ಸಂಪುಟ – 06, ಸಂಚಿಕೆ 25, ಜೂನ್ 17, 2012
ಹಾಸನ ಜೂನ್ 6| ಇಂದು ಜಗದ ನಭೋಮಂಡಲದಲ್ಲಿ ಶತಮಾನದ ಕಟ್ಟಕಡೆಯ ಹಾಗೂ ಅಪರೂಪದ ಶುಕ್ರ ಸಂಕ್ರಮಣ ಜರುಗತು ದೇಶ-ವಿದೇಶಗಳಲ್ಲಿ ಕೋಟ್ಯಾಂತರ ಜನ, ವಿದ್ಯಾಥರ್ಿಗಳು ಹಾಗೂ ವಿಜ್ಞಾನಿಗಳು ಈ ಸೌಂಧರ್ಯವನ್ನು ವೀಕ್ಷಿಸಿದರು, ಅಧಯಯನ ಮಾಡಿದರು ಮತ್ತು ಸೌರ ವಿಷತೆಗಳನ್ನು ಅಳೆದರು.
ಹಾಸನ ನಗರದ ಜಿಲ್ಲಾ ಕ್ರೀಡಾಂಗಣದಲ್ಲಿ ಶತಮಾನದ ಕಟ್ಟಕಡೆಯ ಹಾಗೂ ಅಪರೂಪದ ಶುಕ್ರ ಸಂಕ್ರಮಣವನ್ನು ಸಾರ್ವಜನಿಕರಿಗಾಗಿ ವೀಕ್ಸಿಸುವ ಸಲುವಾಗಿ ವಿಶೇಷ ಕನ್ನಡಕದ ವ್ಯವಸ್ಥೆಯನ್ನು ಹಾಸನ ಜಿಲ್ಲಾ ಭಾರತ ಜ್ಞಾನ ವಿಜ್ಞಾನ ಸಮಿತಿಯು ಮಾಡಿತ್ತು ಹಾಸನ ನಗರದ ನೂರಾರು ಸಂಖ್ಯೆಯಲ್ಲಿ ಜಿಲ್ಲಾ ಕ್ರೀಡಾಂಗಣದಲ್ಲಿ ಜನ ಶುಕ್ರ ಸಂಕ್ರಮವನ್ನು ನೋಡಿ ಆನಂದಿಸಿದರು. ಹಾಸನ ಜಿಲ್ಲಾ ಕಾರ್ಯನಿರತ ಪತ್ರಕರ್ತರ ಸಂಘದ ಜಿಲ್ಲಾಧ್ಯಕ್ಷೆ ಶ್ರೀಮತಿ ಲೀಲಾವತಿ ಮೊದಲಿಗೆ ಸಂಕ್ರಮ ವೀಕ್ಷಿಸುವ ಮೂಲಕ ವೀಕ್ಷಣಾ ಕಾರ್ಯಕ್ರಮದ ಉದ್ಘಾಟನೆ ನಡೆಸಿದರು, ಸಮಾಜ ಸೇವಾ ಕಾರ್ಯಕರ್ತ ಸುರೇಶ್ ಗುರೂಜಿ, ವಿಜ್ಞಾನ ಸಂವಹನ ಸಂಚಾಲಕ ಬಿ.ಜಿ.ಗೋಪಾಲಕೃಷ್ಣ ಹಾಗೂ ಬಿಜಿವಿಎಸ್ ಜಿಲ್ಲಾ ಕಾರ್ಯದಶರ್ಿ ಎಚ್.ಎ.ಅಹಮದ್ ವೀಕ್ಷಕ ವಿವರಣೆ ನೀಡಿದರು.
2012ರ ಶುಕ್ರ ಸಂಕ್ರಮ ಆಸ್ಟ್ರೇಲಿಯದ ಮೊದಲು ಅಡಿನೇಡಿನಲ್ಲಿ ಬೆಳಗಿನ 3.39 ಗಂಟೆಗೆ ಗಡಿಯಾರದ 6ರ ಬಾಗದಲ್ಲಿ ಸೂರ್ಯಸ್ಪರ್ಷ ಮಾಡಿತು ಭಾರತಕ್ಕೆ ಸೂಯರ್ೋದಯದ ಜೊತೆಯಲ್ಲಿ ಕಾಣಿಸಲಾರಂಬಿಸಿತು. ಹಾಸನದ ಜಿಲ್ಲಾ ಕ್ರೀಡಾಂಗಣದಲ್ಲಿ ಸೂಯರ್ೋದಯ 6 ಗಂಟೆ 12 ನಿಮಿಷಕ್ಕೇ ಪ್ರಾರಂಭವಾಗಬೇಕಾಗಿತ್ತು ಮಳೆಯ ಮೋಡದ ಕಾರಣ ಕ್ರಿಡಾಂಗಣದಲ್ಲಿ ಸೌರ ಶೂಧಕ ಹಾಗೂ ಕ್ಯಾಮೆರಾ ಕಣ್ಣಗಳಿದೆ 6 ಗಂಟೆ 50 ನಿಮಿಷಕ್ಕೆ ಮೊದಲ ದರ್ಶನ ನೀಡಿತು ಪುನಃ ಸೂರ್ಯನನ್ನು ಮೋಡ ಆವರಿಸಿ ಮತ್ತೆ 7.15 ರಿಂದ 7.35 ರವರೆಗೆ ಬಹಳ ಸುಂದರ ಶೂಕ್ರ ಸಂಕ್ರಮವನ್ನು ಹಾಸನ ನಗರದ ಜನತೆ ವೀಕ್ಷಿಸಿ ಆನಂದಿಸಿದರು ಆ ವೇಳೆಯಲ್ಲಿ ಶುಕ್ರ ಒಂದು ಕಪ್ಪು ಬಿಂದಿಯಂತೆ ಸೂರ್ಯನ ಮೂಡುವೆಡೆಯಿಂದ ಅಂದರೆ ಗಡಿಯಾರದ 6ಗಂಟೆಸ್ಥಳದಿಂದ 10 ಗಂಟೆಯ ಸ್ಥಳದ ಮಾರ್ಗವಾಗಿ 9ಗಂಟೆಯ ನೇರದಲ್ಲಿದ್ದ ನಂತರ ಪುನಃ ಮೋಡಕವಿದು ಸೂರ್ಯ ಮರೆಯಾಗಿ 10.10ಕ್ಕೆ ಸ್ವಲ್ಪ ದರ್ಶನ ತೋರಿಸಿ 10.21ಕ್ಕೆ ಸಂಕ್ರಮ ಮುಗಿಸಿ ಹೊರನಡೆದ.
ಬೆಳಗಿನ ಹವಾವಿಹಾರ, ಕ್ರೀಡಾಭ್ಯಾಸ, ಹಾಗೂ ಜಾಗಿಂಗ್ಗೆ ಬಂದಿದ್ದ ಜನ ಬೆಳಗಿನ 6.30ರಿಂದ 7.30ರವರೆಗೂ ನಂತರ ಅವರುಗಳು ತಮ್ಮ ಮಕ್ಕಳು ಹಾಗು ಮನೆಯವರನ್ನು ಕರೆತಂದು ವೀಕ್ಷಸಿ ಸಂಬ್ರಮಿಸಿದರು ನಂತರ ಶಾಲಾ ವಿಧ್ಯಾಥರ್ಿಗಳು ಹಾಗೂ ಕ್ರೀಡಾಂಗಣ ಮತ್ತು ಪೋದಾರ್ ಶಾಲಾ ಮೈದಾನದಲ್ಲಿ ವೀಕ್ಷಿಸಿ ಆನಂದಿಸಿದರು.
ಎಚ್.ಎ.ಅಹಮದ್
ಕಾರ್ಯದಶರ್ಿ
0