ಸಾರಿಗೆ ಬಂದ್ : ಪ್ರಯಾಣಿಕರ ಕೈ ಹಿಡಿದ ‘ಬೌನ್ಸ್’!​

ಬೆಂಗಳೂರು : ಸಾರಿಗೆ ನೌಕರರು ತಮ್ಮ ಬೇಡಿಕೆಗಳನ್ನು ಈಡೇರಿಸುವಂತೆ  ಬಸ್ ಸೇವೆ ಸ್ಥಗಿತ ಗೊಳಿಸಿ ನಡೆಸುತ್ತಿರುವ ಮುಷ್ಕರ ಮೂರನೇ ದಿನಕ್ಕೆ ಕಾಲಿಟ್ಟಿದೆ.  ಪ್ರಯಾಣಿಕರು ಬಸ್ ಸಂಚಾರವಿಲ್ಲದೆ  ಪರದಾಡುತ್ತಿರುವ ದೃಶ್ಯಗಳು ಅಲ್ಲಲ್ಲಿ ಕಂಡು ಬರುತ್ತಿವೆ. ಅದರಲ್ಲೂ  BMTC ಅವಲಂಬಿಸಿರುವ  ಬೆಂಗಳೂರಿನ ಜನತೆ ಮತ್ತಷ್ಟು ತೊಂದರೆಗಳನ್ನು ಅನುಭವಿಸುವಂತಾಗಿದೆ.

ಕಳೆದ ಎರಡು ದಿನಗಳಿಂದ ಬಸ್ ಸಂಚಾರ ಇಲ್ಲದ್ದರಿಂದ  ಕೆಲಸಗಳಿಗೆ ಹೊರಡುವ ನೌಕರರು, ಕೂಲಿಕಾರರು, ತಮ್ಮ ಕೆಲಸಕ್ಕೆ ಕುತ್ತು ಬರುವ ಸಾಧ್ಯತೆ ಮತ್ತು ಸಂಬಳ ಕಡಿತಗೊಳ್ಳುವ ಆತಂಕಕ್ಕೆ ಒಳಗಾಗಿದ್ದಾರೆ.

ದುಬಾರಿ ದರ ಕೇಳುತ್ತಿರುವ ಆಟೋ ಹಾಗೂ ಟ್ಯಾಕ್ಸಿ ಗಳಲ್ಲಿ ಸಂಚರಿಸುವುದು ಹೇಗೆ ಎಂದು ಜನರು ಗೊಂದಲಕ್ಕೆ ಒಳಗಾಗಿದ್ದಾರೆ.  ಈ ಸಂಕಷ್ಟ ಸ್ಥಿತಿಯಲ್ಲಿ ಬೌನ್ಸ್​ ಬೈಕ್​ ಬೆಂಗಳೂರಿನ ಜನರ ಸಹಾಯಕ್ಕೆ ಮುಂದಾಗಿದೆ ಎಂದು ಪ್ರಾಯಾಣಿಕರೊಬ್ಬರು ಖುಷಿಯನ್ನು ಜನಶಕ್ತಿ ಮೀಡಿಯಾದ ಜೊತೆಗೆ ಹಂಚಿಕೊಂಡಿದ್ದಾರೆ.

ಇಂದು ಬೆಳಗ್ಗೆ ಕೆಲಸಕ್ಕೆ ತೆರಳಲು ಪರದಾಡುತ್ತಿದ್ದ ಓರ್ವ ವ್ಯಕ್ತಿಯು ಉಚಿತ ಬೌನ್ಸ್​ ಬೈಕ್ ಸೇವೆಯನ್ನು ಪಡೆದುಕೊಂಡಿದ್ದು,  ಸಂಸ್ಥೆಗೆ  ಧನ್ಯವಾದಗಳನ್ನು ತಿಳಿಸಿದ್ದಾರೆ. ಇಂತಹ ಪರಿಸ್ಥಿತಿಯಲ್ಲಿ ​ ಬೌನ್ಸ್ ಸಂಸ್ಥೆ ಉಚಿತ ಸೇವೆ ನೀಡಲು ಮುಂದಾಗಿರುವುದು ತುಂಬಾ ಸಹಾಯಕವಾಗಿದೆ ಎಂದು ತಮ್ಮ ಅಭಿಪ್ರಾಯ ಹಂಚಿಕೊಂಡಿದ್ದಾರೆ.

ಬಸ್ ಸಂಚಾರವಿಲ್ಲದ ಪ್ರಯಾಣಿಕರು ಪರದಾಡುತ್ತಿರುವ ದೃಶ್ಯಗಳು ನಮಗೆ ನೋವನ್ನು ತಂದವು. ಹಾಗಾಗಿ ಜನತೆಗೆ ಬೌನ್ಸ್​  ಸಂಸ್ಥೆಯ ಮೂಲಕ  ಉಚಿತ ಸೇವೆ ನೀಡಲು ಮುಂದಾದೆವು. ಜನರು ಇದರ ಸದುಪಯೋಗ ಪಡೆದುಕೊಂಡು ತಮ್ಮ ಸ್ಥಳಗಳಿಗೆ ನೀರಾಳವಾಗಿ ಹೋಗಲು ಸಹಾಯವನ್ನು ಮಾಡಿದ್ದೇವೆ ಎಂದು ಬೌನ್ಸ್  ಸಿಇಒ ವಿವೇಕ್  ಮಾಧ್ಯಮಗಳಿಗೆ ತಿಳಿಸಿದ್ದಾರೆ. ಬೌನ್ಸ್ ಉಚಿತ ಸೇವೆ ಲಭ್ಯವಾಗುತ್ತಿದ್ದಂತೆ ಜನರು ನಿರಾಳವಾಗಿ ಅವರವರ ಜಾಗಗಳಿಗೆ ತಲುಪಲು ಪ್ರಯತ್ನ ಪಡುತ್ತಿದ್ದ ದೃಶ್ಯಗಳು ಅಲ್ಲಲ್ಲಿ ಕಂಡು ಬಂದವು.

Donate Janashakthi Media

Leave a Reply

Your email address will not be published. Required fields are marked *