ಸಂಪುಟ – 06, ಸಂಚಿಕೆ 14, ಏಪ್ರೀಲ್ 01, 2012
ನವ-ಉದಾರವಾದಕ್ಕೆ ಬದ್ಧವಾಗಿರುವ ಮನಮೋಹನ ಸಿಂಗ್ ನೇತೃತ್ವದ ಯುಪಿಎ-2 ಸರಕಾರವೇ ಸ್ವತಃ ಒಬ್ಬ ‘ದಿನಗೂಲಿ ಕೆಲಸಗಾರ’ನಂತೆ ತನ್ನ ಕೆಲಸದ ಅವಧಿಯನ್ನು ಮುಂದುವರೆಸಲು ತನ್ನ ಮೈತ್ರಿಕೂಟದ ಸದಸ್ಯರೊಂದಿಗೆ ಎಲ್ಲ ರೀತಿಯ ರಾಜಿಗಳನ್ನು ಮಾಡಿಕೊಳ್ಳುತ್ತಲೇ ಇರಬೇಕಾದ ಪರಿಸ್ಥಿತಿಗೆ ಇಳಿದಿದೆ. ಆದರೆ ಇಂತಹ ಅಭದ್ರತೆಯನ್ನೇ ಬಳಸಿಕೊಂಡು, ಈ ಯುಪಿಎ-2 ಸರಕಾರ ಮೋಸದ ವ್ಯವಹಾರಗಳನ್ನು ಮತ್ತು ರಾಜಿಗಳನ್ನು ಕುದುರಿಸಿಕೊಂಡೇ ತನ್ನ ಅಸ್ತಿತ್ವವನ್ನು ಮುಂದುವರೆಸುವ, ಮತ್ತು ಆಮೂಲಕ ನವ-ಉದಾರವಾದಿ ಆಥರ್ಿಕ ಸುಧಾರಣೆಗಳ ಅಜೆಂಡಾವನ್ನು ಇನ್ನಷ್ಟು ಅನಾವರಣಗೊಳಿಸಲು ಅನುಕೂಲ ಮಾಡಿಕೊಳ್ಳುವ ಹಾದಿಯಲ್ಲೇ ಮುಂದುವರೆಯುವಂತೆ ಕಾಣುತ್ತಿದೆ.
ಕಾಮರ್ಿಕರ ಉದ್ಯೋಗ ಭದ್ರತೆಯೆಂಬುದನ್ನು ಕ್ರಮೇಣ ನಾಶ ಮಾಡಬೇಕು- ಇದು ನವ-ಉದಾರವಾದ ಮತ್ತು ಅದರ ಆಥರ್ಿಕ ಸುಧಾರಣೆಗಳ ತರ್ಕದಲ್ಲೇ ಅಡಗಿರುವ ಒಂದು ಸಂಗತಿ; ಖಾಯಂ ಕಾಮರ್ಿಕರ ಸ್ಥಾನದಲ್ಲಿ ಕಾಂಟ್ರಾಕ್ಟ್, ತಾತ್ಕಾಲಿಕ ಅಥವ ಕ್ಯಾಶುವಲ್ ಕಾಮರ್ಿಕರನ್ನು ದುಡಿಸಿಕೊಳ್ಳಬೇಕು. ಉದ್ಯೋಗದ ಸ್ವರೂಪದಲ್ಲಿನ ಈ ಬದಲಾವಣೆ ದುಡಿಯುವ ಜನಗಳ ಅಭದ್ರತೆಯನ್ನು ವಿಪರೀತವಾಗಿ ಹೆಚ್ಚಿಸುತ್ತದೆ.
ಈ ತರ್ಕದ ಒಂದು ಛಾಯೆ, ಒಂದು ವಿಭಿನ್ನ ರೀತಿಯಲ್ಲಿ, ನವ-ಉದಾರವಾದಕ್ಕೆ ಬದ್ಧವಾಗಿರುವ ಮನಮೋಹನ ಸಿಂಗ್ ನೇತೃತ್ವದ ಯುಪಿಎ-2 ಸರಕಾರವನ್ನೇ ಬಾಧಿಸುವಂತೆ ಕಾಣುತ್ತಿದೆ. ಅದು ತನ್ನ ಕೆಲಸದ ಅವಧಿಯನ್ನು ಮುಂದುವರೆಸಲು (ಒಬ್ಬ ‘ದಿನಗೂಲಿ ಕೆಲಸಗಾರ’ನಂತೆ) ತನ್ನ ಮೈತ್ರಿಕೂಟದ ಸದಸ್ಯರೊಂದಿಗೆ ಎಲ್ಲ ರೀತಿಯ ರಾಜಿಗಳನ್ನು ಮಾಡಿಕೊಳ್ಳುತ್ತಲೇ ಇರಬೇಕಾದ ಪರಿಸ್ಥಿತಿಗೆ ಇಳಿದಿದೆ. ಇದಕ್ಕೆ ಇತ್ತೀಚಿನ ಉದಾಹರಣೆಯೆಂದರೆ, ಸಂಸತ್ತಿನ ಜಂಟಿ ಅಧಿವೇಶನವನ್ನುದ್ದೇಶಿಸಿ ರಾಷ್ಟ್ರಪತಿಗಳ ಭಾಷಣಕ್ಕೆ ವಂದನೆ ಸೂಚಿಸುವ ಸಾಂಪ್ರದಾಯಿಕ ಠರಾವನ್ನು ಸಂಸತ್ತಿನ ಎರಡೂ ಸದನಗಳು ಅಂಗೀಕರಿಸಿದ ರೀತಿ. ಸರಕಾರ, ಡಿಎಂಕೆಯನ್ನು ತುಷ್ಟೀಕರಿಸಲು ಶ್ರೀಲಂಕಾ ತನ್ನ ತಮಿಳು ಜನಸಂಖ್ಯೆಯ ವಿರುದ್ಧ ಎಸಗಿರುವ ಅಪರಾಧಗಳಿಗೆ ಅದಕ್ಕೆ ಛೀಮಾರಿ ಹಾಕುವ ವಿಶ್ವ ಸಂಸ್ಥೆಯ ನಿರ್ಣಯದ ಪರವಾಗಿ ಮತ ಹಾಕುವ ಭರವಸೆ ಕೊಡಬೇಕಾಯಿತು; ತೃಣಮೂಲ ಕಾಂಗ್ರೆಸಿನೊಂದಿಗೆ ಒಂದು ವ್ಯವಹಾರ ಕುದುರಿಸಲು ರೈಲು ಬಜೆಟ್ ಮಂಡಿಸಿದ ಕೂಡಲೇ ಅದನ್ನು ಮಂಡಿಸಿದ ರೈಲ್ವೇ ಮಂತ್ರಿಯನ್ನೇ ಬದಲಿಸುವ ಅತ್ಯಂತ ವಿಲಕ್ಷಣ ಬೇಡಿಕೆಗೆ ಒಪ್ಪಬೇಕಾಗಿ ಬಂದಿದೆ. ಸಂಸತ್ತಿಗೆ ಬಜೆಟನ್ನು ಮಂಡಿಸಿದ ಒಬ್ಬ ಮಂತ್ರಿ ಅದಕ್ಕೆ ಉತ್ತರ ಕೊಡಲು ಮತ್ತು ಬಜೆಟ್ ಪ್ರಸ್ತಾವಗಳ ಅಂಗೀಕಾರಕ್ಕೆ ಕೇಳಲು, ಅದರ ಮೇಲಿನ ಚಚರ್ೆಗಳನ್ನು ಆಲಿಸಲು ಸಾಧ್ಯವಿರದಿರುವುದು ಬಹುಶಃ ಭಾರತೀಯ ಸಂಸದೀಯ ಇತಿಹಾಸದಲ್ಲೆ ಇದು ಮೊದಲ ಬಾರಿ.
ವಂದನಾ ಠರಾವಿನ ಮೇಲೆ ಮತದಾನದಲ್ಲಿ ಎರಡೂ ಸದನಗಳಲ್ಲಿ ಗೈರು ಹಾಜರಾಗಲು ತೃಣಮೂಲ ಕಾಂಗ್ರೆಸಿಗೆ ಅನುಕೂಲ ಮಾಡಿಕೊಡಲು ಇಂತಹ ವ್ಯವಹಾರ ಅಗತ್ಯವಾಗಿತ್ತು. ಇಷ್ಟೆಲ್ಲಾ ಮಾಡಿದ ಮೇಲೂ ರಾಜ್ಯಸಭೆಯಲ್ಲಿ ಯುಪಿಎ ಗೆ ಬಹುಮತವಿಲ್ಲದ್ದರಿಂದ ಸಮಾಜವಾದಿ ಪಕ್ಷ ಮತ್ತು ಬಹುಜನ ಸಮಾಜ ಪಕ್ಷದೊಂದಿಗೆ ಕೂಡ ಹೊಸ ವ್ಯವಹಾರಗಳನ್ನು ಕುದುರಿಸುವುದು ಅಗತ್ಯವಾಯಿತು ಎಂಬುದು ಸ್ಪಷ್ಟ. ಸದ್ಯಕ್ಕೆ, ಇವು ಎಂತಹ ವ್ಯವಹಾರಗಳು ಎಂಬುದು ಸಾರ್ವಜನಿಕ ಅರಿವಿಗೆ ಬಂದಿಲ್ಲ. ಆದರೆ ಇವೆರಡೂ ಪಕ್ಷಗಳು ಯುಪಿಎ ಯೊಂದಿಗೆ ಮತ ನೀಡಿದ್ದರಿಂದಲೇ ರಾಜ್ಯಸಭೆಯಲ್ಲಿ ಈ ಠರಾವಿನ ಅಂಗೀಕಾರ ಸಾಧ್ಯವಾಯಿತು. ಇದಕ್ಕೆ ಮೊದಲು ಹತ್ತಿ ರಫ್ತಿನ ಮೇಲಿನ ನಿಷೇಧವನ್ನು ಅವಸರವಸರವಾಗಿ ಹಿಂತೆಗೆದುಕೊಳ್ಳಬೇಕಾಗಿ ಬಂದಿತ್ತು; ಏಕೆಂದರೆ, ಅದು ಮಹಾರಾಷ್ಟ್ರದಲ್ಲಿ ಒಂದು ದೊಡ್ಡ ವಿವಾದವಾಗಿ ಎನ್ಸಿಪಿ ಪಕ್ಷ ಅದಕ್ಕೆ ಬಲವಾದ ಆಕ್ಷೇಪಣೆಗಳನ್ನು ಎತ್ತಿತ್ತು.
ಟಿಎಂಸಿ ಇಬ್ಬಂದಿತನ
ಸಾಂದಭರ್ಿಕವಾಗಿ, ಈ ಸಮಸ್ತ ಪ್ರಕ್ರಿಯೆಯಲ್ಲಿ, ತೃಣಮೂಲ ಕಾಂಗ್ರೆಸಿನ ಇಬ್ಬಂದಿತನ ಕಣ್ಣಿಗೆ ರಾಚುವಂತಿದೆ. ಅದು ಕೇಂದ್ರ-ರಾಜ್ಯ ಸಂಬಂಧಗಳನ್ನು ಮತ್ತು ಭಾರತದ ಒಕ್ಕೂಟ ಸ್ವರೂಪವನ್ನು ಉಲ್ಲಂಘಿಸಿದ ‘ರಾಷ್ಟ್ರೀಯ ಪ್ರತಿ-ಭಯೋತ್ಪಾದನಾ ಕೇಂದ್ರ’ದ ರಚನೆಯನ್ನು ಪ್ರಸ್ತಾಪ ಮಾಡಿದ್ದರ ವಿರುದ್ಧ ಗುಡುಗಿತ್ತು. ಆದರೆ ಈ ವಿಷಯದ ಮೆಲೆ ಮತದಾನದ ಸಂದರ್ಭ ಬಂದಾಗ ಬಾಲ ಮುದುಡಿಕೊಂಡಿತು, ಏಕೆಂದರೆ ಕಾಂಗ್ರೆಸಿನೊಂದಿಗೆ ಅದು ವ್ಯವಹಾರ ಕುದುರಿಸಿತ್ತು. ಲೋಕಪಾಲ ಮಸೂದೆಯಲ್ಲಿ ಲೋಕಾಯುಕ್ತದ ಪ್ರಶ್ನೆಯಲ್ಲೂ ಅದು ಇಂತಹುದೇ ವರ್ತನೆ ಪ್ರದಶರ್ಿಸಿತು. ಕೇಂದ್ರ ಸಂಪುಟ ರಾಷ್ಟ್ರಪತಿಗಳ ಭಾಷಣಕ್ಕೆ ಅನುಮತಿ ನೀಡಿದಾಗಲಾಗಲೀ, ಅಥವ ಲೋಕಪಾಲ ಮಸೂದೆಯನ್ನು ಲೋಕಸಭೆಯಲ್ಲಿ ಮಂಡಿಸಲು ಸಂಪುಟ ಅನುಮತಿ ನೀಡಿದಾಗಲಾಗಲೀ ಈ ಯಾವ ಆಕ್ಷೇಪಗಳನ್ನೂ ಅದು ಎತ್ತಿರಲಿಲ್ಲ. ನಂತರವಷ್ಟೇ ಅದಕ್ಕೆ ಜ್ಞಾನೋದಯವಾಗಿದ್ದುದು-ಇವೆಲ್ಲ ಅದರ ವ್ಯವಹಾರ ಕುದುರಿಕೆಗಳನ್ನು ಮರೆಮಾಚುವ ಕ್ಷುಲ್ಲಕ ಪರದೆಗಳಷ್ಟೇ.
ಈ ಎಲ್ಲ ಬೆಳವಣಿಗೆಗಳಿಂದಾಗಿ, ಕಷ್ಟದ ನಿರ್ಣಯಗಳನ್ನು ಕೈಗೊಳ್ಳುವುದು ಮೈತ್ರಿಕೂಟದ ಒತ್ತಡಗಳಿಂದಾಗಿ ಇನ್ನಷ್ಟು ಕಷ್ಟದಾಯಕವಾಗಿದೆ ಎಂದು ಪ್ರಧಾನ ಮಂತ್ರಿಗಳು ಉದ್ಗರಿಸುವಂತಾಗಿದೆ. ಇದಕ್ಕೆ ಎನ್ಸಿಪಿ ಮುಖ್ಯಸ್ಥ ಶರದ್ ಪವಾರ್ರಿಂದ ತೀಕ್ಷ್ಣ ಧಿಕ್ಕಾರವನ್ನೂ ಎದುರಿಸಬೇಕಾಯಿತು. ‘ಇಂತಹ ಸಾರಾಸಗಟು ಹೇಳಿಕೆ ನಮಗೆ ಆತಂಕ ಮತ್ತು ನೋವು ಉಂಟು ಮಾಡಿದೆ’ ಎಂದವರು ಪ್ರತಿಕ್ರಿಯಿಸಿದರು. ಇದು ಈ ಯುಪಿಎ-2 ಸರಕಾರ ತನ್ನ ಮಿತ್ರಪಕ್ಷಗಳ ಬೆದರಿಸುವ ತಂತ್ರಗಳಿಂದಾಗಿ ಸದಾ ಅಂಚಿನಲ್ಲೇ ಇರಬೇಕಾದ ಪರಿಸ್ಥಿತಿಯಲ್ಲಿದೆ ಎಂಬುದನ್ನು ಮತ್ತೊಮ್ಮೆ ದೃಢಪಡಿಸಿದೆ.
ಹಣಕಾಸು ಕೊರತೆಯ ಭೂತ
ಈ ಯುಪಿಎ ಸರಕಾರ ಹೆಜ್ಜೆ-ಹೆಜ್ಜೆಗೂ ಮತ್ತು ಪ್ರತಿಯೊಂದು ಇಟ್ಟಿಗೆ ಇಡುವಾಗಲೂ ವ್ಯವಹಾರಗಳನ್ನು ಮತ್ತು ರಾಜಿಗಳನ್ನು ಕುದುರಿಸಿಕೊಂಡೇ ಬದುಕುಳಿಯಬೇಕಾಗಿ ಬಂದಿದೆ. ಇದು, ಪ್ರಧಾನ ಮಂತ್ರಿಗಳು ತನ್ನ ಇನ್ನಷ್ಟು ನವ-ಉದಾರವಾದಿ ಆಥರ್ಿಕ ಸುಧಾರಣೆಯ ಅಜೆಂಡಾವನ್ನು ಮುಂದೊತ್ತಲು ದೃಢನಿಧರ್ಾರ ಮಾಡಿರುವ ಸಂದರ್ಭದಲ್ಲಿ ಇನ್ನಷ್ಟು ಕಿತ್ತಾಟಗಳತ್ತ ಒಯ್ಯುವುದು ಖಂಡಿತ. ಚಿಲ್ಲರೆ ವ್ಯಾಪಾರದಲ್ಲಿ ಎಫ್ಡಿಐ ಗೆ ಅವಕಾಶ ಕೊಡಬೇಕೆಂದು ಎಡಪಕ್ಷಗಳ ಬಲವಾದ ಪ್ರತಿಭಟನೆಗಳು ಮತ್ತು ವಿರೋಧದ ನಡುವೆಯೂ ಅವರು ಮಾಡಿದ ನಿಧರ್ಾರವನ್ನು ತಡೆಹಿಡಿಯಬೇಕಾದ ಬಲವಂತಕ್ಕೆ ಅವರೀಗ ಒಳಗಾಗಿದ್ದಾರೆ. ಬಜೆಟಿನಲ್ಲಿ ಹಣಕಾಸು ವಲಯದಲ್ಲಿ ಮತ್ತಷ್ಟು ಸುಧಾರಣೆಗಳ ಭರವಸೆ ನೀಡಲಾಗಿದೆ. ಏರುತ್ತಿರುವ ಹಣಕಾಸು ಕೊರತೆ ನಮ್ಮ ಆಥರ್ಿಕವನ್ನೇ ನುಂಗಿ ಹಾಕಬಹುದು ಎಂಬ ಭೀತಿ ಹುಟ್ಟಿಸುವಂತೆ ಚಿತ್ರಿಸಲಾಗುತ್ತಿದೆ. ಆದರೂ, ಕಳೆದ ಹಣಕಾಸು ವರ್ಷದಲ್ಲಿ ಕಾಪರ್ೊರೇಟ್ಗಳಿಗೆ ಮತ್ತು ಶ್ರೀಮಂತರಿಗೆ ಕೊಡಮಾಡಿದ ರಿಯಾಯ್ತಿಗಳ ಮೊತ್ತ ಸುಮಾರು 5.28 ಲಕ್ಷ ಕೋಟಿ ರೂ, ಆಗಿದ್ದರೆ, ಹಣಕಾಸು ಕೊರತೆ ಜಿಡಿಪಿಯ 5.9ಶೇ. ಎನ್ನುವುದಾದರೆ ಅದು 5.22 ಲಕ್ಷ ಕೋಟಿ ರೂ.ಗಳಷ್ಟಾಗುತ್ತದೆ ಎಂಬುದಂತೂ ವಾಸ್ತವ ಸಂಗತಿ. ಅಂದರೆ ಶ್ರೀಮಂತರಿಗೆ ಈ ರಿಯಾಯ್ತಿಗಳನ್ನು ಕೊಡದಿರುತ್ತಿದ್ದರೆ ಈ ಹಣಕಾಸು ಕೊರತೆಯೆಂಬುದೇ ಇರುತ್ತಿರಲಿಲ್ಲ ಎಂದಂತಾಯಿತು!
ಆದರೂ ಹಣಕಾಸು ಕೊರತೆಯ ಭೂತವನ್ನು ತೋರಿಸಿ ಬಜೆಟಿನಲ್ಲಿ ಸಬ್ಸಿಡಿಗಳಲ್ಲಿ ಭಾರೀ ಕಡಿತ ಮಾಡುವ ಪ್ರಸ್ತಾವಗಳನ್ನು (ಇಂಧನಮೇಲೆ ರೂ. 25,000 ಕೋಟಿ ರೂ., ರಸಗೊಬ್ಬರದ ಮೇಲೆ 600ಕೋಟಿ ರೂ.ಇತ್ಯಾದಿ) ಮಂಡಿಸಲಾಗಿದೆ. ಇವು ನೇರವಾಗಿ ಜನಗಳ ಸಂಕಷ್ಟಗಳನ್ನು ಹೆಚ್ಚಿಸುವುದಷ್ಟೇ ಅಲ್ಲ, ಪೆಟ್ರೋಲಿಯಂ ಉತ್ಪನ್ನಗಳ ಬೆಲೆಗಳನ್ನು ಮತ್ತಷ್ಟು ಏರಿಸುವುದಂತೂ ಖಂಡಿತ. ಇದು ನೇರವಾಗಿಯೂ, ಪರೋಕ್ಷವಾಗಿ ಹಣದುಬ್ಬರಕ್ಕೆ ಇನ್ನಷ್ಟು ತುಪ್ಪ ಸುರಿದು- ಹೀಗೆ ಎರಡೂ ರೀತಿಗಳಲ್ಲಿ ಜನಗಳ ಮೇಲೆ ಮತ್ತಷ್ಟು ಹೊರೆಗಳನ್ನು ಹೇರುತ್ತದೆ.
ಸಬ್ಸಿಡಿ ಕಡಿತಕ್ಕೆ ಬೃಹತ್ ಮೋಸ
ಸಬ್ಸಿಡಿಗಳಲ್ಲಿ ಇಂತಹ ಕಡಿತವನ್ನು ಜಾರಿಗೆ ತರಲು ಸಾಧ್ಯವಾಗುವಂತೆ ಸರಕಾರ ಯೋಜನಾ ಆಯೋಗದ ಮೂಲಕ ಒಂದು ಬೃಹತ್ ಸ್ವರೂಪದ ವಂಚನೆಯನ್ನು ಮಾಡಿದೆ, ಬಡತನದ ನಿರೂಪಣೆಯನ್ನು ಬದಲಿಸಿ ಬಡತನದ ರೇಖೆಯ ಕೆಳಗೆ(ಬಿಪಿಎಲ್) ಬದುಕಿರುವವರ ಸಂಖ್ಯೆಯಲ್ಲಿ ಗಮನಾರ್ಹ ಇಳಿಕೆಯಾಗಿದೆಯೆಂದು ತೋರಿಸಿದೆ. ಸಬ್ಸಿಡಿಗಳನ್ನು ಸುಮಾರಾಗಿ ಬಿಪಿಎಲ್ ವಿಭಾಗಗಳಿಗೇ ಸೀಮಿತಗೊಳಿಸಿರುವುದರಿಂದ ಸಬ್ಸಿಡಿಗಳನ್ನು ತೀವ್ರವಾಗಿ ಇಳಿಸಲು ಬಡತನದ ರೇಖೆಯ ಕೆಳಗಿರುವ ಜನಸಂಖ್ಯೆಯನನೇ ಇಳಿಸುವುದು ಅದಕ್ಕೆ ಅಗತ್ಯವಾಗಿದೆ.
ಇದು, ನವ-ಉದಾರವಾದಿ ಆಥರ್ಿಕ ಸುಧಾರಣೆಗಳು ಒಂದೆಡೆ ಜನರಲ್ಲಿ ಆಥರ್ಿಕ ಅಭದ್ರತೆಯ ಭಾವನೆಯನ್ನು ಹೆಚ್ಚಿಸಿ, ಪ್ರತಿ ಹೆಜ್ಜೆಯಲ್ಲೂ ಅವರ ಜೀವನಾಧಾರಗಳಿಗೆ ಸಂಚಕಾರ ತರುತ್ತಿದ್ದರೂ, ಇಂತಹ ಒಂದು ಪ್ರಕ್ರಿಯೆಯಲ್ಲಿ ಸೂಪರ್ ಲಾಭಗಳನ್ನು ಉಬ್ಬಿಸುತ್ತಲೇ ಹೋಗುತ್ತಿದೆ ಎಂಬುದನ್ನು ಮತ್ತೊಮ್ಮೆ ಸಾಬೀತು ಮಾಡುತ್ತದೆ. ಇದೇ ರೀತಿಯಲ್ಲಿ ಯುಪಿಎ-2 ಸರಕಾರದ ಈ ಅಭದ್ರತೆ ಕೂಡ ಇನ್ನಷ್ಟು ಸುಧಾರಣೆಗಳಿಗೆ ಹಾದಿ ಮಾಡಿಕೊಟ್ಟು ಜನರ ಮೇಲೆ ಆಥರ್ಿಕ ಹೊರೆಗಳನ್ನು ಹೇರುತ್ತಲೇ, ಅಂತರ್ರಾಷ್ಟ್ರೀಯ ಮತ್ತು ದೇಶೀ ಬಂಡವಾಳಕ್ಕೆ ಇನ್ನಷ್ಟು, ಮತ್ತಷ್ಟು ಲಾಭಗಳನ್ನು ಉತ್ಪತ್ತಿ ಮಾಡುತ್ತದೆ. ಹೀಗೆ ಈ ಯುಪಿಎ-2 ಸರಕಾರ ಮೋಸದ ವ್ಯವಹಾರಗಳನ್ನು ಮತ್ತು ರಾಜಿಗಳನ್ನು ಕುದುರಿಸಿಕೊಂಡು ತನ್ನ ಅಸ್ತಿತ್ವವನ್ನು ಮುಂದುವರೆಸುವ, ಮತ್ತು ಆಮೂಲಕ ನವ-ಉದಾರವಾದಿ ಆಥರ್ಿಕ ಸುಧಾರಣೆಗಳ ಅಜೆಂಡಾವನ್ನು ಇನ್ನಷ್ಟು ಅನಾವರಣಗೊಳಿಸಲು ಅನುಕೂಲ ಮಾಡಿಕೊಳ್ಳುವ ಹಾದಿಯಲ್ಲೇ ಮುಂದುವರೆಯುವಂತೆ ಕಾಣುತ್ತದೆ.
ಇದು ನಮ್ಮ ಬಹುಪಾಲು ದುಡಿಯುವ ಜನಗಳ ಬದುಕನ್ನು ಮತ್ತಷ್ಟು ಶೋಚನೀಯಗೊಳಿಸುವುದಂತೂ ಖಂಡಿತ. ಈ ಸರಕಾರ ತನ್ನ ಇಂತಹ ಧೋರಣೆಯ ದಿಕ್ಕನ್ನು ಬದಲಿಸುವಂತೆ ಮಾಡಬೇಕಾದರೆ ಅದು ದೊಡ್ಡ ಪ್ರಮಾಣದಲ್ಲಿ ಅಣಿನೆರೆಯುವ ಜನಗಳ ಶಕ್ತಿಯಿಂದ ಮಾತ್ರ ಸಾಧ್ಯ, ಆಗ ಮಾತ್ರವೇ ಜನತೆಗೆ ಸ್ವಲ್ಪ ಮಟ್ಟಿನ ಪರಿಹಾರ ಒದಗಲು ಸಾಧ್ಯ ಎಂಬುದು ದಿನೇ-ದಿನೇ ಹೆಚ್ಚೆಚ್ಚು ಸ್ಪಷ್ಟವಾಗುತ್ತಿದೆ.
0