ಖಾಸಗಿ ವಿ.ವಿ. ಗಳ ಸ್ಥಾಪನೆ : ಬಹುಸಂಖ್ಯಾತರಿಗೆ ಉನ್ನತ ಶಿಕ್ಷಣದ ವಂಚನೆ

ಅನಂತನಾಯ್ಕ್ .ಎನ್

ಸಂಪುಟ – 07, ಸಂಚಿಕೆ 15, ಎಪ್ರೀಲ್ 14, 2013

1.1

ಅಕ್ಷಾರವೆಂದಾರೆ ಅಕ್ಷಾರವಲ್ಲ, ಅರಿವೀನ ಗೂಡು…. ಎಂಬ ಹಾಡೊಂದಿದೆ. ಅದು ಶಿಕ್ಷಣದ ಮಹತ್ವವನ್ನು ಸಾರುವ ಒಂದು ಮಾತು. ಆದರೆ ನಮ್ಮನ್ನಾಳುತ್ತಿರುವ ಸಕರ್ಾರಗಳಿಗೆ ಶಿಕ್ಷಣದ ಹೊಣೆ ಹೆಗಲಿಗೇರಿರುವ ಶನಿ. ಮೈಮೇಲಿಂದ ಇಳಿಸಿಕೊಳ್ಳಬೇಕಾದ ಪೀಡೆಯಾಗಿದೆ. ಆ ಕೆಲಸಕ್ಕೆ ಈಗವರು ಮುಂದಾಗಿದ್ದಾರೆ. ಈ ವಿಷಯದಲ್ಲಿ ಕಾಂಗ್ರೆಸ್ ನೇತೃತ್ವದ ಕೇಂದ್ರ ಸಕರ್ಾರದೊಂದಿಗೆ ರಾಜ್ಯ ಬಿಜೆಪಿ ಸಕರ್ಾರ ಪೈಪೋಟಿಗೆ ಬಿದ್ದಿದೆ. ಇದು ಒಂದು ರೀತಿಯಲ್ಲಿ ಕಳ್ಳಕಳ್ಳರು ಸಂತೆಗೆ ಹೋದಂತೆ. ಈ ನೀತಿಯ ಅಪಾಯಗಳನ್ನು ಕುರಿತು ವಿವರಿಸಿದ್ದಾರೆ ಖಈ ಸಂಘಟನೆ ರಾಜ್ಯ ಅಧ್ಯಕ್ಷರಾದ – ಅನಂತನಾಯ್ಕ್ .ಎನ್

ಸಕರ್ಾರಿ ವಿಶ್ವವಿದ್ಯಾಲಯಗಳನ್ನು ಬಲಪಡಿಸುವ ಬದಲಾಗಿ, ರಾಜ್ಯ ಬಿಜೆಪಿ ಸಕರ್ಾರ ಖಾಸಗಿ ವಿಶ್ವವಿದ್ಯಾಲಯಗಳ ಸ್ಥಾಪನೆಗೆ ಅನುಮತಿ ನೀಡಿದೆ. 2009ರಲ್ಲಿ ಆಜೀಂ ಪ್ರೇಮ್ಜಿ ಮತ್ತು ರಿಲಯನ್ಸ್ ಖಾಸಗಿ ವಿಶ್ವವಿದ್ಯಾಲಯಗಳಿಗೆ ಅನುಮತಿ ನೀಡಿದ್ದ ಸಕರ್ಾರ ಇತ್ತೀಚೆಗೆ ನಡೆದ ವಿಧಾನಸಭೆ ಬಜೆಟ್ ಅಧಿವೇಶನದಲ್ಲಿ ಮತ್ತೆ 20 ಖಾಸಗಿ ಶಿಕ್ಷಣ ಸಂಸ್ಥೆಗಳನ್ನು ಖಾಸಗಿ ವಿವಿಗಳನ್ನಾಗಿಸಿ ಮಸೂದೆ ಅನುಮೋದಿಸಿ ರಾಜ್ಯಪಾಲರ ಅಂಗೀಕಾರಕ್ಕೆ ಕಳುಹಿಸಿಕೊಟ್ಟಿದೆ. ಈ ವಿವಿಗಳಲ್ಲಿ ರಾಜ್ಯಪಾಲರು ಈಗಾಗಲೇ 8 ವಿವಿಗಳಿಗೆ ಅಂಗೀಕಾರದ ಮುದ್ರೆ ಒತ್ತಿದ್ದಾರೆ.

ಖಾಸಗಿ ವಿ.ವಿ.ಗಳ ಪಟ್ಟಿ
1. ಅಮೃತಸಿಂಚನ ಅಧ್ಯಾತ್ಮ ವಿವಿ
2. ದೇವರಾಜ ಅರಸು ವಿವಿ
3. ಪಿ.ಇ.ಎಸ್. ವಿವಿ
4. ರೇವಾ ವಿವಿ
5. ದಯಾನಂದ ಸಾಗರ ವಿವಿ
6. ಅರ್ಕ ಖಾಸಗಿ ವಿವಿ
7. ಕೆಎಲ್ಇ ತಾಂತ್ರಿಕ ವಿವಿ
8. ವೆಲ್ಲೂರು ತಾಂತ್ರಿಕ ವಿವಿ
9. ಅದಿಚುಂಚುನಗಿರಿ ವಿವಿ
10. ಎಂ.ಎಸ್. ರಾಮಯ್ಯ ಅನ್ವಯಿಕ ವಿಜ್ಞಾನಗಳ ವಿವಿ
11. ಶರಣ ಬಸವ ವಿವಿ
12. ರೈ ತಾಂತ್ರಿಕ ವಿವಿ
13. ಸಿಎಂಆರ್ ವಿವಿ
14. ನ್ಯೂ ಬಾಲ್ಡ್ವಿನ್ ವಿವಿ
15. ಪ್ರೆಸಿಡೆನ್ಸಿ ವಿವಿ
16. ಮಣಿಪಾಲ್ ವಿವಿ
17. ಮೈಸೂರು `ಜೆಎಸ್ಎಸ್’ ವಿವಿ
18. ಮಂಗಳೂರಿನ `ಶ್ರೀನಿವಾಸ’ ವಿವಿ
19. ಬೆಂಗಳೂರಿನ `ಗಾಡರ್್ನ್ ಸಿಟಿ’ ವಿವಿ
20. ವೈಟ್ಫೀಲ್ಡ್ನ `ವೈದೇಹಿ’ ವಿವಿ

ಸಕರ್ಾರ ಖಾಸಗಿ ವಿ.ವಿ. ಗಳನ್ನಾಗಿಸಿರುವ ಬಹುತೇಕ ಸ್ವಾಯತ್ತ ಖಾಸಗಿ ಶಿಕ್ಷಣ ಸಂಸ್ಥೆಗಳು ಕನಿಷ್ಠ ಮೂಲಸೌಲಭ್ಯಗಳನ್ನು ಹೊಂದಿಲ್ಲದರಿಂದ ವಿಶ್ವವಿದ್ಯಾಲಯ ಧನಸಹಾಯ ಆಯೋಗ(ಯುಜಿಸಿ)ವು ಅವುಗಳನ್ನು ಕಪ್ಪುಪಟ್ಟಿಯಲ್ಲಿರಿಸಿದೆ. ಆದರೆ, ರಾಜ್ಯ ಸಕರ್ಾರ ಅವುಗಳನ್ನು ವಿಶ್ವವಿದ್ಯಾಲಯಗಳನ್ನಾಗಿಸಲು ಹೊರಟಿರುವುದು ದೊಡ್ಡ ದುರಂತ. ಜಗತ್ತಿನ ಉತ್ತಮ ಗುಣಮಟ್ಟದ 200 ವಿವಿಗಳ ಪಟ್ಟಿಯಲ್ಲಿ ಭಾರತದ ಯಾವುದೇ ವಿವಿಗಳು ಇಲ್ಲ. ಇದು ನಮ್ಮ ವಿವಿಗಳ ಹೀನಾಯ ಸ್ಥಿತಿಗೆ ಹಿಡಿದ ಕನ್ನಡಿ. ನೂರಾರು ವರ್ಷಗಳ ಇತಿಹಾಸವಿರುವ ಹೆಸರಾಂತ (ಬೆಂಗಳೂರು, ಮೈಸೂರು ಇತ್ಯಾದಿ) ಸಕರ್ಾರಿ ವಿಶ್ವವಿದ್ಯಾಲಯಗಳೇ ಅಗತ್ಯ ಮೂಲಸೌಲಭ್ಯಗಳನ್ನು ಹೊಂದಿಲ್ಲ ಎನ್ನುವ ಚಚರ್ೆ ಇರುವಾಗಲೇ ಸಣ್ಣಪುಟ್ಟ ಖಾಸಗಿ ಶಿಕ್ಷಣ ಸಂಸ್ಥೆಗಳನ್ನು ಖಾಸಗಿ ವಿವಿಗಳನ್ನಾಗಿಸಲು ಹೊರಟಿರುವ ಸಕರ್ಾರಕ್ಕೆ ವಿವಿಗಳ ಮೂಲಪರಿಕಲ್ಪನೆಯ ಅರಿವಿಲ್ಲದಿರುವುದು ಸಾಬೀತಾಗಿದೆ.

ಸಮಾಜದ ಸಮಗ್ರ ಪ್ರಗತಿಗಾಗಿ ವಿಶ್ವವಿದ್ಯಾಲಯಗಳು ಅಧ್ಯಯನ, ಸಂಶೋಧನೆಗಳ ಮೂಲಕ ಅಭಿವೃದ್ಧಿಯ ದಿಕ್ಸೂಚಿಗಳಾಗಬೇಕು. ಸಂಶೋಧನೆ ಅಧ್ಯಯನಕ್ಕಾಗಿ ಅಗತ್ಯ ಸಹಕಾರ, ಮಾರ್ಗದರ್ಶನ ಸೌಲಭ್ಯ ಕಲ್ಪಿಸಬೇಕಿದೆ. ಬೌದ್ಧಿಕ ಸಂಪತ್ತಿನ ಉತ್ಪಾದನಾ ಕೇಂದ್ರಗಳಾಗಿರುವ ವಿವಿಗಳನ್ನು ರಾಜ್ಯ ಸಕರ್ಾರ ಬಂಡವಾಳಶಾಹಿ ಕಂಪನಿಗಳಿಗೆ ವಹಿಸಲು ಹೊರಟಿರುವುದು ಉನ್ನತ ಶಿಕ್ಷಣ ಕ್ಷೇತ್ರಕ್ಕೆ ಮಾಡುತ್ತಿರುವ ವಂಚನೆ. ‘ಬಂಡವಾಳ ಲಾಭವಿಲ್ಲದೇ ಕೆಲಸ ಮಾಡಲಾರದು’ ಎಂಬುದು ಈಗಾಗಲೇ ತಿಳಿದಿರುವ ಸಂಗತಿ.

ಇಂದಿಗೂ ಬೆಂಗಳೂರು ವಿವಿಯಲ್ಲಿ ಎಂ.ಬಿ.ಎ ಓದಲು 5ಸಾವಿರ ರೂ ಶುಲ್ಕವಿದ್ದರೆ. ಅಲಯನ್ಸ್ ಖಾಸಗಿ ವಿವಿಯಲ್ಲಿ ರೂ 12ಲಕ್ಷಕ್ಕೂ ಹೆಚ್ಚು ಶುಲ್ಕ ವಸೂಲಿ ನಡೆಸಲಾಗುತ್ತಿದೆ. ಎಲ್ಕೆಜಿ-ಯುಕೆಜಿ ಹೇಳಿಕೊಡುವ ಖಾಸಗಿ ಶಿಕ್ಷಣ ಸಂಸ್ಥೆಗಳು ಲಕ್ಷಾಂತರ ರೂಪಾಯಿ ವಸೂಲಿಯನ್ನು ನಿಯಂತ್ರಿಸಲು ಸಾಧ್ಯವಾಗುತ್ತಿಲ್ಲ. ಇನ್ನು ಬೌದ್ಧಿಕ ಸಂಪತ್ತಿನ ಕೇಂದ್ರಗಳಾದ ವಿವಿಗಳನ್ನು ಖಾಸಗೀಕರಿಸಿದರೆ ಎಂಥ ಸಂಶೋಧನೆ-ಅಧ್ಯಯನ ನಡೆಯಬಹುದು? ಯಾರಿಗೆ ಪ್ರವೇಶ ಸಿಗಬಹುದು? ಇವುಗಳನ್ಮ್ನ ನಿಯಂತ್ರಿಸಲು ಸಕರ್ಾರದ ಬಳಿ ಯಾವ ಶಾಸನಗಳಿವೆ? ಎಂಬುದು ಚಚರ್ೆಯಾಗಬೇಕಿದೆ.

2002ರಲ್ಲಿ ಛತ್ತೀಸ್ಗಡದ ಬಿ.ಜೆ.ಪಿ. ಸಕರ್ಾರದ ಅಧಿಕಾರಾವಧಿಯಲ್ಲಿ ಪ್ರಾರಂಭಿಸಲಾಗಿದ್ದ 24 ಕ್ಕೂ ಹೆಚ್ಚು ಖಾಸಗಿ ವಿವಿಗಳು ಕಳಪೆ ಗುಣಮಟ್ಟದವು, ಕಾನೂನುಬಾಹಿರವೆಂದು ಸುಪ್ರೀಂಕೋಟರ್್ ಘೋಷಿಸಿ, ಅವುಗಳನ್ನು ರದ್ದುಪಡಿಸಿದ್ದು ನಮ್ಮ ರಾಜ್ಯ ಸಕರ್ಾರಕ್ಕೆ ತಿಳಿಯಲೇ ಇಲ್ಲ. ಗಲ್ಲಿಗಲ್ಲಿಗಳಲ್ಲಿ ತಲೆ ಎತ್ತಿ ಕೇವಲ ಹಣ ಮಾಡುವಲ್ಲಿ ನಿರತವಾಗಿರುವ ಸುಲಿಗೆಕೋರ ಖಾಸಗಿ ಶಿಕ್ಷಣ ಸಂಸ್ಥೆಗಳನ್ನು ನಿಯಂತ್ರಿಸಲು ಅಧಿಕಾರವಿರುವ “ಸಾಮಾಜಿಕ ನಿಯಂತ್ರಣ ಶಾಸನ” ತರಲು ಸಕರ್ಾರ ವಿಫಲವಾಗಿದೆ. ರಾಜ್ಯ ಸಕರ್ಾರ ಮತ್ತೆ 20 ಖಾಸಗಿ ವಿವಿಗಳ ಸ್ಥಾಪಿಸುವ ಮೂಲಕ ಸಕರ್ಾರಿ ಮೂಲ ವಿವಿಗಳನ್ನು ನಿಲರ್ಿಪ್ತಗೊಳಿಸಲು ಹೊರಟಿದೆ. ಸಕರ್ಾರದ ಹಿಡಿತವಿಲ್ಲದ ‘ಖಾಸಗಿ ಸಾಮ್ರಾಜ್ಯಗಳು ಸ್ಥಾಪನೆ’ಯಾಗಲಿವೆ. ಖಾಸಗೀಕರಣದ ಮೂಲಕ ಶಿಕ್ಷಣವನ್ನು ಮಾರಾಟದ ಸರಕನ್ನಾಗಿಸಲು ಹೊರಟಿದೆ.

20 ಖಾಸಗಿ ವಿವಿ ಮಸೂದೆಗಳಲ್ಲಿರುವ ಅಪಾಯಕಾರಿ ಅಂಶಗಳು ಹೀಗಿವೆ.
ಸೆಕ್ಷನ್ 13 (1)- ರಾಜ್ಯಪಾಲರು ಕುಲಾಧಿಪತಿಗಳಲ್ಲ, ಸಂದರ್ಶಕರಷ್ಟೇ! : ಸಂವಿಧಾನಬದ್ಧವಾಗಿ ಪಾರಂಪಾರಿಕ ಸಕರ್ಾರಿ ವಿವಿಗಳಿಗೆ ರಾಜ್ಯಪಾಲರು ಕುಲಾಧಿಪತಿಗಳಾಗಿರುತ್ತಾರೆ. ಇವರು ಆಡಳಿತ, ಅಭಿವೃದ್ಧಿ, ನಿರ್ವಹಣೆ, ಇನ್ನಿತರ ಎಲ್ಲದಕ್ಕೂ ಜವಾಬ್ದಾರರಾಗಿರುತ್ತಾರೆ. ಆದರೆ, ಈ ಖಾಸಗಿ ವಿವಿಗಳಿಗೆ ರಾಜ್ಯಪಾಲರು ಕೇವಲ ಸಂದರ್ಶಕರಷ್ಟೇ. ಖಾಸಗಿ ವಿವಿಯ ಘಟಿಕೋತ್ಸವದಲ್ಲಿ ಭಾಗವಹಿಸಬಹುದು. ಅಂತೆಯೇ ಸಹ ಸಂದರ್ಶಕರಾಗಿರುವ ಉನ್ನತ ಶಿಕ್ಷಣ ಸಚಿವರೂ ಕೂಡಾ. ಸಕರ್ಾರದ ಹಿಡಿತದಿಂದ ಖಾಸಗಿ ಶಿಕ್ಷಣ ಸಂಸ್ಥೆಗಳನ್ನು ದೂರಮಾಡಲಾಗಿದೆ, ಇದು ಅತ್ಯಂತ ಅಪಾಯಕಾರಿ.

ಸೆಕ್ಷನ್ 15(1) ಸಂಸ್ಥೆಯ ಟ್ರಸ್ಟಿಯೇ ಜೀವನಪರ್ಯಂತ ಕುಲಾಧಿಪತಿ! : ಕುಲಾಧಿಪತಿಗಳ ಸ್ಥಾನದಿಂದ ರಾಜ್ಯಪಾಲರನ್ನು ದೂರ ಇಟ್ಟಿರುವ ಈ ಮಸೂದೆ ಪ್ರಾಯೋಜಕ ಕಂಪೆನಿ/ಸಂಸ್ಥೆ/ಯ ನ್ಯಾಸಧಾರಿ (ಟ್ರಸ್ಟಿ)ಯೇ ಕುಲಾಧಿಪತಿ ಎಂದಿದೆ. ಇವರು ಜೀವನ ಪರ್ಯಂತ ಅಧಿಕಾರದಲ್ಲಿರಬಹುದು. ಮುಂದಿನ ಕುಲಾಧಿಪತಿಗೆ ಯಾವುದೇ ವಿದ್ಯಾರ್ಹತೆ, ಅನುಭವದ ಮಾನದಂಡವಿಲ್ಲ. ಹಣವಿದೆ ಎಂಬ ಏಕೈಕ ಕಾರಣಕ್ಕಾಗಿ ಸಮಾಜಘಾತುಕ ಶಕ್ತಿಗಳು (ಗೂಂಡಾಗಳು, ಭಯೋತ್ಪಾದಕರು, ವಂಚಕರು, ಭ್ರಷ್ಟರು ಇತ್ಯಾದಿ) ಸಂಸ್ಥೆಯಲ್ಲಿದ್ದು ಕುಲಾಧಿಪತಿಗಳಾಗಬಹುದು.

ಸೆಕ್ಷನ್ -6 ರಾಜ್ಯವ್ಯಾಪಿ ಕಾಲೇಜು ಪ್ರಾರಂಭಿಸಬಹುದು! : ಈ ಮಸೂದೆಯ ಪ್ರಕಾರ ಖಾಸಗಿ ವಿವಿಗಳು ರಾಜ್ಯವ್ಯಾಪಿ ಘಟಕ ಕಾಲೇಜುಗಳು, ಹೆಚ್ಚುವರಿ, ಕ್ಯಾಂಪಸ್, ಅಧ್ಯಯನ ಕೇಂದ್ರಗಳನ್ನು ಸ್ಥಾಪಿಸಬಹುದು. ಇದು ವ್ಯಾಪಕ ವ್ಯಾಪಾರೀಕರಣಕ್ಕೆ ಅವಕಾಶ ಕಲ್ಪಿಸುತ್ತದೆ. ಸಕರ್ಾರಿ/ಅನುದಾನಿತ, ಚಿಕ್ಕ, ಚಿಕ್ಕ ಸಂಸ್ಥೆಗಳನ್ನು ವ್ಯವಸ್ಥಿತವಾಗಿ ಮುಚ್ಚಿಹಾಕುವ ತಂತ್ರ ಇದಾಗಿದೆ. ಈಗಾಗಲೇ ರಾಜ್ಯವ್ಯಾಪಿ ತಲೆ ಎತ್ತಿರುವ ವಿವಿಧ ವಿವಿಗಳ ದೂರಶಿಕ್ಷಣ ಕೇಂದ್ರಗಳು ಅಕ್ರಮ ಚಟುವಟಿಕೆಗಳ ತಾಣವಾಗಿರುವುದು ಸಕರ್ಾರಕ್ಕೆ ಕಾಣಿಸುತ್ತಿಲ್ಲ. ಗುಣಮಟ್ಟದ ಕಲಿಕೆಯ ಬದಲಾಗಿ ಕೇವಲ ಸಟರ್ೀಫಿಕೆಟ್ಗಳನ್ನು ಖರೀದಿಸುವ ಕೇಂದ್ರಗಳನ್ನಾಗಿಸಲು ಹೊರಟಂತಿದೆ.

ಸೆಕ್ಷನ್-7 ಅಸಮರ್ಥರಿಗೆ ಎಲ್ಲಾ ಕೋಸರ್್ಗಳ ಪ್ರಾರಂಭಕ್ಕೆ ಅವಕಾಶ : ಖಾಸಗಿ ವಿವಿಗಳ ಮಾಡಲು ಹೊರಟಿರುವ ಕೆಲ ಶಿಕ್ಷಣ ಸಂಸ್ಥೆಗಳು ತಾಂತ್ರಿಕ, ಕೆಲ ಶಿಕ್ಷಣ ಸಂಸ್ಥೆಗಳು ಮೆಡಿಕಲ್, ಇನ್ನು ಕೆಲವು ಶಿಕ್ಷಣ ಸಂಸ್ಥೆಗಳು ವ್ಯವಹಾರದ ಕೋಸರ್್ಗಳನ್ನು ಮಾತ್ರ ಬೋಧಿಸುತ್ತಿವೆ. ಆದರೆ, ಸದರಿ ಖಾಸಗಿ ವಿವಿ ಮಸೂದೆಗಳ ಧ್ಯೇಯೋದ್ದೇಶ ಮತ್ತು ಭವಿಷ್ಯದ ದೃಷ್ಟಿಯಲ್ಲಿ “ಎಲ್ಲಾ ಬಗೆಯ ಕೋಸರ್್ಗಳನ್ನು ಪ್ರಾರಂಭಿಸಲು ಅವಕಾಶ ಕಲ್ಪಿಸಲಾಗುತ್ತಿದೆ. ಉದಾ:- ವೆಲ್ಲೂರು ತಾಂತ್ರಿಕ ಕಾಲೇಜು ಕೇವಲ ಇಂಜಿನಿಯರಿಂಗ್ ಕೋಸರ್್ಗಳನ್ನು ಬೋಧಿಸುತ್ತಿದೆ. ಆದರೆ, ಇನ್ನು ಮುಂದೆ ಅದು, ವೈದ್ಯಕೀಯ, ಕಲೆ, ಕೃಷಿ, ಔಷಧ, ವ್ಯವಸ್ಥಾಪನೆ ಆಡಳಿತ, ವ್ಯವಹಾರ, ಶಿಕ್ಷಣ ಇತ್ಯಾದಿ ಎಲ್ಲಾ ಕೋಸರ್್ಗಳನ್ನು ಪ್ರಾರಂಭಿಸಲು ಅನುಮತಿ ನೀಡಲಾಗುತ್ತಿದೆ. ಒಂದು ಕೋಸರ್ಿನ ವಿದ್ಯಾಥರ್ಿಗಳಿಗೆ ಮೂಲಸೌಲಭ್ಯ, ಗುಣಮಟ್ಟದ ಶಿಕ್ಷಣ ನೀಡಲಿಕ್ಕಾಗದ ಖಾಸಗಿ ಶಿಕ್ಷಣ ಸಂಸ್ಥೆಗಳಿಗೆ ನೀಡಲಾಗುತ್ತಿರುವ ಈ ಅವಕಾಶ “ನೀರು ಇಳಿಯದ ಗಂಟಲೊಳಗೆ ಕಡುಬು ತುರುಕಿದಂತೆ” ಎನ್ನುವಂತಾಗುತ್ತಿದೆ. ಇದು ಸಕರ್ಾರದ ಬೇಜವಾಬ್ದಾರಿ, ಬೌದ್ಧಿಕ ದಿವಾಳಿತನ ತೋರಿಸುತ್ತದೆ.

ಅಮೃತ ಸಿಂಚನ ಆಧ್ಯಾತ್ಮಿಕ ವಿವಿ ಸೆಕ್ಷನ್ 07 : ಹಿಂದೆ ಕೇಂದ್ರದಲ್ಲಿ ಎನ್ಡಿಎ ಸಕರ್ಾರ ಜ್ಯೋತಿಷ್ಯ ಶಾಸ್ತ್ರವನ್ನು ಶಾಲಾ ಪಠ್ಯದಲ್ಲಿ ಬೋಧಿಸಲು ಹೊರಟಾಗ ತೀವ್ರ ವಿರೋಧದಿಂದ ಹಿಂದೆ ಸರಿದಿತ್ತು. ಈಗ ರಾಜ್ಯ ಬಿಜೆಪಿ ಸಕರ್ಾರ “ಅಮೃತ ಸಿಂಚನ ಆಧ್ಯಾತ್ಮಿಕ ಖಾಸಗಿ ವಿವಿ” ಸ್ಥಾಪಿಸಲು ಹೊರಟಿರುವುದು ಸಿಂಧುವಲ್ಲ. ಎಲ್ಲಾ ಖಾಸಗಿ ವಿವಿಗಳಂತೆ ದಿವಾಳಿಕೊರ ಅಂಶಗಳ ಜೊತೆ ಈ ವಿವಿಯಲ್ಲಿ ಬೋಧಿಸಲು ಹೊರಟಿರುವ ಕೋಸರ್್ಗಳು ಹೆಚ್ಚು ಅಪಾಯಕಾರಿ, ಮೌಢ್ಯ-ಅಂಧಕಾರವನ್ನು ಬಂಡವಾಳವಾಗಿಸಿ ಲಾಭ ಮಾಡಲು ಹೊರಟಂತಿದೆ. “ಮಂತ್ರ-ತಂತ್ರ, ಜೋತಿಷ್ಯ ಶಾಸ್ತ್ರ, ವಾಸ್ತು, ಧ್ಯಾನ, ಆಧ್ಯಾತ್ಮಿಕ ಉಪಶಮನ, ಯೋಗ, ಮಣಿಗಳು, ಹರಳುಗಳು, ಮುದ್ರೆಗಳು ಅಷ್ಟೇ ಅಲ್ಲದೇ, ನಾಯಿ ಸಾಕಲು ಕೋಸರ್್ ಜೊತೆಗೆ ಪರಮಾತ್ಮನೊಂದಿಗೆ ಲೀನವಾಗುವುದು ಹೇಗೆ? ಕುರಿತು ಕೋಸರ್್ ಪ್ರಾರಂಭಿಸಲಾಗುತ್ತದೆಯಂತೆ. ಸಕರ್ಾರದ ಹಿಡಿತವೇ ಇಲ್ಲದ ಈ ವಿವಿಗಳು ಅಪಾಯಕಾರಿ. ಅನಗತ್ಯ, ಪ್ರತಿಗಾಮಿ ಕೋಸರ್್ಗಳನ್ನು ಪ್ರಾರಂಭಿಸಿದರೆ ಸಮಾಜದ ಪ್ರಗತಿ ಯಾವ ದಿಕ್ಕಿನತ್ತ ಸಾಗಲಿದೆ ಎಂಬುದನ್ನು ಚಚರ್ಿಸಬೇಕಿದೆ.

ಸೆಕ್ಷನ್-9 ರಾಜ್ಯದವರಿಗೆ ಕೇವಲ ಶೇ 40ರಷ್ಟು ಮಾತ್ರ ಪ್ರವೇಶ : ರಾಜ್ಯದಲ್ಲಿ ರಿಯಾಯಿತಿಯಲ್ಲಿ ಭೂಮಿ, ನೀರು, ತೆರಿಗೆ ವಿನಾಯಿತಿ ಪಡೆಯುತ್ತಿರುವ ಖಾಸಗಿ ಶಿಕ್ಷಣ ಸಂಸ್ಥೆಗಳಲ್ಲಿ `ಕನರ್ಾಟಕ ರಾಜ್ಯದವರಿಗೆ ಕೇವಲ ಶೇ 40 ಮಾತ್ರ ಸೀಟು ಪ್ರವೇಶ ನೀಡಲಿವೆ’. ಇನ್ನುಳಿದ ಶೇ 60 ಸೀಟುಗಳನ್ನು ಹೊರರಾಜ್ಯದ ಅಥವಾ ಹೊರರಾಷ್ಟ್ರದ ವಿದ್ಯಾಥರ್ಿಗಳಿಗೆ ಮಾರಿಕೊಳ್ಳಲಿವೆ. ಇದು ರಾಜ್ಯದ ವಿದ್ಯಾಥರ್ಿಗಳ ಉನ್ನತ ಶಿಕ್ಷಣ ಪ್ರವೇಶವನ್ನು ಹೆಚ್ಚಿಸಿದಂತಾಗುವುದಿಲ್ಲ. ಬದಲಾಗಿ ರಾಜ್ಯವನ್ನು ಶಿಕ್ಷಣ ಮಾರಾಟದ ಕೇಂದ್ರವನ್ನಾಗಿಸಲಿದೆ.

ರಾಜ್ಯದಲ್ಲಿ ಉನ್ನತ ಶಿಕ್ಷಣ ಪಡೆಯುತ್ತಿರುವವರ ಪ್ರಮಾಣ ಶೇ 11.5 ಆಗಿದ್ದು, ಖಾಸಗಿ ವಿವಿಗಳ ಸ್ಥಾಪನೆ ರಾಜ್ಯದವರ ಪ್ರವೇಶ ಪ್ರಮಾಣ ಹೆಚ್ಚಿಸುವುದಿಲ್ಲ. ಏಕೆಂದರೆ ಈಗಾಗಲೇ ಸಕರ್ಾರಿ ವಿವಿಗಳಲ್ಲಿಯೇ ವಿದ್ಯಾಥರ್ಿಗಳ ಪ್ರವೇಶ ಕಡಿಮೆಯಾಗುತ್ತಿದೆ. ಅನೇಕ ವಿಭಾಗಗಳಲ್ಲಿ ಸೀಟು ಖಾಲಿ ಉಳಿಯುತ್ತಿವೆ. ಸಕರ್ಾರಿ ವಿವಿಗಳಲ್ಲಿನ ಶುಲ್ಕ, ಇತರೆ ಖಚರ್ು ಭರಿಸಲಾಗದೇ, ಸಕರ್ಾರಿ ವಿವಿಗಳಲ್ಲಿನ ಪೇಮೆಂಟ್ ಸೀಟು ಖರೀದಿಸಲಾಗದೇ ವಿದ್ಯಾಥರ್ಿಗಳು ಶಿಕ್ಷಣದಿಂದಲೇ ದೂರ ಉಳಿಯುತ್ತಿದ್ದಾರೆ. ಇನ್ನು ಲಕ್ಷಾಂತರ ರೂಪಾಯಿ ವಸೂಲಿ ಮಾಡುವ ಖಾಸಗಿ ವಿವಿಗಳಿಗೆ ರಾಜ್ಯದ ಬಡ ವಿದ್ಯಾಥರ್ಿಗಳ ಬದಲಾಗಿ ಹೊರಗಿನ ಶ್ರೀಮಂತರಿಗೆ ಲಾಭವಾಗಲಿವೆ ಅಷ್ಟೇ. ಬಡ, ದಲಿತ, ಮಹಿಳೆಯರೂ ಕೂಡಾ ಉನ್ನತ ಶಿಕ್ಷಣದಿಂದ ವಂಚಿತರಾಗಲಿದ್ದಾರೆ. ವಂಚನೆಗೊಳಗಾಗುತ್ತಿರುವ ಶೇ. 89 ಜನ ಉನ್ನತ ಶಿಕ್ಷಣ ಪಡೆಯಬೇಕಾದರೆ ಸಕರ್ಾರಿ ವಿವಿಗಳಲ್ಲಿರುವ ಶುಲ್ಕ ಕಡಿತಗೊಳಿಸಬೇಕು. ಅಗತ್ಯ ಕೋಸರ್್, ಸೌಲಭ್ಯಗಳನ್ನು ಕಲ್ಪಿಸಬೇಕು. ಖಾಸಗಿ ವಿವಿಗಳು ಸಾಮಾಜಿಕ ಕಂದಕಗಳನ್ನು ಸೃಷ್ಟಿಸಲಿವೆ.

ಸೆಕ್ಷನ್-32 ಸಾಮಾಾಜಿಕ ನ್ಯಾಯ-ಭದ್ರತೆಯಿಲ್ಲದ ನೇಮಕಾತಿ : `ಖಾಸಗಿ ವಿವಿಯ ನೌಕರರನ್ನು ಲಿಖಿತ ಕರಾರಿನ ಅಡಿಯಲ್ಲಿ ನೇಮಕಗೊಳಿಸಲಾಗುತ್ತದೆ’. ಕರಾರಿನಲ್ಲಿ ಏನಿದೆ? ಎಂಬುದು ಬಹಿರಂಗಪಡಿಸಿಲ್ಲ. ನೌಕರರ ಭದ್ರತೆಗೆ ಸಂಬಂಧಿಸಿದಂತೆ ಮಾಹಿತಿಗಳಿಲ್ಲ, ಸಂವಿಧಾನಬದ್ಧವಾಗಿ ಹಿಂದುಳಿದ, ಪರಿಶಿಷ್ಟರು, ಶೋಷಿತರಿಗೆ ನೀಡಲಾಗುವ ಮೀಸಲಾತಿಯ ಸಾಮಾಜಿಕ ನ್ಯಾಯಕ್ಕೆ ಇಲ್ಲಿ ಅವಕಾಶವಿಲ್ಲ, ದಲಿತರು, ಹಿಂದುಳಿದ, ಅಲ್ಪಸಂಖ್ಯಾತ ವರ್ಗದವರಿಗೆ ನೇಮಕಾತಿಯಲ್ಲಿ ಅವಕಾಶವಿಲ್ಲ. ಸ್ವಜನ ಪಕ್ಷಪಾತ ಅಥವಾ ಉಳ್ಳವರಿಗೆ ಮಾತ್ರ ನೇಮಕಾತಿ ಮಾಡಿಕೊಳ್ಳಬಹುದು. ಅಲ್ಲದೇ, ನೇಮಕಾತಿ ಕುರಿತು ಸಕರ್ಾರದ ಮಧ್ಯಪ್ರವೇಶ ಇರುವುದಿಲ್ಲ. ನೌಕರರ ಹಕ್ಕುಗಳ ರಕ್ಷಣೆಗೆ ಅವಕಾಶವಿಲ್ಲ, ಪ್ರಯೋಜಿಕ ಶಿಕ್ಷಣ ಸಂಸ್ಥೆಯ ತೀಮರ್ಾನವೇ ಅಂತಿಮ. ಹಿಂದೆ ಪ್ರಾರಂಭಿಸಲಾದ ಅಲಯನ್ಸ್, ಅಜೀಂಪ್ರೇಮ್ಜೀ ಖಾಸಗಿ ವಿವಿಗಳಲ್ಲಿ ಯಾವುದೇ ರೀತಿಯ ಮೀಸಲಾತಿ ಜಾರಿಯಲ್ಲಿ ಇಲ್ಲ.

ಸೆಕ್ಷನ್-27 ಸಕರ್ಾರದ ಪ್ರಾತಿನಿಧ್ಯವಿಲ್ಲದ ಹಣಕಾಸು ಸಮಿತಿ : ಖಾಸಗಿ ವಿವಿ ಕುಲಾಧಿಪತಿ ಅಧ್ಯಕ್ಷತೆಯ ಹಣಕಾಸು ಸಮಿತಿಯಲ್ಲಿ ಯಾವುದೇ ಸಕರ್ಾರಿ ಅಧಿಕಾರಿ ಅಥವಾ ಸಕರ್ಾರದ ಪ್ರತಿನಿಧಿಗಳು ಇರುವುದಿಲ್ಲ, ಹಣಕಾಸು ಸಂಗ್ರಹ, ನಿರ್ವಹಣೆಯನ್ನು ಪ್ರಾಯೋಜಕ ಸಂಸ್ಥೆಯೇ ನಿರ್ವಹಿಸಲಿದೆ. ಇದು ಮಿತಿ ಇಲ್ಲದೆ ಹಣ ವಸೂಲಿಯ ಜೊತೆ ಅಕ್ರಮ ಹಣಗಳಿಕೆ, ಬಳಕೆಗೆ ಅವಕಾಶ ಕಲ್ಪಿಸಲಿದೆ.

ಸೆಕ್ಷನ್-50 ವಿದ್ಯಾಥರ್ಿಗಳಿಂದ ವ್ಯಾಪಕ ಸಂಗ್ರಹಕ್ಕೆ ಅವಕಾಶ : ಖಾಸಗಿ ವಿವಿಗಳು ವಿದ್ಯಾಥರ್ಿಗಳಿಂದ ಅಭಿವೃದ್ದಿ ಶುಲ್ಕ, ದೇಣಿಗೆಗಳು, ದತ್ತಿ ನಿಧಿ ಹೀಗೆ ವಿವಿಧ ರೀತಿಯಿಂದ ಸಂಗ್ರಹಿಸಲು ಕಾನೂನಬದ್ಧ ಅವಕಾಶ ಕಲ್ಪಿಸಲಾಗಿದೆ. ಈ ರೀತಿಯ ಮುಕ್ತ ಅವಕಾಶದಿಂದ ಖಾಸಗಿ ವಿವಿಗಳು ಸುಲಿಗೆಯ ಕೇಂದ್ರಗಳಾಗಲಿವೆ.

ಸೆಕ್ಷನ್-56 ನೆಪ ಮಾತ್ರ ದಂಡಗಳು : ಅಧಿನಿಯಮದ ಉಲ್ಲಂಘನೆ, ಪರೀಕ್ಷಾ ಅಕ್ರಮ, ಪದವಿ, ಅಂಕಪಟ್ಟಿ ನೀಡುವಲ್ಲಿ ನಿಯಮ ಉಲ್ಲಂಘನೆ ಮಾಡುವವರಿಗೆ ರೂ 50 ಸಾವಿರದಷ್ಟು ದಂಡ, 6 ತಿಂಗಳಿನಷ್ಟು ಕಾರಾಗೃಹ ವಾಸದಿಂದ ದಂಡಿಸಲಾಗುವುದಂತೆ. ಕೇವಲ ಪದವಿಗಾಗಿ ರೂ 20 ಲಕ್ಷದಷ್ಟು ಹಣ ಸುಲಿಗೆ ಮಾಡುವ ಈ ಸಂಸ್ಥೆಗಳಿಗೆ ಈ ಪ್ರಮಾಣದ ದಂಡ, ಶಿಕ್ಷೆ ತೀರಾ ಸಣ್ಣದು. ಬೆಂಗಳೂರಿನಲ್ಲಿ ಬಹುತೇಕ ಖಾಸಗಿ ಶಿಕ್ಷಣ ಸಂಸ್ಥೆಗಳ ಗೇಟಿನ ಒಳಗೆ ಸಕರ್ಾರಿ ಅಧಿಕಾರಿಗಳು ಹೋಗಲು ಆಗದಿರುವಾಗ ಖಾಸಗಿ ವಿವಿಗಳ ಆಡಳಿತ ತಪಾಸಣೆ ಮಾಡುವುದಾದರೂ ಹೇಗೆ?

ಸೆಕ್ಷನ್-47 ಶಾಶ್ವತ ಶಾಸನಬದ್ಧ ನಿಧಿ ಮತ್ತು ಭೂಮಿ : ಖಾಸಗಿ ವಿವಿಗಳ ಸ್ಥಾಪಿಸಲು ಕನಿಷ್ಠ 10 ಕೋಟಿ ನಗದು, 5 ಕೋಟಿ ಗ್ಯಾರಂಟಿ ರೂಪದಲ್ಲಿ ಬ್ಯಾಂಕ್ ಠೇವಣಿಯಾಗಿ ಹಣ ಗ್ಯಾರಂಟಿ ರೂಪದಲ್ಲಿರಬೇಕು. ಈ ಕುರಿತು ತಪ್ಪು ದಾಖಲೆಗಳ ಸೃಷ್ಟಿಸುವುದು ಖಾಸಗಿ ಶಿಕ್ಷಣ ಸಂಸ್ಥೆಗಳಿಗೆ ದೊಡ್ಡದೇನು ಅಲ್ಲ.

ಬೃಹತ್ ಬೆಂಗಳೂರು ಮಹಾನಗರ ಪಾಲಿಕೆ ವ್ಯಾಪ್ತಿಯಲ್ಲಿ 25 ಎಕರೆ ಭೂಮಿ ಹೊರಗಡೆ 60 ಎಕರೆ ಭೂಮಿ ಇರಬೇಕೆನ್ನುವುದು ನಿಯಮ. ಈ ಪ್ರಮಾಣದ ಭೂಮಿ ಈ ಶಿಕ್ಷಣ ಸಂಸ್ಥೆಗಳಿಗಿದೆಯೇ? ಅಥವಾ ಅಷ್ಟೊಂದು ಹಣ ಖಚರ್ು ಮಾಡಲು ವಿನಿಯೋಗಿಸುವ ಹಣ ಮತ್ತೆ ವಿದ್ಯಾಥರ್ಿ-ಪೋಷಕರಿಂದ ಸುಲಿಯಲಾಗುವುದಿಲ್ಲವೇ? ಎನ್ನುವ ಪ್ರಶ್ನೆ ಸಹಜವಾಗೆ ಎದ್ದು ಬರಲಿದೆ. ನೂರಾರು ಎಕರೆಯಲ್ಲಿ ಕಾರ್ಯನಿರ್ವಹಿಸುತ್ತಿರುವ (ಬೆಂಗಳೂರು, ಮೈಸೂರು, ಹಂಪಿ, ಶಿವಮೊಗ್ಗ, ಗುಲ್ಬರ್ಗ) ಸಕರ್ಾರಿ ವಿವಿಗಳ ವಾತಾವರಣ ಖಾಸಗಿ ವಿವಿಗಳು ನೀಡಲು ಸಾಧ್ಯವೇ ಇಲ್ಲ. ವಿಶಾಲ ವಾತಾವರಣವಿಲ್ಲದ ಕಡೆಗೆ ವಿಶ್ವ ಅಧ್ಯಯನ ಹೇಗೆ ಸಾಧ್ಯ?

ಸೆಕ್ಷನ್ 38: ಸಕರ್ಾರಿ ವಿವಿಗಳ ಶುಲ್ಕ ನೀತಿ ಖಾಸಗಿಯವರಿಗೆ ಅನ್ವಯಿಸುವುದಿಲ್ಲ! : ರಾಜ್ಯದ ಸಕರ್ಾರಿ ವಿವಿಗಳಿಗೆ ಶುಲ್ಕ ನಿಗದಿಗೊಳಿಸುವ ಅಧಿಕಾರ ಸರಕಾರಕ್ಕಿದೆ. ಆದರೆ, ಖಾಸಗಿ ವಿವಿಗಳಿಗೆ ಇದು ಯಥಾವತ್ತಾಗಿ ಅನ್ವಯಿಸುವುದಿಲ್ಲ. ಕನರ್ಾಟಕ ರಾಜ್ಯದ ಶೇ 40ರಷ್ಟು ವಿದ್ಯಾಥರ್ಿಗಳಿಗೆ ಶುಲ್ಕ ನಿಯಂತ್ರಿಸಲು ಒಂದು ಸಮಿತಿಯನ್ನು ರಚಿಸಲಾಗುತ್ತದೆ.

ಇನ್ನುಳಿದ ಶೇ 60ರಷ್ಟು ವಿದ್ಯಾಥರ್ಿಗಳಿಗೆ ನಿದರ್ಿಷ್ಟ ಶುಲ್ಕ ನಿಗದಿಯ ನಿಯಮ, ಮಾನದಂಡಗಳನ್ನು ನಿಗದಿಗೊಳಿಸಿಲ್ಲ. ಇದು ವ್ಯಾಪಕ ಸೀಟು ಮಾರಾಟಕ್ಕೆ ಅವಕಾಶ ಕಲ್ಪಿಸುತ್ತದೆ. ರಾಜ್ಯದಲ್ಲಿರುವ ಖಾಸಗಿ ಶಿಕ್ಪ್ಷಣ ಸಂಸ್ಥೆಗಳು, ಸ್ವಾಯತ್ತ ಸಂಸ್ಥೆಗಳು ಕಾನೂನು ಬಾಹಿರವಾಗಿ ಲಕ್ಷಾಂತರ ರೂಪಾಯಿ ವಸೂಲಿಯಲ್ಲಿ ತೊಡಗಿದ್ದರೂ ಸಕರ್ಾರದಿಂದ ಸೂಕ್ತ ಕ್ರಮ ಸಾಧ್ಯವಾಗಿಲ್ಲ. ಹೀಗೆ ಹಲವಾರು ಋಣಾತ್ಮಕ ಅಂಶಗಳು ತುಂಬಿರುವ 20 ಖಾಸಗಿ ವಿವಿಗಳು ಉನ್ನತ ಶಿಕ್ಷಣವನ್ನು ವಂಚಿಸಲು ಹುಟ್ಟುತ್ತಿವೆ.

ಎ.ಬಿ.ವಿ.ಪಿ. ಸಂಘಟನೆಯ ಕಾರ್ಯಕರ್ತನೆಂದು ಎಲ್ಲೆಡೆ ಹೇಳಿಕೊಳ್ಳುವ ಉನ್ನತ ಶಿಕ್ಷಣ ಸಚಿವ ಸಿ.ಟಿ. ರವಿ ಅವರ ನಿಜಬಣ್ಣ ಬಯಲಾಗಿದೆ, ಶಿಕ್ಷಣ ವ್ಯಾಪಾರೀಕರಣದ ವಿರುದ್ದ ಅವರು ಕೂಗಾಡಿದ್ದು ಢೋಂಗಿತನವೆಂಬುದು ಸಾಬೀತಾಗಿದೆ. ಸಿ.ಟಿ. ರವಿ ಮತ್ತು ಸಂಘ ಪರಿವಾರದವರ ಪ್ರತಿಪಾದನೆ ಬಹುಸಂಖ್ಯಾತ ಬಡವರಿಗೆ ಶಿಕ್ಷಣದ ವಂಚನೆಯೇ ಆಗಿದೆ ಎಂಬುದನ್ನು ಮತ್ತೊಮ್ಮೆ ಬಹಿರಂಗಗೊಂಡಿದೆ. ಎಬಿವಿಪಿಯ ಒಡಲಲ್ಲಿರುವ ವ್ಯಾಪಾರೀಕರಣ ಕಾನೂನಾಗಲು ಹೊರಟಿದೆ.
0

Donate Janashakthi Media

Leave a Reply

Your email address will not be published. Required fields are marked *