ಕೋಲ್ಕತ್ತ: ಸಿಪಿಐ(ಎಂ) ಪಕ್ಷದ ಹಿರಿಯ ಸದಸ್ಯ ಹಾಗೂ ದೇಶದಲ್ಲಿ ವಿಮಾನೌಕರರ ಚಳುವಳಿಯ ಹರಿಕಾರರಲ್ಲಿ ಒಬ್ಬರಾದ ಚಂದ್ರಶೇಖರ್ ಬೋಸ್ ಶುಕ್ರವಾರ ನಿಧನರಾದರು. ಅವರಿಗೆ 103 ವರ್ಷ ವಯಸ್ಸಾಗಿತ್ತು.
ಇಲ್ಲಿನ ಬಿಧಾನ್‌ನಗರದಲ್ಲಿರುವ ಅವರ ನಿವಾಸದಲ್ಲಿ ಬೆಳಗ್ಗೆ ನಿಧನರಾದರು ಎಂದು ಸಿಪಿಐ(ಎಂ) ಪಕ್ಷದ ಮೂಲಗಳು ತಿಳಿಸಿವೆ. ಶತಾಯುಷಿಯಾಗಿದ್ದ ಚಂದ್ರಶೇಖರ್ ಬೋಸ್ ಅವರು ಪುತ್ರ, ಸೊಸೆ ಹಾಗೂ ಮೊಮ್ಮಗನನ್ನು ಅಗಲಿದ್ದಾರೆ.
ಇದನ್ನೂ ಓದಿ : ಪ್ರೊ. ಮಾಧವ್ ಗಾಡ್ಗೀಳ್ ಮತ್ತು ಭಾರತ – ಪಶ್ಚಿಮ ಘಟ್ಟಗಳಿಗಾಗಿ ಅವರ ಹೋರಾಟ
ಎಡಪಂಥೀಯ ಚಳವಳಿಯಲ್ಲಿ ಸಕ್ರಿಯವಾಗಿ ತೊಡಗಿಸಿಕೊಂಡಿದ್ದರು ಕಲ್ಕತ್ತ ವಿಶ್ವವಿದ್ಯಾಲಯದಿಂದ ಪದವಿ ಪಡೆದಿದ್ದ ಅವರು 1944ರಲ್ಲಿ ಹಿಂದೂಸ್ತಾನ್ ವಿಮಾ ಕಂಪನಿಯಲ್ಲಿ ಕೆಲಸಕ್ಕೆ ಸೇರಿದರು. ನಂತರ ಅಖಿಲ ಭಾರತ ವಿಮಾ ನೌಕರರ ಸಂಘ (AIIEA)ದ ಸಂಸ್ಥಾಪಕ ಮುಖಂಡರಲ್ಲಿ ಒಬ್ಬರಾದ ಚಂದ್ರಶೇಖರ್ ಬೋಸ್ ಅದರ ಪ್ರಧಾನ ಕಾರ್ಯದರ್ಶಿಯಾಗಿ ಮತ್ತು ಅಧ್ಯಕ್ಷರಾಗಿ ದೀರ್ಘ ಕಾಲ ವಿಮಾನೌಕರರ ಚಳುವಳಿಯ ನೇತೃತ್ವ ವಹಿಸಿದರು.
ವಿಮಾ ಕ್ಷೇತ್ರದ ರಾಷ್ಟ್ರೀಕರಣ ಸೇರಿ ಅಖಿಲ ಭಾರತ ಮಟ್ಟದಲ್ಲಿ ವಿಮಾ ಉದ್ಯೋಗಿಗಳನ್ನು ಸಂಘಟಿಸುವಲ್ಲಿ ಚಂದ್ರಶೇಖರ್ ಬೋಸ್ ಅವರು ಮಹತ್ವದ ಪಾತ್ರ ವಹಿಸಿದ್ದರು. ಹತ್ತು ದಿನಗಳ ಹಿಂದಷ್ಟೆ ಭುವನೇಶ್ವರದಲ್ಲಿ ನಡೆದ ಅಖಿಲ ಭಾರತ ವಿಮಾ ಉದ್ಯೋಗಿಗಳ ಸಮ್ಮೇಳನದಲ್ಲಿ ಎರಡು ದಿನಗಳ ಕಾಲ ಪ್ರತಿನಿಧಿಗಳನ್ನು ಉದ್ದೇಶಿಸಿ ಭಾಷಣ ಮಾಡಿದ್ದರು.
ಎಡಪಕ್ಷಗಳ ನಾಯಕ ಅಧ್ಯಕ್ಷ ಬಿಮಾನ್ ಬೋಸ್ ಹಾಗೂ ಸಿಪಿಐ(ಎಂ) ರಾಜ್ಯ ಕಾರ್ಯದರ್ಶಿ ಮೊಹಮ್ಮದ್ ಸಲೀಂ ಅವರು ಚಂದ್ರಶೇಖರ್ ಬೋಸ್ ನಿಧನಕ್ಕೆ ತೀವ್ರ ಸಂತಾಪ ವ್ಯಕ್ತಪಡಿಸಿದ್ದಾರೆ. ಅಖಿಲ ಭಾರತ ವಿಮಾ ನೌಕರರ ಸಂಘ (ಎಐಐಇಎ)ದ ಪ್ರಧಾನ ಕಾರ್ಯದರ್ಶಿ ಶ್ರೀಕಾಂತ್ ಮಿಶ್ರಾ ಕೂಡ ಗೌರವ ನಮನ ಸಲ್ಲಿಸಿದ್ದಾರೆ.
ಇದನ್ನೂ ನೋಡಿ : ಮನೆ ಕೆಲಸಗಾರರನ್ನು ಅವಮಾನಿಸಿದ ಬುಕ್‌ಮೈಬಾಯಿ ವಿರುದ್ಧ ಕ್ರಮಕ್ಕೆ ಆಗ್ರಹ Janashakthi Media
