ಜನತೆಯ ಹಕ್ಕುಗಳೆಲ್ಲ ವಾಸ್ತವಗೊಂಡಿರುವ ಉತ್ತಮ ಭಾರತಕ್ಕಾಗಿ ಜನಾಂದೋಲನ

ಸಂಪುಟ – 06, ಸಂಚಿಕೆ 06, ಫೇಬ್ರವರಿ, 05, 2012

6

ಆಥರ್ಿಕ ನೀತಿಗಳ ದಿಕ್ಪಥದಲ್ಲಿ ತೀವ್ರವಾದ ಪಲ್ಲಟವನ್ನು ತರದೆ, ಅವು ಲಾಭಗಳನ್ನು ಗರಿಷ್ಟಗೊಳಿಸಿಕೊಳ್ಳುವವರ ಪರವಾಗಿರುವ ಬದಲು ಜನಗಳ ಕಲ್ಯಾಣದತ್ತ ತಿರುಗಿಸದೇ ಹೋದರೆ, ಭಾರತೀಯ ಗಣತಂತ್ರದ ಸಂವಿಧಾನ 62 ವರ್ಷಗಳ ಹಿಂದೆ ಭಾರತೀಯ ಜನತೆಗೆ ನೀಡಿದ ವಚನಗಳನ್ನು ಈಡೇರಿಸಲು ಸಾಧ್ಯವಿಲ್ಲ ಎಂಬುದು ಸುಸ್ಪಷ್ಟ. ನವ-ಉದಾರವಾದಿ ನೀತಿಗಳು ಉದ್ದೇಶಪೂರ್ವಕವಾಗಿ ನಿಮರ್ಿಸಿರುವ ಅಸಮತೋಲನವನ್ನು ಸರಿಪಡಿಸಬೇಕಾಗಿದೆ. ಅದು ಬಲಿಷ್ಟ ಜನಾಂದೋಲನಗಳಿಂದ, ಜನರ ಹೋರಾಟಗಳ ಶಕ್ತಿವರ್ಧನೆಯಿಂದ ಮಾತ್ರವೇ ಸಾಧ್ಯ.

ಇಂಡಿಯಾ, ಅಥರ್ಾತ್ ಭಾರತ, ಗಣತಂತ್ರವಾಗಿ 62 ವರ್ಷಗಳು ಪೂರೈಸಿವೆ.
ಎರಡು ವರ್ಷಗಳ ಹಿಂದೆ, ಇಂತಹುದೇ ಸಂದರ್ಭದಲ್ಲಿ, 60 ವರ್ಷಗಳನ್ನು ಪೂರೈಸುವುದು ಅಂದರೆ ಷಷ್ಠಿ ಪೂತರ್ಿ, ಒಂದು ಹೊಸ ಬದುಕಿನ ಆರಂಭದ ಸಂಕೇತ ಎಂಬ ಭಾರತ ಮತ್ತು ಇತರ ಪ್ರಾಚೀನ ನಾಗರಿಕತೆಗಳ ಲೋಕಜ್ಞಾನವನ್ನು ನೆನಪಿಸಿಕೊಳ್ಳುತ್ತ ಒಂದು ಉತ್ತಮ ಭಾರತದ ನಿಮರ್ಾಣ ಮಾಡಬೇಕೆಂಬ ನಮ್ಮ ಜನತೆಯ ಅಪೇಕ್ಷೆಯನ್ನು ಅಭಿವ್ಯಕ್ತಗೊಳಿಸಿದ್ದೆವು.

ದುರದೃಷ್ಟವಶಾತ್, ನಂತರದ ಈ ಎರಡು ವರ್ಷಗಳೂ ಭಾರತದ ಬಹುಪಾಲು ಜನತೆಗೆ ಹಳೆಯ ಬದುಕಿನ ಮುಂದುವರಿಕೆಯಾಗಿಯೇ ಉಳಿದಿದೆ, ಬದುಕಿನ ಪರಿಸ್ಥಿತಿಗಳು ಇನ್ನೂ ಹದಗೆಟ್ಟಿವೆ. ಎಲ್ಲ ಆವಶ್ಯಕ ಸರಕುಗಳ ಬೆಲೆಗಳಲ್ಲಿ ನಿರಂತರ ಹೆಚ್ಚಳ ಒಂದು ಆರೋಗ್ಯಕರ ಜೀವನಾಧಾರದ ಸೆಲೆಯನ್ನೇ ನುಂಗಿ ಹಾಕುತ್ತಿದೆ. ಆಥರ್ಿಕ ಕಂದರಗಳು ನಿರಂತರವಾಗಿ ಆಳಗೊಳ್ಳುತ್ತಿರುವುದು ಕೆಲವರಿಗೇ ಸೀಮಿತವಾದ ಬೆಳವಣಿಗೆಯನ್ನು ಉಂಟು ಮಾಡುತ್ತಿದೆಯಲ್ಲದೆ, ಜನಗಳ ಸಂಕಟಗಳನ್ನು ಇನ್ನಷ್ಟು ಹೆಚ್ಚಿಸುತ್ತಿದೆ. ಹೆಚ್ಚುತ್ತಿರುವ ಅಸಮಾನತೆಗಳೊಂದಿಗೆ ಎಲ್ಲ ಜನಗಳ ಬದುಕಿನ ಮಟ್ಟಗಳೂ ಹೆಚ್ಚುತ್ತಿದ್ದರೆ ಅದು ಬೇರೆ ಮಾತು. ಆದರೆ ಹಾಗೂ ಆಗಿಲ್ಲ. ತದ್ವಿರುದ್ಧವಾಗಿ, ಕಟು ವಾಸ್ತವತೆಯೆಂದರೆ, ಇಂಡಿಯಾ ಮತ್ತು ಭಾರತದ ನಡುವಿನ ಈ ಕಂದರ ಬೆಳೆಯುತ್ತಿರುವುದು ಶ್ರೀಮಂತರ ಸಿರಿಯನ್ನು ಹೆಚ್ಚಿಸಿ ಮತ್ತು ಬಡವರನ್ನು ಇನ್ನಷ್ಟು ದರಿದ್ರರಾಗಿಸುವ ಮೂಲಕ.

ತೆಪ್ಪಗಿರುವ ಸರಕಾರ
ಕಳೆದ ಮೂರು ವಾರಗಳಲ್ಲಿ, ಈ ಅಂಕಣದಲ್ಲಿ ನಾವು ನಮ್ಮ ವಿಶಾಲ ಜನಸಮೂಹಗಳ ಹೆಚ್ಚುತ್ತಿರುವ ಸಂಕಟಮಯ ಸ್ಥಿತಿಗಳ ಬಗ್ಗೆ ವಿವರಿಸಿದ್ದೇವೆ. ತಮಾಷೆಯೆಂದರೆ, ನಮ್ಮ ಜನಗಳ ಅನಾರೋಗ್ಯದ ಪರಿಸ್ಥಿತಿ ಹೇಗೆ ಮುಂದುವರೆಯುತ್ತಿದೆ ಎಂಬುದನ್ನು ಸ್ವತಃ ಪ್ರಧಾನ ಮಂತ್ರಿಗಳೇ ದೇಶದ ಅಪೌಷ್ಟಿಕತೆಯ ಸ್ಥಿತಿಗತಿಗಳ ಕುರಿತಾದ ಒಂದು ವರದಿಯನ್ನು ಬಿಡುಗಡೆ ಮಾಡುತ್ತಾ ಸಾರಾಂಶ ರೂಪದಲ್ಲಿ ಹೇಳಿದ್ದಾರೆ- ಇದೊಂದು ರಾಷ್ಟ್ರೀಯ ಅವಮಾನ ಎಂದು. ಆದರೂ ಆ ಬಗ್ಗೆ ಮಾಡಿರುವುದು ಏನೂ ಇಲ್ಲ. ಇನ್ನೂ ಕೆಟ್ಟ ಸಂಗತಿಯೆಂದರೆ ಸರಕಾರ ಯಾವುದೇ ರೀತಿಯಲ್ಲಿ ಮಧ್ಯಪ್ರವೇಶಿಸದೆ ಪರಿಸ್ಥಿತಿಗಳು ಹೇಗಿವೆಯೋ ಹಾಗೆಯೇ ಇರಲಿ ಎಂದು ತೆಪ್ಪಗಿದೆ. ಆರೋಗ್ಯ ಮತ್ತು ಶಿಕ್ಷಣ ಹೆಚ್ಚೆಚ್ಚಾಗಿ ಸಾಮಾನ್ಯ ಭಾರತೀಯರ ಕೈಗೆಟುಕದಂತಾಗುತ್ತಿವೆ. ಸಾರ್ವಜನಿಕ ಆರೋಗ್ಯದ ಮೇಲೆ ಮಾಡುತ್ತಿರುವ ಖಚರ್ು ಈಗಲೂ ಜಿಡಿಪಿಯ ಒಂದು ಶೇಕಡಾಕ್ಕಿಂತ ಕೆಳಗೆಯೇ ಇದೆ. ನಾಯಿಕೊಡೆಗಳಂತೆ ಹಬ್ಬುತ್ತಿರುವ ಖಾಸಗಿ ಆರೋಗ್ಯ ಕೇಂದ್ರಗಳು ಶ್ರೀಮಂತರ ಸೇವೆಗೆಂದೇ ಟೊಂಕ ಕಟ್ಟಿವೆ.

ಅದೇ ರೀತಿ ಶಿಕ್ಷಣ ಸಂಪೂರ್ಣವಾಗಿ ಖಾಸಗೀಕರಣಗೊಂಡಿದೆ, ವ್ಯಾಪಾರೀಕರಣಕ್ಕೆ ಒಳಗಾಗಿದೆ. ಸರಕಾರೀ ಪ್ರಾಥಮಿಕ ಶಾಲೆಗಳನ್ನು ಮುಚ್ಚಲಾಗುತ್ತಿದೆ ಎಂಬ ವರದಿಗಳು ವ್ಯಾಪಕವಾಗಿವೆ. ನಮ್ಮ ಜಿಡಿಪಿಯ ಕನಿಷ್ಟ 6 ಶೇ.ವನ್ನು ಶಿಕ್ಷಣಕ್ಕೆ ಮೀಸಲಿಡಬೇಕು ಎಂದು ಸರಕಾರವೇ ಒಪ್ಪಿಕೊಂಡಿದ್ದರೂ, ಈಗಲೂ ಅದರ ಅರ್ಧದ ಮಟ್ಟಕ್ಕೂ ನಾವು ಬಂದಿಲ್ಲ. ಸಂಸತ್ತು 6ರಿಂದ 14 ವರ್ಷಗಳ ನಡುವಿನ ವಯೋಮಾನದ ಎಲ್ಲ ಮಕ್ಕಳಿಗೂ ಶಿಕ್ಷಣದ ಹಕ್ಕನ್ನು ಕೊಡಲು ಸಂವಿಧಾನವನ್ನು ತಿದ್ದುಪಡಿ ಮಾಡಿದರೂ, ಈ ಶೋಚನೀಯ ಪರಿಸ್ಥಿತಿ ಮುಂದುವರೆಯುತ್ತಿದೆ. ಈ ಹಕ್ಕು ನಿಜವಾಗಬೇಕಾದರೆ ಶಿಕ್ಷಣದ ಮೇಲೆ ಸಾರ್ವಜನಿಕ ವೆಚ್ಚ ಹೆಚ್ಚಬೇಕಾಗುತ್ತದೆ. ಆದರೆ ಅದನ್ನು ಈಡೇರಿಸುವ ಬದಲು ನಾವು ನಮ್ಮ ಯುವ ಪೀಳಿಗೆಗೆ, ಭಾರತದ ಭವಿಷ್ಯಕ್ಕೆ ಕೊಟ್ಟಿರುವ ಈ ವಚನದಿಂದ ದೂರ ಸರಿಯುತ್ತಿದ್ದೇವೇನೋ ಎಂದನಿಸುತ್ತಿದೆ. ಹಣದ ಕೊರತೆಯೇ ಇದಕ್ಕೆ ಕಾರಣ ಎನ್ನುತ್ತಿದೆ ಸರಕಾರ. ಕೇಂದ್ರ ಸರಕಾರ ತನ್ನ ವಚನದಿಂದ ಹಿಂದೆ ಸರಿಯುತ್ತಿದೆ, ರಾಜ್ಯ ಸರಕಾರಗಳು ಈ ವಚನವನ್ನು ಈಡೇರಿಸಬೇಕೆಂದು ಅವುಗಳ ಮೇಲೆ ಹೊರೆ ಹಾಕುತ್ತಿದೆ. ಈಗಾಗಲೇ ಒಂದು ತೀವ್ರ ಸಂಪನ್ಮೂಲ ಕೊರತೆ ಮುತ್ತಿಕೊಂಡಿರುವಾಗ, ಸಂಪನ್ಮೂಲ ಶೇಖರಣೆಯ ದಾರಿಗಳೂ ಇಲ್ಲದೆ, ಸಹಜವಾಗಿಯೇ, ರಾಜ್ಯ ಸರಕಾರಗಳು ವಚನವನ್ನು ಈಡೇರಿಸಲಾರದ ಸ್ಥಿತಿಯಲ್ಲಿವೆ. ಇದರಿಂದಾಗಿ, ಇತರೆಲ್ಲ ಹಕ್ಕುಗಳಂತೆ ಇದು ಕೂಡ ಈಗಲೂ ಕಾಗದದ ಮೇಲೆಯೇ ಉಳಿದಿದೆ.

ಸಂಪನ್ಮೂಲಗಳ ಕೊರತೆಯಿಲ್ಲ, ಸಂಪನ್ಮೂಲಗಳ ಲೂಟಿಯಾಗಿದೆ
ಪ್ರತಿಯೊಂದು ಮಗು ಶಾಲೆಯಲ್ಲಿರುವಂತೆ ಮಾಡಲು ಎಷ್ಟು ಖಚರ್ಾಗುತ್ತದೆ? ಎನ್ಸಿಇಆರ್ಟಿ(ರಾಷ್ಟ್ರೀಯ ಶೈಕ್ಷಣಿಕ ಸಂಶೋಧನಾ ಮಂಡಳಿ)ಯ ಅಂದಾಜಿನ ಪ್ರಕಾರ ಈ ಗುರಿಯನ್ನು ತಲುಪಲು ಐದು ವರ್ಷಗಳ ಕಾಲ ಪ್ರತಿ ವರ್ಷ ರೂ.35,000 ಖಚರ್ು ಮಾಡಬೇಕಾಗುತ್ತದೆ. ಹೊಸ ಶಾಲೆಗಳನ್ನು ಕಟ್ಟಲು, ಲಕ್ಷಾಂತರ ಹೊಸ ಶಿಕ್ಷಕರ ನೇಮಕಕ್ಕೆ, ಮಧ್ಯಾಹ್ನದ ಊಟ, ಪಠ್ಯಪುಸ್ತಕಗಳು ಮುಂತಾದವುಗಳಿಗೆ ಐದು ವರ್ಷಗಳು ಬೇಕಾಗುತ್ತದೆ. ಒಟ್ಟು ಸೇರಿಸಿದರೆ, ಐದು ವರ್ಷಗಳಿಗೆ ರೂ.1,75,000 ಕೋಟಿ ಆಗುತ್ತದೆ. ಇದು 2ಜಿ ತರಂಗಾಂತರ ಹಗರಣದಲ್ಲಿ ಲೂಟಿ ಮಾಡಿದ ಹಣಕ್ಕಿಂತ ಒಂದು ಸಾವಿರ ಕೋಟಿಯಷ್ಟು ಕಡಿಮೆ!

ಇದೇ ರೀತಿ ನಮ್ಮ ಜನಗಳಿಗೆ ಆಹಾರ ಭದ್ರತೆಯನ್ನು ಒದಗಿಸುವ ವಚನವೂ ಕಾಗದದ ಮೇಲೆಯೇ ಉಳಿದಿದೆ. ದೇಶದ ಎಲ್ಲ ಕುಟುಂಬಗಳಿಗೆ (ಎಪಿಎಲ್+ಬಿಪಿಎಲ್) ಕೆ.ಜಿ.ಗೆ 3ರೂ. ಲೆಕ್ಕದಲ್ಲಿ(ಸಿಪಿಐ(ಎಂ) 2ರೂ. ದರದಲ್ಲಿ ಕೊಡಿ ಎನ್ನುತ್ತಿದೆ) 35 ಕೆ.ಜಿ. ಆಹಾರ ಧಾನ್ಯಗಳನ್ನು ಕೊಡಲು ಪ್ರತಿವರ್ಷ ಸರಕಾರೀ ಖಜಾನೆಯಿಂದ ಇನ್ನೂ 88,000 ಕೋಟಿ ರೂ.ಗಳನ್ನು ಖಚರ್ು ಮಾಡಬೇಕಾಗುತ್ತದೆ. ಇದು 2ಜಿ ಹಗರಣದಲ್ಲಿ ನುಂಗಿ ಹಾಕಿದ ಹಣದ ಅರ್ಧದಷ್ಟು!

ಜನಗಳಿಗೆ ಕೊಟ್ಟ ವಚನಗಳನ್ನು ಈಡೇರಿಸಲು, ಅವರ ಜೀವನ ಮಟ್ಟವನ್ನು ಎತ್ತರಿಸಲು ಭಾರತದ ಬಳಿ ಸಂಪನ್ಮೂಲಗಳಿಲ್ಲ ಎಂದೇನೂ ಅಲ್ಲ. ಬದಲಿಗೆ, ಭಾರತದ ಸಂಪನ್ಮೂಲಗಳನ್ನು ಇಷ್ಟೊಂದು ತಲ್ಲಣಕಾರೀ ರೀತಿಗಳಲ್ಲಿ ಲೂಟಿ ಹೊಡೆಯಲು ನವ-ಉದಾರವಾದಿ ನೀತಿಗಳು ಅವಕಾಶ ಮಾಡಿಕೊಟ್ಟಿವೆ. ಈ ಮಹಾ ಹಗರಣಗಳನ್ನು ತಡೆದಿದ್ದರೆ, ಅಪೌಷ್ಟಿಕತೆ ಇಲ್ಲದ, ವಿದ್ಯಾವಂತ, ಆರೋಗ್ಯಕರ ಯುವಜನರಿರುವ ಒಂದು ಭಾರತಕ್ಕೆ ಬೇಕಾದ, ಸ್ವಾತಂತ್ರ್ಯದ ನಂತರ ಮೊತ್ತಮೊದಲ ಬಾರಿಗೆ ದೇಶವನ್ನು ಹಸಿವಿನ ಶಾಪದಿಂದ ಮುಕ್ತಗೊಳಿಸಲು ಬೇಕಾದಷ್ಟು ಸಂಪನ್ಮೂಲಗಳ ಬಿಡುಗಡೆಯಾಗುತ್ತಿತ್ತು.

ಆದರೂ ಈ ಯುಪಿಎ-2 ಸರಕಾರ ಈಗಲೂ ಸಂಸತ್ತು ಉನ್ನತ ಸ್ಥಾನಗಳಲ್ಲಿ ಭ್ರಷ್ಟಾಚಾರವನ್ನು ಎದುರಿಸಲು ಒಂದು ಪರಿಣಾಮಕಾರಿ ಲೋಕಪಾಲ ಮತ್ತು ಲೋಕಾಯುಕ್ತ ವ್ಯವಸ್ಥೆಗೆ ಶಾಸನವನ್ನು ರೂಪಿಸಲು ಬಿಡುತ್ತಿಲ್ಲ. ಈ ಪ್ರಕ್ರಿಯೆಯಲ್ಲಿ ಸರಕಾರ, ನಮ್ಮ ಗಣತಂತ್ರದ ಸಂವಿಧಾನ ಜನತೆಗೆ ನೀಡಿದ ವಚನಗಳನ್ನು ಈಡೇರಿಸುವ ತನ್ನ ಹೊಣೆಗಾರಿಕೆಗಳನ್ನು ಜಾರಿಸಿ ಕೊಳ್ಳುತ್ತಿದೆಯಷ್ಟೇ ಅಲ್ಲ. ಅದು ಪ್ರಭುತ್ವದ ಆದ್ಯತೆಗಳಲ್ಲಿ ಒಂದು ಪಲ್ಲಟವನ್ನು ತರುವ ಮೂಲಕ ಈ ಹೊಣೆಗಾರಿಕೆಗಳಿಂದ ನುಣುಚಿಕೊಳ್ಳುತ್ತಿದೆ. ಅದರ ಗಮನ ಈಗ ಲಾಭಗಳನ್ನು ಗರಿಷ್ಟಗೊಳಿಸಲು ಅನುಕೂಲ ಕಲ್ಪಿಸಿಕೊಡುವುದು ಮತ್ತು ನಮ್ಮ ದೇಶದ ಸಂಪನ್ಮೂಲಗಳ ಲೂಟಿಗೆ ಹೊಸ ಮಾರ್ಗಗಳನ್ನು ಸೃಷ್ಟಿಸುವುದರ ಮೇಲೆಯೇ.

ಜನತೆಯ ಹಕ್ಕುಗಳು ವಾಸ್ತವಗೊಳ್ಳಬೇಕು
ಆಥರ್ಿಕ ನೀತಿಗಳ ದಿಕ್ಪಥದಲ್ಲಿ ತೀವ್ರವಾದ ಪಲ್ಲಟವನ್ನು ತರದೆ, ಅವು ಲಾಭಗಳನ್ನು ಗರಿಷ್ಟಗೊಳಿಸಿಕೊಳ್ಳುವವರ ಪರವಾಗಿರುವ ಬದಲು ಜನಗಳ ಕಲ್ಯಾಣದತ್ತ ತಿರುಗಿಸದೇ ಹೋದರೆ, ನಮ್ಮ ಸಂವಿಧಾನಿಕ ವಚನಗಳನ್ನು ಈಡೇರಿಸಲು ಸಾಧ್ಯವಿಲ್ಲ ಎಂಬುದು ಸುಸ್ಪಷ್ಟ. ಶ್ರೀಮಂತರಿಗೆ ಬೃಹತ್ ಪ್ರಮಾಣಗಳ ತೆರಿಗೆ ರಿಯಾಯ್ತಿಗಳನ್ನು ಕೊಡಮಾಡುವ ಬದಲು, ಅವನ್ನು ಸಾರ್ವಜನಿಕ ಹೂಡಿಕೆಗಳಲ್ಲಿ ತೊಡಗಿಸಿದ್ದರೆ, ವಿಶೇಷವಾಗಿ, ಕೃಷಿಯಲ್ಲಿ ತೊಡಗಿಸಿದ್ದರೆ, ಆಗ ಭಾರತೀಯ ಜನತೆಯ ಬಹಳಷ್ಟು ಸಂಕಟಗಳನ್ನು, ನಮ್ಮ ರೈತರ ಅಮಾನವೀಯ ಹತಾಶ ಆತ್ಮಹತ್ಯೆಗಳಿಗೆ ಕಾರಣವಾಗಿರುವ ಸಂಕಟಗಳನ್ನು ತಡೆಯಬಹುದಾಗಿತ್ತು. ಇದರಿಂದ ಬಹುವಾಗಿ ಅಗತ್ಯವಿರುವ ಅಧಿಕ ಉದ್ಯೋಗಗಳನ್ನು ನಿಮರ್ಿಸಿ, ನಮ್ಮ ಜನಗಳ ಬದುಕಿನ ಗುಣಮಟ್ಟವನ್ನು ಕೂಡ ಬಹುವಾಗಿ ಉತ್ತಮ ಪಡಿಸಬಹುದಾಗಿತ್ತು.

ಅಂದರೆ ಭಾರತ ಬೆಳೆಯುತ್ತಿಲ್ಲ, ಅಭಿವೃದ್ಧಿ ಹೊಂದುತ್ತಿಲ್ಲ ಎಂದೇನೂ ನಾವು ಹೇಳುತ್ತಿಲ್ಲ. ಆದರೆ, ಈ ಬೆಳವಣಿಗೆಯನ್ನು, ಅಭಿವೃದ್ಧಿಯನ್ನು ಬಹುಪಾಲು ಜನಗಳ ಬದುಕುಗಳನ್ನು ಬಲಿಗೊಟ್ಟು ಕೆಲವರಿಗೆ ಮಾತ್ರವೇ ಅವುಗಳ ಪ್ರಯೋಜನ ದಕ್ಕುವ ರೀತಿಯಲ್ಲಿ ರೂಪಿಸಲಾಗಿದೆ. ಇಂತಹ ಉದ್ದೇಶ ಪೂರ್ವಕವಾದ ಅಸಮತೋಲನವನ್ನು ಸರಿಪಡಿಸಬೇಕಾಗಿದೆ. ಅದು ಬಲಿಷ್ಟ ಜನಾಂದೋಲನಗಳಿಂದ, ಸರಕಾರ ತನ್ನ ಆಥರ್ಿಕ ನೀತಿಗಳ ದಿಕ್ಕನ್ನು ಜನತೆಯ ಪರವಾಗಿ ಬದಲಿಸುವಂತೆ ಮಾಡುವಂತಹ ಜನಾಂದೋಲನಗಳಿಂದ ಮಾತ್ರವೇ ಸಾಧ್ಯ.ಆದ್ದರಿಂದ ಜನತೆಯ ಈ ಎಲ್ಲ ಹಕ್ಕುಗಳು ಒಂದು ಉತ್ತಮ ಭಾರತದಲ್ಲಿ ವಾಸ್ತವಗೊಳ್ಳುವಂತಾಗಲು, ಇಂತಹ ಹೋರಾಟಗಳ ಶಕ್ತಿವರ್ಧನೆಗೆ ಮುಂದಾಗುವಂತೆ ಎಲ್ಲ ದೇಶಪ್ರೇಮಿ ಭಾರತೀಯರಿಗೆ 63ನೇ ಗಣತಂತ್ರ ದಿನ ಆಹ್ವಾನ ನೀಡುತ್ತಿದೆ.

0

Donate Janashakthi Media

Leave a Reply

Your email address will not be published. Required fields are marked *