ಜನವರಿ 31-ವಿಶ್ವಾಸದ್ರೋಹ ದಿನ: ದೇಶಾದ್ಯಂತ ರೈತರಿಂದ ಪ್ರತಿಭಟನೆ

” ಫೆ  3ರಿಂದ  ‘ಮಿಷನ್ ಉತ್ತರಪ್ರದೇಶ ಹೊಸ ಹಂತ ”  ಮಾರ್ಚ್ 28  -29ರಂದು ಕಾರ್ಮಿಕರಿಗೆ ಬೆಂಬಲವಾಗಿ ಗ್ರಾಮೀಣ ಮುಷ್ಕರ

2020-21ರ ಐತಿಹಾಸಿಕ ಕಿಸಾನ್ ಆಂದೋಲನದ ರೈತರಿಗೆ ನೀಡಿದ ಭರವಸೆಗಳನ್ನು  ಈಡೇರಿಸದೆ.  ಭಾರತ ಸರ್ಕಾರವು ವಚನಭ್ರಷ್ಟವಾಗಿರುವುದನ್ನು  ಪಂಜಾಬ್, ಹರಿಯಾಣ, ಉತ್ತರ ಪ್ರದೇಶ, ಬಿಹಾರ, ಪಶ್ಚಿಮ ಬಂಗಾಳ, ಮಹಾರಾಷ್ಟ್ರ, ಕರ್ನಾಟಕ, ಮಧ್ಯಪ್ರದೇಶ, ಆಂಧ್ರಪ್ರದೇಶ, ಹಿಮಾಚಲ ಪ್ರದೇಶ, ತೆಲಂಗಾಣ, ಒಡಿಶಾ, ತಮಿಳುನಾಡು, ರಾಜಸ್ಥಾನ, ಗುಜರಾತ್, ತ್ರಿಪುರ ಮತ್ತಿತರ ರಾಜ್ಯಗಳಲ್ಲಿ. ಪ್ರದರ್ಶನಗಳು, ಮೆರವಣಿಗೆಗಳು ಮತ್ತು ಪ್ರತಿಕೃತಿ ದಹನದೊಂದಿಗೆ “ವಿಶ್ವಾಸದ್ರೋಹದ ದಿನ” ಎಂದು ಆಚರಿಸಲಾಗಿದೆ.

ಸಂಯುಕ್ತ ಕಿಸಾನ್ ಮೋರ್ಚಾದ ಕರೆಯನ್ನು ಅನುಸರಿಸಿ, ರಾಷ್ಟ್ರದಾದ್ಯಂತ ಹತ್ತಾರು ಸಾವಿರ ರೈತರು “ವಿಶ್ವಾಸದ್ರೋಹದ ದಿನ” ವನ್ನು ಆಚರಿಸಿದರು. ಭಾರತದಾದ್ಯಂತ ನೂರಾರು ಜಿಲ್ಲೆಗಳು ಮತ್ತು ಬ್ಲಾಕ್‌ಗಳಲ್ಲಿ ಪ್ರತಿಭಟನಾ ಪ್ರದರ್ಶನಗಳು ನಡೆದವು, ಜಿಲ್ಲಾಧಿಕಾರಿಗಳು, ಎಸ್‌ಡಿಎಂಗಳು ಮತ್ತು ಎಡಿಎಂಗಳ ಮೂಲಕ ಭಾರತದ ರಾಷ್ಟ್ರಪತಿಗಳಿಗೆ ಜ್ಞಾಪಕ ಪತ್ರಗಳನ್ನು ಸಲ್ಲಿಸಲಾಯಿತು.

ಡಿಸೆಂಬರ್ 2021 ರಲ್ಲಿ ಪ್ರತಿಭಟನಾ ನಿರತ ರೈತರಿಗೆ ನೀಡಿದ ಲಿಖಿತ ಭರವಸೆಗಳನ್ನು ಈಡೇರಿಸದೆ ಭಾರತ ಸರ್ಕಾರವು ವಚನಭ್ರಷ್ಟತೆಯನ್ನು ಮುಂದುವರೆಸಿದರೆ ರೈತರು ತಮ್ಮ ಆಂದೋಲನವನ್ನು ಪುನರಾರಂಭಿಸುವುದನ್ನು ಬಿಟ್ಟು ಬೇರೆ ದಾರಿಯಿಲ್ಲ ಎಂದು ಸಂಯುಕ್ತ ಕಿಸಾನ್ ಮೋರ್ಚಾ ಈ ಪ್ರತಿಭಟನಾ ಕಾರ್ಯಕ್ರಮದ ಮೂಲಕ ಸಾರಿ ಹೇಳಿದೆ.

ರಾಷ್ಟ್ರದ ಮುಖ್ಯಸ್ಥರಾಗಿ ದೇಶದ ಅತಿ ದೊಡ್ಡ ವರ್ಗವಾದ ಅನ್ನದಾತ ರೈತರ ಹಿತಾಸಕ್ತಿ ಕಾಪಾಡುವುದು ರಾಷ್ಟ್ರಪತಿಗಳ ಸಾಂವಿಧಾನಿಕ ಬಾಧ್ಯತೆಯಾಗಿದೆ ಎಂದಿರುವ ಜ್ಞಾಪಕ ಪತ್ರ,  ರೈತರಿಗೆ ಈ ರೀತಿಯ ವಂಚನೆ ಮಾಡಬಾರದು ಎಂದು ಸರ್ಕಾರವನ್ನು ಎಚ್ಚರಿಸಿದೆ. ರೈತರ ಶ್ರಮದಿಂದಾಗಿ ದೇಶವು ಆಹಾರ ಧಾನ್ಯಗಳಲ್ಲಿ ಸ್ವಾವಲಂಬಿಯಾಗಿದೆ.

ಲಾಕ್‌ಡೌನ್ ಮತ್ತು ಆರ್ಥಿಕ ಮಂದಗತಿಯ ಹೊರತಾಗಿಯೂ ರೈತರ ಅವಿರತ ಪ್ರಯತ್ನದಿಂದಾಗಿ, ದೇಶದ ಕೃಷಿ ಉತ್ಪಾದನೆಯು ನಿರಂತರವಾಗಿ ಹೆಚ್ಚುತ್ತಿದೆ. ಹೀಗಿರುವಾಗ ರೈತರೊಂದಿಗೆ ಕುಟಿಲತನ ಇಡೀ ದೇಶಕ್ಕೆ ವಿಪತ್ತು ತಂದೊಡ್ಡಬಹುದು ಎಂದು ರೈತರ ಜ್ಞಾಪಕ ಪತ್ರ ರಾಷ್ಟ್ರಪತಿಗಳಲ್ಲಿ ಬೇಸರ ವ್ಯಕ್ತಪಡಿಸಿದೆ.

ಡಿಸೆಂಬರ್ 9, 2021 ರಂದು ಸಂಯುಕ್ತ ಕಿಸಾನ್ ಮೋರ್ಚಾಗೆ ಪತ್ರದಲ್ಲಿ ಭಾರತ ಸರ್ಕಾರವು ನೀಡಿದ ಲಿಖಿತ ಭರವಸೆಗಳಲ್ಲಿ ಒಂದನ್ನು ಸಹ ಈಡೇರಿಸಲಾಗಿಲ್ಲ ಎಂಬುದನ್ನು ಗಮನಿಸಬೇಕು. ರೈತರ ತಾಳ್ಮೆಗೆ ಸವಾಲು ಹಾಕುವುದರ ವಿರುದ್ಧ ಬಿಜೆಪಿ ಸರಕಾರಕ್ಕೆ ಎಚ್ಚರಿಕೆ ನೀಡಿದ ಮೋರ್ಚಾ, ಆದಷ್ಟು ಬೇಗ ಭರವಸೆಗಳನ್ನು ಈಡೇರಿಸದಿದ್ದಲ್ಲಿ ರೈತರು ಆಂದೋಲನವನ್ನು ಪುನರಾರಂಭಿಸುವುದನ್ನು ಬಿಟ್ಟು ಬೇರೆ ದಾರಿಯಿಲ್ಲ ಎಂದು ಘೋಷಿಸಿದ್ದಾರೆ.

ಮೊದಲೇ ಹೇಳಿದಂತೆ, ಮೋರ್ಚಾ “ಮಿಷನ್ ಉತ್ತರ ಪ್ರದೇಶ”ವನ್ನು ಮುಂದುವರೆಸುತ್ತದೆ ಮತ್ತು ಬಿಜೆಪಿಯನ್ನು ಶಿಕ್ಷಿಸಲು ಮತ್ತು ಸೋಲಿಸಲು ರಾಜ್ಯಾದ್ಯಂತ ಪ್ರಚಾರ ಮಾಡುತ್ತದೆ. ಫೆಬ್ರವರಿ 3 ರಂದು ಪತ್ರಿಕಾಗೋಷ್ಠಿಯೊಂದಿಗೆ ಮಿಷನ್‌ನ ಹೊಸ ಹಂತವನ್ನು ಘೋಷಿಸಲಾಗುತ್ತದೆ.

ಚುನಾವಣೆಗಳು ನಡೆಯಲಿರುವುದರಿಂದ, ಕೇಂಧ್ರೀಯ ಕಾರ್ಮಿಕ ಸಂಘಟನೆಗಳು ರಾಷ್ಟ್ರವ್ಯಾಪಿ ಸಾರ್ವತ್ರಿಕ ಮುಷ್ಕರದ ದಿನಾಂಕಗಳನ್ನು ಫೆಬ್ರವರಿ 23 24 ರಿಂದ ಮಾರ್ಚ್ 28-29ಕ್ಕೆ  ರಾಷ್ಟ್ರವ್ಯಾಪಿ ಮುಷ್ಕರದ ದಿನವನ್ನು ಬದಲಾಯಿಸುವ ಸೂಚನೆ ನೀಡಿದ್ದಾರೆ. ಇದನ್ನು  ಅನುಮೋದಿಸುವುದಾಗಿ ಹೇಳಿರುವ ಎಸ್‍.ಕೆ.ಎಂ. ಅದಕ್ಕೆ ಸಂಪೂರ್ಣ ಬೆಂಬಲವನ್ನು ಪುನರುಚ್ಚರಿಸುತ್ತ, ಅದಕ್ಕನುಗುಣವಾಗಿ ಭಾರತದಾದ್ಯಂತ ಗ್ರಾಮೀಣ ಮುಷ್ಕರವನ್ನು ಮಾರ್ಚ್ 28 ಮತ್ತು 29 ರಂದು ನಡೆಸುವುದಾಗಿ ಹೇಳಿದೆ.

ಭಾರತ ಸರ್ಕಾರವು ಪ್ರಸ್ತುತ ಕನಿಷ್ಟ ಬೆಂಬಲ ಬೆಲೆ(ಎಂ.ಎಸ್‍.ಪಿ.)ಗೆ  ಸಂಬಂಧಿಸಿದ ತನ್ನ ಸುಳ್ಳುಗಳನ್ನು ಮುಂದುವರೆಸಿದೆ , ಆರ್ಥಿಕ ಸಮೀಕ್ಷೆಯ ವರದಿ 2021-22 ರೊಂದಿಗೆ ಅಂತಹ ಎಂ.ಎಸ್‍.ಪಿ.ಗಳನ್ನು ಪ್ರಕಟಿಸಲು ವೆಚ್ಚದ ಪರಿಕಲ್ಪನೆಯನ್ನು ಬಳಸಲಾಗುತ್ತಿದೆ ಎಂದು ಹೇಳಿದೆ.  C2 ಉತ್ಪಾದನಾ ವೆಚ್ಚವನ್ನು ನಿರ್ಲಕ್ಷಿಸಿ, ರೈತರಿಗೆ ಅವರ ನಿಜವಾದ ಅರ್ಹತೆಯನ್ನು ನಿರಾಕರಿಸುವ A2+ ಕುಟುಂಬ ಶ್ರಮದ ವೆಚ್ಚದ ಪರಿಕಲ್ಪನೆಯು ಮುಂದುವರಿದಿದೆ.

ಅಲ್ಪ ಪ್ರಮಾಣದ ಎಂ.ಎಸ್‍.ಪಿ.  ಪ್ರಕಟನೆಗಳೊಂದಿಗೆ,  ಬೆಳೆ ವೈವಿಧ್ಯೀಕರಣ ಸಂಭವಿಸಿದೆ ಎನ್ನುವುದು ಸುಳ್ಳು ದಾವೆಯಾಗಿದೆ ಎಂದಿರುವ ಎಸ್‍ಕೆಎಂನ ಜ್ಞಾಪಕ ಪತ್ರ,, ಅಂತಹ ವೈವಿಧ್ಯೀಕರಣವು ನಿಜವಾಗಿಯೂ ಸಾಧ್ಯವಾಗಬೇಕಾದರೆ, ಎಂಎಸ್‍ಪಿ,  ಎಣ್ಣೆಕಾಳುಗಳು, ರಾಗಿ ಮತ್ತು ದ್ವಿದಳ ಧಾನ್ಯಗಳು ಸೇರಿದಂತೆ ಎಲ್ಲಾ ಬೆಳೆಗಳಿಗೆ ಕಾನೂನುಬದ್ಧವಾಗಿ ಖಾತರಿಪಡಿಸಿದ ಹಕ್ಕಾಗಬೇಕು  ಎಂಬುದು ರೈತರಿಗೆ ತಿಳಿದಿದೆ  ಎಂದು ಅದು ಹೇಳಿದೆ.

 

Donate Janashakthi Media

Leave a Reply

Your email address will not be published. Required fields are marked *