– ಎರಡನೇ ಬಾರಿ ಅಧ್ಯಕ್ಷರಾಗುವ ಟ್ರಂಪ್ ಕನಸು ಭಗ್ನ
– ಭಾರತೀಯ ಮೂಲದ ಕಮಲಾ ಹ್ಯಾರಿಸ್ ಉಪಾಧ್ಯಕ್ಷೆ
ವಾಷಿಂಗ್ಟನ್: ತೀವ್ರ ಕುತೂಹಲ ಕೆರಳಿಸಿದ್ದ ಅಮೆರಿಕ ಚುನಾವಣೆ ಫಲಿತಾಂಶ ಕೊನೆಗೂ ಹೊರಬಿದ್ದಿದ್ದು ಜೋ ಬಿಡೆನ್ ಅಮೆರಿಕ ಅಧ್ಯಕ್ಷರಾಗಿ ಆಯ್ಕೆಯಾಗಿದ್ದಾರೆ.
ಎರಡನೇ ಬಾರಿ ಅಧ್ಯಕ್ಷ ಪದವಿ ಅಲಂಕರಿಸುವ ಡೊನಾಲ್ಡ್ ಟ್ರಂಪ್ ಕನಸು ಇದರೊಂದಿಗೆ ಭಗ್ನಗೊಂಡಿದೆ.
ಮ್ಯಾಜಿಕ್ ನಂಬರ್‌ಗಿಂತ 14 ಮತ ಹೆಚ್ಚು ಪಡೆಯುವ ಮೂಲಕ ಡೆಮಾಕ್ರಟಿಕ್ ಪಕ್ಷದ ಜೋ ಬಿಡೆನ್ ದಾಖಲಾರ್ಹ ಜಯ ಪಡೆದಿದ್ದಾರೆ. ಜೋ ಬಿಡೆನ್ ಒಟ್ಟು 284 ಮತ ಗಳಿಸಿದ್ದಾರೆ. ಡೊನಾಲ್ಡ್ ಟ್ರಂಪ್ 214 ಮತ ಪಡೆದುಕೊಂಡಿದ್ದಾರೆ.
5 ರಾಜ್ಯಗಳಲ್ಲಿ ಸುದೀರ್ಘವಾಗಿ ಮತ ಎಣಿಕೆ ನಡೆದಿದ್ದು, ಚುನಾವಣೆ ಫಲಿತಾಂಶ ವಿಳಂಬವಾಗಲು ಕಾರಣವಾಗಿದೆ.
ಪೆನ್ಸಿಲ್ವೇನಿಯಾದಲ್ಲಿ ಗೆಲುವು ದಾಖಲಿಸುವ ಮೂಲಕ ಬಹುಮತಕ್ಕೆ ಬೇಕಾಗಿದ್ದ ಸಂಖ್ಯೆಯನ್ನು ತಲುಪಿ ಜೋ ಬಿಡೆನ್ ಅಮೆರಿಕಾ ಅಧ್ಯಕ್ಷರಾಗಿ ಆಯ್ಕೆಯಾಗಿದ್ದಾರೆ.
ಜೋ ಬಿಡೆನ್ ಒಟ್ಟು 49.5ರಷ್ಟು ಮತ ಪಡೆದಿದ್ದರೆ, ಡೊನಾಲ್ಡ್ ಟ್ರಂಪ್ ಶೇಕಡ 48.9ರಷ್ಟು ಮತ ಪಡೆದಿದ್ದಾರೆ. ಭಾರತೀಯ ಮೂಲದ ಕಮಲಾ ಹ್ಯಾರಿಸ್ ಉಪಾಧ್ಯಕ್ಷರಾಗಲಿದ್ದಾರೆ. ಇದುವರೆಗೆ ಶೇಕಡ 97 ರಷ್ಟು ಮತ ಎಣಿಕೆ ಬಹುತೇಕ ಪೂರ್ಣಗೊಂಡಿದೆ.
ನನ್ನನ್ನು ಇಂಥ ಮಹಾನ್ ದೇಶದ ಅಧ್ಯಕ್ಷರಾಗಿ ಆಯ್ಕೆ ಮಾಡಿರುವುದಕ್ಕೆ ಎಲ್ಲರಿಗೂ ಧನ್ಯವಾದ. ನೀವು ನನಗೆ ಮತ ಹಾಕಿದ್ದಾರೋ ಇಲ್ಲವೋ ನನಗೆ ಗೊತ್ತಿಲ್ಲ. ಆದರೆ ನಾನು ಇಡೀ ಅಮೆರಿಕನ್ನರಿಗೆ ಅಧ್ಯಕ್ಷನಾಗಿದ್ದಾನೆ. ನನ್ನ ಮೇಲೆ ಇಟ್ಟಿರುವ ಎಲ್ಲ ಭರವಸೆಗಳನ್ನು ಈಡೇರಿಸಲು ಪೂರೈಸುತ್ತೇನೆ ಎಂದು ಜೋ ಬಿಡೆನ್ ಅಧ್ಯಕ್ಷರಾಗಿ ಆಯ್ಕೆಯಾದ ಕೆಲವೇ ನಿಮಿಷಗಳಲ್ಲಿ ಮಾಡಿದ ಟ್ವೀಟ್‌ನಲ್ಲಿ ತಿಳಿಸಿದ್ದಾರೆ.
ನಾವು ಸಾಧಿಸಿದ್ದೇವೆ ಎಂದು ಕಮಲಾ ಹ್ಯಾರಿಸ್ ಟ್ವೀಟ್ ಮಾಡಿದ್ದಾರೆ.