ಕಾರವಾರ | 500ಕ್ಕೂ ಹೆಚ್ಚು ಕಾರ್ಮಿಕರಿಂದ ಹೆದ್ದಾರಿ ತಡೆ ಪ್ರತಿಭಟನೆ

ಕಾರವಾರ : ಕಾರ್ಮಿಕ ಸಂಘಟನೆಗಳ ಜಂಟಿ ಸಮಿತಿ (ಜೆಸಿಟಿಯು) ನೇತೃತ್ವದಲ್ಲಿ ಜಿಲ್ಲಾ ರಂಗಮಂದಿರ ಎದುರಿನಿಂದ ಸಾಗಿದ ಮೆರವಣಿಗೆ ನಗರ ಪೂರ್ತಿ ಸಂಚರಿಸಿದೆ. ಸ್ವಲ್ಪ ಹೊತ್ತು ಬಿಲ್ಟ್ ವೃತ್ತದ ಹತ್ತಿರ ಕರ್ನಾಟಕ ಗೋವಾ ಹೆದ್ದಾರಿ ತಡೆ ನಡೆಸಿ ಸರ್ಕಾರದ ಗಮನ ಸೆಳೆಯುವ ಪ್ರಯತ್ನ ಮಾಡಲಾಯಿತು. ನಂತರ ಜಿಲ್ಲಾಡಳಿತದ ಮುಂದೆ ಸಭೆ ನಡೆಸಿ ಮುಷ್ಕರದ ಡಿಕ್ಲೆರೇಶನ್ ಗಳನ್ನು ತಿಳಿಸಿದರು.

ಇದನ್ನೂ ಓದಿ : ಗ್ರಾ. ಪಂ ಪಿಡಿಒ – ಅಧ್ಯಕ್ಷರ ವಿರುದ್ದ ಹಣ ದುರುಪಯೋಗ ಆರೋಪ: ಪಂಚಾಯಿತಿ ಸದಸ್ಯರು ಪ್ರತಿಭಟನೆ

ಕೆ.ಪಿ.ಆರ್.ಎಸ್ ಜಿಲ್ಲಾ ಕಾರ್ಯದರ್ಶಿ ಶ್ಯಾಮನಾಥ ನಾಯ್ಕ, ಲೇಬರ್ ಕೋಡ್ ಗಳ ಬಗ್ಗೆ ಬ್ಯಾಂಕ್ ನೌಕರರ ಸಂಘದ ನಾಯಕರಾದ ವಾಸುದೇವ ಶೇಟ್, ಕೇಂದ್ರ ಸರ್ಕಾರದ ಅಸಾಂವಿಧಾನಿಕ ನಡೆಯಿಂದ ಜನತೆಯ ಮೇಲಾಗುವ ಪರಿಣಾಮಗಳ ಕುರಿತು ಜೆಸಿಟಿಯು ಸಂಚಾಲಕರಾದ ಯಮುನಾ ಗಾಂವ್ಕರ್, ಶಿಕ್ಷಣ ಮತ್ತು ಯೋಜನಾ ಕಾರ್ಮಿಕರ ಮೇಲಾಗುತ್ತಿರುವ ವ್ಯತಿರಿಕ್ತ ಪರಿಣಾಮಗಳ ಕುರಿತು ವೀರೇಶದ ರಾಠೋಡ, ಗುತ್ತಿಗೆ ಕಾರ್ಮಿಕರ ಸಂಕಷ್ಟದ ಬಗ್ಗೆ ಭರತ್ ಮಾತಾಡಿದರು.

ಸಿಐಟಿಯು ನ ತಾರಾ ನಾಯ್ಕ, ಜಯಶ್ರೀ ಗೌಡ, ಮಾಯಾ ಕಾಣೇಕರ್, ಪೂರ್ಣಿಮಾ ನಾಯ್ಕ, ಮೀನಾ, ಸುಮಂಗಲಾ ಮಡಿವಾಳ, ಬ್ಯಾಂಕ್ ನೌಕರರ ಸಂಘದ ಅಧ್ಯಕ್ಷರಾದ ಸನ್ನಿ ನಾಯ್ಕ, ಕಾರ್ಯದರ್ಶಿ ಸಂದೀಪ್ ಹುಳ್ಗೇಕರ್, ದೀಪಾ ರಮಾಕಾಂತ ನಾಯ್ಕ, ಶ್ರೀರಕ್ಷಾ ನಾಯ್ಕ, ಸಮೀರ ಶೇಖ್, ಗಜಾನನ ನಾಯ್ಕ, ವಿನೋದ ಬಾಂದೇಕರ್, ಎಲ್.ಐಸಿ ಎಐಐಇಎ ಸಂಘಟನೆಯ ನರೇಶ ಅಂಕೋಲೆಕರ್, ಆರ್.ಎಂ. ರೈಕರ್, ಎಸ್.ಎಫ್.ಐ ನ ಯಲ್ಲಪ್ಪ, ಶಶಿಧರ ಕಾನಡೆ, ಮಲ್ಲಿಕಾರ್ಜುನ, ಶೇಕಪ್ಪ, ಲಲಿತಾ ಗುನಗ ನೇತೃತ್ವ ವಹಿಸಿದ್ದರು. ಬ್ಯಾಂಕ್, ಎಲ್.ಐಸಿ, ಜಿಐಸಿ, ಅಂಗನವಾಡಿ, ಬಿಸಿಯೂಟ ಸಂಪೂರ್ಣ ಬಂದ್ ಆಗಿದ್ದವು. ಜೊತೆಗೆ ಕೆಲವು ವಿಭಾಗದ ಗುತ್ತಿಗೆ ಕಾರ್ಮಿಕರು, ಸ್ವಚ್ಛವಾಹಿನಿಯವರು, ಜೊಮಾಟೋ ಕಾರ್ಮಿಕರು, ಆಟೋದವರು ಕೂಡ ಬೆಂಬಲಿಸಿ ಇದ್ದರು.

ಇದನ್ನೂ ನೋಡಿ : ಅಖಿಲ ಭಾರತ ಮುಷ್ಕರ| ಪೊಲೀಸರ ದರ್ಪ – ಮಾನವೀಯತೆ ಕಳೆದುಕೊಂಡ ಸರಕಾರ Janashakthi Media

Donate Janashakthi Media