ಎಡ ಚಳುವಳಿಗೆ ಮತ್ತು ದೇಶದ ಎಡ ವಿದ್ಯಾಥರ್ಿ ಚಳುವಳಿಗೆ ಒಂದು ಸಂತಸದ ಸುದ್ದಿ ಇದು. ದೇಶದ ಒಂದು ಅತ್ಯಂತ ಪ್ರತಿಷ್ಠಿತ ವಿಶ್ವವಿದ್ಯಾಲಯಗಳಲ್ಲಿ ಒಂದಾದ ದೆಹಲಿಯ ಜವಾಹರ ಲಾಲ್ ನೆಹರು(ಜೆಎನ್ಯು) ವಿ.ವಿ.ಯಲ್ಲಿ ಇತ್ತೀಚೆಗೆ `ಲೈಂಗಿಕ ದೌರ್ಜನ್ಯ ವಿರೋಧಿ-ಲಿಂಗ ಸಂವೇದಿ ಸಮಿತಿ’ಗೆ ನಡೆದ ಚುನಾವಣೆಯಲ್ಲಿ ಎಸ್ಎಫ್ಐ ಬೆಂಬಲಿತ ಎಡ ಅಭ್ಯಥರ್ಿ ಅಪರ್ಣ ಮಹಿಯಾರಿಯಾ ಅವರು ವಿಜಯಿಯಾಗಿದ್ದಾರೆ.
ಪ್ರಸಕ್ತ ರಾಜಕೀಯ ಸನ್ನಿವೇಶದಲ್ಲಿ ಇದು ಒಂದು ಬಹು ಮಹತ್ವದ ವಿಜಯ ಎಂದೇ ತಿಳಿಯಬೇಕಾಗಿದೆ. ಎಲ್ಲ ಬಗೆಯ ಲಿಂಗ ತಾರತಮ್ಯಗಳ ವಿರುದ್ದ, ಲೈಂಗಿಕ ಹಿಂಸೆ-ಅತ್ಯಾಚಾರಗಳ ಸಂತ್ರಸ್ತರಿಗೆ ತ್ವರಿತ ನ್ಯಾಯ, ಸಲಿಂಗಿಗಳ ಪರಸ್ಪರ ಸಹಮತದ ಲೈಂಗಿಕಕ್ರಿಯೆಯನ್ನು ಅಪರಾಧವೆಂದು ಪರಿಗಣಿಸುವ ಐಪಿಸಿ ಸೆಕ್ಷನ್ 377ರ ರದ್ದತಿ ಮುಂತಾದ ಬೇಡಿಕೆಗಳಿಗಾಗಿ ಇಲ್ಲಿ ಎಸ್ಎಫ್ಐ ನಿರಂತರವಾಗಿ ಆಂದೋಲನವನ್ನು ನಡೆಸುತ್ತ ಬಂದಿತ್ತು ಎಂಬುದನ್ನು ನೆನಪಿಸಿಕೊಳ್ಳಬಹುದು.
ಈ ವಿಜಯ ಒಂದು ಕಡೆ ಲೈಂಗಿಕ ದೌರ್ಜನ್ಯಗಳ ವಿರುದ್ದ-ನ್ಯಾಯಕ್ಕಾಗಿ ಎಸ್ಎಫ್ಐ ಸಂಘಟನೆ ನಡೆಸುತ್ತ ಬಂದ ತತ್ವಬದ್ದವಾದ ಹೋರಾಟಕ್ಕೆ ಸಿಕ್ಕ ಮನ್ನಣೆ. ಮತ್ತೊಂದು ಕಡೆ ಜೆಎನ್ಯುವಿನಂತಹ ಮಹತ್ವದ ವಿ.ವಿ.ಕೇಂದ್ರದಲ್ಲಿ ಇತ್ತೀಚಿನ ದಿನಗಳಲ್ಲಿ ಎಸ್ಎಫ್ಐಗೆ ಆಗಿದ್ದ ತೀವ್ರ ಹಿನ್ನಡೆಯಿಂದ ಸಂಘಟನೆಯು ಚೇತರಿಸಿಕೊಂಡು ತನ್ನ ಪ್ರಭಾವವನ್ನು ಕ್ರೋಢೀಕರಿಸಿಕೊಳ್ಳುತ್ತಿರುವುದರ ಪ್ರತಿಫಲನ ಈ ವಿಜಯ.
`ಲಿಂಗ ಸಂವೇದಿ ಸಮಿತಿ’ಯ ಎರಡು ಸ್ಥಾನಗಳಿಗೆ ನಡೆದ ಚುನಾವಣೆಯಲ್ಲಿ ಅಪಣರ್ಾ ಒಂದು ಸ್ಥಾನದಲ್ಲಿ ಈ ವಿಜಯ ದಾಖಲಿಸಿದ್ದಾರೆ. ಚಲಾವಣೆಯಾದ ಒಟ್ಟು 2944 ಮತಗಳಲ್ಲಿ ಅಪಣರ್ಾ 1184 ಮತಗಳನ್ನು ಗಳಿಸಿದ್ದಾರೆ. ದೇಶದಲ್ಲಿ `ಎಡ ರಾಜಕೀಯವೇ ಅಪ್ರಸ್ತುತ- ಎಡಪಕ್ಷಗಳ ಅಸ್ತಿತ್ವವೇ ಪ್ರಶ್ನಾರ್ಹ ಎಂಬಂತಹ ವಾದಗಳು ರಾಜಕೀಯ ರಂಗದಲ್ಲಿ ನಡೆಯುತ್ತಿರುವಾಗ ಮತ್ತು ಎಡ ಸಿದ್ದಾಂತದ ಮೇಲೆ ಸೈದ್ದಾಂತಿಕವಾದ ದಾಳಿ-ಎಡಪಕ್ಷಗಳ ಕಾರ್ಯಕರ್ತರ ಮೇಲೆ ದೈಹಿಕವಾದ ಹಲ್ಲೆಗಳು ನಡೆಯುತ್ತಿರುವ ಈ ಹೊತ್ತಿನಲ್ಲಿ ಈ ವಿಜಯ ಎಡ ಚಳುವಳಿಯ ಕಾರ್ಯಕರ್ತರ ನೈತಿಕ ಸ್ಥೈರ್ಯವನ್ನು ಹೆಚ್ಚಿಸಲಿದೆ ಎಂಬುದರಲ್ಲಿ ಯಾವುದೇ ಅನುಮಾನವಿಲ್ಲ.
0