ಉಚಿತ ಭಾಷಣದ ಖಚಿತ ಅನುಮಾನಗಳು! ಮೋದಿ ಯೂ ಟರ್ನ್‌ ಹೊಡೆದದ್ದು ಯಾಕೆ?!

ಲಸಿಕೆ‌ ವಿತರಣೆ ವಿಚಾರವಾಗಿ ಮತ್ತೆ ಕೇಂದ್ರ ಸರಕಾರ ಈಗ ಯೂ ಟರ್ನ್‌ ಹೊಡೆದಿದೆ. ನಿನ್ನೆ ಪ್ರಧಾನಿ ಮೋದಿಯವರು ಭಾಷಣವನ್ನು ಮಾಡಿ ಲಸಿಕೆಯನ್ನು ಉಚಿತವಾಗಿ ನೀಡುವುದಾಗಿ ಹೇಳಿದ್ದಾರೆ.  ಆ ಉಚಿತ ಭಾಷಣ ಹಲವು ಅನುಮಾನಗಳನ್ನು ಖಚಿತ ಪಡಿಸಿದೆ.  ಹಾಗಾದ್ರೆ ಆ ಅನುಮಾನಗಳು ಏನು? ಇದು ಕೂಡ ಪುಕ್ಕಟ್ಟೆ ಭಾಷಣದ ಪಟ್ಟಿಗೆ ಸೇರ್ಪಡೆಯಾಗುತ್ತಾ?

18 ರಿಂದ 44 ವರ್ಷದ ವಯೋಮಾನದವರಿಗೆ ಲಸಿಕೆಯನ್ನು ಉಚಿತವಾಗಿ ನೀಡುವುದಾಗಿ ಹೇಳಿದ್ದ ಕೇಂದ್ರ ಸರಕಾರ ನಂತರ ತನ್ನ ಹೇಳಿಕೆಯನು ವಾಪಸ್ಸ ಪಡೆದು ಶುಲ್ಕವನ್ನು ಪಾವತಿಸಬೇಕು ಎಂದು ಹೇಳಿತ್ತು. ಈಗ ಮತ್ತೆ ಯೂ ಟರ್ನ್‌ ಹೊಡೆದಿದ್ದು ಲಸಿಕೆಯನ್ನು ಉಚಿತವಾಗಿ ನೀಡುವುದಾಗಿ ಘೋಷಣೆಯನ್ನು ಮಾಡಿದೆ. ಅತ್ತ ಸುಪ್ರೀಂ ಕೋರ್ಟ್‌ ಇತ್ತ ಜನಪರ ಸಂಘಟನೆಗಳು, ವಿರೋಧ ಪಕ್ಷಗಳು ಪ್ರಧಾನಿ ಮೋದಿಯವರ ಲಸಿಕಾ ನೀತಿಯ ವಿರುದ್ಧ ಪ್ರಹಾರವನ್ನು ನಡೆಸಿದ್ದರು. ಸುಪ್ರೀಂ ಕೋರ್ಟ್‌ 56 ಇಂಚಿನ ಎದಗೆ ಗದಾ ಪ್ರಹಾರ ಮಾಡಿತ್ತು, ಚುನಾವಣೆಯಲ್ಲಿನ ಸಾಲು ಸಾಲು ಸೋಲುಗಳು, ಕೋವಿಡ್‌ ನಿರ್ವಹಣೆಯಲ್ಲಿ ಹಿನ್ನಡೆ, ಕುಸಿಯುತ್ತಿದ್ದ ಜನಪ್ರೀಯತೆಯನ್ನು ಉಳಿಸಿಕೊಳ್ಳಲು ಮೋದಿ ಯೂ ಟೂರ್ನ್‌ ಹೊಡಯಬೇಕಾಯಿತು.

ಉಚಿತ ಲಸಿಕೆ ಘೋಷಣೆಯ ಹಿಂದೆ ಸುಪ್ರೀಂ ಕೋರ್ಟ್‌ ಮಹತ್ವದ ಪಾತ್ರವನ್ನು ವಹಿಸಿದೆ. ಉಚಿತ ಲಸಿಕೆಗಳನ್ನು ನೀಡುವಂತೆ ಕಾಂಗ್ರೆಸ್‌ ಮತ್ತು ಎಡಪಕ್ಷಗಳು ಸೇರಿದಂತೆ ವಿರೋಧ ಪಕ್ಷಗಳು ಪತ್ರವನ್ನು ಬರೆದಿದ್ದವು.  ಆದರೆ ಸರ್ಕಾರ ಈ ಒತ್ತಾಯಕ್ಕೆ ಪ್ರತಿಕ್ರಿಯೆಯನ್ನು ನೀಡಲಿಲ್ಲ. ನರೇಂದ್ರ ಮೋದಿ ನೇತೃತ್ವದ ಸರ್ಕಾರವನ್ನು ಸುಪ್ರೀಂ ಕೋರ್ಟ್ ಮತ್ತು ದೇಶದ ಹಲವಾರು ನ್ಯಾಯಾಲಯಗಳು ಪ್ರಶ್ನೆಯನ್ನು ಮಾಡಿ ತರಾಟೆಗೆ ತೆಗೆದುಕೊಂಡವು. ಅದಾದ ನಂತರ 18 ವರ್ಷಕ್ಕಿಂತ ಮೇಲ್ಪಟ್ಟ ಎಲ್ಲರಿಗೂ ಉಚಿತವಾಗಿ ಲಸಿಕೆ ನೀಡಲು ಮುಂದಾಯಿತು. ಮುಖ್ಯವಾಗಿ ಕೇರಳ ಸರಕಾರ ಕೇಂದ್ರದ ಲಸಿಕಾ ನೀತಿಯನ್ನು ಪ್ರಶ್ನಿಸಿ ಕೇರಳ ಹೈಕೋರ್ಟ್‌ನಲ್ಲಿ ಆಕ್ಷೇಪವನ್ನು ವ್ಯಕ್ತಪಡಿಸಿತ್ತು. ಲಸಿಕಾ ನೀತಿಯು “ಕಾಳ ಸಂತೆಯನ್ನು ಉತ್ತೇಜಿಸುತ್ತಿದೆ ” ಕೇರಳ ಸರಕಾರ ಆಕ್ಷೇಪ ವ್ಯಕ್ತಪಡಿಸಿದ ನಂತರ  ಭಾರೀ ಚರ್ಚೆಗೆ ಕಾರಣವಾಗಿತ್ತು. ಬೇರೆ ದಾರಿಯಿಲದೆ ಪ್ರಧಾನಿಗಳು ಉಚಿತ ಲಸಿಕಾ ನೀತಿಯನ್ನು ಘೋಷಿಸಬೇಕಾಗಿ ಬಂತು.

ಇದನ್ನೂ ಓದಿ : ಖಾಸಗಿ ವಲಯಕ್ಕೆ 25% ಲಸಿಕೆ ಮೀಸಲಾತಿಯನ್ನು ಹಿಂತೆಗೆದುಕೊಳ್ಳಬೇಕು ಉಚಿತ, ಸಾರ್ವತ್ರಿಕ, ಸಾಮೂಹಿಕ ಲಸಿಕೆ ಅಭಿಯಾನ ಆರಂಭಿಸಬೇಕು – ಸಿಪಿಐ(ಎಂ) ಪೊಲಿಟ್‌ಬ್ಯುರೊ

 

ಇನ್ನ ಈ ಲಸಿಕಾ ನೀತಿ ನಮ್ಮ ಪ್ರಯತ್ನದಿಂದ ಸಿಕ್ಕಿದೆ. ಆದರೆ ಇದರಲ್ಲಿ ಅನೇಕ ಗೋಜಲುಗಳಿವೆ ಅವನ್ನು ಹೇಗೆ ನಿವಾರಿಸುತ್ತಿರಿ ಎಂದು ಕಾಂಗ್ರೆಸ್‌ ಪ್ರತಿಕ್ರಿಯೆ ನೀಡಿದ್ದರೆ, ಖಾಸಗಿ ವಲಯಕ್ಕೆ 25% ಲಸಿಕೆ ಮೀಸಲಾತಿಯನ್ನು ಹಿಂತೆಗೆದುಕೊಳ್ಳಬೇಕು, ಉಚಿತ, ಸಾರ್ವತ್ರಿಕ, ಸಾಮೂಹಿಕ ಲಸಿಕೆ ಅಭಿಯಾನ ಆರಂಭಿಸಬೇಕು ಎಂದು ಸಿಪಿಐಎಂ ಪೊಲಿಟ್‌ ಬ್ಯೂರೊ ಒತ್ತಾಯಿಸಿದೆ. ಮೋದಿ ಸರಕಾರ ತನ್ನ ದೋಷಪೂರ್ಣ ಮತ್ತು ವಿನಾಶಕಾರಿ “ಉದಾರೀಕೃತ ಲಸಿಕೆ ನೀತಿ”ಯನ್ನು ಬಹಳಷ್ಟು ರಾಜ್ಯಗಳು ಬಲವಾದ ವಿರೋಧಿಸಿದ್ದವು ಮತ್ತು ಸುಪ್ರಿಂ ಕೋರ್ಟಿನ ಟೀಕೆಯಿಂದಾಗಿ ಹಿಂತೆಗೆದುಕೊಳ್ಳಲೇಬೇಕಾಗಿ ಬಂದಿದೆ. ಎಲ್ಲ ನಾಗರಿಕರಿಗೆ ಉಚಿತ ಲಸಿಕೆಯ ಆಗ್ರಹವನ್ನು ಅದು ಒಪ್ಪಿಕೊಳ್ಳಬೇಕಾಗಿ ಬಂದಿದೆ ಎಂದು ಸಿಪಿಐ(ಎಂ) ಪೊಲಿಟ್‌ಬ್ಯುರೊ ಹೇಳಿದೆ.

ಪ್ರಧಾನ ಮಂತ್ರಿಗಳು ತಮ್ಮ ರಾಷ್ಟ್ರೀಯ ಪ್ರಸಾರ ಭಾಷಣದ ಮೂಲಕ ರಾಜ್ಯ ಸರಕಾರಗಳ ಮೇಲೆ ಸುಳ್ಳು ಆಪಾದನೆಗಳನ್ನು ಹಾಕಿ, ಹೊಣೆಗಾರಿಕೆಯನ್ನು ಅವುಗಳ ಮೇಲೆ ಹಾಕಲು ಪ್ರಯತ್ನಿಸಿರುವುದು ಖಂಡನಾರ್ಹ. ಜನಗಳು ಇದನ್ನು ತಿರಸ್ಕರಿಸುತ್ತಾರೆ. “ಉದಾರೀಕೃತ ಲಸಿಕೆ ನೀತಿ ಏನಿದೆ ಇದು  ಕೇಂದ್ರ ಸರಕಾರದ ಏಕಪಕ್ಷೀಯ ನಿರ್ಧಾರವಾಗಿತ್ತು ಎನ್ನುವಂತದನ್ನು ಸಿಪಿಐಎಂ ಪೊಲಿಟ್ ಬ್ಯುರೊ  ನೆನಪಿಸಿದೆ.

ಆದರೂ ಈ ವಿಫಲ ಲಸಿಕೆ ನೀತಿಯನ್ನು ಪೂರ್ಣವಾಗಿ ಬದಲಿಸಿಲ್ಲ. ದ್ವಂದ್ವ ಬೆಲೆ ನಿರ್ಧಾರ ನೀತಿಯನ್ನು ಅದು ಮುಂದುವರೆಸುತ್ತಿದೆ. ಈಗಲೂ ಲಸಿಕೆ ಉತ್ಪಾದನೆಯ 25%ದಷ್ಟು ದೊಡ್ಡ ಪ್ರಮಾಣವನ್ನು ಖಾಸಗಿಯವರಿಗೆ ಮೀಸಲಿಡಲಾಗಿದೆ. ಇದು ಖಾಸಗಿ ತಯಾರಕರಿಗೆ ಸೂಪರ್ ಲಾಭಗಳನ್ನು ಲೂಟಿ ಹೊಡೆಯಲು  ಪರವಾನಿಗೆಯನ್ನು ನೀಡಲಾಗಿದೆ  ಎಂದು ಸಿಪಿಐ(ಎಂ) ಟೀಕಿಸಿದೆ.  ಹಾಗಾಗಿ ಖಾಸಗಿ ವಲಯಕ್ಕೆ ಈ 25% ಮೀಸಲಾತಿಯನ್ನು ಹಿಂತೆಗೆದೊಳ್ಳಬೇಕು ಮತ್ತು ಕೇಂದ್ರ ಸರಕಾರ ಭಾರತದೊಳಗೆ ಲಸಿಕೆ ತಯಾರಿಕೆದಾರರಿಂದ ಮತ್ತು ಜಗತ್ತಿನ ಇತರೆಡೆಗಳಿಂದ ಎಲ್ಲ ಲಸಿಕೆಗಳನ್ನು ಪಡೆದುಕೊಳ್ಳಬೇಕು ಹಾಗೂ ರಾಜ್ಯಗಳೊಂದಿಗೆ ಸಮಾಲೋಚನೆ ನಡೆಸಿ ಲಸಿಕೆಗಳನ್ನು ವಿತರಣೆ ಮಾಡಬೇಕು ಎಂದು ಸಿಪಿಐ(ಎಂ) ಪೊಲಿಟ್ ಬ್ಯುರೊ ಆಗ್ರಹಿಸಿದೆ. ಪ್ರಧಾನಿ ಮೋದಿಯವರು ದೇಶವನ್ನು ಉದ್ದೇಶಿಸಿ ಮಾತನಾಡಿದ ನಂತರ 9 ಪ್ರಶ್ನೆಗಳು ಉದ್ಬವಿಸಿವೆ.  ಆ ಪ್ರಶ್ನೆಗಳಿಗೆ ಉತ್ತರಿಸಬೇಕು ಎಂದು ಸಾರ್ವಜನಿಕರು ಪ್ರಶ್ನೆಯನ್ನು ಮಾಡುತ್ತಿದ್ದಿದ್ದಾರೆ. ಆ ಪ್ರಶ್ನೆಗಳನ್ನು ನಾವೀಗ ನೋಡ್ತಾ ಹೋಗೋಣ.

ವ್ಯಾಕ್ಸಿನ್ ಗಳೇ ದೊರಕದಿರುವಾಗ ರಾಜ್ಯಗಳು ಸ್ವತಃ ವ್ಯಾಕ್ಸಿನ್ ಗಳನ್ನು ಕೊಂಡುಕೊಳ್ಳಬೇಕಿತ್ತು ಎಂದು ಹೇಗೆ ಕೇಂದ್ರ ಸರ್ಕಾರ ನಿರೀಕ್ಷಿಸುತ್ತದೆ? ಯಾಕೆ ಅಂದ್ರೆ ರಾಜ್ಯಗಳು ಕೊಂಡುಕೊಳ್ಳಲು ವ್ಯಾಕ್ಸಿನ್ ಅನ್ನು ಕಂಪೆನಿಗಳು ಸಾಕಷ್ಟು ತಯಾರಿಸಿಯೇ ಇಲ್ಲ ಎಂಬುದು ಮೋದಿಯವರಿಗೆ ಗೊತ್ತಿಲ್ಲವೆ?

ಈ ನೀತಿಯನ್ನು ಅಳವಡಿಸಿಕೊಳ್ಳುವ ಮೊದಲು. ಸಾರ್ವಜನಿಕ ಆರೋಗ್ಯ ತಜ್ಞರನ್ನು ಯೋಜನೆಗಾಗಿ ಸಂಪರ್ಕಿಸಲಾಗಿತ್ತೇ? ಅವರು ಹಿಂದಿನ ಯೋಜನೆಯಲ್ಲಿದ್ದ ಅಸಮಾನ ಹಂಚಿಕೆ ಬಗ್ಗೆ ವಿವರಿಸುತ್ತಿದ್ದರು?

ತಜ್ಞರು ಒಂದು ದೇಶಒಂದು ಬೆಲೆಒಂದು ಖರೀದಿ ನೀತಿಗಾಗಿ ಕೇಳಿಕೊಂಡಿದ್ದರು. ಹಾಗಾಗಿ ಎರಡು ರೀತಿಯ ಬೆಲೆ ನಿಗದಿ ಮಾಡಿದ್ದರ ಹಿಂದಿನ ಆಲೋಚನೆಯಾದರು ಏನಿತ್ತು ಮತ್ತು ವ್ಯಾಕ್ಸಿನ್ ನೀಡಲು ಖಾಸಗಿ ಆಸ್ಪತ್ರೆಗಳ ಮೊರೆ ಹೋಗುವ ಅಗತ್ಯ ಏನಿದೆ?

ಅತಿ ದುರ್ಬಲರಾದ ದೀರ್ಘಕಾಲೀನ ರೋಗಿಗಳು, ಯುವ ಮದುಮೇಹಿಗಳು, ವಸತಿ ರಹಿತರು, ಮಾನಸಿಕ ಅಸ್ವಸ್ಥರು, ಖೈದಿಗಳು ಮುಂತಾದವರಿರುವಾಗಲೂ ಎಲ್ಲರಿಗೂ ವ್ಯಾಕ್ಸಿನ್ ಅನ್ನು ಮುಕ್ತವಾಗಿಸಿದ್ದು ಏಕೆ? ವಾರವಷ್ಟೇ ಯು.ಕೆ 30+ ವಯೋಮಾನದವರಿಗೆವ್ಯಾಕ್ಸಿನ್ ನೀಡಿಕೆ ಆರಂಭಿಸಿದ 6 ತಿಂಗಳ ನಂತರ ಮುಕ್ತವಾಗಿಸಿದೆ.

ವ್ಯಾಕ್ಸಿನ್ ತಯಾರಿಕೆಯನ್ನು ತೀವ್ರಗತಿಗೊಳಿಸಲು ಏನು ಮಾಡಲಾಗಿದೆ? ಯಾಕಷ್ಟು ನಿಧಾನಗತಿಯಲ್ಲಿ ವ್ಯಾಕ್ಸಿನ್ ತಯಾರಿಕೆಗೆ ಆದೇಶಿಸಲಾಯಿತು?

ಪೂರಕ ವ್ಯಾಕ್ಸಿನ್ ಉತ್ಪಾದನೆಗಾಗಿ ಸಾರ್ವಜನಿಕ ಕ್ಷೇತ್ರದ ಫಾರ್ಮಾ ಘಟಕಗಳಿಗೆ ಅನುಮತಿ ನೀಡಲು ಸರ್ಕಾರವೇಕೆ ಒಂದು ವರ್ಷಕ್ಕೂ ಹೆಚ್ಚಿನ ಅವಧಿಯನ್ನು ತೆಗೆದುಕೊಂಡಿತು? (ಸಾರ್ವಜನಿಕ ಕ್ಷೇತ್ರದ ಔಷಧಪ್ರಯೋಗಾಲಯಗಳನ್ನು ಆರಂಭದಲ್ಲಿ ಕಡೆಗಣಿಸಿದ್ದೇಕೆ?)ಆರೋಗ್ಯ ಕ್ಷೇತ್ರರಾಜ್ಯ ಸರ್ಕಾರದ ಪಟ್ಟಿಯಲ್ಲಿ ಇನ್ನುಳಿಯಲಾರದು ಎಂದು ಕೇಂದ್ರ ಸರ್ಕಾರದ ಸಚಿವರುಗಳು ಹೇಳಿದ್ದು ಕೇಂದ್ರ ಸರ್ಕಾರದ ಹಿಂದಿನ ನಿರ್ಧಾರವನ್ನು ಸಮರ್ಥಿಸಿಕೊಳ್ಳಲಿಕ್ಕಾಗಿಯೇ?

ವ್ಯಾಕ್ಸಿನ್ ಹಂಚಿಕೆಯನ್ನು ಮತ್ತೆ ಕೇಂದ್ರದ ನಿಯಂತ್ರಣಕ್ಕೆ ಪಡೆದುಕೊಂಡದ್ದು ಸರಿಯೇ, ಆದರೆ ರಾಜ್ಯಗಳಿಗೆ ಅತಿ ತುರ್ತಾಗಿ ಬೇಕಾಗಿರುವ ವ್ಯಾಕ್ಸಿನ್ ಗಳನ್ನು ಸರಬರಾಜು ಮಾಡಲು ಸರ್ಕಾರ ಯಾವ ಯೋಜನೆ ರೂಪಿಸಿದೆ?

ವಿಶ್ವಕ್ಕೆ ಕೋವಿನ್ ಬೇಕಾಗಿರಬಹುದು. ಆದರೆ ಬಹುತೇಕ ಭಾರತೀಯರಿಗೆ ಅದನ್ನು ಬಳಸಲು ಅಸಾಧ್ಯವಾಗಿದೆ. ತಾಂತ್ರಿಕ ಅಡಚಣೆಯನ್ನು ತಪ್ಪಿಸಲು ತಾವು ಏನನ್ನೂ ಮಾಡುವುದಿಲ್ಲವೇ?‌ ಎಂಬ ಪ್ರಶ್ನೆಗಳನ್ನು ಈಗ ಸಾರ್ವ ಜನಿಕರು ಮತ್ತು ವಿರೋಧ ಪಕ್ಷಗಳು ಇಟ್ಟಿವೆ. ಇದಕ್ಕೆ ಮೋದಿ ಉತ್ತರಿಸುತ್ತಾರೋ ಅಥವಾ ಅದಕ್ಕಾಗಿ ಇನ್ನೊಂದು ಭಾಷಣಕ್ಕಾಗಿ ಕಾಯುತ್ತಾರೋ ನೋಡಬೇಕಿದೆ. 

ಲಸಿಕೆ ವಿತರಣೆ ಆರಂಭವಾಗಿ 5 ತಿಂಗಳು ಪೂರ್ಣ ಗೊಂಡಿದೆ. 23 ಕೋಟಿ 61 ಲಕ್ಷದ 98 ಸಾವಿರದ 726 ಜನ ಲಸಿಕೆಯನ್ನು ಹಾಕಿಸಿಕೊಂಡಿದ್ದಾರೆ. ಅಂದ್ರೆ 14% ರಷ್ಟು ಜನ ಲಸಿಕೆಯನ್ನು ಹಾಕಿಸಿಕೊಂಡಿದ್ದರೆ. ಮೊದಲ ಮತ್ತು ಎರಡನೇ ಡೋಸ್‌ ಹಾಕಿಸಿಕೊಂಡವರ ಸಂಖ್ಯೆ %3.5 ಮಾತ್ರ. ಇದಕ್ಕೆ ಕಾರಣ ಏನೂ ಅಂದ್ರೆ ಲಸಿಕೆಯ ಕೊರತೆ ಕಾರಣವಾಗಿದೆ. 5 ತಿಂಗಳಾದ್ರೂ ಕೇವಲ 3.5 ಜನರಿಗೆ ಪೂರ್ಣ ಪ್ರಮಾಣದ ಲಸಿಕೆಯನ್ನು ನೀಡಲಾಗಿದೆ. ದೇಶದಲ್ಲಿ ಲಸಿಕೆಯನ್ನು ಪಡೆಯುವವರ ಸಂಖ್ಯೆ 108 ಕೋಟಿ ಇದೆ. ಇದು ಅವರನ್ನು ತಲುಪುವುದು ಯಾವಾಗ ಎಂಬ ಪ್ರಶ್ನೆ ಸಹಜವಾಗಿ ಕೇಳಿ ಬರ್ತಾಇದೆ.

ಕೇಂದ್ರ ಸರಕಾರ ಲಸಿಕಾ ವಿತರಣೆಯಲ್ಲಿ ವಿಳಂಭವಾಗಿದ್ದಕ್ಕೆ ತಾನೂ ಹೊಣೆಗಾರಿಕೆಯನ್ನೆ ತೆಗೆದುಕೊಳ್ಳಬೇಕಿತ್ತು. ಬದಲಾಗಿ ಆ ವೈಫ್ಯಲಗಳನ್ನು ರಾಜ್ಯ ಸರಕಾರಗಳ ಮೇಲೆ ಹಾಕುವ ಮೂಲಕ ಮತ್ತೊಮ್ಮೆ ತಾನೇ ಬೆತ್ತಲಾಗಿದೆ. ಯಾಕಂದ್ರೆ ಇದು ಯಾರಿಗೂ ತಿಳಿಯದ ವಿಷಯ ಏನೂ ಅಲ್ಲ. ಚಿಕ್ಕ ಮಗವನ್ನು ಕೇಳಿದ್ರೂ ಲಸಿಕೆ ನೀಡುವ ಜವಬ್ದಾರಿ ಕೇಂದ್ರ ಸರಕಾರದ್ದು ಅಂತಾ ಹೇಳ್ತಾವೆ. ಲಸಿಕೆಯನ್ನು ಹೆಚ್ಚಿನ ಪ್ರಮಾಣದಲ್ಲಿ ಸಂಗ್ರಹಿಸಿ ಇಟ್ಟಿದ್ದರೆ ಅದನ್ನು ಮುಕ್ತಮಾರುಕಟ್ಟೆಗೆ ಬಿಡುಗಡೆ ಮಾಡಬಹುದಿತ್ತು. ಬದಲಾಗಿ ಬೇಗನೆ ಮುಕ್ತ ಮಾರುಕಟ್ಟೆಯಲ್ಲಿ ಲಬ್ಯವಾಗುವಂತೆ ಮಾಡಿ  ಉದಾರಿಕೃತ ಲಸಿಕಾ ನೀತಿಯನ್ನು ಜಾರಿಗೆ ತಂದಿದ್ದನ್ನು ಕೇಂದ್ರ ಸರಕಾರ ಮರೆತಂತೆ ಕಾಣುತ್ತದೆ.

ಇನ್ನೂ ಲಸಿಕೆಯನ್ನು ಉತ್ಪಾದಿಸಿಲು ಸರಕಾರಿ ಸ್ವಾಮ್ಯದ  ಔಷಧಿ ಮತ್ತು ಪ್ರಯೋಗಾಲಯಗಳನ್ನು ನಿರ್ಲಕ್ಷಿಸಿಲಾಯಿತು. ಆ ಕಾರಣಕ್ಕಾಗಿಯೇ ಲಸಿಕೆಯ ಕೊರತೆ ಉಂತಾಯಿತು. ಲಸಿಕೆಗಾಗಿ ಬಜೆಟ್‌ ನಲ್ಲಿ ತೆಗೆದಿಟ್ಟಿದ್ದ 35 ಸಾವಿರ ಕೋಟಿ ರೂ ಸರಿಯಾಗಿ ಬಳಕೆ ಮಾಡಲಿಲ್ಲ.  ಆ ಕುರಿತಾಗಿ  ಸುಪ್ರೀಂ ಕೋರ್ಟ್‌ ಪ್ರಶ್ನೆಯನ್ನು ಮಾಡಿತ್ತು, ಜೊತೆಯಲ್ಲಿ,  ಲಸಿಕೆ ಖರೀದಿಗೆ  ನಿಗದಿ ಮಾಡಿದ ಬೆಲೆಯಲ್ಲಿ  ಕೇಂದ್ರ ಮತ್ತು ರಾಜ್ಯಗಳ ನಡುವೆ ವಿಪರೀತ ತಾರತಮ್ಯವಿದೆ. ಯಾಕೆ ರಾಜ್ಯಗಳು ಅದಿಕ ಮೊತ್ತ ಕೊಡಬೇಕು? ಉತ್ತರಿಸಿ ಅಂತಾ ಖಡಕ್ಕಾಗಿ ಕೇಳಿತ್ತು.  ಒಟ್ಟಾರೆ ನಿಮ್ಮ  ‘ಲಸಿಕೆ ನೀತಿ’  ಏನು? ಅಂತಾ  ಜೂನ್ 15 ರೊಳಗೆ  ಉತ್ತರಿಸಬೇಕು ಎಂದು ಆದೇಶಿಸಿತ್ತು. ಇನ್ನೂ ಮೌನವಾಗಿದ್ರೆ ಮೂರು ಕಾಸಿಗೆ ಬೆಲೆ ಇಲ್ಲಂದತಾಗುತ್ತದೆ ಎಂದು ಗೊತ್ತಾಗಿದ್ದೆ ತಡ  ಲಸಿಕೆಯನ್ನು ನಾನು, ನಾನು ಕೊಡುತ್ತೇನೆ ಅಂತಾ ಭಾಷಣ ಮಾಡೋದಕ್ಕೆ ಮುಂದಾದ್ರು.

ಒಂದು ಪ್ರಮುಖ ವಿಚಾರವನ್ನು ನಾವಿಲ್ಲಿ ಗಮನಿಸಬೇಕು. ಹೋದ ವರ್ಷವೇ ಸೀರಂ ಕಂಪನಿಯ ಮಾಲೀಕ ಆನಂದ ಪೂನವಾಲ ‘ರಾಜ್ಯಗಳಿಗೆ ಲಸಿಕೆ ವಿತರಿಸಲು ಅಗತ್ಯವಾದ 80,000  ಕೋಟಿ ನಿಮ್ಮ ಬಳಿ ಇದೆಯೇ  ಎಂದು ಕೇಂದ್ರವನ್ನು ಕೇಳಿದ್ದರು.  ಇದು ಅವರ ಧನದಾಹವನ್ನು ತೋರಿಸಿದ್ರೂ ಇದು ಆತನ ಖಾಸಗಿ ನೀತಿಯಾಗಿತ್ತು, ಆದರೆ ಆತನ ಪ್ರಶ್ನೆ ಮುಖ್ಯವಾಗಿತ್ತು. ಅದರ ದುರಂತ ಈಗ ಅನುಭವಿಸುತ್ತಿದ್ದೇವೆ. ‌

216 ಕೋಟಿ ಯಷ್ಟು ಲಸಿಕೆ ಈಗ ಬೇಕಿದೆ. ಇಲ್ಲಿನ ಸೀರಂ ಮತ್ತು ಕೋವಾಕ್ಸಿನ್ ಕಂಪನಿಗಳ ವಾರ್ಷಿಕ ಉತ್ಪಾದನಾ ಸಾಮರ್ಥ್ಯ ಕೇವಲ  30-35 ಕೋಟಿ ಮಾತ್ರ. ಈಗ ಮೋದಿ ಸರಕಾರ ಉಚಿತ ಲಸಿಕೆಯನ್ನು ಘೋಷಣೆ ಮಾಡಿದೆ. ಈ ಘೋಷಣೆ ಉದ್ರಿ ಇಲ್ಲವೆ ಪುಕ್ಕಟ್ಟೆ ಭಾಷಣ ಅಂತಾ ಸಾರ್ವಜನಿಕರು ಹೇಳ್ತಾ ಇರೋದು ಇದೇ ಕಾರಣಕ್ಕೆ. ಇಲ್ಲಿಯರಗೆ 23 ಕೋಟಿ ಜನರಿಗೆ ಲಸಿಕೆಯನ್ನು ನೀಡಿದ್ದರೆ ಇನ್ನೂಳಿದ ಲಸಿಕೆಯನ್ನು ಎಲ್ಲಿಂದ ತರುತ್ತಿರಿ? ಲಸಿಕೆಯ ಯೋಜನೆ ಏನು ಎಂಬ ಪ್ರಶ್ನೆಯನ್ನು ಜನ ಕೇಳುತ್ತಿದ್ದಾರೆ. ಉಳಿದ 193 ಕೋಟಿ ಲಸಿಕೆಯನ್ನು ಎಲ್ಲಿಂದ ತರುತ್ತಾರೆ?  ಆಮದು ಮಾಡಿಕೊಳ್ಳಬೇಕು???  ಇದನ್ನು ಎಲ್ಲಿಂದ, ಹೇಗೆ ಖರೀದಿಸುತ್ತಾರೆ, ವಿದೇಶಿ ಕಂಪನಿಗಳೊಂದಿಗೆ ಮಾತುಕತೆಯಾಗಿದೆಯೇ? ಈ ಆಮದಿನ ಅವದಿ ಏನು? ಎಷ್ಟು ವರ್ಷ ಬೇಕಾಗಬಹುದು? ಡಿಸೆಂಬರ್‌ 2021 ರಲ್ಲಿ ದೇಶದ ಎಲ್ಲರಿಗೂ ಲಸಿಕೆ ನೀಡುತ್ತೇವೆ ಎಂಬ ಕೇಂದ್ರದ ಹೇಳಿಕೆ ಪ್ರಾಕ್ಟಿಕಲ್ ಆಗಿದೆಯಾ? ಎಂಬ ಪ್ರಶ್ನೆಗಳು ಈಗ ಹುಟ್ಟಿಕೊಂಡಿವೆ.

ಇದನ್ನೂ ಓದಿ : ರಿಯಲ್‌ ವಾರಿಯರ್ಸ್‌ಗಳಿಗೆ ಇಲ್ಲ ಭದ್ರೆತೆ : ಮೂರು ತಿಂಗಳಿಂದ ವೇತನವೂ ಇಲ್ಲ

ಹಾಗಾಗಿ ಪ್ರಧಾನಿ ಮೋದಿಯವರ ಉಚಿತ ಲಸಿಕಾ ಘೋಷಣೆಯ ಹಿಂದಿನ ಮರ್ಮವನ್ನು ಜನ ಚನ್ನಾಗಿ ಅರಿತಿದ್ದಾರೆ ಖಂಡಿತಾ ಜನರನ್ನು ಮೂರ್ಖರನ್ನಾಗಿಸಲು ನೀವು ಸಾಧ್ಯವಿಲ್ಲ. ಕೋವಿಡ್ ನಿರ್ವಹಣೆಯಲ್ಲಿನ  ನಿಮ್ಮ ವೈಫಲ್ಯತೆ ಜಗಜ್ಜಾಹೀರಾಗಿದೆ. ಮುಂಬುರುವ ಚುನಾವಣೆಗಳಲ್ಲಿ ನಿಮ್ಮ ಅಸ್ತಿತ್ವ ಉಳಿಸಿಕೊಳ್ಳಬೇಕಾಗಿದೆ.  ಉತ್ತರ ಪ್ರದೇಶದ ಚುನಾವಣೆಗೆ ಮುಂಚೆ  ತಮ್ಮ ಹಾಗೂ ಬಿಜೆಪಿಯ ಜನಪ್ರಿಯತೆಗಳನ್ನು ಹೆಚ್ಚಿಸಿಕೊಳ್ಳಲು  ಇತ್ತೀಚಿಗೆ  ಬಿಜೆಪಿ ಪಕ್ಷದ ಹಿರಿಯ ಮುಖಂಡರು ಹಾಗು ಆರೆಸ್ಸೆಸ್ಸಿನ ಮುಖ್ಯಸ್ಥರು ನಡೆಸಿದ ಚಿಂತನ ಮಂಥನದ ಪ್ರತಿಫಲವೇ ಈ  ಭಾಷಣ ಎಂಬ ಆರೋಪಗಳು ಕೇಳಿ ಬರುತ್ತಿವೆ.  ಹಾಗಾಗಿ ನಿಮ್ಮ ಭಾಷಣದಲ್ಲಿ ಘೋಷಿಸರುವ ಅಲ್ಪಸ್ವಲ್ಪ ಪರಿಹಾರಗಳು ಸಹ ಉತ್ತರ ಪ್ರದೇಶಕ್ಕೆ ಲಾಭವಾಗುವುದೇ ವಿನ್ನ ಇತರ ರಾಜ್ಯಗಳಿಗಲ್ಲ ಎನ್ನುವ ಸಂದೇಹವನ್ನು ದೇಶದ ಜನ ವ್ಯಕ್ತಪಡಿಸುತ್ತಿದ್ದಾರೆ.

ಪ್ರಧಾನಿ ಮೋದಿ ಮಾಡಿದ ಭಾಷಣಗಳಲ್ಲಿ ಸುಳ್ಳಿದೆ ಎಂದು ಈ ಎಲ್ಲಾ ಅಂಶಗಳು ಸಾಕ್ಷೀಕರಿಸುತ್ತವೆ. ಇನ್ನಾದರೂ ರಾಜಕೀಯವನ್ನು ಬದಿಗಿರಿಸಿ, ಮಾನವೀಯ ಹೃದಯದಿಂದ ದೇಶವನ್ನು ನೋಡಬೇಕಿದೆ. ಲಸಿಕೆಗಾಗಿ ಇಟ್ಟ 35. ಸಾವಿರ ಕೋಟಿ ರೂ ಹಣವನ್ನು ಖರ್ಚು ಮಾಡಿ ದೇಶದ ಜನರಿಗೆ ಉಚಿತ ಲಸಿಕೆ ನೀಡುವಂತಾಗಲಿ, ಆ ನಿಟ್ಟಿನಲ್ಲಿ ಕೇಂದ್ರ ಸರಕಾರ ಸುಳ್ಳಿನ ಕಂತೆ ಸೃಷ್ಟಿಸುವ ಬದಲು ವಾಸ್ತವ ಕೆಲಸಕ್ಕೆ ಮುಂದಾಗಲಿ.

Donate Janashakthi Media

Leave a Reply

Your email address will not be published. Required fields are marked *