ಸಂಪುಟ – 06, ಸಂಚಿಕೆ 08, ಫೇಬ್ರವರಿ, 19, 2012
ಯುಪಿಎ-2 ರಂತಹ ಯಾವುದೇ ದಿಕ್ಕು-ದೆಸೆ ಇಲ್ಲದಂತೆ ಕಾಣುವ, ಜತೆಗೆ ಹತ್ತು ಹಲವು ಹಗರಣಗಳು, ಭ್ರಷ್ಟಾಚಾರಗಳು ಮತ್ತು ವಿವಾದಗಳಿಗೆ ಅದರಂತೆ ತುತ್ತಾಗಿರುವ ಇನ್ನೊಂದು ಸರಕಾರವನ್ನು ನಾವು ಕಂಡಿಲ್ಲ. ಆದರೆ ಜನ-ವಿರೋಧಿ ನವ-ಉದಾರವಾದಿ ಸುಧಾರಣೆಗಳನ್ನು ಅವಿಶ್ರಾಂತವಾಗಿ ಅನುಸರಿಸುವಲ್ಲಿ ಮಾತ್ರ ಅದರದ್ದು ಏಕಚಿತ್ತದ ಸಮರ್ಪಣಾ ಭಾವ! ಈಗ ನಡೆಯುತ್ತಿರುವ ಚುನಾವಣೆಗಳ ಫಲಿತಾಂಶ ಕೆಲವು ರಾಜ್ಯಗಳಲ್ಲಿ ತಮ್ಮ ಪರವಾಗಿರುತ್ತದೆಂಬ ನಿರೀಕ್ಷೆಯಿಂದ ಮತ್ತು ಏರುತ್ತಿರುವ ಹಣಕಾಸು ಕೊರತೆಯನ್ನು ತಡೆಯುವ ಹೆಸರಿನಲ್ಲಿ ಪ್ರಸಕ್ತ ಬಜೆಟಿನಲ್ಲಿ ಒಂದು ಹೆಚ್ಚು ಆಕ್ರಾಮಕವಾದ ಉದಾರೀಕರಣದ ದಾಳಿ ಆರಂಭಿಸಲು ಅದು ಸಿದ್ಧಗೊಳ್ಳುತ್ತಿದೆ. ಇದನ್ನು ತಡೆಯಲು, ಅದರ ಧೋರಣೆಗಳ ದಿಕ್ಕನ್ನು ಬದಲಾಯಿಸಲು ಜನತೆಯ ಒತ್ತಡಗಳು ಹೆಚ್ಚ ಬೇಕಾಗಿದೆ.
ಉತ್ತರ ಪ್ರದೇಶದಲ್ಲಿ ಸಾಗಿರುವ ವಿಧಾನ ಸಭಾ ಚುನಾವಣೆಗಳು ಸಹಜವಾಗಿಯೇ ಬಹಳಷ್ಟು ಭಾವೋದ್ರೇಕ ಮತ್ತು ಕಹಿಯನ್ನು ಉಂಟು ಮಾಡಿವೆ. ಮುಂದಿನ ಹದಿನೈದು ದಿನಗಳಲ್ಲಿ ಇದು ತಾರಕಕ್ಕೆ ಏರುವುದು ಖಂಡಿತ. ಇದಕ್ಕೆ ಕಾರಣಗಳು ಹಲವು. ಒಂದೆಡೆ, ಅಧಿಕಾರಸ್ಥರ ವಿರುದ್ಧ ಸಾಮಾನ್ಯವಾಗಿ ಇರುವ ಭಾವನೆಯನ್ನು ಎದುರಿಸುತ್ತಿರುವ ಬಿಎಸ್ಪಿ, ಇನ್ನೊಂದೆಡೆ, ಹತಾಶ ಸ್ಪಧರ್ೆಯಲ್ಲಿರುವ ಎಸ್ಪಿ, ಮತ್ತೊಂದೆಡೆಯಲ್ಲಿ, ಹರಿದು ಹಂಚಿ ಹೋದಂತಿರುವ ಬಿಜೆಪಿ ಬಾಬ್ರಿ ಮಸೀದಿಯ ಧ್ವಂಸಕ್ಕೆ ಕಾರಣವಾದ ತನ್ನ ಗತವೈಭವ(!)ವನ್ನು ಮರಳಿ ಪಡೆಯಲು ಹೆಣಗುತ್ತಿದೆ, ಮಗದೊಂದು ಕಡೆ ದೇಸೀ ಯುವ ಪೀಳಿಗೆಯ ನೇತೃತ್ವದಲ್ಲಿ ಕಾಂಗ್ರೆಸ್ ಎಬ್ಬಿಸುತ್ತಿರುವ ಗದ್ದಲ-ಇಂತಹ ತೀಕ್ಷ್ಣ ಧ್ರುವೀಕರಣಗೊಂಡಿರುವ ಚತುಷ್ಕೋಣ ಸ್ಪಧರ್ೆ ಬಹಳಷ್ಟು ಧೂಳು ಎಬ್ಬಿಸಿದೆ.
ಮಹತ್ವದ ಸಂಗತಿಯೆಂದರೆ, ಉತ್ತರಪ್ರದೇಶದ ಫಲಿತಾಂಶಗಳು ಸದಾ ರಾಷ್ಟ್ರೀಯ ರಾಜಕಾರಣದ ಮೆಲೆ ಪರಿಣಾಮ ಬೀರಿದೆ. ಅದು ಈಗಲೂ ದೇಶದ ಅತಿ ಹೆಚ್ಚು ಜನಸಂಖ್ಯೆಯ ರಾಜ್ಯ. ಲೋಕಸಭೆಯಲ್ಲಿ ಅದರ ಸಂಖ್ಯೆ ಹಲವು ಬಾರಿ ಕೇಂದ್ರ ಸರಕಾರ ಮತ್ತು ಅದರ ಮುಖಂಡತ್ವದ ಸಂಯೋಜನೆಯನ್ನು ನಿರ್ಧರಿಸುತ್ತದೆ. ದೇಶಕ್ಕೆ ಅತಿ ಹೆಚ್ಚು ಸಂಖ್ಯೆಯ ಪ್ರಧಾನ ಮಂತ್ರಿಗಳನ್ನು ಕೊಟ್ಟಿರುವ ರಾಜ್ಯ ಅದು.
ಅಷ್ಟೇ ಅಲ್ಲ, ಸದ್ಯದ ಸನ್ನಿವೇಶದಲ್ಲಿ, ಅಲ್ಲಿ ತ್ರಿಶಂಕು ವಿಧಾನ ಸಭೆ ಏರ್ಪಟ್ಟಲ್ಲಿ, ಬಹುಮತ ಸ್ಥಾಪಿಸಲಿಕ್ಕಾಗಿ ಏರ್ಪಡುವ ಸಂಯೋಜನೆಗಳು ಮತ್ತು ಕಸರತ್ತುಗಳು ಕೇಂದ್ರದಲ್ಲಿನ ಮೈತ್ರಿಕೂಟದ ಸಮತೋಲನದ ಮೇಲೂ ಗಮನಾರ್ಹ ಪ್ರಭಾವ ಬೀರಲಿವೆ. ಹೀಗಿರುವಾಗ ಈ ಚುನಾವಣೆಗಳು ಇಂತಹ ಪ್ರಚಾರಕ್ಕೆ ಕಾರಣವಾಗಿರುವಲ್ಲಿ ಆಶ್ಚರ್ಯವೇನಿಲ್ಲ.
ಅಪೂರ್ವ ಸರಕಾರ!
ಈಗ ಸಂಸತ್ತಿನ ಬಜೆಟ್ ಅಧಿವೇಶನ ಇದರ ಮತ್ತು ಪಂಜಾಬ್, ಉತ್ತರಾಖಂಡ, ಮಣಿಪುರ ಮತ್ತು ಗೋವಾದಲ್ಲಿನ ಫಲಿತಾಂಶಗಳಿಗೆ ಕಾಯಬೇಕಾಗಿದೆ. ದೇಶ ಇದಕ್ಕೆ ಕಾಯುತ್ತಿರುವಾಗ, ನಾವೂ ಅದರೊಂದಿಗೆ ಕಾಯೋಣ. ಆದರೆ, ಇತ್ತೀಚಿನ ಅವಧಿಯಲ್ಲಿ ಮನಮೋಹನ ಸಿಂಗ್ ನೇತೃತ್ವದ ಯುಪಿಎ-2 ರಂತಹ ಯಾವುದೇ ದಿಕ್ಕು-ದೆಸೆ ಇಲ್ಲದಂತೆ ಕಾಣುವ, ಜತೆಗೆ ಹತ್ತು ಹಲವು ಹಗರಣಗಳು, ಭ್ರಷ್ಟಾಚಾರಗಳು ಮತ್ತು ವಿವಾದಗಳಿಗೆ ಅದರಂತೆ ತುತ್ತಾಗಿರುವ ಇನ್ನೊಂದು ಸರಕಾರವನ್ನು ನಾವು ಕಂಡಿಲ್ಲ.
ಸುಪ್ರಿಂ ಕೋಟರ್್ 2ಜಿ ಪರವಾನಿಗೆಗಳನ್ನು ರದ್ದು ಮಾಡಿದೆ, ಈ ಮೂಲಕ ಇದರಲ್ಲಿ ಹಗರಣವೇ ಇರಲಿಲ್ಲ, ‘ಖಜಾನೆಗೆ ಆಗಿರುವ ನಷ್ಟ ಸೊನ್ನೆ’ ಮತ್ತು ‘ಅಕ್ರಮ’ ಏನೂ ನಡೆದಿಲ್ಲ ಎಂಬ ದೂರಸಂಪರ್ಕ ಮಂತ್ರಿಗಳ ದಾವೆಗಳ ನಿರಾಕರಣೆಯಾಗಿದೆ. ಹೊಸ ಕಿತ್ತಾಟಗಳು ಎದ್ದು ಬಂದಿವೆ, ಸೇನಾ ಮುಖ್ಯಸ್ಥರ ವಯಸ್ಸಿನ ವಿವಾದ ಎದ್ದಿದೆ, ಇಸ್ರೊ ವಿಜ್ಞಾನಿಗಳು ಅಂತರಿಕ್ಷ ಹಗರಣ ಕುರಿತಂತೆ ಸರಕಾರದ ದಾವೆಗಳನ್ನು ನಿರಾಕರಿಸುತ್ತಿದ್ದಾರೆ ಮತ್ತು ಆಂಧ್ರ ಪ್ರದೇಶದಲ್ಲಿ ಐಎಎಸ್ ಅಧಿಕಾರಿಗಳು ಸಿಬಿಐ ಆಳುವ ರಾಜಕಾರಣಿ ಗಳನ್ನು ಮಾತ್ರ ಬಿಟ್ಟು ತಮ್ಮ ವಿರುದ್ಧ ಮಾತ್ರವೇ ಭ್ರಷ್ಟಾಚಾರಗಳ ಆಪಾದನೆಗಳ ಮೇಲೆ ಕ್ರಮ ಕೈಗೊಳ್ಳುತ್ತಿದೆೆಯೆಂದು ಪ್ರತಿಭಟಿಸಿದ್ದಾರೆ.
ಈ ನಡುವೆ, ಜನತೆಯ ಮೆಲೆ ಬೆಲೆಯೇರಿಕೆಯ ಹೊರೆಗಳು ಹೆಚ್ಚುತ್ತಲೇ ಇವೆ, ರೈತರ ಹತಾಶ ಆತ್ಮಹತ್ಯೆಗಳು ನಿಲ್ಲದೆ ಸಾಗಿವೆ. ಸ್ವತಃ ಪ್ರಧಾನ ಮಂತ್ರಿಗಳೇ ನಮ್ಮ ಮಕ್ಕಳ ಪೋಷಣಾಂಶ ಪರಿಸ್ಥಿತಿ ಒಂದು ‘ರಾಷ್ಟ್ರೀಯ ಅವಮಾನ’ ಎಂದು ಒಪ್ಪಿಕೊಂಡಿದ್ದಾರೆ. ನಮ್ಮ ದೇಶದಲ್ಲಿ ವೈಜ್ಞಾನಿಕ ಸಂಶೋಧನೆಯನ್ನು ಅಭಿವೃದ್ಧಿ ಪಡಿಸುವಲ್ಲಿಯೂ ಪರಿಸ್ಥಿತಿ ಶೋಚನೀಯವಾಗಿದೆ ಎಂದೂ ಅವರು ಮರುಗಿದ್ದಾರೆ. ಇದು ನಮ್ಮ ಭವಿಷ್ಯದ ಮೇಲೆ ಪ್ರತಿಕೂಲ ಪರಿಣಾಮ ಬೀರುತ್ತದೆಯೆಂಬುದು ಖಂಡಿತ. ಯುಪಿಎ ಮಿತ್ರಪಕ್ಷಗಳೊಂದಿಗೆ ಸಮಸ್ಯೆಗಳ ಬೆಟ್ಟವೇ ನಿಮರ್ಾಣವಾಗುತ್ತಿದೆ, ಜತೆಗೆ ಜನಸಾಮಾನ್ಯರ ಪರವಾಗಿ ಮೊಸಳೆ ಕಣ್ಣೀರು ಮತ್ತು ಮಧೆ-ಮಧ್ಯೆ ತೃಣಮೂಲ ಕಾಂಗ್ರೆಸಿನ ಅವಾಂತರಗಳು.
ಆಕ್ರಾಮಕ ಅಜೆಂಡಾ
ಈ ಬೆಳವಣಿಗೆಗಳನ್ನು ಭಂಡತನದಿಂದ ಬದಿಗೊತ್ತುವಲ್ಲಿ ಸರಕಾರ ತೋರುತ್ತಿರುವ ವಿಶ್ವಾಸವನ್ನು ಕಂಡರೆ ಈಗ ನಡೆಯುತ್ತಿರುವ ಚುನಾವಣೆಗಳ ಫಲಿತಾಂಶ ಕೆಲವು ರಾಜ್ಯಗಳಲ್ಲಿ ತಮ್ಮ ಪರವಾಗಿರುತ್ತದೆಂದು ಅದು ಸಮಾಧಾನ ಪಡುತ್ತಿರುವಂತೆ ಕಾಣುತ್ತದೆ. ಉತ್ತರಾಖಂಡ ಮತ್ತು ಪಂಜಾಬನ್ನು ಪ್ರತಿಪಕ್ಷಗಳಿಂದ ಕಿತ್ತುಕೊಳ್ಳುತ್ತೇವೆ, ಗೋವಾ ಮತ್ತು ಮಣಿಪುರದಲ್ಲಿ ಸಂಖ್ಯೆಗಳ ಕಸರತ್ತು ನಡೆಸಬಹುದು ಮತ್ತು ಉತ್ತರ ಪ್ರದೇಶದಲ್ಲಿ ಅಧಿಕಾರ ಯಾರ ಕೈಗೆ ಹೋಗಬೇಕೆಂಬುದನ್ನು ತಾವೇ ನಿರ್ಧರಿಸುವಂತಹ ಸನ್ನಿವೇಶ ನಿಮರ್ಾಣವಾಗಬಹುದೆಂಬ ನಿರೀಕ್ಷೆಯನ್ನು ಅದು ಇಟ್ಟುಕೊಂಡಿದೆ. ಪ್ರಮುಖ ಪ್ರತಿಪಕ್ಷ ಬಿಜೆಪಿಯಲ್ಲಿ ಕಾಣಬರುತ್ತಿರುವ ಕಸಿವಿಸಿ ಮತ್ತು ಈ ನಿರೀಕ್ಷೆಗಳ ಈಡೇರಿಕೆ ತನಗೆ ಬಿರುಗಾಳಿಯನ್ನು ಎದುರಿಸಿ ನಿಲ್ಲಲು ಅವಕಾಶ ಕೊಡಲಿದೆ ಎಂಬುದು ಯುಪಿಎ ಭಾವನೆ.
ಇದರ ಆಧಾರದಲ್ಲಿ ಯುಪಿಎ ಪ್ರಸಕ್ತ ಬಜೆಟಿನಲ್ಲಿ ಒಂದು ಹೆಚ್ಚು ಆಕ್ರಾಮಕವಾದ ಉದಾರೀಕರಣದ ದಾಳಿ ಆರಂಭಿಸಲು ಸಿದ್ಧಗೊಳ್ಳುತ್ತಿದೆ. ಬೇರೆ ರೀತಿಯಲ್ಲೂ, ಏರುತ್ತಿರುವ ಹಣಕಾಸು ಕೊರತೆಯನ್ನು ತಡೆಯುವ ಹೆಸರಿನಲ್ಲಿ ಇಂತಹ ಒಂದು ಅಜೆಂಡಾ ಇಟ್ಟುಕೊಳ್ಳಲಾಗಿದೆ.
ಮೇಲೆ ಹೇಳಿರುವಂತೆ ಈ ಸರಕಾರ ಎಲ್ಲ ವಿಧಗಳಲ್ಲೂ ಒಂದು ದಿಕ್ಕುಗೇಡಿಯಾಗಿ ಗಾಳಿ ಬಂದತ್ತ ತೇಲಿ ಹೋಗುತ್ತಿರುವಂತೆ ಕಂಡರೂ, ನವ-ಉದಾರವಾದಿ ಸುಧಾರಣೆಗಳನ್ನು ಅವಿಶ್ರಾಂತವಾಗಿ ಅನುಸರಿಸುವಲ್ಲಿ ಮಾತ್ರ ಅದರದ್ದು ಏಕಚಿತ್ತದ ಸಮರ್ಪಣಾ ಭಾವ!
ಯುಪಿಎ-2 ಸರಕಾರ, ಎಡಪಕ್ಷಗಳು ಕಳೆದ ಏಳು ವರ್ಷಗಳಿಂದ ಕಾನೂನಾಗದಂತೆ ತಡೆದಿರುವ ಪ್ರಮುಖ ಹಣಕಾಸು ಸುಧಾರಣೆಗಳನ್ನು ಈ ಬಜೆಟಿನಲ್ಲಿ ತರಲು ಸರ್ವಸನ್ನದ್ಧವಾಗಿದೆ. ಈ ರೀತಿ ಹಣಕಾಸು ವಲಯವನ್ನು ತೆರೆಯದಿದ್ದುದೇ ಜಾಗತಿಕ ಕುಸಿತದ ವಿನಾಶಕಾರಿ ಪರಿಣಾಮಗಳನ್ನು ಪ್ರತಿರೋಧಿಸುವಲ್ಲಿ ಭಾರತಕ್ಕೆ ನೆರವಾದದ್ದು ಎಂಬ ನಮ್ಮ ಸ್ವಂತ ಅನುಭವದಿಂದಲೂ ಪಾಟ ಕಲಿಯಲು ಅದು ನಿರಾಕರಿಸುತ್ತಿದೆ.
ಈ ಹಿಂದೆ ಈ ಅಂಕಣದಲ್ಲಿ ಹೇಳಿದಂತೆ, ಶ್ರೀಮಂತ ದೇಶಗಳ ಬಳಿ ಈಗ ಮುಂದುವರೆಯುತ್ತಿರುವ ಆಥರ್ಿಕ ಹಿಂಜರಿತದ ವಿಷವತರ್ುಲವನ್ನು ಬೇಧಿಸಲು ಯಾವ ಹಣಕಾಸು ಅಸ್ತ್ರವೂ ಉಳಿದಿಲ್ಲ ಎಂದು ಸ್ವತಃ ವಿಶ್ವಬ್ಯಾಂಕ್ ಎಚ್ಚರಿಸಿರುವಾಗ, ಇನ್ನಷ್ಟು ಹಣಕಾಸು ಉದಾರೀಕರಣದಿಂದ ವಿದೇಶಿ ನಿಧಿಗಳು ಬಂದು ನಮ್ಮ ಬೆಳವಣಿಗೆಗೆ ಉತ್ತೇಜನೆ ಸಿಗುತ್ತದೆ ಎಂಬ ಭಾರತದ ನಿರೀಕ್ಷೆಯೂ ಬಹಳ ದೂರದ ಮಾತಾಗಿರುವಂತೆ ಕಾಣುತ್ತಿದೆ.
ಏಕಮಾತ್ರ ಉತ್ತರ
ಬಂಡವಾಳ ಹೆಚ್ಚು ಮುಕ್ತವಾಗಿ ಮತ್ತು ಕಡಿಮೆ ಖಚರ್ಿನಲ್ಲಿ ಲಭ್ಯವಾಗುವಂತೆ ಮಾಡುವುದರಿಂದಲೇ ಆಥರ್ಿಕ ಬೆಳವಣಿಗೆಗೆ ಉತ್ತೇಜನೆ ಸಿಗಲಾರದು. ಇದರಿಂದ ಅಂತರ್ರಾಷ್ಟ್ರೀಯ ಹಣಕಾಸು ಬಂಡವಾಳದ ಮತ್ತು ಭಾರತೀಯ ದೊಡ್ಡ ಬಂಡವಾಳಗಾರರ ಲಾಭಗಳೇನೋ ಹಿಗ್ಗಬಹುದು. ಆದರೆ ಬಹಳ ದಿನ ಉಳಿಯಬಹುದಾದ ಆಥರ್ಿಕ ಬೆಳವಣಿಗೆ ಜನತೆಯ ಖರೀದಿ ಸಾಮಥ್ರ್ಯ ಹೆಚ್ಚದೆ ಸಾಧ್ಯವಾಗುವುದಿಲ್ಲ.
ಶ್ರೀಮಂತರಿಗೆ ಅಪಾರ ಮೊತ್ತಗಳ ತೆರಿಗೆ ರಿಯಾಯ್ತಿಗಳನ್ನು (ಕಳೆದ ಮೂರು ವರ್ಷಗಳಲ್ಲಿ ಸುಮಾರು 15 ಲಕ್ಷ ಕೋಟಿ ರೂ.ಗಳಷ್ಟು) ಕೊಡುವ ಬದಲು ಈ ಮೊತ್ತಗಳನ್ನು ವಸೂಲಿ ಮಾಡಿ ಅವನ್ನು ಬಹಳ ಆವಶ್ಯಕವಾದ ಸಾಮಾಜಿಕ ಮತ್ತು ಆಥರ್ಿಕ ಮೂಲರಚನೆಗಳನ್ನು ಕಟ್ಟಲು ಸಾರ್ವಜನಿಕ ಹೂಡಿಕೆಗಾಗಿ ಬಳಸಬೇಕು, ಇದರಿಂದ ಉದ್ಯೋಗಾವಕಾಶಗಳೂ ನಿಮರ್ಾಣವಾಗುತ್ತವೆ ಎಂದು ನಾವು ಮತ್ತೆ-ಮತ್ತೆ ಹೇಳುತ್ತಾ ಬಂದಿದ್ದೇವೆ. ಇದರಿಂದ ಮಾತ್ರವೇ ದೇಶದೊಳಗಿನ ಬೇಡಿಕೆಗಳು ಬೆಳವಣಿಗೆ ಹೊಂದಿ ಒಂದು ಆರೋಗ್ಯಕರ ಮತ್ತು ಬಹಳ ಕಾಲ ಉಳಿಯಬಲ್ಲ ಆಥರ್ಿಕ ಬೆಳವಣಿಗೆ ಸಾಧ್ಯವಾಗುತ್ತದೆ, ಇದು ಎಲ್ಲರನ್ನು ಒಳಗೊಳ್ಳುವ ಬೆಳವಣಿಗೆಯೂ ಅಗುತ್ತದೆ.
ಬಂಡವಾಳಶಾಹಿ ಬಿಕ್ಕಟ್ಟಿನ ವಿರುದ್ಧ ವಿಶ್ವಾದ್ಯಂತ ಹೋರಾಟಗಳು ಹೆಚ್ಚುತ್ತಿವೆ ಎಂಬುದು ‘ವಾಲ್ ಸ್ಟ್ರೀಟ್ ಆಕ್ರಮಿಸಿಕೊಳ್ಳಿ’ ಚಳುವಳಿಯಲ್ಲಿ ಮತ್ತು ಸುಮಾರಾಗಿ ಯುರೋಪಿನ ಎಲ್ಲ ದೇಶಗಳಿಗೂ ವ್ಯಾಪಿಸುತ್ತಿರುವ ಮುಷ್ಕರಗಳು ಮತ್ತು ಪ್ರತಿಭಟನೆಗಳಲ್ಲಿ ಕಾಣಬರುತ್ತಿದೆ. ಆದಾಗ್ಯೂ ಬಂಡವಾಳಶಾಹಿಗೆ ಗೋಡೆಯ ಮೇಲಿನ ಅತಿ ದಪ್ಪಕ್ಷರದ ಬರಹಗಳನ್ನೂ ಉಪೇಕ್ಷಿಸುವ ಒಂದು ಪ್ರವೃತ್ತಿ ಇದೆ. ಬಂಡವಾಳಶಾಹಿ “ಎಂತಹ ದೈತ್ಯ ಪ್ರಮಾಣದ ಉತ್ಪಾದನಾ ಮತ್ತು ವಿನಿಮಯ ಸಾಧನಗಳನ್ನು ಸೃಷ್ಟಿಸಿಕೊಂಡಿದೆಯೆಂದರೆ, ಅದರ ಪರಿಸ್ಥಿತಿ ತನ್ನ ಮಂತ್ರದಂಡದಿಂದ ಅಧೋಲೋಕದಿಂದ ಆವಾಹಿಸಿಕೊಂಡ ಶಕ್ತಿಗಳನ್ನು ತಾನೇ ಹತೋಟಿಯಲ್ಲಿಡಲಾಗದ ಮಾಂತ್ರಿಕನಂತಾಗಿದೆ” ಎಂದು ಮಾಕ್ಸರ್್ ಒಂದೊಮ್ಮೆ ಹೇಳಿದ್ದರು. ಈ ಜಾಗತಿಕ ಬಂಡವಾಳಶಾಹಿ ಬಿಕ್ಕಟ್ಟು ವ್ಯವಸ್ಥಾಗತವಾದದ್ದು. ಅದು ಯಾವುದೇ ಕೆಲವು ವ್ಯಕ್ತಿಗಳ ದುರಾಸೆ ಅಥವ ಹಣದಾಹದಿಂದ ಹುಟ್ಟಿಕೊಂಡದ್ದಲ್ಲ. ಆದ್ದರಿಂದ, ಈ ಅಂಕಣದಲ್ಲಿ ಮತ್ತೆ-ಮತ್ತೆ ಹೇಳಿರುವಂತೆ, ಸಮಾಜವಾದ ಮಾತ್ರವೇ ಮಾನವ ಕುಲದ ಉದ್ಧಾರ ಮತ್ತು ವಿಮೋಚನೆಯನ್ನು ಸಾಧಿಸಲು ಇರುವ ಏಕಮಾತ್ರ ಉತ್ತರ.
ಈ ದೀರ್ಘ ಕಾಲದ ಹೋರಾಟ ಭಾರತದಲ್ಲಿ ಮುಂದುವರೆಯುತ್ತಿರುವಾಗಲೇ, ಸದ್ಯಕ್ಕೆ, ಈ ನವ-ಉದಾರವಾದಿ ಧೋರಣೆಗಳ ದಿಕ್ಕನ್ನು ಬದಲಾಯಿಸಲು ಮತ್ತು ನಮ್ಮ ಬಹು ಆವಶ್ಯಕ ಸಾಮಾಜಿಕ ಮತ್ತು ಆಥರ್ಿಕ ಮೂಲರಚನೆಗಳನ್ನು ಕಟ್ಟಲು ಮತ್ತು ಇದರಿಂದ ದೊಡ್ಡ ಪ್ರಮಾಣದಲ್ಲಿ ಉದ್ಯೋಗಾವಕಾಶಗಳನ್ನು ನಿಮರ್ಿಸಲು ಭಾರೀ ಪ್ರಮಾಣದಲ್ಲಿ ಸಾರ್ವಜನಿಕ ಹೂಡಿಕೆ ಮಾಡುವಂತೆ ಜನತೆ ಒತ್ತಡಗಳನ್ನು ಹಾಕಬೇಕಾಗಿದೆ. ಮುಂಬರುವ ಬಜೆಟ್ ಈ ದಿಕ್ಕನ್ನು ತೋರಿಸುವಂತೆ ಮಾಡಬೇಕಾಗಿದೆ.
0