ಸಂಚಿಕೆ 31, ಜುಲೈ 29, 2012
ಇಲ್ಲಿ ಡಿಪ್ಲೊಮೋ ವಿದ್ಯಾಥರ್ಿಗಳ ಗಂಭೀರ ಸಮಸ್ಯೆ ಬಗೆಹರಿಸಿ ಎಂದು ವಿದ್ಯಾಥರ್ಿಗಳು ಕೇಳಿದರೆ ಲಾಠಿ ಪ್ರಹಾರ, ಬಂಧನದ ಬಹುಮಾನ ದೊರಕುತ್ತದೆ. ಆದರೂ ವಿದ್ಯಾಥರ್ಿ ಚಳುವಳಿ ಹಿಮ್ಮೆಟ್ಟದೇ ಮುಂದೆ ಹೆಜ್ಜೆ ಇಟ್ಟಿದೆ. ಹೋರಾಟ ಮುಂದೆ ನಡೆದಿದೆ.
ತಾಂತ್ರಿಕ ಶಿಕ್ಷಣ ಮಂಡಳಿಯಲ್ಲಿರುವ ಅವ್ಯವಸ್ಥೆಯನ್ನು ಸರಿಪಡಿಸಿ ಕಾಲೇಜುಗಳಿಗೆ ಬೇಕಾದ ಅಗತ್ಯ ಮೂಲಭೂತ ಸೌಲಭ್ಯಗಳನ್ನು ಒದಗಿಸಿ ವಿದ್ಯಾಥರ್ಿಗಳ ಸಮಸ್ಯೆಗಳನ್ನು ಬಗೆಹರಿಸಬೇಕು, ಪದವಿಯ ರೀತಿಯಲ್ಲಿ ಪರೀಕ್ಷೆ ಬರೆಯಲು ಅವಕಾಶ ನೀಡಬೇಕೆಂದು ಆಗ್ರಹಿಸಿ ಮತ್ತು ಇತರ ಡಿಪ್ಲೊಮ ವಿದ್ಯಾಥರ್ಿಗಳ ವಿವಿಧ ಬೇಡಿಕೆಗಳನ್ನು ಈಡೇರಿಸಬೇಕೆಂದು ಒತ್ತಾಯಿಸಿ ಭಾರತ ವಿದ್ಯಾಥರ್ಿ ಫೆಡರೇಷನ್(ಎಸ್.ಎಫ್.ಐ) ನೇತೃತ್ವದಲ್ಲಿ ರಾಜಧಾನಿ ಬೆಂಗಳೂರು ನಗರದಲ್ಲಿ ಜುಲೈ 19 2012 ರಂದು ಪ್ರತಿಭಟನೆ ನಡೆಸಿದ ವಿದ್ಯಾಥರ್ಿಗಳು ಮತ್ತು ವಿದ್ಯಾಥರ್ಿ ಮುಖಂಡರ ಮೇಲೆ ಪೋಲೀಸರು ಏಕಾಏಕಿ ಲಾಠಿಚಾಜರ್್ ನಡೆಸಿ ಎಸ್.ಎಫ್.ಐ. ರಾಜ್ಯಾಧ್ಯಕ್ಷರಾದ ಅನಂತನಾಯ್ಕ್, ಮುಖಂಡರಾದ ಗುರುರಾಜ್, ಅಂಬರೀಶ್, ಬಸವರಾಜ್ ಪೂಜಾರ್, ಗ್ಯಾನೇಶ್, ಮುನೇಂದ್ರ, ಅರವಿಂದ ಸೇರಿದಂತೆ 9 ಜನ ಎಸ್ಎಫ್ಐ ಮುಖಂಡರನ್ನು ಬಂಧಿಸಿದ ಅಘಾತಕಾರಿ ಘಟನೆ ನಡೆದಿದೆ. ಈ ದೌರ್ಜನ್ಯಕಾರಿ ಲಾಠಿಚಾಜರ್್, ಬಂಧನವನ್ನು ಖಂಡಿಸಿ ನೂರಾರು ವಿದ್ಯಾಥರ್ಿಗಳು ಮತ್ತೆ ಟೌನ್ಹಾಲ್ ಮುಂದೆ ಜಮಾಯಿಸಿ ಪ್ರತಿಭಟನೆ ನಡೆಸಿದ್ದಾರೆ.
ಕನರ್ಾಟಕ ರಾಜ್ಯದ ತಾಂತ್ರಿಕ ಶಿಕ್ಷಣ ಮಂಡಳಿ(ಆಖಿಇ)ಯು ಡಿಪ್ಲೊಮೋ ವಿದ್ಯಾಥರ್ಿಗಳ ಫಲಿತಾಂಶವನ್ನು ಪ್ರಕಟಿಸಿದೆ. ರಾಜ್ಯದಲ್ಲಿ ಶೇ60ಕ್ಕೂ ಹೆಚ್ಚು ವಿದ್ಯಾಥರ್ಿಗಳು ಅನುತ್ತೀರ್ಣರಾಗಿದ್ದಾರೆ. ಮುಂದಿನ ಸೆಮಿಸ್ಟರ್ಗೆ ಮುಂದುವರೆಯಲು ಅರ್ಹತೆ ಹೆಸರಿನಲ್ಲಿ ಬಹುಸಂಖ್ಯಾತ ವಿದ್ಯಾಥರ್ಿಗಳನ್ನು ಶಿಕ್ಷಣದಿಂದ ವಂಚಿತರನ್ನಾಗಿಸಲು ಡಿಟಿಇ ಯು ನಿರ್ಧರಿಸಿದೆ. ತೀವ್ರ ಅವ್ಯವಸ್ಥೆಯ ಆಗರವಾಗಿರುವ ಡಿಪ್ಲೊಮೋ ಶಿಕ್ಷಣವನ್ನು ಸರಿಪಡಿಸಲು ಸೋತಿರುವ ಸಕರ್ಾರವು, ವಿದ್ಯಾಥರ್ಿಗಳ ಮೇಲೆ ಗೂಬೆ ಕೂರಿಸಿ ಅವರ ಭವಿಷ್ಯದೊಂದಿಗೆ ಚೆಲ್ಲಾಟವಾಡುತ್ತಿದೆ.
ತಾಂತ್ರಿಕ ಶಿಕ್ಷಣ ಮಂಡಳಿಯ ಅವೈಜ್ಞಾನಿಕ ನೀತಿಗಳಿಂದ ಸಾವಿರಾರು ವಿದ್ಯಾಥರ್ಿಗಳು ಬೀದಿಪಾಲಾಗುವ ಪರಿಸ್ಥಿತಿ ಉಂಟಾಗಿದೆ. ವಿದ್ಯಾಥರ್ಿಗಳಿಗೆ ಹೊರಲಾರದಷ್ಟು, ಕಠಿಣವಾದ ಹೊಸ ಪಠ್ಯಕ್ರಮವನ್ನು ನಿಗದಿ ಮಾಡಲಾಗಿದೆ. ರಾಜ್ಯದಲ್ಲಿ ಹೊಸ ಪಠ್ಯಕ್ರಮಕ್ಕನುಗುಣವಾಗಿ ಭೋದನೆ ಮಾಡುವ ಅರ್ಹ ಉಪನ್ಯಾಸಕರ ಕೊರತೆಯಿದೆ ಹಾಗೂ ಅದಕ್ಕೆ ಬೇಕಾಗುವ ಅಧ್ಯಯನ ಸಾಮಾಗ್ರಿಗಳ ಕೊರತೆಯಿದೆ. ರಾಜ್ಯದಲ್ಲಿ ಪಾಲಿಟೆಕ್ನಿಕ್ ಶಿಕ್ಷಣ ಸಂಪೂರ್ಣವಾಗಿ ಮಾರಾಟವಾಗುತ್ತಿದೆ, ವಿಪರೀತ ಶುಲ್ಕ ವಸೂಲಿ, ಹಾಜರಾತಿ, ಆಂತರಿಕ ಅಂಕಗಳ ಹೆಸರಿನಲ್ಲಿ ವಿದ್ಯಾಥರ್ಿಗಳಿಗೆ ಕಿರುಕುಳ ನೀಡುವುದು ಮತ್ತು ಹಣ ಸುಲಿಗೆ ಮಾಡುವುದು ಯತೇಚ್ಚವಾಗಿ ನಡೆಯುತ್ತಿದೆ. ಇದರಿಂದಾಗಿ ವಿದ್ಯಾಥರ್ಿಗಳು ಆತ್ಮಹತ್ಯೆಗೆ ಶರಣಾಗುತ್ತಿದ್ದಾರೆ. ಕೆಲವು ಕಾಲೇಜುಗಳು ಅಗತ್ಯ ಮೂಲಭೂತ ಸೌಲಭ್ಯಗಳಿಂದ ವಂಚಿತವಾಗಿವೆ, ಅವೈಜ್ಞಾನಿಕ ಪರೀಕ್ಷಾ ನೀತಿಗಳು, ತರಗತಿಗಳು ಮುಗಿಯುವ ಮುನ್ನವೇ ಪರೀಕ್ಷೆಗಳನ್ನು ನಡೆಸುವುದು. ಆರು ತಿಂಗಳ ಕೋಸರ್್ಗಳನ್ನು ಸಮರ್ಪಕವಾಗಿ ನಡೆಸದೇ ಎರಡೇ ತಿಂಗಳಿಗೆ ಮುಗಿಸುವುದರಿಂದ ಶೇ40ರಷ್ಟು ಪಠ್ಯ ಕೂಡ ಮುಗಿಸಿರುವುದಿಲ್ಲ. ಹಾಗೂ ಒಂದೇ ಸಮಯದಲ್ಲಿ ಎರಡು-ಮೂರು ಪರೀಕ್ಷೆಗಳನ್ನು ನಿಗದಿ ಮಾಡುವುದು ಮತ್ತು ಮೌಲ್ಯಮಾಪನ ಸರಿಯಾಗಿ ನಡೆಸದೇ ಇರುವುದು ಈ ಎಲ್ಲಾ ಕಾರಣಗಳಿಂದಾಗಿ ರಾಜ್ಯದಲ್ಲಿ ಅತೀ ಹೆಚ್ಚು ವಿದ್ಯಾಥರ್ಿಗಳು ಅನುತ್ತೀರ್ಣರಾಗುತ್ತಿದ್ದಾರೆ. ಇದಕ್ಕೆ ತಾಂತ್ರಿಕ ಶಿಕ್ಷಣ ಮಂಡಳಿಯ ಅವೈಜ್ಞಾನಿಕ ನೀತಿಗಳೇ ಕಾರಣ ಹೊರತು ವಿದ್ಯಾಥರ್ಿಗಳಲ್ಲ.
ಈ ಹಿನ್ನೆಲೆಯಲ್ಲಿ ರಾಜ್ಯದ ನಾನಾ ಜಿಲ್ಲೆಗಳಿಂ ಆಗಮಿಸಿದ ವಿದ್ಯಾಥರ್ಿಗಳು ಈ ಪ್ರತಿಭಟನೆ ಹಮ್ಮಿಕೊಂಡಿದ್ದರು.
ಪ್ರತಿಭಟನೆಯ ನಂತರ ಎಸ್ಎಫ್ಐ ರಾಜ್ಯ ಕಾರ್ಯದಶರ್ಿ ಹುಳ್ಳಿ ಉಮೇಶ್,ಮುಖಂಡರಾದ ಮುನಿರಾಜ್ ರವರನ್ನೊಳಗೊಂಡ 7 ಜನರ ನಿಯೋಗ ಉನ್ನತ ಶಿಕ್ಷಣ ಸಚಿವರಾದ ಸಿ.ಟಿ. ರವಿರವರನ್ನು ಭೇಟಿ ಮಾಡಿ ಬಂಧಿಸಿರುವ ಮುಖಂಡರನ್ನು ಬೇಷರತ್ತಾಗಿ ಬಿಡುಗಡೆಗೊಳಿಸಬೇಕು, ವಿದ್ಯಾಥರ್ಿಗಳ ಬೇಡಿಕೆಗಳನ್ನು ತಕ್ಷಣ ಈಡೇರಿಸಬೇಕೆಂದು ಮನವಿ ಸಲ್ಲಿಸಿ ಒತ್ತಾಯಿಸಿದರು. ಸಚಿವರು ಬೇಡಿಕೆ ಈಡೇರಿಸುವ ಭರವಸೆ ನೀಡಿದರು
ಚಳುವಳಿಯ ಬೇಡಿಕೆಗಳು
1. ಮೂರು ವರ್ಷದ ಡಿಪ್ಲೋಮೊ ಕೋಸರ್್ನ್ನು ಪದವಿ ರೀತಿಯಲ್ಲಿ ಸಂಪೂರ್ಣವಾಗಿ ಮೂರು ವರ್ಷ ಮುಂದಿನ ತರಗತಿಗಳಿಗೆ ಹಾಜರಾಗಲು (ಪ್ರವೇಶ ಪಡೆಯಲು), ಪರೀಕ್ಷೆ ಬರೆಯಲು ಅವಕಾಶ ಕಲ್ಪಿಸಬೇಕು.
2. ಕಠಿಣವಾದ ಹೊಸ ಪಠ್ಯಕ್ರಮವನ್ನು ಸರಳೀಕರಿಸಬೇಕು, ವಿದ್ಯಾಥರ್ಿಗಳ ಕಲಿಕೆಗೆ ಅನುಗುಣವಾಗಿ ಪಠ್ಯಕ್ರಮವನ್ನು ರಚಿಸಬೇಕು.
3. ಒಂದು ಸೆಮಿಸ್ಟರ್ನಲ್ಲಿ ಕನಿಷ್ಠ 4 ತಿಂಗಳು ಕಡ್ಡಾಯವಾಗಿ ತರಗತಿಗಳು ನಡೆಯುವಂತೆ ಕ್ರಮವಹಿಸಬೇಕು.
4. ಪರೀಕ್ಷಾ ಶುಲ್ಕ, ಮರು ಮೌಲ್ಯಮಾಪನ ಶುಲ್ಕ, ಜೆರಾಕ್ಸ್ ಪ್ರತಿ ಇನ್ನಿತರ ಶುಲ್ಕಗಳನ್ನು ಇಳಿಸಬೇಕು.
5. ಪ್ರವೇಶ ಪ್ರಕ್ರಿಯೆ ಸಂದರ್ಭದಲ್ಲಿ ಸೀಟು ಹಂಚಿಕೆಯಲ್ಲಿ ನಡೆಯುವ ಭ್ರಷ್ಟಾಚಾರವನ್ನು ತಡೆಗಟ್ಟಬೇಕು.
6. ಗ್ರಂಥಾಲಯ, ಪ್ರಯೋಗಾಲಯ, ಅರ್ಹ ಉಪನ್ಯಾಸಕರು ಇನ್ನಿತರ ಮೂಲಭೂತ ಸೌಲಭ್ಯಗಳಿಂದ ವಂಚಿತರಾಗಿರುವ ಕಾಲೇಜುಗಳಿಗೆ ಅಗತ್ಯ ಮೂಲಭೂತ ಸೌಲಭ್ಯಗಳನ್ನು ಒದಗಿಸಬೇಕು.
7. ಸೆಮಿಸ್ಟರ್ ತರಗತಿಗಳು ಮುಗಿಯುವ ಮುನ್ನವೇ ಪರೀಕ್ಷೆಗಳು ಪ್ರಾರಂಭವಾಗುವುದನ್ನು ನಿಲ್ಲಿಸಬೇಕು.
8. ಪರೀಕ್ಷಾ ಮೌಲ್ಯಮಾಪನ ಸರಿಯಾಗಿ ಮಾಡಬೇಕು, ಶೀಘ್ರವಾಗಿ ಮರುಮೌಲ್ಯಮಾಪನ ಫಲಿತಾಂಶ ಪ್ರಕಟಿಸಬೇಕು.
9. ಏಕಕಾಲದಲ್ಲಿ 2-3 ಪರೀಕ್ಷೆಗಳನ್ನು ನಿಗದಿ ಮಾಡುವುದನ್ನು ಕೈಬಿಡಬೇಕು.
10. ಪ್ರಾಯೋಗಿಕ ಪರೀಕ್ಷೆಯಲ್ಲಿ ವಿದ್ಯಾಥರ್ಿಗಳಿಂದ ಸಾವಿರಾರು ರೂಪಾಯಿ ಹಣ ವಸೂಲಿ ಮಾಡಿ, ಪ್ರತಿಭಾನ್ವಿತ ವಿದ್ಯಾಥರ್ಿಗಳಿಗೆ ಕಡಿಮೆ ಅಂಕಗಳನ್ನು ನೀಡಿ, ಹಣ ನೀಡದೆ ಇರುವ ವಿದ್ಯಾಥರ್ಿಗಳನ್ನು ಅನುತ್ತೀರ್ಣ ಮಾಡುತ್ತಿರುವ ಈ ಕ್ರಮವನ್ನು ಹಾಗೂ ಶಿಕ್ಷಣದ ವ್ಯಾಪಾರೀಕರಣವನ್ನು ತಡೆಗಟ್ಟಲು ಡಿಟಿಇಯು ಕಠಿಣ ಕ್ರಮವನ್ನು ಕೈಗೊಳ್ಳಬೇಕು.
11. ಹಣ ಮಾಡುವ ದಂಧೆಯಲ್ಲಿ ತೊಡಗಿರುವ ಖಾಸಗಿ ಪಾಲಿಟೆಕ್ನಿಕ್ಗಳ ಮಾನ್ಯತೆಯನ್ನು ರದ್ದುಗೊಳಿಸಿ, ಖಾಸಗಿ ಪಾಲಿಟೆಕ್ನಿಕ್ಗಳನ್ನು ನಿಯಂತ್ರಿಸಲು ರಾಜ್ಯ ಸಕರ್ಾರಕ್ಕೆ ಅಧಿಕಾರವಿರುವ ಶಾಸನ ಜಾರಿಗೆ ತರಬೇಕು.
12. ಅಗತ್ಯವಿರುವ ಎಲ್ಲಾ ಕಡೆ ಸಕರ್ಾರಿ ಪಾಲಿಟೆಕ್ನಿಕ್ಗಳನ್ನು ಸ್ಥಾಪಿಸಿ ಮತ್ತು ಈಗಿರುವ ಎಲ್ಲಾ ಕಾಲೇಜುಗಳಿಗೆ ಅಗತ್ಯ ಮೂಲಭೂತ ಸೌಲಭ್ಯವನ್ನು ಒದಗಿಸಬೇಕು.
13. ಪಾಲಿಟೆಕ್ನಿಕ್ಗಳಲ್ಲಿ ಆಂತರಿಕ ಅಂಕ ಹೆಸರಿನಲ್ಲಿ ವಿದ್ಯಾಥರ್ಿಗಳ ಮೇಲೆ ನಡೆಯುತ್ತಿರುವ ದೈಹಿಕ ಮತ್ತು ಮಾನಸಿಕ ಶೋಷಣೆಯನ್ನು ನಿಲ್ಲಿಸಬೇಕು.
14. ಕೋಸರ್್ ಮುಗಿಸಿದ ಎಲ್ಲಾ ವಿದ್ಯಾಥರ್ಿಗಳಿಗೆ ಸಕರ್ಾರ ಸೂಕ್ತ ಉದ್ಯೋಗಾವಕಾಶವನ್ನು ನೀಡಬೇಕು.
0