ಸಮ್ಮೇಳನದ ಸಮಾರೋಪ
ಸಮ್ಮೇಳನದ ಸಮಾರೋಪ ಭಾಷಣ ಮಾಡಿದ ಸಿಐಟಿಯು ರಾಷ್ಟಿçÃಯ ಪ್ರಧಾನ ಕಾರ್ಯದರ್ಶಿ ತಪನ್ ಸೇನ್ ರೈತರು, ಕಾರ್ಮಿಕರು, ಮಹಿಳೆಯರು ಮತ್ತು ಜನಸಾಮಾನ್ಯರ ಶತ್ರು ಯಾರೆಂಬುದನ್ನು ಮೊದಲು ದೇಶದ ತಳಮಟ್ಟಕ್ಕೆ ಕೊಂಡೊಯ್ದು ದೇಶದ ಶತ್ರುವಿನ ವಿರುದ್ಧ ಐಕ್ಯ ಹೋರಾಟ ಮಾಡಬೇಕಾದುದು ಅನಿವಾರ್ಯವಾಗಿದ್ದು ಎಲ್ಲಾ ವರ್ಗದ ಜನ ಇದಕ್ಕೆ ಸಜ್ಜಾಗಬೇಕು ಎಂದು ಕರೆ ನೀಡಿದರು.
ಅಧಿಕಾರ ನಡೆಸುತ್ತಿರುವ ಶಕ್ತಿಗಳು ಜನರ ನಡುವೆ ಘರ್ಷಣೆ ನಡೆಯುವಂತೆ ಮಾಡುತ್ತಿವೆ. ಸಮಾಜದಲ್ಲಿ ಸಮುದಾಯ ಸಮುದಾಯಗಳ ನಡುವೆ ತಿಕ್ಕಾಟಗಳು ನಡೆಯುವಂತೆ ನೋಡಿಕೊಂಡರೆ ಅಧಿಕಾರ ನಡೆಸುವುದು ಸುಲಭ ಎಂದು ತಿಳಿದಿವೆ. ಹೀಗಾಗಿಯೇ ಜಾತಿ, ಧರ್ಮ, ಮತ-ಪಂಥದ ಆಧಾರದ ಮೇಲೆ ಸಮಾಜವನ್ನು ವಿಭಜಿಸುವ ಕೆಲಸದಲ್ಲಿ ತೊಡಗಿವೆ ಎಂದು ಟೀಕಾಪ್ರಹಾರ ನಡೆಸಿದರು.
ಕಳೆದ ಮೂರು ವರ್ಷಗಳಲ್ಲಿ ದೇಶದಲ್ಲಿ ಏನೆಲ್ಲಾ ಬೆಳವಣಿಗೆಗಳು ನಡೆದಿವೆ. ಜನ ವಿರೋಧಿ, ಕಾರ್ಮಿಕ ವಿರೋಧಿ, ಪ್ರಜಾ ತಾಂತ್ರಿಕ ವಿರೋಧಿ ನೀತಿಗಳು ಕಾರ್ಮಿಕರನ್ನು ಬೀದಿ ಪಾಲು ಮಾಡಿವೆ. ರೈತರು ದಿವಾಳಿಯಾಗುವಂತೆ ಮಾಡಿವೆ. ಇಂತಹ ನೀತಿಗಳೇ ದೇಶ ಹಿಂದಕ್ಕೆ ಹೋಗಲು ಕಾರಣವಾಗಿದೆ. ಇದೇ ಶಕ್ತಿಗಳೇ ನಮ್ಮ ವಿರೋಧಿಗಳೆಂಬುದನ್ನು ಮನಗಾಣಬೇಕು. ಜನರನ್ನು ಕಾರ್ಮಿಕರನ್ನು ಶೋಷಿಸುತ್ತಿರುವ ಶಕ್ತಿಗಳನ್ನು ಬಗ್ಗುಬಡಿಯಬೇಕಾಗಿದೆ ಎಂದು ಸಲಹೆ ನೀಡಿದರು.

ಬಿಜೆಪಿ ಅಧಿಕಾರಕ್ಕೆ ಬಂದಾಗಿನಿAದಲೂ ದೇಶಾದ್ಯಂತ ಹೋರಾಟ ನಡೆಯುತ್ತಲೇ ಇವೆ. ಕೇವಲ ಕಾರ್ಮಿಕರಷ್ಟೇ ಅಲ್ಲ ಬೇರೆ ಜನವರ್ಗವೂ ಹೋರಾಟದಲ್ಲಿ ಭಾಗವಹಿಸಿದೆ. ಒಂದಲ್ಲ ಒಂದು ರೀತಿ ಹೋರಾಟಗಳು ಮುಂದುವರಿದಿವೆ. ಹೊಸ ಚಳವಳಿಗಳನ್ನು ನಡೆಸುತ್ತಿರುವುದನ್ನು ನೋಡಿದರೆ ಕಾರ್ಮಿಕ ವರ್ಗ ಮತ್ತು ಜನರು ಎಷ್ಟೊಂದು ಸಮಸ್ಯೆ ಎದುರಿಸುತ್ತಿದ್ದಾರೆ ಎಂಬುದು ತಿಳಿಯುತ್ತದೆ. ಶೋಷಣೆ ಮುಕ್ತ ಸಮಸಮಾಜ ನಿರ್ಮಾಣಕ್ಕೆ ಮತ್ತು ಈಗಿರುವ ಸಮಸ್ಯೆಗಳ ನಿವಾರಣೆಗೆ ಸಿಐಟಿಯು ಹೋರಾಟ ನಡೆಸುತ್ತಲೇ ಬರುತ್ತಿದೆ ಎಂದರು.
ದೇಶೀಯ ಬಂಡವಾಳಗಾರರು, ವಿದೇಶಿಯ ಬಹುರಾಷ್ಟ್ರೀಯ ಕಂಪನಿಗಳು ಭಾರತ ಸರ್ಕಾರವನ್ನು ನಿಯಂತ್ರಿಸುತ್ತಿವೆ. ಇದರ ವಿರುದ್ಧ ಎಲ್ಲಾ ಕೇಂದ್ರ ಕಾರ್ಮಿಕ ಸಂಘಟನೆಗಳು ಜನವರಿ 8ರ ಹೋರಾಟಕ್ಕೆ ಸಜ್ಜಾಗುತ್ತಿವೆ. ಇದರ ಜೊತೆಗೆ ಸಮಾಜದಲ್ಲಿ ಬದಲಾವಣೆಯನ್ನು ತರುವುದೇ ಸಿಐಟಿಯುನ ಪ್ರಮುಖ ಉದ್ದೇಶವಾಗಿದೆ. ಸಿಐಟಿಯು ನಾಯಕತ್ವವು, ಜಾತಿ, ಧರ್ಮವನ್ನು ಮೀರಿದ ವರ್ಗವನ್ನು ಕಟ್ಟುತ್ತಿದೆ. ಆದರೆ ಹೋರಾಟಕ್ಕೆ ಬರುವಾಗ ವರ್ಗಪ್ರಜ್ಞೆಯಿಂದ ಬರುವ ಕಾರ್ಮಿಕರು ಅಲ್ಲಿಂದ ಊರುಗಳಿಗೆ ತೆರಳಿದ ನಂತರ ಅವರಲ್ಲಿ ಹಿಂದೂ, ಮುಸ್ಲೀಂ ಮೊದಲಾದ ಧಾರ್ಮಿಕ ಭಾವನೆ ಮೂಡುತ್ತಿದೆ. ಇದು ಒಳ್ಳೆಯ ಬೆಳವಣಿಗೆಯಲ್ಲ ಎಂದು ಹೇಳಿದರು.

ಕೇಂದ್ರ ಕಾರ್ಮಿಕ ಸಂಘಟನೆಗಳ ಹೊರತಂದಿರುವ ಪುಸ್ತಕಗಳನ್ನು ಜನಸಾಮಾನ್ಯರಿಗೂ ತಲುಪಿಸುವ ವ್ಯವಸ್ಥೆ ಆಗಬೇಕು. ತಲುಪದೇ ಇರುವ ಜನರನ್ನು ತಲುಪುವುದು ಹೇಗೆ ಎಂಬ ಬಗ್ಗೆ ಚಿಂತನೆ ನಡೆಸಬೇಕು. ತಲುಪದೇ ಇರುವ ಜನವರ್ಗವನ್ನು ಭೇಟಿ ಮಾಡಿ ನಮ್ಮ ನಿಜವಾದ ಶತ್ರು ಯಾರೆಂಬುದನ್ನು ಮನವರಿಕೆ ಮಾಡಬೇಕು. ಆಗ ತಳಮಟ್ಟದಿಂದ ಹೋರಾಟ ರೂಪಿಸಲು ಸಾಧ್ಯವಾಗುತ್ತದೆ. ಮುಖಂಡರು ಜನರ ಬಳಿಗೆ ಹೋಗಬೇಕು. ಅವರಲ್ಲಿ ಜಾಗೃತಿ ಮೂಡಿಸುವಂತಹ ಕೆಲಸ ಮಾಡಬೇಕು. ಆರ್ಥಿಕ ಸಾರ್ವಭೌಮತ್ವಕ್ಕೆ ಹಾಘೂ ಆರ್ಥಿಕ ಸ್ವಾಯತ್ತತೆ ಹಾಳುಮಾಡುತ್ತಿರುವ ಶಕ್ತಿಗಳನ್ನು ಅಧಿಕಾರದಿಂದ ಕೆಳಗಿಳಿಸಬೇಕು ಎಂದು ತಿಳಿಸಿದರು.
ಕಾರ್ಮಿಕ ಸಂಘಟನೆಗಳು ಕೇವಲ ಕಾರ್ಮಿಕರನ್ನು ಮಾತ್ರ ಒಳಗೊಳ್ಳದೆ, ವಿದ್ಯಾರ್ಥಿಗಳು, ಯುವಜನರನ್ನು ಸೇರಿಸಿಕೊಂಡು ಹೋರಾಟಕ್ಕೆ ಅಣಿನೆರೆಸಿದಾಗ ಮಾತ್ರವೇ ಕಾರ್ಮಿಕರಲ್ಲಿ ಪ್ರಜ್ಞೆ ಹೆಚ್ಚಲು ಸಾಧ್ಯವಾಗುತ್ತದೆ. ಜಿಲ್ಲಾ ಮಟ್ಟದ ಸಂಘಗಳು ಮತ್ತು ಸಮಿತಿಗಳನ್ನು ಬಲಗೊಳಿಸಬೇಕು. ಬರೀ ದೂರುತ್ತಾ ಕೂತರೆ ನಮ್ಮ ಗುರಿಯನ್ನು ಮುಟ್ಟಲು ಆಗುವುದಿಲ್ಲ ಎಂದು ವಿವರಿಸಿದರು.

ಸಮ್ಮೇಳನಕ್ಕೆ ದುಡಿದವರಿಗೆ ಕೃತಜ್ಞತೆಗಳು:
ಮೂರು ದಿನಗ ಈ ಸಮ್ಮೇಳನ ಯಶಸ್ವಿಗೆ ನೂರಾರು ಸಂಗಾತಿಗಳು ಕೆಳದ ಎರಡು ತಿಂಗಳಿಂದ ಶ್ರಮಿಸಿದ್ದರು. ಅವರ ಪರವಾಗಿ ವಿವಿಧ ಕಾರ್ಮಿಕ ಸಂಘಗಳ ಮುಖಂಡರನ್ನು ಸಮ್ಮೇಳನದಲ್ಲಿ ನೆನಪಿನ ಕಾಣಿಕೆ ನೀಡಿ ಅಖಿಲ ಭಾರತ ಮುಖಂಡರು ಗೌರವಿಸಿದರು. ಸ್ವಾಗತ ಸಮಿತಿ ಪರವಾಗಿ ಸೈಯದ್ ಮುಜೀಬ್, ಜಿ. ಕಮಲ ಸಮ್ಮೇಳನಕ್ಕೆ ಶ್ರಮಿಸಿದ ಮುಖಂಡರಿಗೆ ಸ್ವಾಗತ ಸಮಿತಿ ಪರವಾಗಿ ಕೃತಜ್ಞತೆ ಸಲ್ಲಿಸಿದರು. ಕೊನೆಯಲ್ಲಿ ಸಿಐಟಿಯು ರಾಜ್ಯ ಅಧ್ಯಕ್ಷರಾದ ಎಸ್. ವರಲಕ್ಮೀ ಯವರು ಕೆಂಪು ಧ್ವಜ ಆವರೋಹಣದ ಮೂಲಕ ಸಮ್ಮೇಳನಕ್ಕೆ ವಿದ್ಯುಕ್ರವಾಗಿ ತೆರೆ ಎಳೆದರು ಬಳಿಕಾ ಸಾಮೂಹಿಕವಾಗಿ ಗೆಲುವು ನಮ್ಮದು ಹಾಡಿನ ಭವಿಷ್ಯದಲ್ಲಿ ಬಲಿಷ್ಟ ಕಾರ್ಮಿಕ ಚಳವಳಿ ಕಟ್ಟುವ ಪಣದೊಂದಿಗೆ ಮೂಲಕ 14 ನೆ ಸಮ್ಮೇಳನ ಕೊನೆಗೊಂಡಿತು.
ನೂತನ ರಾಜ್ಯ ಪದಾಧಿಕಾರಿಗಳು :
ಮೂರು ದಿನಗಳ ಕಾಲ ನಡೆದ 14 ನೇ ರಾಜ್ಯ ಸಮ್ಮೆಳನವು 35 ಜನ ಪದಾಧಿಕಾರಿಗಳನ್ನು ಸರ್ವಾನುಮತದಿಂದ ಅಯ್ಕೆ ಮಾಡಿತು. ಎಸ್. ವರಲಕ್ಷಿö್ಮ ಅಧ್ಯಕ್ಷರಾಗಿ, ಮೀನಾಕ್ಷಿ ಸುಂದರಂ ಪ್ರಧಾನ ಕಾರ್ಯದರ್ಶಿಯಾಗಿ, ಕೆ.ಪಿ. ಪರಮೇಶ್ವರ್ ಖಜಾಂಚಿಯಾಗಿ ಆಯ್ಕೆಯಾಗಿದ್ದಾರೆ.
ಉಪಾಧ್ಯಕ್ಷರಾಗಿ ವಿ.ಜೆ.ಕೆ. ನಾಯರ್, ಕೆ. ಶಂಕರ್, ಜೆ. ಬಾಲಕೃಷ್ಣ ಶೆಟ್ಟಿ, ಎನ್. ವೀರಸ್ವಾಮಿ, ಹೆಚ್.ಎನ್. ಗೋಪಾಲ ಗೌಡ, ವಸಂತ ಆಚಾರಿ, ಜಿ. ಜಯರಾಮ್, ಕೆ. ಪ್ರಕಾಶ್, ಟಿ. ಲೀಲಾವತಿ, ಶಾಂತಾ ಎನ್ ಘಂಟೆ, ಹರೀಶ್ ನಾಯ್ಕ್, ಆರ್.ಎಸ್. ಬಸವರಾಜ್. ಗೈಬು ಜೈನೇ ಖಾನ್ ಆಯ್ಕೆಯಾದರು.
ಕಾರ್ಯದರ್ಶಿಗಳಾಗಿ ಕೆ.ಎನ್. ಉಮೇಶ್, ಸೈಯದ್ ಮುಜೀಬ್, ಕೆ. ಮಹಂತೇಶ್, ಬಾಲಕೃಷ್ಣ ಶೆಟ್ಟಿ, ಎನ್. ಪ್ರತಾಪ್ ಸಿಂಹ, ಯಮುನಾ ಗಾಂವ್ಕರ್, ಹೆಚ್.ಎಸ್. ಸುನಂದ. ಮಹೇಶ್ ಪತ್ತಾರ್, ಎಂ.ಬಿ. ನಾಡಗೌಡ, ಮಾಲಿನಿ ಮೇಸ್ತ, ಸುನೀಲ್ ಕುಮಾರ್ ಬಜಾಲ್, ಧರ್ಮೇಶ್, ಬಿ. ಉಮೇಶ್, ಸಿ.ಆರ್. ಶಾನಭಾಗ್, ಪದ್ಮಾವತಿ ಶೆಟ್ಟಿ, ನಿರುಪಾದಿ ಬೆನಕಲ್, ಬಿ.ವಿ. ರಾಘವೇಂದ್ರ, ಜಿ. ರಾಮಕೃಷ್ಣ, ಬಿ.ಎನ್. ಮುಂಜುನಾಥ್ ಆಯ್ಕೆ ಮಾಡಲಾಯಿತು.

ಸಮ್ಮೇಳನ ಅಂಗೀಕರಿಸಿದ ಪ್ರಮುಖ ನಿರ್ಣಯಗಳು:
- ಅಂಗನವಾಡಿ ನೌಕರರ ಬೇಡಿಕೆಗಳ ಈಡೇರಿಕೆಗೆ ಆಗ್ರಹಿಸಿ
- ಹೆಚ್ಚುತ್ತಿರುವ ಕೋಮುವಾದದ ವಿರುದ್ಧ ಮತ್ತು ಎಲ್ಲ ಶ್ರಮಜೀವಿಗಳ ಐಕ್ಯತೆಗಾಗಿ
- ಬೀಡಿ ಕಾರ್ಮಿಕರಿಗೆ ಪರ್ಯಾಯ ಉದ್ಯೋಗ – ಕನಿಷ್ಟ ಕೂಲಿ -ತುಟ್ಟಿಭತ್ಯೆ, ಕಾರ್ಮಿಕ ಕಾನೂನುಗಳ ಜಾರಿಗೆ ಒತ್ತಾಯಿಸಿ
- ಆಶಾ ಕಾರ್ಯಕರ್ತೆಯರ ಬೇಡಿಕೆಗಳ ಈಡೇರಿಕೆಗೆ ಆಗ್ರಹಿಸಿ
- ಬಿಎಸ್‌ಎನ್‌ಎಲ್ ಗುತ್ತಿಗೆ ಕಾರ್ಮಿಕರಿಗೆ ಬಾಕಿ ವೇತನ ಪಾವತಿಸಲು ಮತ್ತು ಕೆಲಸದ ಭದ್ರತೆ ಒದಗಿಸಲು ಆಗ್ರಹಿಸಿ
- ಗುತ್ತಿಗೆ ಮತ್ತು ಇತರೆ ಖಾಯಂಯೇತರ ಕಾರ್ಮಿಕರ ಖಾಯಂಗೆ ಶಾಸನಕ್ಕಾಗಿ ಆಗ್ರಹಿಸಿ
- ರಾಜ್ಯದ ಎಲ್ಲಾ ಜಿಲ್ಲಾ ಕೇಂದ್ರಗಳಲ್ಲಿ ಕಾರ್ಮಿಕ ನ್ಯಾಯಾಲಯಗಳ ಸ್ಥಾಪನೆಗೆ ಒತ್ತಾಯಿಸಿ
- ಕರ್ನಾಟಕ ರಾಜ್ಯ ಕಟ್ಟಡ ಕಾರ್ಮಿಕ ಮಂಡಳಿ ಹಾಗೂ ಹಾಗೂ ಕಟ್ಟಡ ನಿರ್ಮಾಣ ವಲಯದ ಕಾರ್ಮಿಕರ ಬದುಕನ್ನು ರಕ್ಷಿಸಲು ಹಾಗೂ ಕಲ್ಯಾಣ ಮಂಡಳಿ ಸೌಲಭ್ಯಗಳ ಜಾರಿಗೆ ಕ್ರಮ ವಹಿಸಲು ಒತ್ತಾಯಿಸಿ
- ಮನೆಗೆಲಸಗಾರ ಕಾರ್ಮಿಕರಿಗೆ ಕನಿಷ್ಟಕೂಲಿಗೆ ಆಗ್ರಹಿಸಿ
- ಆರ್ಥಿಕ ಹಿಂಜರಿಕೆ : ಕಾರ್ಮಿಕರ, ದುಡಿಯುವ ಜನರ ಕೆಲಸ, ಆದಾಯ ಮತ್ತು ಹಕ್ಕುಗಳನ್ನು ರಕ್ಷಿಸಲು ಒತ್ತಾಯಿಸಿ
- ಗುತ್ತಿಗೆ ಮತ್ತು ಇತರೆ ಖಾಯಂಯೇತರ ಕಾರ್ಮಿಕರ ಖಾಯಂಗೆ ಶಾಸನಕ್ಕಾಗಿ
- ಇಎಸ್‌ಐ ವಂತಿಕೆ ಕಡಿತ ಮತ್ತು ಅದರ ನಿರ್ವಹಣೆ ಖಾಸಗಿಯವರಿಗೆ ವಹಿಸುವುದರ ವಿರುದ್ಧ
- ರಾಜ್ಯದ ನೆರೆ ಪೀಡಿತರಿಗೆ ಪರಿಹಾರ, ನಿರಾಶ್ರಿತರಿಗೆ ಪುನರ್ವಸತಿ ಒತ್ತಾಯಿಸಿ ಹಾಗೂ ಕೇಂದ್ರ ಸರ್ಕಾರದ ತಾರತಮ್ಯ ನೀತಿಯನ್ನು ವಿರೋಧಿಸಿ
- ಐಟಿ/ಐಟಿಇಎಸ್ ಉದ್ದಿಮೆಗಳಿಗೆ ವಿಸ್ತರಿಸಿರುವ ವಿನಾಯಿತಿಯನ್ನು ವಿರೋಧಿಸಿ
- ಬಿಸಿಯೂಟ ಯೋಜನೆಯ ಖಾಯಂಗಾಗಿ ಒತ್ತಾಯಿಸಿ
- ಸಮಾನ ಕನಿಷ್ಟ ವೇತನಕ್ಕಾಗಿ
- ಗ್ರಾಮ ಪಂಚಾಯತ್ ನೌಕರರ ಬೇಡಿಕೆಗಳ ಈಡೇರಿಕೆಗೆ ಆಗ್ರಹಿಸಿ
- ಅಸಂಘಟಿತ ಕಾರ್ಮಿಕರಿಗೆ ಭವಿಷ್ಯನಿಧಿ ಯೋಜನೆ ಜಾರಿಮಾಡಲು ಹಾಗೂ ಪ್ರಸ್ತುತ ವರ್ಷದ ಬಜೆಟ್‌ನಲ್ಲಿ ಅಗತ್ಯ ಹಣಕಾಸು ನೀಡಲು ಆಗ್ರಹಿಸಿ
- ಸಾರ್ವಜನಿಕ ಉದ್ದಿಮೆಗಳ ಉಳಿವಿಗಾಗಿ ಆಗ್ರಹಿಸಿ
- ಹಂಚು ಉದ್ಯಮ ಮತ್ತು ಕಾರ್ಮಿಕರನ್ನು ರಕ್ಷಿಸಲು ಒತ್ತಾಯಿಸಿ
- ಮಹಿಳೆಯರ ಮೇಲೆ ಹೆಚ್ಚುತ್ತಿರುವ ದೌರ್ಜನ್ಯ ತಡೆಗಾಗಿ ಒತ್ತಾಯಿಸಿ