ಏಕೆ ಇಂತಹಾ ಟೊಳ್ಳು ಕಾಳಜಿ, ಪ್ರಧಾನಿಗಳೇ?

`ಪೀಪಲ್ಸ್ ಡೆಮಾಕ್ರಸಿ’ ಪತ್ರಿಕೆಯ ಜನವರಿ 5, 2012 ರ ಸಂಚಿಕೆಯ ಸಂಪಾದಕೀಯ

ಸಂಪುಟ – 06, ಸಂಚಿಕೆ 03, ಜನವರಿ, 015, 2012

5

ಇಂಟ್ರೊ-ಹೊಸ ವರ್ಷದಲ್ಲಿ ಪ್ರಧಾನ ಮಂತ್ರಿಗಳು ಮುಂದಿಟ್ಟಿರುವ ಅಜೆಂಡಾದ ರೂಪು-ರೇಷೆ ಅತ್ಯಂತ ಕಳವಳಕಾರಿ. ಅದು ಆಧುನಿಕ ಭಾರತದಲ್ಲಿ ರಾಮಾನುಜಂಗಳನ್ನು, ಬೋಸ್ಗಳನ್ನು ಸೃಷ್ಟಿಸುವುದಂತೂ ಸಾಧ್ಯವೇ ಇಲ್ಲ. ಅತ್ತ ನಮ್ಮ ಕೋಟ್ಯಂತರ ಜನಗಳಿಗೆ ಜೀವನ ಭದ್ರತೆಯನ್ನೂ ಕೊಡಲಾರದು. ನಮ್ಮ ಪ್ರಧಾನ ಮಂತ್ರಿಗಳ ಕಾಳಜಿಗಳು ಅತ್ಯಂತ ವೈರುಧ್ಯಮಯವಾಗಿವೆ ಮತ್ತು ಆ ಮೂಲಕ ನಮ್ಮ ಜನಗಳ ಜೀವನಾಧಾರದ ಭದ್ರತೆಯ ಬಗ್ಗೆ ಅವರ ಕಾಳಜಿ ಟೊಳ್ಳಾಗಿ ಬಿಟ್ಟಿದೆ. ಜನಗಳ ಜೀವನಾಧಾರ ಉತ್ತಮಗೊಳ್ಳಬೇಕಾದರೆ, ನವ-ಉದಾರವಾದಿ ಆಥರ್ಿಕ ಸುಧಾರಣೆಗಳ ದಿಕ್ಪಥವನ್ನು ಬದಲಿಸಲೇ ಬೇಕಾಗಿದೆ. 2012ರ ವರ್ಷ ಅದಕ್ಕಾಗಿ ಸರಕಾರದ ಮೇಲೆ ಜನಗಳ ಒತ್ತಡದ ವರ್ಷವಾಗಬೇಕಾಗಿದೆ

ಹೊಸ ವರ್ಷದ ಮುನ್ನಾದಿನ ದೇಶವನ್ನುದ್ದೇಶಿಸಿ ಮಾತನಾಡಿದ ಪ್ರಧಾನ ಮಂತ್ರಿಗಳು ನಂತರ ಭುವನೇಶ್ವರದಲ್ಲಿ ಭಾರತೀಯ ವಿಜ್ಞಾನ ಕಾಂಗ್ರೆಸಿನ 99ನೇ ವಾಷರ್ಿಕ ಅಧಿವೇಶನವನ್ನು ಉದ್ದೇಶಿಸಿ ಜನವರಿ 3ರಂದು ಮಾತನಾಡಿದರು. ಇವೆರಡೂ ಸೇರಿ ಕೊಟ್ಟಿರುವ ಅಜೆಂಡಾದ ರೂಪುರೇಷೆ ಅತ್ಯಂತ ಕಳವಳಕಾರಿ. ಅದೆಂದರೆ ಪ್ರಧಾನಮಂತ್ರಿಗಳು, ಅಂದರೆ ಈ ಯುಪಿಎ-2 ಸರಕಾರ ಭಾರತೀಯ ರಾಷ್ಟ್ರ ಮತ್ತು ಜನತೆಯ ಸಮಸ್ಯೆಗಳನ್ನು ಪರಿಹರಿಸಲು ಖಾಸಗಿ ಮುತುವಜರ್ಿಯೇ ಬುನಾದಿ ಎಂದು ಅದರ ಮೇಲಷ್ಟೇ ಅವಲಂಬಿಸುತ್ತಿರುವುದು.

ಈ ವರ್ಷ ಗಣಿತ ಶಾಸ್ತ್ರಜ್ಞ ಶ್ರೀನಿವಾಸ ರಾಮಾನುಜಂ ಇವರ 125ನೇ ಜನ್ನ ದಿನಾಚರಣೆಯ ವರ್ಷ ಮತ್ತು ಸತ್ಯೇಂದ್ರನಾಥ ಬೋಸ್ ಹೆಸರು ಹೊತ್ತಿರುವ, ನಮ್ಮ ವಿಶ್ವದ ಕುರಿತ ಮಾನವಕುಲದ ತಿಳಿವನ್ನು ಕ್ರಾಂತಿಕಾರಕಗೊಳಿಸಬಲ್ಲ, ಅಣುವಿಗಿಂತಲೂ ಚಿಕ್ಕದಾದ ಪ್ರಾಥಮಿಕ ಕಣದ ಅಂದರೆ ಬೋಸೋನಿನ ಹುಡುಕಾಟ ಮುಂದುವರೆದಿದೆ. ಪ್ರಧಾನ ಮಂತ್ರಿಗಳು ಈ ಎರಡು ಹೆಸರುಗಳನ್ನು ಉದ್ಧರಿಸುತ್ತಾ ಇರುವುದೊಂದೇ ವಿಜ್ಞಾನದ ಬೆಳಕು, ಅದನ್ನು ಎಲ್ಲಿ ಬೆಳಗಿಸಿದರೂ ಎಲ್ಲೆಡೆ ಬೆಳಗಿಸಿದಂತೆಯೇ ಎಂಬ ಐಸಾಕ್ ಅಸಿಮೊವ್ ಅವರ ಪ್ರಖ್ಯಾತ ಉದ್ಧರಣೆಯೊಂದಿಗೆ ತಮ್ಮ ಭಾಷಣವನ್ನು ಮುಗಿಸಿದರು.

ಇದೇ ದಾಟಿಯಲ್ಲಿ, ಭಾರತದಂತಹ ದೇಶಗಳಲ್ಲಿ ವಿಜ್ಞಾನದ ಪಾತ್ರ ಏನಿರಬೇಕು ಎಂಬ ಪ್ರಶ್ನೆಗೆ ಉತ್ತರಿಸುತ್ತ ಪ್ರಧಾನ ಮಂತ್ರಿಗಳು ಇದು ತ್ವರಿತವಾದ, ತಾಳಿಕೆಯ ಮತ್ತು ಎಲ್ಲರನ್ನೂ ಒಳಗೊಳ್ಳುವ ಅಭಿವೃದ್ಧಿಯ ರಾಷ್ಟ್ರೀಯ ಗುರಿಗೆ ಬೆಂಬಲವಾಗಿರಬೇಕು ಎಂದರು. ಅದೇ ವೇಳೆಗೆ ವೈಜ್ಞಾನಿಕ ಸಂಶೋಧನೆ ಮತ್ತು ಅಭಿವೃದ್ಧಿಗೆ ಭಾರತ ಮಾಡುತ್ತಿರುವ ಖಚರ್ು ಬಹಳ ಕಡಿಮೆ, ಮತ್ತು ಬಹಳ ಕಾಲದಿಂದ ಹೆಚ್ಚದೆ ಹಾಗೆಯೆ ಮುಂದುವರೆಯುತ್ತಿದೆ ಎಂದು ನೇರವಾಗಿಯೇ ಅವರು ಒಪ್ಪಿಕೊಂಡರು. ಸದ್ಯ ನಾವು ಸಂಶೋಧನೆ ಮತ್ತು ಅಭಿವೃದ್ಧಿಗೆ ಮಾಡುತ್ತಿರುವ ಖಚರ್ು ದೇಶದ ಜಿಡಿಪಿಯ 0.9 ಶೇ.ಕ್ಕಿಂತಲೂ ಕಡಿಮೆ. ಈ ವಿಷಯದಲ್ಲಿ ಚೀನಾ ನಮ್ಮನ್ನು ಬಹಳ ಹಿಂದಕ್ಕೆ ನೂಕಿದೆ ಎಂದು ಮರುಗಿದ ಅವರು 12ನೇ ಯೋಜನೆಯ ಅಂತ್ಯದ ವೇಳೆಗೆ ನಾವು ಜಿಡಿಪಿಯ ಕನಿಷ್ಟ 2ಶೇ.ದಷ್ಟು ಖಚರ್ು ಮಾಡಬೇಕಾಗಿದೆ ಎಂದರು. ಚೀನಾ ಜನತಾ ಗಣತಂತ್ರ ಈಗ ತನ್ನ ಜಿಡಿಪಿಯ 2ಶೇ.ದಷ್ಟು ಖಚರ್ು ಮಾಡುತ್ತಿದೆ. ಚೀನಾದ ಜಿಡಿಪಿ ಭಾರತದ ಜಿಡಿಪಿಗಿಂತ ಎರಡೂವರೆ ಪಟ್ಟಾದರೂ ದೊಡ್ಡದು. ಅಂದರೆ ಅದು ವಿಜ್ಞಾನ ಮತ್ತು ತಂತ್ರಜ್ಞಾನದ ಮೇಲೆ ನಮಗಿಂತ ಕನಿಷ್ಟ ಐದು ಪಟ್ಟು ಹೆಚ್ಚು ಖಚರ್ು ಮಾಡುತ್ತಿದೆ.

ಅದೇ ಪಿ-ಪಿ-ಪಿ ಮಂತ್ರ!
ಖಂಡಿತವಾಗಿಯೂ, ಪ್ರಧಾನ ಮಂತ್ರಿಗಳ ಶ್ಲಾಘನಾರ್ಹ ಗುರಿಗಳ ಬಗ್ಗೆ ಭಿನ್ನಾಭಿಪ್ರಾಯವೇನೂ ಇಲ್ಲ. ಆದರೆ ಸಮಸ್ಯೆಯಿರುವುದು ಈ ಖಚರ್ುಗಳನ್ನು ಹೆಚ್ಚಿಸಲು ಅವರು ಯಾವ ವಿಧಾನದ ಮೇಲೆ ಒತ್ತು ನೀಡಿದರು ಎಂಬ ಬಗ್ಗೆ. ಇದು ಸಾಧ್ಯವಾಗುವುದು, ಸದ್ಯಕ್ಕೆ ಸಂಶೋಧನೆ ಮತ್ತು ಅಭಿವೃದ್ಧಿಯ ಒಟ್ಟು ಖಚರ್ಿನಲ್ಲಿ ಮೂರನೇ ಒಂದರಷ್ಟು ಕೊಡುಗೆ ನೀಡುತ್ತಿರುವ ಉದ್ದಿಮೆ ವಲಯ ತನ್ನ ಕೊಡುಗೆಯನ್ನು ಗಣನೀಯವಾಗಿ ಹೆಚ್ಚಿಸಿದಾಗ ಮಾತ್ರ.. ನಂತರ ಅವರು ತನ್ನ ಸರಕಾರದ ಪ್ರಖ್ಯಾತ ಪಿ-ಪಿ-ಪಿ ಮಂತ್ರದ ಉಚ್ಚಾರಣೆ ಮಾಡಿದರು. ಅಂದರೆ ಈ ಗುರಿಸಾಧನೆಯಲ್ಲೂ ಸಾರ್ವಜನಿಕ- ಖಾಸಗಿ-ಪಾಲುದಾರಿಕೆಯ ಮೇಲೆಯೇ ಅವಲಂಬನೆ ! ಸಂಶೋಧನೆ ಮತ್ತು ಅಭಿವೃದ್ಧಿ, ಅಂದರೆ ಆರ್ ಅಂಡ್ ಡಿ ಯನ್ನು ಬೆಳೆಸುವಲ್ಲಿ ಖಾಸಗಿಯವರ ಆಸಕ್ತಿಗೂ ಅವರ ಲಾಭದ ಉದ್ದೇಶ ಸಾಧನೆಗೂ ನೇರ ಅನುಪಾತವಿದೆ ಎಂಬುದು ಸಾರ್ವತ್ರಿಕವಾಗಿ ಗೊತ್ತಿರುವ ಸಂಗತಿ. ಪ್ರಧಾನ ಮಂತ್ರಿಗಳು ಸಾರಿದ ಗುರಿ-ಎಲ್ಲರನ್ನೂ ಒಳಗೊಳ್ಳುವ ಗುರಿಸಾಧನೆಯಲ್ಲಿ ವಿಜ್ಞಾನದ ಪಾತ್ರವಿರಬೇಕು ಎಂದು. ಆದರೆ ಲಾಭವನ್ನು ಗರಿಷ್ಟಗೊಳಿಸುವ ಧೋರಣೆಗಳನ್ನು ಪ್ರೋತ್ಸಾಹಿಸುವುದೆಂದರೆ, ಎಲ್ಲರನ್ನು ಒಳಗೊಳ್ಳುವ ಆ ಗುರಿಯಿಂದ ಮಾರು ದೂರ ಹೋಗುವುದಕ್ಕೆಂದೇ ಹೇಳಿ ಮಾಡಿಸಿದ ಸಂಗತಿ. ಅನ್ವಯಿಕ ಸಂಶೋಧನೆಗೆ ಹಣ ಆಕಷರ್ಿಸುವುದು ಸುಲಭ ಎಂದು ಹೇಳಿಕೊಳ್ಳುತ್ತ ಅವರ ಸರಕಾರ ಇಂತಹ ಖಾಸಗಿ ಹಣವನ್ನು ಆಕಷರ್ಿಸುವಂತೆ ಯೋಜನೆಗಳನ್ನು ರೂಪಿಸುತ್ತದೆ.

ಈ ದಿಕ್ಕಿನಲ್ಲಿ ಯೋಚಿಸುವುದಕ್ಕೆ ಉತ್ತೇಜನೆ ಕೊಡುತ್ತ ಪ್ರಧಾನ ಮಂತ್ರಿಗಳು ಈಗ ಆರ್ ಅಂಡ್ ಡಿ ಗೆ ಕೊಡುವ ಸಾರ್ವಜನಿಕ ಹಣ ಅನ್ವಯಿಕ ಸಂಶೋಧನೆಯ ಬದಲಿಗೆ ಮೂಲಭೂತ ಸಂಶೋಧನೆಯತ್ತಲೇ ಹೆಚ್ಚು ವಾಲಿದೆ ಎಂದು ಗೋಳಾಡಿದರು. ಇದು ಎರಡು ಕಾರಣಗಳಿಂದಾಗಿ ವಿಚಿತ್ರ ಮತ್ತು ಅವೈಜ್ಞಾನಿಕವಾದ ನಿಲುವು. ಭಾರತದಲ್ಲಿ ಮಾನವ ನಾಗರಿಕತೆಯ ಚಾರಿತ್ರಿಕ ಕಾಣಿಕೆಯಿರುವುದು ಮೂಲಭೂತ ವಿಜ್ಞಾನವನ್ನು ಮುಂದೊಯ್ಯುವಲ್ಲಿ, ಸೊನ್ನೆಯ ಕ್ರಾಂತಿಕಾರಕ ಆವಿಷ್ಕಾರ ಅವುಗಳಲ್ಲೊಂದು. ಎರಡನೆಯದಾಗಿ, ಮೂಲಭೂತ ಸಂಶೋಧನೆಗಳ ಆವಿಷ್ಕಾರಗಳು ತಕ್ಷಣವೇ ಉತ್ಪಾದನಾ ಪ್ರಕ್ರಿಯೆಯಲ್ಲಿ ನಾವೀನ್ಯತೆಗಳನ್ನು ತರಲಾರವು. ಆದರೂ ಮಾನವ ನಾಗರಿಕತೆಯನ್ನು ಆಧುನೀಕರಿಸುವಲ್ಲಿ ಅದು ಅತ್ಯಂತ ಮಹತ್ವದ ಪಾತ್ರವನ್ನು ವಹಿಸಿದೆ. ಎಡಿಸನ್ನನ ವಿದ್ಯುತ್ ಬಲ್ಬ್ ಸಂಶೋಧನೆ, ಮಾಕರ್ೊನಿ ಕಂಡು ಹಿಡಿದ ರೇಡಿಯೋ ತರಂಗಗಳು ಅಥವ ಗ್ರಹಂ ಬೆಲ್ನ ತಂತಿ ಸಂಪರ್ಕ ಈಗಿನ ವಿದ್ಯುಚ್ಛಕ್ತಿ, ರೇಡಿಯೊ ಮತ್ತು ಟೆಲಿಫೋನಿಗೆ ಹಾದಿ ಮಾಡಿಕೊಟ್ಟವು. ಇವುಗಳಿಲ್ಲದಿದ್ದರೆ ಆಧುನಿಕ ಜಗತ್ತು ಈಗಿರುವಂತೆ ಇರುತ್ತಿರಲಿಲ್ಲ. ಹಿಂದಿದ್ದ ಸೋವಿಯೆತ್ ಒಕ್ಕೂಟ ಸ್ಪುಟ್ನಿಕ್ ಉಡಾವಣೆ ಮಾಡದಿರುತ್ತಿದ್ದರೆ ಇಂದಿನ ಉಪಗ್ರಹಗಳು ಇರುತ್ತಿರಲಿಲ್ಲ, ಇವೀಗ ನಮ್ಮ ಆಧುನಿಕ ಜೀವನದ ಅವಿಭಾಜ್ಯ ಅಂಗ. ಏಕೆಂದರೆ ಇವಿಲ್ಲದಿದ್ದರೆ ಟಿವಿ ಇರುತ್ತಿರಲಿಲ್ಲ, ಮೊಬೈಲ್ ಫೋನ್ ಇರುತ್ತಿರಲಿಲ್ಲ, ಇಮೇಲ್ ಗಳು ಇರುತ್ತಿರಲಿಲ್ಲ.

ಮೂಲಭೂತ ಸಂಶೋಧನೆಯಲ್ಲಿ ಆರ್ ಅಂಡ್ ಡಿಯನ್ನು ಬಲಪಡಿಸುವ ಬದಲು ಪ್ರಧಾನ ಮಂತ್ರಿಗಳು ಖಾಸಗಿ ಲಾಭಗಳನ್ನು ಹಿಗಿಸಲು ಪಿಪಿಪಿ ಯ ಮೇಲೆ ಒತ್ತು ಹಾಕಿದ್ದಾರೆ. ಇಂತಹ ಯೋಚನಾ ಲಹರಿ ಆಧುನಿಕ ಭಾರತದಲ್ಲಿ ರಾಮಾನುಜಂಗಳನ್ನು, ಬೋಸ್ಗಳನ್ನು ಸೃಷ್ಟಿಸುವುದು ಸಾಧ್ಯವೇ ಇಲ್ಲ.

ಐದು ಭದ್ರತೆಗಳ ಅಜೆಂಡಾ
ಹೊಸ ವರ್ಷದ ಮುನ್ನಾದಿನ ರಾಷ್ಟ್ರವನ್ನುದ್ದೇಶಿಸಿ ಮಾಡಿದ ಭಾಷಣದಲ್ಲಿ ಕೂಡ ಕಂಡು ಬಂದದ್ದು ಇಂತಹುದೇ ಯೋಚನಾ ಲಹರಿ. ಅವರು ಐದಂಶಗಳ ಅಂಜೆಂಡಾವನ್ನಿಟ್ಟರು: ರಾಷ್ಟ್ರೀಯ ಭದ್ರತೆ, ಆಥರ್ಿಕ ಭದ್ರತೆ, ಇಂಧನ ಭದ್ರತೆ, ಪರಿಸರ ಭದ್ರತೆ ಮತ್ತು ಜೀವನಾಧಾರದ ಭದ್ರತೆ(ಜನತೆಗೆ ಶಿಕ್ಷಣ, ಆಹಾರ, ಆರೋಗ್ಯ ಮತ್ತು ಉದ್ಯೋಗ).

ರಾಷ್ಟ್ರೀಯ ಭದ್ರತೆಯನ್ನು ಬಲಪಡಿಸುವ ವಿಷಯದಲ್ಲಿ ವಿವಾದವಾಗಲೀ, ಭಿನ್ನಾಭಿಪ್ರಾಯವಾಗಲೀ ಇಲ್ಲ. ಆದರೆ ಜೀವನಾಧಾರದ ಭದ್ರತೆಯ ಗುರಿ ಮಾತ್ರ, ಉಳಿದ ಮೂರು ಅಜೆಂಡಾಗಳ ಸಾಧನೆಯಲ್ಲಿ ಮತ್ತೆ ಖಾಸಗಿ ಲಾಭಗಳನ್ನು ಹಿಗ್ಗಿಸುವ ಪ್ರಧಾನಿಗಳ ಪಥ್ಯವನ್ನು ಅಳವಡಿಸಿದರೆ ದೂರದ ಕನಸಾಗಿಯೇ ಉಳಿಯುತ್ತದೆ.

ಆಥರ್ಿಕ ಭದ್ರತೆ ಎಂದರೆ ಅವರಿಗೆ ದೇಶದ ಹೆಚ್ಚುತ್ತಿರುವ ಹಣಕಾಸು ಕೊರತೆಯನ್ನು ಕಡಿಮೆ ಮಾಡುವುದು. ಇದಕ್ಕೆ ಸಬ್ಸಿಡಿಗಳನ್ನು ಕಡಿತಗೊಳಿಸಬೇಕಾಗುತ್ತದೆ ಎನ್ನುತ್ತಾರೆ ಪ್ರಧಾನ ಮಂತ್ರಿಗಳು. ಸದ್ಯಕ್ಕೆ ಸಬ್ಸಿಡಿಗಳ ಮೊತ್ತ ವಾಷರ್ಿಕವಾಗಿ ಒಂದು ಲಕ್ಷ ಕೋಟಿಯಾಗುತ್ತದೆ ಎಂದು ಇತ್ತೀಚೆಗೆ ಸಂಸತ್ತಿಗೆ ತಿಳಿಸಲಾಯಿತು. ಆದರೆ ಪೆಟ್ರೋಲಿಯಂ ವಲಯದಲ್ಲಿನ ತೆರಿಗೆಗಳಿಂದಲೇ ತಾನು 1,30,000 ಕೋಟಿ ರೂ. ಗಳಿಸಿರುವುದಾಗಿ ಸರಕಾರವೇ ಒಪ್ಪಿಕೊಂಡಿದೆ. ಅಂದರೆ, ಜನರೇ ಪೆಟ್ರೋಲಿಯಂ ಉತ್ಪನ್ನಗಳಿಗೆ ಹೆಚ್ಚಿನ ಬೆಲೆ ತೆತ್ತು ಸರಕಾರಕ್ಕೇ ಸಬ್ಸಿಡಿ ಕೊಡುತ್ತಿದ್ದಾರೆ ಎಂಬುದಂತೂ ಸ್ಪಷ್ಟ.

ಕಳೆದ ಮೂರು ವರ್ಷಗಳ ಬಜೆಟ್ ದಸ್ತಾವೇಜುಗಳ ಪ್ರಕಾರ ಕಳೆದ ಮೂರು ವರ್ಷಗಳಲ್ಲಿ ಸರಕಾರ ತನಗೆ ಕಾನೂನಿನ ಪ್ರಕಾರ ಬರಬೇಕಾಗಿದ್ದ ರೂ. 14,28,028 ಗಳನ್ನು ಬಿಟ್ಟು ಕೊಟ್ಟಿದೆ. ಇವುಗಳಲ್ಲಿ ರೂ.3,63,875 ಕಾಪರ್ೊರೇಟುಗಳಿಗೆ ಮತ್ತು ಶ್ರೀಮಂತರಿಗೆ ಕೊಟ್ಟಿರುವ ರಿಯಾಯ್ತಿಗಳು. ಇಂತಹ ರಿಯಾಯ್ತಿಗಳ ಎದುರು ಈ ವರ್ಷದ ರೂ. 4,65, 000 ಕೋಟಿ ಹಣಕಾಸು ಕೊರತೆ ನಗಣ್ಯವಾಗಿ ಬಿಡುತ್ತದೆ. ಸಿರಿವಂತರಿಗೆ ಕೊಡುವ ಇಂತಹ ಸಬ್ಸಿಡಿಗಳನ್ನು ಬೆಳವಣಿಗೆಗೆ ಕೊಡುವ ಉತ್ತೇಜನೆ ಎನ್ನಲಾಗುತ್ತದೆ, ಅತ್ತ ಹೇಗೋ ಜೀವ ಹಿಡಿದುಕೊಂಡಿರುವ ನಮ್ಮ ಎಂಭತ್ತು ಕೋಟಿ ಜನತೆ ಬದುಕುಳಿಯಲು ಏನೇನೂ ಸಾಲದಾಗಿರುವ ಸಬ್ಸಿಡಿಗಳು ದೇಶದ ಆಥರ್ಿಕ ಭದ್ರತೆಗೆ ಹೊರೆಗಳಂತೆ !

ಪ್ರಧಾನ ಮಂತ್ರಿಗಳು ಹೇಳುವ ಜನರ ಜೀವನಾಧಾರದ ಭದ್ರತೆ ಈ ರೀತಿಯಲ್ಲಿ ಸಾಧ್ಯವೇ? ಹೀಗೆ ಬಿಟ್ಟು ಕೊಟ್ಟ ತೆರಿಗೆಗಳನ್ನು ವಸೂಲಿ ಮಾಡಿ ನಮಗೆ ಅತ್ಯಂತ ಅಗತ್ಯವಾಗಿರುವ ಮೂಲರಚನೆಗಳನ್ನು ಕಟ್ಟಿದರೆ ಇದು ಸಾಧ್ಯ. ಇದು ದೊಡ್ಡ ಪ್ರಮಾಣದಲ್ಲಿ ಉದ್ಯೋಗಗಳನ್ನು ಸೃಷ್ಟಿಸಿ ಬದುಕುಳಿಯಲು ಅವಕಾಶ ಮಾಡಿ ಕೊಡುತ್ತದೆ. ಇದದೀಗ ಕೆಳಗಿಳಿಯುತ್ತಿರುವ ನಮ್ಮ ಒಟ್ಟು ಆಂತರಿಕ ಬೇಡಿಕೆಯನ್ನು ಹೆಚ್ಚಿಸಿ ನಮ್ಮ ತಯಾರಿಕಾ ವಲಯಕ್ಕೆ ಬಹುವಾಗಿ ಬೇಕಾಗಿರುವ, ಆಮೂಲಕ ಒಟ್ಟಾರೆ ಬೆಳವಣಿಗೆಗೆ ಬೇಕಾಗಿರುವ ಆವೇಗವನ್ನು ಒದಗಿಸಬಲ್ಲದು.

ವೈರುಧ್ಯಮಯ
ಇಂಧನ ಭದ್ರತೆಯನ್ನು ಸಾಧಿಸುವುದಕ್ಕೆ ಸಂಬಂಧಪಟ್ಟಂತೆ ಪ್ರಧಾನ ಮಂತ್ರಿಗಳು ಭಾರತದ ಇಂಧನ ಬೆಲೆಗಳನ್ನು ಜಾಗತಿಕ ದರಗಳೊಂದಿಗೆ ಹೊಂದಿಸುವ ದಾಟಿಯಲ್ಲಿ ಮಾತಾಡಿದರು. ಭಾರತದಲ್ಲಿನ ನಿಜವಾದ ಉತ್ಪಾದನಾ ಖಚರ್ು ಏನೇ ಇರಲಿ, ಈ ರೀತಿಯ ಹೊಂದಾಣಿಕೆ ಯೆಂದರೆ, ಭಾರತದ ಜನಸಾಮಾನ್ಯ ತೈಲ ಕಂಪನಿಗಳ ಬೃಹತ್ ಪ್ರಮಾಣದ ಕಡಿಮೆ ವಸೂಲಿಯನ್ನು (ನಿಜವಾದ ನಷ್ಟವಲ್ಲ, ಆಮದು ಬೆಲೆಸಾಮ್ಯತೆಯ ಆಧಾರದಲ್ಲಿ ಲೆಕ್ಕಹಾಕಿದ ತೋರಿಕೆಯ ನಷ್ಟ) ಭತರ್ಿ ಮಾಡಲು ಸತತವಾಗಿ ಬೆಲೆಯೇರಿಕೆಗಳನ್ನು ಎದುರಿಸುತ್ತಲೇ ಇರಬೇಕು. ಇಂಡಿಯನ್ ಆಯಿಲ್ ಕಾಪರ್ೊರೇಶನ್ನಿನ ಇತ್ತೀಚಿನ ಆಡಿಟ್ ಆದ ಲೆಕ್ಕಪತ್ರದ ಪ್ರಕಾರ ಅದಕ್ಕೆ ನಷ್ಟವೇನೂ ಆಗಿಲ್ಲ, ಬದಲಿಗೆ ರೂ.10,998 ಕೋಟಿ ಲಾಭವಾಗಿದೆ. ಆದರೆ ಮೀಸಲು ಮಿಗುತೆ ರೂ. 49,470 ಕೋಟಿ. ಇನ್ನು ವಿದ್ಯುತ್ತನ್ನೂ ಜಾಗತಿಕ ಬೆಲೆಗಳೊಂದಿಗೆ ಹೊಂದಾಣಿಕೆ ಮಾಡಿದರೆ, ಜನಗಳ ಮೆಲೆ ಇನ್ನಷ್ಟು ಹೊರೆ, ಕಾಪರ್ೊರೇಟುಗಳಿಗೆ ಮತ್ತಷ್ಟು ಲಾಭ.

ಅದೇ ರೀತಿ, ಪರಿಸರ ಭದ್ರತೆಯ ಕಾಳಜಿಗಳು ನಮ್ಮ ಜನಗಳ ಇಂಧನ ಭದ್ರತೆಯ ಅಗತ್ಯಗಳಿಗೆ ವಿರುದ್ಧವಾಗಿರಲು ಸಾಧ್ಯವಿಲ್ಲ. ಇತ್ತೀಚಿನ ದಬರ್ಾನ್ ವಾತಾವರಣ ಬದಲಾವಣೆ ಶೃಂಗ ಸಭೆಯಲ್ಲಿ, ಮುಂದುವರೆದ ದೇಶಗಳಿಂದ ಅವುಗಳ ಇಂಗಾಲ ಉತ್ಸರ್ಜನೆಯನ್ನು ಕಡಿಮೆ ಮಾಡುವ ವಚನವನ್ನು ಪಡೆಯದೆಯೇ, ಭಾರತ ಏಕಪಕ್ಷೀಯವಾಗಿ ನಮ್ಮ ಉತ್ಸರ್ಜನೆಗಳನ್ನು ಕಡಿತ ಮಾಡುವ ಮಾತು ಕೊಟ್ಟಿದೆ. ಅಮೆರಿಕಾದಲ್ಲಿನ ತಲಾ ಉತ್ಸರ್ಜನೆ ಭಾರತದ 20 ಪಟ್ಟು. ಇಂಧನ ಉತ್ಪಾದನೆಯನ್ನು ಗಮನಾರ್ಹವಾಗಿ ಹೆಚ್ಚಿಸದೆ ಬಡತನ ಮಟ್ಟಗಳನ್ನು ಇಳಿಸುವುದು ಸಾಧ್ಯವಾಗದು ಎಂದು ಪ್ರಧಾನಮಂತ್ರಿಗಳೇ ಹೇಳಿದ್ದಾರೆ. ಇಂದು ನಮ್ಮ ಕುಟುಂಬಗಳಲ್ಲಿ ಮೂರನೇ ಒಂದು ಭಾಗಕ್ಕೂ ಹೆಚ್ಚು ನೇರ ವಿದ್ಯುತ್ ಸಂಪರ್ಕವನ್ನು ಪಡೆದಿಲ್ಲ, ಸುಮಾರು ಮೂರನೇ ಎರಡರಷ್ಟು ಕುಟುಂಬಗಳಿಗೆ ಮೂಲಭೂತ ನೈರ್ಮಲ್ಯ ವ್ಯವಸ್ಥೆಯಿಲ್ಲ. ನಮ್ಮ ಮಕ್ಕಳಲ್ಲಿ ಅರ್ಧಕ್ಕೂ ಹೆಚ್ಚು ಮಂದಿ ಕುಪೋಷಣೆಯಿಂದ ನರಳುತಿದ್ದರೆ, ಪ್ರತಿ ಮೂರು ಗಭರ್ಿಣಿಯರಲ್ಲಿ ಇಬ್ಬರು ರಕ್ತಹೀನತೆಯಿಂದ ನರಳುತ್ತಿದ್ದಾರೆ.

ಹೀಗೆ, ನಮ್ಮ ಪ್ರಧಾನ ಮಂತ್ರಿಗಳ ಕಾಳಜಿಗಳು ಅತ್ಯಂತ ವೈರುಧ್ಯಮಯವಾಗಿವೆ ಮತ್ತು ಆ ಮೂಲಕ ನಮ್ಮ ಜನಗಳ ಜೀವನಾಧಾರದ ಭದ್ರತೆಯ ಬಗ್ಗೆ ಅವರ ಕಾಳಜಿ ಟೊಳ್ಳಾಗಿ ಬಿಟ್ಟಿದೆ. ಜನಗಳ ಜೀವನಾಧಾರ ಉತ್ತಮಗೊಳ್ಳಬೇಕಾದರೆ, ನಮ್ಮ ನವ-ಉದಾರವಾದಿ ಆಥರ್ಿಕ ಸುಧಾರಣೆಗಳ ದಿಕ್ಪಥವನ್ನು ಬದಲಿಸಲೇ ಬೇಕು. ಏಕೆಂದರೆ ಇವುಗಳ ಉದ್ದೇಶ ಖಾಸಗಿ ಲಾಭಗಳನ್ನು ಉಬ್ಬಿಸುವುದಷ್ಟೇ. 2012ರ ವರ್ಷ ಜನಗಳ ಒತ್ತಡದ ವರ್ಷವಾಗಬೇಕಾಗಿದೆ, ಜನಗಳನ್ನು ಬೃಹತ್ ಪ್ರಮಾಣದಲ್ಲಿ ಅಣಿನೆರೆಸಿ, ಜನಗಳಿಗೆ ನಿಜವಾದ ಜೀವನಾಧಾರ ಭದ್ರತೆಯನ್ನು ಒದಗಿಸಬಲ್ಲ ಒಂದು ಉತ್ತಮ ಭಾರತವನ್ನು ಕಟ್ಟುವ ದಿಕ್ಕಿನಲ್ಲಿ ಸರಕಾರ ತನ್ನ ಧೋರಣೆಗಳ ದಿಕ್ಕನ್ನು ಬದಲಿಸುವಂತೆ ಅದರ ಮೇಲೆ ಒತ್ತಡ ಹೇರಬೇಕಾಗಿದೆ.
0

Donate Janashakthi Media

Leave a Reply

Your email address will not be published. Required fields are marked *