ಡೀಸೆಲ್ ಬೆಲೆಯೇರಿಕೆ ಜನತೆಯ ಒಳಿತಿಗೇ ಎಂಬ ಈ ಸೋಗಾದರೂ ಏಕೆ, ಪ್ರಧಾನಿಗಳೇ?

ಸೀತಾರಾಂ ಯೆಚೂರಿ

ಸಂಪುಟ – 06, ಸಂಚಿಕೆ 41, ಅಕ್ಟೋಬರ್ 07, 2012

9

ಹಣಕಾಸಿನ ಜಾಗತೀಕರಣ ಈಗ ಸಾಮಾನ್ಯ ಸಂಗತಿಯಾಗಿ ಬಿಟ್ಟಿದೆ, ನಾವು ಅದರೊಡನೆ ಹೊಂದಾಣಿಕೆ ಮಾಡಿಕೊಳ್ಳದೇ ವಿಧಿಯಿಲ್ಲ ಎಂದು ಹೇಳುತ್ತಲೇ, ದೇಶದ ಮೇಲೆ ಬಲವಂತದಿಂದ ಹೇರಿರುವುದನ್ನು ಜನತೆಗೆ ಒಳಿತು ಮಾಡುವಂತ ಕ್ರಮಗಳು ಎಂದು ಸೋಗು ಹಾಕುವ ಅಗತ್ಯವೇನೂ ಇಲ್ಲವಲ್ಲ. ಇಂತಹ ಸೋಗು ಹಾಕಿಸುವ ಸುಧಾರಣೆಗಳು ನಿಜವಾಗಿಯೂ ಬೇಕೇ? ಜೂಜುಕೋರರ ಒಂದು ಸಣ್ಣ ಗುಂಪಿನ ವಿಶ್ವಾಸ ಗಳಿಸಿ, ಉಳಿಸುವುದೇ ಪರಮೋಚ್ಚ, ಕೋಟ್ಯಂತರ ಜನತೆಯ ಹಿತಗಳು ಗೌಣ ಎಂದು ಭಾವಿಸುವ, ಹಣಕಾಸಿನ ಜಾಗತೀಕರಣಕ್ಕೆ ಪಯರ್ಾಯವೇ ಇಲ್ಲದಿರುವ ಒಂದು ವ್ಯವಸ್ಥೆಯಲ್ಲಿ ಜನತೆಯ ಹಕ್ಕುಗಳನ್ನು, ಅವರ ಜೀವನಾಧಾರಗಳನ್ನು ಅತಿಕ್ರಮಿಸಲೇ ಬೇಕಾಗಿದೆ, ಇದಕ್ಕಾಗಿ ನಮ್ಮ ಸಂವಿಧಾನದ ಕಣ್ಣೋಟವನ್ನು ಉಲ್ಲಂಘಿಸುವದಲ್ಲದೆ ಬೇರೆ ದಾರಿಯಿಲ್ಲ ಎಂದು ನಂಬಿರುವ ಸರಕಾರಕ್ಕೆ ಅಧಿಕಾರದಲ್ಲಿ ಮುಂದುವರೆಯಲು ಯಾವ ನೈತಿಕ ಹಕ್ಕೂ ಇಲ್ಲ.

1991ರಲ್ಲಿ ಭಾರತದಲ್ಲಿ ನವ-ಉದಾರವಾದಿ ಸುಧಾರಣೆಗಳ ಪ್ರಕ್ರಿಯೆಯನ್ನು ಆರಂಭಿಸ ಲಾಯಿತು. ಆಗ ಅದು ಪ್ರಜಾಪ್ರಭುತ್ವವನ್ನು, ಸಮಾನತೆಯನ್ನು ನಿರಾಕರಿಸುವ ಕ್ರಮ ಎಂದು ಹಲವರು ವಿರೋಧಿಸಿದರು. ಏಕೆಂದರೆ ಈ ಸುಧಾರಣೆಗಳ ಪ್ರಕಾರ ದೇಶದ ಆಥರ್ಿಕ ವ್ಯವಸ್ಥೆಯಲ್ಲಿ ಸರಕುಗಳು, ಸೇವೆಗಳು ಮತ್ತು ಬಂಡವಾಳ ಯಾವುದೇ ನಿಯಂತ್ರಣಗಳಿಲ್ಲದೆ ಮುಕ್ತವಾಗಿ ಹರಿದಾಡಲು ಬಿಡಬೇಕು, ಅದರಿಂದ ಭಾರತದ ಕೋಟ್ಯಂತರ ದುಡಿಯುವ ಜನತೆಯ ಜೀವನ ಮಟ್ಟ ಅಂತರ್ರಾಷ್ಟ್ರೀಯ ಜೂಜುಕೋರರ ಮಜರ್ಿಗಳಿಗೆ, ದುರಾಸೆಗಳಿಗೆ ಪಕ್ಕಾಗಬೇಕಾಗುತ್ತದೆ ಎಂಬುದು ಆ ಟೀಕಾಕಾರರ ವಾದವಾಗಿತ್ತು. ಆ ಜೂಜುಕೋರರಿಗೆ ನಮ್ಮ ಆಥರ್ಿಕದಲ್ಲಿ ವಿಶ್ವಾಸ ಕುಂದಿದರೆ, ಅದರಿಂದಾಗಿ ಅವರು ತಮ್ಮ ಹಣವನ್ನು ಹಿಂತೆಗೆದುಕೊಂಡರೆ, ಆಗ ಆ ವಿಶ್ವಾಸವನ್ನು ಮರಳಿ ಪಡೆಯಲು ಕ್ರಮಗಳನ್ನು ಕೈಗೊಳ್ಳಲೇ ಬೇಕಾಗುತ್ತದೆೆ. ಆದರೆ ಇಂತಹ ವಿಶ್ವಾಸವನ್ನು ಪುನರುಜ್ಜೀವನ ಗೊಳಿಸುವ ಕ್ರಮಗಳು ಅನಿವಾರ್ಯವಾಗಿಯೇ ಜನಗಳಿಗೆ ಯಾತನೆ ತರುವ ಕ್ರಮಗಳೇ ಆಗಿರಬೇಕಾಗುತ್ತದೆ. ಏಕೆಂದರೆ, ಬೇರೆ ಯಾವುದೇ ಕ್ರಮಗಳಿಂದ ಅವರ ವಿಶ್ವಾಸವನ್ನು ಗಳಿಸಲು ಸಾಧ್ಯವಾಗುವುದಿಲ್ಲ. ಬೇರೆ ಯಾವುದೇ ಕ್ರಮಗಳು, ಅಂದರೆ ಸಿರಿವಂತರ, ಕಾಪರ್ೊರೇಟುಗಳ ಮತ್ತು ಹಣಕಾಸಿನ ಮಂದಿಗಳ ಹಿತಾಸಕ್ತಿಗಳಿಗೆ ವಿರುದ್ಧವಾಗಿರುವ ಕ್ರಮಗಳಂತೂ ಅವರ ವಿಶ್ವಾಸ ಗಳಿಸಿಕೊಳ್ಳುವ ಬದಲು ತದ್ವಿರುದ್ಧ ಪರಿಣಾಮವನ್ನೇ ಉಂಟು ಮಾಡಬಹುದು.

ಹೀಗೆ ಬಾಲವೇ ನಾಯಿಯನ್ನು ಅಲ್ಲಾಡಿಸುವಂತಹ ಸನ್ನಿವೇಶ ಉಂಟಾಗುತ್ತದೆ- ಅಂತರ್ರಾಷ್ಟ್ರೀಯ ಜೂಜುಕೋರರ ಒಂದು ಸಣ್ಣ ಗುಂಪಿನ ಮಜರ್ಿಗಳು ಕೋಟ್ಯಂತರ ಜನಗಳ ಬದುಕನ್ನು ನಿರ್ಧರಿಸುವಂತಾಗುತ್ತದೆ. ಇದು ಪ್ರಜಾಪ್ರಭುತ್ವದ, ಸಮಾನತೆಯ ಮತ್ತು ಸಾರ್ವಭೌಮತೆಯ ನಿರಾಕರಣೆಯಲ್ಲದೆ ಬೇರೇನೂ ಅಲ್ಲ.

ತಪ್ಪೊಪ್ಪಿಗೆಯ ಭಾಷಣ!
ಆಗ ಹಣಕಾಸು ಮಂತ್ರಿಗಳಾಗಿದ್ದ ಮನಮೋಹನ ಸಿಂಗ್ ಮತ್ತು ನವ-ಉದಾರವಾದದ ಇತರ ಪ್ರತಿಪಾದಕರು ಈ ವಾದವನ್ನು ಗೇಲಿ ಮಾಡಿದರು, ಎಲ್ಲದರಲ್ಲೂ ಕೇಡನ್ನೇ ಕಾಣುವುದು ಈ ಟೀಕಾಕಾರರ ಜಾಯಮಾನ ಎಂದು ಹೀಗಳೆದರು. ಆಥರ್ಿಕ ವ್ಯವಸ್ಥೆಯನ್ನು ಮುಕ್ತಗೊಳಿಸಿದರೆ ಅದು ಎಷ್ಟು ಬಲಿಷ್ಟವಾಗುತ್ತದೆ, ದಕ್ಷವಾಗುತ್ತದೆ ಮತ್ತು ಅಂತರ್ರಾಷ್ಟ್ರೀಯವಾಗಿ ಸ್ಪಧರ್ಾತ್ಮಕವಾಗುತ್ತ ದೆಂದರೆ, ಭಾರತ ಒಂದು ಯಶಸ್ವಿ ರಫ್ತುಗಾರ ದೇಶವಾಗಿ ಹೊರಹೊಮ್ಮುತ್ತದೆ, ಅಂತರ್ರಾಷ್ಟ್ರೀಯ ಹಣಕಾಸು ಬಂಡವಾಳದ ಅತ್ಯಂತ ಪ್ರಿಯ ತಾಣವಾಗುತ್ತದೆ ಎಂದೆಲ್ಲ ಅವರು ತರ್ಕ ಹೂಡಿದರು. 1991ರಲ್ಲಿ ದೇಶವನ್ನು ತಟ್ಟಿದಂತಹ ಪಾವತಿ ಬಾಕಿಯ ಬಿಕ್ಕಟ್ಟು ಈ ಸುಧಾರಣೆ ಗಳನ್ನು ತರುವ ಮೊದಲಿನ ಅಂತಮರ್ುಖಿ ವ್ಯವಸ್ಥೆಯ ಬಳುವಳಿಯಾಗಿ ಬಂದಿರುವ ಅದಕ್ಷತೆಗಳ ಫಲಿತಾಂಶ, ಈ ಅದಕ್ಷತೆ ಗಳಿಂದಾಗಿಯೇ ಇಂತಹ ಸುಧಾರಣೆಗಳನ್ನು ತರಬೇಕಾಗಿ ಬಂದಿದೆ. ಈ ಸುಧಾರಣೆಗಳು ಆ ಬಳುವಳಿಯನ್ನು ನಿವಾರಿಸಿದ ಮೇಲೆ ಇಂತಹ ಪಾವತಿ ಬಿಕ್ಕಟ್ಟುಗಳು ಮತ್ತೆಂದೂ ಸಂಭವಿಸುವುದೇ ಇಲ್ಲ. ಅವು ಗತಕಾಲದ ಸಂಗತಿಗಳಾಗಿ ಬಿಡುತ್ತವೆ ಎಂಬುದು ಅವರ ವಾದವಾಗಿತ್ತು.

ಮನಮೋಹನ್ ಸಿಂಗ್ ಅವರು ಸಪ್ಟಂಬರ್ 21ರಂದು ದೇಶವನ್ನುದ್ದೇಶಿಸಿ ಮಾಡಿದ ಟೆಲಿವಿಶನ್ ಪ್ರಸಾರ ಭಾಷಣ, ತಮ್ಮ ಈ ನವ-ಉದಾರವಾದಿ ತರ್ಕಗಳೆಲ್ಲ ತಪ್ಪು, ತಾವು ಗೇಲಿಮಾಡಿದ್ದ ಟೀಕಾಕಾರರು ಸರಿಯಾಗಿಯೇ ಹೇಳಿದ್ದರು ಎಂಬುದನ್ನು ಸ್ಪಷ್ಟವಾಗಿ ಒಪ್ಪಿಕೊಂಡಂತಹ ಭಾಷಣ. ಅವರು ತಮ್ಮ ಈ ಭಾಷಣದಲ್ಲಿ 1991ರ ಬಿಕ್ಕಟ್ಟು ಮತ್ತು ಈಗಿನದನ್ನು ಹೋಲಿಸಿ ನೋಡಿದ್ದಾರೆ. ಆದರೆ ಅವರು ಆಗ ಹೇಳಿದ್ದಂತಹ 1991ರ ಮೊದಲಿನ ಅಂತಮರ್ುಖಿ ಕಾರ್ಯತಂತ್ರವನ್ನು ಹೂತು ಹಾಕಿದ ಎರಡು ದಶಕಗಳ ನಂತರವೂ 1991ರ ಮಾದರಿಯ ಬಿಕ್ಕಟ್ಟು 2012ರಲ್ಲಿ ನಮ್ಮ ಆಥರ್ಿಕವನ್ನು ಮತ್ತೆ ತಟ್ಟಿದೆಯೆಂದರೆ, ದೋಷ ಆ ಕಾರ್ಯತಂತ್ರದ್ದಲ್ಲ, ಆ ಬಿಕ್ಕಟ್ಟನ್ನು ತಂದದ್ದು ಆ ಅಂತಮರ್ುಖಿ ಕಾರ್ಯತಂತ್ರವಲ್ಲ ಎಂದಾಗುವುದಿಲ್ಲವೇ? ವಾಸ್ತವವಾಗಿ ಆ ಬಿಕ್ಕಟ್ಟು ಬಂದದ್ದು 1980ರ ದಶಕದಿಂದ ಆರಂಭಿಸಿ ಆ ಅಂತಮರ್ುಖಿ ಕಾರ್ಯತಂತ್ರವನ್ನು ಕ್ರಮೇಣ ಕೈಬಿಡಲಾರಂಭಿಸಿ, ನಮ್ಮ ಆಥರ್ಿಕವನ್ನು ಮನಬಂದಂತೆ ಹರಿದಾಡುವ, ಚಂಚಲವಾದ ಅನಿವಾಸಿ ಠೇವಣಿಗಳ ಸ್ವರೂಪದಲ್ಲಿ ಹರಿದು ಬಂದ ಜಾಗತಿಕ ಹಣಕಾಸಿಗೆ ತೆರೆದು ಕೊಟ್ಟಿದ್ದರಿಂದಲೇ ಎಂದು ಟೀಕಾಕಾರು ಆಗಲೇ ಉತ್ತರ ಕೊಟ್ಟಿದ್ದರು. ಅದೀಗ ನಿಜವೆಂದು ಸಾಬೀತಾಗುತ್ತಿದೆ.

ಅದೇ ರೀತಿ, ನವ-ಉದಾರವಾದಿ ವ್ಯವಸ್ಥೆಯ ಅಡಿಯಲ್ಲಿ ಭಾರತದ ರಫ್ತುಗಳು ಭಾರೀ ಯಶಸ್ಸು ಗಳಿಸಿವೆ, ಭಾರತ ಆಥರ್ಿಕ ಮಹಾಶಕ್ತಿಯಾಗಿ ಮೂಡಿ ಬರುತ್ತಿದೆ ಎಂದೆಲ್ಲ ಹೇಳಿಕೊಂಡರೂ, ಅದು ಇದ್ದಕ್ಕಿದ್ದಂತೆ ಜೂಜುಕೋರರ ವಿಶ್ವಾಸ ವನ್ನು ಕಳಕೊಳ್ಳುವ ಭಯವನ್ನು ಏಕೆ ಎದುರಿಸಬೇಕಾಗಿ ಬಂದಿದೆ, ನವ-ಉದಾರವಾದಿ ಧೋರಣೆಗಳ ಟೀಕಾಕಾರರು ಹೇಳಿದ ರೀತಿಯಲ್ಲಿಯೇ, ಸರಕಾರ ಆ ಅಂತರ್ರಾಷ್ಟ್ರೀಯ ಜೂಜುಕೋರರ ಎದುರು ಮೊಣಕಾಲೂರಿ, ಜನಗಳ ಯಾತನೆಗಳನ್ನು ಉಲ್ಬಣಗೊಳಿಸುವ ಹತಾಶ ಕ್ರಮಗಳನ್ನು ಕೈಗೊಳ್ಳಬೇಕಾದ ಪರಿಸ್ಥಿತಿ ಏಕೆ ಬಂದಿದೆ? ಸಂಕ್ಷಿಪ್ತವಾಗಿ ಹೇಳುವುದಾದರೆ, ದೇಶದ ಆಥರ್ಿಕವನ್ನು ಹಣಕಾಸಿನ ಮುಕ್ತ ಹರಿದಾಟಕ್ಕೆ ತೆರೆದು ಇಟ್ಟಿರುವುದರಿಂದ ಅದರಿಂದ ಉಂಟಾಗುವ ಹಣಕಾಸು ಬಿಕ್ಕಟ್ಟುಗಳಿಗೂ ಅದು ತಲೆ ಕೊಡಬೇಕಾಗುತ್ತದೆ, ಎಷ್ಟೆಂದರೆ, ಅದಕ್ಕೆ ಜೂಜುಕೋರರ ವಿಶ್ವಾಸವೇ ಪರಮೋಚ್ಚವಾಗು ತ್ತದೆ, ಅದನ್ನು ಉಳಿಸಿಕೊಳ್ಳುವ ಪ್ರಕ್ರಿಯೆಗೆ ಜನಗಳ ಬದುಕನ್ನು ಒಗ್ಗಿಸಬೇಕಾಗುತ್ತದೆ.

ಜನಗಳ ಹಿಂಡುತ್ತಲೇ ಇರಬೇಕು!
ಮನಮೋಹನ್ ಸಿಂಗ್ ಈಗಾಗಲೇ ಪ್ರಕಟಿಸಿರುವ ಮತ್ತು ಅವರ ಸರಕಾರ ಮುಂದೆ ತರಬೇಕೆಂದಿರುವ ಜನ-ವಿರೋದಿ ಕ್ರಮಗಳು, ಜನತೆಯ ಹಣದಿಂದ ನಮರ್ಿಸಿರುವ ಸಾರ್ವಜನಿಕ ವಲಯದ ಆಸ್ತಿಗಳನ್ನು ದೇಶಿ-ವಿದೇಶಿ ಬಂಡವಾಳಿಗರಿಗೆ ವಹಿಸಿಕೊಡುವ ಅವರ ಯೋಚನೆಗಳು ನಮ್ಮ ದೇಶದ ಆಥರ್ಿಕದಿಂದ ಹಣಕಾಸು ಹೊರಗೆ ಹರಿದು ಹೋಗುವುದನ್ನು, ಆ ಮೂಲಕ ರೂಪಾಯಿಯ ಮೌಲ್ಯದ ಕುಸಿತವನ್ನು ತಡೆಯುತ್ತವೆ ಎಂದೇ ಇಟ್ಟುಕೊಳ್ಳೋಣ. ಅಷ್ಟೇ ಅಲ್ಲ, ಹಣಕಾಸು ದೇಶದೊಳಕ್ಕೆ ಹರಿದು ಬಂದು ಹೊಸದೊಂದು ಗುಳ್ಳೆಯನ್ನು ಹುಟ್ಟಿಸಿ ಮತ್ತೆ ಜಿಡಿಪಿ ಬೆಳವಣಿಗೆ ಶುರುವಾಗುತ್ತದೆ ಎಂದೂ ಇಟ್ಟುಕೊಳ್ಳೋಣ. ಆದರೆ ಕೆಲಸಮಯದ ನಂತರ, ಆಗಾಗ ಸಂಭವಿಸುವಂತೆ, ಜಾಗತಿಕ ಮತ್ತು ಆಂತರಿಕ ಬೆಳವಣಿಗೆಗಳಿಂದಾಗಿ ಈ ಜೂಜುಕೋರರ ವಿಶ್ವಾಸ ಕುಸಿದಾಗ, ಈ ಗುಳ್ಳೆ ,ಈ ಜಿಡಿಪಿ ಬೆಳವಣಿಗೆ ಎಲ್ಲವೂ ಮತ್ತೊಮ್ಮೆ ಕುಸಿದರೆ, ಅದನ್ನು ಮತ್ತೊಮ್ಮೆ ಕುದುರಿಸಲು ಜನಗಳ ಬದುಕನ್ನು ಇನ್ನಷ್ಟು ಹಿಂಡುವ ಕ್ರಮಗಳನ್ನು ಪ್ರಕಟಿಸಬೇಕಾಗುತ್ತದೆ. ಅಂದರೆ ಈ ಹಿಡಿಯಷ್ಟು ಜೂಜುಕೋರರ ವಿಶ್ವಾಸಕ್ಕೆ ತಿದಿಯೂದುತ್ತಲೇ ಇರಲು, ಆಥರ್ಿಕ ಬೆಳವಣಿಗೆ ಸಂಭವಿಸು ವಾಗಲೂ ಅದರಿಂದ ಏನೂ ಪ್ರಯೋಜನ ಪಡೆಯದ, ಬದಲಿಗೆ ಇನ್ನಷ್ಟು ದಾರಿದ್ರ್ಯವನ್ನು ಅನುಭವಿಸುವ ಜನಸಾಮಾನ್ಯರನ್ನು ಮತ್ತೆ-ಮತ್ತೆ ಹಿಂಡುತ್ತಲೇ ಇರಬೇಕಾಗುತ್ತದೆ. ದೇಶದಲ್ಲಿ ಇಂತಹ ಒಂದು ಆಥರ್ಿಕ ದಿಕ್ಕನ್ನು ಹಿಡಿದಿರುವುದು ನಿಜವಾಗಿಯೂ ನಮ್ಮ ಸಂವಿಧಾನ ನೀಡಿರುವ ಭರವಸೆಗಳನ್ನು ನಗೆಪಾಟಲು ಮಾಡಿದೆ.

ಏನು ಮಾಡುವುದು, ಇಂತಹ ಒಂದು ದಾರಿಗೆ ಪಯರ್ಾಯವೇ ಇಲ್ಲ, ಜಾಗತೀಕರಣ, ಎಲ್ಲಕ್ಕೂ ಮಿಗಿಲಾಗಿ ಹಣಕಾಸಿನ ಜಾಗತೀಕರಣ ಈಗ ಸಾಮಾನ್ಯ ಸಂಗತಿಯಾಗಿ ಬಿಟ್ಟಿದೆ, ನಾವು ಅದರೊಡನೆ ಹೊಂದಾಣಿಕೆ ಮಾಡಿಕೊಳ್ಳದೇ ವಿಧಿಯಿಲ್ಲ ಎಂದು ನವ-ಉದಾರವಾದದ ಸಮರ್ಥಕರು ಹೇಳಿಕೊಳ್ಳಬಹುದು. ಇದು ಕೂಡಾ ನಿಜವೇ ಎಂದಿಟ್ಟುಕೊಳ್ಳೋಣ. ಹಾಗಿದ್ದರೆ, ಈ ಅನಿವಾರ್ಯತೆಯಲ್ಲಿಯೇ ಸದ್ಗುಣಗಳನ್ನು ಕಾಣುವ ಅಗತ್ಯವೇನೂ ಇಲ್ಲವಲ್ಲ, ದೇಶದ ಮೇಲೆ ಬಲವಂತದಿಂದ ಹೇರಿರುವುದನ್ನು ಜನಗೆ ಒಳಿತು ಮಾಡುವಂತ ಕ್ರಮಗಳು ಎಂದು ಸೋಗು ಹಾಕುವ ಅಗತ್ಯವೇನೂ ಇಲ್ಲವಲ್ಲ. ಅದಕ್ಕೂ ಮುಖ್ಯ ಸಂಗತಿಯೆಂದರೆ, ಇಂತಹ ಸಮರ್ಥನೆಗಳು ನಿಜವೂ ಅಲ್ಲ ಎಂಬುದು ಎಲ್ಲರಿಗೂ ಗೊತ್ತಿರುವ ಸಂಗತಿ. ಒಂದು ದೇಶ, ಬಂಡವಾಳದ ಮೇಲೆ ಹತೋಟಿಗಳನ್ನು ಹಾಕಿ ಜಾಗತೀಕರಣಗೊಂಡ ಹಣಕಾಸಿನ ಸುಳಿಯಿಂದ ಹೊರಬರಲು ಖಂಡಿತಾ ಸಾಧ್ಯವಿದೆ. ನಮ್ಮದೇ ನೆರೆಯಲ್ಲಿನ ಮಲೇಸ್ಯಾ ಮಹಾತೀರ್ ಮಹಮ್ಮದ್ ನೇತೃತ್ವದಲ್ಲಿ ಇದನ್ನು ತೋರಿಸಿಯೂ ಕೊಟ್ಟಿದೆ.

ಇನ್ನು, ನಮ್ಮ ಸಂವಿಧಾನದ ಕಣ್ಣೋಟವನ್ನು ಉಲ್ಲಂಘಿಸುವದಲ್ಲದೆ ಬೇರೇ ದಾರಿಯಿಲ್ಲ, ಏಕೆಂದರೆ, ಹಣಕಾಸಿನ ಜಾಗತೀಕರಣಕ್ಕೆ ಪಯರ್ಾಯವೇ ಇಲ್ಲದಿರುವ ಒಂದು ವ್ಯವಸ್ಥೆಯಲ್ಲಿ ಜನತೆಯ ಹಕ್ಕುಗಳನ್ನು, ಅವರ ಜೀವನಾಧಾರಗಳನ್ನು ಅತಿಕ್ರಮಿಸಲೇ ಬೇಕಾಗಿದೆ ಎಂದು ಯಾವುದಾದರೂ ಸರಕಾರ ನಂಬಿರುವುದಾದರೆ, ಅಂತಹ ಸರಕಾರಕ್ಕೆ ಅಧಿಕಾರದಲ್ಲಿ ಮುಂದುವರೆಯಲು ಯಾವ ನೈತಿಕ ಹಕ್ಕೂ ಇಲ್ಲ.

0

Donate Janashakthi Media

Leave a Reply

Your email address will not be published. Required fields are marked *