ದ್ವಿಗುಣ ಶಕ್ತಿಯಿಂದ ಪ್ರಸಕ್ತ ಸವಾಲುಗಳನ್ನು ಎದುರಿಸುವ ಸಂಕಲ್ಪ

`ಪೀಪಲ್ಸ್ ಡೆಮಾಕ್ರೆಸಿ’ ವಾರ ಪತ್ರಿಕೆಯ ಏಪ್ರಿಲ್ 12, 2012 ರ ಸಂಪಾದಕೀಯ

ಸಂಪುಟ – 06, ಸಂಚಿಕೆ 17, ಏಪ್ರೀಲ್ 22, 2012

5

ಮಾಕ್ಸರ್್ರವರು ತಮ್ಮ ಪ್ರಖ್ಯಾತ ಉದ್ಗಾರದಲ್ಲಿ ಹೇಳಿರುವಂತೆ, ಜಗತ್ತನ್ನು ಅರಿಯುವುದಷ್ಟೇ ಅಲ್ಲ, ಅದನ್ನು ಬದಲಾಯಿಸಬೇಕು. 20ನೇ ಮಹಾಧಿವೇಶನದಲ್ಲಿ ಚಚರ್ಿಸಿದ ಪ್ರಧಾನ ಪ್ರಶ್ನೆ ಇದು: ಭಾರತೀಯ ಮೂರ್ತ ಪರಿಸ್ಥಿತಿಗಳಲ್ಲಿ ಬಂಡವಾಳಶಾಹಿಗೆ ರಾಜಕೀಯ ಪಯರ್ಾಯವನ್ನು ಬಲಪಡಿಸುವುದು ಹೇಗೆ ಎಂಬುದು. ವಸ್ತುಸ್ಥಿತಿ ಬಂಡವಾಳಶಾಹಿಗೆ ಒಂದು ರಾಜಕೀಯ ಪಯರ್ಾಯವನ್ನು ಬಲಪಡಿಸುವ ಅಗತ್ಯದತ್ತ ತೀವ್ರವಾಗಿ ಬೊಟ್ಟು ಮಾಡುತ್ತಿದ್ದರೆ, ಕಾರಕ ಅಂಶವನ್ನು, ಎಂದರೆ, ಇಂತಹ ಒಂದು ರಾಜಕೀಯ ಪಯರ್ಾಯವನ್ನು ಸ್ಥಾಪಿಸಲು, ಕಾಮರ್ಿಕ ವರ್ಗದ ನೇತೃತ್ವದಲ್ಲಿ ಎಲ್ಲ ಶೋಷಿತ ಜನವಿಭಾಗಗಳ ಹೋರಾಟದಲ್ಲಿನ ಐಕ್ಯತೆಯನ್ನು ಬಲಪಡಿಸಬೇಕಾಗಿದೆ. 20ನೇ ಮಹಾಧಿವೇಶನ ಈ ರಾಜಕೀಯ ಪಯರ್ಾಯವನ್ನು ಬಲಪಡಿಸುವ ಸಿಪಿಐ(ಎಂ)ನ ದೃಢನಿಧರ್ಾರವನ್ನು ದ್ವಿಗುಣಗೊಳಿಸಿದೆ.

ಆರು ದಿನಗಳ ಕಾಲ, 727 ಚುನಾಯಿತ ಪ್ರತಿನಿಧಿಗಳು ಮತ್ತು 74 ವೀಕ್ಷಕರು ಮೂರು ಪ್ರಧಾನ ದಸ್ತಾವೇಜುಗಳ ಮೇಲೆ ಚಚರ್ೆ ನಡೆಸಿ ಅವನ್ನು ಅಂಗೀಕರಿಸಿದರು-ಎಪ್ರಿಲ್4ರಿಂದ 9ರ ವರೆಗೆ ಕೇರಳದ ಕೋಝಿಕೊಡ್ನಲ್ಲಿ ನಡೆದ ಭಾರತ ಕಮ್ಯುನಿಸ್ಟ್ ಪಕ್ಷ(ಮಾಕ್ಸರ್್ವಾದಿ)ದ 20 ನೇ ಮಹಾಧಿವೇಶನದಲ್ಲಿ ಕರಡು ರಾಜಕೀಯ ನಿರ್ಣಯ, ಕೆಲವು ಸೈದ್ಧಾಂತಿಕ ಪ್ರಶ್ನೆಗಳ ಮೇಲೆ ಕರಡು ನಿರ್ಣಯ ಮತ್ತು ರಾಜಕೀಯ-ಸಂಘಟನಾತ್ಮಕ ನಿರ್ಣಯವನ್ನು ಅಂಗೀಕರಿಸಲಾಯಿತು.

ಎಂದಿನಂತೆ, ಸಿಪಿಐ(ಎಂ) ಅನುಸರಿಸಿಕೊಂಡು ಬಂದಿರುವ ಆಂತರಿಕ ಪ್ರಜಾಪ್ರಭುತ್ವದ ಆಚರಣೆಗೆ ಅನುಗುಣವಾಗಿ ಮೊದಲ ಎರಡು ದಸ್ತಾವೇಜುಗಳ ಕರಡುಗಳನ್ನು ಮಹಾಧಿವೇಶನದ ಎರಡು ತಿಂಗಳ ಮೊದಲು ಪಕ್ಷದ ಎಲ್ಲ ಸದಸ್ಯರೂ ಚಚರ್ಿಸಲು ಅನುವಾಗುವಂತೆ ಬಿಡುಗಡೆ ಮಾಡಲಾಗಿತ್ತು. ಅವುಗಳು ಸಾರ್ವಜನಿಕವಾಗಿ ಲಭ್ಯವಾಗಿದ್ದವು. ಇದು ಭಾರತದ ಬೇರಾವ ರಾಜಕೀಯ ಪಕ್ಷದಲ್ಲೂ ಬಹಳ ಅಪರೂಪವಾಗಿರುವ ಆಚರಣೆ. ಈ ಚಚರ್ೆಗಳ ಪರಿಣಾಮವಾಗಿ ಮಹಾಧಿವೇಶನ ಆರಂಭವಾಗುವ ಮೊದಲು 3713 ತಿದ್ದುಪಡಿಗಳನ್ನು ಪರಿಶೀಲಿಸಿ ಅವುಗಳಲ್ಲಿ 163 ತಿದ್ದುಪಡಿಗಳನ್ನು ರಾಜಕೀಯ ನಿರ್ಣಯದಲ್ಲಿ ಸ್ವೀಕರಿಸಲಾಯಿತು. ಅದೇ ರೀತಿ ಸೈದ್ಧಾಂತಿಕ ನಿರ್ಣಯಕ್ಕೆ 1014 ತಿದ್ದುಪಡಿಗಳು ಮಹಾಧಿವೇಶನದ ಆರಂಭವಾಗುವ ಮೊದಲೇ ಬಂದಿದ್ದವು. ಇವುಗಳಲ್ಲಿ 38ನ್ನು ಸ್ವೀಕರಿಸಲಾಯಿತು. ಇವಲ್ಲದೆ, ಮಹಾಧಿವೇಶನದಲ್ಲಿ ಪ್ರತಿನಿಧಿಗಳು ರಾಜಕೀಯ ನಿರ್ಣಯಕ್ಕೆ 349 ತಿದ್ದುಪಡಿಗಳನ್ನು ಮತ್ತು ಸೈದ್ಧಾಂತಿಕ ನಿರ್ಣಯಕ್ಕೆ 235 ತಿದ್ದುಪಡಿಗಳನ್ನು ಮಂಡಿಸಿದರು. ಮಹಾಧಿವೇಶನ ಇವುಗಳಲ್ಲಿ ಪ್ರತಿಯೊಂದನ್ನೂ ಆಮೂಲಾಗ್ರವಾಗಿ ಪರಿಶೀಲಿಸಿ ಅವುಗಳಲ್ಲಿ ಕೆಲವನ್ನು ಸ್ವೀಕರಿಸಿತು. ಈಗ ಅಂಗೀಕರಿಸಿರುವ ನಿರ್ಣಯಗಳು ಈ ರೀತಿಯ ತೀವ್ರ ಚಚರ್ೆಯ ಫಲಿತಾಂಶಗಳು-ಇವು ಮುಂದಿನ ಮೂರು ವರ್ಷಗಳಲ್ಲಿ ಸಿಪಿಐ(ಎಂ) ಅನುಸರಿಸುವ ರಾಜಕೀಯ-ಕಾರ್ಯತಂತ್ರಾತ್ಮಕ ಮಾರ್ಗವನ್ನು ಹಾಕಿ ಕೊಟ್ಟಿವೆ.

ಈ 20ನೇ ಮಹಾಧಿವೇಶನ, 1930ರ ದಶಕದ ಮಹಾ ಕುಸಿತದ ನಂತರದ ಅತ್ಯಂತ ಕೆಟ್ಟ ಜಾಗತಿಕ ಬಂಡವಾಳಶಾಹಿ ಬಿಕ್ಕಟ್ಟು ಇನ್ನೂ ಮುಂದುವರೆಯುತ್ತಿರುವ ಹಿನ್ನೆಲೆಯಲ್ಲಿ ನಡೆದಿದೆ. ಇದು, ಬಂಡವಾಳಶಾಹಿ ಎಂದಿಗೂ ಮಾನವ ಶೋಷಣೆಯಿಂದ ಮತ್ತು ಬಿಕ್ಕಟ್ಟುಗಳಿಂದ ಮುಕ್ತವಾದ ಒಂದು ವ್ಯವಸ್ಥೆಯಾಗಲು ಸಾಧ್ಯವಿಲ್ಲ ಎಂಬ ಸಿಪಿಐ(ಎಂ)ನ ಮಾಕ್ಸರ್್ವಾದಿ-ಲೆನಿನ್ವಾದಿ ತಿಳುವಳಿಕೆಯನ್ನು ಘಂಟಾಘೋಷವಾಗಿ ಎತ್ತಿ ಹಿಡಿದಿದೆ. ಹಿಂದಿನ ಸೋವಿಯೆತ್ ಒಕ್ಕೂಟ ಮತ್ತು ಪೂರ್ವ ಯುರೋಪಿನಲ್ಲಿ ಸಮಾಜವಾದವನ್ನು ಕಳಚಿ ಹಾಕಿದ ಎರಡು ದಶಕಗಳ ನಂತರ ಮೊದಲ ಬಾರಿಗೆ ವಿಶ್ವವ್ಯಾಪಿಯಾಗಿ ಸಾರ್ವತ್ರಿಕ ಪ್ರತಿಭಟನೆಗಳು ಹೆಚ್ಚುತ್ತಿವೆ; ಈ ಬಿಕ್ಕಟ್ಟಿನ ವಿರುದ್ಧ, ಅದು ಹೇರುತ್ತಿರುವ ಸಂಕಟಗಳು, ಕ್ಲೇಶಗಳ ವಿರುದ್ಧ ಪ್ರತಿಭಟಿಸುತ್ತಿದ್ದಾರೆ, ಬಂಡವಾಳಶಾಹಿಯನ್ನು ಒಂದು ವ್ಯವಸ್ಥೆಯಾಗಿಯೇ ಪ್ರಶ್ನಿಸುತ್ತಿದ್ದಾರೆ, ಒಂದು ಪಯರ್ಾಯದ ಅಗತ್ಯವನ್ನು ಎತ್ತಿ ತೋರಿಸುತ್ತಿದ್ದಾರೆ. ಅದೇ ರೀತಿ ಭಾರತದಲ್ಲೂ, ಇದು ಭಾರತೀಯ ಆಳುವ ವರ್ಗಗಳು ಅನುಸರಿಸುತ್ತಿರುವ ನವ-ಉದಾರವಾದಿ ಆಥರ್ಿಕ ಧೋರಣೆಗಳು ಹೇರುತ್ತಿರುವ ಸಂಕಟಗಳ ವಿರುದ್ಧ ಪ್ರತಿಭಟನೆಗಳು ಮತ್ತು ಹೋರಾಟಗಳ ಮೂಲಕ ವ್ಯಕ್ತಗೊಳ್ಳುತ್ತಿದೆ. ಜನತೆ ಸ್ವತ: ಕಲಿತುಕೊಂಡ ಅನುಭವಗಳು ಕೂಡ, ಸಮಾಜವಾದ ಮಾತ್ರವೇ ಮಾನವ ಶೋಷಣೆಯನ್ನು ಕೊನೆಗೊಳಿಸುವ, ಮಾನವ ನಾಗರಿಕತೆಯ ಮುನ್ನಡೆಯ ಪ್ರಯೋಜನಗಳು ಕೆಲವರಿಗೇ ಸೀಮಿತವಾಗುವ ಬದಲು ಎಲ್ಲರಿಗೂ ಲಭ್ಯಗೊಳಿಸುವ ಪಯರ್ಾಯ ವ್ಯವಸ್ಥೆ ಎಂಬ ಮಾಕ್ಸರ್್ವಾದಿ-ಲೆನಿನ್ವಾದಿ ತಿಳುವಳಿಕೆಯನ್ನು ಮತ್ತೊಮ್ಮೆ ಘಂಟಾಘೋಷವಾಗಿ ಎತ್ತಿ ತೋರಿದೆ. ಬಂಡವಾಳಶಾಹಿಗೆ ಈ ಪಯರ್ಾಯದ ಅಗತ್ಯ ಜಗತ್ತಿನಾದ್ಯಂತ ತ್ವರಿತವಾಗಿ ಬೆಳೆಯುತ್ತಿದೆ.

ರಾಜಕೀಯ ಪಯರ್ಾಯವನ್ನು
ಬಲಪಡಿಸುವುದು ಹೇಗೆ?
ಆದರೆ ಚಚರ್ೆಯ ಅಂಶವೆಂದರೆ, ಮಾಕ್ಸರ್್ರವರು ತಮ್ಮ ಪ್ರಖ್ಯಾತ ಉದ್ಗಾರದಲ್ಲಿ ಹೇಳಿರುವಂತೆ, ಜಗತ್ತನ್ನು ಅರಿಯುವುದಷ್ಟೇ ಅಲ್ಲ, ಅದನ್ನು ಬದಲಾಯಿಸಬೇಕು. 20ನೇ ಮಹಾಧಿವೇಶನದಲ್ಲಿ ಚಚರ್ಿಸಿದ ಪ್ರಧಾನ ಪ್ರಶ್ನೆ ಇದು: ಭಾರತೀಯ ಮೂರ್ತ ಪರಿಸ್ಥಿತಿಗಳಲ್ಲಿ ಬಂಡವಾಳಶಾಹಿಗೆ ರಾಜಕೀಯ ಪಯರ್ಾಯವನ್ನು ಬಲಪಡಿಸುವುದು ಹೇಗೆ ಎಂಬುದು.

ಭಾರತದಲ್ಲಿ ಇಂತಹ ಒಂದು ಪಯರ್ಾಯವನ್ನು ಬಲಪಡಿಸುವುದು ಇಲ್ಲಿನ ಎಡ ಮತ್ತು ಪ್ರಜಾಪ್ರಭುತ್ವ ಶಕ್ತಿಗಳನ್ನು ಬಲಪಡಿಸುವ ಮೂಲಕ ಮಾತ್ರವೇ ಸಾಧ್ಯವಾಗುತ್ತದೆ. ಮುಂದಿನ ಮಹಾಧಿವೇಶನದ ವರೆಗಿನ ಮೂರು ವರ್ಷಗಳಲ್ಲಿ ಸಿಪಿಐ(ಎಂ)ನ ರಾಜಕೀಯ-ಕಾರ್ಯತಂತ್ರಾತ್ಮಕ ಮಾರ್ಗದ ಪ್ರಧಾನ ಒತ್ತು ಎಡ ಮತ್ತು ಪ್ರಜಾಪ್ರಭುತ್ವವಾದಿ ಶಕ್ತಿಗಳನ್ನು ಬಲಪಡಿಸುವ ಗುರಿಯ ಮೇಲಿರುತ್ತದೆ, ಆಳುವ ವರ್ಗಗಳ ಸಾಮಾಜಿಕ-ಆಥರ್ಿಕ ಧೋರಣೆಗಳ ದಿಕ್ಕು ಹೇರುತ್ತಿರುವ ಹೆಚ್ಚೆಚ್ಚು ಸಂಕಟಗಳ ವಿರುದ್ಧ ಜನತೆಯ ಬೃಹತ್ ಹೋರಾಟಗಳ ಮೂಲಕ ಇದನ್ನು ಸಾಧಿಸಬೇಕಾಗಿದೆ. ವಸ್ತುಸ್ಥಿತಿ ಬಂಡವಾಳಶಾಹಿಗೆ ಒಂದು ರಾಜಕೀಯ ಪಯರ್ಾಯವನ್ನು ಬಲಪಡಿಸುವ ಅಗತ್ಯದತ್ತ ತೀವ್ರವಾಗಿ ಬೊಟ್ಟು ಮಾಡುತ್ತಿದ್ದರೆ, ಕಾರಕ ಅಂಶವನ್ನು, ಎಂದರೆ, ಇಂತಹ ಒಂದು ರಾಜಕೀಯ ಪಯರ್ಾಯವನ್ನು ಸ್ಥಾಪಿಸಲು, ಕಾಮರ್ಿಕ ವರ್ಗದ ನೇತೃತ್ವದಲ್ಲಿ ಎಲ್ಲ ಶೋಷಿತ ಜನವಿಭಾಗಗಳ ಹೋರಾಟದಲ್ಲಿನ ಐಕ್ಯತೆಯನ್ನು ಬಲಪಡಿಸಬೇಕಾಗಿದೆ.

ಕಾರಕ ಅಂಶವನ್ನು ಬಲಪಡಿಸುವ ಈ ಗುರಿಸಾಧನೆಯಾಗಬೇಕಾದರೆ, ಆಮೂಲಕ ಎಡ ಮತ್ತು ಪ್ರಜಾಪ್ರಭುತ್ವವಾದಿ ಶಕ್ತಿಗಳನ್ನು ಬಲಪಡಿಸಿ ರಾಜಕೀಯ ಪಯರ್ಾಯವನ್ನು ಸ್ಥಾಪಿಸಲು ಪಕ್ಷದ ಮಹಾಧಿವೇಶನ ಎಂಟು ಪ್ರದೇಶಗಳನ್ನು ಎತ್ತಿ ತೋರಿದೆ, ಅವನ್ನು ಗಂಭೀರವಾಗಿ ಕೈಗೆತ್ತಿಕೊಳ್ಳಬೇಕಾಗಿದೆ ಮತ್ತು ಎದ್ದು ಬರುವ ಸವಾಲುಗಳನ್ನು ನೇರವಾಗಿ ಎದುರಿಸಬೇಕಾಗಿದೆ.

ಮೊದಲನೆಯದಾಗಿ, ಸಾಮ್ರಾಜ್ಯಶಾಹಿ ಮತ್ತು ಪ್ರತಿಗಾಮಿ ಶಕ್ತಿಗಳು ಮಾಕ್ಸರ್್ವಾದ ಮತ್ತು ಸಮಾಜವಾದದ ವಿರುದ್ಧ ಹಾಕುತ್ತಿರುವ ಸೈದ್ಧಾಂತಿಕ ಸವಾಲುಗಳನ್ನು ಎದುರಿಸಿ ಸೋಲಿಸುವ ತುತರ್ು ಅಗತ್ಯ ಇದೆ. ಎರಡು ದಶಕಗಳ ಕಾಲ ಅವರು ಬಂಡವಾಳಶಾಹಿಯ ಅನಂತತೆಯ ಬಗ್ಗೆ ಹಾಡಿ ಕುಣಿದರು, ಮಾಕ್ಸರ್್ವಾದ ಮತ್ತು ಸಮಾಜವಾದ ಸತ್ತಿವೆ ಎಂದು ಸಾರಿದರು. ಇಂದು ತೀವ್ರ ಜಾಗತಿಕ ಬಂಡವಾಳಶಾಹಿ ಬಿಕ್ಕಟ್ಟಿನ ಎದುರು ಅವರು ಆಧುನಿಕೋತ್ತರವಾದದಂತಹ ಹೊಸ ತಾತ್ವಿಕ ರಚನೆಗಳ ಮೂಲಕ ಇಂತಹ ಸೈದ್ಧಾಂತಿಕ ದಾಳಿಗಳನ್ನು ತೀವ್ರವಾಗಿ ನಡೆಸುತ್ತಿದ್ದಾರೆ. ಈ ಸೈದ್ಧಾಂತಿಕ ದಾಳಿಗಳ ಸಾರಾಂಶವೆಂದರೆ, ವರ್ಗ ಶೋಷಣೆ ಮತ್ತು ವರ್ಗ ಹೋರಾಟದ ಅಸ್ತಿತ್ವವನ್ನೇ ನಿರಾಕರಿಸುತ್ತಾ, ಮಾನವ ಸಮಾಜ ಮತ್ತು ನಾಗರಿಕತೆ ಹತ್ತು ಹಲವು ಸಣ್ಣ-ಪುಟ್ಟ ಅಥವ ಸ್ಥಳೀಯ ವಿದ್ಯಮಾನಗಳ ಮೊತ್ತವಷ್ಟೇ ಎಂದು ಬಿಂಬಿಸುವ ಪ್ರಯತ್ನ. ಹೀಗೆ, ಈ ಸೈದ್ಧಾಂತಿಕ ಸವಾಲುಗಳು ಮಾನವ ಶೋಷಣೆ ತೀವ್ರಗೊಳ್ಳುತ್ತಿದೆ ಎಂಬ ಸತ್ಯವನ್ನು ಮತ್ತು ಬಂಡವಾಳಶಾಹಿಯ ಅಡಿಯಲ್ಲಿ ಪ್ರಕೃತಿಯ ಶಿಥಿಲೀಕರಣವನ್ನು ಮಬ್ಬುಗೊಳಿಸಲು ಪ್ರಯತ್ನಿಸುತ್ತವೆ.

ಎರಡನೆಯದಾಗಿ, ಎಡ ಮತ್ತು ಪ್ರಜಾಪ್ರಭುತ್ವವಾದಿ ಶಕ್ತಿಗಳ ಬಲವರ್ಧನೆ ಭಾರತದ ವಿಶಾಲ ಶೋಷಿತ ಜನಸಮೂಹಗಳ ಜನಪ್ರಿಯ, ಸಮರಶೀಲ ಹೋರಾಟಗಳನ್ನು ಬಲಪಡಿಸುವ ಮೂಲಕ ಮಾತ್ರವೇ ಸಂಭವಿಸ ಬಲ್ಲುದು. ಇಂತಹ ಸಂಸದೇತರ ಹೋರಾಟಗಳನ್ನೇ ಬಲಪಡಿಸುವ ಅಗತ್ಯವಿದೆ. ಈ ಹೋರಾಟಗಳ ಶಕ್ತಿ ಮಾತ್ರವೇ ಸಿಪಿಐ(ಎಂ) ಮತ್ತು ಎಡಪಕ್ಷಗಳ ಪ್ರಾತಿನಿಧ್ಯದ ಹೆಚ್ಚಳದ ಮೂಲಕ ಸಂಸತ್ತಿನಲ್ಲಿ, ವಿಧಾನಸಭೆಗಳಲ್ಲಿ, ಇತರ ಪ್ರಜಾಸತ್ತತ್ಮಕ ಸ್ಥಳೀಯ ಸಂಸ್ಥೆಗಳಲ್ಲಿ ಬಿಂಬಿತವಾಗುತ್ತದೆ. ಈ ಹೆಚ್ಚಳ ಕೇವಲ ರಾಜಕೀಯ ಕಸರತ್ತುಗಳು ಮತ್ತು ಸಂದೀಯ ಸಂದರ್ಭಸಾಧಕತನದ ಮೂಲಕ ಸಾಧ್ಯವಿಲ್ಲ. ಇಂತಹ ಜನಪ್ರಿಯ ಜನತಾ ಹೋರಾಟಗಳ ಆಧಾರದಲ್ಲಿ ಕಟ್ಟುವ ಎಡಪಕ್ಷಗಳ ಶಕ್ತಿಯ ಮೂಲಕ ಮಾತ್ರವೇ ಇದು ಸಂಭವಿಸಬಲ್ಲದು. ಹೀಗೆ ಈ ಗುರಿ ಸಾಧನೆಗೆ ಹೋರಾಟದ ಸಂಸದೇತರ ಮತ್ತು ಸಂಸದೀಯ ಮಾರ್ಗಗಳನ್ನು ಪರಿಣಾಮಕಾರಿಯಾಗಿ ಬೆಸೆದು ಬಲಪಡಿಸಬೇಕು.

ಕಾಮರ್ಿಕ-ರೈತ ವರ್ಗಮೈತ್ರಿ
ಮೂರನೆಯದಾಗಿ, ಸಮರಶೀಲ ಜನಪ್ರಿಯ ಹೋರಾಟಗಳ ಈ ರೀತಿಯ ಬಲವರ್ಧನೆ ಕಾಮರ್ಿಕ ವರ್ಗ, ಬಡರೈತರು ಮತ್ತು ಕೃಷಿ ಕೂಲಿಕಾರರ ನಡುವೆ ಹೋರಾಟಗಳಲ್ಲಿನ ಐಕ್ಯತೆಯನ್ನು ಕಟ್ಟಿದಾಗ ಮಾತ್ರವೇ ಕಾರ್ಯಸಾಧ್ಯವಾಗುತ್ತದೆ. ಈ ಕಾಮರ್ಿಕ-ರೈತ ಮೈತ್ರಿ ಬಲಗೂಡಿಸಿಕೊಂಡ ಜನಪ್ರಿಯ ಹೋರಾಟಗಳ ಬುನಾದಿಯಾಗಿರುತ್ತದೆ.

ನಾಲ್ಕನೆಯದಾಗಿ, ಕಾಮರ್ಿಕ-ರೈತ ಮೈತ್ರಿಯನ್ನು ಬಲಪಡಿಸುವ ಗುರಿಸಾಧನೆ ಸ್ವತಃ ಕಾಮರ್ಿಕ ವರ್ಗದ ಐಕ್ಯತೆಯನ್ನು ಬಲಪಡಿಸಿದಾಗಲೇ ಸಾಧ್ಯ. ಶ್ರಮಶಕ್ತಿಯ ತ್ವರಿತ ಬೆಳವಣಿಗೆಗೆ ದಾರಿ ಮಾಡಿಕೊಟ್ಟು, ಅದನ್ನು ಹೆಚ್ಚೆಚ್ಚಾಗಿ ವಿವಿಧ ಅಸಂಘಟಿತ ವಿಭಾಗಗಳ ಮಟ್ಟಕ್ಕಿಳಿಸುವುದೇ ನವ-ಉದಾರವಾದಿ ಸುಧಾರಣೆಗಳ ತರ್ಕವಾಗಿದೆ. ಖಾಯಂ ಉದ್ಯೋಗವನ್ನು ಆಕಸ್ಮಿಕ ಅಥವ ಕಾಂಟ್ರಾಕ್ಟ್ ಶ್ರಮವಾಗಿ ಪರಿವತರ್ಿಸುವುದರಿಂದ ಮಾಲಕರಿಗೆ ಹೆಚ್ಚಿನ ಲಾಭ ಸಿಗುತ್ತದಷ್ಟೇ ಅಲ್ಲ, ಕಾಮರ್ಿಕ ವರ್ಗದ ಐಕ್ಯತೆಯನ್ನು ಮುರಿದಿಟ್ಟು, ಅದನ್ನು ಛಿದ್ರಗೊಳಿಸುವ ಆಳುವ ವರ್ಗಗಳ ಪ್ರಯತ್ನಕ್ಕೆ ಅನುಕೂಲ ಕಲ್ಪಿಸುತ್ತದೆ. ಈ ಸವಾಲನ್ನು ಎದುರಿಸಬೇಕಾಗಿದೆ, ಅದಕ್ಕಾಗಿ, ಹೆಚ್ಚುತ್ತಿರುವ ಅಸಂಘಟಿತ ಶ್ರಮಿಕ ಸಮೂಹಗಳನ್ನು ಒಟ್ಟುಗೂಡಿಸಿ ಸಂಘಟಿತ ಕಾಮರ್ಿಕ ಅಂದೋಲನವಾಗಿ ಮಾಡಬೇಕಾಗಿದೆ.

ಐದನೆಯದಾಗಿ, ಆಧುನಿಕೋತ್ತರವಾದ ದಂತಹ ಮಾಕ್ಸರ್್ವಾದ-ವಿರೋಧಿ, ಕಮ್ಯುನಿಸ್ಟ್ – ವಿರೋಧಿ ಸೈದ್ಧಾಂತಿಕ ರಚನೆಗಳಿರುವು ದರಿಂದ ಐಡೆಂಟಿಟಿ ರಾಜಕೀಯ ಹೆಚ್ಚೆಚ್ಚಾಗಿ ತಲೆಯೆತ್ತಲು ಅವು ಸೈದ್ಧಾಂತಿಕ ಪೋಷಣೆ ಕೊಡುತ್ತವೆ. ಇದು ಕೂಡ ಶೋಷಿತ ವಿಭಾಗಗಳ ವರ್ಗ ಐಕ್ಯತೆಯನ್ನು ಮುರಿಯುತ್ತದೆ. ಭಾರತದಲ್ಲಿ ವರ್ಗ ಹೋರಾಟವನ್ನು ತೀವ್ರಗೊಳಿಸುವುದು ಆಥರ್ಿಕ ಶೋಷಣೆಯ ಮತ್ತು ಸಾಮಾಜಿಕ ದಮನದ ಪ್ರಶ್ನೆಗಳನ್ನು ಏಕಕಾಲಕ್ಕೆ ಕೈಗೆತ್ತಿಕೊಂಡಾಗ ಮಾತ್ರವೇ ಸಾಧ್ಯ ಎಂದು ಸಿಪಿಐ(ಎಂ) ಹಿಂದಿನಿಂದಲೂ ಹೇಳುತ್ತಾ ಬಂದಿದೆ. ಜಾತಿ, ಜನಾಂಗ ಮತ್ತು ಲಿಂಗಾಧಾರಿತ ಸಾಮಾಜಿಕ ದಮನದ ಪ್ರಶ್ನೆಗಳನ್ನು ಸಿಪಿಐ(ಎಂ) ಮತ್ತು ಎಡಪಕ್ಷಗಳು ಎತ್ತಿಕೊಳ್ಳದಿದ್ದರೆ, ಈ ವಿಭಾಗಗಳು ಇಂತಹ ಐಡೆಂಟಿಟಿ ರಾಜಕೀಯಕ್ಕೆ ಬಲಿಯಾಗುತ್ತವೆ ಮತ್ತು ನಾವು ಯಾವ ಐಕ್ಯತೆಯನ್ನು ಬಲಪಡಿಸಬೇಕೆಂದಿದ್ದೇವೆಯೋ ಅದೇ ಛಿದ್ರಗೊಳ್ಳುತ್ತದೆ. ಆದ್ದರಿಂದ ಆಥರ್ಿಕ ಶೋಷಣೆ ಮತ್ತು ಸಾಮಾಜಿಕ ದಮನ ಇವೆರಡರ ವಿರುದ್ಧವೂ ಹೋರಾಟಗಳನ್ನು ಏಕಕಾಲಕ್ಕೆ ಬಲಪಡಿಸುವ ಅಗತ್ಯವಿದೆ.

ಆರನೆಯದಾಗಿ, ಕೋಮುವಾದದ ಸವಾಲನ್ನು- ಬಹುಸಂಖ್ಯಾತ ಹಿಂದೂ ಕೋಮುವಾದವನ್ನು ಮತ್ತು ಎಲ್ಲ ಬಣ್ಣಗಳ ಅಲ್ಪಸಂಖ್ಯಾತ ಧಾಮರ್ಿಕ ಮೂಲಭೂತವಾದ ವನ್ನು- ಎದುರಿಸಬೇಕಾಗಿದೆ. ಈ ಶಕ್ತಿಗಳು ಧಾಮರ್ಿಕ ವಿಭಜನೆಯ ಆಧಾರದಲ್ಲಿ ಶೋಷಿತ ವಿಭಾಗಗಳ ಐಕ್ಯತೆಯನ್ನು ಮುರಿಯುವ ಪ್ರಯತ್ನ ಮಾಡುತ್ತವೆ, ಈ ಮೂಲಕ ಭಾರತೀಯ ಜನತೆಯ ಧಾಮರ್ಿಕ ನಂಬಿಕೆಗಳನ್ನು ತಮ್ಮ ಸಂಕುಚಿತ ಮತ್ತು ಛಿದ್ರಕಾರೀ ರಾಜಕೀಯ ಗುರಿಗಳ ಸಾಧನೆಗೆ ದುರುಪಯೋಗ ಪಡಿಸಿಕೊಳ್ಳುತ್ತವೆ. ಕೋಮುವಾದ, ಆಧುನಿಕ ಜಾತ್ಯಾತೀತ ಪ್ರಜಾಸತ್ತಾತ್ಮಕ ಭಾರತದ ಬುನಾದಿಯನ್ನು ದುರ್ಬಲಗೊಳಿಸುವುದಲ್ಲದೆ, ಎಡ ಮತ್ತು ಪ್ರಜಾಪ್ರಭುತ್ವವಾದಿ ಶಕ್ತಿಗಳನ್ನು ಬಲಪಡಿಸಲು ಅಗತ್ಯವಾದ ಶೋಷಿತ ವರ್ಗಗಳ ಐಕ್ಯತೆಯನ್ನೇ ಛಿದ್ರಗೊಳಿಸುತ್ತದೆ.

ಏಳನೆಯದಾಗಿ, ಭಾರತದಂತಹ ಒಂದು ಬಹುದೇಶೀಯ ಮತ್ತು ಜಾಗತಿಕವಾಗಿ ಎಲ್ಲೂ ಕಾಣದಷ್ಟು ಸಾಮಾಜಿಕ=ಸಾಂಸ್ಕೃತಿಕ ವೈವಿಧ್ಯತೆ ಇರುವ ರಾಷ್ಟ್ರದಲ್ಲಿ, ಜನಗಳನ್ನು ಸಂಕುಚಿತ ರೀತಿಗಳಲ್ಲಿ ವಿಭಜಿಸುವ ಪ್ರತಿಗಾಮಿ ಜನಾಂಗೀಯ ದೇಶೀಯತೆಯ ಪ್ರವೃತ್ತಿಗಳ ಬೆಳವಣಿಗೆಗೆ ಅಪಾರ ಅವಕಾಶಗಳಿರುತ್ತವೆ. ಈ ವಿಭಾಗಗಳ ನೈಜವಾದ ದಮನ ಮತ್ತು ಪಕ್ಷಪಾತದ ವಿರುದ್ಧ ಹೋರಾಟಗಳನ್ನು ಪ್ರತಿಪಾದಿಸುತ್ತಲೇ, ಶೋಷಿತ ವಿಭಾಗಗಳ ಐಕ್ಯತೆಯನ್ನು ಇನ್ನಷ್ಟು ಛಿದ್ರಗೊಳಿಸಲು ಪ್ರಯತ್ನಿಸುವ ಈ ಸವಾಲನ್ನು ನೇರವಾಗಿ ಎದುರಿಸಿ ಸೋಲಿಸಬೇಕು.

ಎಂಟನೆಯದಾಗಿ, ನಮ್ಮ ದೇಶದ ಆಥರ್ಿಕವಾಗಿ ಹಿಂದುಳಿದ ಪ್ರದೇಶಗಳ ಜನತೆಯ ಹೋರಾಟಗಳನ್ನು ಸಿಪಿಐ(ಎಂ) ಮತ್ತು ಎಡಪಕ್ಷಗಳು ಬಲವಾಗಿ ಪ್ರತಿಪಾದಿಸಬೇಕು. ಆಥರ್ಿಕ ಹಿಂದುಳಿಕೆಯನ್ನು ಭಾಷಾವಾರು ಪುನರ್ಸಂಘಟನೆಯ ನೀತಿಯನ್ನು ಛಿದ್ರಗೊಳಿಸಿ ಈಗಿರುವ ರಾಜ್ಯಗಳನ್ನು ಪುನವ್ರ್ಯವಸ್ಥೆ ಗೊಳಿಸಲು ಬಳಸುವ ಪ್ರವೃತ್ತಿಗಳು ಕೂಡ ಶೋಷಿತ ವಿಭಾಗಗಳ ವರ್ಗ ಐಕ್ಯತೆಯನ್ನು ಮುರಿಯಲು ಪ್ರಯತ್ನಿಸುತ್ತವೆ.

ವರ್ಗ ಬಲಾಬಲದಲ್ಲಿ ಬದಲಾವಣೆ
ಇಂತಹ ಸವಾಲುಗಳನ್ನು ಎದುರಿಸಿ, ಮೀರಿ ನಿಂತು ಎಡ ಮತ್ತು ಪ್ರಜಾಪ್ರಭುತ್ವವಾದಿ ಪಯರ್ಾಯವನ್ನು ಬಲಪಡಿಸುವ ಗುರಿ ಸಾಧಿಸಲು, ಸಿಪಿಐ(ಎಂ) ತನ್ನನ್ನು ಸಂಘಟನಾತ್ಮಕವಾಗಿ ಬಲಪಡಿಸಿಕೊಳ್ಳುವುದು ಅತ್ಯಂತ ಅನಿವಾರ್ಯ. ಸಿಪಿಐ(ಎಂ)ನ್ನು ಸಂಘಟನಾತ್ಮಕವಾಗಿ ಬಲಪಡಿಸಿ, ಅದರ ಆಧಾರದಲ್ಲಿ ನಮ್ಮ ದೇಶದ ಶೋಷಿತ ವಿಭಾಗಗಳ ಐಕ್ಯತೆಯನ್ನು ಕಟ್ಟದೆ ಈ ಯಾವ ಗುರಿಗಳ ಸಾಧನೆಯೂ ಸಾಧ್ಯವಾಗದು. ರಾಜಕೀಯ-ಸಂಘಟನಾತ್ಮಕ ವರದಿ ಈ ಕಾರ್ಯಭಾರಗಳನ್ನೆಲ್ಲ ಪರಿಶೀಲಿಸಿತು.

ಹೀಗೆ ಸಿಪಿಐ(ಎಂ)ನ 20ನೇ ಮಹಾಧಿವೇಶನ ಪ್ರಸಕ್ತ-ಸೈದ್ಧಾಂತಿಕ, ರಾಜಕೀಯ ಮತ್ತು ಸಂಘಟನಾತ್ಮಕ-ಸವಾಲುಗಳನ್ನು ಎದುರಿಸುವ ಮತ್ತು ಆಳುವ ವರ್ಗಗಳು ಅನುಸರಿಸುತ್ತಿರುವ ನವ-ಉದಾರವಾದಿ ಬಂಡವಾಳಶಾಹಿ ಬೆಳವಣಿಗೆಯ ಪ್ರಸಕ್ತ ದಾರಿಗೆ ರಾಜಕೀಯ ಪಯರ್ಾಯವನ್ನು ಬಲಪಡಿಸುವ ತನ್ನ ದೃಢನಿಧರ್ಾರವನ್ನು ದ್ವಿಗುಣಗೊಳಿಸಿದೆ. ಹೀಗೆ ಸಿಪಿಐ(ಎಂ) ನಮ್ಮ ಜನತೆಯ ನಡುವಿನ ಪ್ರಸಕ್ತ ವರ್ಗ ಬಲಾಬಲವನ್ನು ಬದಲಿಸಲು ಭಾರತೀಯ ಜನತೆಯ ಎಲ್ಲ ಶೋಷಿತ ಜನ ವಿಭಾಗಗಳನ್ನು ಅಣಿನೆರೆಸುವ ತನ್ನ ಕ್ರಾಂತಿಕಾರಿ ಹೊಣೆಗಾರಿಕೆಯನ್ನು ನಿರ್ವಹಿಸುತ್ತದೆ, ಮತ್ತು ಜನತಾ ಪ್ರಜಾಪ್ರಭುತ್ವದ ಸ್ಥಾಪನೆಗೆ ಮತ್ತು ಅದರ ಬುನಾದಿಯ ಮೇಲೆ ಸಮಾಜವಾದದ ಸ್ಥಾಪನೆಗಾಗಿ ಕ್ರಾಂತಿಕಾರಿ ದಾಳಿಯನ್ನು ನಡೆಸುತ್ತದೆ; ಏಕೆಂದರೆ ಆ ಸಮಾಜವಾದ ಮಾತ್ರವೇ ಮಾನವ ವಿಮೋಚನೆಯ, ಉದ್ಧಾರದ ಆಧಾರವಾಗಿದೆ.
0

Donate Janashakthi Media

Leave a Reply

Your email address will not be published. Required fields are marked *