡತಿ ಸಹ ಸಾಲದ ಬವಣೆ ತಾಳಲಾಗದೆ ಆತ್ಮಹತ್ಯೆ ಮಾಡಿಕೊಂಡಿದ್ದಾಳೆ, ಆದರೆ ಅವಳಿಗೆ ಪರಿಹಾರ ಸಿಗುತ್ತಿಲ್ಲ, ಯಾಕೆಂದರೆ ನಮ್ಮ ಯೋಜನೆಗಳ-ಕಾನೂನುಗಳ ಪ್ರಕಾರ ಹೆಣ್ಣು ರೈತಳಲ್ಲ, ಆಕೆ ರೈತನ ಹೆಂಡತಿ ಅಥವಾ ರೈತನ ವಿಧವೆ ಅಷ್ಟೆ? ಇನ್ನೊಂದೆಡೆ ಇವರು ಆಸ್ಪತ್ರೆಗೆ ಹೋಗಿದ್ದಾಗಲೇ ಆತ್ಮಹತ್ಯೆಗೆ ಪ್ರಯತ್ನಿಸಿದ್ದ ಇನ್ನೊಬ್ಬ ರೈತನನ್ನು ಸಾವು ಬದುಕಿನ ನಡುವೆ ಅಲ್ಲಿಗೆ ಕರೆತರಲಾಗುತ್ತದೆ, ಆತ ಕ್ರಿಮಿನಾಶಕ ನುಂಗಿದ್ದಾನೆ, ‘ಇದು ಎಲ್ಲಿಯದೋ ಕಥೆ ಅಲ್ಲ, ನಿಮ್ಮ ಪಕ್ಕದ ಮಂಡ್ಯದ ಜಯಲಕ್ಷ್ಮಮ್ಮನಿಗೆ ಒಂದು ಹೊತ್ತಿನ ರೇಶನ್ ಅಕ್ಕಿ, ಇಲ್ಲಿ ಜೈಲಿನಲ್ಲಿರುವ ಅಪರಾಧಿಗೆ ಕೊಡುವ ಬಿಟ್ಟಿ ಊಟಕ್ಕಿಂತ ಕಮ್ಮಿ’ ಅಂತ ನಮ್ಮನ್ನು ಬೆಚ್ಚಿ ಬೀಳಿಸುತ್ತಾರೆ ಸಾಯಿನಾಥ್.

ಕುತ್ತಿಗೆಗೆ ಗುಂಡು ಕಟ್ಟಿ, ಅವರನ್ನು ನೀರಿಗೆ ತಳ್ಳಿ, ಅಲ್ಲಿಗೂ ನಿಲ್ಲಿಸದೇ ನಾವು ಕೂತ ದೋಣಿಯನ್ನು ತಳ್ಳಿ ದಡ ಸೇರಿಸು ಎಂದು ರೈತನಿಗೆ ಛಾವಟಿ ಬೀಸುವ ಈ ವ್ಯವಸ್ಥೆಯ ಶೀತಲ ಕ್ರೌರ್ಯ. ಗಮನಿಸಬೇಕಾದ ಅಧಿಕಾರಶಾಹಿ ಜಾಣಗುರುಡಿನಲ್ಲಿದೆ, ತಿದ್ದಬೇಕಾದ ಮಾಧ್ಯಮ ಭಿಕರಿಯಾಗಿದೆ. ಇದು ಯಾರ ಭಾರತ? ಇದು ಯಾರ ಪ್ರಗತಿ??

ನಮ್ಮ ಮುಂದೆ ಸಾಯಿನಾಥ್ ಒಂದು ಐತಿಹಾಸಿಕ ಘಟನೆ ಇಡುತ್ತಾರೆ, ರೋಮ್ನ ದೊರೆ ನೀರೋ ಜಗತ್ತಿನಲ್ಲೇ ಅಭೂತ ಪೂರ್ವವಾದ ಒಂದು ಔತಣಕೂಟ ಮಾಡಬೇಕು ಎಂದು ಯೋಚಿಸುತ್ತಾನೆ. ಎಲ್ಲಾ ಸಿದ್ಧತೆಗಳಾಗುತ್ತವೆ. ಬಂದಿರುವ ಅತಿಥಿ ಗಳಾದರೂ ಯಾರು? ಆ ಕಾಲಘಟ್ಟದ ಅತ್ಯಂತ ಸಂವೇದನಾಶೀಲರಾದ ಲೇಖಕರು, ಕವಿಗಳು, ಅಪಾರ ಬುದ್ಧಿಮತ್ತೆ ಉಳ್ಳವರು, ಸಮಾಜದ ವಿದ್ಯಾವಂತ ಸಮೂಹ, ರಾತ್ರಿಯ ಔತಣಕೂಟ? ಬೆಳಕಿಗೇನು ಮಾಡುವುದು? ‘ಸೆರೆಮನೆ ಯಲ್ಲಿರುವ ಅಪರಾಧಿಗಳನ್ನು, ಆರೋಪಿಗಳನ್ನು ಎಳೆದು ತನ್ನಿ’ ನೀರೋ ಆಜ್ಞಾಪಿಸುತ್ತಾನೆ. ಅವರೆಲ್ಲರ ಮೇಲೂ ಉರುವಲು ಸುರಿದು ಬೆಂಕಿ ಹಚ್ಚಲಾಗುತ್ತದೆ, ಕಣ್ಣು ಕೋರೈಸುವ ಬೆಳಕು, ಉರಿ ತಾಳದೆ ಚೀರಾಡಿ ತಪ್ಪಿಸಿಕೊಳ್ಳಲು ದೇಹಗಳು ಒದ್ದಾಡುವಾಗ ಓಲಾಡುವ ಬೆಂಕಿಯ ಜ್ವಾಲೆ?
ಔತಣಕೂಟ ನಡೆಯುತ್ತಲೇ ಇದೆ? ಒಂದು ಜನಾಂಗದ ಸಂವೇದನೆ, ಬುದ್ದಿಮತ್ತೆಯ ಸಾಂದ್ರ ಪ್ರಜ್ಞೆ, ಒಂದೊಂದು ದೇಹ ಉರಿದು, ಕರಕಲಾಗಿ, ಬೂದಿಯಾಗುತ್ತಾ ಹೋದ ಹಾಗೆ ಒಂದೊಂದು ಅಂಜೂರ, ಒಂದೊಂದು ದ್ರಾಕ್ಷೀ ಹಣ್ಣು, ಒಂದೊಂದು ಗುಟುಕು ದ್ರಾಕ್ಷಾರಸವನ್ನು ಗುಟುಕರಿಸುತ್ತಾ ಇದೆ, ಪಕ್ಕದಲ್ಲಿ ದೇಹಗಳು ಒಂದಾದ ಮೇಲೊಂದರಂತೆ ಉರಿದು ಬೀಳುತ್ತಲೇ ಇದೆ?.

‘ಇಲ್ಲಿ ಆ ನೀರೋ ಬಗ್ಗೆ ನಾನು ಮಾತಾಡೊಲ್ಲ, ಆತ ಕ್ರೂರಿ ಹೌದು, ವಿಕೃತ ಹೌದು, ಆದರೆ ಅವನ ಔತಣಕೂಟಕ್ಕೆ ಬಂದಿದ್ದರಲ್ಲ ಆ ಬುದ್ಧಿವಂತ, ಕವಿ ಹೃದಯದ ಜನ? ನನ್ನ ಪ್ರಶ್ನೆ ಅವರಿಗೆ, ಅವರಲ್ಲಿ ಒಬ್ಬರಾದರೂ ಅದು ತಪ್ಪು ಎಂದು ಹೇಳಲಿಲ್ಲವಲ್ಲ, ತಮ್ಮ ಪಾಡಿಗೆ ತಾವು ದ್ರಾಕ್ಷಾರಸ ಗುಟುಕರಿಸುತ್ತಾ ಕುಳಿತರಲ್ಲ, ಅವರ ಮೌನ ಸ್ವೀಕಾರ ನನ್ನನ್ನು ಕಾಡುತ್ತದೆ’ ಅನ್ನುತ್ತಾರೆ ಸಾಯಿನಾಥ್. ಆ ಅಥಿತಿಗಳ ಮುಖದಲ್ಲಿ ನಮಗೆ ನಮ್ಮ ಮುಖಗಳು ಕಾಣತೊಡಗುತ್ತದೆ.
ನಾವೆಲ್ಲ ಆ ನೀರೋನ ಅತಿಥಿಗಳೇ ಅಲ್ಲವೆ?

0

Donate Janashakthi Media

Leave a Reply

Your email address will not be published. Required fields are marked *