ಸಂಪುಟ – 06, ಸಂಚಿಕೆ 25, ಜೂನ್ 17, 2012
ದೇಶದ ಆಥರ್ಿಕದ ಪುನರುಜ್ಜೀವನಕ್ಕೆ ಹಣಕಾಸು ವಲಯದ ಸುಧಾರಣೆಗಳು ಬಿಟ್ಟರೆ ಬೇರೆ ಪಯರ್ಾಯವೇ ಇಲ್ಲ ಎಂದು ಇಂತಹ ಸುಧಾರಣೆಗಳ ಪರವಾದ ಬಾಡಿಗೆ ಲೇಖಕರ ಆಲಾಪನೆಗಳು ಮತ್ತೆ ಕೇಳಬರುತ್ತಿವೆ. ಅಂತರ್ರಾಷ್ಟ್ರೀಯ ಏಜೆಂಸಿಗಳು ಭಾರತದ ಸಾಲ ಅರ್ಹತೆಯ ಮಟ್ಟವನ್ನು ಇಳಿಸಿರುವುದನ್ನು ಪೂರ್ವ ಸ್ಥಿತಿಗೆ ತರಬೇಕಾದರೆ ಇಂತಹ ಒಂದು ದಾರಿಯನ್ನು ಹಿಡಿಯಬೇಕು ಎಂದು ಅಂತರ್ರಾಷ್ಟ್ರೀಯ ಹಣಕಾಸು ಬಂಡವಾಳ ಭಾರತದ ಮೇಲೆ ಒತ್ತಡ ತರುತ್ತಿದೆ. ಸರಕಾರ ಇದೇ ಸುಸಂದರ್ಭ ಎಂಬಂತೆ ಎಡಪಕ್ಷಗಳು ಯುಪಿಎ-1ರ ಅಧಿಕಾರಾವಧಿಯಲ್ಲಿ ನಿಮರ್ಿಸಿದ, 2008ರ ಜಾಗತಿಕ ಬಿಕ್ಕಟ್ಟಿನ ವಿಧ್ವಂಸದಿಂದ ಭಾರತವನ್ನು ಉಳಿಸಿದ ರಕ್ಷಾಕವಚವನ್ನೇ ಧ್ವಂಸ ಮಾಡ ಹೊರಟಿದೆ.
ಮತ್ತೊಮ್ಮೆ ನವ-ಉದಾರವಾದದ ಪಂಡಿತರು ಸರಕಾರವನ್ನು ಹಣಕಾಸು ವಲಯದಲ್ಲಿ ಇನ್ನಷ್ಟು ಉದಾರೀಕರಣದತ್ತ ತಳ್ಳುವ ನವ-ನವೀನ ಪ್ರಯತ್ನ ನಡೆಸಿದ್ದಾರೆ. ಅವರ ಪ್ರಕಾರ, ಭಾರತೀಯ ಆಥರ್ಿಕದ ಈಗಿನ ನಿಧಾನಗತಿಯನ್ನು ಬದಲಿಸಲು ಇದೊಂದೇ ಉತ್ತರ.
ಭಾರತೀಯ ಆಥರ್ಿಕ ಒಂದು ತೀವ್ರ ಇಳಿಗತಿಯನ್ನು ಅನುಭವಿಸುತ್ತಿದೆ ಎಂಬ ಸಂಗತಿಯನ್ನು ಯಾರೂ ಪ್ರಶ್ನಿಸುವುದಿಲ್ಲ. ಬೆಳವಣಿಗೆ ದರ ಒಂದು ದಶಕದಲ್ಲೇ ಅತೀ ಕೆಳಮಟ್ಟಕ್ಕೆ ಇಳಿದಿದೆ. ಹಣದುಬ್ಬರ ಮತ್ತು ಆವಶ್ಯಕ ಸರಕುಗಳ ಬೆಲೆಗಳು ಏರುತ್ತಲೇ ಇವೆ. ಕೈಗಾರಿಕಾ ಉತ್ಪಾದನೆಯ ಸೂಚ್ಯಂಕ, ಅದರಲ್ಲೂ ತಯಾರಿಕೆಯಲ್ಲಿ ಇತ್ತೀಚಿನ ವರ್ಷಗಳಲ್ಲೇ ಅತಿ ಕಡಿಮೆ ಮಟ್ಟ ದಾಖಲಾಗಿದೆ. ಇಂತಹ ಸುಧಾರಣೆಗಳಿಗಾಗಿ ಒತ್ತಾಸೆ ನೀಡುವವರ ಬೆದರು ಬೊಂಬೆಯೆಂದರೆ ಶೇರು ಮಾರುಕಟ್ಟೆ ಸೂಚ್ಯಂಕ- ಇದು ತನ್ನ ಅತ್ಯುನ್ನತ ಮಟ್ಟದಿಂದ 24ಶೇ.ದಷ್ಟು ಕೆಳಕ್ಕೆ ಬಿದ್ದಿದೆ.
ಇಂತಹ ಸನ್ನಿವೇಶ ಮೊದಲಿನಂತಾಗ ಬೇಕಾದರೆ, ಒಂದು ಆಥರ್ಿಕ ಪುನರುಜ್ಜೀವನಕ್ಕೆ ಬೇರೆ ಪಯರ್ಾಯವೇ ಇಲ್ಲ ಎಂದು ಇಂತಹ ಸುಧಾರಣೆಗಳ ಪರವಾದ ಬಾಡಿಗೆ ಲೇಖಕರು ಹೇಳಿಕೊಳ್ಳುತ್ತಿದ್ದಾರೆ. ಟೈಮ್ಸ್ ಆಫ್ ಇಂಡಿಯಾ ಪತ್ರಿಕೆ ಇನ್ನು ಸಮಯ ಉಳಿದಿಲ್ಲ ಎಂಬ ಶಿರೋನಾಮೆಯ ಸಂಪಾದಕೀಯದಲ್ಲಿ ಇತ್ತೀಚಿನ ಕಾಂಗ್ರೆಸ್ ಕಾರ್ಯಕಾರಿ ಸಮಿತಿಯ ಸಭೆಯ ಚಚರ್ೆಗಳು ಇಂತಹ ಒಂದು ದಾರಿಯ ಅನುಮೋದನೆ ಎಂದು ಬಗೆಯುತ್ತ ಅದೀಗ ಒಂದು ಎಲ್ಲರನ್ನೂ ಪರವಶಗೊಳಿಸುವ ಸಮೂಹಗಾನವಾಗಿದೆ ಎಂದಿದೆ.
ಇದೇ ತನಗೆ ಸಂಕೇತವೆಂಬಂತೆ ಸರಕಾರ ಪೆನ್ಶನ್ ನಿಧಿಯನ್ನು ಖಾಸಗೀಕರಿಸುವ ಹಿಂದಿನ ಸಂಪುಟ ಟಿಪ್ಪಣಿಗೆ ಮರುಜೀವ ಕೊಡಲು ನಿರ್ಧರಿಸಿದೆ. ಈ ಪೆನ್ಶನ್ ನಿಧಿ ನಿಯಂತ್ರಣ ಮತ್ತು ಅಭಿವೃದ್ಧಿ ಪ್ರಾಧಿಕಾರ(ಪಿಎಫ್ಆರ್ಡಿಎ)ದ ಶಾಸನವನ್ನು 2004ರಲ್ಲಿ ತರಬೇಕೆಂದಿತ್ತು. ಎಡಪಕ್ಷಗಳ ವಿರೋಧದಿಂದಾಗಿ ಅದು ಒಂದು ಶಾಸನವಾಗಿ ಬೆಳಕು ಕಾಣಲಿಲ್ಲ. ಈಗ 2011ರಲ್ಲಿ ಬಿಜೆಪಿಯ ಸಕ್ರಿಯ ಬೆಂಬಲದಿಂದ ಅದನ್ನು ಸಂಸತ್ತಿನಲ್ಲಿ ಮಂಡಿಸಲಾಗಿದೆ. ಇದಕ್ಕೆ ಎಡಪಕ್ಷಗಳ ವಿರೋಧದ ಆಧಾರವೆಂದರೆ, ವಿದೇಶಿ ಕಾಪರ್ೊರೇಟುಗಳು ಪೆನ್ಶನ್ ನಿಧಿಗಳ ಹಣವನ್ನು ಅಂತರ್ರಾಷ್ಟ್ರೀಯ ಜೂಜುಕೋರ ವ್ಯವಹಾರ ಗಳಲ್ಲಿ ತೊಡಗಿಸಿ ಕೋಟ್ಯಂತರ ನೌಕರರು ಕಷ್ಟಪಟ್ಟು ಮಾಡಿದ ಉಳಿತಾಯಕ್ಕೆ ಹಾಗೂ ಅವರ ಭವಿಷ್ಯದ ಭದ್ರತೆಗೆ ಸಂಚಕಾರ ತರಬಹುದು ಎಂಬುದು. ನಿಜಕ್ಕೂ ಇಂತಹ ಒಂದು ವಿರೋಧ 2008ರ ಜಾಗತಿಕ ಹಣಕಾಸು ಕುಸಿತದ ಸಂದರ್ಭದಲ್ಲಿ ಭವಿಷ್ಯವಾಣಿ ಯಂತಾಯಿತು. ಈ ಮಸೂದೆ ಅಂದು ಸಂಸತ್ತಿನಲ್ಲಿ ಪಾಸಾಗಿದ್ದಿದ್ದರೆ ಕೋಟ್ಯಂತರ ಭಾರತೀಯ ನೌಕರರ ಭವಿಷ್ಯ ಧ್ವಂಸಗೊಳ್ಳುತ್ತಿತ್ತು. ಅದೇ ರೀತಿ, ನಮ್ಮ ವಿಮಾವಲಯದಲ್ಲಿ ವಿದೇಶಿ ಭಾಗವಹಿಸುವಿಕೆಯನ್ನು ಹೆಚ್ಚಿಸ ಬಯಸುವ ಮತ್ತು ವಿದೇಶಿ ಬ್ಯಾಂಕುಗಳು ಭಾರತೀಯ ಬ್ಯಾಂಕುಗಳನ್ನು ಕೈವಶ ಮಾಡಿಕೊಳ್ಳುವ ಹಕ್ಕನ್ನು ಕೊಡುವ ಮಸೂದೆಗಳಿಗೆ ಎಡಪಕ್ಷಗಳ ವಿರೋಧ ಭಾರತದ ಆಥರ್ಿಕಕ್ಕೆ ಮತ್ತು ಜನತೆಗೆ ಜಾಗತಿಕ ಆಥರ್ಿಕ ಬಿಕ್ಕಟ್ಟಿನ ವಿಧ್ವಂಸಕಾರಿ ಪರಿಣಾಮಗಳು ಇತರೆಡೆಗಳಂತೆ ತಟ್ಟದಂತೆ ಮಾಡುವಲ್ಲಿ ಕಾಣಿಕೆ ನೀಡಿದೆ.
ರಕ್ಷಾಕವಚಕ್ಕೇ ಏಟು
ಇದು ಈ ಸುಧಾರಣೆಗಳ ವಿರುದ್ಧ ಭಾರತೀಯ ಆಥರ್ಿಕವನ್ನು ರಕ್ಷಿಸಲು ಎಡಪಕ್ಷಗಳು ನಿಮರ್ಿಸಿದ ಕವಚ ಎಂದೇ ಹೇಳಬೇಕು. ಈ ಕವಚವನ್ನೇ ಈಗ ಧ್ವಂಸ ಮಾಡುವ ಪ್ರಯತ್ನ ನಡೆದಿದೆ. ಈ ಪ್ರಕ್ರಿಯೆಯಲ್ಲಿ ಯುಪಿಎ-2 ಸರಕಾರ ಭಾರತದಲ್ಲಿ ಅಂತರ್ರಾಷ್ಟ್ರೀಯ ಹಣಕಾಸು ಬಂಡವಾಳ ಮತ್ತು ಭಾರತೀಯ ಕಾಪರ್ೊರೇಟ್ಗಳ ಜೂಜುಕೋರ ಗಳಿಕೆಗಳಿಗೆ ಹೆಚ್ಚಿನ ಮೊತ್ತಗಳನ್ನು ಲಭ್ಯಗೊಳಿಸಿ ಅವರನ್ನು ಸಂತುಷ್ಟಗೊಳಿಸಲು ಯತ್ನಿಸುತ್ತಿದೆ. ಜಾಗತಿಕ ಹಿಂಜರಿತ ಮತ್ತು ಭಾರತದಲ್ಲೂ ಆಂತರಿಕ ಬೇಡಿಕೆಗಳು ಕುಂಠಿತಗೊಂಡಿರುವಾಗ, ಈ ಮೊತ್ತಗಳನ್ನು ಭೌತಿಕ ಉತ್ಪಾದನೆಯ ಮೂಲಕ ಗಳಿಕೆಗಳಿಗೆ ಬಳಸಲಾಗುವುದಿಲ್ಲ ಎಂಬುದು ಸ್ವಯಂವೇದ್ಯ. ಆದ್ದರಿಂದ ಲಾಭಗಳನ್ನು ಗರಿಷ್ಟಗೊಳಿಸಲು ಲಭ್ಯವಿರುವ ಏಕೈಕ ದಾರಿಯೆಂದರೆ ಹೆಚ್ಚೆಚ್ಚು ಸಂಪನ್ಮೂಲಗಳು ಸಟ್ಟಾ ವ್ಯವಹಾರಗಳಿಗೆ ಲಭ್ಯವಾಗುವಂತೆ ಮಾಡುವುದು. ಅಂತರ್ರಾಷ್ಟ್ರೀಯ ಏಜೆಂಸಿಗಳು ಭಾರತದ ಸಾಲ ಅರ್ಹತೆಯ ಮಟ್ಟವನ್ನು ಇಳಿಸಿರುವುದನ್ನು ಪೂರ್ವ ಸ್ಥಿತಿಗೆ ತರಬೇಕಾದರೆ ಇಂತಹ ಒಂದು ದಾರಿಯನ್ನು ಹಿಡಿಯಬೇಕು ಎಂದು ಅಂತರ್ರಾಷ್ಟ್ರೀಯ ಹಣಕಾಸು ಬಂಡವಾಳ ಭಾರತದ ಮೇಲೆ ಒತ್ತಡ ತರುತ್ತಿದೆ.
ಆದ್ದರಿಂದಲೇ ಇಂತಹ ಸುಧಾರಣೆಗಳಿಗೆ ಒತ್ತಡ ಇದರಲ್ಲಿ ದೇಶೀ ವಿಮಾನಯಾನ ಕಂಪನಿಗಳಲ್ಲಿ ವಿದೇಶಿ ಏರ್ಲೈನ್ಗಳು 49ಶೇ, ಬಂಡವಾಳ ಪಾಲುದಾರಿಕೆ ಪಡೆಯಲು ಪರವಾನಿಗೆ ಕೊಡಬೇಕೆಂಬ ಈ ಹಿಂದೆ ಸ್ವತಃ ಯುಪಿಎ ವಿರೋಧಿಸಿದ ಪ್ರಸ್ತಾವವೂ ಇದೆ. ಇಂತಹ ಒತ್ತಡ ಬಂದಿರುವುದು ದೇಶೀ ವಿಮಾನಯಾನ ವಲಯ ಮುಖ್ಯವಾಗಿ ವೈಮಾನಿಕ ಇಂಧನದ ವಿಪರೀತ ಬೆಲೆಗಳಿಂದಾಗಿ ಆಳವಾದ ಬಿಕ್ಕಟ್ಟಿನಲ್ಲಿರುವಾಗ. ಭಾರತದಲ್ಲಿ ವೈಮಾನಿಕ ಇಂಧನದ ವಿಪರೀತ ಬೆಲೆಗಳಿಗೂ ಸರಕಾರವೇ ಹಾಕಿರುವ ವಿಪರೀತ ತೆರಿಗೆಗಳೇ ಕಾರಣ. ಈ ತೆರಿಗೆಗಳನ್ನು ಇಳಿಸಿ ದೇಶೀ ವಿಮಾನಯಾನ ವಲಯಕ್ಕೆ ಮತ್ತು ಒಟ್ಟಾರೆಯಾಗಿ ಇಡೀ ಆಥರ್ಿಕಕ್ಕೆ ಪರಿಹಾರ ಒದಗಿಸುವ ಮೊದಲು, ಸರಕಾರ ಈಗಲೂ ಪೆಟ್ರೋಲಿಯಂ ಉತ್ಪನ್ನಗಳ ಮೇಲಿನ ತೆರಿಗೆಗಳನ್ನು ತನ್ನ ಆದಾಯಗಳಿಗೆ ಕಾಮಧೇನು ಎಂಬಂತೆ ಬಳಸಿಕೊಳ್ಳುತ್ತಿದೆ. ತೆರಿಗೆಗಳನ್ನು ಇಳಿಸುವ ಬದಲು ಸರಕಾರ ಈಗ ದೇಶೀ ಏರ್ಲೈನ್ ಗಳನ್ನು, ನಮ್ಮ ರಾಷ್ಟ್ರೀಯ ವಿಮಾನಯಾನ ಸಂಸ್ಥೆಯನ್ನು ಕೂಡ ವಿದೇಶಿ ಏರ್ಲೈನ್ಗಳು ಅನಿವಾರ್ಯವಾಗಿಯೇ ವಶಪಡಿಸಿಕೊಳ್ಳಲು ಪರವಾನಿಗೆ ಕೊಡಲು ಕೂಡ ಸಿದ್ಧವಾಗಿದೆ. ಇವೆಲ್ಲ ಸುಧಾರಣೆಗಳು ಲಾಭಗಳನ್ನು ಗರಿಷ್ಟಗೊಳಿಸಬಹುದು, ಆದರೆ ದೇಶೀಯ ಆಥರ್ಿಕವನ್ನು ವಾಸ್ತವದಲ್ಲಿ ಪುನರುಜ್ಜೀವನ ಗೊಳಿಸಲು ಏನೇನೂ ನೆರವಾಗದು.
ಇದೆಂತಹಾ ಕಾರ್ಯತಂತ್ರ?
ಪುನರುಜ್ಜೀವನದ ಈ ನವ-ಉದಾರವಾದಿ ಪ್ರಯತ್ನಗಳನ್ನು ಜೂನ್ 4ರಂದು ಒಂದು ಪೂರಕ ವಿದೇಶಿ ವ್ಯಾಪಾರ ನೀತಿಯ ಪ್ರಕಟಣೆಯಲ್ಲಿ ಕಾಣಬಹುದು. ಭಾರತದ ಮುಗ್ಗರಿಸುತ್ತಿರುವ ರಫ್ತುಗಳನ್ನು ಎಬ್ಬಿಸಿ ನಿಲ್ಲಿಸಲು ಸುಮಾರು 1,200 ಕೋಟಿ ರೂ.ಗಳಿಗೂ ಹೆಚ್ಚಿನ ಮೊತ್ತದ ಹಲವು ಉತ್ತೇಜಕಗಳನ್ನು ಪ್ರಕಟಿಸಲಾಗಿದೆ. 2011-12ರಲ್ಲಿ ಭಾರತದ ರಫ್ತು 21ಶೇ.ದಷ್ಟು ಏರಿ 303.7 ಬಿಲಿಯ ಡಾಲರುಗಳನ್ನು ತಲುಪಿತು. ಆದರೆ ಈ ವರ್ಷ, ರೂಪಾಯಿಯ ಮೌಲ್ಯ ತೀವ್ರವಾಗಿ ಇಳಿದರೂ ರಫ್ತು ಮೊತ್ತದ ಹೆಚ್ಚಳ ಕೇವಲ 3.2 ಶೇ.ಕ್ಕೆ ಮುಗ್ಗರಿಸಿದೆ. ರೂಪಾಯಿಯ ಮೌಲ್ಯ ಇಳಿದಾಗ ನಮ್ಮ ಸರಕುಗಳು ವಿದೇಶಗಳಲ್ಲಿ ಅಗ್ಗವಾಗಿ ಸಾಮಾನ್ಯವಾಗಿ ಅವುಗಳ ಮಾರಾಟ ಹೆಚ್ಚಬೇಕು. ಆದರೆ ಹಾಗಾಗುತ್ತಿಲ್ಲ. ಇದಕ್ಕೆ ಕಾರಣ ಆಳಗೊಳ್ಳುತ್ತಿರುವ ಜಾಗತಿಕ ಆಥರ್ಿಕ ಬಿಕ್ಕಟ್ಟು ಮತ್ತು ಹಿಂಜರಿತವೇ. ಸದ್ಯಕ್ಕಂತೂ ಜಾಗತಿಕ ಆಥರ್ಿಕದ ಪುನರುಜ್ಜೀವನದ ಲಕ್ಷಣಗಳೇನೂ, ಎಲ್ಲಿಯೂ ಕಾಣುತ್ತಿಲ್ಲ. ಆದರೂ ಯುಪಿಎ-2 ಸರಕಾರ ನಮ್ಮ ರಫ್ತುಗಳು ಬೆಳವಣಿಗೆ ತೀವ್ರವಾಗಿ ಕುಸಿದಿದ್ದರೂ ಅವನ್ನು ಹೆಚ್ಚಿಸುವ ಏಳು ಅಂಶಗಳ ಕಾರ್ಯತಂತ್ರವನ್ನು ಅಂಗೀಕರಿಸಿದೆ!
ಭಾರತೀಯ ಆಥರ್ಿಕದ ಪುನರುಜ್ಜೀವನ, ನಾವು ಈ ಅಂಕಣದಲ್ಲಿ ಈ ಹಿಂದೆ ಮತ್ತೆ-ಮತ್ತೆ ವಾದಿಸಿರುವಂತೆ, ನಮ್ಮ ದೇಶದೊಳಗಿನ ಬೇಡಿಕೆಯನ್ನು ದೊಡ್ಡ ಪ್ರಮಾಣದಲ್ಲಿ ವಿಸ್ತರಿಸಿದರೆ ಮಾತ್ರ ಸಾಧ್ಯ. ಸದ್ಯ ಇದನ್ನು ವಿಸ್ತರಿಸುವ ಬದಲು ನಿರಂತರ ಬೆಲೆಯೇರಿಕೆಗಳು ಮತ್ತು ಆಥರ್ಿಕ ಅಸಮಾನತೆಗಳನ್ನು ತೀಕ್ಷ್ಣವಾಗಿ ಹೆಚ್ಚಿಸುವ ಮೂಲಕ ತೀವ್ರವಾಗಿ ಕುಗ್ಗಿಸಲಾಗುತ್ತಿದೆ. ಇದನ್ನು ನಿಲ್ಲಿಸಿ ಹಿಂದಿನ ಸ್ಥಿತಿಗೆ ತರಬೇಕಾದರೆ, ಅದು ಆವಶ್ಯಕ ಸರಕುಗಳಲ್ಲಿ ಎಲ್ಲ ಜೂಜುಕೋರ ವಹಿವಾಟುಗಳನ್ನು ನಿಷೇಧಿಸುವ ಮೂಲಕ, ಮತ್ತು, ಮುಖ್ಯವಾಗಿ ನಮ್ಮ ಮೂಲರಚನೆಗಳನ್ನು ಕಟ್ಟಲು ಗಮನಾರ್ಹ ಸಾರ್ವಜನಿಕ ಹೂಡಿಕೆ ಗಳನ್ನು ಮಾಡಿ ದೊಡ್ಡ ಪ್ರಮಾಣದಲ್ಲಿ ಉದ್ಯೋಗಾವಕಾಶಗಳನ್ನು ನಿಮರ್ಿಸಿದರೆ ಮಾತ್ರ ಸಾಧ್ಯ. ಈ ಹಿಂದೆ ಈ ಅಂಕಣದಲ್ಲಿ ವಾದಿಸಿ ದಂತೆ, ಇಂತಹ ಹೂಡಿಕೆಗಳಿಗೆ ಸಂಪನ್ಮೂಲಗಳ ಕೊರತೆಯೇನೂ ಆಗಲಾರದು, ನಮ್ಮ ಹಣಕಾಸು ಕೊರತೆ ಗಳಿಗಿಂತಲೂ ಹೆಚ್ಚಿನ ಪ್ರಮಾಣದ ಬೃಹತ್ ತೆರಿಗೆ ರಿಯಾಯ್ತಿಗಳನ್ನು ನಿಲ್ಲಿಸಿದರಷ್ಟೇ ಸಾಕು.
ನಮ್ಮ ಆಥರ್ಿಕ ಮೂಲಾಂಶಗಳನ್ನು ಬಲಪಡಿಸಲು ಮತ್ತು ನಮ್ಮ ಜನತೆಗೆ ಒಂದು ಉತ್ತಮ ಬದುಕನ್ನು ಒದಗಿಸಲು, ಸರಕಾರ ತನ್ನ ಸದ್ಯದ ಸುಧಾರಣಾ ದಿಕ್ಪಥವನ್ನು ಬಿಟ್ಟು ಮೇಲೆ ಸೂಚಿಸಿರುವ ದಿಕ್ಪಥವನ್ನು ಅಂಗೀಕರಿಸುವಂತೆ ಜನತೆಯ ಬಲಿಷ್ಟ ಮತ್ತು ಶಕ್ತಿಶಾಲಿ ಒತ್ತಡಗಳನ್ನು ಹಾಕಬೇಕಾಗಿದೆ.
0