ಭ್ರಷ್ಟಾಚಾರ ಚುನಾವಣೆಯಲ್ಲಿ ಮಹತ್ವದ ಪಾತ್ರ ವಹಿಸಿದ್ದರೆ ಯಾರು ಗೆಲ್ಲುವುದಿಲ್ಲ- ಬಿ.ಕೆ. ಹರಿಪ್ರಸಾದ್

ಬೆಂಗಳೂರು: ಹರಿಯಾಣ ಚುನಾವಣೆಯಲ್ಲಿ ಮುಡಾ ಪ್ರಕರಣದ ಕುರಿತ ಪ್ರಚಾರ ಮಾಡಿದ್ದು ಕಾಂಗ್ರೆಸ್ ಮೇಲೆ ಪರಿಣಾಮ ಬೀರಿದೆ ಎಂಬ ರಾಜ್ಯದ ಕಾಂಗ್ರೆಸ್ ಹಿರಿಯ ನಾಯಕರ ವಿಶ್ಲೇಷಣೆಗೆ ವಿಧಾನ ಪರಿಷತ್ ಸದಸ್ಯ ಬಿ.ಕೆ. ಹರಿಪ್ರಸಾದ್ ವ್ಯತಿರಿಕ್ತ ಅಭಿಪ್ರಾಯ ವ್ಯಕ್ತಪಡಿಸಿದ್ದಾರೆ. ಭ್ರಷ್ಟಾಚಾರ

ಹರಿಯಾಣದಲ್ಲಿ ಅಚ್ಚರಿಯ ಫಲಿತಾಂಶ ಬಂದಿದೆ. ನಾನು ಈ ಹಿಂದೆ ಅಲ್ಲಿ ಮೂರೂವರೆ ವರ್ಷಗಳ ಕಾಲ ಉಸ್ತುವಾರಿ ವಹಿಸಿಕೊಂಡಿದ್ದೆ. ಅಲ್ಲಿ ಧ್ರುವೀಕರಣ ಪ್ರಬಲವಾಗಿದೆ. ಭ್ರಷ್ಟಾಚಾರ ಚುನಾವಣೆಯಲ್ಲಿ ಮಹತ್ವ ಪಾತ್ರ ವಹಿಸಿದ್ದರೆ ಯಾರು ಸಹ ಗೆಲ್ಲುವುದಿಲ್ಲ, ಬೇರೆ ಏನಾದರೂ ಸಮಸ್ಯೆ ಇರಬಹುದು ಎಂದರು.

ಇದನ್ನೂ ಓದಿ: ಸಂವಹನ ಸೇತುವೆಗಳೂ ಭಾಷಾ ಸೂಕ್ಷ್ಮತೆಗಳೂ ವಿಶಾಲ ಸಮಾಜದೊಡನೆ ಸಂವಾದಿಸುವಾಗ ಸಂವೇದನಾಶೀಲ ಭಾಷೆ ಬಳಸುವುದು ಅತ್ಯ‍ವಶ್ಯ  

ಅಲ್ಲಿ ಜಾಟ್ ಸಮುದಾಯ ಹಾಗೂ ಇತರ ವರ್ಗಗಳ ನಡುವೆ ಪೈಪೋಟಿ ಎಂಬಂತಾಗಿದೆ. ಎಎಪಿ ಜತೆ ಮೈತ್ರಿ ಮಾಡಿಕೊಳ್ಳದೆ ಇರುವುದು ತೊಂದರೆ ಆಗಿರಬಹುದು. 10 ಕ್ಷೇತ್ರಗಳಲ್ಲಿ ಸಾವಿರ ಮತಗಳ ಏರಿಳಿತಗಳಲ್ಲಿ ಫೈಟ್ ಆಗಿದೆ ಎಂದ ಅವರು ನಾವು ಗೆಲ್ಲುತ್ತೇವೆ ಎಂದು ಚುನಾವಣೆಯಲ್ಲಿ ಸ್ಪರ್ಧೆ ಮಾಡುತ್ತೇವೆ. ಹರಿಯಾಣದಲ್ಲಿ ಜಾಟ್ ನಾಯಕತ್ವ ಪ್ರಬಲವಾಗಿತ್ತು ಎಂದು ನಾವು ನಂಬಿದ್ದೆವು.  ಆದರೆ ಧ್ರುವೀಕರಣ ಆಗಿದೆ ಎಂದು ಹೇಳಿದರು.

ಜಾಟ್ ಸಮುದಾಯಕ್ಕೆ ಅಧಿಕಾರ ಕೊಟ್ಟಿರಲಿಲ್ಲ. ಸರ್ಕಾರ ಏನು ಮಾಡುತ್ತದೆ ಎಂಬುದು ಮುಖ್ಯ ಅಲ್ಲ, ಅಲ್ಲಿ ಜಾತಿ ಸಮೀಕರಣ ಕೈ ಹಿಡಿದೆ ಎಂದರಲ್ಲದೇ, ಜಮ್ಮ ಮತ್ತು ಕಾಶ್ಮೀರದಲ್ಲಿ ಬಿಜೆಪಿಯನ್ನು ಜನ ತಿರಸ್ಕಾರಿಸಿದ್ದಾರೆ. ಕಾಶ್ಮೀರದಲ್ಲಿ ಬಿಜೆಪಿ ನೆಲಕಚ್ಚಿದೆ ಎಂದು ಹೇಳಿದರು.

ಇದನ್ನೂ ನೋಡಿ: ಪ್ಯಾಲೆಸ್ಟೀನ್‌ ಪರವಾಗಿ ಧ್ವನಿಯೆತ್ತುವುದು ಅಪರಾಧವೇ? ಪ್ರತಿಭಟನೆಕಾರರ ಪ್ರಶ್ನೆ Janashakthi Media

Donate Janashakthi Media

Leave a Reply

Your email address will not be published. Required fields are marked *