`ಪೀಪಲ್ಸ್ ಡೆಮಾಕ್ರೆಸಿ’ ವಾರ ಪತ್ರಿಕೆಯ ಆಗಸ್ಟ್ 16, 2012 ರ ಸಂಚಿಕೆಯ ಸಂಪಾದಕೀಯ
ಸಂಪುಟ – 06, ಸಂಚಿಕೆ 35, ಆಗಸ್ಟ್ 26, 2012
ಪ್ರಧಾನ ಮಂತ್ರಿಗಳ ಆಗಸ್ಟ್ 15 ಭಾಷಣ ಕಳಾಹೀನವಾಗಿತ್ತು. ಇದು ನಾಲ್ಕನೇ ವರ್ಷ ಅಧಿಕಾರದಲ್ಲಿರುವ ಯುಪಿಎ-2 ಸರಕಾರದ – ನವ-ಉದಾರವಾದ ಮತ್ತು ಭ್ರಷ್ಟಾಚಾರದ ಕೆಸರಿನಲ್ಲಿ ಸಿಲುಕಿಕೊಂಡು ಕೈಕಾಲು ಬಡಿಯುತ್ತಿರುವ ಒಂದು ಸರಕಾರದ ಎಲ್ಲ ಲಕ್ಷಣಗಳನ್ನೂ ಪ್ರದಶರ್ಿಸಿರುವ ಒಂದು ಭಾಷಣ. ಅದರಲ್ಲಿ ರಾಜಕೀಯ ಒಮ್ಮತವಿಲ್ಲ ಎಂಬ ಮೋಸದ ಮಾತಿತ್ತು, ಪರಿಣಾಮಕಾರಿ ಲೋಕಪಾಲ ಕಾನೂನಿನ ಬಗ್ಗೆ ಕಪಟತನದ ಮಾತಿತ್ತು.
65ನೇ ಸ್ವಾತಂತ್ರ್ಯೋತ್ಸವದಂದು ಪ್ರಧಾನ ಮಂತ್ರಿಗಳು ಕೆಂಪು ಕೋಟೆಯ ಎತ್ತರದಿಂದ ತನ್ನ ಸಾಂಪ್ರದಾಯಿಕ ಭಾಷಣ ಮಾಡಿದರು. ಪ್ರಧಾನ ಮಂತ್ರಿಗಳ ಆಗಸ್ಟ್ 15ರ ಭಾಷಣ ಕಳೆದ ಒಂದು ವರ್ಷದಲ್ಲಿ ದೇಶ ಹೇಗೆ ರೂಪುಗೊಂಡಿದೆ ಎಂದು ಜನತೆಗೆ ಹೇಳುವುದಕ್ಕಾಗಿ ಮತ್ತು ಮುಂದಿನ ಒಂದು ವರ್ಷ ದೇಶದ ಮುಂದಿರುವ ಸವಾಲುಗಳನ್ನು ಸರಕಾರ ಹೇಗೆ ಎದುರಿಸಬೇಕೆಂದಿದೆ ಎಂದು ಸೂಚಿಸುವುದಕ್ಕಾಗಿ.
ಈ ವರ್ಷ ಸ್ವಾತಂತ್ರ್ಯ ದಿನಾಚರಣೆ ನಡೆಯುತ್ತಿರುವುದು ದೇಶವನ್ನು ಗಂಭೀರ ಆಥರ್ಿಕ ಸಂಕಟಗಳು ಆವರಿಸಿಕೊಂಡಿರುವ ಸಮಯದಲ್ಲಿ. ಜನತೆ ವಿಪರೀತ ಬೆಲೆಯೇರಿಕೆಯಿಂದ ನರಳುತ್ತಿದ್ದಾರೆ, ಆಹಾರ ಹಣದುಬ್ಬರ ದರ ಸ್ವಾತಂತ್ರ್ಯ ದಿನದ ಮುನ್ನಾದಿನದ ಪ್ರಕಟಣೆಯಂತೆ 10 ಶೇಕಡಾ ದಾಟಿದೆ. ಮಳೆಯ ಕೊರತೆಯಿಂದ ದೇಶದ ವಿಭಿನ್ನ ಭಾಗಗಳಲ್ಲಿ ಬರ ಪರಿಸ್ಥಿತಿಯಿದೆ. ಕೈಗಾರಿಕಾ ಉತ್ಪಾದನೆ ಹೊಸ ಆಳಕ್ಕೆ ಇಳಿದಿದೆ. ರಫ್ತುಗಳು ತೀವ್ರವಾಗಿ ಕುಸಿದಿವೆ. ಇವೆಲ್ಲಾ ಜನತೆಯ ಉದ್ಯೋಗ ಮತ್ತು ಜೀವನಾಧಾರಕ್ಕೆ ಎರಗಲಿರುವ ಕರಾಳ ದಿನಗಳ ಲಕ್ಷಣಗಳು.
ರಾಜಕೀಯ ಒಮ್ಮತವಿಲ್ಲ
ಎಂಬ ವಂಚನೆ
ಇಂತಹ ಸನ್ನಿವೇಶದಲ್ಲಿ ಡಾ. ಮನಮೋಹನ ಸಿಂಗ್ರವರ ಭಾಷಣವಂತೂ ಕಳಾಹೀನವಾಗಿತ್ತು. ಇದು ನಾಲ್ಕನೇ ವರ್ಷ ಅಧಿಕಾರದಲ್ಲಿರುವ ಯುಪಿಎ-2 ಸರಕಾರದ – ನವ-ಉದಾರವಾದ ಮತ್ತು ಭ್ರಷ್ಟಾಚಾರದ ಕೆಸರಿನಲ್ಲಿ ಸಿಲುಕಿಕೊಂಡು ಕೈಕಾಲು ಬಡಿಯುತ್ತಿರುವ ಒಂದು ಸರಕಾರದ ಎಲ್ಲ ಲಕ್ಷಣಗಳನ್ನೂ ಪ್ರದಶರ್ಿಸಿರುವ ಒಂದು ಭಾಷಣ.
ದೇಶದೊಳಗೆ ತ್ವರಿತ ಆಥರ್ಿಕ ಬೆಳವಣಿಗೆಯ ಒಂದು ವಾತಾವರಣವನ್ನು ನಿಮರ್ಿಸುವ ಬಗ್ಗೆ ಹೇಳುವುದಾದರೆ, ಹಲವು ವಿಷಯಗಳಲ್ಲಿ ಒಂದು ರಾಜಕೀಯ ಒಮ್ಮತದ ಕೊರತೆಯಿಂದಾಗಿ ಇದನು ಸಾಧಿಸುವುದು ನಮಗೆ ಆಗುತ್ತಿಲ್ಲ ಎಂಬುದು ನನ್ನ ನಂಬಿಕೆ ಎಂದರು ಪ್ರಧಾನ ಮಂತ್ರಿಗಳು ತಮ್ಮ ಭಾಷಣದಲ್ಲಿ. ಇದೊಂದು ವಂಚಕ ಹೇಳಿಕೆ. ಪ್ರಧಾನ ಮಂತ್ರಿಗಳು ಮತ್ತು ಅವರ ಸರಕಾರ ನವ-ಉದಾರವಾದಿ ಕ್ರಮಗಳನ್ನು ಮುಂದೊತ್ತಲು ಏನೆಲ್ಲಾ ಪ್ರಯತ್ನ ನಡೆಸುತ್ತಿದೆ. ಅದಕ್ಕಾಗಿ ಅದು ಹಿಡಿಯದ ಅಡ್ಡ ಮಾರ್ಗಗಳಿಲ್ಲ. ಇತ್ತೀಚೆಗೆ ಪ್ರಧಾನ ಮಂತ್ರಿಗಳು ಸಾರ್ವಜನಿಕ-ಖಾಸಗಿ ಪಾಲುದಾರಿಕೆಯ ಪ್ರಾಜೆಕ್ಟುಗಳಲ್ಲಿ ಖಾಸಗಿಯವರಿಗೆ ಭೂಮಿ ವಗರ್ಾವಣೆಯನ್ನು ಸಂಪುಟದ ಮಂಜೂರಾತಿಯಿಲ್ಲದೆ ಮಾಡಬಾರದು ಎಂಬ ನಿಷೇಧವನ್ನು ತೆಗೆದಿದ್ದಾರೆ. ಕಾರ್ಯಕಾರೀ ನಿರ್ಣಯದಿಂದ ಈ ರೀತಿ ಭೂಮಿ ವಗರ್ಾವಣೆ ಭ್ರಷ್ಟ ಆಚರಣೆಗಳಿಗೆ ಅವಕಾಶ ಕೊಡುತ್ತದೆ. ಇದೇ ರೀತಿ, ಸರಕಾರ ವಿಭಿನ್ನ ವಲಯಗಳನ್ನು ವಿದೇಶಿ ನೇರ ಹೂಡಿಕೆಗಳಿಗೆ ತೆರೆಯುವಾಗ ಯಾವುದೇ ರಾಜಕೀಯ ಒಮ್ಮತದ ಬಗ್ಗೆ ತಲೆ ಕೆಡಿಸಿಕೊಳ್ಳಲಿಲ್ಲ. ಸದ್ಯದ ಆಥರ್ಿಕ ನಿಧಾನಗತಿಯನ್ನೇ ನೆಪ ಮಾಡಿಕೊಂಡು ಪ್ರಧಾನ ಮಂತ್ರಿಗಳು ಮತ್ತು ಹಣಕಾಸು ಮಂತ್ರಿಗಳು ವಿದೇಶಿ ಮತ್ತು ದೇಶಿ ಬಂಡವಾಳಕ್ಕೆ ಮತ್ತು ಕಾಪರ್ೊರೇಟ್ಗಳಿಗೆ ನೆರವಾಗುವ, ತೆರಿಗೆಗಳನ್ನು ತಪ್ಪಿಸಿಕೊಳ್ಳುವ ಹಲವಾರು ಕ್ರಮಗಳನ್ನು ಮುಂದೊತ್ತುವಲ್ಲಿ ಮಗ್ನರಾಗಿದ್ದಾರೆ.
ಈಡೇರದ ಭರವಸೆಗಳು
ಕಳೆದ ವರ್ಷ ಸ್ವಾತಂತ್ರ್ಯೋತ್ಸವ ಭಾಷಣದಲ್ಲಿ ಪ್ರಧಾನ ಮಂತ್ರಿಗಳು ಏರುತ್ತಿರುವ ಬೆಲೆಗಳ ಮೇಲೆ ಹತೋಟಿ ಎಲ್ಲಕ್ಕೂ ಮಿಗಿಲಾದ ಆದ್ಯತೆ ಎಂದಿದ್ದರು. ಭೂಮಿಯನ್ನು ಅವಲಂಬಿಸಿದವರ ಹಿತಗಳನ್ನು ರಕ್ಷಿಸುವ ಒಂದು ಹೊಸ ಭೂಸ್ವಾಧೀನ ಮತ್ತು ಮರುವಸತಿ ಕಾನೂನನ್ನು ತರುವುದಾಗಿ ಭರವಸೆ ನೀಡಿದ್ದರು. ಈ ವರ್ಷದ ಭಾಷಣದಲ್ಲಿ ಈ ದಿಕ್ಕಿನಲ್ಲಿ ಕೈಗೊಂಡ ಕ್ರಮಗಳ ಪ್ರಸ್ತಾಪವೇ ಇಲ್ಲ. ಬೆಲೆಗಳ ನಾಗಾಲೋಟ ಮುಂದುವರೆದಿದೆ ಮತ್ತು ಒಂದು ವರ್ಷವಾದರೂ ಭೂಸ್ವಾಧೀನ ಮತ್ತು ಮರುವಸತಿ ಕಾನೂನನ್ನು ಸಂಸತ್ತು ಇನ್ನೂ ಅಂಗೀಕರಿಸಿಲ್ಲ. ಅತ್ಯಂತ ತುತರ್ಾಗಿ ತರಬೇಕಾಗಿದ್ದ ಆಹಾರ ಭದ್ರತಾ ಕಾನೂನಿನ ಬಗ್ಗೆ ಪ್ರಧಾನ ಮಂತ್ರಿಗಳು ಮೌನ ವಹಿಸಿದ್ದಾರೆ.
2011ರ ಭಾಷಣದಲ್ಲಿ ಪ್ರಧಾನ ಮಂತ್ರಿಗಳು ಭ್ರಷ್ಟಾಚಾರದ ವಿಷಯಕ್ಕೆ ಸಾಕಷ್ಟು ಸ್ಥಳಾವಕಾಶ ನೀಡಿದ್ದರು. ಇತರ ಕೆಲವು ಘಟನೆಗಳಲ್ಲಿ, ಸರಕಾರದ ವಿವೇಚನಾ ಅವಕಾಶವನ್ನು ಆಯ್ದ ಕೆಲವರಿಗೆ ಅನುಕೂಲ ಕಲ್ಪಿಸಲು ಬಳಸಲಾಗಿದೆ. ಸರಕಾರೀ ಕಾಂಟ್ರಾಕ್ಟುಗಳನ್ನು ತಪ್ಪು ವ್ತಕ್ತಿಗಳಿಗೆ ತಪ್ಪಾಗಿ ನೀಡಿದ ಸಂದರ್ಭಗಳೂ ಇವೆ. ಇಂತಹ ಚಟುವಟಿಕೆಗಳು ಅಡೆ ತಡೆಯಿಲ್ಲದೆ ಮುಂದುವರೆಯಲು ಬಿಡಲಾಗದು ಎಂದು ಅವರು ಹೇಳಿದ್ದರು.
ಯುಪಿಎ ಆಡಳಿತದ ಪ್ರಧಾನ ಲಕ್ಷಣವಾಗಿ ಬಿಟ್ಟುರುವ ಬೃಹತ್ ಭ್ರಷ್ಟಾಚಾರ ಕಲ್ಲಿದ್ದಲು ಬ್ಲಾಕುಗಳ ಹಂಚಿಕೆಯ ಕುರಿತ ಸಿಎಜಿ ಯ ಇತ್ತೀಚಿನ ವರದಿಯಿಂದ ಮತ್ತೊಮ್ಮೆ ಬಯಲಿಗೆ ಬಂದಿದೆ. ಈ ಕಾಂಟ್ರಾಕ್ಟುಗಳನ್ನು ನೀಡುವಲ್ಲಿ 1.8ಲಕ್ಷ ಕೋಟಿ ರೂ.ಗಳ ನಷ್ಟವಾಗಿದೆ ಎಂದು ಅಂದಾಜು ಮಾಡಲಾಗಿದೆ.
ಭ್ರಷ್ಟಾಷಾರ-ಕಪಟ ಮಾತು
ಭ್ರಷ್ಟಾಚಾರವನ್ನು ನಿಗ್ರಹಿಸುವಲ್ಲಿ ಒಂದು ಕ್ರಮವಾಗಿ ಒಂದು ಪರಿಣಾಮಕಾರಿ ಲೋಕಪಾಲ ಕಾನೂನನ್ನು ತರಲಾಗುವುದು ಎಂದು ಕಳೆದ ವರ್ಷದ ಭಾಷಣದಲ್ಲಿ ಭರವಸೆ ನೀಡಲಾಗಿತ್ತು. ಈ ಕ್ಷೇತ್ರದಲ್ಲಿ ಕಳೆದ ಒಂದು ವರ್ಷದಲ್ಲಿ ಒಳ್ಳೆಯ ಪ್ರಗತಿಯನ್ನು ಸಾಧಿಸಿದ್ದೇವೆ ಎಂದು ಹೇಳಲು ನನಗೆ ಸಂತೋಷವಾಗುತ್ತದೆ ಎಂಬ ಪ್ರಧಾನಿ ಭಾಷಣದಲ್ಲಿನ ಪ್ರಕಟಣೆ ಕಪಟತನದ್ದು. ಇದಕ್ಕೆ ಅವರು ಲೋಕಸಭೆಯಲ್ಲಿ ಅಂಗೀಕರಿಸಿದ ಲೋಕಪಾಲ ಮಸೂದೆಯನ್ನು ಉದಾಹರಣೆಯಾಗಿ ತೋರಿಸಿದರು. ರಾಜ್ಯಸಭೆಯಲ್ಲಿ, ಕಳೆದ ಡಿಸೆಂಬರಿನಲ್ಲಿ ಲೋಕಪಾಲ ವ್ಯವಸ್ಥೆಯನ್ನು ಹೆಚ್ಚು ಪರಿಣಾಮಕಾರಿಯಾಗಿಸಲು ಮುಂದಿಟ್ಟ ತಿದ್ದುಪಡಿಗಳನ್ನು ವಿಫಲಗೊಳಿಸುವ ಪ್ರಯತ್ನ ನಡೆಯಿತು. ಕಾಂಗ್ರೆಸ್ ಮುಖಂಡತ್ವ ಉನ್ನತ ಹಂತದ ಭ್ರಷ್ಟಾಚಾರದ ಅಪರಾಧಿಗಳನ್ನು ರಕ್ಷಿಸುವ ಪ್ರಯತ್ನದಲ್ಲಂತೂ ಎಂದೂ ಹಿಂದೆ ಬಿದ್ದಿಲ್ಲ.
ಪ್ರಧಾನ ಮಂತ್ರಿಗಳು ಅಸ್ಸಾಂನ ಬೋಡೋಲ್ಯಾಂಡ್ ಪ್ರದೇಶದಲ್ಲಿ ವ್ಯಾಪಕ ಪ್ರಮಾಣದ ಕೋಮು ಹಿಂಸಾಚಾರದ ಬಗ್ಗೆ ಆತಂಕ ವ್ಯಕ್ತಪಡಿಸಿದರು. ಆದರೆ ರಾಜ್ಯ ಸರಕಾರ ಮತ್ತು ಕೇಂದ್ರ ಸರಕಾರ ಸೂಕ್ತ ಸಮಯದಲ್ಲಿ ಮತ್ತು ಪರಿಣಾಮಕಾರಿಯಾಗಿ ಮಧ್ಯಪ್ರವೇಶಿಸದೆ ಪರಿಸ್ಥಿತಿ ಗಂಭೀರವಾಗುವಂತೆ ಮಾಡಿದವು. ಬೇರೆಡೆಗಳಲ್ಲೂ ಕೋಮುವಾದಿ ಹಿಂಸಾಚಾರದ ಭೀತಿ ಮತ್ತು ಘಟನೆಗಳ ಆತಂಕಕಾರಿ ಲಕ್ಷಣಗಳು ಕಂಡಿದೆ. ಉತ್ತರ ಪ್ರದೇಶದಲ್ಲಿ, ನಿದರ್ಿಷ್ಟವಾಗಿ ಆ ರಾಜ್ಯದ ಪಶ್ಚಿಮ ಭಾಗದಲ್ಲಿ ಕೋಮು ಗಲಭೆಗಳ ಒಂದು ಸರಣಿಯೇ ಕಾಣ ಬಂದಿದೆ. ಹದಗೆಡುತ್ತಿರುವ ಆಥರ್ಿಕ ಪರಿಸ್ಥಿತಿಯನ್ನು ಬಳಸಿಕೊಂಡು ಜನಗಳಲ್ಲಿ ಕೋಮುವಾದಿ ಬಿಗುವಿಗೆ ತಿದಿಯೂದಲು ಕೋಮುವಾದಿ ಶಕ್ತಿಗಳು ಪ್ರಯತ್ನಿಸುತ್ತಿವೆ. ಪುಣೆಯಲ್ಲಿನ ಸ್ಫೋಟಗಳನ್ನು ಇಂತಹ ಉಗ್ರಗಾಮಿ ಶಕ್ತಿಗಳ ಕೈವಾಡದ ಒಂದು ಭಾಗವೆಂದು ಕಾಣಬೇಕಾಗಿದೆ. ಸ್ವತಂತ್ರ ಭಾರತದ ಜಾತ್ಯಾತೀತ ಆಧಾರವನ್ನು ಕಾಯ್ದುಕೊಳ್ಳುವಲ್ಲಿ ಹೆಚ್ಚಿನ ಎಚ್ಚರ ಮತ್ತು ಪ್ರಯತ್ನ ಬೇಕಾಗಿದೆ.
ಸ್ವಾತಂತ್ರ್ಯ ದಿನದ ಸಂದರ್ಭದಲ್ಲಿ ಜನತೆಯನ್ನು ಸಂಕಟಕ್ಕೀಡು ಮಾಡುವ, ಅಸಮಾನತೆಗಳನ್ನು ಹೆಚ್ಚಿಸುವ ಸರ್ವವ್ಯಾಪೀ ಶೋಷಣೆಯ ವಿರುದ್ಧ ಹೋರಾಟವನ್ನು ದ್ವಿಗುಣಗೊಳಿಸುವ ಪಣ ತೊಡಬೇಕಾಗಿದೆ. ಆಥರ್ಿಕ ಮತ್ತು ಸಾಮಾಜಿಕ ವಿಮೋಚನೆಯ ಅನ್ವೇಷಣೆಯನ್ನು ಮುಂದುವರೆಸಬೇಕಾಗಿದೆ. ಇದರಿಂದ ಮಾತ್ರವೇ ನಿಜವಾದ ಸ್ವಾತಂತ್ರ್ಯದ ಗುರಿ ಈಡೇರಲು ಸಾಧ್ಯ.
0