`ಪೀಪಲ್ಸ್ ಡೆಮಾಕ್ರೆಸಿ’ ವಾರಪತ್ರಿಕೆಯ ಜೂನ್ 14, 2012 ಸಂಚಿಕೆಯ ಸಂಪಾದಕೀಯ
ಸಂಪುಟ – 06, ಸಂಚಿಕೆ 26, ಜೂನ್ 24, 2012
ಮುಂದಿನ ಪ್ರಧಾನ ಮಂತ್ರಿ ಯಾರಾಗಬೇಕು ಎಂಬ ಬಗ್ಗೆ ಆರೆಸ್ಸೆಸ್/ಬಿಜೆಪಿ ಮುಖಂಡರ ನಡುವಿನ ಸಾರ್ವಜನಿಕ ಉಗುಳಾಟಗಳು ಸ್ವಲ್ಪ ರಾಜಕೀಯ ಮನರಂಜನೆ ಕೊಡಬಹುದಾದರೂ, ಮುಂದಿನ ಕೇಂದ್ರ ಸರಕಾರವನ್ನು ರಚಿಸುವವರು ತಾವೇ ಎಂದು ಅವರು ನಿರೀಕ್ಷಿಸುತ್ತಿದ್ದಾರೆ ಎಂಬುದೇ ಅನಿಷ್ಟಕಾರಿ. ಗುಜರಾತಿನ ಹತ್ಯಾಕಾಂಡ, ಅವರ ಅಡಿಯಲ್ಲಿ ಅಮಾನವೀಯ ಕ್ರಿಮಿನಲ್ ಬುದ್ಧಿಯ ಆಳ ಎಷ್ಟಿರಬಲ್ಲುದು, ಧಾಮರ್ಿಕ ಅಲ್ಪಸಂಖ್ಯಾತರ ಭದ್ರತೆಗೆ ಎಂತಹ ಗಂಭೀರ ಸಂಚಕಾರ ಇರಬಲ್ಲುದು ಎಂಬುದನ್ನು ದೇಶಕ್ಕೆ ಮತ್ತು ಜಗತ್ತಿಗೇ ತೋರಿಸಿಕೊಟ್ಟಿದೆ. ಇತ್ತ ಮೋದಿಯ ನೇತೃತ್ವದಲ್ಲಿ ಚೈತನ್ಯಶೀಲ ಗುಜರಾತ್ ಎಂಬ ಮಿಥ್ಯೆ ಬಯಲಿಗೆ ಬಂದಿದೆ. ನಮ್ಮ ಜಾತ್ಯಾತೀತ ಪ್ರಜಾಸತ್ತಾತ್ಮಕ ಗಣರಾಜ್ಯವನ್ನು ರಕ್ಷಿಸಿಕೊಳ್ಳಲು ಭಾರತೀಯ ಜನತೆ ಎಷ್ಟು ಬದ್ಧರಾಗಿದ್ದಾರೆ, ದೃಢತೆಯಿಂದಿದ್ದಾರೆ ಎಂಬುದು ಮತ್ತೊಮ್ಮೆ ಪರೀಕ್ಷೆಗೆ ಒಳಪಡಬಹುದು.
ಆರೆಸ್ಸೆಸ್ ಮತ್ತು ಅದರ ರಾಜಕೀಯ ಅಂಗ ಬಿಜೆಪಿ, ಗಾಳಿಯಲ್ಲಿ ಗೋಪುರ ಕಟ್ಟುತ್ತಿರುವಂತೆ ಕಾಣುತ್ತಿದೆ. ಮುಂದಿನ ಸಾರ್ವತ್ರಿಕ ಚುನಾವಣೆಗಳಿಗೆ ಇನ್ನೂ ಎರಡು ವರ್ಷಗಳಿವೆ. ಅಷ್ಟರಲ್ಲೇ ಮುಂದಿನ ಪ್ರಧಾನ ಮಂತ್ರಿ ಯಾರಾಗಬೇಕು ಎಂದು ಒಂದು ತೀವ್ರ ಆಂತರಿಕ ಕಿತ್ತಾಟ ಸಾರ್ವಜನಿಕವಾಗಿಯೇ ಪ್ರದಶರ್ಿತವಾಗುತ್ತಿದೆ. ಆ ಹಳೆಯ ಯುದ್ಧಕುದುರೆ, ಶ್ರೀಯುತ ಅಡ್ವಾಣಿ ಎಂದೂ ಕೈಚೆಲ್ಲದೆ ಇರುವ ತನ್ನ ನಿಲುವಿಗೆ ಅಂಟಿಕೊಂಡೇ ಇದ್ದಾರೆ. ಬಿಜೆಪಿ ಅಧ್ಯಕ್ಷರು ಸ್ವಲ್ಪ ರಾಜಕೀಯ ತೂಕವನ್ನು ಹೆಚ್ಚಿಸಿ ಕೊಂಡು ಅರ್ಹತೆ ಗಳಿಸುವ ನಿರೀಕ್ಷೆಯಿಂದ ದೈಹಿಕ ತೂಕವನ್ನು ಇಳಿಸಿ ಕೊಳ್ಳುತ್ತಿದ್ದಾರೆ. ಎರಡೂ ಸದನಗಳಲ್ಲಿನ ಪ್ರತಿಪಕ್ಷದ ಮುಖಂಡರರಿಬ್ಬರೂ ಸ್ಪಧರ್ೆಗೆ ಸೇರಿಕೊಂಡಿದ್ದಾರೆ. ಸದ್ಯಕ್ಕೆ ಸಂಸತ್ತಿನಲ್ಲಿರುವ ಮಾಜಿ ಬಿಜೆಪಿ ಅಧ್ಯಕ್ಷರುಗಳು ಕೂಡ ಆಸೆ ಕೈಬಿಟ್ಟಿಲ್ಲ.
ಆದರೆ ಇವರೆಲ್ಲರಿಗಿಂತಲೂ ಹೆಚ್ಚು ಆತುರ ಗುಜರಾತಿನ ಮುಖ್ಯಮಂತ್ರಿ ಶ್ರೀಯುತ ನರೇಂದ್ರ ಮೋದಿಗೆ ಇರುವಂತಿದೆ. ತಾನು ಹೆಚ್ಚು ಬಲಿಷ್ಟ ಮತ್ತು ಭಾರತದ ಜಾತ್ಯಾತೀತ ಪ್ರಜಾಸತ್ತಾತ್ಮಕ ಗಣತಂತ್ರವನ್ನು ಒಂದು ಅತ್ಯಂತ ಉನ್ಮತ್ತ ಅಸಹಿಷ್ಣು ಫ್ಯಾಸಿಸ್ಟ್ ಮಾದರಿಯ ಹಿಂದೂರಾಷ್ಟ್ರವಾಗಿ ಪರಿವತರ್ಿಸುವ ಆರೆಸ್ಸೆಸ್ ಗುರಿಯ ಸ್ಥಾಪನೆಗಾಗಿ ಜನಾಂಗೀಯ ಶುದ್ಧೀಕರಣದ ಆರೆಸ್ಸೆಸ್ ಸೈದ್ಧಾಂತಿಕ ಯೋಜನೆಯನ್ನು ಪರಿಣಾಮಕಾರಿಯಾಗಿ ಜಾರಿಗೊಳಿಸಬಲ್ಲೆ ಎಂದು ಪ್ರದಶರ್ಿಸಿದ್ದಾರೆ. ತನ್ನ ದೀರ್ಘಕಾಲದ ಪ್ರತಿಸ್ಪಧರ್ಿ, ಸ್ವಲ್ಪ ಪ್ರತಿಷ್ಠೆಯಿರುವ ಆರೆಸ್ಸೆಸ್ ಪ್ರಚಾರಕ ಸಂಜಯ ಜೋಷಿಯನ್ನು ಬದಿಗೆ ತಳ್ಳುವಲ್ಲಿ ಆತ ಯಶಸ್ವಿಯಾಗಿದ್ದಾರೆ. ವಾಜಪೇಯಿಯವರನ್ನು ಮುಖೌಟಾ(ಮುಖವಾಡ) ಎಂದು ಕರೆದದ್ದಕ್ಕೆ ಗೋವಿಂದಾಚಾರ್ಯರನ್ನು ಓಡಿಸಿದ್ದು ನಿಮಗೆ ನೆನಪಿದೆಯೇ? ಹಿಂದೂ ಕೋಮುವಾದಿ ಧ್ರುವೀಕರಣವನ್ನು ಕ್ರೋಡೀಕರಿಸುವ ನಿರೀಕ್ಷೆಯಿಂದ ಮತ್ತು ಮಹಾರಾಷ್ಟ್ರದಲ್ಲಿ ಉತ್ತರ ಭಾರತೀಯರ ಮೇಲೆ, ನಿದರ್ಿಷ್ಟವಾಗಿ ಬಿಹಾರಿಗಳ ಮೇಲೆ ಶಿವಸೇನೆಯ ದಾಳಿಗಳಿಂದ ಪಾಠ ಕಲಿತು ಆತನೀಗ ಬಿಹಾರದ ಮುಖ್ಯಮಂತ್ರಿ ನಿತೀಶ್ ಕುಮಾರ್ ಮೇಲೆ ವಾಕ್ಸಮರ ಸಾರಿದ್ದಾರೆ. ಎನ್ಡಿಎ ಎಲ್ಲಾದರೂ ಅಧಿಕಾರಕ್ಕೆ ಬಂದರೆ ಪ್ರಧಾನ ಮಂತ್ರಿಯಾಗುವ ತನ್ನ ಅವಕಾಶಕ್ಕೆ ಯಾರಾದರೂ ಬೆದರಿಕೆಯಾಗುವ ಸಾಧ್ಯತೆಯಿದ್ದರೆ ಅದು ಈತನೇ ಎಂದು ಆತ ಭಾವಿಸಿರುವಂತಿದೆ.
ಆ ದಶಕ ಮರುಕಳಿಸದಿರಲಿ
ಆರೆಸ್ಸೆಸ್/ಬಿಜೆಪಿ ಮುಖಂಡರ ನಡುವೆ ಇಂತಹ ಸಾರ್ವಜನಿಕ ಉಗುಳಾಟಗಳು ಸ್ವಲ್ಪ ರಾಜಕೀಯ ಮನರಂಜನೆ ಕೊಡಬಹುದಾದರೂ, ಮುಂದಿನ ಕೇಂದ್ರ ಸರಕಾರವನ್ನು ರಚಿಸುವವರು ತಾವೇ ಎಂದು ಅವರು ನಿರೀಕ್ಷಿಸುತ್ತಿದ್ದಾರೆ ಎಂಬುದೇ ಅನಿಷ್ಟಕಾರಿ. ಆರೆಸ್ಸೆಸ್ನ ಕಣ್ಣೋಟ ಭಾರತ ಎಂಬ ಕಲ್ಪನೆಗೇ, ಅದು ಒಂದು ಬಹುಧಮರ್ೀಯ, ಬಹುಭಾಷಿಕ, ಬಹುಜನಾಂಗೀಯ, ಬಹು ಸಾಮಾಜಿಕ-ಸಾಂಸ್ಕೃತಿಕ, ಜಾತ್ಯಾತೀತ ಪ್ರಜಾಸತ್ತಾತ್ಮಕ ಗಣತಂತ್ರ ಎಂಬುದಕ್ಕೇ ತದ್ವಿರುದ್ಧವಾಗಿ ಮತ್ತು ವೈರುಧ್ಯಪೂರ್ಣವಾಗಿ ನಿಲ್ಲುವಂತದ್ದು.
ಗುಜರಾತಿನ ಹತ್ಯಾಕಾಂಡ, ಅವರ ಅಡಿಯಲ್ಲಿ ಅಮಾನವೀಯ ಕ್ರಿಮಿನಲ್ ಬುದ್ಧಿಯ ಆಳ ಎಷ್ಟಿರಬಲ್ಲುದು, ಧಾಮರ್ಿಕ ಅಲ್ಪಸಂಖ್ಯಾತರ ಭದ್ರತೆಗೆ ಎಂತಹ ಗಂಭೀರ ಸಂಚಕಾರ ಇರಬಲ್ಲುದು ಎಂಬುದನ್ನು ದೇಶಕ್ಕೆ ಮತ್ತು ಜಗತ್ತಿಗೇ ತೋರಿಸಿಕೊಟ್ಟಿದೆ. ಸುಪ್ರಿಂ ಕೋಟರ್್ ನೇಮಿಸಿದ ಅಮೈಕಸ್ ಕ್ಯುಆರಿ(ಅಂದರೆ ತನಗೆ ನೆರವಾಗಲು ನ್ಯಾಯಾಲಯ ನೇಮಿಸುವ ನ್ಯಾಯಾಲಯ ಮಿತ್ರ)ಯ ವರದಿಯಿದ್ದರೂ ಮೋದಿಯ ವಿರುದ್ಧ ಯಾವುದೇ ಮೊಕದ್ದಮೆಯನ್ನು ದಾಖಲಿಸಿಲ್ಲ. ಒಂದು ದಶಕ್ಕೂ ಹೆಚ್ಚು ಕಾಲ ದೇಶಪ್ರೇಮಿ ಭಾರತೀಯರ ರಕ್ತ ಚೆಲ್ಲಿದ ಛಿದ್ರಕಾರಿ ಕೃತ್ಯಗಳು ಮತ್ತು ಕೋಮು ದಂಗೆಗಳ ನಂತರ 2004ರ ಸಾರ್ವತ್ರಿಕ ಚುನಾವಣೆಗಳಲ್ಲಿ ಬಿಜೆಪಿ ನೇತೃತ್ವದ ಎನ್ಡಿಎ ಸರಕಾರದ ಸೋಲಿನೊಂದಿಗೆ ಜಾತ್ಯಾತೀತ ಪ್ರಜಾಸತ್ತಾತ್ಮಕ ಗಣತಂತ್ರವನ್ನು ಕ್ರೋಡೀಕರಿಸುವ ಎಳೆಗಳನ್ನು ಮತ್ತೆ ಹೆಕ್ಕಿ ಹಿಡಿಯಲು ಸಾಧ್ಯವಾಯಿತು. ದೇಶ ಮತ್ತೆ ಆ ಕೋಮುವಾದಿ ಊನಕಾರ್ಯದ ಸನ್ನಿವೇಶಕ್ಕೆ ಹಿಂದಿರುಗಲು ಬಿಡಲಾಗದು.
ಮೋದಿಯ ಗುಜರಾತಿನ ಮಿಥ್ಯೆ
ಈ ಹಿಂದೆ ಯೋಜನಾ ಆಯೋಗದ ಸದಸ್ಯರಾಗಿದ್ದ, ಈಗ ರಾಜ್ಯಸಭೆಯ ಸದಸ್ಯರಾಗಿರುವ ಬಾಲಚಂದ್ರ ಮುಂಗೇಕರ್ ಇತ್ತೀಚೆಗೆ ಮೋದಿಯ ನೇತೃತ್ವದಲ್ಲಿ ಒಂದು ಚೈತನ್ಯಶೀಲ ಗುಜರಾತ್ ಎಂಬ ಮಿಥ್ಯೆಯನ್ನು ಬಯಲಿಗೆಳೆದಿದ್ದಾರೆ. ಬೆಳವಣಿಗೆ ದರ, ತಲಾ ಆದಾಯ ಇತ್ಯಾದಿ ಯಾವುದೇ ಆಥರ್ಿಕ ಸೂಚ್ಯಂಕದ ಪ್ರಕಾರ ಮೊದಲ ಸ್ಥಾನದಲ್ಲಿರುವ ರಾಜ್ಯವಲ್ಲ ಎಂದು ಅವರು ತೋರಿಸುತ್ತಾರೆ.
ಮಾನವ ಅಭಿವೃದ್ಧಿ ಸೂಚ್ಯಂಕ(ಹೆಚ್ಡಿಐ)ದ ಪ್ರಕಾರ ಗುಜರಾತದ ಕತೆ ವಿಧ್ವಂಸಕಾರಿ. 2008ರಲ್ಲಿ ಅದು 0.527 ಇದ್ದು, ಪ್ರಮುಖ ರಾಜ್ಯಗಳಲ್ಲಿ ಅದು ಹತ್ತನೆಯ ಸ್ಥಾನದಲ್ಲಿತ್ತು. ಕೇರಳ ಮೊದಲ ಸ್ಥಾನದಲ್ಲಿತ್ತು(ಎಚ್ಡಿಐ 0.790), ಹಿಮಾಚಲ ಪ್ರದೇಶದ್ದು 0.652, ಪಂಜಾಬ್ 0.605, ಮಹಾರಾಷ್ಟ್ರ 0.572 ಮತ್ತು ಹರ್ಯಾಣ 0.552. ಮೂರು ಹೆಚ್ಡಿಐ ಅಂಗಗಳಿಗೆ- ಆದಾಯ, ಆರೋಗ್ಯ ಮತ್ತು ಶಿಕ್ಷಣ-ಸಂಬಂಧಪಟ್ಟಂತೆ ಗುಜರಾತಿನದ್ದು ಹೊಳೆಯುವ ಕತೆಯೇನಲ್ಲ. ಕೇರಳ ಈ ಪ್ರತಿಯೊಂದರಲ್ಲಿ ಮೊದಲ ಸ್ಥಾನದಲ್ಲಿದ್ದರೆ, ಪಂಜಾಬ್, ಹಿಮಾಚಲ ಪ್ರದೇಶ, ಹಯರ್ಾಣ, ಮಹಾರಾಷ್ಟ್ರ, ತಮಿಳುನಾಡು ಮತ್ತು ಪಶ್ಚಿಮ ಬಂಗಾಳ ರಾಜ್ಯಗಳು ಗುಜರಾತಿಗಿಂತ ಉತ್ತಮ ಸಾಧನೆ ತೋರಿಸಿವೆ.
ಆದಾಯ, ಆರೋಗ್ಯ ಮತ್ತು ಶಿಕ್ಷಣಕ್ಕೆ ಸಂಬಂಧಪಟ್ಟಂತೆ ಅಸಮಾನತೆ ಗುಜರಾತಿನಲ್ಲಿ ಕೆಲವು ಪ್ರಮುಖ ರಾಜ್ಯಗಳಿಗಿಂತ ಹೆಚ್ಚಿರುವುದು ಕಂಡು ಬಂದಿದೆ. ಆಘಾತಕಾರಿ ಸಂಗತಿಯೆಂದರೆ, ಹಸಿವಿನ ಸೂಚ್ಯಂಕದಲ್ಲಿ, 2008ರ ರಾಜ್ಯ ಹಸಿವಿನ ಸೂಚ್ಯಂಕದ ಪ್ರಕಾರ, ಗುಜರಾತಿನದ್ದು 17 ದೊಡ್ಡ ರಾಜ್ಯಗಳಲ್ಲಿ 13ನೇಯ ಸ್ಥಾನ, ಒರಿಸ್ಸಾಕ್ಕಿಂತಲೂ ಕೆಳಗಿನದ್ದು.
ಗುಜರಾತಿನಲ್ಲಿ ರಕ್ತಹೀನತೆಯಿಂದ ನರಳುತ್ತಿರುವ ಮಹಿಳೆಯರ ಶೇ. 1999ರಲ್ಲಿ 46.3 ಇತ್ತು, 2004ರಲ್ಲಿ ಅದು 55.5ಶೇ.ಕ್ಕೇರಿತು; ಮಕ್ಕಳಲ್ಲಿ 74.5ಶೇ.ದಿಂದ 80.1 ಶೇ.ಕ್ಕೇರಿತು. ಕಳೆದ ಒಂದು ದಶಕದಲ್ಲಿ ದಲಿತರು ಮತ್ತು ಮಹಿಳೆಯರ ಪರಿಸ್ಥಿತಿಗಳು ಹದಗೆಟ್ಟರೆ, ಮುಸ್ಲಿಮರು ಮತ್ತು ಬುಡಕಟ್ಟು ಜನಗಳ ಪರಿಸ್ಥಿತಿ ಇನ್ನೂ ಕೆಟ್ಟದ್ದಾಗಿದೆ.
ಒಂದು ಗಣನೀಯ ವೈರುಧ್ಯ
ಆರೆಸ್ಸೆಸ್/ಬಿಜೆಪಿ ತಮ್ಮ ಕನಸನ್ನು ಈಡೇರಿಸಿಕೊಳ್ಳುವ ಪ್ರಯತ್ನಗಳಿಗೆ ಸಂಬಂಧಪಟ್ಟಂತೆ ಇನ್ನೂ ಒಂದು ಗಣನೀಯ ವೈರುಧ್ಯ ಇದೆ. ಅವರ ಮೂಲ ಬೆಂಬಲ ನೆಲೆ ಅವರು ಉಂಟು ಮಾಡಬಲ್ಲ ಕೋಮುವಾದಿ ಧ್ರುವೀಕರಣದ ತೀವ್ರತೆಯನ್ನು ಅವಲಂಬಿಸಿದೆ. ಆದರೆ ಏಕಾಂಗಿಯಾಗಿ ಬಹುಮತ ಗಳಿಸಲು ಅವರು ಈ ಹಿಂದೆ ಮಾಡಿದ ಪ್ರಯತ್ನಗಳೆಲ್ಲಾ ವಿಫಲವಾದ ಮೇಲೆ ಅವರು ಮಿತ್ರರ ಶೋಧನೆಗೆ ಇಳಿಯಲೇ ಬೇಕಾಯಿತು. ಎನ್ಡಿಎ ಹುಟ್ಟಿದ್ದು ಹಾಗೆ. ಈ ಮಿತ್ರಪಕ್ಷಗಳು ಅಧಿಕಾರದಲ್ಲಿ ಪಾಲು ಪಡೆಯಲು, ಮಂತ್ರಿ ಹುದ್ದೆಗಳನ್ನು ಗಳಿಸಿಕೊಳ್ಳಲು ಅವರ ಜೊತೆಗೆ ಹೋಗಬಹುದು, ಆದರೆ ತಮ್ಮ ರಾಜ್ಯಗಳಲ್ಲಿ ತಮ್ಮದೇ ರಾಜಕೀಯ ಕಾರಣಗಳಿಗಾಗಿ, ಅಲ್ಪಸಂಖ್ಯಾತರ ಬೆಂಬಲವನ್ನು ಉಳಿಸಿಕೊಳ್ಳುವ ಅಗತ್ಯದಿಂದಾಗಿ, ಕೋಮುವಾದಿ ಧ್ರುವೀಕರಣವನ್ನು ತೀವ್ರಗೊಳಿಸಬಹುದಾದ ಕಾರ್ಯಕ್ರಮದಲ್ಲಿ ಅವರ ಜೊತೆಗಿರಲಾರರು. ಈ ಒಂದು ವೈರುಧ್ಯವನ್ನು ತೃಪ್ತಿಕರವಾಗಿ ಬಗೆಹರಿಸುವ ಸಾಮಥ್ರ್ಯ ಆರೆಸ್ಸೆಸ್/ಬಿಜೆಪಿಗೆ ಈಗಲೂ ಇಲ್ಲ.
ಮುಂದಿನ ಸಾರ್ವತ್ರಿಕ ಚುನಾವಣೆಗಳ ವರೆಗಿನ ಈ ಕಾಲಾವಧಿಯಲ್ಲಿ ಈ ವೈರುಧ್ಯಗಳು ಹೇಗೆ ಪ್ರಕಟಗೊಳ್ಳಬಹುದು ಎಂಬುದನ್ನು ಸಮಯವೇ ನಮಗೆ ತೋರಿಸುತ್ತದೆ. ಆದರೆ, ನಮ್ಮ ಜಾತ್ಯಾತೀತ ಪ್ರಜಾಸತ್ತಾತ್ಮಕ ಗಣರಾಜ್ಯವನ್ನು ರಕ್ಷಿಸಿಕೊಳ್ಳಲು ಭಾರತೀಯ ಜನತೆ ಎಷ್ಟು ಬದ್ಧರಾಗಿದ್ದಾರೆ, ದೃಢತೆಯಿಂದಿದ್ದಾರೆ ಎಂಬುದು ಮತ್ತೊಮ್ಮೆ ಪರೀಕ್ಷೆಗೆ ಒಳಪಡಬಹುದು. ಈ ಸಂದರ್ಭದಲ್ಲಿ, ಸಾಮಾನ್ಯವಾಗಿ ಈ ಹಿಂದೆ ಯಾವುದೇ ಸ್ವರೂಪದಲ್ಲಿ ಕೋಮುವಾದಿ ರಕ್ಕಸನನ್ನು ಹಣಾಹಣಿಯಾಗಿ ಎದುರಿಸಬೇಕಾಗಿ ಬಂದಾಗಲೆಲ್ಲ ಕಾಂಗ್ರೆಸ್ ಪಕ್ಷ ಒಂದು ಚಂಚಲತೆಯನ್ನು, ರಾಜಿ ಮನೋಭಾವವನ್ನು ಪ್ರದಶರ್ಿಸಿದೆ ಎಂಬುದನ್ನು ನೆನಪಿಸಿ ಕೊಳ್ಳಬೇಕಾಗಿದೆ. ಈ ಹಿಂದೆ, ತಮ್ಮ ಚುನಾವಣಾ ಪ್ರಚಾರವನ್ನು ಆರಂಭಿಸಲು ಶಿಲಾನ್ಯಾಸ ಮಾಡಿ ಕೋಮುವಾದಿ ಪ್ರಚಾರಕ್ಕೆ ಗ್ರಾಸ ಒದಗಿಸಿದ್ದರು; ಶಾಭಾನು ಮೊಕದ್ದಮೆಯಲ್ಲಿ ಅಲ್ಪಸಂಖ್ಯಾತರ ಒಂದು ವಿಭಾಗದ ತುಷ್ಟೀಕರಣಕ್ಕೆ ಮುಂದಾಗಿದ್ದು, 1984ರಲ್ಲಿ ಸಿಖ್-ವಿರೋಧಿ ದಂಗೆಗಳು ಇತ್ಯಾದಿ ಇತ್ಯಾದಿ ನೆನಪಿಗೆ ಬರುತ್ತವೆ. ಇಂತಹ ಒಂದು ನಿಲುವು ಕೋಮುವಾದಿ ಶಕ್ತಿಗಳು ಬಯಸುವ ಅಜೆಂಡಾಕ್ಕೆ, ಧ್ರುವೀಕರಣಕ್ಕೆ ಬಲ ತುಂಬುತ್ತದೆಯಷ್ಟೇ.
ಆದರೆ, ಪ್ರಧಾನ ಮಂತ್ರಿಯ ಪೀಠಕ್ಕೆ ಬಿಜೆಪಿ ಮುಖಂಡರ ನಡುವಿನ ಪ್ರಸಕ್ತ ಸ್ಪಧರ್ೆಯಲ್ಲಿ ಕುತೂಕಲಕಾರಿ ಸಂಯೋಜನೆಗಳು ಮೂಡಿ ಬರುತ್ತಿವೆ. ಹಳೆಯ ಪ್ರತಿಸ್ಪಧರ್ಿಗಳು, ಅಂದರೆ ಅಡ್ವಾಣಿ ಮತ್ತು ಮುರಳಿ ಮನೋಹರ ಜೋಷಿ, ಗಡ್ಕರಿ-ಮೋದಿ-ಜೈಟ್ಲಿ ಕೂಟವನ್ನು ಎದುರಿಸಲು ತಮ್ಮ ನಡುವಿನ ಕಿತ್ತಾಟಗಳನ್ನು ಬದಿಗೊತ್ತಿದ್ದಾರಂತೆ. ಅಂತಿಮವಾಗಿ ಏನೇ ನಡೆಯಲಿ, ಇವೆಲ್ಲ ಒಂದು ತೆಲುಗು ಗಾದೆಯನ್ನು ನೆನಪಿಗೆ ತರುತ್ತಿವೆ: ಆಲು ಲೇದು, ಚುಲು ಲೇದು, ಕೊಡುಕು ಪೇರು ಸೋಮಲಿಂಗಂ(ನನಗೆ ಮನೆಯೂ ಇಲ್ಲ, ಹೆಂಡತಿಯೂ ಇಲ್ಲ, ಆದರೆ ಮಗನ ಹೆಸರು ಮಾತ್ರ, ಸೋಮಲಿಂಗಂ).
ಸಾರ್ವತ್ರಿಕ ಚುನಾವಣೆಗಳಿಗೆ ಇನ್ನೂ ಎರಡು ವರ್ಷಗಳಿವೆ. ಬಿಜೆಪಿ ಚುನಾವಣೆಯನ್ನು ಗೆದ್ದೂ ಇಲ್ಲ, ಲೋಕಸಭೆಯಲ್ಲಿ ಒಂದು ಬಹುಮತವನ್ನು ಗಳಿಸುವ ಸಾಧ್ಯತೆಯೂ ಇಲ್ಲ; ಆದರೂ ಪ್ರಧಾನ ಮಂತ್ರಿಯಾಗುವ ಕನಸುಗಳ ಸಂಖ್ಯೆ ಮಾತ್ರ ಏರುತ್ತಲೇ ಇರುವಂತೆ ಕಾಣುತ್ತಿದೆ.
0