ಕಾಂಗ್ರೆಸಿನ ಆಮ್ ಆದ್ಮಿ ನಟನೆಗೆ ಮತದಾರರ ತಿರಸ್ಕಾರ

ಸಂಪುಟ – 06, ಸಂಚಿಕೆ 12, ಮಾಚರ್್ 18, 2012

`ಪೀಪಲ್ಸ್ ಡೆಮಾಕ್ರಸಿ’ ವಾರಪತ್ರಿಕೆಯ ಮಾಚರ್್ 08, 2012ರ

elections 2012-2

ಸಂಚಿಕೆಯ ಸಂಪಾದಕೀಯ
ಜನತೆ ಮತ್ತೆ ಚುನಾವಣೆಗಳಲ್ಲಿ ಕಾಂಗ್ರೆಸನ್ನು ಮತ್ತು ಅದರ ಆಮ್ ಆದ್ಮಿ ಪರ ಕಾಳಜಿಗಳ ನಟನೆಯನ್ನು ತಿರಸ್ಕರಿಸಿದ್ದಾರೆ, ಜತೆಗೆ ಬಿಜೆಪಿಯೂ ಭಿನ್ನವೇನಲ್ಲ ಎಂದು ನಿರ್ಧರಿಸಿದ್ದಾರೆ. ತಕ್ಷಣಕ್ಕಂತೂ ಯುಪಿಎ-2 ಸರಕಾರದ ಸ್ಥಿರತೆಗೆ ಬೆದರಿಕೆಯಿಲ್ಲ. ಆದರೂ, ಮುಂಬರುವ ಬಜೆಟ್ ಅಧಿವೇಶನದಲ್ಲಿ ಸಂಸತ್ತಿನಲ್ಲಿ ಯುಪಿಎ-2 ಸರಕಾರದ ಹಾದಿ ಸುಗಮವಾಗಿರುವುದಿಲ್ಲ ಎಂಬುದು ಸ್ಪಷ್ಟ. ಈ ಫಲಿತಾಂಶಗಳಿಂದ ಕಾಂಗ್ರೆಸ್ ನೇತೃತ್ವದ ಯುಪಿಎ-2 ಏನಾದರೂ ಪಾಠ ಕಲಿಯುತ್ತದೆಯೇ ಎಂಬುದೀಗ ಪ್ರಶ್ನೆ. ದುರದೃಷ್ಟವಶಾತ್, ಹಾಗೆ ಕಲಿಯುವ ಲಕ್ಷಣಗಳೇನೂ ಇಲ್ಲ.

ಇತ್ತೀಚೆಗೆ ರಾಜ್ಯ ವಿಧಾನ ಸಭೆಗಳಿಗೆ ನಡೆದ ಚುನಾವಣೆಗಳ ಫಲಿತಾಂಶಗಳ ವ್ಯಾಖ್ಯಾನಿಸುವ ಅಥವ ಅವನ್ನು ಗ್ರಹಿಸಲು ಯತ್ನಿಸುವ ವಿಶ್ಲೇಷಣೆಗಳು ದಂಡಿಯಾಗಿ ಬಂದಿವೆ, ಬರುತ್ತಲೇ ಇರುತ್ತವೆ. ಆದರೆ ಇವೆಲ್ಲವುಗಳಲ್ಲೂ ಮೂಡಿ ಬರುವ ಒಂದು ಸಾಮಾನ್ಯ ಅಂಶವೆಂದರೆ, ಜನತೆಯ ನಡುವೆ, ತಮ್ಮ ಮೇಲೆ, ವಿಶೇಷವಾಗಿ ಬೆಲೆಯೇರಿಕೆಗಳ ಮೂಲಕ ಹೇರುತ್ತಲೇ ಇರುವ ಆಥರ್ಿಕ ಹೊರೆಗಳ ಬಗ್ಗೆ ಏರುತ್ತಿರುವ ಅಸಂತುಷ್ಟಿ ಅವರ ಈ ತೀಪರ್ಿನಲ್ಲಿ ಬಿಂಬಿತವಾಗಿದೆ. ಮತದಾರರು ತಮ್ಮ ಶೋಚನಯ ಪರಿಸ್ಥಿತಿಗೆ ಕೇಂದ್ರ ಸರಕಾರ ಮತ್ತು ಅದಕ್ಕೆ ನೇತೃತ್ವ ನೀಡುತ್ತಿರುವ ಕಾಂಗ್ರೆಸ್ ಪಕ್ಷವೇ ಹೊಣೆ ಎಂದು ತೀಪರ್ಿತ್ತಿದ್ದಾರೆ.

ಇದು ಸಾಮಾನ್ಯವಾಗಿ ಅಧಿಕಾರಸ್ಥರ-ವಿರುದ್ಧವಾಗಿ ಇರುವ ಭಾವನೆಯ ಪ್ರಯೋಜನವನ್ನು ಕೂಡ ಪಂಜಾಬಿನಲ್ಲಿ ಪಡೆಯಲು ಅದಕ್ಕೆ ಅಡ್ಡಿಯಾದಂತೆ ಕಾಣುತ್ತದೆ. ಉತ್ತರಾಖಂಡದಲ್ಲೂ ಸುಮಾರಾಗಿ ಹೀಗೇ ಆಗಿದೆ; ಕಾಂಗ್ರೆಸ್ಗೆ ಈಗ ಅಧಿಕಾರದಲ್ಲಿ ಇರುವ ಬಿಜೆಪಿಗಿಂತ ಕೇವಲ ಒಂದೇ ಸ್ಥಾನ ಹೆಚ್ಚು ಸಿಕ್ಕಿದೆ. ಮಣಿಪುರ ಮಾತ್ರವೇ ಇದಕ್ಕೆ ಏಕೈಕ ಅಪವಾದ. ಆದರೆ ಇದು ಕೂಡ ಬೇರೆ ರಾಜ್ಯಗಳಲ್ಲಿ ವ್ಯಕ್ತಗೊಂಡ ಮತದದಾರರ ವರ್ತನೆಯಲ್ಲಿರುವ ಸಮಾನ ಅಂಶಗಳನ್ನೇನೂ ನಿರಾಕರಿಸುವುದಿಲ್ಲ. ಆ ರಾಜ್ಯದ ಜನತೆಯನ್ನು ಪೀಡಿಸುತ್ತಿರುವ ನಿದರ್ಿಷ್ಟ ಸ್ಥಳೀಯ ಪರಿಸ್ಥಿತಿಗಳಷ್ಟೇ ಅದಕ್ಕೆ ಕಾರಣ ಎನ್ನಬಹುದು.

ಉತ್ತರ ಪ್ರದೇಶದಲ್ಲಿನ ಫಲಿತಾಂಶ ಮುಖ್ಯಮಂತ್ರಿಯಾಗಿ ಮುಲಾಯಂ ಸಿಂಗ್ ಅವರು ವಿಜಯಶಾಲಿಯಾಗಿ ಹಿಂದಿರುಗುವ ಅವಕಾಶ ಮಾಡಿಕೊಟ್ಟಿದೆ. ಸಮಾಜವಾದಿ ಪಕ್ಷದ ಗಮನಾರ್ಹ ವಿಜಯ ಮತದಾರರಲ್ಲಿ ಹೆಚ್ಚುತ್ತಿರುವ ಫ್ರೌಢತೆಗೆ ಸಾಕ್ಷಿ. ಕಳೆದ ಚುನಾವಣೆಗಳಲ್ಲಿ ಅಭೂತಪೂರ್ವ ಜನಾದೇಶ ಪಡೆದ ಬಹುಜನ ಸಮಾಜ ಪಕ್ಷವನ್ನು ರಾಜ್ಯದಲ್ಲಿ ತೊಲಗಿಸಬೇಕು ಎಂಬ ಅಭಿಪ್ರಾಯ ವ್ಯಾಪಕವಾಗಿ ಹರಡಿದ್ದು ಇದರಿಂದ ಸ್ಪಷ್ಟವಾಗುತ್ತದೆ. ಇದನ್ನು ಸಾಧಿಸಲು ಮತದಾರರು, ಚತುಷ್ಕೋಣ ಸ್ಪಧರ್ೆಯಲ್ಲಿ ಸಮಾಜವಾದಿ ಪಕ್ಷಕ್ಕೆ ಅಸಂದಿಗ್ಧ ಜನಾದೇಶ ನೀಡಿ ಅತ್ಯಂತ ಸುರಕ್ಷಿತ ದಾರಿಯನ್ನು ಆರಿಸಿಕೊಂಡಂತಿದೆ. ಇದು, ತ್ರಿಶಂಕು ವಿಧಾನ ಸಭೆ ಬರುತ್ತದೆ, ಇದರಿಂದ ಕೇಂದ್ರ ಮತ್ತು ರಾಜ್ಯದಲ್ಲಿ ಮರುಮೈತ್ರಿಗಳ ಸಾಧ್ಯತೆಗಳನ್ನು ತೆರೆಯಬಹುದು ಎಂಬೆಲ್ಲ ಊಹಾಪೋಹಗಳಿಗೆ ತೆರೆ ಎಳೆದಿದೆ. ಅಂದರೆ, ಉತ್ತರ ಪ್ರದೇಶದ ಮತದಾರರು ಕೊನೆಗೂ ಜಾತಿ, ಕೋಮುಗಳ ಬೇಲಿಗಳನ್ನು ಸ್ವಲ್ಪ ಮಟ್ಟಿಗಾದರೂ ದಾಟಿ ಹೋಗಿದ್ದಾರೆ ಎಂದೇನೂ ಮಾತ್ರ ಹೇಳುವಂತಿಲ್ಲ. ನಿಸ್ಸಂದೇಹವಾಗಿಯೂ ಆಡಳಿತ ಮತ್ತು ಸ್ಥಿರತೆಯ ಪ್ರಶ್ನೆಯೇ ಇಲ್ಲಿ ಮುಖ್ಯವಾಯಿತು. ಇದಕ್ಕೆ ಕಾಂಗ್ರೆಸ್ ಪಕ್ಷದ ಮುಖಂಡರು ತ್ರಿಶಂಕು ವಿಧಾನಸಭೆಯ ಸಂದರ್ಭದಲ್ಲಿ ಚುನಾವಣೋತ್ತರ ಮೈತ್ರಿಗಳ ಬಗ್ಗೆ ಆಗಾಗ ನೀಡಿದ ಪರಸ್ಪರ ವಿರೋಧಾಭಾಸಗಳ ಹೇಳಿಕೆಗಳು ಚೆನ್ನಾಗಿ ನೆರವಿಗೆ ಬಂದವು.

ಬಿಜೆಪಿಯದ್ದೂ ಅದೇ ಸ್ಥಿತಿ
ಬಿಜೆಪಿ ಗೋವಾದಲ್ಲಿ ಒಂದು ಬಲವಾದ ಅಧಿಕಾರಸ್ಥ-ವಿರೋಧಿ ಪ್ರವೃತ್ತಿಯ ಪ್ರಯೋಜನ ಪಡೆಯುವಲ್ಲಿ ಯಶಸ್ವಿಯಾದರೂ, ಬೇರೆ ರಾಜ್ಯಗಳಲ್ಲಿ, ವಿಶೇಷವಾಗಿ ಬಹಳ ಮಹತ್ವದ ಉತ್ತರ ಪ್ರದೇಶದಲ್ಲಿ ಅದರ ಗಳಿಕೆಗಳನ್ನು ನೋಡಿದರೆ, ಆಥರ್ಿಕ ಸಂಕಟಗಳ ಹೊರೆ ಹೊತ್ತಿರುವ ಜನತೆ ಈ ಪಕ್ಷ ಕೂಡ ಕಾಂಗ್ರೆಸಿಗಿಂತ ಏನೇನೂ ಭಿನ್ನವಲ್ಲ ಎಂದು ಕಂಡಿರುವುದು ದೃಢಪಡುತ್ತದೆ. ಆಥರ್ಿಕ ಧೋರಣೆಗಳ ವಿಷಯದಲ್ಲಿ ಬಿಜೆಪಿ ಸಂಸತ್ತಿನಲ್ಲಿ ಕಾಂಗ್ರೆಸ್ ನೇತೃತ್ವದ ಯುಪಿಎ-2 ಸರಕಾರ ತಂದ ಎಲ್ಲ ನವ-ಉದಾರವಾದಿ ಕ್ರಮಗಳನ್ನು ಬೆಂಬಲಿಸಿದೆ. ಭ್ರಷ್ಟಾಚಾರದ ವಿಷಯದಲ್ಲಿ ಬಿಜೆಪಿಯ ವಿಶ್ವಾಸಾರ್ಹತೆ ಕಾಂಗ್ರೆಸಿಗಿಂತ ಭಿನ್ನವಾಗೇನೂ ಇಲ್ಲ ಎಂಬುದನ್ನು ಜನತೆ ಸರಿಯಾಗಿಯೇ ಗ್ರಹಿಸಿದ್ದಾರೆ. ವಿವಿಧ ಭ್ರಷ್ಟಾಚಾರದ ಹಗರಣಗಳಲ್ಲಿ ಅದರ ಮುಖಂಡರ ಮೇಲಿನ ದೋಷಾರೋಪಣೆಗಳು, ವಿಶೇಷವಾಗಿ ಅದರ ರಾಜ್ಯ ಸರಕಾರವಿರುವ ಕನರ್ಾಟಕದಲ್ಲಿನ ಪ್ರಕರಣಗಳು ಅದರ ನೈತಿಕ ಅಧಿಕಾರ ಎಂಬುದನ್ನು ಇನ್ನಿಲ್ಲದಂತೆ ಶಿಥಿಲಗೊಳಿಸಿವೆ. ಈ ವಿಷಯದಲ್ಲೂ ಅದರ ನಟನೆಗಳೆಲ್ಲ ಬಯಲಾಗಿವೆ.

ಆದರೆ, ಆರೆಸ್ಸೆಸ್ನ ರಾಜಕೀಯ ಅಂಗವಾದ ಬಿಜೆಪಿ ಪ್ರತಿನಿಧಿಸುವ ಕೋಮುವಾದ ಇದರಿಂದ ಹಿನ್ನೆಲೆಗೆ ಸರಿದಿದೆ ಎಂದು ಭಾವಿಸುವ ಗಂಭೀರ ತಪ್ಪನ್ನು ಮಾಡಬಾರದು. ಕೋಮು ಭಾವೋದ್ವೇಗಗಳನ್ನು ಬಡಿದೆಬ್ಬಿಸುವ ಪ್ರಯತ್ನಗಳು ಮತಗಳಾಗಿ ಪರಿವರ್ತನೆಗೊಳ್ಳುವಲ್ಲಿ ಯಶಸ್ವಿಯಾಗಿಲ್ಲವೆಂದರೆ, ಭವಿಷ್ಯದಲ್ಲಿ ಇನ್ನೂ ಗಂಭೀರ ಸಂಗತಿಗಳು ಕಾದಿವೆ ಎಂಬುದರ ಸೂಚನೆ. ಜನತೆಯ ಹಿತಗಳಿಗೆ ಮತ್ತು ಆಧುನಿಕ ಭಾರತದ ಜಾತ್ಯಾತೀತ ಪ್ರಜಾಸತ್ತಾತ್ಮಕ ಬುನಾದಿಗೆ ಕೇಡು ತರುವ ರೀತಿಯಲ್ಲಿ ಆರೆಸ್ಸೆಸ್/ಬಿಜೆಪಿ ಕೋಮುವಾದಿ ಅಜೆಂಡಾಕ್ಕೆ ಮತ್ತೆ ಜೀವ ತುಂಬುವ ಪ್ರಯತ್ನ ಮಾಡಬಹುದು. ಇಂತಹ ಕೋಮುವಾದ ಧೃವೀಕರಣ ತೀವ್ರಗೊಳ್ಳುವ ಸಾಧ್ಯತೆಯ ಬಗ್ಗೆ ದೇಶ ಮತ್ತು ಜನತೆ ಅದನ್ನೆದುರಿಸಲು ಸಿದ್ಧರಾಗಿರಬೇಕಷ್ಟೇ ಅಲ್ಲ, ಅದನ್ನು ಸೋಲಿಸಲೂ ಎದ್ದು ನಿಲ್ಲಬೇಕು.

ಅಭಿಪ್ರಾಯ ಸಂಗ್ರಹಗಳು ಅದರಲ್ಲೂ ಎಕ್ಸಿಟ್ ಪೋಲ್ ಅಂದರೆ ಮತಗಟ್ಟೆ ಅಭಿಪ್ರಾಯ ಸಂಗ್ರಹ ಎಂಬಂತವುಗಳು ಹೇಗೆ ನಂಬಲನರ್ಹವಾಗಿವೆ ಎಂಬುದನ್ನು ಮತ್ತೊಮ್ಮೆ ಈ ಫಲಿತಾಂಶಗಳು ತೋರಿಸಿ ಕೊಟ್ಟಿವೆ. ಎಕ್ಸಿಟ್ ಪೋಲ್ ಎಂಬುದು ರಂಗಪ್ರವೇಶ ಮಾಡಿದ ಸಮಯದಲ್ಲಿ, ಭಾರತೀಯ ಸನ್ನಿವೇಶದಲ್ಲಿ ಇದು ಉಂಟುಮಾಡಬಹುದಾದ ಗಂಡಾಂತರವನ್ನು ಅದಮ್ಯ ವ್ಯಂಗ್ಯ ಚಿತ್ರಕಾರ ಆರ್.ಕೆ.ಲಕ್ಷ್ಮಣ್ ತನ್ನ ಒಂದು ಕಾಟರ್ೂನಿನಲ್ಲಿ ಚಿತ್ರಿಸಿದ್ದರು. ಗಂಡನೊಬ್ಬ ಮನೆಗೆ ಬಂದು, ತಾನು ಮತಪತ್ರದಲ್ಲಿ(ಆಗಿನ್ನೂ ಮತಯಂತ್ರ ಬಂದಿರಲಿಲ್ಲ) ಬೇರೊಂದು ಚೌಕದಲ್ಲಿ ತಪ್ಪಾಗಿ ಮುದ್ರೆ ಒತ್ತಿದೆ ಎಂದು ಹೆಂಡತಿಗೆ ಹೇಳುತ್ತಾನೆ. ಆದರೆ ಹೊರಗೆ ಬಂದಾಗ ಮತಗಟ್ಟೆಯ ಬಳಿ ಮಾಡುತ್ತಿದ್ದ ಅಭಿಪ್ರಾಯ ಸಂಗ್ರಹದಲ್ಲಿ ಆ ತಪ್ಪನ್ನು ಸರಿಪಡಿಸಿದೆ ಎಂದು ಆಕೆಗೆ ಭರವಸೆ ಕೊಡುತ್ತಾನೆ! ಆದರೆ ಕಾಸಿಗಾಗಿ ಸುದ್ದಿ ವ್ಯಾಪಕವಾಗಿರುವ ಈ ದಿನಗಳಲ್ಲಿ ಈ ಎಕ್ಸಿಟ್ ಪೋಲ್ಗಳ ಮೇಲೂ ಅವುಗಳ ಪ್ರಭಾವವಿದೆಯೆ ಎಂದು ತನಿಖೆ ಮಾಡುವುದು ಭಾರತೀಯ ಪ್ರಜಾಪ್ರಭುತ್ವದ ಹಿತದೃಷ್ಟಿಯಿಂದ ಒಳ್ಳೆಯದು.

ಕಾಂಗ್ರೆಸ್/ಯುಪಿಎ ಪಾಠ ಕಲಿಯುತ್ತವೆಯೇ?
ಈಗಿರುವ ಚಚರ್ಾಸ್ಪದ ಪ್ರಶ್ನೆಯೆಂದರೆ, ಈ ಫಲಿತಾಂಶಗಳಿಂದ ಕಾಂಗ್ರೆಸ್ ನೇತೃತ್ವದ ಯುಪಿಎ-2 ಏನಾದರೂ ಪಾಠ ಕಲಿಯುತ್ತದೆಯೇ ಎಂಬುದು. ದುರದೃಷ್ಟವಶಾತ್, ಹಾಗೆ ಕಲಿಯುವ ಲಕ್ಷಣಗಳೇನೂ ಇಲ್ಲ. ಹಾಗೇನಾದರೂ ಕಲಿತಿದ್ದರೆ ಮುಂಬರುವ ಬಜೆಟಿನಲ್ಲಿ ಅದು ಕಾಣಿಸಬೇಕು. ಈ ಹಿಂದೆ ಹಲವು ಬಾರಿ ಈ ಅಂಕಣದಲ್ಲಿ, ಕಾಪರ್ೊರೇಟುಗಳಿಗೆ, ಸೂಪರ್ ಶ್ರೀಮಂತರಿಗೆ ಭಾರೀ ಪ್ರಮಾಣದ ತೆರಿಗೆ ರಿಯಾಯ್ತಿಗಳನ್ನು ಕೊಡುವ ಬದಲು, ಅದೇ ಹಣವನ್ನು ನಮಗೆ ಬಹುವಾಗಿ ಅಗತ್ಯವಿರುವ ಮೂಲರಚನೆಗಳನ್ನು ಕಟ್ಟಲು ಬೃಹತ್ ಪ್ರಮಾಣದ ಸಾರ್ವಜನಿಕ ಖಚರ್ುಗಳಿಗೆ ಕೊಟ್ಟರೆ ಭಾರೀ ಪ್ರಮಾಣದ ಉದ್ಯೋಗಾವಕಾಶ ನಿಮರ್ಾಣವಗುತ್ತಿತ್ತಷ್ಟೇ ಅಲ್ಲ, ಜನಗಳ ಖರೀದಿ ಸಾಮಥ್ರ್ಯ ಹೆಚ್ಚುತ್ತಿತ್ತು. ಇದು ದೇಶದ ಆಥರ್ಿಕದಲ್ಲಿ ಆಂತರಿಕ ಬೇಡಿಕೆಯ ಪ್ರಮಾಣವನ್ನು ಹೆಚ್ಚಿಸಿ ಭಾರತವನ್ನು ಒಂದು ಬಹುಕಾಲ ಉಳಿಯುವ ಮತ್ತು ನಿಜವಾಗಿಯೂ ಎಲ್ಲರನ್ನೂ ಒಳಗೊಳ್ಳುವ ಬೆಳವಣಿಗೆಯ ಹಾದಿಯಲ್ಲಿ ತರುತ್ತಿತ್ತು ಎಂದು ನಾವು ಮತ್ತೆ-ಮತ್ತೆ ಹೇಳಿದ್ದೇವೆ. ಹೀಗೆ ಮಾಡದಿದ್ದರೆ, ಜನತೆ ಮುಂದೆಯೂ ಚುನಾವಣೆಗಳಲ್ಲಿ ಕಾಂಗ್ರೆಸನ್ನು ಮತ್ತು ಅದರ ಆಮ್ ಆದ್ಮಿ ಪರ ಕಾಳಜಿಗಳ ನಟನೆಯನ್ನು ತಿರಸ್ಕರಿಸುತ್ತಲೇ ಇರುತ್ತಾರೆ.

ಸದ್ಯಕ್ಕೆ ಸಮಾಜವಾದಿ ಪಕ್ಷ ಮತ್ತು ಬಹುಜನ ಸಮಾಜ ಪಾಟರ್ಿ ಇವೆರಡೂ ಕೇಂದ್ರದಲ್ಲಿ ಯುಪಿಎ-2 ಸರಕಾರವನ್ನು ಹೊರಗಿನಿಂದ ಬೆಂಬಲಿಸುವುದನ್ನು ಮುಂದುವರೆಸುತ್ತವೆ. ಇದು ಬದಲಾಗದಿದ್ದರೆ, ತಕ್ಷಣಕ್ಕಂತೂ ಯುಪಿಎ-2 ಸರಕಾರದ ಸ್ಥಿರತೆಗೆ ಬೆದರಿಕೆಯಿಲ್ಲ. ಬಿಎಸ್ಪಿ ರಾಜ್ಯ ಮತ್ತು ಕೇಂದ್ರ ಸರಕಾರವನ್ನು ಒಟ್ಟಿಗೇ ಎದುರು ಹಾಕಿಕೊಳ್ಳುವ ಪ್ರಯತ್ನ ನಡೆಸದಷ್ಟು ವಿವೇಕ ಮತ್ತು ವ್ಯಾವಹಾರಿಕತೆಯನ್ನು ತೋರಬಹುದು. ಸಮಾಜವಾದಿ ಪಕ್ಷಕ್ಕೆ ಕೇಂದ್ರ ಸರಕಾರದ ಉತ್ತಮ ಮಜರ್ಿಯೇ ಹೆಚ್ಚು ಅನುಕೂಲಕರ ಎನಿಸಬಹುದು.

ಆದರೂ, ಮುಂಬರುವ ಬಜೆಟ್ ಅಧಿವೇಶನದಲ್ಲಿ ಸಂಸತ್ತಿನಲ್ಲಿ ಯುಪಿಎ-2 ಸರಕಾರದ ಹಾದಿ ಸುಗಮವಾಗಿರುವುದಿಲ್ಲ ಎಂಬುದು ಸ್ಪಷ್ಟ. ಈ ಸರಕಾರ ಮತ್ತು ಕಾಂಗ್ರೆಸ್ ಪಕ್ಷ ಈ ಫಲಿತಾಂಶಗಳಿಂದ ಸರಿಯಾದ ಪಾಠಗಳನ್ನು ಕಲಿಯುತ್ತದೆಯೇ, ತನ್ನ ನವ-ಉದಾರವಾದಿ ಆಥರ್ಿಕ ಧೋರಣೆಗಳ ವ್ಯವಸ್ಥೆಯನ್ನು ಬದಲಿಸುತ್ತದೆಯೇ ಎಂಬುದರ ಮೇಲೆ ಇದು ನಿಂತಿದೆ. ಆದರೆ ಲಕ್ಷಣಗಳೆಲ್ಲ ತದ್ವಿರುದ್ಧವಾಗಿರುವುದರಿಂದ ಸರಕಾರ ಈ ವಿನಾಶಕಾರಿ ಆಥರ್ಿಕ ಧೋರಣೆಯ ದಿಕ್ಕನ್ನು ಬದಲಿಸುವಂತೆ ಜನತೆಯ ಮತ್ತಷ್ಟು ಒತ್ತಡಗಳ ಮೂಲಕ ದಾಳಿ ನಡೆಸಬೇಕಾಗಿದೆ.
0

Donate Janashakthi Media

Leave a Reply

Your email address will not be published. Required fields are marked *